ಹೊಸ ವರುಷ ಬರಲಿ
ಹೊಸ ಹರುಷ ತರಲಿ
ಹಳೆಯದನು ಹಿಂದೆ ದೂಡಿ
ಹೊಸ ಹಾಡ ಕೇಳಿ
ಹೊಸ ಭಾವ ತಾಳಿ
ಜನ ನಿಲಲಿ ಒಂದು ಗೂಡಿ

ಮತ ಭೇದ, ರೋಷ
ಮತ್ಸರವು, ದ್ವೇಷ
ಕೊಲೆ, ಸುಲಿಗೆ, ಹಿಂಸೆ ತೊಲಗಿ-
ಸೌಹಾರ್ದ ಬೆಳೆದು
ಮನ ಮನವ ಬೆಸೆದು
ಸುಖ-ಶಾಂತಿ-ಪ್ರೀತಿ-ಬೆಳಗಿ-

ಮನೆ ಮನೆಯ ಜನಕು
ನೆಮ್ಮದಿಯ ಬದುಕು
ಸಿಗುವಂಥ ಸುದಿನ ಬರಲಿ
ಸೌಭಾಗ್ಯ ಮಿಕ್ಕಿ
ಸಂತೋಷ ಉಕ್ಕಿ
ಜಗದಗಲ ಹರಿಯುತಿರಲಿ

* * *