೮೪

ಮಂಗಳ ಪಂಢರಿವಾಸನಿಗೆ ಜಯ
ಮಂಗಳ ಇಟ್ಟಿಗೆ ನಿಲಯನಿಗೆಪ

ಗೋಕುಲವಾಸಗೆ ಆಕಳ ಪಾಲಗೆ
ಲೋಕ ಲೋಕಗಳನ್ನು ಪೊರೆವನಿಗೆ
ಪಾಕಶಾಸನ ವಂದ್ಯ ರುಕ್ಮಿಣಿ ಪೊರೆವನಿಗೆ
ಪಾಕಶಾಸನ ವಂದ್ಯ ರುಕ್ಮಿಣಿ ರಮಣಗೆ
ಲೋಕಮೋಹನ ಪಾಂಡುರಂಗನಿಗೆ   ೧

ಪಾಂಡವ ಪಾಲಕ ಪುಂಡಲೀಕನಿಗೊಲಿದು
ಪುಣ್ಯಕ್ಷೇತ್ರದಿ ನೆಲಸಿದಗೆ
ತಂಡ ತಂಡದ ಭಕ್ತ ಮಂಡೆ ಸೋಕಿಸಕೊಂಬ
ಪುಂಡರೀಕ ಪಾದಯುಗಳನಿಗೆ   ೨

ಕಟಿಯಲ್ಲಿ ಕರವಿಟ್ಟು ಕೈಲಿ ಶಂಖವ ಪಿಡಿದು
ನಟನೆಗೈಯ್ಯುವ ವೇಷಧಾರಕಗೆ
ತಟಿನಿ ಚಂದ್ರಭಾಗ ತೀರದಿ ಮೆರೆಯುವ
ವಟುರೂಪಿ ಗೋಪಾಲಕೃಷ್ಣ ವಿಠ್ಠಲಗೆ   ೩

೪೯

ರಕ್ಷಿಸೆನ್ನನು ಶ್ರೀ ಪಂಢರೀನಾಥಾ ದೀನಜನದಾತ ವಿಶ್ವ
ಕುಕ್ಷಿ ವಿಖ್ಯಾತಾಪ

ಶ್ಲೋಕ :

ಭರ್ಮ ವಸನಧರ ವಿಷ್ಣು ಸೌಂದರ್ಯ ಸಾರ
ಧರ್ಮ ಪ್ರಮುಖ ವೀರ ವಂದ್ಯ ಲೋಕೈಕ ದೀರ
ಕರ್ಮ ವಿತತ ನಾರಾಯಣನೆ ಸುಖ ಪಾರಾವಾರ
ನಿರ್ಮಲ ದಧಿಚೋರ ವಾರಿದ ವಿಭಾಂಗ ಜಾರಾ   ೧

ಪದ

:ಮಾ-ತಾ-ಪೀ-ಫಣಿ ಫಣಿಧರ ನುತ ದಿವ್ಯಚರಿತ
ವೃಂದಾರಕ ವೃಂದನಾಥಾ
ನೇಕ ತಾಪಸರಿಗೆ ಸುಳಿಯೆಯಲ್ಲ ತ್ವರಿಯ ಈ ಗೊಲ್ಲ
ರಿಗೊಲಿದೆಯೊ ಸತ್ಯಾನಲ್ಲ
ಬೇಕೆಂದು ಶ್ರೀ ದೇವಕಿಯ ಪೊಟ್ಟೆಯಲ್ಲಿ ನೀ ಪುಟ್ಟಿ ವೃಂದಾಔ
ನಕಾಗಿ ಅಟ್ಟಿಸಿಕೊಂಡು ನಂದನ ಮನೆಯಲ್ಲಿ ಕ್ಷೀರ ಘೃತ ಚೆಲ್ಲಿ
ಮೆದ್ದೆ ಪರಿಪರಿಯಲ್ಲಿ   ೨

ಶ್ಲೋಕ:

