ಪರಿಸರವೆ ಜೀವನವ
ರೂಪಿಸುವ ಶಕ್ತಿ
ಅದನು ರಕ್ಷಿಸುವಲ್ಲಿ
ಇರಲಿ ಆಸಕ್ತಿ
ಪರಿಸರವು ಹದಗೆಡಲು
ಕೆಟ್ಟೀತು ಬಾಳು
ತಪ್ಪೀತು ಸುಖ ಶಾಂತಿ
ಹೆಚ್ಚೀತು ಗೋಳು

ಹೊಗೆ, ಧೂಳು, ವಿಷ ಬೆರೆತು
ವಾಯು ಮಾಲಿನ್ಯ
ತ್ಯಾಜ್ಯಗಳ ಸೇರ್ಪಡೆಗೆ
ಜಲದ ಮಾಲಿನ್ಯ
ಕಲಬೆರಕೆ ವಿಷಗಳಿಗೆ
ಅನ್ನ ಮಾಲಿನ್ಯ
ಸದ್ದು ಗದ್ದಲ ಮೀರಿ
ಶಬ್ದ ಮಾಲಿನ್ಯ

ಮಲಿನತೆಗೆ ಪರಿಸರವು
ಕೆಡದಂತೆ ನೋಡಿ
ಸೃಷ್ಟಿ ಸಂಪನ್ಮೂಲ
ರಕ್ಷಣೆಯ ಮಾಡಿ
ನೆಟ್ಟುಗಿಡ, ಮರ, ಬಳ್ಳಿ
ಬೆಳೆಸಿದರೆ ಹಸಿರು
ಉಳಿದೀತು ಜಗದೆಲ್ಲ
ಜೀವಿಗಳ ಉಸಿರು

* * *