ದೇವ ದೇವ-
ಜಗವ ಕಾವ
ಬಿಡದೆ ಸಲಹು ನಮ್ಮನು
ಕರುಣೆ ಬೀರಿ
ತೋರು ದಾರಿ
ಬೇಡುತಿಹೆವು ನಿನ್ನನು

ಕಳೆದ ಹೊತ್ತು
ಬರದು ಮತ್ತು
ಬೆಳಗ ಬೇಕು ಜೀವನ
ಅಂತೆ ಮುಂದೆ
ನಡೆಸು ತಂದೆ
ನಮಗೆ ನೀನೆ ಪಾವನ

ಗಾಳಿ ನೀರು
ಬೆಳಕು ಯಾರು
ಬೇರೆ ಕೊಟ್ಟುದಿಲ್ಲವು
ನೆಲದ ಮಣ್ಣು
ಹೂವು ಹಣ್ಣು
ನಿನ್ನ ಕೊಡುಗೆ ಎಲ್ಲವು

ದಿನವು ಅದಕೆ
ನಿನ್ನ ಪದಕೆ
ತಲೆಯ ಬಾಗಿ ಮಣಿವೆವು
ನಿನ್ನ ಪುಣ್ಯ
ನಾಮವನ್ನ
ನೆನೆದು ಕುಣಿದು ತಣಿವೆವು

* * *