ಇದೊಂದು ಮಕ್ಕಳ ಕವನ ಸಂಕಲನ. ಪ್ರಾಥಮಿಕ ಶಾಲಾ ಹಂತದ ಮಕ್ಕಳನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಇಲ್ಲಿನ ಕವನಗಳನ್ನು ರಚಿಸಲಾಗಿದೆ. ಆ ಮಕ್ಕಳು ಇವುಗಳ ಸದುಪಯೋಗ ಪಡೆದರೆ ನನ್ನ ಶ್ರಮ ಸಾರ್ಥಕವಾಗುವುದು.

ಈ ಕವನ ಸಂಗ್ರಹವು ಬೆಳಕು ಕಾಣಲು ಕಾರಣರಾದವರು ನನ್ನ ಆತ್ಮೀಯರೂ, ಹಿತೈಷಿಗಳೂ ಆದ ಬೆಂಗಳೂರು ಶ್ರೀ ಪ್ರೇಮಸಾಯಿ ಪ್ರಕಾಶನದ ಶ್ರೀ ಎ.ಎಸ್‌. ಭಟ್‌ ಮತ್ತು ಅವರ ಸಾಹಿತಿ ಪತ್ನಿ ಸೌ| ಪ್ರೇಮಾಭಟ್‌ ಅವರು. ಅವರಿಬ್ಬರ ಉಪಕಾರವನ್ನು ನಾನೆಂದೂ ಮರೆಯಲಾರೆ.

ಇಲ್ಲಿನ ಕವನಗಳನ್ನು ಓದಿ ನೋಡಿದವರು, ಮುನ್ನುಡಿಯ ಮೂಲಕ ನಾಲ್ಕು ಮೆಚ್ಚು ನುಡಿಯಾಡಿ, ಶುಭ ಹಾರೈಸಿದವರು ಹಿರಿಯ ಸಾಹಿತಿ ಮಿತ್ರರಾದ ಶ್ರೀ ಹಾ.ಮಾ.ನಾ. ಅವರು ಶ್ರೀಯುತರಿಗೆ ನನ್ನ ಹೃತ್ಪೂರ್ವಕ ವಂದನೆಗಳು.

ಅಂದವಾದ ಚಿತ್ರಗಳ ಮೂಲಕ ಈ ಪುಸ್ತಕದ ಮೆರುಗನ್ನು ಹೆಚ್ಚಿಸಿದವರು ಕಲಾವಿದ ಮಿತ್ರ ಶ್ರೀ ಮೋನಪ್ಪ ಅವರು ಇದರ ಅಕ್ಷರ ಜೋಡಣೆಯ ಕಾರ್ಯ ನಿರ್ವಹಿಸಿದವರು ಪ್ರತಿಭಾ ಪ್ರಿಂಟರ್ಸ್, ಬೆಂಗಳೂರು ಅವರು, ಇದನ್ನು ಅಂದವಾಗಿ ಮುದ್ರಿಸಿದವರು ಶ್ರೀ ಲಕ್ಷ್ಮೀ ಆರ್ಟ್ ಪ್ರಿಂಟರ್ಸ್, ಬೆಂಗಳೂರು ಅವರು. ಅವರೆಲ್ಲರಿಗೂ ನಾನು ಆಭಾರಿ.

ಪಳಕಳ ಸೀತಾರಾಮ ಭಟ್ಟ
ಶಿಶು ಸಾಹಿತ್ಯ ಮಾಲೆ
ಮಿತ್ತಬೈಲು
೧೭-೫-೧೯೯೯