೧೧ ಫೆಬ್ರವರಿ ೧೯೦೬; ೧೮ ಫೆಬ್ರವರಿ ೧೯೦೬; ೧೯ ಫೆಬ್ರವರಿ ೧೯೦೬ : ಬ್ಯಾಂಕಿಂಗ್ ಸಂಸ್ಥೆಯೊಂದನ್ನು ಸ್ಥಾಪಿಸುವ ಕುರಿತು ಉಡುಪಿಯ ಪುರ ಪ್ರಮುಖರ ಸಭೆ; ದ ಕೆನರಾ ಬ್ಯಾಂಕಿಂಗ್ ಕಾರ್ಪೊರೇಶನ್ (ಉಡುಪಿ) ಲಿಮಿಟೆಡ್ ಎಂಬ ಹೆಸರಿನಲ್ಲಿ ಹಾಜಿ ಅಬ್ದುಲ್ಲಾ ಹಾಜಿ ಖಾಸಿಂ ಸಾಹೇಬ್ (ಸ್ಥಾಪಕಾಧ್ಯಕ್ಷರ ಆಗಿನ ಹೆಸರು) ಅವರಿಂದ ಸಾರ್ವಜನಿಕರಿಗೆ ನೋಟೀಸ್ ಬಿಡುಗಡೆ.

೧೨ ಮಾರ್ಚ್ ೧೯೦೬ : ದ ಕೆನರಾ ಬ್ಯಾಂಕಿಂಗ್ ಕಾರ್ಪೊರೇಶನ್ ಉಡುಪಿ ಲಿಮಿಟೆಡ್ ಎಂಬ ಹೆಸರಿನಲ್ಲಿ ಬ್ಯಾಂಕಿನ ಜನನ

೫ ಏಪ್ರಿಲ್ ೧೯೦೬: ಮೊದಲ ಸಾಲ ನೀಡಿಕೆ ಜನಾಬ್ ಶಿದ್ದಿ ಬಾಪು ಸಾಹೇಬ್ ಅವರಿಗೆ ರೂ ೧೦೦ ಮೊದಲ ಸಾಲ ನೀಡಿಕೆ.

೧೩ ಅಕ್ಟೋಬರ್ ೧೯೦೬ : ಮೊದಲ ಠೇವಣಿ ರೂ. ೧೦೦ – ಶ್ರೀ ಬಿ. ನಾರಾಯಣ ರಾವ್ ಅವರಿಂದ

೧೮ ಮೇ ೧೯೨೩ : ಕುಂದಾಪುರದಲ್ಲಿ ಬ್ಯಾಂಕಿನ ಮೊದಲ ಶಾಖೆಯ ಆರಂಭ

ಬ್ಯಾಂಕಿನ ಬೆಳ್ಳಿ ಹಬ್ಬ. ಬಲದಿಂದ ನಾಲ್ಕನೆಯವರಾಗಿ ಹಾಜಿ ಅಬ್ದುಲ್ಲಾ ಸಾಹೇಬರು (೨೪.೫.೧೯೩೧)

೨೪ ಮೇ ೧೯೩೧ : ಬ್ಯಾಂಕಿನ ಬೆಳ್ಳಿ ಹಬ್ಬದ ಆಚರಣೆ

೧೪ ನವೆಂಬರ್ ೧೯೩೪ : ಬ್ಯಾಂಕಿಂಗ್ ಸೌಲಭ್ಯವಿಲ್ಲದ ಅಂದಿನ ಕೂರ್ಗ್ ಜಿಲ್ಲೆಯಲ್ಲಿ ಬ್ಯಾಂಕಿನ ಮಡಿಕೇರಿ ಶಾಖೆಯ ಪ್ರಾರಂಭ

