ಶಾಸನ ಪಾಠ
ಭಾಗ

೧. ಶ್ರೀಮತ್ಸರಮಗಂಭೀರಸ್ಯಾದ್ವಾದಾಮೋಘಲಾಂಛನಂ ಜೀಯಾ ತ್ರೈಲೋಕ್ಯ ನಾ[ಥ*]ಸ್ಯ ಶಾಶನಂ ಜಿನಶಾಸನಂ || ಸ್ವಸ್ತಿ ಶ್ರೀಮುದ್ರಾ

೨. ಜಾಧಿರಾಜ ರಾಜಪರಮೇಸ್ವರ ಶ್ರೀ ವೀರಪ್ರತಾಪ ವಿಜಯ ಬುಕ್ಕರಾಯ ಒಡೆಯರು ಸಕಳ ಸಾಂಬ್ರಾಜ್ಯವ ಪ್ರತಿಪಾಲಿಸುವ ಕಾಲ[ದಲಿ]

೩. ಶ್ರೀಮನ್ಮಹಾಮಂಡಳೇಶ್ವರಂ ಕಲಿಗಳ ಮುಖದ ಕೈ ಸಾಳುವದ…….ಕನಕಾದಿ .ಮಾದರಸ ಒಡೆಯರವರ ಕುಮಾರ ಹು

೪. ಸಿವರ ಸೂಲ ಕಡಿತಲೆಮಲ್ಲ ಮಂಡ[ಣಿ]ತ್ರಿಸೂಲ ಶ್ರೀಮನ್ಮಹಾಮಂಡಳೇಸ್ವರಂ ಹಾಡವಳಿಯ ಸಿಂಗರಾಯ ವೊಡೆಯರು ಶ್ರೀಮಂನ್ಮ

ಭಾಗ

೫. ಹಾಮಂಡಳೇಶ್ವರ [0*] ಕಲಿಗಳ ಮು[ಖ]ದಕ್ಕೆ ರಿಪು ಕಟಕ ಸೂಱೆಕಾಱನಾಳುವಟ್ಟಣ . ನಗಿರೆಯ ಪುರವರಾಧೀಶ್ವರ ಹೈವರಾಜ ಒಡೆ

೬. ಯರ ವಂಶೋದ್ಧಾರಕರುಮಪ್ತ ಕೇಶವದೇವ ಒಡೆಯರೂ ಅಳಿಯಸಂಗಿರಾಯ ವೊಡೆಯರೂ ಹಾಡವಳಿಯ ಸಂಗಿರಾಯ

೭. ಒಡೆಯರ ಕೂ . . ತ್ತಲ್ಲಿ ಸಿಂಗಿರಾಯ ಒಡೆಯರ . . . . ಕರು ತ್ರಿಭುವನಿಗಂಡರ ಗೋವ ಸಾಮಂತ ನಾರಾಯಣ ಭುಜಬಲಭೀ

೮. ಮ . . . . . ಹನುಮ . . ನ್ದಯಾಬ್ಧಿ ವರ್ದ್ಧನ . . . . [ಚಿನ್ನ] ಹೈವರಸ ಒಡೆಯರು ಮಂಗರಸ ಒಡೆಯರು ಎರಡು ಕೋಲ

ಭಾಗ

೯. ಬಳಿ ಸಮಸ್ತ ವೀರ ಪರಿವಾರವ ಕೂಡಿಕೊಂಡು [ಹುಸುಕಿಲೊತ್ತಿನಲೊಳಗೆ] ನಡದಲ್ಲಿ ಕೇಸವದೇವ ವೊಡೆಯರೂ ಅಳಿಯ ಸಂಗಿರಾಯ ಒಡೆಯ

೧೦. ರೂ ಎರಡು ಕೋಲಬಳಿ ಸಮಸ್ತ ವೀರಪರಿವಾರವ ಕೂಡಿ . . ಬಂದು . ದಳ ಕಾದಿದಲ್ಲಿ ಸಂಗಿರಾಯ ಒಡೆಯರ ಬಂಟ

೧೧. ರಾಯರಾಜಗುರುಪಿತಾಮಹ [ಹೊ]ಲೆಯ ಬಳಿಯ ಮಾಳ ಬಿಜ್ಜಣನಾಯಕನ ತುಕರಾನೂರಲು ಹುಟ್ಟಿದ ಜಕೆ

೧೨. ಯನಾಯಕನ . . . . ಬಹ . . ದಂಡನಾಯಕ ಆತನ . ರ . ಗಂಡಗ ವೀರ . ಜಾತಬಾಹ . . ಮುಖ ತಾ

ಭಾಗ

೧೩. ಲ . ದ ಕಂಭ ಕ[ಪಿ]ಲವಂ . ಸತ್ತಿಗೆ ಕಪಿತಾ . . ಡರ . . . . ಅಡಿಯರಬಳಿ ಹೆಗಡಿ ಬಳಿ ತಪ್ಪಿಸಿ ರಾಮ ಅ[ಲ]ಕ್ಷುಮ

೧೪. ಣನ ಹರಿರಿಗೆ ಖಾತಿಮಾದುವನಾಯಕರ ಗಂಡ ಯಿಸರಂಣನಾಯಕನು ವುಭಯದಳ ಮೆಚಿ ಹೊಯಿದು ಹೊಯಿಸಿ.

೧೫. ಕೊಂಡು ರಣಖಂಡಿತವಾಗಿ ಸ್ವರ್ಗವ ಸೂಱೆಗೊಂಡುದಕ್ಕೆ ಆತನ ಅಂ [ಣ]ನಾಯರೋಬರು . . ಯಹ ಬೊಂಮನಾ

೧೬. ಯಕ ಮಾಡಿಸಿದ ಕಲ್ಲು [ಸಕನ್ರುಪಕಾಲಬಾಣಗತಿ [ಲೋಕ]ಹಿಮಾಂಶುವೆನಿಪ್ಪ ಸಂಖೆಯಾಪ್ರಕಟವೆನ್ನಿ [ಪ್ಪ] ಶೋಭಕ್ರುತುವತ್ಸರ

ಭಾಗ

೧೭. ದ ಶ್ರಾವಣದಾ ತ್ರಯೋದಶಿ ವಿಕಸಿತ ಕ್ರುಷ್ಣ ಪಕ್ಷ ಬುಧವಾರದೊ . . . . ಚಂಣನಾಯಕನ[ಸು]ತ ಯಿಸರಂಣ ದಿ[ಟ] ಬಾಱೆನೆ

೧೮. ಸ್ವರ್ಗ್ಗವ ಸಱೆಗೊಂಡನುಂ | ಯಿ ಕಲ್ಲ ಮಾಡಿದಾತ ಕೇಶವ ಆಚಾರಿಯ ಮಗ ಯಿಸರಾಚಾರಿ |ರಾಮಚಾರಿಯ ಮಗ ಮಾಣಿ ಆ –

೧೯. ಚಾರಿ ಯಿ ಕಲ್ಲಿಗೆ ಮಂಗಳ ಮಹಾ ಶ್ರೀ ಶ್ರೀ ಶ್ರೀ ಶ್ರೀ ಶ್ರೀ |0|

. ಸ್ಥಳ : ಜೈನ ಬಸದಿಯ ಬಳಿ ಬಿದ್ದಿರುವ ವೀರಗಲ್ಲು – ಕಾಯ್ಕಿಣಿ, ಉತ್ತರಕನ್ನಡ ಜಿಲ್ಲೆ.

