ಶಾಸನ ಪಾಠ

೧. ಸ್ವಸ್ತಿಶ್ರೀ ವಿಜಯಾಭ್ಯುದಯ ಶಕವರುಷ ೧೩೭೧ನೆ ವರ್ತ್ತಮಾನ ಶುಕ್ಲ ಸಂವತ್ಸರದ ಚಇತ್ರ ಶು. ೧೦ ಗುರುವಾರದಲು ಶ್ರೀಮತು

೨. ಸ್ವಸ್ತಿಶ್ರೀ ಮನ್ಮಹಾಮಂಡಲೇಶ್ವರ ಸಂಗಿರಾಯ ಒಡೆಯರ ಕುಮಾರ ಇಂದಗರಸ ಒಡೆಯರು ಹಾಡವಳಿಯ ರಾಜ್ಯವನ್ನು ಪ್ರತಿಪಾಲಿಸುವ ಕಾ –

೩. ಲದಲೂ ಬೈದೂರ ಪಾರ್ಶ್ವನಾಥಂಗೆ ವಿನಿಯೋಗಕ್ಕೆ ಬಿಟ್ಟಿಬಾಳು ಗಂಗರ ನಾಡೊಳಗಾದ ಪೂರ್ವದ ಕಿಮ್ಮಕ್ಕಿಯ ಹರವೆಯ್ಯಲಿ ೧೩ ಮೂಡೆ ಗದ್ದೆಯನೂ

೪. ಧಾರಾಪೂರ್ವಕವಾಗಿ ಎಱದುಕೊಟ್ಟ ಬಾಳಿನ ಚತುಸ್ಸೀಮೆಯ ವಿವರ ಮೂಡಲು ಕಲ್ಲಮನೆ ಇಂದಂ ಪಡುವ ತೆಂಕ ಅರವೆಯ (ಬ)ಳಿಯಿಂದಂ ಬ –

೫. ಡಗ ಪಡುವ ನಾಡಗಡಿಯ ಆರವೆ ಇಂದಂ ಮೂಡ ಬಡಗ ಕಟ್ಟಣದ (ಹ)ಲಿಂದಂ ತೆಂಕಪಡುವ ಗೋಪುನಾಯಕನ ಆರವೆಇಂದಂ ಮೂಡೆ ಇ –

೬. ಮ್ಮಕ್ಕಿಯ ತಂಮನಾಯಕನ ಬಾಳಿಂದಂ ಪಡುವ ಬೀಜವರಿ ಗದ್ದೆ ಹಾನಿ ೫೦ || ಮೂಡತ(ಳಿ) ಇಂದಂ ಪಡುವ ತೆಂಕನಾಡ ಬಗೆಯ ಹರವ

೭. ರಿಯ ಧ(ರೆ) ಇಂದಂ ಬಡಗ ಪಡುವ ಮಸಕಲ್ಲ ಕೊಡಿಗೆಇಂದ ಮೂಡ ಗುಂಡವನಬಾಳ ಧರೆಇಂದಂ ತೆಂಕಗದ್ದೆ ಹಾನಿ ೫೦ || (ರಾಮ)ಣ

೮. ಧರೆಯ ಬಳಿಯ ವೆಂಟದೊಳಗಾಗಿ ಮೂಡಣಗಡಿ ಹೆಬ್ಬಾರ ವೃತ್ತಿಯ ಬಾಳಿಂದಂ ಪಡುವ ಬಡಗ ಗೋಪುನಾಯಕನ ಬಾಳಿಗೆ ನೀರು ಹರಿವ

೯. ತೋಡಿಂದಂ ತೆಂಕಪಡುವ ಕಮ್ಮಾಱೆ ಕೊಡಗೆ ಇಂದಂ ಮೂಡ ತೆಂಗ ಮಸಕಲ್ಲ ಗದ್ದೆಯಿಂದಂ ಬಡಗ ಪಡುವ ಗುಂಮ(ನಕಾ)ನಿಂದ ಮೂಡ

೧೦. ತೆಂಗಿನತಾರಿಂದ ಪಡುಡ(ವ) ಬಡಗ ಹತ್ತಲ ಮಕ್ಕಿ ಇಂದು ತೆಂಕ ಇಂತೀ ಚತುಸ್ಸೀಮೆಯ ಒಳಗುಳ ೧೨ ಮೂಡೆ ಗದ್ದೆ ಬಳಗುಳ ಮಕಿ

೧೧. ಮರಗಡಿ ನಿಧಿ ನಿ. ನಿಧಾನ ನಿನಿಕ್ಷೇಪವನು ಬೈದೂರ ಪಾರ್ಶ್ವನಾಥನಿಗೆ ಇಂದುಗೊಡೆಯರು ಧಾರಾಪೂರ್ವ್ವಕದಿಂ ಧಾರೆ ಎಱೆದು ಕೊಟ್ಟ ಬಾಳು

೧೨. ಹೊಲನೆಲ[1]

ಹಿಂಭಾಗ

೧೩. . . . ಬಳಿಯ ಹಳದ ಪಡುವಣ . . . . . . . . . .

೧೪. . . . . . . ಚತುಸ್ಸೀಮೆಯ ವಿವರ ಮೂಡಲು ಗಾಯತ್ರಿ

೧೫. (ದೀವಿ) ಮಠದ (ಶ್ರೀಪಾದಂ)ಗಳ ಬಾಳಿಂದ ಪಡುವಲೂ ತೆಂಕಲು . . . . . .

೧೬. . . . . .ದೇವಸ್ವದ ಗದೆಇಂದಂ ಬಡಗಲು ಪಡುವಲು ಬಂಕೇಶ್ವರ ದೇವರ ದೇ.

೧೭. (ವಸ್ವ)ಗಾಯತ್ರೀಮಠದ ಶ್ರೀಪಾದಂಗಳ ಬಾಳಿಂದ ಮೂಡಲು ಬಡಗಲು ಗಾಯತ್ರಿ –

೧೮. ಮಠದ ಶ್ರೀಪಾದಂಗಳ ಬಾಳಿಂದಂ ತೆಂಕಲು ಇಂತೀ ಚತುಸ್ಸೀಮೆಯ ಒಳಗು

೧೯. (ಳ)ಗದೆ ಹಾನೆ (೫೦) . . .ಳಿಯನ ಗದೆ ಆಯಿವತ್ತು ಹಾನೆ ಗದೆಯ ಚತುಸ್ಸೀಮೆ (ಯ)

೨೦. ವಿವರ ಮೂಡಲು ಹಲರ ಬಂಡಕಲ್ಲಿಂದ ಗ(ಡಿ) ಇಂದಂ ಪಡುವಲೂ ತೆಂಕಲು ಬ

೨೧. . . .ಆಳುವಿತ್ತಿಯ ಬಾಳಗಡಿಇಂದಂ ಬಡಗಲು ಪಡುವಲು (ನಿರಾಳ)ದೇವನ ಕೆಱಿಯ.

೨೨. . ಇಂದಂ ಮೂಡಲು ಬಡಗಲು ಹಲಗರಡಿ ಇಂದ ತೆಂಕಲು ಇಂತೀ ಚತುಸ್ಸೀಮೆಯ ಒಳಗು –

೨೩. . . ದ್ದೆ ಹಾನೆ ೫೩ ಲೆಕ್ಕದ ಮೂಡೆ ೧ ಬೆಮ್ಮಕ್ಕ ಸೆಟ್ಟಿತ್ತಿಧಂರ್ಮ್ಮಕ್ಕೆ ಬಿಟ್ಟ ಇಪ್ಪತ್ತು ಹಾನೆ ಗದ್ದೆಯ ಚ

೨೪. ತು ಸ್ಸೀಮೆಯ ವಿವರ | ಮೂಡಲು ಹಲರ ತೋಡಿನ ಗಡಿ ಇಂದಂ ಪಡುವಲು ತೆಂಕಲು ಬೆಂಮ್ಮಕ್ಕ ಸೆಟ್ಟಿತ್ತಿಯ

೨೫. ಗಡಿಇಂದಂ ಬಡಗಲು ಪಡುವಲು ಬೆಂಮ್ಮಕ್ಕ ಸೆಟ್ಟಿತ್ತಿಯ ಗಡಿಇಂದಂ ಮೂಡಲು ಬಡಗಲು . . .ರಿಯ

೨೬. . . . . ಟ್ಟ ಬಾಳಿಂದಂ ತೆಂಕಲು ಇಂತೀ ಚತುಸ್ಸೀಮೆಯ ಒಳಗುಳ ಗದ್ದೆ ಮಾನ್ಯಂ (ಮಾನೆಯ)ಸೆಟಿಯ ಗದ್ದೆ ಕೆಱೆಯ.