ಮೀನ ಕಮಠ ಕೋಲ, ಮರ್ತ್ಯ ಮೃಗರೂಪ ಬಾಲ
ಕ್ಷೋಣಿಪಹ ಸುಶೀಲ ವೇಣುಗಾನ ವಿಲೋಲ
ಮಾನವಹವಿದುಕೂಲ ಹಯವದನ ಸುಜನಪಾಲ
ಹೀನ ಶಕಟ ಕಾಲನೇಮಿ ಮುಖ ದನುಜ ಕಾಲ   ೩

ಪದ:

ನದೀ ಪಿತ ನೀ ಭಾಂಡಜಲದಿ ಮಿಂದೆ ಈ ಲೋಕದ ಮಂದಿ
ಯಂತೆ ಫಲವನ್ನು ತಿಂದೆ
ಸದಾ ತೃಪ್ತ ನಿನ್ನ ಬಂಧಕದೊಳು-ಜಗ, ಕೈಕಾಲು
ನೀ ಕಟ್ಟಿಸಿಕೊಂಬೆ ಮೇಲು
ಬೆದರರೊ ನಿನಗೆ ಕಮಲೆ ವಿಧಿ, ಆ ಗುಮ್ಮನ ಬಾಧೆ
ತೋರಿಸುವಳೊ ಯಶೋದೆ
ಮದನ ಪಿತನೆ ಕೌಸ್ತುಭಕಿಂತ ಗುಂಜಿಯತ್ಯಂತ ಪ್ರೀತೆ
ಶಾರ್ಜ್ಗ ಅನಂತ   ೪

ಶ್ಲೋಕ:

ತಪನ ಸಖ ಸುನೇತ್ರ ಪರಿಮಳ ಭೂಷ ಗಾತ್ರ
ಕರುಣಾಂಬುಧಿಯೊ
ಬಲವಿಂದೆರಡು ಕೈಯ ಮುಗಿಯೆಂದಿ ಕೊಡುತಿಹೆನೆಂದಿ
ಸರ್ವರನು ಕರತಂದಿ
ಮಳಲಿಂದ ಕರೆಗಟ್ಟಿ ನಾರೇರ ಕೂಡಿ ವಿಹಾರ ಮಾಡಿ
ದೆಯಾ ವಾರಂ ವಾರಾ
ಫಲ ಭಕ್ಷಕರ ಕೊಡಂದಿಂದ್ರನ ಗರ್ವ ಬಿಡಿಸಿದೆ ಸರ್ವ
ರುಳಿಸಿದೆ ಪೂಜಿಗರ್ಹಾ   ೬

ಶ್ಲೋಕ:

ಕಲ್ಪಸ್ರಚ್ಚಂದ ಭಾಸ ಅಣು ಮಹತ್ಪೂರ್ಣ ಶೇಷ
ತಲ್ಪ ವಿಗತದೋಷ ಭಕ್ತ ಜನರಾಭಿಲಾಷಾ
ಕಲ್ಪತರುವೆ, ಶ್ರೀಶ, ಅಚ್ಯುತ, ಭೀರು ವೇಷ
ಸ್ವಲ್ಪ ಇತರ ಕ್ಲೇಶನಾಶನಾನಂದ ಲೇಶ   ೭

ಪದ:

ಕರೆಸಲು ಬಿಲ್ಲು ಹಬ್ಬದ ಬಗೆಯಿಂದ ಮಧುರೆಗೆ
ಅಕ್ರೂರನ ಕೈಯ ಪೋಗೆ
ಕರಿಯ ಸಂಹರಿಸಿ ಮಲ್ಲರಗುದ್ದಿ, ಕುಬುಜೆಯ ತಿದ್ದಿ
ದುಷ್ಟ ಕಂಸನ ವದ್ದಿ
ಹಿರಿಯಗ್ರಸೇನಗೆ ಅಭಿಷೇಕ ಮಾಡೆ ನಿಃಶೋಕ
ವೆನಿಸಿದೆ ಭೂಮೀ ನಾಶ
ವರ ಸಾಂದೀಪಿ ಬಳಿಯೊಳೋದಿದೆ, ತಂದು ತೋರಿದೆ
ಪುತ್ರನಾಘಪನೋದಿ   ೮

ಶ್ಲೋಕ :

