ಶಾಸನ ಪಾಠ

೧. ಶ್ರೀಮತ್ಪರಮ ಗಂಭೀರ ಸ್ಯಾದ್ವಾದಾಮೋಘ ಲಾಂಛನಂ |ಜೀಯಾ ತ್ರೈಲೋಕ್ಯನಾಥಸ್ಯ ಶಾಸನಂ ಜಿನಶಾಸನಂ || ಪಾ –

೨. ತು ಶ್ರೀ ಗುರುರಾಯೇಂದ್ರ ವೀರಾದೇವಿ ತನೂಭವಂ | ಚೆಂನರಾಜಂ ಮನೋಜಾಭಂ ಹೈವರಾಜಾನುಜಂ ಜಿನಃ | [ಗುರು]

೩. ರಾಯ ಧರಾಧೀಶಃ ಸಾಳುವೇಂದ್ರ ತವಾನುಜಃ ಕೀರ್ತ್ತಿ ವಿಕ್ರಮ ಸಂಪನ್ನೋ ರಾಜತೇ ಧರ್ಮ್ಮಭೂಷಣಃ | ವೀರ ಶ್ರೀವರ ಚೆಂನರಾ –

೪. ಜ ಕೃತ ಸ[ತ್*] ಚೈತ್ಯಾಲಯಸ್ಯಾಗ್ರತಃ ಪ್ರಾಸಾದಂ ಮುನಿವಾಸಯುಗ್ಮಮಹಿತಂ ಶ್ರೀಪಟ್ಟಸಾಲೋಜ್ವಲಂ | ವೀರಾಂಬಾ ಗುರುರಾ –

೫. ಯ ರಾಜಮಹಿಷೀ ರಮ್ಯಂ ತನೋತಿ ಸ್ಫುಟಂ ಲಕ್ಷ್ಮೀಮಂದಿರ ಸಂನಿಭಂ ಬುಧನುತಂ ಸದ್ಫವ್ಯ ದೃಷ್ಟಿಪ್ರಿಯಂ || ಶ್ರೀರ –

೬. ಮಣ ದೇವರಾಜ ಕ್ಷ್ಮಾರಮಣ ಹೃದ್ಯ ಸಕಲ ಸಾಹಿತ್ಯಕಲಾಸಾರಂ ಬಾಳ್ಗುಱಿ ನಿಚ್ಚಂ ವೀರ ಶ್ರೀಚರಣಯುಗಲಸರಸಿಜ ಭೃ

೭. oಗಂ || ಶ್ರೀಭೋಗಾ [ವನಿ]ಕಾವ್ಯ ಶಾಖಿನಿ ಗತೇ ಕಾವ್ಯಂ ಯಥಾ ತದ್ಭುವಾಂ ದೌಸ್ಥಿತ್ಯಂ ಸತತಂ ಚ ದೇವ ನೃಪತ ಶ್ರೀಚೆಂನರಾಜಾಗ್ರಜೇ

೮. ಸ್ವರ್ಗ್ಗಂ ಗಚ್ಫತಿ ಯೋಗಿನಾಂ ಚ ವಿದುಷಾಂ ದೌಸ್ಥಿತ್ಯಮಾನಂ ತಥಾ ಸಂಜಾತಂ ಗುರುರಾಯ ರಾಜಮಹಿಷೀ ವೀರಾಂಭಿಕಾ ನಂ –

೯. ದನೇ || ಶ್ರೀಮದಕಲಂಕ ಮುನಿಪದ ತಾಮರಸ ಮರಾಲನಮಲಗುಣ ಗಂಭೀರಂ ಭೂಮೀಶಚೆಂನರಾಜ – [ಮಾ]ತಿ ಕ್ರಾಂ –

೧೦. ತ ಪುಣ್ಯನೆಸದನಜೇಯಂ || ಭೂಮಲ್ಲಯ ವಿನುತ ವೃತ್ತ[o*] ಶ್ರಾವಕ ಜಿನಧರ್ಮ್ಮ ನಿರತ ವರಗುಣ ರತ್ನೋ. ವ ಜಿನಧರ್ಮ್ಮಾಮೃ –

೧೧. ತ ಸೇವನಪರ ಚೆಂನರಾಜ ನಿನಗೇಣಿಯುಂಟೇ || ಧರ್ಮಾರ್ತ್ಥಕಾಮ ತತ್ಪರ ನಿರ್ಮಲತರ ಜಿನಮುನೀಂದ್ರಸ. . . . ಧರ್ಮ್ಮ

೧೨. (ಶ್ರ)ವಣ ವಿಮೋಕ್ಷಣ ಶ[ರ್ಮ್ಮಾಸ್ಪದ]ಚೆಂನರಾಜ ನಿನಗಿದಿರುಂಟೇ || ಸದಾ ಕುವಲಯಾ ನಂದಿ ಚೆಂನರಾಜ. . . . || ರಾಜ. ರಿ . . .

೧೩. ಶ್ಚಂದ್ರೋವಾ ಸದ್ವಿಭೂಷಿತಃ ||[ಸ್ಸ]ತಿಗೆ ಯೇಕ ಜಿನರಾಜಪಾದಯುಗಲಾಂಬೋಜಾತ ಸದ್ಭೃಂಗ ನಂ[ಭೋ]. ರಕ್ಷೋಜ್ವ[ಲ] ಸ . ವಾರ ವನಿ –

೧೪. ತಾ ಸಂಭೋಗ ಸಂಸಕ್ತನಂ ಜಿತಮತ್ತಾರಿನ್ಯಪಾಲ ದುರ್ಗ್ಗಚಯನಂ ಶ್ರೀಚೆಂನ ರಾಜೇಂದ್ರನಂ ನುತ [ಗಂಗಾ]ನ್ವಯ ಭಾಮಿನೀ ಪತಿ ಲಸದ್ವೀರಾಂ –

