ಜಾನಪದ ಸಾಹಿತ್ಯದ ಬಗ್ಗೆ ಕ್ಷೇತ್ರ ಕಾರ್ಯದಲ್ಲಿ ಅವ್ಯಾಹತವಾಗಿ ತೊಡಗುವದು ಅವರ ಪ್ರಮುಖ ಹವ್ಯಾಸವಾಗಿತ್ತು. ಈಜುವುದು, ಹಾಡುವುದು, ಪ್ಲೂಟ ಬಾರಿಸುವುದು, ರೇಸಿಂಗ್‌, ಲಾಠಿ ಪ್ರಯೋಗ ಇತ್ಯಾದಿಗಳಲ್ಲಿ ಬಹುಮುಖ ವ್ಯಕ್ತಿತ್ವವುಳ್ಳವರಾಗಿದ್ದರು. ವಿದ್ಯಾರ್ಥಿ ಜೀವನದಲ್ಲಿ ಅತ್ಯುತ್ತಮ ಅಥ್ಲೆಟಿಕ್‌ಪಟು ಎಂದು ಹೆಸರುಗಳಿಸಿದ್ದರು, ಮತ್ತು ಕವನ ರಚನೆ ಕಾರ್ಯದಲ್ಲಿಯು ವಿದ್ಯಾರ್ಥಿಯಾಗಿರುವಾಗಲೆ ನಿರತರಾಗಿರುತ್ತಿದ್ದರು. ಶಿಲಾಶಾಸನಗಳನ್ನು ಓದುವ ನೈಪುಣ್ಯವು ದೈವದತ್ತವಾಗಿ ದೊರೆತ ವಿಶಿಷ್ಟ ಕೊಡುಗೆಯಾಗಿತ್ತು. ಸಿದ್ದಪ್ಪ ಹಡಪದ ಅವರು ಡಾ. ಗದ್ದಗಿಮಠ ಅವರೊಂದಿಗೆ ಲಾಠಿ ಪ್ರಯೋಗದಲ್ಲಿ ಪೈಪೋಟಿ ಮಾಡುತ್ತಿದ್ದರು.