೫೫

ಭೈರವಿಧ್ರುವ

ಸುಂದರಮಯವಾದ ದ್ವಂದ್ವ ಚರಣವನು
ಇಂದು ಕಂಡೆನು ಬಂದು
ಅಂದು ಕಾಳಿಂದಿಯಾ ಧಮುಕಿ ನಾ
ಗೇಂದ್ರನಾ ಫಣಿಯಲ್ಲಿ ಕುಣಿಕುಣಿದಾಡಲು
ದುಂದುಭಿರಭಸಾ ಮೊರಿಯೆ ಗಗನ
ದಿಂದಲೆ ಪೂಮಳೆ ಬಿಡದೆ ಸುರಿಯೆ
ವೃಂದಾರಕವೃಂದ ಚಂದಾಗಿ ಗೈವುತಿರೆ
ನಂದನಂದನ ಗೋಪಿಯ ಕಂದ
ಅಂದಂದಾಡಿದ ಗೋವಿಂದ ವಿಜಯವಿಠಲಾ
ನಿಂದು ನಲಿವಿಂದಾ ಮೆರೆವ ನೀನು ಇಲ್ಲಿ
ಇಂದಿರೆಯರಸನ ನಂದ ಮೂರುತಿಯಾದೆ

ಮಟ್ಟ

ಇದೆ ವೈಕುಂಠಾ ಇದೆ ಶ್ವೇತ ದ್ವೀಪ
ಇದೆ ಅನಂತಾಸನ ಇದೆ ಗೋಕುಲವೋ
ಇದೆ ವೃಂದಾವನ ಇದೆ ದ್ವಾರವತಿ
ಇದೆ ನಮ್ಮಾ ಯದುಪತಿ ಇಪ್ಪಾ ನಗರಾ
ಇದೆ ನಿಮ್ಮ ತಿರುಮಲಾ ವಿಜಯವಿಠಲನಿಪ್ಪ ಸಂಭ್ರಮವೋ   ೨

ತ್ರಿವಿಡಿ

ಧನ್ಯನಾನಾದೆನೋ ದಾನ್ನವಾರಿಯಾ ಕಂಡು
ಎನ್ನ ಸಂಸ್ಕಾರಕ್ಕೆ ಪಡೆಗಾಣೆ ಪಡೆಗಾಣೆ
ಅನ್ಯಾಯಗೊಳಿಸುವ ದುರುಳ ವೃತ್ತಿಗಳೆಲ್ಲಾ
ಬೆನ್ನು ತೋರಿದವಯ್ಯಾ ಬೀಳುವಾದರಿಯಾದೆ
ಅನ್ನಾ ದೇವರಿಗೆ ಶಿರವಾಗಿ ಶಿರವಾಗಿ ಶ
ರಣು ಶರಣೆನ್ನಿನೋ ಆವಾವ ಕಾಲದಲ್ಲಿ
ರನ್ನ ಕೈ ಸೇರಾಲು ಗಾಜುಮಣಿ ಬಯಸುವೆನೆ
ತನ್ನಿಂದ ತಾವೊಲಿದ ವಿಜಯವಿಠಲ ಕರ
ವನ್ನು ಪಿಡಿಯೆ ಎನಗೆ ಇನ್ನು ಯಾತರ ಭೀತಿ   ೩

ಆಟ್ಟ

ಮೈಲಿಗಿಯವ ನಾನಾದಡೆ ಜಗದಯ್ಯಾ
ಆಯ್ಯಾನೆ ನಿನ್ನ ಮಂಗಳವಾದ ನಾಮಕ್ಕೆ
ಮೈಲಿಗಿ ಉಂಟೇನೋ ಮದನಾರಿಯ ಒಡೆಯಾ
ಮೈಲಾರಿ ಚೊಕ್ಕನು ಆವಲಕುಲದವ
ಆಯ್ಯಾ ವಿಜಯವಿಠ್ಠಲಾನುದಿನ ನೀನೊಲಿಯೆ
ವೈವಾದು ಸದ್ಗತಿಗೆ ಒಂದೆ ನಾಮವೆನೆನಿಯ   ೪