೨೭. . . . . . . . . . . ಗಡಿಯಿಂದಂ ಬಂಕೇಸ್ವರ ದೇವರ ಮಲ್ಲಪ್ಪಸೇನ ಬೋವರ ಗಡಿಇಂದಂ ಪಡುವಲು ತೆಂಕಲು

೨೮. ಗಾವಣಿಯ ಬಳಿಯ . . ಗಡಿಇಂದಂ ಬಡಗಲು ಪಡುವಲು ಚೆಲುವ ವೀರಂಣಸೆಟ್ಟಿಯ ಬಾಳಗಡಿಇಂದಂ

೨೯. ಮೂಡಲು ಬಡಗಲು ಹಾನೆಯ ಕೆಱೆಇಂದಂ ತೆಂಕಲು ಇಂತೀ ಚತುಸ್ಸೀಮೆಯ ಒಳಗುಳ ಕೊಡಿಗಿ . . . .

೩೦. . . . .ಬಾಗಿಲ ಗದ್ದೆ | ಹಾನಿ ೫೦ ಗದ್ದೆಯ ಚತುಸ್ಸೀಮೆಯ ವಿವರ | ಮೂಡಲು ತೊಡಿಂ ಪಡುವಲು ತೆಂಕಲು

೩೧. ಹೊಲೆಯ ಬಳಿಯ ದುಗಂಣ ನಾಯಕನ ಗಡಿಇಂದಂ ಬಡಗಲು ಪಡುವಲು ಬೆಂಮಕ್ಕ ಆಳುವ್ರಿತ್ತಿಯ ಗಡಿಇಂ

೩೨. ದ ಮೂಡಲು ಬಡಗಲು ಕೆಱೆಇಂದಂ ತೆಂಕಲು | ಇಂತೀ ಚತುಸ್ಸೀಮೆಯ ಒಳಗುಳ್ಳ ಗದ್ದೆಹಾನೆ ೫೦(||) ಬಳಿರಗದ್ದೆ ಇ –

೩೩. . . ಹಾನಗದ್ದೆಯ ಚತುಸ್ಸೀಮೆಯ ವಿವರ ಮೂಡಲು ಕೋಟಿ ತಂಮ್ಮಿಸೆಟ್ಟಿಯವರ ಮಠದ ಬಾಳಿಂದ ಪಡುವಲು | ತೆಂ –

೩೪. ಕಲು ತಂಗಿಯಕ್ಕ ಸೆಟ್ಟಿತ್ತಿಯ ಗಡಿಇಂದ ಬಡಗಲು ಪಡುವಲು ತಂಗಿಯಕ್ಕ ಸೆಟ್ಟಿತ್ತಿಯ ಗಡಿಇಂದ ಮೂಡ –

೩೫. ಬಡಗಲು ಕೋಟಿ ತಂಮಸೆಟ್ಟಿಯವರ ಮಠದ ಬಾಳಿಂದ ತೆಂಕಲು ಇಂತೀ ಚತುಸ್ಸೀಮೆಯ ಒಳಗುಳ ಗದ್ದೆಹಾನಿ ೨೦ | ಗೋ –

೩೬. ಪೀನಾಥ ದೇವರಬಾಳಿಂದ ಮೂಡಲು ಗಾವಣಿ ಬಳಿಯರ ಗೋಪಿಸೆಟ್ಟಿಯ ಬಾಳಿಂದ ಮೂಡಲು ಬಡಗಲು ಬೆಂಮ್ಮ ಕ್ಕ ಸೆ –

೩೭. ಟ್ಟಿತ್ತಿಯ ಬಾಳಿಂದ ತೆಂಕ ಬೆಂಮಕ್ಕ ಆಳುವಿತ್ತಿಯ ಬಾಳಿಂದ ಪಡುವ ಬಂಕೇಸ್ವರ ದೇವರ ದೇವಸ್ವದ ಪಡುವ ತೆಂಕ ಗೋ

೩೮. ಪೀನಾಥ ದೇವರ ದೇವಸ್ವದ ಬಡಗಲು ಇಂತೀ ಚತುಸ್ಸೀಮೆಯ ಒಳಗುಳ ಎರಡು ಗದ್ದೆ ಹಾನಿ ೫೦ | ಮೂಡಕುಂಡಲ ವ –

೩೯. ರಿಸೆಟ್ಟಿಯ ಬಾಳಿಂದ ಪಡುವ ಬೆಂಮ್ಮಕ್ಕ ಆಳುವಿತ್ತಿಯ ಬಾಳಿಂದ ಪಡುವಲು ಪುರುಸೆಟ್ಟಿಯ ಬಾಳಿಂದ ಮೂಡ ಹಿರಿಯ

೪೦. ಬೆಂಮಂಣಸೆಟ್ಟಿಯ ಬಾಳಿಂದ ತೆಂಕ ಗೋಪಿನಾಥ ದೇವರ ದೇವಸ್ಪದ ಬಾಳಿಂದ ಬಡಗಲು ಇಂತೀ ಚತುಸ್ಸೀಮೆಯ

೪೧. ಒಳಗುಳ ಗದ್ದೆ ಇಪ್ಪತ್ತು ಹಾನಿ ಕೊಱೆತೆ ಅಇವತ್ತು ಹಾನಿ ಗದ್ದೆ ಮೂಡೆ ೪ | ಮೂಡಪುರುಸೆಟ್ಟಿಯ ಬಾಳಿಂದ ಪಡುವ ಪಡುವ –

೪೨. ಲು ಜಗದಾರಾಧ್ಯರ ದೇವಸ್ಪದ ಮೂಡೆ ಬಡಗ ಜಗದಾರಾಧ್ಯರ ದೇವಸ್ಪದ ಬಾಳಿಂದ ತೆಂಕ ತೆಂಕಲು ಜಗದಾರಾ –

೪೩. ಧ್ಯರ ದೇವಸ್ಪದ ಹಿತ್ತಿಲಿಂದ ಬಡಗಲು ಇಂತೀ ಚತುಸ್ಸೀಮೆಯ ಒಳಗುಳ ಎರಡು ಗದ್ದೆಹಾನಿ ೫೦ | ಮೂಡಲು ಜಗದಾ

೪೪. ರಾಧ್ಯರ ದೇವಸ್ವದ ಪಡುವಲು ಜಗದಾರಾಧ್ಯರ ದೇವಸ್ವದ ಬಾಳಿಂದ ಮೂಡಲು ಬಡಗ ಜಗದಾ

೪೫. ರಾಧ್ಯರ ದೇವಸ್ವದ ತೆಂಕಲು ಜಗದಾರಾದ್ಯರ ದೇವಸ್ವದ ಬಡಗಲುಇಂತೀ ಚತುಸ್ಸೀಮೆಯ

೪೬. ಒಳಗುಳ ಗದ್ದೆಹಾನೆ ೩೦ | ಹಿರಿಯ ಬೆಂಮಂಣಸೆಟಿಯ ಬಾಳಿಂದ ಪಡುವಲು ಬಡಗಹ –

೪೭. ಲರ ಬಗೆಯ ಎಂಣೆಯ ಬಾಳಿಂದ ತೆಂಕಲು ಪಡುವಲು ಹಲರ ಬಗೆಯ ಎಂಣೆಯ

೪೮. ಬಾಳಿಂದ ಮೂಡಲು ಜಗದಾರಾಧ್ಯರ ದೇವಸ್ವದ ಮೂಡಲು ಗೋಪೀನಾಥ ದೇವರ ದೇವಸ್ವ –

೪೯. ದ ಬಾಳಿಂದ ಮೂಡಲು ತೆಂಕಲು ಪುರುಸೆಟ್ಟಿಯ ಬಾಳಿಂದ ಬಡಗಲು ಇಂತೀ ಚತುಸ್ಸೀಮೆಯ ಒಳಗು –

೫೦. (ಗು)ಳ ಗದೆಯ ಅಯಿವಂಡೆ ಮೂಡ ೫ (ಪರಿಚಿತ) ನಿಜ ಪರಸಮಯ ಕುಸುಮಸರ ಮಡಹರ ಕುಪಿ –

೫೧. ತಗಿರೀಶು ವಾಗೀಶಂ ವಿನುತನು(ತೀ)ಶಂ ಸಮುದಿತ ಗುಣಗಣ ಗತಮಳಸು ಚರಿತವಿದಳಿತ ಮೇಘನಿ –

೫೨. ವಾಸಂ ಗತಹಾಸಂ ನಿರ್ಮಳಭಾ(ಶಂ)ಕಬಿಜನ ನುತಿ ಶತಮುಖರಿತ ಗುರುತರ ಮಹಿಮನಿ –

೫೩. ಧಾನಂ (ಪರಿ)ಧಾನಂ ಮುತ್ತಿ ನಿಧಾನಂ ಪ್ರಣಮತ ಲಕ್ಷುಮಿ ಸೇನಪ್ರಯ ಶೃತಘನ ಮ(ಡಿ)ವಾಡಿ ಮೃಗೇಂದ್ರಂ. .

