ಐದು ಮತ್ತು ಐದು ಕೂಡಿ

ಹತ್ತು ಬೆರಳು ಒಟ್ಟಿಗೆ
ಎಡದ ಬಲದ ಕೈಗಳಲ್ಲಿ
ನಮ್ಮ ಮುದ್ದು ಪುಟ್ಟಿಗೆ

ಅತ್ತ ಒಂದು ಇತ್ತ ಒಂದು
ಕಂಗಳೆರಡು ಒಟ್ಟಿಗೆ
ನಡುವೆ ಮೂಗು ಕೆಳಗೆ ಬಾಯಿ
ನಮ್ಮ ಮುದ್ದು ಪುಟ್ಟಿಗೆ

ಬಲಕೆ ಒಂದು ಎಡಕೆ ಒಂದು
ಕಿವಿಗಳೆರಡು ಒಟ್ಟಿಗೆ
ತಲೆಯು ಒಂದು ಕಾಲು ಎರಡು
ನಮ್ಮ ಮುದ್ದು ಪುಟ್ಟಿಗೆ

ಗಲ್ಲ ನೋಡು ಕೆನ್ನೆ ಜೋಡು
ತುಟಿಗಳೆರಡು ಒಟ್ಟಿಗೆ
ಕೆಳಗೆ ಕತ್ತು ಎದೆಯು ಮತ್ತು
ಹೊಟ್ಟೆ ನಮ್ಮ ಪುಟ್ಟಿಗೆ

* * *