೧೫. ಬಿಕಾ ಪುತ್ರನಂ || ದೇವರಾಜ ಮಹೀಪಾಲ ಚೆಂನರಾಜ ನೃಪಾಲಯೋಃ | ಸಾಳುವೇಂದ್ರಾ ನುಜೋ ಜಾತಃ ಪ್ರತಾಪನಯಭಾಸು [ರಃ]|

೧೬. ಏಕಾಂಗ ವೀರಾಗ್ರೇಸರನುಂ |[ದ್ವ್ಯಂ]ಗ ರತ್ನತ್ರಯಾ[ರಾದಕ]ನುಂ | ತ್ಯ್ರಂಗಧರ್ಮ್ಮಾರ್ತ್ಥ ಕಾಮ ತತ್ಸರನುಂ | ಚತುರಂಗ ಬಲ ವಿಭೂಷಿತನು –

೧೭. o | ಪಂಚಾಂಗ ಮಂತ್ರ ನರ್ನ್ನೀತ ರಾಜ್ಯಪರಿಕರನುಂ | ಷಡ್ಗುಣ ಪ್ರಪಂಚ ಪ್ರವೀಣನುಂ ಸಪ್ತಸಪ್ತಿಸಮಾನ ವಿಕ್ರಮನುಃ | ಅಷ್ಟದಿ [ಗ] –

೧೮. oಬರ ಕರ್ಣಕಪೋಲ ಭೂಷಣ ಕೀರ್ತ್ತಿ ಚಾಮರನುಂ | ವನ ಪದಾರ್ತ್ಥ ಪ್ರ[ಪಂ]ಚ ಪ್ರತಿಪಾದಿತಾತ್ಮತತ್ವ್ಯೆಕ ವಿಚಾರ ಪರಿನಿಷ್ಟಿತ ವಿಮಲ ಚಿತ್ತ –

೧೯. ನುಂ | ದಶವಿಧಿ ಸತ್ಯೋಪೇತ ವಚನ ಚತುರನಂ | ಏಕಾದಶ ವಿದೋಪಾಸಕ ಧರ್ಮ್ಮವ್ರತೋಪೇತ ದಿವ್ಯ ದೇಹನುಂ | ದ್ವಾದಶ

೨೦. ವಿಧ ತಪೋನುಷ್ಠಾನ ಜಿನಮುನಿ ಜಿನಾನೇಕಾಶೀರ್ವ್ವಾದ ಪರಂಪರಾ ಪರಿವರ್ದ್ಧಿತ ಸಕಲ ಸಾಮ್ರಾಜ್ಯ ಲಕ್ಷ್ಮೀನಿವಾಸನುಂ ಶ್ರೀ (o) –

೨೧. ಮನ್ಮಹಾಮಂಡಲೇಶ್ವರ ಗುರುರಾಯೊಡೆಯರ ಕುಮಾರ ಚೆಂನರಾಜ ಭೂಪಾಲಂತಂನ ಆಯುಷ್ಯಾವಸಾನ –

೨೨. ಮನಱಿದು | ಸರ್ವ್ವಸಂಗಂ ಪರಂ ತ್ಯಕ್ತ್ವಾ ಧೃತ್ವಾಜೈನೇಶ್ವರಂ ತಪಃ | ಧ್ಯಾತ್ವಾ (|) ತ್ಮಾನಂ ವಿನೇಯಾಸ್ತೇ ಸೇವ್ಯಂ [ತೇ] ನಿಯಮೇತನೆತು || ಎಂಬೀ

೨೩. ಪರಮಾಗಮ [ಶ್ರದ್ಧಾ]ನದಿಂ ಚತುಃ ಸಂಘದ ಸನ್ನಿಧಿಯಲ್ಲಿ ಪಂಚಪರಮೇಷ್ಠಿ ಗುಣಾನುಸ್ಮರಣದಿಂ [|] ಕೃತ ಜಿನದೀ –

೨೪. ಕ್ಷಾ ವಿಧಾನಂ ಕೃತ ಸಲ್ಲೇಖನಾಯುಗಲನಾಗಿ ಪ್ರಾಯೋಪಗಮನದಿಂ ವೀರ ಶಯ್ಯಾಸ್ಥಿತನಾಗಿ ಸ್ವಾತ್ಮಭಾವನಾನಿರ

೨೫. ಭಾವಿಸಿದ ವೃತ್ತಂಗಳು || ಸಚ್ಚಿದಾನಂದ ರೂಪಸ್ಯ [ಮ]ದನ್ಯಾಂ ಗಚ್ಚ(o) ತೋಮಮ | ಕಾ ನಾಮ ಚಿಂತಾ [ದಾ] –

೨೬. ರಿದ್ಯ್ರೇಗತೇ ಕಿಂ ದುಃಖಮಂಗಿನಾಂ || ದೇಹಂ ರೋಗಾಯತನಂ ದೇಹಂ ಸಂಸಾರ ದುಃಖ ದುಃಕೃತ ಬೀಜಂ ಮೋ[ಹ] –

೨೭. o ಚೇತೋದಹನಂ ಚೋಹಂ ಸಂಸ್ಕೃತಿ ವಿವರ್ತ್ತನಂ ಕಡು ಬಗೆಯಲ್ || ಲ || ಕಾರಾತ ನುರಿಯಂ ನೂನಮಾಯು [ಃ]

೨೮. ಕರ್ಮ್ಮಾಣಿ ಶೃಂಖಲಾ ತಯೋರಪಾಯ ಕಾ ಚಿಂತಾ ಚಿದಾನಂದಮಯೇ ಮಯೀ || ಮರಣ. . .

೨೯. ಯೋಗಸ್ತೇಪಿ ಚಾಂಗಾಶ್ರಿತಾಸ್ತತ್ಖಲು ಪುರುಷ ಬಹಿಸ್ಥಂ ಭೀತ ಲಕ್ಷ್ಮಾಂಕಿತತ್ವಾತ್ \ ಇತಿ ಕಿಮಪಿನ . . . .

೩೦. ತಿಹ ಪ್ರಸಂತಸ್ತನುಲಯ ಮುರುವಸ್ತ್ರತ್ಯಾಗವನ್ಮನ್ಯಾಮಾನಾಃ ||ಲ|| ಶಾಕೇನೇತ್ರಮಹೀ. . . . .