ರಾಜವಂಶರಾಜ : ಸಾಳುವ – ಕೇಶವ ವೊಡೆಯರು.

ತೇದಿ : “ಶಕ ವರ್ಷ ೧೩೪೧ ಶೋಭಕ್ರತು ಸಂವತ್ಸರದ ಸ್ರಾವಣ ಸುದ್ಧ ಅಮವಾಸೆ ಸುಕ್ರವಾರದಲೂ” ಎಂದಿದ್ದು, ೧೩೪೧ ಎಂಬುವುದು ಶೋಭಕ್ರತು ಸಂವತ್ಸರವಾಗಿರದೆ ೧೩೪೫ನೆಯ ಶಕವರ್ಷ ಶೋಭಕ್ರತು ಸಂವತ್ಸರವಾಗಿದೆ. ಅಂದರೆ ತೇದಿಯು ಕ್ರಿ.ಶ. ೧೪೨೩ ಆಗಸ್ಟ್ ೬, ಶುಕ್ರವಾರಕ್ಕೆ ಸರಿ ಹೊಂದುವುದು.

ಭಾಷೆ ಲಿಪಿ : ಕನ್ನಡ

ಪ್ರಕಟಣೆ : ಕ.ಇ. I, ೧೯೩೯ – ೪೦ ಶಾ ಸಂ.೪೨.

ಮಹಾಮಂಡಲೇಶ್ವರನೂ, ನಗಿರೆಯ ಚಕ್ರವರ್ತಿ ಹೈವರಸ ಒಡೆಯರ ಮೊಮ್ಮಗನೂ ಆದ ಕೇಶವದೇವ ಒಡೆಯರು ರಾಜ್ಯವನ್ನು ಪ್ರತಿಪಾಲಿಸುತ್ತಿರಲು, ಹಾಡುವಳ್ಳಿಯ ಸಂಗಿರಾಯ ಒಡೆಯರ ರಾಜ್ಯಕ್ಕೆ ದಂಡೆತ್ತಿ ಬಂದನು. ‘ಅಸಕೆಯ ತಳಿರೆ’ ಎಂಬ ಪ್ರವೇಶದಲ್ಲಿ ನಡೆದ ಯುದ್ಧದಲ್ಲಿ ಸಂಗಿರಾಯನ ಸೇವಕನೂ, ಚೌಡನಾಯಕನ ಮಗನೂ ಆದ ತಮ್ಮ ನಾಯಕನು ವೀರಾವೇಷದಿಂದ ಹೋರಾಡಿ ಸ್ವರ್ಗಸ್ಥನಾದನೆಂದು ಶಾಸನವು ತಿಳಿಸುತ್ತದೆ. ಆತನ ಅಳಿಯಂದಿರಾದ ಜಕ್ಕಣನಾಯಕ ತಮ್ಮ ದೇವನಾಯಕ ಆತನ ಮಗ ಮಾಬುನಾಯಕ ಮತ್ತು ತಮ್ಮ ನಾಯಕನ ಮಗನಾದ ತಮ್ಮಣನಾಯಕ ಇವರು ಮೂವರು ಆತನ ನೆನಪಿಗಾಗಿ ವೀರಗಲ್ಲನ್ನು ನಿಲ್ಲಿಸಿದ್ದನ್ನು ಶಾಸನ ದಾಖಲಿಸಿದೆ.

ಶಾಸನ ಪಾಠ
ಭಾಗ

೧. ಶ್ರೀ ಗಣಾಧಿಪತಾಯಂ ನಮ ಸ[ಖ]ವರುಷ ಸಾವಿರದ ಮೂನೂಱ ನಾ

೨. ಲ್ವತ್ತ ಒಂದನೆಯ ಶೋಭಕ್ರತು ಸಂವತ್ಸರದ ಸ್ರಾವಣ ಸುದ್ಧ ಅಮವಾಸೆ

ಭಾಗ

೩. ಸುಕ್ರವಾರದಲೂ ಶ್ರೀಮನುಮಹಾಮಂಡಳೇಸ್ವರ ಕಲಿಗಳ ಮೊಖದ ಕಯಿ ಕ

೪. ಟಕ ಸೂರಿಕಾರ ಸಿದ್ಧ ಸಿಂಹಾಸನ ಚಕ್ರವರ್ತ್ತಿ ನಗಿರೆಯ ಹೈವರಸ ಒಡೆ[ಯ*]ರ ಮೊಂ

೫. ಮ ಕೇಸವದೇವ ಒಡೇರೂ ರಾಜ್ಯದ ಪ್ರತಿಪಾಲಿಸುವಲ್ಲಿ ಹೊಸಿವರ ಸೂಲ ಕಡಿತಲೆ ಮಲ್ಲ ಹಾ

ಭಾಗ

೬. ಡುವಳಿಯ ಸಂಗಿರಾಯ ಒಡೆಯರ ರಾಜ್ಯಕ್ಕೆ [ಕೇ]ಸವದೇವ ಒಡೆಯರೂ ಹಾ

೭. ಡುವಳಿಗೆ ಹರಿದಲ್ಲಿ ಅಸಕೆಯ ತಳಿರಲೂ ಶ್ರೀಮನುಮಹಾಮಂಡಳೇಸ್ವರ ಕೇಸವದೇವ ಒಡೇ

೮. ರ ಪದದ ಕಳುವ ದಂಡಿವಳ್ಳಿಯ ಬಿರಿದು ಬಿ[ಲುಂ]ಕಕಾರ ಬೀಡಿನ ಹನುಮ ತಲೆ

ಭಾಗ

೯. ಚವಲ ಗಂಡರ ಬಾಲ ಚಉಡನಾಯಕನ ಮಗ ತಂಮನಾಯಕ ಅಸಕೆಯ ತಳಿ

೧೦. ರಲೂ ಹೊಯಿದು ಹೊಯಿಸಿಕೊಂಡು ರಣ ಖಂಡಿತವಾಗಿ ಸ್ವರ್ಗ್ಗವ ಸೂಱೆಗೊಂ

೧೧. [ಡ]ಯಿವೀರಗಲ್ಲನು ಆತನ ಅಳಿಯಂದಿರು ಸಬುತತಿಕಾರ ಜಕ್ಕಂಣನಾಯಕನ [ತಂ]