ಜನನೀ ಜನಕ ಭಂಗ ಮೋಚಕ ಪಾಂಡುರಂಗ
ಅನುಪಮನೆ ಭುಜಂಗ ದರ್ಪಹಾ ಸಾಧು ಸಂಗ
ಅನವರತ ಅಸಂಗವೀತ ಭೂತಾ ಕೃಪಾಂಗ
ದಿನಪನಿಭ, ವಿಹಂಗ ವಾಹನ, ಜಗದಂತರಂಗ೯

ಪದ :

ಲಾಲಿಸೆನ್ನಯ ಮಾತ ಭಗವಂತ
ಶ್ರೀ ರುಕ್ಮಿಣೀ ಕಾಂತ ನಿತ್ಯಾನಂದ ನಿಶ್ಚಿಂತ
ಬಾಲಕ ಸ್ತ್ರೀ ಪೋಷಣೆಗೆ ಎಂದೂ ದೇಹ ಬಹು
ನೊಂದು ವೇಷ ತಪ್ಪಿಸಿ ತಂದು
ನಾಲೇಶ ಸುಖವನ್ನು ಬಡಲಿಲ್ಲಾ
ಒಂದು ದಿವಸನೂ ನಿನ್ನ ಪೂಜಿಸಲಿಲ್ಲ
ಕಾಲನವರಿಗೆನ್ನ ಭಿಡೆಯವೆ ನುಡಿ
ತಡೆಯವೆ ಎಳ್ಳಿನಷ್ಟು ಸಾಧನವೇ   ೧೦

ಶ್ಲೋಕ :

ಕಟಿ ಸ್ಥಿತ ಕರಧಾರಿ ಜಲಜಧರ ಪೂತನಾರಿ
ಪಟುತರ ಭುಜ ಶಾರಿ ಚಕ್ರಿ, ಚೈದ್ಯಪಹಾರಿ
ಕಠಿಣ ಶುಭವ ವಾರಿನಿಧಿ ಕರಿರಜ – ಉದಾರಿ
ವಿಠಲ ಸುಗದಿದಾರಿ ಕಾಣನ್ಯೋ ಕರೆಯಾ ಸಾರಿ   ೧೧

ಪದ:

ಒಡಲಿಗೆರಡು ಕೈಯಾ ಇಕ್ಕುತ – ನುಡಿಗುಕ್ಕುತ
ಕಂಠ ಜಿಗಿದು ಬಿಕ್ಕುತ
ಕೊಡುವನ ಮೊಗ ನೋಡಿ ನಾಚುತ ಬಾಯ್ದೆರೆಯುತ
ಮರಳೊಮ್ಮೆ ಮುಚ್ಚುತ
ಅಡಗಿಸಿ ಕಾಯ ಕಟಕನಲ್ಲಿ ನಾಯಿ ತೆರದಲ್ಲಿ
ಸುಳಿದಾಡುತ ಅಲ್ಲಿ
ಕಡೆಗೆ ನಿಷ್ಪಲವಾಗಲು ಸತಿ ಮುಂದೆ ಅನ್ನಲೇನಂದೆ
ಇಂಥ ಶ್ರಮಗಳೊಂದೊಂದೇ   ೧೨

ಶ್ಲೋಕ :

ಶಾತ ಮುಕುಟವಿಟ್ಟ ಮಧು ಕೈಟಭಾರಿ ಕೃಷ್ಣಾ
ಖ್ಯಾತಿಗವನಿ ಕೊಟ್ಟಾ ಬಲಿಯ ರಸಾತಳದೊಳಿಟ್ಟ
ವೀತಭಯ ವಿಶಿಷ್ಟ ನಾಮ ಮೂರ್ತಿ, ಚತುಷ್ಟ
ವಾತ ವಿನುತ ದುಷ್ಟದೂರ ಸರ್ವತ್ರ ಚೇಷ್ಟಾ   ೧೩

ಪದ :

