ಎಲ್ಲೇ ಇರ್ಲಿs ಯಾರೇ ಇರ್ಲಿs
ದೊಡ್ಡವರಾದೋರೆಲ್ಲ
ಆಡೋದ್ರಲ್ಲಿ ಮಾಡೋದ್ರಲ್ಲಿ
ನಮ್‌ ಹಂಗಂತೂ ಅಲ್ಲ.
ಬಣ್ಣದ ಹೂವೇ ನಗ್ತಾ ಇದ್ರೂ
ನೋಡೋದಿಲ್ಲ ನಿಂದು
ರಾಗದ ಹಕ್ಕೀ ಹಾಡ್ತಾ ಇದ್ರೂ
ಕೇಳೋದಿಲ್ಲ ಬಂದು.
ಹೊಸ್ತೇನಾದ್ರೂ ಕಾಣಿಸ್ಕೊಂಡ್ರೂ
ಏನದು, ಏಕೆ, ಹೇಗೆ
ಎನ್ನೋದೇನೂ ಯೋಚ್ನೆ ಮಾಡ್ದೇ
ಇದ್ಬಿಡ್ತಾರೆ ಹಾಗೇ.

ಅಂಥೌರೆಲ್ಲ ಮಾತಾಡೋರು
ಸಂದರ್ಭಕ್ಕೆ ತಕ್ಕ
ಕೋಪs ಗೀಪs ದುಃಖs ಗಿಕ್ಕs
ಮರೆಯೋರಲ್ಲ ಫಕ್ಕ.
ಭೇದs ಬಿಟ್ಟು ಕೂಡಿs ಒಟ್ಟು
ಆಡಿs ಹಾಡಿs ನಕ್ಕು
ನಮ್‌ ಹಂಗೇನೇ ನಲಿಯೋದಲ್ವೆ
ಎಲ್ಲರ್ಗೂ ಲಾಯಕ್ಕು?