ನಾವು ಭಾರತೀಯರು
ದೇಶ ನಮ್ಮ ದೇವರು

ಹಿಂದು-ಮುಸ್ಲಿಂ ಎನುವುದಿಲ್ಲ
ಕ್ರೈಸ್ತ-ಸಿಕ್ಖ ಭೇದ ಸಲ್ಲ
ಒಂದೆ ತಾಯ ಮಕ್ಕಳೆಲ್ಲ
ನಾವು ಭಾರತೀಯರು……

ಭಾಷೆ, ಬಣ್ಣ ಬದಲಿ ತೆಂದು
ನಿಯಮ ನಿಷ್ಠೆ ಬೇರೆಯೆಂದು
ಮಾನವತೆಯ ಮರೆಯೆವಿಂದು
ನಾವು ಭಾರತೀಯರು ……

ಐಕ್ಯದಿಂದ ನಮಗೆ ಶಕ್ತಿ
ದುಡಿಮೆ, ಏಳ್ಗೆ ಪಡೆವ ಯುಕ್ತಿ
ಸೇವೆಯಿಂದ ಋಣದ ಮುಕ್ತಿ
ನಾವು ಭಾರತೀಯರು…..

* * *