೫೪. ತ ಚಂದ್ರಂ ಚಮದ್ರಮುನೀಂದ್ರಂ || ಅಂತು ಬೈದೂರಪಾರಿಶ್ವತೀರ್ತ್ಥಂಕರರಿಗೆ ಅಮೃಪಡಿಗೆ ಬಿಟ್ಟ

೫೫. ಬಾಳು ಬೈದೂರ ಚತುಸೀಮೆಯ ಒಳಗುಳ ಗದ್ದೆ ಬಿತ್ತು ಮೂಡೆ ೧೮ ಗದ್ದೆ ೩೦ | ಶ್ರೀ ಶ್ರೀ ಶ್ರೀ ಶ್ರೀ ಶ್ರೀ ಶ್ರೀ ಶ್ರೀ

೧೨. ಸ್ಥಳ : ಗ್ರಾಮದ ಶ್ರೀ ಪಣಿಯಪ್ಪಯ್ಯನವರ ವಶದಲ್ಲಿರುವ ೧ನೆಯ ತಾಮ್ರಶಾಸನ – ಶಿರೂರು, ಉಡುಪಿ ಜಿಲ್ಲೆ

ರಾಜವಂಶರಾಜ : ಹಾಡುವಳ್ಳಿ – ಸಾಳುವ ಇಂದಗರಸ

ತೇದಿ : ಶಕವರ್ಷ ೧೩೯೯ನೆಯ ವಿಜಯ ಸಂವತ್ಸರದ ಮಾಘ ಶು. ೫ ಎಂದಿದ್ದು ಇದು ಕ್ರಿ.ಶ. ೧೪೭೮ನೆಯ ಜನವರಿ ೨೨ಕ್ಕೆ ಸರಿ ಹೊಂದುತ್ತದೆ.

ಭಾಷೆ ಲಿಪಿ : ಕನ್ನಡ

ಪ್ರಕಟಣೆ :

೧. ಶೆಟ್ಟಿ ಎಸ್.ಡಿ., ೨೦೦೨, ಅನುಬಂಧ – III.

೨. ನರಸಿಂಹಮೂರ್ತಿ ಪಿ.ಎನ್., ೨೦೦೭, ಶಾ.ಸಂ.೪೯.

ಮಹಾರಾಜಾಧಿರಾಜ ಪರಮೇಶ್ವರನೂ, ವೀರ ಪ್ರತಾಪಿಯೂ, ರಣರಂಗ ಧೀರನೂ ಪಶ್ಚಿಮ ಶರಧಿ ವೇಲಾ (ಪಶ್ಚಿಮ ಸಮುದ್ರದ ದಡ) ಹೈವ,ದ್ರಾವಿಡ,ಕೊಂಕಣ, ತುಳುವ, ಕೇರಳ, ಮಲದೇಶ ಮತ್ತು ಮಲುದೇಶ ಮುಂತಾದ ರಾಜ್ಯ ಪ್ರತಿಪಾಲಕರೂ ಆದ ಇಂದಗರಸ ರಾಯ ಒಡೆಯರು ಕೆರೆಕ್ಕೆಯ ಸಂಕಣ ಸೇನಬೋವರ ಮಗ ಶಂಭುಲ್ಲಿಂಗ ಸೇನ ಬೋವರ ಮಗ ತಿಮ್ಮಪ್ಪಸೇನ ಬೋವರಿಗೆ ಬರೆಸಿ ಕೊಟ್ಟ ತಾಮ್ರ ಶಾಸನದ ಕ್ರಮವನ್ನು ಶಾಸನದಲ್ಲಿ ತಿಳಿಸಲಾಗಿದೆ.

ಸಾಳುವ ಇಂದಗರಸನು ತಿಂಮಪ್ಪಸೇನ ಬೋವನಿಗೆ ಪರಂಪರಾಗತವಾಗಿ ಬಂದಿದ್ದೆಂದು ಹೇಳಲಾದ ಸೇನ ಬೋವಿಕೆ ಹಕ್ಕನ್ನು ಸ್ಥಿರೀಕರಿಸಿದ ವಿಚಾರ ಇಲ್ಲಿದೆ. ಸಂಕಣ ಸೇನ ಬೋವನ ಮಗನಾದ ತಿಂಮಪ್ಪ ಸೇನಬೋವನ ಐದು ತಲೆಮಾರಿನ ಹಿರಿಯರನ್ನು ಇಲ್ಲಿ ಹೆಸರಿಸಿದೆ. ಆದರೆ ಇವರುಗಳ ಸಂಬಂಧ ಏನೆಂದು ಹೇಳಿಲ್ಲ. ಐದು ನಾಡುಗಳ ಸೇನಬೋವಿಕೆ ಅನುಭವಿಸಿ ೨೩೦ ಗದ್ಯಾಣ ಹೊಂನು ಎರಡು ಹಣ ಉತ್ಪತ್ತಿಯ ಭೂಸ್ವಾಸ್ಥೆಯನ್ನು ಸರ್ವಮಾಂನ್ಯವಾಗಿ ರಾಜ ತಿಂಮಪ್ಪನಿಗೆ ಕೊಡ ಮಾಡಿದೆ.

ಇಂದಗರಸನ ಕಾಲದ್ದೆಂದು ಹೇಳಲಾಗಿದ್ದರೂ ಶಾಸನ ರಚನಾಶೈಲಿ, ಲಿಪಿ ಹಾಗೂ ವಿವರ ೧೭ – ೧೮ನೆಯ ಶತಮಾನಕ್ಕೆ ಸೇರುವಂತಿದೆ. ಇಂದಗರಸನನ್ನು “ಶ್ರೀ ಮಂನ್ಮಹಾರಾಜಾಧಿರಾಜ ರಾಜ ಪರಮೇಶ್ವ ಏತಿ ರಾಜತ್ತಿಮಿರ ಮಾರ್ತ್ತಾಂಡ ವೀರಪ್ರತಾಪ ರಣರಂಗಧೀರ” ಎಂದೂ “ಹರಹರಾಂಬಾ ಗುರುಭಕ್ತಿ ಪರಾಯಣ ಸೋಮಕುಲೋದ್ಭವ”, “ಪಶ್ಚಿಮ ಶರಧಿ ಹೈವದ್ರಾದಿತ ಕೊಂಕಣ, ತುಳುವ ಕೇರಳ ಮಲದೇಶ ಮುಂತಾದ ರಾಜ್ಯ ಪ್ರತಿಪಾಲಕ” ಎಂದು ಹೊಗಳಿದೆ. ಬೈಂದೂರು ಭಾಗದಲ್ಲಿ ದೊರೆಯುವ ಇಂದಗರಸ ಮತ್ತು ಸಾಳುವ ರಾಜರ ಯಾವ ಶಾಸನದಲ್ಲೂ ಈ ತರನಾದ ಪ್ರಶಸ್ತಿ ಇಲ್ಲ. ಇದರ ಕೊನೆ ಭಾಗ ಕೆಳದಿ ತಾಮ್ರ ಶಾಸನಗಳ ವಿವರವನ್ನು ಹೋಲುತ್ತದೆ. ಹಾಗಾಗಿ ಇದೊಂದು ಹಳೆ ಮಾಹಿತಿಗಳನ್ನು ಕಲೆಹಾಕಿ ಸಿದ್ಧಪಡಿಸಿರುವ ಶಾಸನವಾಗಿರುವ ಸಾಧ್ಯತೆ ಇದೆ.