ಭಾಗ

೧೨. [ಮ] [ದೇ]ವನಾಯಕನ ಮಗ ಮಾಬುನಾಯಕ ಬೀರಾಳುವ ತಂಮನಾಯಕಮಗ ತಂಮಣಣಾಯ

೧೩. ಕ ಯಿವರು ಮೂವರು ತಂಮ[ನಾಡಿ]ನ ತಂಮನಾಯಕಂಗೆ ವೀರಗಲ್ಲ ನಿಕ್ಕಿಸಿ ಸ್ವರ್ಗ್ಗಕ್ಕೆ ಸಲ್ಲಿ

೧೪. [ಸಿದ][|*]

. ಸ್ಥಳ : ಗ್ರಾಮದಲ್ಲಿರುವ ಹಿರೇಬಸದಿಯಲ್ಲಿರುವ ಕಲ್ಲುಶಾಸನ – ಹಾಡುವಳ್ಳಿ, ಉತ್ತರಕನ್ನಡ ಜಿಲ್ಲೆ

ರಾಜವಂಶರಾಜ : ಹಾಡುವಳ್ಳಿ ಸಾಳುವರು – ಸಂಗಿರಾಯ ಒಡೆಯ

ತೇದಿ : ‘ಅಕ್ಷಿಕರಂ ಶಿಖೀಂದು ಸಕಸೌಮ್ಯ ಸಂವತ್ಸರ ಶ್ರಾವಣಂ ಸಿತಾ ಪಕ್ಷದ ಪಾಡ್ಯಮಂದನಿ . . . . . . . .’ ಎಂದು ಇದ್ದು ಶಕವರ್ಷ ೧೩೫೨ ಎಂದಾಗುವುದು ಮತ್ತು ಇದು ಕ್ರಿ.ಶ. ೧೪೨೯ ಜುಲೈ ೨ ಶನಿವಾರ ಸಮವಾಗುವುದು.

ಭಾಷೆ ಲಿಪಿ : ಕನ್ನಡ, ೩೧ನೇ ಸಾಲು ಸಂಸ್ಕೃತದಲ್ಲಿದೆ.

ಪ್ರಕಟಣೆ : ಕ.ಇ. I, ೧೯೩೯ – ೪೦ ಶಾ ಸಂ. ೪೯.

ಸಂಗೀತಪುರವನ್ನು ಬಹಳ ಸುಂದರವಾಗಿ ವರ್ಣಿಸುತ್ತ ಶಾಸನದಲ್ಲಿ ಸಂಗಭೂಪರಾಜನನ್ನು ಹೊಗಳಲಾಗಿದೆ. ಶಾಸನದ ಪ್ರಾರಂಭದಲ್ಲಿ ಚಂದ್ರಪ್ರಭ ಮುನಿಯ ವರ್ಣನೆಯಿದ್ದು ಆ ಮುನಿಯ ಆಶೀರ್ವಾದ ರಾಜನಿಗಿರಲಿ ಎಂದು ವರ್ಣಿಸಿದ ನಂತರ ಸಂಗೀತಪುರವನ್ನು ವರ್ಣಿಸಿ ಜಂಬೂ ದ್ವೀಪದಲ್ಲಿ ಹೆಸರುವಾಸಿಯಾದ ಪಟ್ಟಣವೆಂದು ಹೇಳಲಾಗಿದೆ.

ವೇಣುಪುರದ ಭೈರಲರಾಣಿ ಮತ್ತು ನಗಿರೆಯ ಹೈವಭೂಪನಿಗೆ ಜನಿಸಿದ ಪುತ್ರನಾದ ಸಂಗಭೂಪನು ಹಾಡುವಳ್ಳಿಯನ್ನು ಆಳುತ್ತಿರುವನು. ಈತನಿಗೆ ಹೈವ ನೃಪತಿ ಮತ್ತು ಮಂಗಮಹೀಪತಿಯೆಂಬ ಇಬ್ಬರು ಪುತ್ರರು. ಈ ರೀತಿಯಾಗಿ ಸಂಗಭೂಪಾಲನು ಸುಖ ಸಂತೋಷದಿಂದ ರಾಜ್ಯವನ್ನಾಳುತ್ತಿರಲು, ಮುನಿಕುಲ ತಿಲಕನೂ, ಜಯಸೇನ ಮುನೀಶ್ವರರ ಪ್ರಿಯಸುತನೂ ಆದ ‘ಮಾಣಿಕ್ಯಸೇನ’ ನೆಂಬುವನು ಸಲ್ಲೇಖನ ವ್ರತವನ್ನಾಚರಿಸಲು ನಿರ್ಧರಿಸಲಾಗಿ, ಆತನ ನಿರ್ಧಾರವನ್ನು ರಾಜನು ಮನ್ನಿಸಿ ೩೩ ದಿನಗಳ ತನಕ ನಿರಾಹಾರನಾಗಿದ್ದು ಮೇಲೆ ಉಲ್ಲೇಖಿಸಿದ ದಿನದಂದೂ ಕೊನೆಯ ಉಸಿರನ್ನೆಳದರೆಂದು ಶಾಸನವು ತಿಳಿಸುತ್ತದೆ. ಸಂಗಭೂಪರು ಇವನ ನೆನಪಿಗಾಗಿ ಪಟ್ಟಣ ಸಮುದಾಯವನ್ನು ರಚಿಸಿ ನಿಷಿಧಿ ಶಾಸನವನ್ನು ಹಾಕಿಸಿದರೆಂದು ಶಾಸನವು ತಿಳಿಸುತ್ತದೆ. ಶಾಸನವನ್ನು ರಚಿಸಿದವರು ಕೇಶವಾಚಾರ್ಯರ ಮಗ ಯಿಸರಾಚಾರಿ.

ಶಾಸನ ಪಾಠ
ಭಾಗ

೧. ಶ್ರೀ ಮತ್ಪರಮ ಗಂಭೀರ ಸ್ಯಾದ್ವಾದಾಮೋಘಲಾಂಛನಂ ಜೀಯಾ ತ್ರೈಳೋಕ್ಯನಾಥಸ್ಯ ಶಾಸನಂ ಜಿನಶಾಸನಂ || ಶ್ರೀ . . ದಾ . ವೇಂದ್ರ . . . 0

೨. . . ನರಪತಿ ಮು[ಕು]ಟಾ ಮಾ . . . ವೀರಮ ಸೋಮಜ್ಯೋತ್ಸ್ನಾಭಿರಾ ಮೋಂನತ ಪದಕಮಲಂ ಕೋಟಸೋಮಾರ್ಕ್ಕತೇಜಂ . ಟ್ಟಂ ಪದಂ . ಸುಕ

೩. ಪ್ರಹರಣಪಟುಕಂಠೀರವ ಜ್ಞಾನರೂಪಂ ಶ್ರೀಮಂ ಚಂದ್ರಪ್ರಭಂ ಸಂಗಮಗೆ ಕೊಡುಗೆ ದೀರ್ಘ್ಘಾಯುಮಂ [ಕಾ]ಯ ಪೆ[ರ್ಚ್ಚಂ] || ಲವಣಾಂ

