ಮಗುವಿನಂಥ ನಗೆಯ ಮೊಗದ
ಗಾಂಧಿ ತಾತನು
ಪ್ರೀತಿಯಿಂದ ಲೋಕವನ್ನೆ
ಗೆಲಿದ ಖ್ಯಾತನು

ಪಾರತಂತ್ಯ್ರ ತೊಲಗಿಸಿದನು
ದೇಶ ನಾಯಕ
ದೀನ ದುಃಖಿ ಜನರ ಬಂಧು
ಜಗದ ಸೇವಕ

ಶಾಂತಿಯಿಂದ ಕ್ರಾಂತಿ ತಂದ
ಅಮರ ಕೀರುತಿ
ನಯ-ವಿನಯವೆ ರೂಪು ತಳೆದ
ಸತ್ಯ ಮೂರುತಿ

ನಮಗೆ ಅವನು ರಾಷ್ಟ್ರಪಿತನು
ಮಾರ್ಗದರ್ಶಕ
ತತ್ವಜ್ಞಾನಿ, ತ್ಯಾಗಿ, ಯೋಗಿ
ನೀತಿ ಬೋಧಕ

* * *