ಆದಿ

ಹರಿದು ಎಂತನ್ನಯಿಯಾದ ನರರಿಗೆ
ಶರಣಜನರಿಗೆ ಬಲು ಮರಳು ಕಾಣೋ ಪಾಂಡುರಂಗಾ
ವರ ಇಟ್ಟಂಗಿ ಮೇಲೆ ಸ್ಥಿರವಾಗಿ ನಿಂದಾ
ಸಿರಿಧರಪತಿ ವಿಜಯವಿಠಲಾ
ಗುರುಪುರಂದರನ್ನ ಪ್ರೀಯಾ   ೫

ಪಂಢರೀರಾಯಾ ಪ್ರಾಕೃತವಿರಹಿತಕಾಯಾ
ಪುಂಡರೀಕ ವರದ ವಿಜಯವಿಠಲರೇಯಾ   ೬

೫೬

ಹರೆ ವಿಠ್ಠಲಾ ಪಾಂಡುರಂಗ
ಪರಿಪಾಲಯ ಕಂಸಾರೆಪ

ಕರಕಮಲದ್ವಯ ಕಟಿಯ ಮ್ಯಾಲೆಯಿಟ್ಟ
ಪರಮ ಪುರುಷ ಶೌರೇ ಮುರಾರೇ|| ಅ.ಪ ||

ಜಲಜಭವಾದಿ ಸುರಸನ್ನುತ ಪಾದ ಜಲಜನಾಭನಾದ
ಕಲುಷ ದೂರ ಕರುಣಾಕರ ರಂಗ
ಸುಲಲಿತ ಮಹಿಮ ಹರೇ ಮುರಾರೆ   ೧

ಪುಂಡಲೀಕ ವರದಾತ ಮುಕುಂದ ಕುಂಡಲಿಶಯನ ಹರೇ
ಅಂಡಜವಾಹನ ಅಪ್ರಾಕೃತಕಾಯ
ಕುಂಡಲಧರ ಹರೇ ಮುರಾರೇ   ೨

ದಿಟ್ಟತನದಿ ಹರಿಭಕ್ತ ಕೊಟ್ಟ ಇಟ್ಟಿಗಿ ಮೇಲೆ ನಿಂದ ದೇವ
ಸೃಷ್ಟಿಗೊಡೆಯ ಶ್ರೀವಿಜಯವಿಠ್ಠಲ
ದುಷ್ಟಕುಲಾಂತಕನೇ ಶ್ರೀ ಕೃಷ್ಣ   ೩

ಅನುಬಂಧಗಳು

೧. ಪುರಂದರದಾಸರ ಕಂಬವನ್ನು ಕುರಿತು

ಎಷ್ಟು ಪುಣ್ಯ ಮಾಡೀ ಕಂಬ
ವಿಠ್ಠಲನ್ನ ಗುಡಿ ಸೇರಿತೋಪ

ಶ್ರೇಷ್ಠ ಪುರಂದರ ದಾಸರನ್ನು
ಕಟ್ಟಿಸಿಕೊಂಡು ತಾ ಪೂಜೆಗೊಂಡಿತೊಅ.

ಎಲ್ಲಾ ಕಂಬಗಳಿದ್ದರೂ ಇಂತು
ಇಲ್ಲೀ ಇದಕೆ ಈ ಖ್ಯಾತಿಯು ಬಂತು
ಬಲ್ಲಿದ ಸುಜನ ವಂದಿಪರಿ
ಪುಲ್ಲನಾಭನ್ನ ಕೃಪೆಯ ಪಡೆದಿತು   ೧

ಮಾಯಾಕಾರನು ನೀರನು ತಂದು
ಈಯಲು ಪುರಂದರದಾಸರಿಗಂದು
ನೋಯಿಸೆ ತಿಳಿಯದೆ ಮನಕದ ತಂದು
ನ್ಯಾಯದಿ ತಿಳಿಸಿ ಹೊಡೆಸಿದನಂದು   ೨

ದಾಸರಂತೆ ತಾನು ವೇಷವ ಧರಿಸಿ
ವೆಶ್ಯೆಗೆ ತನ್ನ ಕಂಕಣವನ್ನೇ ಕೊಡಿಸಿ
ತಾಸೊತ್ತಿನಾ ರಾತ್ರೆ ಹೊಡೆದದ್ದ ನೆನಸಿ
ವಾಸುದೇವ ಬೈಲಿಗೆಳೆಸಿದ ಬಿಗಿಸಿ   ೩

