ಬರ್ರ ಗಾಳಿ ಬೀಸಿ ಬಂದು
ಕೊಂಬೆ ರೆಂಬೆ ಅಲುಗಿ ನಿಂದು
ಮರದ ಮೇಲೆ ಇದ್ದವು
ಹಣ್ಣು ಕೆಳಗೆ ಬಿದ್ದವು

ಬಿದ್ದ ಹಣ್ಣ ಕಂಡು ಸಟ್ಟ
ಎದ್ದು ಬಂದು ಪುಟ್ಟ – ಕಿಟ್ಟ
ಹಣ್ಣು ಹೆಕ್ಕಿ ತಂದರು
ತಂದ ಹಣ್ಣು ತಿಂದರು

ಹಣ್ಣು ತಿಂದು ಚಿಣ್ಣರಂದು
ಹಿಗ್ಗುಗೊಂಡು ನಗುತ ನಿಂದು
ಕೈಯ ಕೈಯ ಹಿಡಿದರು
ಥಕ್ಕ ಥೈಯ ಕುಣಿದರು

* * *