ಅಮ್ಮ ಇಂದು ಮಾತು ಒಂದು
ಆಡುತೇನೆ
ಪ್ರೀತಿಯಿಂದ ಕೇಳು ಎಂದೆ
ಬೇಡುತೇನೆ

ಹೊಸತು ವಿಷಯ ತಿಳಿಯಲೆಂದು
ಓಡಿ ನಿನ್ನ ಬಳಿಗೆ ಬಂದು
ನೂರು ಪ್ರಶ್ನೆ ಕೇಳಿದಾಗ
ಕೋಪ ಏಕೆ ಹೇಳು ಬೇಗ?

ಸುತ್ತ ಮುತ್ತ ಕಂಡ ಹಾಗೆ
ಯಾರು? ಏನು? ಏಕೆ? ಹೇಗೆ?
ಎಂದು ಕೇಳಿದಾಗ ನಾನು
ಜೋರು ಮಾಡಬೇಡ ನೀನು

ತಾಳ್ಮೆಯಿಂದ ಪ್ರಶ್ನೆ ಕೇಳಿ
ತಕ್ಕ ಹಾಗೆ ತಿಳಿವು ಹೇಳಿ
ಮುಂದೆ ನಡೆಸಿದಾಗ ನನ್ನ
ಬೆಳಗಿಯಾನು ನಿನ್ನ ಚಿಣ್ಣ

* * *