ನಿದ್ದೇ ನಿದ್ದೇ ನೀ ಬಂದಿದ್ದೆ
ಓದಲು ಕುಳಿತಾಗ
ನನ್ನಯ ಕಂಗಳ ಕದ ಮುಚ್ಚಿದ್ದೆ
ಸದ್ದಿಲ್ಲದೆ ಬೇಗ

ನಿದ್ದೇ ನಿದ್ದೇ ನೀ ಬಂದಿದ್ದೆ
ಬರೆಯುತ ಇರುವಂದು
ಪುಸ್ತಕ ಸೆಳೆದು ಕೆಳ ಹಾಕಿದ್ದೆ
ನನ್ನ ಬಳಿಗೆ ಬಂದು

ನಿದ್ದೇ ನಿದ್ದೇ ನೀ ಬಂದಿದ್ದೆ
ಗಣಿತದ ಪಾಠಕ್ಕೆ
ಎಣಿಕೆಯು ತಪ್ಪಲು ನಾ ಅತ್ತಿದ್ದೆ
ನಿನ್ನಯ ಕಾಟಕ್ಕೆ

ನಿದ್ದೇ ನಿದ್ದೇ ನಾನಿದೊ ಎದ್ದೆ
ಎಚ್ಚರಿಸುವೆ ಖುದ್ದು
ಕೆಲಸಕೆ ತೊಂದರೆ ಮಾಡಲು ಬಂದರೆ
ಓಡಿಸುವೆನು ಒದ್ದು

* * *