೩ ಜೂನ್ ೧೯೩೭ : ಆರ್.ಬಿ.ಐ. ಕಾಯಿದೆ ೧೯೩೪ರ ಎರಡನೇ ಶೆಡ್ಯೂಲಿನಲ್ಲಿ ಬ್ಯಾಂಕಿನ ಸೇರ್ಪಡೆ

೫ ಅಕ್ಟೋಬರ್ ೧೯೩೭ : ಮದ್ರಾಸ್ ಸರಕಾರದ ಮಾನ್ಯ ಸಚಿವ ವಿ.ವಿ.ಗಿರಿಯವರಿಂದ ಮಂಗಳೂರಿನಲ್ಲಿ ಭದ್ರತಾ ಕೋಶಗಳ ಉದ್ಘಾಟನೆ

ಏಪ್ರಿಲ್ ೧೯೩೯ : ಬ್ಯಾಂಕಿನ ಹೆಸರಿನಿಂದ ಉಡಿಪಿ ಎಂಬುದನ್ನು ಕೈಬಿಟ್ಟು ದಿ ಕೆನರಾ ಬ್ಯಾಂಕಿಂಗ್ ಕಾರ್ಪೊರೇಶನ್ ಲಿಮಿಟೆಡ್ ಎಂಬುದಾಗಿ ಹೆಸರು ಬದಲಾವಣೆ

೮ ಮೇ ೧೯೫೩ : ಮೈಸೂರಿನ ಮಾನ್ಯ ಮುಖ್ಯ ಮಂತ್ರಿ ಕೆಂಗಲ್ ಹನುಮಂತಯ್ಯನವರು ಬ್ಯಾಂಕಿಗ್ ಭೇಟಿ ನೀಡಿದರು.

೨೩ ಜನವರಿ ೧೯೫೪ : ಉಡುಪಿಯ ಎಂ.ಜಿ. ಎಂ. ಕಾಲೇಜಿಗೆ ಬ್ಯಾಂಕ್ ದಾನವಾಗಿ ನೀಡಿದ ಕೆನರಾ ಬ್ಯಾಂಕಿಂಗ್ ಕಾರ್ಪೊರೇಶನ್ ಗ್ರಂಥಾಲಯದ ಉದ್ಘಾಟಮೆ – ಪೇಜಾವರ ಮಠದ ಶ್ರೀ ವಿಶ್ವೇಶ್ವತೀರ್ಥ ಸ್ವಾ,ಮೀಜಿಗಳವರಿಂದ

೧೨ ಮಾರ್ಚ್ ೧೯೫೬ ರಿಸರ್ವ್ ಬ್ಯಾಂಕ್ ಗವರ್ನರ್ ಸರ್ ಬೆನಗಲ್ ರಾಮರಾವ್ ಅವರ ಅಧ್ಯಕ್ಷತೆಯಲ್ಲಿ ಬ್ಯಾಂಕಿನ ಸುವರ್ಣ ಮಹೋತ್ಸವ

೧೯೬೧ : ರಿಸರ್ವ್ ಬ್ಯಾಂಕಿನ ಆದೇಶದ ಅನುಸಾರವಾಗಿ ಕೆನರಾ ಬ್ಯಾಂಕಿನ ಕಾರ್ಪೊರೇಶನ್ ಲಿಮಿಟೆಡ್‌ನೊಳಗೆ ಬ್ಯಾಂಕ್ ಆಫ್ ಸಿಟಿಜನ್ಸ್ ಲಿಮಿಟೆಡ್, ಬೆಳಗಾಂ ಇದರ ವಿಲೀನ; ಉಡುಪಿಯಿಂದ ಮಂಗಳೂರಿಗೆ ಬ್ಯಾಂಕಿನ ಆಡಳಿತ ಕಚೇರಿಯ ವರ್ಗಾವಣೆ

೧೯೭೨ : ಎರಡನೆಯ ಸಲ ಬ್ಯಾಂಕಿನ ಹೆಸರು ಬದಲಾವಣೆ ದಿ ಕೆನರಾ ಬ್ಯಾಂಕಿಂಗ್ ಕಾರ್ಪೊರೇಶನ್ ಲಿಮಿಟೆಡ್ ಎಂಬುದು ಕಾರ್ಪೊರೇಶನ್ ಬ್ಯಾಂಕ್ ಲಿಮಿಟೆಡ್ ಎಂದು ಬದಲಾಯಿತು.