ಶಾಸನ ಪಾಠ[2]

೧. ನಮಸ್ತುಂಗ ಶಿರಶ್ಚುಂಬಿ ಚಂದ್ರ ಚಾಮರ ಚಾರವೇ ತ್ರೈಲೋಕ್ಯ ನಗರಾರಂಭ ಮೂಲಸ್ತಂಭಾಯ ಶಂಭವೇ | ಸ್ವಸ್ತಿ ಶ್ರೀ ಜಯಾದ್ದು

೨. ದಯ ಶಾಲ್ಲಿವಾಹನ ಶಕ ವರುಷ ೧೩೬೯ನೆಯ ವಿಜಯ ಸಂವತ್ಸರದ ಮಾಘ ಶು. ೫ಲ್ಲು ಶ್ರೀ ಮಂನ್ಮಹಾರಾಜಾಧಿರಾಜ ರಾಜ ಪರಮೇಶ್ವರ ಏ

೩. ತಿರಾಜ ತ್ರಿಮಿರ ಮಾರ್ತಾಂಡ ವೀರ ಪ್ರತಾಪ ರಣರಂಗ ಧೀರ ಅತವಾಕ್ಯ ಪ್ರತಿಷ್ಲೀಷತ ಹರಹರಂಬಾ ಗುರುಭಕ್ತಿ ಪರಾಯಣ ಸೋಮಕುಲೋದ್ಭವ ರಾ –

೪. ದ ಸದ್ಧರ್ಮ ಸತ್ಕಥಾ ವಿನೋದದಿಂ ಪಶ್ಚಿಮ ಶರಧಿ ವೇಲಾ ಹೈವಾದ್ರಾದಿತ (ವಿಡ) ಕೊಂಕಣ ತುಳುವ ಕೇರಳ ಮಲದೇಶ ಮೆಲುದೇಶ ಮಂತ್ತಾದ ರಾಜ್ಜ್ಯ ಪ್ರತಿಪಾಲಕ –

೫. ರಾದ ಯಿಂದಗರಸ ರಾಯ ವಡೆಯರು ಕೆರೆಕೈಯ ಸಂಕಣ ಸೇನಬೋವರ ಮಗ ಶಂಭುಲ್ಲಿಂಗ ಸೇನಬೋವರು ತಿಂಮಪ್ಪಸೇನಬೋವರಿ

೬. ಗೆ ಬರಸಿ ಕೊಟ ಧರ್ಮ ಮೂಲ ತಾಂಮ್ರ ಶಾಸನದ ಕ್ರಮವೆಂತೆಂದರೆ ನಿಂಮ ಹಿರೆಯ ಶಂಕರ ನಾರಾಯಣ ಸೇನಬೋವರು ನಾರಣ ಸೇನಬೋ

೭. ವರು ಭೀಮ ಸೇನಬೋವರು ವೀರೈ ಸೇನಬೋವರು ಅಪೈಸೇನಬೋವರ ಹಿರಿಯರಾದಿಯಾಗಿ ಪ್ರಾಕು ಮಯೂರ ವರ್ಮರಾಯರು ಸಂ –

೮. ಗಿ ರಾಯರು ಸಾಳುವ ರಾಯರು ನಂಮ ಹಜಾಜಿ ಮಲ್ಲಿರಾಯ ವಡೆಯರು ನಾಡು ದೇಸ ಮನೆತನದವರ ಕೈಯಲ್ಲಿ ಸಹಾ ವ ಮಿಶ್ರೋ(ತ್ರೋ)ತ್ತಛಾರಾಮೂ –

೯. ಲವ ಮಾಡಿಕೊಂಡು ರಾಯರ ಆಜ್ಞಾ ಪ್ರತ್ರಿಕೆಯಂನು. . . . .ಆಚಂದ್ರರ್ಕಾವಾಗಿ ಪಾಲಿಸೆ ಸಉಳ ನಾಡು ಹಂನರನಾಡು ಬಿದೆ –

೧೦. ರನಾಡು ಬಯದೂರು ಹಳಿಗೆರೆ ಕಾಳತ್ತೊಡು ಅಐದು ಸೀಮೆ ಆ ಸುಂಕ ಆಳುರ್ತಾರ ಹೊಂನು ಭರ್ತಾನೆಲಧರ ದ ಧರ್ಮಸ್ವ ನಾಡು ಹ –

೧೧. ಲ್ಲರವಳಸೂಸು (ಹೊರ*) ಸೊಸು ಮುಂತಾದ ಸ್ತಳದ ಸೇನಬೋವಿಕೆ ದಂಡಿಗೆ ಪಾಲಕಿ ವಹಿಲೆ ಹಿಡಿಗುದರೆ ಸತ್ತಿಗೆ ಪತ್ಯ ಉಭಯ ದೀವಟಿಗೆ ಹಿ –

೧೨. ಲಾಲು ಚಉರೆಹೃದಯ ಹಾರಸುರುಮಾಲಸಗಳೆ ತಾಳಂಬೆ ನಡೆದುಡಬು ಕೊಳಉರ್ತಾಪಡೆ ಕೊಂಬು ಕರ್ಣೆ ನೆಶಾನೆ ಮುಂಡಾಸದ ಮೇಲ –

೧೩. ಣ ಕರ್ತಾರೆ ರುಮಾಲ ಹುಜರ ಮಜೂನಿಸಿಕೆ ಉಂಬಳಿ ಸರ್ವಮಾಂನ್ಯ ಕುಳಮೂಲದ ಸ್ಲಾ (ಸ್ವಾ)ಸ್ತೆ ಅಂಣಡು ಕೆಂಣಡು ಅಐ ಮಲತ್ತಿ ಬಂದು ಸರಿದು ನಿ –

೧೪. ಧಿ ನಿಕ್ಷೇಪ ಜಲಪಾಶಾಣ ಆಕ್ಷೇಣಿ ಆಗಾಮಿ ಸಿಧ ಸಾಧ್ಯಂಗಳೆಂಬ ಅಷ್ಟಭೋಗ ಸಮಂನ್ವಿರ್ತಾವಾದ ತ್ತೇಜ ಮಾನ್ಯಂಗಳಂನು ಪಡೆದು ಅ –

೧೫. ನುಶ(ಭ)ವಿಸಿ ಬರುತ್ತಿದ್ದಲ್ಲಿಇ ಪ್ರಾಕು ಹಿರೆ ಸಾಳುವ ರಾಯ ವಡೆಯರು ನೀಲು ಪರಂಪರೆ ಪೂರ್ವಿಕ ಹಲಬಿಗರು ಸಉಸ್ತಾನಕೆ ಶಕ್ತಿಗಳೆಂಬುದರಿಂ _

೧೬. ದ ತಮಗೆ ಕಾಣೂಚಿಯಾದ ಸೀಮೆ ರಾಣುವೆ ಸಯಗ್ತದ ಸ್ಥಳ ಪ್ರತಿ ಹಿರೆ ಕರಣಿಕೆಯನು ಕೊಟ್ಟು ಅದಕೆ ಉಂಬಲಿ ಸಂಬಳ ಗ್ರಹ ಸಹಸ್ರ

೧೭. ಕರ ಗ್ರಹಸ (ಹಸ್ತ|.)ಸಹಾ ಮಾಡಿ ಕೊಟು ನಡದು ಬರಲಾಗಿ ಶ್ವೇತಪುರದ್ವರು (ದವರು) ನಂದವಳಗೆತ್ತೆತು ವೋಲೈಸಿ ಬರುತಿದಲಿ ಗರ್ವಿಸಿ ಯಚೆರ ಹಿಡಿದರಿ –

೧೮. ದ ನೀಉ ನಂಮ ಪಾಗ್ದಾಪ್ಧರೆ (ಪಾದಗೋದಪರೆ) ಶಿಲಿದಾರು ಸರದಾರು ಅರಮನೆ ಕೊಮಾರರು ಕೋಲಬಳಿಯ ಬಂಟರು ರಾಣುವೆ ಪೈಕದವರು ನಿಂಮ ಐದು ಸೀಮೆ

೧೯. ನಾಡು ದೇಶ ಮನೆತನದವರು ಉತ್ತಾರದ ಮಂದಿ ಹಳಿಗೆಲಿ ಕೊಟ ಯೇಳು ಜೀವಿತದ ಕೋಟಿ ಕಲಗಿಣಿ ಕೋಟಿ ಹಂನರದ ಕೋಟಿ ಕಾರಣಿ ಹಾ –

೨೦. ಗೆ ವಡಿಯ ಕೋಟೆ ಮಂದಿ ಮುಂತ್ತಾದ ಪಉಜತ್ತೆಗದು ಕೊಂಡು ಹೋಗಿ ಆ ಸೀಮೆಗಳಂನು ಧಾಟಿಸಿ ಸಾಧಿಸಿ ನಗಾರಿ ನಿಶಾನೆ ಆನೆ ಕುದುರೆ

೨೧. ಮುಂತ್ತಾಗಿ ವಶಿಕರಿಶಿ ಕೈಸೆರೆ ಹಿಡಿದು ನಂಮ ಠಾಂಣ್ಯವ ಯ(ಯಿ)ಟು ನಗ ನಾಂಣ್ಯ ಆನೆ ಕುದುರೆ ನಗಾರಿ ನಿಶಾನೆ ಸಹ ತೆಗೆದುಕೊಂಡು ಬಂದು