ಎನ್ನ ದೋಷಕ ವಂದು ನೆಲೆಗಾಣೆ ಪರಮಾತ್ಮನೆ
ಸ್ನಾನ ಸಂಧ್ಯಾವಂದನೆ
ಯನ್ನು ಗೃಹಸ್ಥಾಶ್ರಮದ ಕರ್ಮ ಮಾಡಿದೆನೆ ಧರ್ಮ
ಯಮ ತೆಗೆಸಾನೆ ಚರ್ಮ
ಅನ್ಯ ಸ್ತ್ರೀಯರ ಮೆಚ್ಚಿ ಕಟ್ಟೆನೋ
ನಿನ್ನ ಬಿಟ್ಟೆನೋ ಮುಂದುಪಾಯವಿನ್ನೇನೋ
ಪನ್ನಗ ಶಯನನೆ ಈ ಪರಿ ಮಾಡುವರೆ
ದೊರೆ ಜನುಮಗಳೇಸು ಬಾರಿ   ೧೪

ಶ್ಲೋಕ :

ಶತಕ್ರತು ಅನುಜಾತ ವಾಮನ ಪಾರ್ಥಸೂತ
ಕ್ಷಿತಿವರ ಯದುನಾಥ ಧಾತ ತಾಪ ವಿಧಾತ
ವ್ರತಿ ಮನ ನತ ಪ್ರೀತಿ ಅತ್ರಿ – ಅನಸೂಯಾ ಜಾತ
ಸತೀ ಪತಿ ವಿಧು ಸಹಿತ ಗುಣಪೂರ್ಣ ತ್ರಿಗುಣರಹಿತ   ೧೫

ಪದ :

ಧರೆಯೊಳು ವೇಷಕ ಕಾಪುರುಷರು
ಒಂದೆರಡು ಮೂರು ಆಟ ತೋರಲಳುವರು
ಮರಳೊಮ್ಮೆ ತರಿಸದೆ ಸಮ್ಮಾನ ಮಾಡಿ ಬಹುಧನ
ಕೊಡುವರೊ ಮೂರು ಭುವನ
ದೊರೆ ವಿರ್ಜರಾರಾಧ್ಯ ನಿನ್ನ ಮುಂದೆ, ವೇಷ
ಬಹು ತಂದೆ ಕಾಸ ಕೊಡದಿರೊ ತಂದೆ
‘ನರ ನಿನ್ನ ವೇಷವು ಸಾಕೆನ್ನಬೇಕೋ’
ಪಾನ್ನ ಮೂರ್ತಿ ದಣಿಸದಿರೆನ್ನ   ೧೬

ಶ್ಲೋಕ :

ಗಜ ದ್ರುಪ ತನುಜಿ ರಕ್ಷ ಬಾಲ ಪಾಲನಾಪೇಕ್ಷ
ದ್ವಿಜ ಕುಲವರ ತ್ಯ್ರಕ್ಷ ದುರ್ಯೋಧನಾದಿ ಶಿಕ್ಷ
ವಿಜಯ ಪ್ರಮುಖ ಪಕ್ಷ ಸ್ವಾಮಿ ಶ್ರೀವತ್ಸ ವೃಕ್ಷ
ಅಜುಮಿಳನಿಗೆ ಮೋಕ್ಷವಿತ್ತ ಪಾಪಹಿತಾರ್ಕ್ಯ್ಷ   ೧೭

ಪದ :

ಪುಂಡರೀಶವಗಲೀದಿಲ್ಲಿಗೆ ಬಂದೆ
ಬಹು ಬೇಗ ಭಕ್ತರೆಂಬುದು ಹೀಗೆ
ಕಂಡ್ಯಾ ಯನ್ನವರೊಳು ಕೂಡಿಸೊ ನಿನ್ನ ಪಾಡಿಸೋ
ಆಶೆಯೆಂಬುದ ಬಿಡಿಸೋ
ದಂಡಜ ವರದ ಶ್ರೀ ಪ್ರಾಣೇಶ ವಿಠ್ಠಲ ನಿರ್ದೋಷ
ನಿನ್ನವರಿಗೀಯೋ ಲೇಸಾ
ಮಂಡಲದೊಳು ನಿನ್ನ ವ್ಯತಿರಿಕ್ತಾರಿಲ್ಲಾಮಿತ ಶಕ್ತ
ಪಾಹಿ ಸರ್ವೋದ್ರಕ್ತ   ೧೮