೧೭ ಏಪ್ರಿಲ್ ೧೯೭೬ ; ಬ್ಯಾಂಕಿನ ಪ್ಲಾಟಿನಂ ಜುಬಿಲಿ ಆಚರಣೆ, ಉಪರಾಷ್ಟ್ರಪತಿ ಶ್ರೀ ಬಿ.ಡಿ.ಜತ್ತಿಯವರಿಂದ ಬ್ಯಾಂಕಿನ ನೂತನ ಆಡಳಿತ ಕಚೇರಿಯ ಕಟ್ಟಡದ ಉದ್ಘಾಟನೆ; ಕೆನರಾ ಬ್ಯಾಂಕಿನ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಶ್ರೀ ಸಿ. ಇ. ಕಾಮತ್ ಅವರಿಂದ ಬ್ಯಾಂಕಿನ ಗೃಹ ಪತ್ರಿಕೆ ‘ಕ್ಷೇಮ’ದ ಪ್ರಥಮ ಸಂಚಿಕೆಯ ಬಿಡುಗಡೆ

೧೮ ಏಪ್ರಿಲ್ ೧೯೭೬ : ರಿಸರ್ವ್ ಬ್ಯಾಂಕ್ ಗವರ್ನರ್ ಶ್ರೀ ಕೆ.ಆರ್. ಪುರಿ ಅವರಿಂದ ಬ್ಯಾಂಕಿನ ಸಿಬ್ಬಂದಿ ತರಬೇತಿ ಕಾಲೇಜಿನ ಉದ್ಘಾಟನೆ

೧೯೭೮ : ಅತ್ಯುತ್ತಮ ರಫ್ತು ಉತ್ತೇಜನಕ್ಕಾಗಿ ಭಾರತ ಸರಕಾರದ ಅರ್ಹತಾ ಪತ್ರ

೧೫ ಏಪ್ರಿಲ್ ೧೯೮೦ : ಬ್ಯಾಂಕಿನ ರಾಷ್ಟ್ರೀಕರಣ

೧೯೮೧ : ಜೆಮ್ ಎಂಡ್ ಜ್ಯುವೆಲ್ಲರಿ ಎಕ್ಸ್‌ಪೋರ್ಟ್ ಕಮಿಶನ್‌ನಿಂದ ಪ್ರಶಸ್ತಿ. ಮುಂದೆ ನಾಲ್ಕು ವರ್ಷಗಳ ಕಾಲ ಸತತವಾಗಿ ಈ ಪ್ರಶಸ್ತಿ ಬ್ಯಾಂಕಿಗೆ ಲಭಿಸಿತು.

೨೮ ಏಪ್ರಿಲ್ ೧೯೮೪ : ಚಿಕ್ಕಮಗಳೂರು ಕೊಡಗು ಗ್ರಾಮೀಣ ಬ್ಯಾಂಕ್ ಪ್ರವರ್ತ

೧೯೮೫ : ಬ್ಯಾಂಕಿನ ಅಧ್ಯಕ್ಷ ಶ್ರೀ ವೈ. ಎಸ್. ಹೆಗ್ಡೆಯವರಿಗೆ ಐ.ಎಂ.ಎಚ್.ಗುಡ್ ಇಯರ್ ಮಾರ್ಕೆಟಿಂಗ್ ಮ್ಯಾನ್ ಆಫ್ ದ ಇಯರ್ ಪ್ರಶಸ್ತಿ; ಸತತ ಐದನೆ ಬಾರಿ ಬ್ಯಾಂಕಿಗೆ ಜೆಮ್ ಎಂಡ್ ಜೆವೆಲ್ಲರಿ ಎಕ್ಸ್‌ಪೋಟ್ ಕೌನ್ಸಿಲ್ ಪ್ರಶಸ್ತಿ.

