ಪಡೆದಳು ನಮ್ಮನು ಭಾರತ ಮಾತೆ
ಮಹಿಮಳು ಮಾನ್ಯಳು ಜಗವಿಖ್ಯಾತೆ
ಬನ್ನಿರಿ, ಬಾಗುತ ನಮಿಸುವ ನಮ್ಮ
ಹರಸುತ ಕರುಣದಿ ಕಾಯಲಿ ಅಮ್ಮ

ಒಂದೇ ಮಡಿಲಲಿ ಹುಟ್ಟುತ ಬಂದ
ನಮ್ಮನು ಸೋದರ ಪ್ರೇಮದ ಗಂಧ
ಸೆಳೆಯುತ ಒಟ್ಟಿಗೆ ಬೆಸೆಯಲಿ ಇಂದು
ಒಮ್ಮನದಿಂದಲಿ ನಡೆಸಲಿ, ಮುಂದು

ನಾಡಿನ ನೆಲದಲಿ ಭಕ್ತಿಯ ನಿಟ್ಟು
ದ್ವೇಷದ ಸ್ವಾರ್ಥದ ಭಾವನೆ ಬಿಟ್ಟು
ನಮ್ಮಯ ಹಾಗೆಯೆ ಪರರನು ಕಂಡು
ಬದುಕಲು ಕಲಿತರೆ ಸವಿ ಸುಖ ಎಂದೂ

ಒಗ್ಗಟ್ಟಿದ್ದರೆ ಬರುವುದು ಬಲವು
ಕೂಡಿಯೆ ದುಡಿದರೆ ಒಲಿವುದು ಗೆಲವು
ಪ್ರೀತಿಯೊಳೆಲ್ಲರ ತಬ್ಬಿಯೆ ಹಿಡಿವ
ನೆಲದಲಿ ಸ್ವರ್ಗವ ಸೃಷ್ಟಿಸಿ ಬಿಡುವ

* * *