೪. ಭೋಧಿಯ ಮಧ್ಯದೊಳ್ಮೆಱಿವ ಜಂಬೂದ್ವೀಪದೊಳ್ದಿವಮಂ ಮುಟ್ಟುವ ಮೇರುಪರ್ವ್ವತದ ತೆಂಕಲ್ಫಾರತಕ್ಷೇತ್ರಮಂ ತವಱೊಳ್ಸೋಭಿ

೫. ಸುವಾರ್ಯ್ಯಖಂಡದೊಳಗಾ ಸ[ತ್ತ] ಉಳವುರ್ವ್ವಿತಳಂ ಪವಣಾಳೆಂಬೆನೆ ದೇಸದಿಂ ನಗರದಿಂ ದಾರಾಮದಿಂ ಗ್ರಾಮದಿಂ. [ವಿ]ಯಿಂ ದೀರ್ಘ್ಘಿಕೆಯಿ

೬. ಸರೋವರಗಳಿಂ ಪೂದೋಟದಿಂ ಚೂತದಿಂ ಕದಳೀದಾಡಿಮ ಮಾತುಳಂಗ ಪನಸಂ ಚೆಂದೆಂಗಿನಿಂ ಕಉಂಗಿನಿಂ ಮದದಿಂದಾ

೭. ರಿದಿರೆಂಬ ಮನ್ಮಥನ ವೀರಾಳಪಮಂ ವೀಱುವಾ ಮದ..ಗ ಸುಕೀರಕೋಗಿಲೆಗಳಿಂ ದೇಸಂ ಕರಂ ಸೋಭಿಕುಂ || ಅದ

೮. . [ಳ್ಮಧ್ಯ]ದೊಳೊಪ್ಪೆ ಗೋಪುರ ಲಸತ್ಪ್ರಾಕಾರ ಸೌಧಾಳಿ ಸಂಪದದಿಂ[ದೀ] ಜಿನ ಗೇಹದಿಂ ನ್ರುಪನಿವಾಸೋತ್ತುಂಗ ಹರ್ಮ್ಯಂಗಳಿಂ ಮದನಂಗಾ

೯. . ದ ವೆಸ್ಯಗೇಹ ತತಿಯಿಂ ವಾಣಿಜ್ಯರಾವಾಸದಿಂ ಪದಪಂ ಬೀರುವವೆಂದಿವೇವೊಗಳ್ವೆ ನಾಂ ಸಂಗೀತ ನಾಮಾಪುರಂ || ಯೆತಿಗ

೧೦. . ದಿಂ ಸುಕೃತ್ತಿ ನವಜಾಳಿಗಳಿಂ ಸಕಳಾತ್ಮ ಗೋರವೋಂನತಿ ಚತುರ ಪ್ರಸಸ್ತ ಪದಪ . . . ಮಿಶ್ರಮಿ . ಟಿದ್ಧ . . . ಮಾಡು

೧೧. ವಾ ಸುಕವಿ [ತ್ವ] . . ದೊಳೆಂದೊಡದೇನ ಬಂಣಿಪೆಂ ಕ್ಷಿತಿಯೊಳು ಹಾಡವಳ್ಳಿ[ಯ] ಸು[ಭ]ವ್ಯ ಜನಂಗಳದೇಂ ವಿಚಿತ್ರಮೋ ||

೧೨. ವೇಣುಪುರಾ . ಬೈರಲರಾಣಿಗೆ ನಗಿರಾಳ್ವ ಹೈವಭೂಪಗೆ ಜನಸಿದ ಕ್ಷೋಣಿಪತಿ ಸಂಗಭೂಪ ಕ್ಷೀಣಕಳಾಧರ ಸಮಾನ ಕುವಲ

೧೩. ಯ ಮಿತ್ರಂ || ಆ ಪುರಮನಾಳ್ವ ಸಂಗಮಭೂಪತಿ ಜಿನಪದಪಯೋಜರಾಜಮರಾಳಂ ರೂಪಿನೊಳನಂಗಗಧಿಕ ದಿವಾಕರ ಸುತ

೧೪. ಸದೃಶ ಸಕಲ ಬುಧಜನ[ರಿಷ್ಟಂ] || ಪರಿವೃತನಂದನಾಳಿ ವರ[ಗ್ರಾ]ಮ ನರಾಶ್ರಿತ ಮಿತ್ರ ರಾಜರಿಂ ಬಳಸಿದ ಲೀಲೆ ಸೋಭಿಸುವ ವಾಹಿನಿ ಸಂಕು

೧೫. ಳದಿಂದ ಗೋತ್ರಭೂಧರನುತಸೇವ್ಯ ಮಂಗಳಮಯಾನ್ವಿತಗಾತ್ರ ಧರಾಧರತಟೀ ಸುರಗಿರಿ ಸಂಗಮಂಗೆ ಸರಿಯೆಂದೆನಿಸಿರ್ದ್ದುದ

೧೬. [ದೇಂ] ವಿಚಿತ್ರಮೋ || ಚಾತುರ್ವರ್ಣ್ಣದೊಳತ್ಯ.0ನ ಮೆನಿಸಿರ್ದ್ದಾಹಾರ ದಾನಂಗಳಿಂ ಭೀತರ್ಗಂತಭಯಂಗಳಂ ರುಜೆಯೊಳಂ ಬೆಂದಿರ್ದ್ದ

೧೭. ಜೀವಕ್ಕೆ ಸಂತಾಪಛ್ಛೇದವೆನಿಪ್ಪ ಭೈಷಜಗಳಿಂ ಸಿದ್ಧಾಂತ ಶಾಸ್ತ್ರಂಗಳಂ ಪ್ರೀತಿಂದ[o] ಮಿಗೆ ದಾನಮಾಳ್ಪ ಸತತಂ ಶ್ರೀ ಸಂಗಭೂಪಾಲಕಂ ||

೧೮. ಸಂಗಕುಲಾಂಬರದ್ಯುಮಣಿ ಸೋಮನು ಸಂಗನ್ರುಪಾಲಪುತ್ರರುಂ ಸಿಂಗ ಪರಾಕ್ರಮ [o*] ಬುಧಜನಾವಳಿ ಕಲ್ಪಿತ ಕಲ್ಪಭೂಜರುಂ ಸ

೧೯. oಗರಭೀಮ ದಾಸರಥಿ ಮೇದಿನಿ ಗಂಡರಗಾವನೆಂಬುದೀಯಂಗಜರೂಪು ಹೈವನ್ರುಪ ಮಂಗಮಹೀಪತಿ ಯೆಂಬರಿರ್ವ್ವರು ||ವ|| ಅಂ

೨೦. ತು ಸಂಗಭೂಪಾಲಕಂ ಗುರುಜನ ಬಂಧುಜನ ಪುರಜನ ಪರಿಜನ ಗೋತ್ರ ಜನ ಪುತ್ರ ಪೌತ್ರಾದಿಗಳಿಂ ಸುಕಸಂಕಥಾ ವಿನೋದದಿಂ ಶಕಲ [ಶ್ರೀ] –

