ಮನೆಯಲಿಂದು ಉಂಟು ಒಂದು
ನಡೆವ ಪುಟ್ಟ ಬೊಂ – ಬೆ
ಏನೊ ಮಾಡಿ ಆಡಿ ಹಾಡಿ
ನಲಿವ ಚಿಕಣಿ ರಂ- ಭೆ

ಮನೆಯಲಿದ್ದೆ ಬಿದ್ದು ಎದ್ದೆ
ಸಾಗುವುದಿದು ಮೈ- ಲು
ಮೊಲೆಯನುಣುವ ಮಣ್ಣು ತಿನುವ
ಅಂಬೆಗಾಲ ರೈ- ಲು

ಅತ್ತ ನೋಡಿ ಇತ್ತ ಓಡಿ
ಕಂಡುದನ್ನು ಹೆ- ಕ್ಕಿ
ನಿಮಿಷದೊಳಗೆ ಬಾಯಿಯೊಳಗೆ
ಇಕ್ಕಿ ಬಿಡುವ ಹ- ಕ್ಕಿ

ಒಮ್ಮೆ ನಗುವು ಮತ್ತೆ ಅಳುವು
ಘಳಿಗೆಯೊಳಗೆ ನಿ- ದ್ದೆ
ಏನು ಗೆಲುವು ಎಂಥ ಚೆಲುವು!
ಮುದ್ದಿನದಿದು ಮು- ದ್ದೆ

* * *