“ತುಂಟ ಪೋರ, ತಂಟೆ ಕೋರ”
ಎಂದು ನೀವು ನಿ- ತ್ಯ
ಬಂದು ನನ್ನ ಹಳಿವುದನ್ನ
ಬಲ್ಲೆ ನಾನು ಸ- ತ್ಯ
ಕಲಿಯಬೇಕು, ತಿಳಿಯ ಬೇಕು
ಬೆಳೆಯ ಬೇಕು ನಾ- ನು
ಎನುವ ಬಯಕೆ ಉಂಟು ಅದಕೆ
ಯತುನ ಬೇಡ ವೇ- ನು?
ತಿಳಿಯಲೆಂದು ಕಲಿಯಲೆಂದು
ನೋಡಿ, ಮೂಸಿ, ಮು- ಟ್ಟಿ
ಕೆಲಸ ನಾನೆ ಮಾಡು ತೇನೆ
ಹಿಡಿದು, ತಟ್ಟಿ, ಕು- ಟ್ಟಿ
ಅದನು ಇಂದು ತಂಟೆಯೆಂದು
ಕರೆಯುವವರೆ ಕೇ – ಳಿ
ಎಳವೆಯಲ್ಲಿ ನೀವು ಇಲ್ಲಿ
ಮಾಡಿದುದನು ಹೇ- ಳಿ
* * *
Leave A Comment