೨೧. ಯಳ್ಕೊಡಿ ರಾಜ್ಯಂಗೆಯ್ಯುತ್ತಿರ್ದ್ದರಂನೆಗಮಾಪುರದೊಳೂ || ಯಿರುತಾ ವ.ರುಂ ಮಹಾವ್ರತಗಳಂ ನಿರ್ಗ್ಗ್ರಂಥಮ

೨೨. ನಮುಂವರ ಲೋಚುಕ್ಷಿತಿಸೆಯ್ಯೆಯುಂ ಸಮಿತಿಗಳ್ಪಂಚೇಂದ್ರಿಯಾನಿಗ್ರಹಂ ಅರಿದರ್ಪ್ಪ.ತಿ ಭಕ್ತಪಲ್ಸುಲಿಯದಿರ್ಪ್ಪಂದೇಕ ಭು

೨೩. ಕ್ತಂಗಳುಂ ಬೆರಸೀ ಮಾಣಿಕಸೇನಯೋಗಿ ತಪದೊಳ್ಯಾಮೇಭಕಂಠೀರವಂ | ಯಿರುತಂ [ಚ]ಂದ್ರ ಚೆಲೇಂದ್ರಗೇಹದೊಳಗಾ ಮಾಣಿಕ್ಯ ಸೇನಾಹ್ವ

೨೪. ಯಂ ಮುರವೈರೀಸುತಭಂಜನಂ ನೆಗಳ್ದ ಪಂಚಾಚಾರಮಾವಸ್ಯಕಂ ವರಗುಪ್ತಿತ್ರಯ ಬಾಹ್ಯಮಂತರತಪಃ ಶ್ರೀಕಾಂತೆಯೆಳ್ಕೂಡಿ

೨೫. ಸುಸ್ಥಿರಚಿತ್ತಂ ದಶಧರ್ಮಯುಕ್ತದಿ ಚಿದಾನಂದಾದಿ ತತ್ಪಾತ್ಮಕಂ || ಜಯಸೇನ ಮುನೀಶ್ವರ[ಗಂ] ಪ್ರಿಯಸುತ ಮಾಣಿಕ್ಯ ಸೇನ ಮುನಿಕುಲತಿಲಕಂ

೨೬. ಬಯಸಿಯಪವರ್ಗ್ಗ ಲಕ್ಷ್ಮಿಯ ಭಯರಹಿತಂ ಬಗೆದನಿಂತು ಸಲ್ಲೇಖನೆಯಂ ||ಅಂತು ಮನದೊಳ್ನಿಶ್ಚಯಿಸಿ ಮುನಿಜನಮಂ ಸಮಸ್ತ

೨೭. . . ರತ್ನ ವಿಭೂಷಣ ಸಂಗಭೂಪನಂ ಮನಸಿಜರೂಪ ಹೈವನ್ರುಪಮಂಗಮಹೀಪತಿ . . ದಿಂದರಂ ವಿನೆಯಂ ಜನಂಗಳಂ ಮು

೨೮. ನಿಪ ತಾಂ ಕರದೆಂದನು ದೇಸಕಾಲಭೂಪರು ಗುಣ [ವ]oತರಾದೆಡೆಯ ಮಾಳ್ಪುದು ನಿರ್ವಣ ಧರ್ಮ್ಮ[ಚ]ರ್ಯ್ಯಮಂ ||ವ|| ಕದು ಕಾರಣದಿಂ

೨೯. ನಿಂಮ ಸಹಾಯದಿಂ ಸೌಖ್ಯ ಕಾರಣಮಪ್ಪ ಸಲ್ಲೇಖನೆಯ ಕೈಕೊಣ್ಢೆನೆಂಬುದವರಂತೆಂದ [ರೂ] || ಪಲಕಾಲಮುಗ್ರತಪದಿಂದಲೆದು ಮನೋ

೩೦. ಭವನ ವಿಷಯ ವಿಷದಯದಿಗಳಂ ತೊಲಗಿಸಿ ತತ್ವಜ್ಞಾನದಿ ಮಲರಹಿತ ಚರಿತ್ರನಾಗಿ ನೆಗಳ್ವುದು ಮುನಿಪಂ || ಅದಲ್ಲದೆಯುಂ || ಉಪಸರ್ಗ್ಗೇದು

೩೧. [ಷ್ಟ] ಜರಸು ರುಜಾಯಾಂ ಚ ಪ್ರತೀಕಾರೆ ಧರ್ಮಾಯ ತನುವಿಮೋಚನಮಾಹುಃ ಸಲ್ಲೇಖನಾಮಾರ್ಯ್ಯಾ || ಯೆಂಬೀ ಆಗಮೋಕ್ತಕ್ರಮಮು

೩೨. oಟಪ್ಪುದಱೆಂದೆನಾನು ಚಂಹ್ನ ನಿಮಿತ್ತಾದಿಗಳೆಲ್ಲಮಾಳ್ಪುದನುಚಿತಮೆಂದು ಸಂಗನ್ರುಪಾಲಂ ಬಿಂನವಿಸೆ ಆ ಮುನಿಪನಿಂತೆಂದಂ ||ವೃ||

೩೩. ಮಿದುಳುಂ ಮೂಳೆಯು ರಕ್ತ ಮೂಲಮಲಮುಂ ಶ್ಲೇಸ್ಮಂಗಳು ಕೀಉಮೆಂಬಿದನೆಲ್ಲಂ ನೆಱಿ ತೀವೀ ಚರ್ಮದಿನದಂ ಮುಚ್ಚಿ [ಱ್ದ] ದುರ್ಮೋಹದಿಂ

೩೪. ದದು ತಾಂ ರೂಪು ಸುಜಾತಿಪೂತವೆನಿ [ಸಿತ್ತಾನಪ್ಪ] ವಯ್ಯಯ್ಯೊ ನಂಬಿ [ದೆ]ನಾಂ ಪೇಸು ಪದಂ ಶ . . ನಕಟಾ [ಆ] ಕಟ್ಟುದಂ ಸಾಲದೇ ||

೩೫. ಕೇಳೆಲೆ ಸಂಗಮ ಭೂವರ ಘಾಳಿಯ ಸೊಡರ ಚಿರರುಚಿ ಸುರೇಶ್ವರಚಾಪಂ ಪೇಳಲಿವ ಱೆಂದ ಮಾನವ [ಬಾ]ಳವೆಯಂನ. ಕೆಡಿಸುವೆನೆ ಸದ್ಗತಿಯ

೩೬. o ||ವ|| ಯೆಂದು ಮುನಿನಾಥಂ ಪರಿಚ್ಛೇದಿಸಿ ವಚನಮಂ ಕೇಳ್ದು ಸಂಗಭೂಪಾಲಕಂ ತತ್ಸಮಯೋಚಿತ ಜಿನಾಭಿಷೇಕ ಪೂಜೆಗಳಂ ಪ್ರತಿದಿನಂ

