ಇದು ಕೂಡ ೫ ಹರಳುಗಳ ಆಟ. ಆಟದ ರೀತಿಯಲ್ಲಿ ತುಸು ಭಿನ್ನತೆ ಅಲ್ಲಲ್ಲಿ ಇದೆ.

ದೋಸೆಯಿಂದ ೫ರ ಗಲ್ಲಿಯ ವರೆಗೆ ಗುಡ್ನಾಟ ೧ ರಂತೆ ಆಡಬೇಕು. ಎರಡು ಹರಳುಗಳು ಸಮೀಪ ಬಿದ್ದಾಗ ಎದುರು ಪಕ್ಷದವರು ಹೆಕ್ಕಿ ದೂರವಿಟ್ಟು ಕೊಡಬಹುದು. ಆದರೆ ಎದುರು ಪಕ್ಷದವರಿಗೂ ಅಂತಹ ಸಂದರ್ಭದಲ್ಲಿ ಇವರು ದೂರವಿಟ್ಟು ಕೊಡಬೇಕಾಗುತ್ತದೆ.

ಹುತ್ಯಾ :

ಇದು ಹಳ್ಳಾಟ (ಊರಾಟ)ದ ದಪ್ಯಾದಂತೆ ಇರುವದು. ಆದರೆ ಪ್ರತಿ ಐದೈದು  ಆಟಕ್ಕೊಮ್ಮೆ ಒಂದು ಹರಳು ಬದಿಗೆ ತೆಗೆದಿರಿಸುವರು. ಕೊನೆಗೆ ಒಂದು ಹರಳು ಉಳಿದ ಮೇಲೆ ಆ ಒಂದು ಹರಳಿನಿಂದಲೇ ಉಳಿದ ಆಟಗಳನ್ನು ಆಡುವರು. ಕೆಳಗಿನ ಪ್ರತಿಯೊಂದು ಆಟವನ್ನು ೫ ಸಾರೆ ಆಡಬೇಕು.

ನೆಲಕಿಟ್ಟು :

ಹರಳನ್ನು ಮೇಲೆ ಹಾರಿಸಿ ನೆಲಮುಟ್ಟಿ ಹರಳು ಹಿಡಿಯುವದು.

ಎದೆ ದಾಪು ಎದೆ ಮುಟ್ಟಿ ಹಾರಿಸಿದ ಹರಳನ್ನು ಹಿಡಿಯುವದು. ಹೀಗೆಯೇ ಮುಖ ತೊಳೆಯುವದು. ಹೊ ಕೊಯ್ಯುವದು ( ನೆಲ ಮತ್ತು ಮುಖ ಮುಟ್ಟಿ ) ನಾಮಾ ತೇಯುವುದು. ನಾಮ ಹಚ್ಚುವದು (ನೆಲ ಹಣೆ ಮುಟ್ಟಿ) ತುಳಸಿ ನೀರನ್ನು ತೆಗೆಯುವುದು. ದೇವರಿಗೆ ಕೈಮುಗಿಯುವದು ಇತ್ಯಾದಿಗಳನ್ನು ನಟಿಸುತ್ತ ಆಡುವ ಮತ್ತು ಹರಳುಗಳನ್ನು ತೆಗೆದುಕೊಂಡು ಆಟ ಮುಂದುವರಿಸುವರು.

ಕೋಳಿಗೂಡು :

ಗುಡ್ನಾಟದ ಒಂದು ಪ್ರಕಾರ ಅದು ಇಡ್ಲಿ  ಹೊಯ್ದಂತೆ ಸಾಗುವುದು.

ಸಣಬಾವಿ :

ನಾಲ್ಕು ಹರಳುಗಳನ್ನು ಕೆಳಗೆ ಇಟ್ಟು, ಒಂದು ಹರಳನ್ನು ಮೇಲೆ ಹಾರಿಸಿ, ಹರಳುಗಳನ್ನು ಸಮೀಪ ತಂದು ಹರಳು ಹಿಡಿಯುವದು. ಮತ್ತೆ ಹರಳು ಹಾರಿಸಿ, ಒಟ್ಟಿಗೆ ತಂದು ಹರಳನ್ನು ಹಿಡಿಯುವದು.

ದೂರಬಾವಿ

ಸಣಬಾವಿ ಆಟವಾಡುವಂತೆ ಹರಳುಗಳನ್ನು ನಾಲ್ಕು ಕಡೆ ತುಸು ಹೆಚ್ಚು ಅಂತರದಲ್ಲಿಟ್ಟು ಆಡಬೇಕು.

ಸಣಗೆರಸಿ:

ಒಂದೇ ಕೈಯಲ್ಲಿ ಬೆಂಗೈ ಅಂಗೈ ಮೇಲೆ ಹರಳು ಹಿಡಿಯುವುದು.

ದೊಡ್ಡ ಗೆರಸಿ :

ಅಂಗೈ ಬೆಂಗೈ ಮೇಲೆ ಹರಳು ಹಿಡಿಯುವದು. ಆದರೆ ಆಗ ಎಡಗೈಯನ್ನು ಬಲಗೈಗೆ ಜೊಡಿಸಿ ಗೆರಸಿಯಂತೆ ಹಿಡಿದಿರಬೆಕು.

ಚುಟಕಿ:

ತಿಪ್ಯಾದಂತೆ ಆಡುವ ಆಟ. ಇದು ಕೊನೆಯ ಆಟ. ಪ್ರತಿಸಾರೆ ೫ ಆಟವನ್ನಾಡುತ್ತಾರೆ. ಎಣಿಸುವಾಗ  ಅಂಕೆಗಳ ಹಿಂದೆ ಆಯಾ ಆಟದ ಹೆಸರನ್ನೇ ಹೇಳುತ್ತಾರೆ ಉದಾ-ಸಣಬಾವಿ ೧, ಸಣಬಾವಿ ೨ ಹೀಗೆ ಎಣಿಸಲಾಗುವದು.