೩೧. ಯುಕ್ಸಾಧಾರಣೇವತ್ಸರೆ ಚೈತ್ರೇ ಮಾಸಿಚ ಕೃಷ್ಣಪಕ್ಷ ಶನಿವಾರೈಕಾದಶೀ ವಾಸರೇ . . .

೩೨. ಹರೌ ಹರಿಪುರೀಂ ಶ್ರೀ ಚೆಂನರಾಜೋಗಮಲ್ಲಗ್ನೇ ಶ್ರೀಜಿನಸಿದ್ಧ ಸಾಧುನಿರವ. . . . . .

೩೩. ಕಲ್ಯಾಣಾ. ಜಿ[ತಾ]ನಾಂ ಭಗವತಾಂ ಶೆಕ್ರೇಣ ಕರ್ಮ್ಮಂತಮಾದಿ. . . . . . . . . .

೩೪. . . . . ರಿ ವಂದಿತುಂ ಶ್ರೀ ನಂದೀಶ್ವರ ಮಂದಿರಾದಿ ವಿಲ. . . . . . . . . . . . .

೩೫. ಪೀತೋ ಗುರು ಮರ್ತಿ ಶ್ರೀಚೆಂನರಾಜೋದಿತಂ ||ಸ್ವರ್ಗ್ಗೇಸ. . . . . . . . . . . . . . .

೩೬. ಲ್ಪಾನೋಕರಮಂಡಿತಃ ಸುರವಧೂ ವಂಚೇ. o. . . . . . . . . . . .

೩೭. . . ಣಿಮಾ. ದ್ವಣರೇಜೆ ವೈ ಶ್ರಿಯಿಕೋದ. . . . . . . .

೩೮. . ವ ರಾಜಾರ್ಜಿತ ಕ್ರಮಾಃ | ವೀರಾದೇವೀಂ ಸದಾ ಪಾಂತು. . . . . . . . . . . . . . . . .

೩೯. ದೇವಿ ವಿನಿರ್ಮಿತಃ | ಚೆಂನರಾಜ ಪ್ರಶಸ್ತೀದ್ಧೋ ರಾಜತೇ. . . . . . . . . . . . . . .

೪೦. ದ್ಯಾನಂದಾರ್ಯ್ಯ ಬಂಮಣ | ದೇವರಾಜಾನುಜಾತ. . . . . . . . . . . . . . . . . . . . . . .

೧೫. ಸ್ಥಳ : ಶ್ರೀ ದುರ್ಗಾ ಪರಮೇಶ್ವರಿ ದೇವಾಲಯದಲ್ಲಿರುವ ತಾಮ್ರಶಾಸನ – ಉಪ್ಪುಂದ, ಉಡುಪು ಜಿಲ್ಲೆ.

ರಾಜವಂಶರಾಜ : ವಿಜಯನಗರ – ಕೃಷ್ಣರಾಯ ಮಹಾರಾಯ

ತೇದಿ : ‘ಶಕವರ್ಷ ೧೪೫೧ ಸರ್ವಧಾರಿ ಮಾರ್ಗರ್ಶಿರ ಶು. ೧೦ ಯಿಂದುವಾರ’ವೆಂದು ಇದ್ದು ಇದು ಕ್ರಿ.ಶ. ೧೫೨೮ ನವೆಂಬರ್ ೨೧, ಶನಿವಾರಕ್ಕೆ ಸರಿ ಹೊಂದುತ್ತದೆ (ಆದರೆ ಶಾಸನದಲ್ಲಿ ಸೋಮವಾರವೆಂದಿದೆ).

ಭಾಷೆ ಲಿಪಿ : ಕನ್ನಡ

ಪ್ರಕಟಣೆ :

೧.ಎ.ರಿ.ಇ.ಎ. ೧೯೭೧, ನಂ. ೧೩.

೨. ನರಸಿಂಹಮೂರ್ತಿ ಪಿ.ಎನ್., ೨೦೦೭, ಶಾ ಸಂ. ೬೫.

ಈ ಶಾಸನವು ವಿಜಯನಗರ ಶ್ರೀವೀರ ಪ್ರತಾಪ ಕೃಷ್ಣರಾಯರ ಆಳ್ವಿಕೆಗೆ ಸೇರಿದೆ. ಶಾಸನವು ದಾನ ಶಾಸನವಾಗಿದ್ದು, ಹಲವಾರು ಪರಿಮಾಣಗಳ ಮಾಹಿತಿಯನ್ನು ತಿಳಿಸುತ್ತದೆ. ಅದಲ್ಲದೆ ಮಹಾಮಂಡಳೇಶ್ವೇರನನ್ನು ಪದುಮಲ ದೇವಿಯಮ್ಮನೆಂದು ಹೇಳಿರುವುದೂ ವಿಶೇಷವಾಗಿದೆ.

ಕೃಷ್ಣರಾಯರು ವಿಜಯನಗರ ರಾಜ್ಯವನ್ನಾಳುತ್ತಿದ್ದಾಗ ಮಹಾಮಂಡಳೇಶ್ವರ ಪದುಮಲ ದೇವಿ ಹೈವೆ, ತುಳು, ಕೊಂಕಣ ಮುಂತಾದ ರಾಜ್ಯಗಳನ್ನಾಳುತ್ತಿರುವಾಗ ಮೇಲೆ ತಿಳಿಸಿದಂತಹ ದಿನದಂದು ಉಪ್ಪುಗುಂದದ ನರಸಿಂಹ ತೀರ್ಥರ ಶಿಷ್ಯರಾದ ಶ್ರೀರಾಮಚಂದ್ರ ತೀರ್ಥಶ್ರೀಪಾದರಿಗೆ ಕೊಟ್ಟ ದಾನ ದಾಖಲಿಸಿದೆ. ಹೆಗ್ಗಡ ಹಿನ ಗ್ರಾಮದಲ್ಲಿಯ ಶ್ರೀ ಶಾಂತಿಕಾ ಪರಮೇಶ್ವರಿಯ ಪೂಜಾ ವಿನಿಯೋಗಗಳಿಗಾಗಿ ಹಲವಾರು ಜನರು ಮಾಡಿದ ಅಕ್ಕಿ, ತೆಂಗಿನಕಾಯಿ ದಾನ ಮಾಡಿದ್ದನ್ನು ಶಾಸನ ದಾಖಲಿಸುತ್ತದೆ. ಮಲ್ಲಪ್ಪಸೇನನ ಮಗ ಲಕ್ಕಪ್ಪನು ಬರೆದ ಶಾಸನವೆಂದಿದೆ.