ಜ್ಞಾನ ಪುಟ್ಟಲು ಹರಿಮಾಯವಿದೆಂದು
ಶ್ರೀನಿವಾಸ ತಾ ಒಲಿದನು ಅಂದು
ಆನಂದದಿಂದೊಂದು ಕವನ ಗೈದು
ಶ್ರೀನಿಧೆ ಮುಟ್ಟಿತು ಮುಯ್ಯವಿದೆಂದು   ೪

ದಾಸರ ಅಂಗವು ಸೋಕಿದ್ದರಿಂದ
ಶ್ರೀಶನು ಹಗ್ಗದಿ ಬಿಗಿಸಿದ್ದರಿಂದ
ದಾಸರ ಪೆಸರಲಿ ಮೆರೆಪುದರಿಂದ
ದೋಷ ಪೋಯಿತು ಕಂಬಕೆ ಭವ ಬಂದ   ೫

ಹಿಂದೆ ಕಂಬದಿ ನರಹರಿ ಅವತರಿಸೆ
ಅಂದಿನ ಕಂಬವೆ ಈಗಿಲ್ಲ ಉದಿಸೆ
ಸಿಂಧುಶಯನನ್ನ ದಾಸತ್ವ ಮಹಿಸೆ
ಬಂದಿತು ವಿಠಲನ್ನ ಗುಡಿಯನಾಶ್ರೈಸಿ   ೬

ದಾಸರ ದರುಶನ ಕರ್ಮ ಕಳೆವುದು
ದಾಸರ ವಾಕ್ಯ್ರವಣ ಜ್ಞಾನವೀಯುವುದು
ದಾಸರ ಸ್ಪರ್ಶವು ಮುಕ್ತಿಗೊಯ್ಯವುದು   ೭

ಕಂಭವೆ ಸಾಕ್ಷಿಯು ಈ ಕಲಿಯುಗದಿ
ಡಾಂಭಿಕ ಜನರಿಗೆ ತಿಳಿಯದು ಹಾದಿ
ಬೆಂಬಿಡದೆ ಹರಿ ಕಾಯುವ ಭರದಿ
ಇಂಬುಗೊಟ್ಟು ತನ್ನ ನಿಜ ದಿವ್ಯ ಪುರದಿ   ೮

ದಾಸರ ಮಾರ್ಗವೆ ಸುಲಭವೆಂತೆಂದು
ದಾಸರ ಕೃಪೆ ದ್ವಾರ ಬಲಿಯುವೆನೆಂದು
ದಾಸರ ದೂಷಿಸೆ ಗತಿ ಇಲ್ಲೆಂದು
ಶ್ರೀಶ ತಾನಿಲ್ಲೀ ನಿಂತನು ಬಂದು೯

ಶ್ರೀರಮಾಪತಿ ಓಡಿ ಬಂದು ನಿಲ್ಲೆಂದೂ
ದ್ವಾರಕ ಪುರದೊಂದು ಕಂಭವೆ ಬಂದು
ಸೇರಿತೊ ವಿಠಲನ ಮುಂದಿರವಂದು
ಸೂರೆಗೈದರೂ ಖ್ಯಾತಿ ದಾಸರು ಬಂದು   ೧೦

ನಿಜದಾಸರಂಗಸಂಗದ ಫಲದಿ
ರಜತದ ಕಟ್ಟಿನಿಂ ಮೆರೆದಿತು ಜಗದಿ
ಸುಜನರ ಸಂಗದಿ ಮುಕುತಿಯ ಹಾದಿ
ಭುಜಗಶಯನ ತೋರುವ ನಿರ್ಮಲದಿ   ೧೧

ತತ್ವವನಿದರಿಂದ ತಿಳಿವುದು ಒಂದು
ಉತ್ತಮತ್ವವು ಜಡಕಾಯಿತು ಬಂದು
ಉತ್ತಮರಾ ಪಾದ ಸೋಂಕಲು ಅಂದು
ವ್ಯರ್ಥವಾಗದು ಹರಿಭಕ್ತರೆ ಬಂಧು   ೧೨

ಪಾಪ ನಿರ್ಲೇಪವಾಗೋದು ವಿಠ್ಠಲನ್ನ
ಆಪಾದ ಮೌಳಿಯ ರೂಪ ದರುಶನ್ನ
ಈ ಪರಿ ಖ್ಯಾತಿ ಪೊಂದಿತು ಕಂಬ ಘನ್ನ
ಗೋಪಾಲಕೃಷ್ಣ ವಿಠ್ಠಲ ಸುಪ್ರಸನ್ನ   ೧೨