೨೨. ನದರ ಮಾಡಿ ಕಾಣಿಕೆ ಕೊಳಲಾಗಿ ನಾಉ ಬಹಳ ಸಂತೋಶಬಟು ರಾಜ ಕಾರ್ಯದಲ್ಲು ಕಷ್ಟಬಟ್ಟವರಿಗೆ ನೀಉ ಹೇಳಿದರಿತ್ತಿ ಉಂಬಳಿ

೨೩. ಸಂಬಳ ಚಡಿತಲಾಳ ಹೆಚು ಉಚಿತ್ತಾ ಉಡುಗರೆ ಸಹಾ ಕೊಟು ಸಮಜಾಯಿಸಿ ನಿಮಗೆ ನಿಂಮ ಐದು ಸೀಮೆಯಲು ನಿಂಮ ಹಿರಿಯ –

೨೪. ರಾದಿಯಾಗಿ ಕುಳ ಮೂಲವಾಗ್ವಿಕದು (ವಾಗಿವಕದು)ಮೂಲವಾಗಿ ಅನುಭವಿಸಿ ಬಾಹಸ್ವಾಸ್ತ್ಯಯಿಂದ ಸರ್ವಮಾಂನ್ಯ ಸಹಿರಣ್ಯೋದಕ ದಾನಧ (ಧಾ)ರಾ

೨೫. ಪೂರ್ವಕದಿಂ ಶಿವಾರ್ಪಿತವಾಗಿ ಕೊಟ ಉಂಬಳು ಭೂಮಿ ವಿವರ ಸುಳ ನಾಡಲು ನಿಂಮ ಕ್ರುನ್ಯಪ್ಪ ಸೇನಭೋವರ ಮೂಲ ಆಳಿಕೆ ಇ –

೨೬. ದಕೆ ಬೊಮರ ಬಾಳಗುಪ್ಪಿ ಬಂದ ರೇಖೆ | ಗ ೧೦ಹ೨ ಆಳೂರ ಹಳಿಯಲು ನಿಂಮ ಮೂಲದ ಕಂಚಿಕೇರಿ ಗ್ರಾಮದಿಂದ ಗ ೩೦ || ೩ ಬಸರವ –

೨೭. ಳಿಯಿಂದ ಗ ೧೨ | ೨ನಿಂಮ ಸಂಕಂಣ ಸೇನಬೋವರ ಪಾಲ ಮೇಲಣ ಬಸುರವಳಿಕಲು ಗ. . . ಮೆಗಣ ಮರೆ ಮಾಣರು ಹೈಣಡಿಗೆ ಯಿಂದ ಸಹ

೨೮. ಗ ೩೨ ತಮಗಲ್ಲಿಂದ ಗ ೩ ಅಂತ್ತು ಗ ೮೮ || ೨ ಹಂನರನಾಡ ಬಯಲಿಗೆ ಗುದಲಣದಿಂದ ನಾರಣ ಸೇನಬೋವ ಮೂಲ ಬಾಳಿಕೆಯಿಂದಾ

ಹಿಂಭಾಗ

೨೯. ಗ ೨೪ ಹೆಬಿಗೆ ಗ್ರಾಮದಿಂದ ಗ ೧೬ ಹಂನರ ಗ್ರಾಮದ ಉಳೂರ ಬಳಿಯ ತರತೈ(ಕೈ)ಯ ನಿಂಮ ಮಹಭುಲ(ಜ)oಗಣ ಸೇನ –

೩೦. ಬೋವರು ಅರ್ಥಮೂಲ ಮಾಡಿದ ಬಗೆಲು ಗ ೧೯ | ಅಂತು ಗ ೫೯ || ಬಿದಿರನಾಡ ಕೋಡಲ ಬಾಗದಲು ನಿಂಮ ಶಿ(ತಿ)ಮಣ ಸೇನ –

೩೧. ಬೋವರ ಮೂಲ ಬಾಳಿಕೆಯಿಂದಾ ಕೆರೆಕೈಯಿಂದ ಗ೨||o ಹುಲಜೆಯಿಂದ ಗ ೩ || ನಿಂಮ ವಿಠಯ ಸೇನಬೋವರ ಮೂ

೩೨. ಲ ಭಾಗೆ ಬರಿಣಿ ಮನಿ ಮಂದಿಗೆ ಮನೆ ಕಡಕೋಡು ಕೋಡುರೆಗಟಿನ ಕಡ ಕೋಡಿಂದ ಗ ೧೨ ಅಂತ್ತು ಗ ೧೮ ಬೈಂದೂರಿನ ನಿಂಮ

೩೩. ಮೂಲದ ಜೆತನದಿ ಕಳೆ ಮಲ್ಲೆನಾಯಕನ ಅರ್ಥಮೂಲದಿಂದ ಸಹಾಗ ೨೪ ಹಳಿಗೆಲಿ (ರಿ) ಕಾಳತ್ತೊಡಲು ನಿಂಮ ಸಂಕಯ ಸೇನಬೋ –

೩೪. ವರ ಮೂಲ ಬಾಳಿನಿಂದ ನೂಗೂರ್ಲಿಂದ ಕೊಟ ರೇಖೆ ರ್ಗ ಕಂಭದ ಕೋಣೆಯಿಂದ ಗ ೩ ಕೆರೆಗಲಿಂದ ಗ ೧೬ ಹೆರಂಜಾಲು ಕಟಿನ

೩೫. ಹೊಳೆ ಸ್ವಾಸ್ತೆಯಿಂದ ಗ ೧೨ ಅಂತು ಗ ೪೦ ಅಂತ್ತೂ ಗ ೨೩ oಹ ೨ ಯಿಂನೂರ ಮೂವತ್ತು ವರಹಾಂನು ಯ(ರಡು) ಹಣವಿನ ಸ್ವಾಸ್ತೆಯನ(ನು)

೩೬. ಸರ್ವಮಾಂನ್ಯವಾಗಿ ಬಿಟ್ಟಿ ಬಿರಾಡ ಜೆಡ್ಡಿಗೆ ಅಕರಅಂನ್ಯಾಯ ಮುಂತಾಗಿ ಅವ ಉಪೋತ್ತಾರ ಯಿಲ್ಲದೆ ಸಂತಾನ

೩೭. ಪಾರಂಪರ್ರಿ‍ಯವಾಗಿ ಅನುಭವಿಸಿ ಬಾಹಂತ್ತೆ ಶಿವಾರ್ಪಿತವಾಗಿ ಉಂಬಳಿಯ ಕೊಟ್ಟಿಉ ನೀಉ ಯೀ ಉಂಬಳಿಯನೂ

೩೮. ಉಂಡು ಕೊಂಡು ಪ್ರಾಕು ನಿಂಮ ಹಿರ್ರಿ‍ಯರಾದಿಯಾಗಿ ಮೂಲ ವ್ಯಡದು ಅನುಭವಿಸಿ ಬಾಹ ಐದು ಸೀಮೆ ಆ ಸುಂಕ ಮುಂ –

೩೯. ತ್ತಾದ ಸ್ಥಳದ ಸೇನ ಬೋವಿಕೆಯಂನು ನಿಂಮ ಸಂತ್ತಾನ ಪಾರಂಪರ್ರಿ‍ಯವಾಗಿ ವಹಿರೇಖೆ ಪ್ರಹರ ಮುಂತ್ತಾದ ಲಿಖಿಉ ಬರದು

೪೦. ಸ್ಥಾನಕೋನ ಪೂರ್ವ ಮರಿಯಾದೆಯಲ್ಲಿಯೇನುಂಟಾದನು ಅನುಭವಿಸಿ ನಂಮ ಅರಮನೆಗೆ ಕಾಲಂ ಪ್ರತಿಯಲ್ಲು ಲೆಖನ

೪೧. ಬರಸಿ ಯಿದಕೆ ಸಲುವ ಉಂಬಳಿ ಸ್ಥಳ ವೆಚ ಸಂಬಳ ವರ್ತಾನೆ ಬೆಡಿಗೆ ಉಪಚರ್ಯ್ಯ ಸಹಾ ಉಂಡು ಕೊಳುತ್ತಾ ಸಮಗ್ರದ ಸ್ಥಳ

೪೨. ಪ್ರತಿ ಹಿರೇ ಕಾರನಿಕೆಯನು ಬರದು ಯಿದರ ಉಂಬಳಿ ಸಂಬಳ ಗ್ರಹಸ್ತ ಹಸ್ತಕರ ಗ್ರಹ ಸೇವಾರ್ತಾನೆ ಉಪಚರ್ಯ್ಯ ಸಹಾ ನಿಂ

೪೩. ಮ ಸಂತ್ತಾನ ಪಾರಂಪರಿಯಾಗಿ ಸ್ತಾನಮಾನ ಪೂರ್ವ ಮರಿಯಾದೆಯಲ್ಲಿ ಅನುಭವಿಸಿ ಸತ್ಯಮುಟಿ ನಂಮ ಅರಮನೆ ಕಾರ್ಯ್ಯಕೆ ಹಿರ್ರಾ‍

೪೪. ರಾಗಿ ನಡಕೊಳುತ್ತಾ ಸರ್ವಾನುಮತ್ತಾದಿಂದ ಸ್ವತಹಾ ವಡಂಬಟು ಬರಸಿ ಕೊಟ ಧರ್ಮಮೂಲತಾಂಮ್ರಶಾಸನ (|.)