ಶಾಸನ ಪಾಠ

೧. ಸ್ವಸ್ತಿ ನಮಸ್ತುಂಗ ಶಿರಶ್ಚುಂಬಿ ಚಂದ್ರಚಾಮರ ಚಾರವೇ ತ್ರೈಲೋಕ್ಯ ನಗರಾಂಭ ಮೂಲಸ್ತಂಭಾಯ ಶಂ –

೨. ಭವೇ (||.)ಶ್ರೀಮದ್ರಾಜಾಧಿರಾಜ ರಾಜಪರಮೇಶ್ವರ ಶ್ರೀವೀರಪ್ರತಾಪ ಕ್ರುಷ್ಣರಾಯ ಮಹರಾಯರ

೩. ವಿಜೆಯಸಾಂಬ್ರಾಜ್ಯಾಭ್ಯುದಯದಲು ಶ್ರೀಮನ್ಮಹಾಮಂಡಲೇಶ್ವರರು ಪದುಮಲ ದೇವಿಯಮ್ಮನ –

೪. ವರು ಹೊನ್ನಾವರದ ರಾಜಧಾನಿಯಲುಯಿದ್ದನಗಿರು ಹೈವ ತುಳು ಕೊಂಕಣ ಮುಂತಾದ ಸಮಸ್ತರಾಜ್ಯ

೫. ಗಳನು ಪ್ರತಿಪಾಲಿಸುತಂ ಯಿದ್ದಂದಿನ ಶಕವರುಷ ೧೪೫೧ನೆಯ ಸರ್ವ್ವಧಾರಿ ಸಂವತ್ಸರದ ಸಿಹ್ವದ

೬. ಬ್ರುಹಸ್ಪತಿಯಂದಿನ ಮಾರ್ಗಶಿರ ಸು ೧೦ ಯು ಯಿಂದುವಾರದಲು ಶ್ರೀಮದಾನಂದ ವಾಳೆಪರುಷಾಧಿ

೭. ಪ್ಟಿತರಾದ ಉಪ್ಪುಗುಂದದ ನರಸಿಹ್ವತೀರ್ಥ ಶ್ರೀಪದಂಗಳ ಶಿಷ್ಯರು ರಾಮಚಂದ್ರ ತೀರ್ಥಶ್ರೀಪದಂ –

೮. ಗಳಿಗೆ ಹೆಗ್ಗಡಹಿನ ಹನ್ನೆರಡು ಭಾಗದ ಪ್ರಭು ಪ್ರಜೆಗಳು ಪೊಡವಂಟು ಸಹಿರಂಣ್ಯೋದಕ ದಾನ

೯. ಧಾರಾಪೂರ್ವಕವಾಗಿ ಕೊಟ್ಟ ಧರ್ಮ್ಮಮೂಲ ಶಾಸನದ ಕ್ರಮವೆಂತೆಂದರೆ ಹೆಗ್ಗಡಹಿನ ಗ್ರಾಮದಲ್ಲಿ[1]ಂಯ

೧೦. ಶ್ರೀಶಾಂತಿಕಾಪರಮೇಶ್ವರಿಯ ಪುರದ ಸ್ಥಲಕ್ಕೆ ಗಡಿ ಮೂಡಲು ಬೀರ್ರ‍ರ ಕೇರ್ರೆ‍ಯ ಮೂಡಣ ಕಟ್ಟಿ ಒ

೧೧. ಒಳಗಾಗಿ ಹೆದ್ದಾರಿ ಗಡಿತೆಂಕಲು ಹೊಸ ದೇವಾಲ್ಯದ ದೇವಸ್ವದ ಕಚ್ಫರಿಗಡಿ ಪಡುವಲು ಬಡಗಲು

೧೨. ಕಚ್ಫರಿಕೆ ಒಳಗಾಗಿ ನಡವ ಹೆದ್ದಾರಿ ಗಡಿ ಯಿಂತಿ ಚತಃಸ್ಸೀಮೆಯೊಳಗಣ ಸ್ಥಾನಮತ್ತಂ ದೇವಿ ದೇವಸ್ವ

೧೩. ೫೨ ಮುಡಿ ಅಕ್ಕಿ ಯೆತ್ತುವ ಕೆರಗಜನಿಯ ಸ್ಥಲಕ್ಕೆ ಗಡಿ ಮೂಡಲು ಹರಿದ ಹೊಳೆ ತೆಂಕಲು ಹೊಸ ಮ –

೧೪. ಠದ ದೇವಸ್ವದಲ್ಲಿ ಯಿಕ್ಕಿದ ಕಲ್ಲುಗಡಿ ಪಡುವಲು ಅಗಳಿಂದ ಹೊರಗೆ ೧೮ ಮುಂಡದ ನೆಲ ಒಳಗಾಗಿ

೧೫. ಯಿಕ್ಕಿದ ಕಲ್ಲುಗಡಿ ಬಡಗಲು ತೆಗೆದ ಅಗಲೂ ಯಿಕ್ಕಿದ ಕಲ್ಲುಗಡಿ ಯಿಂತಿ ಚತುಃಸೀಮೆ ಒಳಗಣ ಗದೆ

೧೬. ಗಜನಿ ಮಕ್ಕಿ ಯಕ್ಕಲು ಮನೆ ಮನೆತಾಣ ನೀರುದಾರಿ ನೆಲಹೊಲ ಮುಂತಾಗಿ ಮತ್ತಂ ಗುಡೆಯ ದೇವಿ ತೆಪ್ಪ –