೩೭.    ಮಾಳ್ಪಂತು ನಿಯೋಜಿಸಿ ಗುರುಗಳಂ ಬೀಳ್ಕೊಂಡು ಮನೆಗಭಿಮುಖನಾದನಿತ್ತಲೂ || ವರ ಸೌಮ್ಯಾ[ಗ್ರಿಮ] ಜೇಷ್ಟಮಾಸ ಸಿತಪಕ್ಷಾರಭ್ಯದೊ

೩೮.    ಳ್ ಶ್ರೀಜಿನೇಶ್ವರ ಪೂಜೋತ್ಸವಮಾಗಲಾ ಮುನಿವರಂ ತಾಳ್ದಿದ ಉರ್ದದಾವಾಸಮಂ ಗುರು ಮೂಲುಗಳೊಳೆಂದೊಡಾ ಮಱುದಿನಂ ಆಹಾರ ನಾಲ್ಕಾ

೩೯.    ಗಲಂತಿರುತಂ ಮೂಱುತೆಱಂಗಳಂ ಬಿಸುಟು ಪಾನ ದ್ರವ್ಯದಿಂದಿರ್ದ್ದಪಂ || ಅಂನರಸಂಗಳಿಕ್ಷುರಸಮಂಬರಪಾನವಶಾರ್ದ್ದ

೪೦.    ವಾರಿಯಂ ಸಂನುತರಂಧ್ರ ಪಂಚದಶ ಪಂನೆರಡಾಱುದಿನಂಗಳಂತರಂ ಮಂನಿಸಿ ಪಾನ್ಯ ನಾಲ್ಕೆರಡೆ ನಾಲ್ಕೆರಡೊಂದನೆ ಸೇವಿಸು

೪೧.    ತ್ತಮುತ್ಪಂನ ಸತತ್ವನಪ್ರಮದ ಮಾಣಿಕಸೇನ ಮುನೀಂದ್ರನಿರ್ದ್ದಪಂ || ಅಂತಿರ್ದ್ದು ಸಕಲ ಸಂನ್ಯಸನಮಂ ಕೊಂಡಾಗಳೂ ||ಕಂ|| ಅರಹಂ

೪೨.    ತಾದಿ ಯೆನಿಪ್ಪಾಗುರುವಂ ಚರದೇವತಾತ್ಮ ವರ ಸಾಕ್ಷಿಯೊಳು ವರಮುನಿ [ಸಕ]ಳ ನಿವೃತ್ತಿಯೊಳಿರುತಚಲಿತ ಧೈ[ರ್ಯ]ನಿರ್ದ್ದಪ(o) ನೊಂ

೪೩.    ದು ದಿನಂ || ನಿಡುಸುಯ್ಯಂ ಸುಯ್ಯದುಃೞ್ಪಂದೊಡಲನೆ ಹೊಸಿಯಂಯೇ [ಱಿ]ನೆಂದತ್ತಲಿತ್ತಲ್ಮಿಡುಕಂ ಮತ್ತಾರ್ತ್ತ. ಜಂಗಳೊಳೆ ಬೆದಬೆ

೪೪.    ದಂಬೇಯ ಬೆಸತ್ತು ಚಿತ್ತಂಗಿಡದೀ ಮಾಣಿಕ್ಯಸೇನಂ [ವನಹ] ಸಮರ [ಗೋ] ಭಾವನುಂ ಮೇರುಧೈರ್ಯ್ಯಂ ಪೊಡವೀಪಾೞ.o. ಬಂದನ ಅ

೪೫.    ನಸನದಿನ ಮೂವತ್ತ ಮೂಱಾಗಲಿರ್ದ್ದಂ ||ಪಸಿವೆನಾ ನಿಪ್ಪಸೆದೆ ತನಗೆಳ್ಳನಿತಿಲ್ಲದೆ ತನ್ನ ದೇಹಮುಂ ಕುಸಿದದೆ ನೋಡಿರೞ್ವಕಟ

೪೬. ನಸುವೆನೆ ಗಾಮೆ ಸಂದು ಚಿತ್ತದೊಳ್ಕುಸಿಯದುದಾ ಪಿಪಾಸೆಯೊಳು ಬೇಸಱು ಪುಟ್ಟದೆ ತತ್ವಭಾವನಾ ಪ್ರಸವ ಸು

೪೭. ಧಾಬ್ಧಿಯೊಳ್ಮುಳುಗಿ ಮಾಣಿಕಸೇನ ಮುನೀಂದ್ರನಿರ್ದ್ದಪಂ ||ಆ ಮುನಿನಾಥಂ ತ[o]ನವಸಾನ ಸಮಯಮನ. ದು.ಕ್ರಮ

೪೮. ದಿಂ ಪಂ[ಚ] ಪದಂಗಳಂ.ಸಿಸುತಂ ತತ್ಪಾದ ಸಂ[ದೃ]ಬ್ಧ. ಬಾಣಮುಮಬ್ಧಿದ್ವ ಯವರ್ನ್ನಯೊಳು ವಿಂತು. ತೇಜೋಗ

೪೯. ಕಾರಮುಂ [ಮಾ]ಡೆ ಸಂಯಮಿಗಳ ಶ್ರುತಾಬ್ಧಿ [ಹೋಮ] ದೊದಮಂ ಕೇಳುತ್ತ ಕುಳ್ಳಿರ್ದ್ದನ ಕ್ರಮದಿಂ ಮಾಣಿಕಸೇನ ಯೋಗಿ

೫೦. ಸುಗತಿ ಶ್ರೀಕಾಂತೆಯೊಳ್ಕಡಿದಂ ||ಅಕ್ಷಿಶರಂ ಶಿಖೀಂದು ಶಕಸೌಮ್ಯ ಸಂವತ್ಸರ ಶ್ರಾವಣಂ ಸಿತಾ ಪ

೫೧. ಕ್ಷದ ಪಾಡ್ಯಮಂದ ನಿ.ಯೊಳ್ಘಟಿಕಾತ್ರಯಂಗಳಾಗಲುಂ ರುಕ್ಷಮೆತ ಪುಷ್ಯ ಮಾಕುಲಿಷ ಯೋಗದ

೫೨. ಮಾಣಿಕಸೇನ ಯೋಗಿಯುಂ ಮೋಕ್ಷಸುಖಾಬ್ಧಿ ಸನ್ಯಸನದಿಂದಿರೆದೆಯ್ದಿದನಿಂದ್ರ ಲೋಕಮಂ ||ಆಗಳೂ|| ಪು

೫೩. ರ ಜನ . . ಜನ ಸಹಿತಂ ವರ ಸಂಗನ್ರುಪಾಲ ಬಂದನೇಕಾರ್ಚ್ಚನೆಯುಂ ಬೆರಸಿ ಮುನಿಯಂಗ ಪೂಜೆಯ ವೀರ

೫೪. ಚಿಸಿದಂ . . . . ನೆಂದೆನ ತತಿಯಿಂ ||ವ|| ತದನಂತರ ಮಾ ಸಂಗಭೂವರಂ ಗುರುಭಕ್ತಿಯಿಂ

೫೫. ದಾ ಮುನಿವರಂಗೆ ಪರೋಕ್ಷಾರ್ಥವಗಿ ಮಹಾ ಭಿಷೇಕಪೂಜೆ ಪಟ್ಟಣ ಸಮುದಾಯಮಂ ಮಾಡಿಸಿದ ನಿಷಿಧಿಗೆ ಮ

೫೬. oಗಳ ಮಹಾ ಶ್ರೀ ಶ್ರೀ ಶ್ರೀ ಯೀ ಕಲ್ಲ ಮಾಡಿದಾತ ಕೇಸವಾಚಾರ್ಯ ಮಗ ಯಿಸರಾಚಾರಿ || ವಂಶಾ . . ಶಾಶನಂ

