ಅಪ್ಪ ದಿನಕೆ ಹಲವು ಬೀಡಿ
ಸೇದುತಾನೆ ನೋ-ಡ
ನನಗೆ ಮಾತ್ರ ಹೇಳುತ್ತಾನೆ
“ಬೀಡಿ ಸೇದ ಬೇ-ಡ”
“ಧೀರವೀರ ಆಗು ನೀನು”
ಎನುವ ಅಮ್ಮ ನಿ-ತ್ಯ
ಗುಮ್ಮನನ್ನು ಕರೆದು ನನ್ನ
ಹೆದರಿಸುವುದು ಸ-ತ್ಯ
ಬೀಡ ಜಗಿಯು ತಿರುವ ಅಜ್ಜ
ನುಡಿಯುತಾನೆ ಇಂ-ದು
ಮಕ್ಕಳೆಲ್ಲ ವೀಳ್ಯವನ್ನು
ತಿನ್ನಬಾರದೆಂ-ದು
ಮೂಗಿನೊಳಗೆ ಚಿಟಿಕೆ ನಶ್ಯ
ತುರುಕಿ ಅಜ್ಜಿ ತಾ- ನು
ಎನ್ನುತಾಳೆ, “ನಶ್ಯ ಬುರುಡೆ
ಮುಟ್ಟಬೇಡ ನೀ-ನು”
ಗಾಂಧಿ ತಾತ ನುಡಿದ ಹಾಗೆ
ಹಿಂಶೆ ನಮಗೆ ಸ-ಲ್ಲ
ಎನುವ ಗುರುವೆ ಬೆತ್ತ ಹಿಡಿದು
ಚಡಿಯ ಕೊಡುವರ-ಲ್ಲ
ನುಡಿಯು ಒಂದು ನಡೆಯು ಒಂದು
ಇರಲು ಹಿರಿಯರ- ಲ್ಲಿ
ಯಾರು ನಡೆಗೆ ದಾರಿ ನಮಗೆ
ತೋರಿಸುವರು ಇ- ಲ್ಲಿ?
* * *
Leave A Comment