೧೭. ದ ಧರ್ಮ್ಮಸ್ಥಳದ ಸರ್ವ್ವಾಂಗೋಡು ಸಹ ಕಂಡಿಕದ ಸ್ಥಳದಿಂ ಅಕ್ಕಿ ಮು ೧೮ ಹರಿಯಭಟ್ಟರ ದೇವಸ್ವ –

೧೮. ದಿಂ ಮು ೧೯ ಕಟ್ಟೆಯ ಹೊರೆಯ ಅಗ್ರದಿಂ ಅಕ್ಕಿ ಮು ೨ ಮಾಲೆಯ ಮೂ(ಮಾ)ಡು ಪವರ ಅಮ್ರುತಪಡಿ ಸ್ಥಳದ

೧೯. ವಿವರ ಗುಡೆ ಕರ್ರೆ‍ಯ ದೇವಸ್ವದ ಗಜನಿ ಬಯಲ ಕಡಹಿನ ಆರ್ಯ್ಯನ್ ಬಾರ್ಲು ಪಡುವಣ ದೇವಾಲ್ಯದ

೨೦. ಕಟ್ಟೆಯ ಹೊರಗೆ ಮೂಱುಗದ್ದೆಯಿಂತಿ ಸ್ಥಳ ಕಲ್ಲುಭಂಡಾರಿ ಸಾತು ಭಂಡಾರಿಯವರ ಅಮ್ರುತಪಡಿ

೨೧. ಸ್ಥಳದ ವಿವರ ಅವರ ಮನೆಯ ಕೆಳಗೆ ಮೇಲೆ ಅಳಕಿಯ ಸ್ಥಳ ಹಣ್ಣ ಗಜನಿ ದೇವಿಯ ನಂದಾದೀಪ್ತಿಯ ಸ್ಥ –

೨೨. ಳಕ್ಕೆ ಗಡಿ ಮೂಡಲು ತೆಂಕಲು ಪಡುವಲು ಕಟ್ಟಿದ ಕಟ್ಟು ನಡವ ಹೆದ್ದಾರಿ ಗಡಿ ಬಡಗಲು ತಮ್ಮ ಹೆಗ್ಗ –

೨೩. ಡೆ ರಾಮ ಹೆಗ್ಗಡೆಯವರ ಹಿತ್ತಿಲ ಯೇರಿ ಗಡಿ ಯಿಂತಿ ಚತುಃಸ್ಸೀಮೆಯೊಳಗಣ ತೆಂಗಿನ ಹಿತ್ತಿಲು ಮ –

೨೪. ನೆ ಮರಫಲ ಸಹ ಮತ್ತಂ ನಿಮ್ಮಡಿಗಳಿಗೆ ಮಠ ನಿವೇಶನಕ್ಕುಳ್ಳ ಭೂಮಿಗೆ ಗಡಿಮೂಡಲು ಗೋಪಾಲ ಮ –

೨೫. ಠದ ಸೀಮೆಗೆ ಕಟಿದ ಕಟ್ಟು ಬಂದ ಹಾಂಗೆ ಮಠಕೆ ಹೋಹ ದಾರಿ ಯೆತ್ತಿದ ಯೇರಿಗಡಿ ತೆಂಕಲು ಯೆತ್ತಿದ

೨೬. ಯೇರಿ ಯ್ಯಿಕ್ಕಿದ ಕಲ್ಲುಗಡಿ ಪಡುವಲು ಮಠದಿಂದ ದೇವಿ ಮನೆಗೆ ಹೋಹ ಒಳಗಾಗಿ ಯೆತ್ತಿದ ಯೇರಿ

೨೭. ಯಿಕ್ಕಿದ ಕಲ್ಲುಗಡಿ ಬಡಗಲು ಯೆತ್ತಿದ ಯೇರಿ ಕಲ್ಲುಗಡಿ ಯಿಂತಿ ಚತುಃಸ್ಸೀಮೆಯೊಳಗಣ ಮಠ ಹಿ –

೨೮. ತ್ತಿಲ ಸೀಮೆ ಭಿಕ್ಷಾಸ್ವಾಸ್ಥೆಗೆ ಬಿಟ್ಟ ಸ್ಥಳದ ವಿವರ ವಾಮನ ಕುರ್ರು‍ವಿಗೆ ಚತುರಾಧ್ಯದಲು ಹರಿದ ಹೊಳೆ

೨೯. ಯಿಂದೊಳಗಣ ಸ್ಥಳದೊಳಗೆ ಮೂರ್ರೊ‍ಂದು ಪಾಲ ವಿಂಗಡಿಸಿ ಗ್ರಾಮಸೀಮೆಗೆ ಯಿಕ್ಕಿದ ಕಲ್ಲುಗಡಿ ಕುಳ

೩೦. ಯ ಬಯಲೊಳಗೆ ಮೂಡಣ ದೇವಾಲ್ಯದ ದೇವಸ್ವದ ಗಡಿಯ ಕುಂಟು ಕಂಬಿಯ ಬಾರ್ಲು ಆಲ ಕೆರ್ರೆ‍ಗೋಳಿ –

೩೧. ಯಡಿ ಯೆರಡು ಗದ್ದೆಯಿಉ ಬಿಕ್ಷಾಸ್ವಾಸ್ಥಿಯ ಸ್ಥಳ ಯಿಂತಿ ಸಾಧನಪ್ರಮಾಣಿನಲುಳ್ಳ ಸ್ಥಳಂಗಳ ಆಲಿಕೆಯ

೩೨. ಹೇಳಿಕೆ ಶಾಂತಿ ದೇವಾಕಾರ್ಯ ಶ್ರೀಕಾರ್ಯ್ಯದ ಆಳಿಕೆ ಹೇಳಿಕೆ ಒಕ್ಕಲುಗಳ ಆಲಿಕೆ ಸರ್ವ್ವಾಧಿಪತ್ಯಸಮನ್ವಿತ ವಾ –

