ಪಲ್ಲವಿ : ಹರಿಯೇ ನಿನ್ನ ಮಾಯೆ ಅರಿಯೆ
ಕರಿರಾಜ ಪೊರೆದಾ ದೊರೆಯೆ

ಚರಣ :  ಚರಾಚರ ಜಗವನು ಪೊರೆದೆ
ಭಕುತರು ಕರೆದರೆ ಬರುವೆ

ಬೇಡಿದ ವರಗಳ ಕೊಡುವೆ
ನುಡಿಸಿದರೇ ನಾ ನುಡಿವೆ

ಇರಿಸಿದ ಹಾಗೇ ಇರುವೆ
ಅನುದಿನ ನಿನ್ನನೆ ನೆನೆವೆ

ಮೋಸ ಚಿಂತನೆ ಅರಿಯೆ
ನನ್ನಯ ರಕ್ಷಣನೆ ನಿನ್ನದೇ

ಜಯವನು ಹೇಳುವೆ ನಿನಗೆ
ಅಭಯವ ಕೊಡು ನೀ ನನಗೆ