ಪುಟ್ಟನು ಕಿಟ್ಟನು ಒಟ್ಟಿಗೆ ಓಡಿ
ಅಣ್ಣನ ಅಕ್ಕನ ಜೊತೆಯಲಿ ಕೂಡಿ
ಸರ್ಕಸ್ ಮೃಗಗಳ ನೋಡಿದರು
ಖುಷಿಯಲಿ ಕುಣಿಕುಣಿದಾಡಿದರು
ಪಳಗಿದ ಸಿಂಹವು ಅಲ್ಲಿಯೆ ಇತ್ತು
ಗೂಡಿನ ಹುಲಿಯೂ ಕಣ್ಣಿಗೆ ಬಿತ್ತು
ಆನೆಯು ಒಂದೆಡೆ ನಿಂದಿತ್ತು
ಒಂಟೆಯು ಅಲ್ಲಿಗೆ ಬಂದಿತ್ತು
ನರಿಯೂ ತೋಳವು, ಕರಡಿಯು ಮತ್ತೆ
ಮಂಗವು, ಹಂದಿಯು, ಜಿಂಕೆಯು, ಕತ್ತೆ
ಇದ್ದವು ಮೊಲಗಳು ಒಂದು ಕಡೆ
ಯಾರೂ ತೊಂದರೆ ಮಾಡದೆಡೆ
ಮಕ್ಕಳು ಎಲ್ಲೆಡೆ ಸುತ್ತಿಯೆ ಬಂದು
ಅಲ್ಲಿಯೆ ಕಾಡಿನ ಮೃಗಗಳ ಕಂಡು
ಪ್ರಶ್ನೆಯ ಕೇಳುತ ಹಲವಾರು
ತಿಳಿದರು ಸಂಗತಿ ನೂರಾರು
* * *
Leave A Comment