೫೦

ಭೈರವಿಧ್ರುವ

ವ್ಯಕ್ತನಾಗಿ ಶಕ್ತನಾಗಿ ವ್ಯಾಪಕ ಪಾಂಡುರಂಗ
ಭಕ್ತರಿಗಾಗಿ ಭಾಗ್ಯನಾಗಿ ಬಂದಾ ಬಂದಾ ಪಂಢರಿರಾಯ
ಉಕ್ತಿಗಳೊಂದಂದು ಲಾಲಿಸಿದರೆ
ಮುಕ್ತರು ಬೆರಗಾಗುತಿಪ್ಪಾರು
ಮುಕ್ತಿ ಕ್ರೀಡೆ ಇಲ್ಲೆ ತೋರಿದಾ ತವಕಾದಿಂದಲಿ ಕುಣಿವುತ್ತ
ಮೌಕ್ತಿಕಹಾರಾ ನಾನಾಭರಣಾ ಧರಿಸೀಗೋವಳರೊಡಗೂಡಿ
ತ್ಯಕ್ತಾ ವೈದಿಕ ಮಿಕ್ಕಾದವರು ನೆರೆದು ಜಯಜಯಾವೆನುತಿರೆ
ಯುಕ್ತಿವಂತರು ಯುಗಯುಗದಲ್ಲಿ ಇದೆ ಪರಿ ನೋಳ್ಪರು
ಭಕ್ತಿಗೊಲಿಪಾದು ಈ ಪರಿ ಭಕ್ತಿ ಮಾಡಿದಾ ಜನಕ್ಕೆ
ಮನಸಿನಲ್ಲಿ ಕನಸಿನಲ್ಲಿ
ಭುಕ್ತಿ ಮೊದಲಾದಾ ಸಂಪತ್ತು ನೀ ವಸುರಧೇನು ಇದ್ದಂತೇವೆ
ಭಕ್ತಿಗೊಲಿದುದು ಈ ಪರಿ ರಿಕ್ತಾ ರಿಗತಿ ಪ್ರಿಯಾ ಪ್ರತಿಕಾದೊಳಗೆ ಇದ್ದಾ
ಶಕ್ತಿಪ್ರದಾ ಚಂದ್ರಭಾಗ ನಿವಾಸಾ ವಿಜಯವಿಠಲ ಸಕಲಾ
ಭಕ್ತಿಗೊಲಿದು ಈ ಪರಿ   ೧

ಮಟ್ಟ

ಎಣೆಗಾಣೆನು ರಂಗನ ಕರುಣಾಕಟಾಕ್ಷಕ್ಕೆ
ಮನದಲ್ಲಿ ನೆನಿಸಿದ್ದು ಸಲಿಸುವ ಸಂಭ್ರಮದಿ
ಕುಣಿಕುಣಿದಾಡುವನು ಪದಗತಿಯನು ಬಿಡದೆ
ಮಣಿಭೂಷಣದಿಂದ ಗೋಪಿರೆಡಬಲದಿ
ಮಿನುಗುತಿರೆ ಗೋಗಳು ಸುತ್ತಲು ಒಪ್ಪೆ
ಮುನಿ ಪುಂಡರೀಕನಿಗೆ ಅಂದೊಲಿದು ಬಂದಾ
ತನೆ ಈತನೆ ಕಾಣೊ
ಅನುಮಾನಗೊಳದೀರಿ ಆರ್ತಿಯ ಪೋಗಾದಿ
ಘನಮಹಿಮಾ ನಮ್ಮ ವಿಜಯವಿಠಲಾ
ಮನುಜರೊಳಗೆ ಮನುಜರೂಪ ಧರಿಸಿ ಮೆರೆವ   ೨