೪೫. ಆದಿತ್ಯ ಚಂದ್ರಾನಿಲೋನ ಅಶ್ವ ದೇಉರ್ಭೂಮಿ ರಾಪೋ ಹ್ರುದಯಂ ಯಮಶ್ಚ ಅಹಶ್ಚ ರಾತ್ರೀಚ ಉಭೇಚ ಸಂಧ್ಯೆ ಧರ್ಮಸ್ಥ ಜಾನಾತ್ತಿನರಸ್ಯ ಉತ್ತಿಂ[3] | ದಾನ

೪೬. ಪಾಲನಯೋಮಧ್ಯೆದಾನಾ ಶ್ರೇಯಾನು ಪಾಲನಂ ದಾನಾತು ಸ್ವರ್ಗ ಮಮಾಪ್ನೋತ್ತಿ ಪಾಲನಾದ[4] ಚ್ಯುತಂ ಪದಂ | ಶ್ರೀಯಿಂದಗ –

೪೭. ರಸರಾಯ ವಡೆಯರೂ |

೧೩. ಸ್ಥಳ : ಹಾಡುವಳ್ಳಿಯ ಹಿರೇ ಬಸದಿಯಲ್ಲಿರುವ ಮನಸ್ತಂಭದಲ್ಲಿರುವ ಕಂಚಿನ ಹಲಗೆಯಲ್ಲಿ (ಪ್ರಸ್ತುತ ಈ ಶಾಸನವು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಸಂಶೋಧನಾ ಸಂಸ್ಥೆ ವಸ್ತುಸಂಗ್ರಹಾಲಯದಲ್ಲಿದೆ). – ಧಾರವಾಡ ಜಿಲ್ಲೆ.

ರಾಜವಂಶರಾಜ : ಹಾಡುವಳ್ಳಿ ಸಾಳುವ – ಸಾಳ್ವೇಂದ್ರ

ತೇದಿ : ‘ಶಾಕ ಶ್ರೀ ಕ್ರೋಧಿವರ್ಷೇ ಸನ್ಯಭಟಿ ೧೪೦೭ ಗಣಿತೇ ಜೇಷ್ಠ ಶುಕ್ಲಾನ್ಯ ಷಣ್ಠ್ಯಾಯುಷ್ಮದ್ಲೋಗಾರ್ಕ್ಕವಾರ ದ್ವಿಪಕರಣ ಶತಕ್ಷ್ಮೇ ವೃಷಾಖ್ಲೊದ್ಧಲಗ್ನೇ’ ಎಂದು ಶಕ ವರ್ಷವನ್ನು ಸಂಖ್ಯೆಯಲ್ಲಿ ಹೇಳಿದ್ದು ‘ಶ್ರೀ ಶಾಲಿವಾಹಾಭಿಧಶಕ ಕುಧರ ವ್ಯೋಮವಾರಾಶಿ ಚಂದ್ರೋರ್ಜ್ಜಿತ ಸಂಖ್ಯ ಕ್ರೋಧಿ ಸಂವತ್ಸರದ ಗುಣಭರಿತ ಜ್ಯೇಷ್ಠ ಸಂಶುದ್ಧ ಮಾಸಾಸಿತ ಷಷ್ಟ್ಯಾದಿ’ . . . ಎಂದು ಕುಧರ (ಪರ್ವತ – ೭) ವ್ಯೋಮ (ಆಕಾಶ – o), ವಾರಾಶಿ (ಸಮುದ್ರ – ೪) ಚಂದ್ರ – ೧ (ಶಕವರ್ಷ ೧೪೦೭) ಎಂದು ವಾಕ್ಯ ರೂಪದಲ್ಲಿ ಹೇಳಿದ್ದು ಇದು ಕ್ರಿ.ಶ. ೧೪೮೪ ಜೂನ್ ೩, ಆದಿತ್ಯವಾರವಾಗುತ್ತದೆ.

ಭಾಷೆ : ಕನ್ನಡ (ತೇದಿಯನ್ನು ತಿಳಿಸುವಂತಹ ಭಾಗವು ಸಂಸ್ಕೃತದಲ್ಲಿದೆ.)

ಪ್ರಕಟಣೆ : ಕ.ಇ.|, ೧೯೩೯ – ೪೦ ಶಾ ಸಂ.೬೫.

ಈ ಶಾಸನವು ಸಾಳ್ವೀಂದ್ರ ರಾಜನನ್ನು ಪ್ರಾರಂಭದಲ್ಲಿ ವರ್ಣಿಸುತ್ತಿದ್ದು, ಈತನು ಚಂದ್ರನಾಥ ಗೃಹಕ್ಕೆ ಎಂಟು ದಳಗಳ ಮಾಲಾಘಂಟೆಯನ್ನು ನೀಡಿರುವನೆಂದು, ಈ ಗೃಹದಲ್ಲಿ ಹಲವಾರು ಉತ್ಸವಗಳನ್ನೂ ನೆರವೇರಿಸಿದ್ದನೆಂದು ತಿಳಿಸುತ್ತದೆ. ಪರಮಗುರು ಪಂಡಿತಾರ್ಯ್ಯರ ಪಾದಾರಾಧಕನಾದ ಈತನು ಚಂದ್ರಪ್ರಭಾ ತೀರ್ಥಂಕರರ ಬಸದಿಯನ್ನು ಹಾಡುವಳ್ಳಿಯಲ್ಲಿ ನಿರ್ಮಿಸಿದ ಮೇಲೆ ಉಲ್ಲೇಖಿಸಿದ ದಿನದಂದು ಮಾನಸ್ತಂಭವನ್ನು ನಿರ್ಮಿಸಿದನೆಂದು ಶಾಸನವು ತಿಳಿಸುತ್ತಿದೆ.

ಶಾಸನವನ್ನು ಗೋಪಣನ ಮಗ, ಉಭಯ ಕವೀಶನೂ ಆದ ಶಂಕರಾರ್ಯ್ಯನು ರಚಿಸಿದನೆಂದಿದೆ.

ಶಾಸನಪಾಠ

೧. ಗೀಶನ[5] ಚಾರು ಬಿಂಬಮ ಸಜ್ಜನಪತಿ ತದ್ಗರ್ಬ್ಫಗೇಹದೊಳ್ ಸ್ಥಾಪಿಸಿದಂ | ಘನತರ ರತ್ನದ್ಯುತಿಕಾಂಚನರುಚಿಗಳ್ಮಿ –

೨. ಱುಗೆ ಸತ್ಪ್ರಭಾವಳಯಮನೊಲ್ದನು ಗೆಇಸಿ ಭಕ್ತಿ ಕೈಮಿಗೆ ಜಿನಪತಿಗರ್ಪ್ಪಿಸಿದನಾ ನರಾಧಿಪತಿಲಕಂ | ಅಪರಿಮಿತ –

೩. ಕನಕ ರಜತ ದಿನಪೂರ್ವ್ವತರ ಚಿತ್ರರಚನೆ ಮಿಗೆ ರಚಿಇಸಿದೀ ಉಪಕರಣಂಗಳ್ದುರಿತ ಮನಪಹರಣಂಗೆಯ್ಯದಿರವೆನಲ್ಕ –

೪. ರ್ಪ್ಪಿಸಿದಂ || ಎಂಟು ದೆಸೆಗಳನಾದಂ ವೆಂಟಣಿಸೆ ನಿನಾದಮೊಳ್ಪನೆಸಗುವ ಮಾಲಾ ಘಂಟೆಯುಮಂ ಸೊಗಿಸುವೈಗಂ _