೩೩. ಗಿ ನಿರುದಾರಿ ನಿಧಿ ನಿಕ್ಷೇಪ ಜಲಪಾಶಾಣ ಲಕ್ಷೀಣಿ ಆಗಾಮಿನಿ ಸಿದ್ಧಸಾಧ್ಯ ಅಷ್ಟಭೋಗ ಸಮನ್ವಿತವಾಗಿ ರಾ –

೩೪. ಮಚಂದ್ರತೀರ್ಥ ಶ್ರೀಪದಂಗಳಿಗೆ ಹೆಗ್ಗಡಹಿನ ಗ್ರಾಮದವರು ಸಹಿರಂಣ್ಯೋದಕದಾನ ಧಾರಾಪೂರ್ವ್ವಕ

೩೫. ಧರ್ಮ್ಮಮೂಲವಾಗಿಯೆರ್ರೆ‍ದುಕೊಟ್ಟರು ಶ್ರೀಪದಂಗಳು ಯಿವನೆಲ್ಲವನು ಗ್ರಾಮದವರಿಂದ ಧರ್ಮ ಮೂ

೩೬. ಲವಾಗಿ ಧಾರೆಯೆಱೆಯಿಸಿಕೊಂಡವರು ಶ್ರೀಶಾಂತಿಕಾದೇವಿಯಲ್ಲಿ ನಡವ ಶ್ರೀಕಾರ್ಯ ಪಂಚಪರ್ವ್ವ ಉತ್ಸ –

೩೭. ಹಂಗಳ ನಡೆಸಿ ಬಹ ವಿವರ ಶಾಂತಿಯವರಿಗೆ ರಾತ್ರಿಯ ೧ ನೈವೇದ್ಯಕ್ಕೆ ಸಹಸಂಭ್ಯಾರ ಅಕ್ಕಿ ಮು ೧೮ ಮಾ –

೩೮. ಡುವವರಿಗೆ ಕಟ್ಟುವ ಮಾಲೆ ಹೂಗು ದೇವಕಾರ್ಯ್ಯ ನಡಸುವ ಮಣಿಹ ಹೋಯ್ಯಿ ಪಡಿದಿನ ೧ಕ್ಕೆ ಅಱು

೩೯. ಸಿದ್ಧೆ ಅಕ್ಕಿಗೆ ಉಳ್ಳಬಿಡುದೇವಸ್ವ ಹೊಱತಾಗಿ ದೇವಸ್ವದಿಂ ಸಂಭ್ಯರ ೫ ಹಾ ೧೦ನೆ ಅಕ್ಕಿ ಕಲ್ಲು ಭಂ –

೪೦. ಡಸಾರು ಭಂಡಾರಿಯವರು ದಿನಂಪ್ರತಿ ಅಮ್ರುತಪಡಿ ಹತ್ತು ಸಿದ್ದಿ ಅಕ್ಕಿಯನ್ನು ಹೊಯಿದು ನಿತ್ಯ ಶ್ರೀ

ಹಿಂಭಾಗ

೪೧. ಬಲಿಗೆ ನಡಸುವ ಪಂಚವಾದ್ಯ ತೆಗವ ಕಸ ಊಳಿಗ ಮುಂತಾದವಕೆ ಬಿಡುದೇವಸ್ವ ಹೊಱತಾಗಿ ಅಗ್ರದೇವಸ್ವ –

೪೨. ದಿಂ ಸಂಭ್ಯಾ ಅಕ್ಕಿ ಮು ೯ ಹ ೧೦ ನಿಮ್ಮಡಿಗಳಿಗೆ ಭಿಕ್ಷಾಸ್ವಾಸ್ಥಕೆ ಶಾಸನಾಂಕಿತವಾದ ಸ್ಥಳವಲ್ಲದೆ ಭಿಕ್ಷಾಸ್ವಾಸ್ಥೆಗೆ ದೇವಿ –

೪೩. ಯ ತೆಪ್ಪದಿಂ ಮು ೬ ಅರಸನ ಪರ್ಯದವರ ಸ್ಥಳದಿಂ ಅಕ್ಕಿ ಮು ೬ ಮತ್ತಂ ಮೇಲಣ ದೇವಾಲ್ಯದ ಶಾಂತಿ

೪೪. ಯವರಿಗೆ ಸಂಭ್ಯದ ಅಕ್ಕಿ ಮು ೯ ಕಲ್ಲು ಭಂಡಾರಿ ಸಾತು ಭಂಡಾರಿಯವರಿಗೆ ಅಕ್ಕಿ ಮು ೬ ಮಾ(ಲೆಮಾ)ಡುವವ –

೪೫. ರಿಗೆ ಅಕ್ಕಿ ಮು ೬ ಕಾಲಪ್ರತಿಯಲು ಯೀ ಸಂಭ್ಯಾರ ೨೧ ಮುಡಿ ಅಕ್ಕಿಯನು ಕೊಡುವುದಕ್ಕೆ ನಿಮ್ಮಡಿಗಳೆ ಕ –

೪೬. ರ್ತ್ತರು ಯೀ ಧರ್ಮದ ವೆಚ್ಚ ಕೆರೆ ಗಜನಿಯಿಂ ಅಕ್ಕಿ ಮು ೪೬ ಅರಸನ ಪರ್ಯದವರಿಂ ಅಕ್ಕಿ ಮು ೬ ದೇವಿಯ

೪೭. ತೆಪ್ಪದಿಂ ಅಕ್ಕಿ ಮು ೧೮ ಕಂಡಿರದ ಬ್ರೆಹ್ಮ ಸ್ವ ನಾರಣಭಟ್ಟರ ದೇವಸ್ವ ಅಗ್ರದೇವಸ್ವದಿಂ ಸಹ ಅಕ್ಕಿ ಮು ೫