ತ್ರಿವಿಡಿ

ಎಲ್ಲಿದ್ದರೇನಯ್ಯಾ ಭಕ್ತರಿಗೆ ಒಲಿವ ಶ್ರೀ
ವಲ್ಲಭನ ಪ್ರೀತಿ ಅತಿ ಮಿಗಿಲೂ
ಕಲ್ಲು ಎನಿಸಲ್ಲಾ ಅದರಲ್ಲಿ ಪ್ರಲ್ಹಾದನ್ನಾ
ಸೊಲ್ಲಿಗೆ ಬಂದಂತೆ ಬಂದ ಕಾಣೋ
ಎಲ್ಲಾವ ಜಾತಿಗಳು ಸುತ್ತಾ ಚಪ್ಪಳೆನಿಕ್ಕಿ
ನಿಲ್ಲಾದೆ ಕುಣಿವಾರು ದೇವನೊಡನೆ
ಬಲ್ಲಿದಾ ಹರಿಕಾಣೊ ಎಲ್ಲಿ ನೋಡಿದರೀತಗೆ
ಇಲ್ಲವೋ ಸಾಮ್ಯವಾಧಿಕ್ಯ ಇಹಪರದಲ್ಲಿ
ಎಲ್ಲಾ ಕ್ಷೇತ್ರದಕ್ಕಿಂತ ಇದೆ ಉತ್ತಮಾವೆನ್ನಿ
ಬಲ್ಲಾರು ಬೊಮ್ಮಾದಿ ಭಕ್ತರೆಲ್ಲ
ಗಲ್ಲಾ ಎರಡರ ಬೆಳಕು ಸೂರ್ಯ ಚಂದ್ರರಂತೆ
ಅಲ್ಲೆಲ್ಲ ತುಂಬಿದ ವೈಚಿತ್ರಿಕ
ಮಲ್ಲಾ ಮರ್ದನ ನಮ್ಮ ವಿಜಯವಿಠಲ ವಿಠಲಾ
ಎಲ್ಲೆ ಮಾಯಾದಾ ಬೊಂಬಿಯೊ ವರ್ಣಿಸಲಾರಿನೊ   ೩

ಅಟ್ಟ

ನಿತ್ಯಸತ್ಯ ಕಾಮಾ ಪರಿಪರಿರೂಪದಲಿ
ಭೃತ್ಯರ ಸತ್ಯಕಾಮರಮಾಡಿ ಮನ್ನಿಸಿ
ಅತ್ಯಂತವಾಗಿ ಆಶಿಯ ಬಿಡಿಸಿ ಕೂಡ
ಹತ್ತೊಂದು ಇಂದ್ರಿಯಾ ಸುಖ ಬಿಡಿಸುವ ಜಾಣಾ
ತೊತ್ತಿನ ತೊತ್ತಿನ ಮಗನ ಮೊಮ್ಮಗ ನಾನು
ಎತ್ತಿ ಭವದಿಂದ ಕಡೆಗೆ ಹಾಕುವದಯ್ಯಾ
ಮೃತ್ಯು ನಿವಾರಣಾ ವಿಜಯವಿಠಲಾ ವಿಠಲಾ
ಸತ್ಯಸಂಕಲ್ಪಾ ನೀನಬಹುದೊ ಮತ್ತಹುದೊ   ೪

ಆದಿ

ಪಾವನ್ನ ನಾನದೆ ಪೂವನ್ನ ನಾನಾದೆ
ಪಾವನ್ನ ಮೂರುತಿಯಾ ಪಾದದರುಶನದಿಂದ
ಭಾವದಲಿ ಇಂದು ನೆನಸಿದ ಯಾತ್ರಿಫಲ
ಪೂವಿನೊಳಗೆ ಇಟ್ಟುಕೊಟ್ಟಂತಾಯಿತೊ ಎನಗೆ
ದೇವನ್ನ ನಿಜರೂಹಾ ಸ್ವಪ್ನದಲ್ಲಿ ಕಂಡೆ
ಆವಜನ್ಮದ ಪುಣ್ಯ ಬಂದೊದಗಿತೊ ಸಿದ್ಧ
ಜೀವನ್ನಾ ಮುಕ್ತರೆಲ್ಲ ನಲಿದಾಡುವರು ಬಂದು
ಕೈವಲ್ಲ್ಯಾಗುವಕ್ಕೆ ಸಂಶಯ ಇನ್ನುಂಟೆ
ಗೋವಗೋವಳರಾಯಾ ವಿಜಯವಿಠಲಾ ವಿಠಲಾ
ಕಾವ ಕಲ್ಮಷ ಕಳೆದು ಕಳೇವರದೊಳಗಿದ್ದೂ   ೫