೯ ನವೆಂಬರ್ ೧೯೮೯: ನೆಹರೂ ಜನ್ಮಶತಾಬ್ದಿ ಅಂಗವಾಗಿ ಮುಖ್ಯ ಕಚೇರಿಯ ಸಮೀಪ ನೆಹರೂರವರ ಕಂಚಿನ ಪ್ರತಿಮೆಯ ಅನಾವರಣ – ಮುಖ್ಯ ನ್ಯಾಯಾಧೀಶ ಇ.ಎಸ್. ವೆಂಕಟರಾಮಯ್ಯ ಅವರಿಂದ

೧೩ ನವೆಂಬರ್ ೧೯೮೯ – ಶ್ರೀ ಸಿ. ರಂಗರಾಜನ್, ಡೆಪ್ಯುಟಿ ಗವರ್ನರ್, ರಿಸರ್ವ್ ಬ್ಯಾಂಕ್ ಇವರಿಂದ ಲೋಕಲ್ ಏರಿಯಾ ನೆಟ್‌ವರ್ಕ್ (LAN) ಉದ್ಘಾಟನೆ.

೪ ಮಾರ್ಚ್ ೧೯೯೨ : ಬ್ಯಾಂಕಿನ ೮೫ನೇ ಜನ್ಮದಿಂದ ಸಮಾರಂಭದ ಮುಖ್ಯ ಅತಿಥಿಯಾಗಿ ರಾಷ್ಟ್ರಪತಿ ಆರ್. ವೆಂಕಟರಾಮನ್, ಅಂದಿನ ಮುಖ್ಯಮಂತ್ರಿ ಶ್ರೀ ವೀರಪ್ಪಮೊಯಿಲಿ ಹಾಗೂ ನಿವೃತ್ತ ಮುಖ್ಯ ನ್ಯಾಯಮೂರ್ತಿ ಆರ್ಥಿಕ ಅಭಿವೃದ್ಧಿ ಪ್ರತಿಷ್ಠಾನದ ಉದ್ಘಾಟನೆ

೧೯೯೩, ೧೨ ಮಾರ್ಚ್ ೧೯೯೫ : ಸ್ಥಾಪಕರ ಶಾಖೆಯೆಂದು ಉಡುಪಿ ಶಾಖೆಯ ಪುನರ್ ನಾಮಕರಣ. ಶ್ರೀ ಕೆ. ಆರ್. ರಾಮಮೂರ್ತಿ ಅಧ್ಯಕ್ಷರು ಹಾಗೂ ಆಡಳಿತ ನಿರ್ದೇಶಕರು ಇವರಿಂದ ಉಡುಪಿಯಲ್ಲಿ ನೂತನ ಕಾರ್ಪೊರೇಶನ್ ಬ್ಯಾಂಕ್ ಹೌಸ್ ಕಟ್ಟಡದ ಉದ್ಘಾಟನೆ

೬ ಏಪ್ರಿಲ್ ೧೯೯೬ : ಬ್ಯಾಂಕಿನ ೯೦ನೇ ವರ್ಷದ ಆಚರಣೆ. ಮುಖ್ಯ ಅತಿಥಿ: ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶ ಶ್ರೀ ಎ. ಎಂ. ಅಹಮದಿ. ಅಧ್ಯಕ್ಷತೆ : ರಾಜರ್ಷಿ ಡಿ. ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ

೧೯೯೫ : ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಡಾ.ಸಿ. ರಂಗರಾಜನ್ ಅವರು ಬೆಂಗಳೂರಿನಿಂದ CAPS ಗೆ ಭೇಟಿ ನೀಡಿದರು; ಮಂಗಳೂರಿನ ರಥಭೀದಿ ಶಾಖೆಯ ಸ್ವಂತ ಕಟ್ಟಡ ಕಾರ್ಪೊರೇಶನ್ ಬ್ಯಾಂಕ್ ಹೌಸ್ ಉದ್ಘಾಟನೆ – ಆಗಿನ ಕೇಂದ್ರವಿತ್ತ ಸಚಿವ ಶ್ರೀ ಡಾ. ಮನಮೋಹನ್ ಸಿಂಗ್ ಅವರಿಂದ

