ಅಮ್ಮ ನನ್ನ ಮಾತು ಒಂದು
ಕಿವಿಯ ಕೊಟ್ಟು ಕೇಳು
ಏಕೆ ನಿನ್ನ “ಮಮ್ಮಿ”ಯೆಂದು
ಕರೆಯಬೇಕು ಹೇ-ಳು?

ಅಪ್ಪನನ್ನು ಅಪ್ಪ ಎಂದು
ಎನುವ ಬದಲು ಕೇ-ಳು
“ಡ್ಯಾಡಿ”ಯೆಂದು ಏಕೆ ಇಂದು
ಕರೆಯಬೇಕು ಹೇ- ಳು?

ನಿನ್ನ ಮಾತು ನನ್ನ ಮಾತು
ಕನ್ನಡವಿದೆ ಕೇ-ಳು
ಈಗ ನಮಗೆ ಬೇರೆ ಮಾತು
ಏಕೆ ಬೇಕು ಹೇ- ಳು?

ಕನ್ನಡದಲಿ ಕಲಿವ ಇಷ್ಟ
ಉಂಟು ನನಗೆ ಕೇ-ಳು
ಇಂಗ್ಲಿಷಿನಲೆ ಕಲಿವ ಕಷ್ಟ
ಕೊಡುವೆ ಏಕೆ ಹೇ- ಳು?

* * *