ಜತೆ

ಕಂಡು ಧನ್ಯ ನಾನಾದೆ ಕುಲಕೋಟಿಗಳ ಸಹಿತ
ಪುಂಡರೀಕವರದಾ ವಿಜಯವಿಠಲಾ ವಿಠಲನಾ   ೬

೫೧

ಚಂದ್ರಕೌಂಸತ್ರಿಕಾಲ

ವಂದೇ ಗೋವಿಂದ ಮಹಾನಂದಂ
ಸಿಂಧುಶಯನನಂದ ಕಂದ ಮುಕುಂದಂಪ

ಚಂದ್ರಭಾಗಾತಟ ಸುಂದರ ಮಂದಿರಾ
ಪುಂಡಲೀಕವರದ ಶ್ರೀ ಪಾಂಡುರಂಗ   ೧

ಶೇಷಾಚಲವಾಸ ಶ್ರೀಶ ಸರ್ವೇಶಂ
ವಾಸವಾದಿ ವಂದ್ಯಾ ಶ್ರೀ ವೆಂಕಟೇಶಂ   ೨

ಮಂಥದಾಮಧರ ಶ್ರೀ ಬಾಲಕೃಷ್ಣ
ಶಾಂತ ಮೂರ್ತಿ ಶ್ರೀ ಭೂಪತಿ ವಿಠ್ಠಲಮ್   ೩

೫೨

ವಂದೇ ವಿಠಲರಾಯ ಇಂದಿರೆ ಬಂದು
ನಿಂದು ಪಾಲಿಸೋ ಎನ್ನ ಇಂದ್ರನ ಇಂದ್ರಪ

ಪೂರ್ಣ ಜ್ಞಾನುತ್ಮ ಸುಪೂರ್ಣ್ಯೆಶ್ಚರ್ಯನೆ
ಪೂರ್ಣ ಪ್ರಭಾತ್ಮ ಸುಪೂರ್ಣ ಆನಂದ
ಪುರ್ಣ ತೇಜಾತ್ಮನೇ ಪೂರ್ಣ ಅದೋಷನೆ
ವನರುಹಭವನಿಂದರ್ಚಿತಧ್ಯೇಯ ವಿಭುವೆ   ೧

ಶರಣು ಸರೋಜಮ ಸಮಕಟಿ ಕರಗಳು
ಸುರಪನೀಲಾಭ ಶ್ರೀ ತುಳಸಿಯ ಹಾರ
ಪುರುಷೋತ್ತಮ ವಿಭು ಖರದಕ್ಷ ವಾಮದಿ
ಪದಾರವಿಂದವು ಸರಸಿಜ ನಯನ   ೨

ವ್ರತತಿಜಾಸನಪಿತ ಪ್ರಸನ್ನ ಶ್ರೀನಿವಾಸ
ಪ್ರಪತ ಪರಾತ್ಪರ ಹೃತ್ತಿಮಿರಾರ್ಕ
ನುತ ಜನಹಿತ ಕರಧನ ಭಕ್ತಿಪದ ಜಗನ್
ಮಾತೆ ರುಕ್ಮಿಣಿ ಸತ್ಯಭಾಮಾಪತೇ ನಮೋ   ೩

೫೩

ವಿಠಲಯ್ಯ ವಿಠಲಯ್ಯ        ಪ

ತಟಿತ್ಕೋಟಿ ನಿಭಕಾಯ ಜಗನ್ನಾಥ ವಿಠಲಯ್ಯಾ           || ಅ.ಪ ||

ಭಜಿಸುವೆ ನಿನ್ನನು ಅಜಭವ ಸುರನುತ
ಭಜಕಾಮರ ತರು ಕುಜನ ಕುಠಾರಾ   ೧

ನೀ ಕರುಣಿಸದೆ ನಿರಾಕರಿಸಲು ಎನ್ನ
ಸಾಕುವರಾರು ದಯಾಕರ ಮೂರುತಿ   ೨

ಶರಣಾಗತರನು ಪೊರೆವನೆಂಬ ತವ
ಬಿರುದು ಕಾಯೋ ಸಿರಿವರ ಜಗನ್ನಾಥ   ೩