ಜಯ ಜಯ ಜಯ ಜಯ ಭಾರತಕೆ
ಜಯ ಜಯ ನಮ್ಮಯ ಜನಗಣಕೆ
ಭಾರತ ಮಾತೆಯ ಮಕ್ಕಳು ನಾವು
ನಮ್ಮದು ಸೋದರ ಸಂಬಂಧ
ಒಮ್ಮನದಲಿ ಮನ್ನಡೆಸಲಿ ನಮ್ಮನು
ಸಕ್ಕರೆ ಪ್ರೀತಿಯ ಸವಿಗಂಧ
ಭಾಷೆಯು, ಧರ್ಮವು, ಜಾತಿಯು, ರೀತಿಯು
ಬಗೆ ಬಗೆಯಾದರು ನಾವೆಂದೂ
ವಿವಿಧತೆಯಲ್ಲೇ ಏಕತೆ ಮೆರೆಯಿಸಿ
ಬೆಳೆಸುತ ಬೆಳಗಿದ ಜನವೊಂದು
ನಿಜವಿದನರಿಯುತ ಕೂಡಿಯೆ ದುಡಿದರೆ
ಸೌಖ್ಯದ ಸ್ವರ್ಗವೆ ಇಲ್ಲುಂಟು
ಸೃಷ್ಟಿಯ ಸಂಪದ ಸೊಬಗೂ ತುಂಬಿದ
ಇಂತಹ ದೇಶವು ಎಲ್ಲುಂಟು?
* * *
Leave A Comment