೫. ಟೆಯಮಂ ಚಂದ್ರನಾಥ ಗೃಹಕರ್ಪ್ಪಿಸಿದಂ || ವಿತತ ಶ್ರೀ ಬಲಿ ತೂರ್ಯ್ಯ ತ್ರಿತಯದ ವೈಭವದನೂನ ನಿತ್ಯೋತ್ಸವ ಸಂತತಿ

೬. ಎಡವಱೆಯದವೊಲ್ಸುಸ್ಥಿತಿಗೆಯ್ದರ್ಪ್ಪಿಸಿದನಮಿತ ಪರಿಚಾರಕರಂ | ದರ್ಪ್ಪಕನ ವಿಪುಳತರ ಭುಜದರ್ಪ್ಪವನುಱೆ ಮುಱಿದು ಭವ್ಯ

೭. ಜನಹೃದಯದೊಳೊಲ್ದಿರ್ಪ್ಪ ಜಿನಕೋಶ ಗೃಹಕೆಂದರ್ಪ್ಪಿಸಿದನನೂನ ಭಕ್ತಿ ಇಂ ಬಹುಧನಮಂ || ಧಾರಾಪೂರ್ವಕಮನುಷ್ಟಮಿ –

೮. ತಾರಾಮಂ ಬೆರಸು ದುಷ್ಟಜನ ಕಂಟಕಮಂ ಬಾರಿಸಿ ಚಂದ್ರಜಿನಾಂಘ್ರಿಸರೋರ್ಹಕ ಪರಿಮಿತ ಭೂಮಿಯಂ ಪಡೆದಿತ್ತ –

೯. o || ಚತು‌ರ್ವ್ವಿಧದ ದಾನಮಂ ಕುಂಡಲತಿಹರ್ಷದೆ ದರ್ಶನಾದ್ಯ ಚಾತುರ್ವ್ವರ್ಣ್ನಕ್ಕತುಳಮನಂ ಸಾಳ್ವೀಂದ್ರಕ್ಷಿತಿಪಂ ಸದ್ವಿತ್ತ ವೃತ್ತಿಗಳನ –

೧೦. ರ್ಪ್ಪಿಸಿದಂ || ಇಂತೆಸವ ಧರ್ಮ್ಮಮಂ ನಿಜ ಸಂತಾನಪರಂಪರಾನುಜಾದ್ಯಭಿಮತದಿಂ ಸಂತಸದಿಂ ಜಿನಪತಿಗೋರಂತಿರೆ ಸಾಳ್ವೀಂ –

೧೧. ದ್ರನಿತ್ತನಾ ಚಂದ್ರಾರ್ಕ್ಕಂ ||ವ|| ಅಂತು ಭುವನನುಚರಿತಂ ಜಿನೇಂದ್ರ ಭಕ್ತಿ ಭರಿತಂ ಪರಮಗುರು ಪಂಡಿತಾರ್ಯ್ಯ ಚರಣಾರವಿಂದ ಮತ್ತ

೧೨. ಮಧುಕರಂ ಸಾಳುವೀಂದ್ರ ನೃಪಚಂದ್ರಂ ಚಂದ್ರಪ್ರಭತೀರ್ತ್ಥೇಶ್ವರನಂ ಪ್ರತಿಷ್ಠಾಪಿಸಿ ತದ್ಬಿಂಬಮಂ ನೆನೆದ ನೋಡಿದ ಪೂಜಿಸಿದ ಭವ್ಯರ್ಕೃ –

೧೩. ತಾರ್ತ್ಥರಪ್ಪಂಗೆಗೆಯ್ದು ಪುಣ್ಯಮನುಪಾರ್ಜ್ಜಿಸಿ ಕೀರ್ತಿಯಂ ಪೆರ್ಚಿಸಿ ದುಷ್ಟರಂ ಸಂತರ್ಜ್ಜಿಸಿ ಶಿಷ್ಟರಂ ಪರಿಪಾಲಿಸಿ ಸಾಮ್ರಾಜ್ಯ ಸಂಪತ್ತಿ ಇಂ ಭೂ –

೧೪. ತಳಮನಾಳುತ್ತಿರ್ದ್ದಂ ||ವೃ|| ಅತಿಶೋಭಾರಮ್ಯವಾಯ್ತಿ ಜಿನಗೃಹವಿದನಾಂ ನೋಳ್ಪೆವೆಂದಳ್ತಿ ಇಂ ಪೊಕ್ಕು ತದಂತಸ್ಥಾ ಇ ಚಂದ್ರಪ್ರಭಜಿನಪತಿಪಾ –

೧೫. ದಾಬ್ಜಮಂ ನಾಡೆ ಕಂಡುನ್ನತ ಹರ್ಷಂಗೆಯ್ದ ಮರ್ತ್ಯಪ್ರತತಿಯನಿಳೆಯೆಳ್ಪಾವನಂಗೆಯ್ವ ಲೋಕಸ್ತುತನಂ ಸಾಳೀಂದ್ರನಂ ಪೋಲ್ತಪುದೆ ಚರಿತ –

೧೬. ದೊಳ್ಮಿಕ್ಕಿ ನುರ್ವ್ವೀಶ ವರ್ಗ್ಗಂ ||ಜಿನಪಾದಾಂಭೋಜಮಂ ಪೂಜಿಸದೆ ಜಿನಮುನೀಂದ್ರ ಪ್ರತಾನಕ್ಕಲಂಪಿಂ ವಿನುತಾಹಾರಾದಿ ದಾನಂ ಗೊಡದೆ ಜಿನಮತಾ –

೧೭. ಶ್ಲಿಷ್ಟ ಶಿಷ್ಟರ್ಗ್ಗೆ ಸೈತೊಳ್ಪಿನ ವಾತ್ಸಲ್ಯಮಂ ತಳ್ತೆಸಗದುಳಿದ ಕೃತ್ಯಂಗಳಂ ಮಾಡೆನೆಂ ಬೊಂದನು ವೃತಂ ಸಾಳುವೀಂದ್ರ ಕ್ಷಿತಿಪತಿತಿಲಕಂಗಲ್ಲದನ್ಯರ್ಗ್ಗಿ –

೧೮. ದುಂಟೆ || ಮಸ್ತಕಧೃತ ಜಿನಚರಣಂ ಶಸ್ತಾಕೃತಿ ವಿತತಲೋಕಮಾನಸ್ತಂಭಂ ಅಸ್ತಾಹಿ ತಂನುತಂ ಮಾನಸ್ತಂಭಂ ಸಾಳುವೀಂದ್ರನೆಂದಡೆ

೧೯. ಕುಂದೇಂ || ತ್ರಿದಶೋರ್ವ್ವೀಮಧ್ಯದೊಳ್ಮೈನಿಮಿರ್ದುನಿಲೆ ಹಟದ್ದೇವಕೂಟಂ ನಭೋರಂಗದೊಳೆತ್ತಂ ಪಂಚರತ್ನಪ್ರಭೆ ನಿಲೆ ನಿಖಿಲಾಶಾಂತದೊಳ್ಚಂದ್ರ

೨೦. ಗಂಗಾನದಿವತ್ಕೀರ್ತ್ತಿಧ್ವಜಂಗಳ್ನಿಲೆ ನಿಲಿಸಲೊಡಂ ಸಾಳುವೀಂದ್ರೇಂದ್ರನೇಂ ನಿಂದುದೊ ಮಾನಸ್ತಂಭಮಕ್ಷಿದ್ಯುತಿ ವಿತತಲತಾಸ್ತಂಭಮುದ್ಭಾಸಿಕುಂಭಂ

೨೧. || ಸರಿ ಇಲ್ಲೀಸಾಳುವೀಂದ್ರಂಗಹಹ ಜಿನಮಹಾಧರ್ಮ್ಮದೊಳ್ನೋಳ್ಪಡೆತ್ತಲ್ಸರಿ ಇಲ್ಲಿಂ ತುಂಗ ಚೈತ್ಯಾಲಯದ ಸಿರಿಗಹೋ ಚಂದ್ರನಾಥಂಗದಾರುಂ ಸ –

೨೨. ರಿ ಇಲ್ಲೆಂದಷ್ಟ ದಿಗ್ಮಂಡಲವಱಿವಿನೆಗಂ ಸಾಱುವಂತಾಯ್ತು ಬಾನೊಳ್ಪರಿದುಂ ತದ್ದೇವ ಕೂಟ ಸ್ಫುಟಘಟಿತ ಹಟದ್ರತ್ನ ಘಂಟಾ ನಿನಾದಂ || ವಿ –

