ಹಸಿರು ಹಾಡು ಹಾಡುವ
ನೆಲವ ಹಸಿರು ಮಾಡುವ
ನೋಟ ಎತ್ತ
ಬೀರಿ ದತ್ತ
ನಗುತ ಇರಲಿ ಎಲ್ಲಿಯೂ
ಸುತ್ತ ಮುತ್ತ
ಹಸಿರು ಹೊತ್ತ
ಮರವು ಗಿಡವು ಬಳ್ಳಿಯು
ನೆಲಕೆ ಚೆಲುವು
ಮನಕೆ ಗೆಲುವು
ಶುದ್ಧ ಗಾಳಿ ಉಸಿರಿಗೆ
ಹೂವು ಹಣ್ಣ
ನೂರು ಬಣ್ಣ
ಕಂಪು ತಂಪು ಹಸಿರಿಗೆ
ಹಲವು ಹತ್ತು
ಬಳಕೆ ವಸ್ತು
ಮಳೆಯು ಬೆಳೆಯು ಎಂದಿಗೂ
ಹಸರಿ ನೆಟ್ಟು
ಉಳಿಸಿ ಬಿಟ್ಟು
ಬೆಳೆಸಿದೆಲ್ಲ ಮಂದಿಗೂ
* * *
Leave A Comment