೪೮. ಅಂತು ಸಂಭ್ಯಾರ ೭೫ ಮುಡಿ ಅಕ್ಕಿಯನು ಯೆತ್ತಿಕೊಂಬಿರಿ ಕರಗಜನಿಯವರು ಕೊಡುವ ಅಕ್ಕಿಯಲಲದೆ

೪೯. ತೆತ್ತು ಬಹ ೬೦ ಕಾಟಿಯ ಹೊಂನಿಯೊಳಗೆ ನಷ್ಟಕ್ಕೆ ಹತ್ತು ಕಾಟಿಯನುತ್ತರಿಸಿ ಮೇಲಾದಯೈವತ್ತು ಕಾಟಿ –

೫೦. ಯ ಹೊಂನಿಂಗೆ ವಗ ೧೨ಹ ವರಹನನು ಶ್ರೀಶಾಂತಿಕಾ ದೇವಿಯ ಪುರವನು ನಿಮ್ಮಡಿಗಳು ಜೀರ್ನೋದ್ಧಾರಾವ ಮಾ –

೫೧. ಡಿಸಿದ ಸಂಮಂಧ ಆ ಹೊಂನನು ಧರ್ಮ್ಮಧಾರೆಯಾಗಿ ಯೆಱದು ಬಿಟ್ಟುಕೊಟ್ಟೆಉ ಉತ್ತರಾಯಣ ಸಂಕ್ರಾಂತಿ ಅ

೫೨. ಯನದ ವೆಚ್ಚಕ್ಕ ಕಲ್ಲೆಯ ಸೆಟ್ಟಿಯ ಪ್ರಭುತ್ವದ ಮೇಲೆ ಅಱೆ ಸಿದ್ದ ಯೆಂಣೆ ಮೂವಾನೆ ಅಕ್ಕಿ ೨ ತೆಂಗಿನಕಾಯಿ ಲಿಂ –

೫೩. ಗಯ್ಯನ ಭಾಗಿಯಿಂ ಆಱುಸಿದ್ದೆ ಯೆಂಣೆ ಮೂವಾನೆ ಅಕ್ಕಿ ೨ ತೆಂಗಿನಕಾಯಿ ಯಿಷ್ಟನು ಯತ್ತಿಸಿಕೊಂಡು ನಡಸ್ತ ಬ –

೫೪. ಹಿರಿ ದೇವಿಯ ಹಬ್ಬದ ಪ್ರಾರಂಭ ಅಷ್ಟಮಿರಾತ್ರಿಯಲ್ಲಿ ಅಕ್ಕಿ ಯಱೆಸಿ ನಡಸುವ ವೆಚ್ಚಕ್ಕೆ ಮಾಡುವ ಮನೆ

೫೫. ತೆಂಗಿನ ಹಿತ್ತಿಲಿಂದ ೨೪ ಕಾಯಿ ವಿದ್ವಾಂಸರ ಪಡಿ ಭೂತಬಲಿ ಅಕ್ಕಿ ಯೆಂಣೆ ಗ್ರಾಮದವರಿಗೆ ಕೊಡುವ ವಿ –

೫೬. ಳೆಯ ಮುಂತಾದ ನಡಸಿಕೊಂಬರಿ ಪಾಧ್ನದಲು ಪರಿಸಮಾಪ್ತಿತನಕ ಭೂತಬಲಿ ರುದ್ರಪೂಜೆ ಊಳಿಗದ

೫೭. ವರವೆಚ್ಚನಾಗರಸರದವರಿಗೆ ಸಹ ಹೆಗ್ಗಡಹಿನ ಮು ೮ ಮೂ ಅಕ್ಕಿಯನು ಕೆರಗಜನಿಯಿಂದ ಯತ್ತಿ ಕೊಂಬಿರಿ

೫೮. ಬೀರ್ರ‍ರ ಮನೆಯ ಜೋಹಗಳ ಬಂಣ ಬಳಿಹ ಯೆಂಣೆ ಗಂಧ ವಸಂತದರಸಿನ ಕ್ರಯ ಮುಂತಾದವಕ್ಕೆ ಹಬ್ಬ –

೫೯. ದ ಸುಂಕಾಯದ ಬಗೆಯಿಂದ ನಡಸಿ ಕೊಂಬಿರಿ ಹಬ್ಬರ ಹುಂಣಮೆಯ ಆಯನದ ವೆಚ್ಚಕ್ಕೆ ಅಂಣಹೆ –

೬೦. ಬ್ಬಾರನ ಅರಭಾಗದ ಭೂಮಿಯಿಂ ಸೀಮೆಯ ಪುಯಕ ಬೋಳನ ಪಯಕ ಹೊಳ್ಳ ಹೆಗ್ಗಡೆಯ ಪಯಕ ಮುಂ –

೬೧. ತಾದವರಿಂ ಕಾಲ ಪ್ರತಿ ಯೆಂಣೆ ಹಾ ೩ ಅಕ್ಕಿ ಹಾ ೬ ತೆಂಗಿನಕಾಯಿ ೪ ಯಿಷ್ಟನು ಯೆತ್ತಿಸಿ ಕೊಂಬಿರಿ ಹಬ್ಬ

೬೨. ನಾಗಸರಕೆ ಕಂಡಿಕದವರಿಂ ಹೊನ್ನಬಡ್ಡಿ ೯ ಹಣ ಕಾಟಿಯನು ಯೆತ್ತಿ ಕೊಡಿಸ್ತಬಹಿರಿ ನೂಲಪರ್ವ್ವದಿಂ ಗ್ರಾಮಕೆ

೬೩. ಕಕ್ಕೆಯ ಪ್ರಸಾದವನ್ನು ಕೊಡಿಸುವಿರಿ ಮಹನವಮಿಯ ಪೂಜೆಗೆ ಪೂಜೆಗೆ ಗುಡೆ ಶಂಭುಲಿಂಗನಿಂಗನಿಂಕಲ್ಲಮಕ್ಕಿಯಿಂ ಹಾ

