ಪ್ರತಿ ಮುಷ್ಟಿಯ ಒಳಗೆ ಒಂದೊಂದು ಮುಷ್ಟಿ ಮುಚ್ಚಿ ಬೆರಳ ಮೇಲೆ ಒಂದೊಂದು ಹಾಗೂ ಮಣಿಕಟ್ಟಿನ ಮೇಲೆ ಒಂದೊಂದು ಹೀಗೆ ಪ್ರತಿ ಕೈಯಲ್ಲಿ ಮೂರರಂತೆ ೬ ಹರಳುಗಳಿರುತ್ತವೆ.

ಸಮಸ್ಯೆ ಒಡ್ಡುವವರು ೬ ಒಳಗಿನ ಎರಡು ಅಂಕೆಗಳನ್ನು ಮುಷ್ಟಿಯ ಒಳಗೆ ತೋರಿಸಲು ಹೇಳುವರು. ಆದರೆ ಹೇಳಿದ ಆ ಅಂಕೆಗಳ ಒಟ್ಟು ಮೊತ್ತವು ೬ ಆಗಬೇಕು.

ಸಮಸ್ಯೆ ಒಡ್ಡಿದವನು ಕೇಳಿದ ಅಂಕೆಯಲ್ಲಿ ಎರಡನ್ನು ಕಳೆದು ಅಷ್ಟು ಹರಳುಗಳು ಮುಷ್ಟಿಯ ಒಳಗೆ ಹೋಗುವ ಹಾಗೆ ಮಾಡುತ್ತಾನೆ. ಹಾಗೂ ಪ್ರತಿ ಮುಷ್ಟಿಗೂ ೨ ಹರಳುಗಳನ್ನು ತುಂಬಿಸಿಕೊಳ್ಳುತ್ತಾನೆ. ಜಾದು ಮಾಡುವವನಿಗೆ ಎರಡೆರಡು ಹರಳುಗಳನ್ನು ಮಾತ್ರ ತುಂಬಿಸಿಕೊಳ್ಳುವ ಅವಕಾಶವಿರುತ್ತದೆ.