೧೦. ಸ್ಥಳ : ಗ್ರಾಮದಲ್ಲಿರುವ ಜೈ ಬಸದಿಯಲ್ಲಿರುವ ವೀರಗಲ್ಲು – ಕಾಯ್ಕಣಿ, ಉತ್ತರಕನ್ನಡ ಜಿಲ್ಲೆ.

ರಾಜವಂಶರಾಜ : ವಿಜಯನಗರ – ದೇವರಾಯ ಮಹಾರಾಯ ಮಹಾಪ್ರಧಾನ ಲಖಂಣ ವೊಡೆಯರು

ತೇದಿ : ೧೩೫೩ನೆಯ ವಿರೋಧಿಕೃತು ಸಂವತ್ಸರದ ಚಯಿತ್ರ ಸು ೫ ಬು. ಇದು ಬುಧವಾರವಾಗಿರದೆ ಆದಿತ್ಯವಾರವಾಗುವುದು. ಆದರೆ ಶಕವರ್ಷವೆಂದು ತೆಗೆದುಕೊಂಡರೆ ಇದು ಕ್ರಿ.ಶ. ೧೪೩೦ ಮಾರ್ಚ್ ೨೯, ಬುಧವಾರಕ್ಕೆ ಸರಿ ಹೊಂದುವುದು.

ಭಾಷೆ:ಲಿಪಿ : ಕನ್ನಡ

ಪ್ರಕಟಣೆ : ಕ.ಇ. I, ೧೯೩೯ – ೪೦ ಶಾ ಸಂ. ೫೦.

ಗಣಪತಿ ಸ್ತುತಿಯಿಂದ ಪ್ರಾರಂಭವಾಗುವ ಈ ವೀರಗಲ್ಲು ಶಾಸನ ವಿಜಯನಗರದ ವೀರಪ್ರತಾಪ ದೇವರಾಯ ಮಹಾರಾಯನನ್ನು ಪರಿಚಯಿಸುತ್ತದೆ. ಆತನು ರಾಜ್ಯವನ್ನಾಳುತ್ತಿರುವಾಗ ಮಹಾಪ್ರಧಾನ ಲಖಂಣ ಒಡೆಯ ಹೊನ್ನಾವರ ರಾಜ್ಯವನ್ನಾಳುತ್ತಿರುವಾಗ ಅಸಕಳಿಯ ಭೈರವ ಒಡೆಯರು ನಗಿರೆಯ ಪುರವರಾಧೀಶ್ವರ ಸಂಗಿರಾಯ ಒಡೆಯರ ಸಖ್ಯವನ್ನು ಬಿಟ್ಟು ಹಾಡುವಳ್ಳಿಗೆ ಹೋಗಿ ಹಾಡುವಳ್ಳಿಯ ಪುರಾವರಾಧೀಶ ಸಂಗಿರಾಯರನ್ನು ಸೇರಿಕೊಂಡು ತಮ್ಮ ಪರಿವಾರದೊಂದಿಗೆ ಕಾಯ್ಕಿಣಿಗೆ ಬಂದು, ಸಮೀಪದ ಕೋಟದ ಗಡಿಯಲ್ಲಿ ನಡೆದ ಯುದ್ಧದಲ್ಲಿ ಭೈರವ ಒಡೆಯರ ಬಂಟನೂ, ರಾಮನಾಯಕಿತಿ ಮತ್ತು ಹಳಿವಾನಿಯ ರಾಯರಾಜಗುರು ಬೊಮ್ಮಣನಾಯಕನ ಪುತ್ರನಾದ ಜೋಗನಾಯಕನು ಯುದ್ಧದಲ್ಲಿ ಹೋರಾಡಿ ವೀರಸ್ವರ್ಗವನ್ನು ಹೊಂದಿರುವಂತಹ ವಿಷಯವು ಶಾಸನದಲ್ಲಿದೆ. ಜೋಗನಾಯಕನ ತಮ್ಮಂದಿರಾದ ಕೇಶವನಾಯಕ ಮತ್ತು ಮಾಳುನಾಯಕರು ಈ ವೀರಗಲ್ಲನ್ನು ನಿಲ್ಲಿಸಿದರು.

ಶಾಸನ ಪಾಠ
ಭಾಗ

೧. ಶ್ರೀಗಣಾದಿಪತೆ ನಮ ಸ್ವಸ್ತಿ ಶ್ರೀಮತು ಜಂಬೂದ್ವೀಪದ ಭರತಕ್ಷೇತ್ರದ ಅಖಂಡ ಪರಿವೇಷ್ಟಿಸಿ.

೨. ಕೊಂಡಿದೆ ಪ್ರತಿಪಂರ್ನ ಕಂರ್ಣಟದೇಸದ ಮಹಾರಾಜಾಧಾನಿ ವಿಜಯಾಗನಗರದ ಪುರವರಾಧೀಸ್ವರ ಶ್ರೀ ಮುದ್ರಾಜಾಧಿರಾ

ಭಾಗ

೩. ಜ ರಾಜಪರಮೇಸ್ವರ ಶ್ರೀವೀರಪ್ರತಾಪ ದೇವರಾಯ ಮಹಾರಾಯ ರಾಜ್ಯಾದ್ಭುದಯ ದೊಳು ಶ್ರೀಮನುಮಹಾಪ್ರಧಾನ ಲಖಂಣ

೪. ವೊಡೆಯರು ಹೊಂನಾಪುರದ ರಾಜ್ಯವ ಪ್ರತಿಪಾಲುಸುತ್ತಿದ್ದ ಸಕ ವರುಸ ೧೩೫೩ನೆಯ ವಿರೋಧಿಕ್ರುತು ಸವತ್ಸರದ ಚಯಿತ್ರ

೫. ಸು ೫ ಬು | ಶ್ರೀನ್ಮಮಹಾಮಂಡಳೇಸ್ವರ ಕಲಿಗಳ ಮುಖದ ಕೈ ಸಾಳುವ ತಟ್ಟ ವಿಭಾಡ ರಿಪುಕಟಕ ಸೂಱಿಕಾಱ ನಗಿರೆಯ ಪು –