ಮುಯ್ಯಕ್ಕೆ ಮುಯ್ಯಿ ತೀರಿತು
ಮುಯ್ಯಕ್ಕೆ ಮುಯ್ಯಿ ತೀರುತು ಜನ   ಪ|
ದಯ್ಯ ವಿಜಯ್ಯ ಸಾಹಯ್ಯ ಪಂಢರಿರಾಯ || || ಅ.ಪ || ||

ಸಣ್ಣವನೆಂದು ನಾ ನೀರು ತಾರೆಂದರೆ
ಬೆಣ್ಣೆ ಕಳ್ಳ ಕೃಷ್ಣ ಮರವೆ ಮಾಡಿ
ಚಿನ್ನದ ಗಿಂಡಿಲಿ ನೀರು ತಂದಿಟ್ಟರೆ
ಕಣ್ಣು ಕಾಣದೆ ನಾ ಠೊಣದೆ ಪಂಢರಿರಾಯ   ೧

ಎನ್ನ ಹೆಸರು ಮಾಡಿ ಸೂಳೆಗೆ ಕಂಕಣ
ವನ್ನು ನೀನೆತ್ತಿ ನಿಜರೂಪದಿ
ಎನ್ನ ಪೀಡಿಸಿ ಪರಮ ಭಂಡನ ಮಾಡಿ
ನನ್ನ ಮಾಯ್ಯಕೆ ಮುಯ್ಯಿ ತೀರಿಸಿಕೊಂಡಯ್ಯ   ೨

ಭಕ್ತವತ್ಸಲನೆಂಬೊ ಬಿರುದು ಬೇಕಾದರೆ
ಭಕ್ತರಾಧೀನನಾಗಿರಬೇಡವೆ
ಯುಕ್ತಿಯಲಿ ನಿನ್ನಂಥ ದೇವರ ನಾ ಕಾಣೆ
ಮುಕ್ತೀಶ ಪುರಂದರವಿಠಲ ಪಂಢರಿರಾಯ
ಆಯಾ ಹರಿದಾಸರ ಹಾಡುಗಳ ಅಕಾರಾದಿ

ಪುರಂದರದಾಸ

೧. ಕೂಸಿನ ಕಂಡಿರಾ….
೨. ಜಯಪಾಂಡುರಂಗ…..
೩. ಪುಂಡರೀಕವರದ ಪಂಢರಿರಾಯನ
೪. ಮುಯ್ಯಕ್ಕೆ ಮುಯ್ಯಿ ತೀರಿತು

ಜಗನ್ನಾಥ ದಾಸ

೧. ಎಂದು ಕಾಂಬೆನು ಪಾಂಡುರಂಗ ಮೂರುತಿಯಾ
೨. ಕಂಡೆ ಪಂಢರಿರಾಯನ ತನ್ನನು
೩. ಕಂಡೆ ಪಂಢರಿರಾಯನ ಸಿರಯನ ಪ್ರಿಯನಾ
೪. ಧನ್ಯನಾದೆನು ವಿಠಲನ ಕಂಡು ಓಡಿತು ಅಘುದಿಂಡು
೫. ನೋಡಿದೆ ವಿಠಲನ ನೋಡಿದೆ
೬. ಪಾಲಿಸೊ ಪಾಂಢರಿಪುರರಾಯ್ಯಾ ಪಾವನ ಕಾಯಾ
೭. ವಿಠಲಯ್ಯಾ ವಿಠಲಯ್ಯ

ಪ್ರಸನ್ನ ಶ್ರೀನಿವಾಸ ದಾಸ

೧. ವಂದೇ ವಿಠಲರಾಯ ಇಂದಿಗೆ ಬಂದು

ಅಂಬಾಬಾಯಿ

೧. ಏಳು ಪಂಢರಿವಾಸ ಏಳು ಶ್ರೀ ದೇವೇಶ
೨. ಕಂಡು ಉಂದಿಗೆ ಧನ್ಯಳಾಗುವೆ ನಾನು
೩. ಕಂಗೆ ಕನಸಿನಲಿ ನಾ ಪಾಂಡುರಂಗನ
೪. ಕಂಡೆ ಕಂಡೆ ಪಂಢರೀಶನ ಕಂಡೆ
೫. ಕಂಡು ಧನ್ಯಳಾದೆ ನಾ
೬. ಕರುಣ ಬಾರದೆ ವಿಠ್ಠಲ ಶ್ರೀ ಪಾಂಡುರಂಗ
೭. ನೋಡಿದೆನು ವಿಠ್ಠಲನ ದಣಿಯ
೮. ಪಾಂಡುರಂಗನೆ ಪಾಲಿಸೆನ್ನನು
೯. ಬಿಟ್ಯಾಗೆ ಇರಲಿನ್ನೀ ಚರಣರಂಗ
೧೦. ಮಂಗಳ ಪಂಢರಿವಾಸನಿಗೆ ಜಯ