೨೩. ತತಶ್ರೀ ಶಾಲಿವಾಹಾಭಿಧಶಕ ಕುಧರ ವ್ಯೋಮ ವಾರಾಶಿ ಚಂದ್ರೋರ್ಜ್ಜಿತ ಸಂಖ್ಯಕ್ರೋಧಿ ಸಂವತ್ಸರ ಗುಣಭರಿತ ಜ್ಯೇಷ್ಟ ಸಂಶುದ್ಧ ಮಾಸಾಸಿ –

೨೪. ತ ಷಷ್ಟ್ಯಾದಿಪ್ರಸಂನ ಪ್ರತಿತ ಶುಭ ಪದಂಗಾಪ್ತ ಸಂಶುದ್ಧಿಯೊಳ್ವಿಶೃತ ಮಾನಸ್ತಂಭ ಸಂಸ್ಥಾಪನಮಸೆಸಗಿದಂ ಸಾಳು(ವೀ)oದ್ರ ಕ್ಷಿ –

೨೫. ತೀಂದ್ರಂ || ಶಾಕ ಶ್ರೀ ಕ್ರೋಧಿವರ್ಷೇ ಸನೃಭಟ ೧೪೦೭ ಗಣಿತೇ ಜೇಷ್ಠ ಶುಕ್ಲಾನ್ಯ ಷಣ್ಠ್ಯಾಯುಷ್ಮ ದ್ಯೋಗಾರ್ಕ್ಕವಾರ ದ್ವಿಪಕರಣ ಶತರ್ಕ್ಷೇ ವೃಷಾಖ್ಯೋ –

೨೬. ದ್ಘಲಗ್ನೇ ಸಂಗೀತಾಖ್ಯೇ ಪುರೇಸ್ಮಿನ್ ವಿಧುಜಿನಭವನೇ ನೂತನೇ ಕಾಂಸ್ಯಭಾಸ್ವತ್ ಮಾನಸ್ತಂಭ ಪ್ರತಿಷ್ಠಾಂ ಸುರುಚಿರ ಮಕರೋ –

೨೭. ತ್ಸಾಳುವೇಂದ್ರಃಕ್ಷಿತೀಂದ್ರಃ | ವರತರ್ಕ್ಕಾಲಂಕೃತಿವ್ಯಾಕರಣಪರಿಣತಂ ಶುದ್ಧ ಸಮ್ಯಕ್ತ್ವರ –

೨೮. ತ್ನಾಭರಣ ಶ್ರೀಗೋಪಣಾತ್ಮೋದ್ಭವನುಭಯಕವೀಶಂ ದ್ವಿಜಂ ಶಂಕರಾರ್ಯ್ಯಂಪರ –

೨೯. ಮಾರ್ಹಚ್ಛಾಸನಕ್ಕೊಳ್ಪೆಸವ ಕೃತಿಯನಾಚಂದ್ರ ತಾರಂಬರಂ ಸುಸ್ಥಿರಮಾಗ –

೩೦. ಲ್ಸಾಳುವೀಂದ್ರಧಿಪನಭಿಮತದಿಂ ಸಜ್ಜನರ್ಮ್ಮೆಚ್ಚೆಪೇಳ್ಧಂ | ಸ್ವಸ್ತಿ ಮಂಗಳ ಮಹಾಶ್ರೀ ಶ್ರೀ ಶ್ರೀ

೧೪. ಸ್ಥಳ : ಗ್ರಾಮ ಅಂಬಾಲಕಟ್ಟೆಯಲ್ಲಿರುವ ಕಲ್ಲುಶಾಸನ – ಮೂಡಭಟ್ಕಳ, ಉತ್ತರಕನ್ನಡ ಜಿಲ್ಲೆ

ರಾಜವಂಶರಾಜ : ಸಾಳುವ – ಚೆನ್ನರಾಜ

ತೇದಿ : ‘ಶಾಕೇ ನೇತ್ರ ಮಹೀ. . . . . ಯುಕ್ಸಾಧಾರಣೀ ವತ್ಸರೆ ಚೈತ್ರೇಮಾಸೀ ಚ ಕೃಷ್ಣ ಪಕ್ಷ ಶನಿವಾರೈಕಾದಶೀ ವಾಸರೇ. . . . ಎಂದು ಶಾಸನದಲ್ಲಿ ತೇದಿಯಿದ್ದು ಶಕವರ್ಷವು ಅಸ್ಪಷ್ಟವಾಗಿದೆ. ಗುರುರಾಯೇಂದ್ರರ ಆಳ್ವಿಕೆಯ ಸಂದರ್ಭದಲ್ಲಿ ಸಾಧಾರಣ ಸಂವತ್ಸರವು ೧೪೧೨ನೆಯ ಶಕವರ್ಷದಲ್ಲಿ ಬಂದಿದ್ದು. ಕ್ರಿ.ಶ. ೧೪೯೦ ಏಪ್ರಿಲ್ ೩೦ಕ್ಕೆ ಸಂಯಾಗುವುದು. ಆದರೆ ಈ ದಿನ ಶನಿವಾರವಾಗುವುದು.

ಭಾಷೆ ಲಿಪಿ : ಕನ್ನಡ ಸಂಸ್ಕೃತ

ಪ್ರಕಟಣೆ : ಕ.ಇ.|ಮ ೧೯೩೯ – ೪೦ ಶಾ ಸಂ. ೫೨.

ಜಿನಸ್ತುತಿಯಿಂದ ಪ್ರಾರಂಭವಾಗುವ ಈ ಶಾಸನ ಅಂತಿಮ ಭಾಗವು ಅಸ್ಪಷ್ಟವಾಗಿದೆ. ಶ್ರೀ ಗುರುರಾಯೇಂದ್ರ ವೀರಾದೇವಿಯರ ಪುತ್ರನೊ, ಹೈವರಾಜನ ಸಹೋದರನೂ ಆದ ಚೆಂನರಾಜನನ್ನು ಶಾಸನದಲ್ಲಿ ಹೊಗಳಲಾಗಿದೆ. ಶಾಸನವು ಚೆಂನರಾಜನ ಸಹೋದರನನ್ನು ದೇವರಾಯನೆಂದು, ಗಂಗ ಕುಲದ ಭಾಮಿನಿ ಈತನ ಮಡದಿಯೆಂದು ತಿಳಿಸುತ್ತದೆ. ಇಂತಹ ಪ್ರಸಿದ್ಧನಾದಂತಹ ರಾಜ ಚೆನ್ನರಾಯನು ತನ್ನ ಮರಣವು ಸನ್ನಿಹಿತವಾಯಿತೆಂದು ಮನಗಂಡು, ಸರ್ವಸಂಗವನ್ನು ತ್ಯಜಿಸಿ ಚತುಃಸಂಘದ ಸನ್ನಿಧಿಯಲ್ಲಿ ಪಂಚಪರಮೇಷ್ಠಿ ಗುಣಾನುಸ್ಮರಣದಿಂದ ಜಿನದೀಕ್ಷೆಯನ್ನು ಸ್ವೀಕರಿಸಿ, ಸಲ್ಲೇಖನ ವೃತವನ್ನಾಚರಿಸಿ ಮೇಲೆ ಹೇಳಿದಂತಹ ದಿನದಂದು ಹರಿಪುರಿ (ಸ್ವರ್ಗ)ಯನ್ನು ಸೇರಿದನೆಂಬ ವಿಷಯ ಶಾಸನದಲ್ಲಿದೆ.

[1] ಇಲ್ಲಿಂದ ಮುಂದಕ್ಕೆ ಜಾಗ ಖಾಲಿ ಇದೆ.

[2] ಇದರ ಶಾಸನ ಪಾಠವನ್ನು ಡಾ. ಎಸ್.ಡಿ. ಶೆಟ್ಟಿ ಅವರ ‘ತುಳುನಾಡಿನ ಜೈನಧರ್ಮ’ (೨೦೦೨) ಇದರ ಅನುಬಂಧ – III ಮತ್ತು ಉಪ್ಪುಂದ ಚಂದ್ರಶೇಖರ ಹೊಳ್ಳ, ಪಣಿಯಪ್ಪಯ್ಯನವರ ಯಕ್ಷಗಾನ ಕೃತಿಗಳಲ್ಲಿ ನೋಡಬಹುದು.

[3] ‘ರಸ್ಯುತ್ತಿಂ’ ಅನ್ನು ಸಾಲಿನ ಮೇಲೆ ಬರೆಯಲಾಗಿದೆ.

[4] ಅಕ್ಷರ ‘ದ’ ಅನ್ನು ಸಾಲಿನ ಕೆಳಗೆ ಬರೆಯಲಾಗಿದೆ.

[5] ಪ್ರಾರಂಭದ ಶಾಸನ ಸಿಕ್ಕಿಲ್ಲ