೧೯೯೭-೯೮ : ಸಾರ್ವಜನಿಕರಿಗೆ ಬ್ಯಾಂಕಿನ ಶೇರಿಗಳ ನೀಡಿಕೆ – ಅತ್ಯಂತ ಯಶಸ್ವಿಯಾಯಿತು.

೨೦೦೦ : ಬ್ಯಾಂಕಿನ ಹೊಸ ಮಿಲೆನಿಯಂ ಕಟ್ಟಡದ ಉದ್ಘಾಟನೆ. ಅಂದಿನ ಕೇಂದ್ರ ಹಣಕಾಸು ರಾಜ್ಯ ಸಚಿವ ಮಾನ್ಯ ಶ್ರೀ ಬಾಬಾಸಾಹೇಬ್ ವಿಖೆ ಪಾಟೀಲ್ ಅವರಿಂದ ಕೇಂದರ ವಿತ್ತ ಸಚಿವ ಸನ್ಮಾನ್ಯ ಶ್ರೀ ಯಶವಂತ ಸಿನ್ಹಾ ಅವರಿಂದ ಮಂಗಳೂರಿನ ಮುಖ್ಯ ಕಚೇರಿಯಲ್ಲಿ ‘ಕಾರ್ಪ್ ಫಾಸ್ಟ್’ ಎಂಬ ನೂತನ ಯೋಜನೆಯ ಉದ್ಘಾಟನೆ.

೬.೬.೨೦೦೧ : ಜೀವ ವಿಮಾನ ನಿಗಮದ ಜತೆ ಬ್ಯಾಂಕಿನ ಒಡಂಬಡಿಕೆ (MOU)-

೨೦.೧೨.೨೦೦೧ : ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪೆನಿಯೊಂದಿಗೆ ಒಡಂಬಡಿಕೆ(MOU) ಮಂಗಳೂರು ತಾಲೂಕಿನ ಕಿನ್ನಿಗೋಳಿಯಲ್ಲಿ

೨೦೦೪ : ಕೇಂದ್ರ ವಿತ್ತ ಸಚಿವರಾದ ಸನ್ಮಾನ್ಯ ಶ್ರೀ ಪಿ. ಚಿದಂಬರಂ ಅವರಿಂದ ಕಾರ್ಪೊರೇಶನ್ ಬ್ಯಾಂಕ್ ಸಾಲ ನೀಡಿದ ೧೦೫೪ ಸ್ವಸಹಾಯ ಗುಂಪುಗಳ ಉದ್ಘಾಟನೆ.

೨೭-೧೨-೨೦೦೨ : ೨೪ನೇ ಬ್ಯಾಂಕ್ ಅರ್ಥಶಾಸ್ತ್ರಜ್ಞರ ಸಮ್ಮೇಳನ(೨೦೦೨) (BECON) ಇದರ ಅತಿಥ್ಯವನ್ನು ಐ.ಬಿ.ಎ. ಪರವಾಗಿ ಕಾರ್ಪೊರೇಶನ್ ಬ್ಯಾಂಕ್ ವಹಿಸಿಕೊಂಡಿತ್ತು.

೧೨.೩.೨೦೦೫ : ಭಾರತೀಯ ರಿಸರ್ವ್ ಬ್ಯಾಂಕಿನ ಡೆಪ್ಯುಟಿ ಗವರ್ನರ್ ಶ್ರೀ ವಿಠಲದಾಸ್ ಲೀಲಾಧರ್ ಅವರಿಂದ ಶತಮಾನೋತ್ಸವ ಕಾರ್ಯಕ್ರಮಗಳಿಗೆ ಚಾಲನೆ.

* * *