ನಿಡುಗುರುಕಿ ಜೀವೂಬಾಯಿ

೧. ವಾಯುಸುತನ ತಂದು ಪೂಜಪ ತಂದೆ ಮುದ್ದು (ಶ್ರೀ ಪಾಂಡುರಂಗ ಚರಿತ್ರ )

ವಿಜಯದಾಸ

೧. ಅಂದು ಮಾನಿಸನಾದೆಲೋ
೨. ಅಚ್ಯುತಾನಂತನ ಕಂಡೆ
೩. ಜನನಿ ರುಕುಮಿಣಿ
೪. ತರುಣ ಅರುಣ
೫. ನಾನಾ ಪರಿಯಿಂದ ನಿನ್ನ….
೬. ನೋಡಿದೆನೊ ಸಿರಿ ಪಾಂಡುರಂಗನ
೭. ಪಾಂಡುರಂಗನೆ ವೀಕ್ಷಿಸುವ
೮. ಬಂದೆನೊ ಎಲೆ ಹರಿಯೆ
೯. ವ್ಯಕ್ತನಾಗಿ ಶಕ್ತನಾಗಿ
೧೦. ಸುಂದರಮಯವಾದ ದ್ವಂದ್ವ
೧೧. ಹರೇ ವಿಠಲಾ ಪಾಂಡುರಂಗ

ಭೂಪತಿ ವಿಠ್ಠಲ

೧. ಈ ಪರಿಯ ಸುಲಭ ಇನ್ಯಾವ ದೇವರು ಉಂಟು
೨. ಕರಮುಗಿದು ಪ್ರಾರ್ಥಿಪೆವು
೩. ಗಿರಿಧರ ಪರಮ ಮಂಗಲಾ
೪. ಜಯದೇವ ಜಯದೇವ
೫. ಧನ್ಯನಾದೆ ಪಾಂಡುರಂಗನ ಕಣ್ಣಾರೆ ಕಂಡು
೬. ಪಂಢರಿಯ ಬಿಟ್ಟಿಲ್ಲಿ ಹೆಂಡತಿಯ ಕರಕೊಂಡು
೭. ಪುಂಡರೀಕ ವರದಾ ವಿಠ್ಠಲ
೮. ಪೋಗಿ ಬರುವೆನು ನಾ ಪಂಢರಿರಾಯಾ
೯. ಬಂದಾನು ಪಾಂಡುರಂಗಾ
೧೦. ಬಂದ್ಯಾ ವಿಠ್ಠಲ ಆನಂದವಾಯಿತು
೧೧. ಪ್ರತಿ ಮನೆಯೊಳು ಶ್ರೀ ತುಲಸಿ ವೃಂದಾವನ ಬೇಕು
೧೨. ಬಾರೋ ಪಾಂಡುರಂಗಾ ಕೇಲಹ್ವಾ ಬೇಟಿ ದೇಗಿ
೧೩. ವಂದೇ ಗೋವಿಂದ ಮಹಾನಂದಂ

ಗುರುಗೋವಿಂದ ವಿಠ್ಠಲ ದಾಸರು

೧. ಎಂದು ಕಾಂಬೆನು ತಂದೆ
೨.ನೋಡಿದೆ ಶ್ರೀ ವಿಠಲನ ನೋಡಿದೆ
೩. ಬಂದಾ ನೋಡೇ ವಿಠಲಾ ಮನೆಗೇ

ಗೋಪಾಲ ದಾಸ
   ೧. ಎನ್ನ ಜ್ಞಾನಗಳೆಲ್ಲ ಎನ್ನ ಧ್ಯಾನಗಳೆಲ್ಲ

ಹರಪನಹಳ್ಳಿ ಭಿಮವ್ವ
   ೧. ಪಂಢರಿಪುರ ವಾಸ ಪಾಲಿಸೊ ಶ್ರೀಶ