ಭಾಗ

೬. ರವರಾಧೀಸ್ವರ ಸಂಗಿರಾಯ ವೊಡೆಯರ ಕೊಡೆ ಅ[ಸ]ಕಳಿಯ ಭಯಿರವದೇವೊಡೆಯ ತಗದು ಹಾಡವಳ್ಳಿಗೆ ಹೋಗಿ ಆ ಹಾಡವ

೭. ಳಿಯ ಪುರವರಾಧೀಸ ಸಂಗಿರಾಯ ವೊಡೆಯರು ಭಯಿರವದೇವ ವೊಡೆಯರು ತಂಮ ವೀರಪರಿವಾರ ಸಹಿತ ಕಾಯಿಕ

೮. ಣಿಗೆ ಒಂದು ಕೋಟದ ಗಡಿಯಲಿ ಕಾದಿ ಭಇರವದೆವೊಡೇರ ಬಂಟ ಸಂಗಿನಾಯಕನ ಅಂನ್ವಯ ನಗಿರನಾಲ್ವ]ತು]

ಭಾಗ

೯. [ತಾ]ಯ ಮಕಳಲಿ ಹುಟ್ಟಿದ ರಾಮಕನಾಯಕಿತಿಗೂ ಹಳಿವಾನಿಯಲಿ ಹುಟ್ಟಿದ ರಾಯರಾಜಗುರು ಬೊಂಮಣನಾಯಕರಿಗು ಜ –

೧೦. [ನಿ]ಸಿದ ಆ ಬೊಂಮಣನಾಯಕನ ಮಗ ಜೋಗನಾಯಕ ಮಾಡಿದ ಅವಸರ ವುಭೆಯ ದಳ ಹಳಚಿದಲ್ಲಿ ಆ ವುಭೆಯ

೧೧. ದಳ ಮೆಚೆ ಯಿದಿರಾಂತ ವಯಿರಿಗಳ ಕೆಡಹಿ ರಣಖಂಡಿತವಾಗಿ ವೀರಸ್ವ[ರ್ಗ್ಗ]ದ ವೃತಿ ಪಂಡದವಾತಂ ಮ

ಭಾಗ

೧೨. ಹಾಪ್ರಧಾನ ಲಖಂ[ಣ*] ವೊಡೆಯರು ನಗಿರೆಯ ಸಂಗಿರಾಯ ವೊಡೆಯರು ಸರ್ವದಳ ಸಹಿತವಾಗಿ ಹಾಡವಳ್ಳಿಗೆ

೧೩. ದಂಡನ ತಂದು ಕಾದುವಳ್ಳಿ ಕೆಱಿಯಲು ವುಭಯದಳ ಹಳಚಿದಲ್ಲಿ ಭಯಿರವದೇವ ವೊಡೆಯರ ಬಂಟ ರಾಜ –

೧೪. ಗುರು ಬೊಂಮಣನಾಯಕರ ಮಗ ಕಳುವ ಇಸರಂಣ ನಾಯಕರ ಆಂನ್ವಯ ನಗಿರಲು

ಭಾಗ

೧೫. ಹುಟ್ಟಿದ ನಗಿರ ನಾಲ್ವರ ತಾಯಮಗ ಆ ಕಳುವ ಯಿಸರಣನಾಯಕ ಮಾಡಿದ ಅವಸರ[ವುಭೆ]ಯ ದಳ ಮೆಚ್ಚಿ ಯಿದಿರಾಂ

೧೬. ತ ವಯಿರಿಗಳ ಕೆಡಹಿ ರಣಖಂಡಿತವಾಗಿ ವೀರಸ್ವರ್ಗ್ಗವಂ ಪಡೆದುದಕ್ಕೆ ಅವರ ತಂಮದಿರು ಕಳುವ ಕೇಸವನಾಯ –

೧೭. ಕ ಮಾಳುನಾಯಕನವರು ಮಾಡಿಸಿದ ವೀರಗಲ್ಲಿಗೆ ಮಂಗಳಂ ಮಹಾಶ್ರೀ ಶ್ರೀ ಶ್ರೀ ಶ್ರೀ ಶ್ರೀ ಶ್ರೀ ಶ್ರೀ ಶ್ರೀ

೧೧. ಸ್ಥಳ : ಸ್ಥಳೀಯ ಆಸ್ಪತ್ರೆಯ ಬಳಿ ಮನೆಯೊಂದರ ಆವರಣದಲ್ಲಿ ನೆಟ್ಟಿರುವ ಕಲ್ಲುಶಾಸನ – ಬೈಂದೂರು, ಉಡುಪಿ ಜಿಲ್ಲೆ

ರಾಜವಂಶರಾಜ : ಹಾಡುವಳ್ಳಿ ಸಾಳುವರು ಇಂದಗರಸ ಒಡೆಯ

ತೇದಿ : “ಶಕವರುಷ ೧೩೭೧ನೆಯ ವರ್ತ್ತಮಾನ ಶುಕ್ಲ ಸಂವತ್ಸರದ ಚೈತ್ರ ಶು. ೧೦ ಗುರುವಾರ” ಇದು ಕ್ರಿ.ಶ. ೧೪೪೯, ಏಪ್ರಿಲ್ ೩ (ಬುಧವಾರ)ಕ್ಕೆ ಸರಿಹೊಂದುತ್ತದೆ.

ಭಾಷೆ ಲಿಪಿ : ಕನ್ನಡ

ಪ್ರಕಟಣೆ

೧. ಸೌ.ಇ.ಇ. XXVII ಶಾ ಸಂ.೩೬೨

೨. ನರಸಿಂಹಮೂರ್ತಿ ಪಿ.ಎನ್., ೨೦೦೭, ಶಾ.ಸಂ.೧೪.

ಮಹಾಮಂಡಳೇಶ್ವರ ಸಂಗಿರಾಯ ಒಡೆಯರ ಕುಮಾರರಾದ ಇಂದಗರಸ ವೊಡೆಯರು ಹಾಡುವಳ್ಳಿ ರಾಜ್ಯವನ್ನಾಳುತ್ತಿರಲು ಬೈದೂರ ಪಾರ್ಶ್ವನಾಥ ತೀಥಂಕರ ವಿನಿಯೋಗಕ್ಕಾಗಿ ಗಂಗರ ನಾಡಿನೊಳಗೆ ಪೂರ್ವಕ್ಕೆ ಕಿಮ್ಮಕ್ಕಿಯ ಹರವೆಯ್ತಲಿ ೧೩ ಮೂಡೆ ಗದ್ದೆಯನ್ನು ದಾನ ಮಾಡಿದ್ದನ್ನು ಶಾಸನ ತಿಳಿಸುತ್ತದೆ. ಶಾಸನದಲ್ಲಿ ದಾನದ ಗದ್ದೆಗಳ ವಿವರವಿದೆ. ಶಾಸನದಲ್ಲಿ ಗೋಪುನಾಯಕ ಮೊದಲಾದ ನಾಯಕರ, ಬೆಮ್ಮಸೆಟಿ, ವೀರಂಣಸೆಟಿ ಮೊದಲಾದವರ ಹೆಸರಿದೆ.