೬೪. ೩೦ ಅಕ್ಕಿ ಕಂಡಿಕದವರಿಂ೩ ಯೆಂಣೆಯನು ಅವರ ಮನೆತೋಟದಿಂದಲೇ ತರಿಸಿ ಕೊಂಬಿರಿ ನಿಮ್ಮಡಿಗಳ ಹಿರಿಯ –

೬೫. ವರು ನರಸಿಂಹ್ವಾರಣ್ಯ ಶ್ರೀಪದಂಗಳು ಮಾಲೆಯ ಮಾಡುವವರಿಗೆ ಕೊಟ್ಟ ಹೊನ್ನಬಡ್ಡಿಗೆ ಆತನು ಮಹನವ –

೬೬. ಮಿಯ ನಿಲಿಕೆಯ ದಿನಕೆ ಮುತ್ಯೆರೆಯರ ಊಟ ಬ್ರಾಹ್ಮಣಭೋಜನವನು ಅವನಿಂದಲೇ ನಡಸಿಕೊಂಬಿರಿ ಪಂ –

೬೭. ಚಪರ್ವ್ವಗಳಲ್ಲಿ ಗ್ರಾಮಕೆ ಹೇಳಿಸುವ ಹೇಳಿಕೆ ಕೊಡಿಸುವ ಗಂಧ ಪ್ರಸಾದ ಮಹಾನವಿಮಿ ಪೂಜೆಯನು ನಂ –

೬೮. ಮ್ಮ ತೇಜತಪ್ಪದೆ ಕೊಡಿಸುವಿರಿ ಹಳ್ಳಿಯ ದೇವಿಯ ಕಂನಿಗರಿಂದ ದೆಯ ಕಾನಸುತ್ತಣ ಕಟ್ಟಿಪಾಗರವನು ಹೋದಬ –

೬೯. oದಲ್ಲಿ ಗೈಸಿಕೊಂಡು ಅವರ ಆಳಿಕೆ ಹೇಳಿಕೆಯನ್ನು ಮಾಡಿಸಿಕೊಂಬಿರಿ ಮಲೆಯಾಳ ಗಜನಿಯಿಂ ಪ್ರಾಕು ಬಹ ಅ –

೭೦. ಕಿ ಮು ೬ಯನು ಬರಿಸಿಕೊಂಬುದಕೆ ನಿಮ್ಮಡಿಗಳೆ ಕರ್ತರು ಶ್ರೀಪರಮೇಶ್ವರಿಗು ವಿರತಿಗೆ ಬಂದ ಕಾಣಿಕೆಬಂ

೭೧. ಣ ಮುಂತಾದನು ತೆಗೆದು ಸಂರಕ್ಷಣ್ಯವ ಮಾಡಿಸಿಕೊಂಬರೆ ನೀವೆ ಕರ್ತ್ತರು ಶಾಂತಿಯವರು ಮಾಲೆಯವರು ಭಂ –

೭೨. ಡಾರಿಗಳವರಿಂದ ಕಾವರು ಮುಂತಾದವ ಮಾಡಿಸಿಕೊಂಬುದಕೆ ನಿಮ್ಮಡಿಗಳೆ ಕರ್ತರು ಯೀಧರ್ಮ್ಮಂ

೭೩. ಸ್ಥಳಂಗಳ ಮೂಲಿಗರು ಅನಿಗರಿಗೆ ಮೂಲ ಮುಂತಾದ ವೈವ | ರಗಳನು ಮಾಡಸಲ್ಲ ಯೀ ಬರೆದುಕೊಟ್ಟ

೭೪. ಧರ್ಮ್ಮಶಾಸನದ ಸ್ತಳಂಗಳ ಮೇಲೆ ತೆಱುಕಾಣಿಕೆ ವರಾಡ ಸರಾಡ ಬಿಟ್ಟಿ ಬಿಢಾರಯಸಿ ಅಪ್ಪಣೆ ಮುಂತಾ –

೭೫. ದ ಆವ ಉಪೋತ್ತರವಿಲ್ಲದೆ ಯೀ ಧರ್ಮಸ್ಥಳವನು ಸರ್ವ್ವ ಬಾಧಾಪರಿಹಾರವಾಗಿ ಸರ್ವ್ವಮಾನ್ಯವಾಗಿ ಶಿ –

೭೬. ಷ್ಯ ಪಾರಂಪರೆಯಾಗಿ ಆಚಂದ್ರಾರ್ಕ್ಕಸ್ಥಾಯಿಯಾಗಿ ಆಳಿ ಅನುಭವಿಸಿಕೊಂಡು ಶ್ರೀಕಾರ್ಯ ಮುಂತಾದ –

೭೭. ನು ನಡಸಿಕೊಂಡು ಸುಖದಲು ಯಿಹ್ರದೆಂದು ರಾಮಚಂದ್ರತೀರ್ಥ ಶ್ರೀಪದಂಗಳಿಗೆ ಹೆಗ್ಗಡಹಿನ ಗ್ರಾ –

೭೮. ಮಸಮಸ್ತರು ವೊಡಂಬಂಟು ಕೊಟ್ಟ ಧಮೂಲ ಶಾಸನ ಯಿಂತಪ್ಪುದಕ್ಕೆ ಧರ್ಮ್ಮಸಾಕ್ಷಿಗಳು ಆದಿತ್ಯ

೭೯. ಚಂದ್ರಾವನಿಲಾನ ಲೊಚದ್ಯ ಉರ್ಭೂಮಿರಾಪೋಹ್ರುಧೆಯಂ ಯಮಶ್ಚ ಅಹಶ್ಚ ರಾತ್ರಿಶ್ಚ ಉಭೇಚ ಸಂ –

೮೦. ದ್ಯೆ ಧರ್ಮಶ್ಚ ಜಾನಾತಿ ನರಸ್ಯ ಉರತ್ತಂ ಸ್ವದಾತ್ತಾಂ ಪರದತ್ತಾಂ ವಾಯೋ ಹರೇ ತು ವಸುಂಧರಾ ಶಷ್ಟಿ –

೮೧. ವ್ವರ್ಷ ಸಹಸ್ರಾಣಿ ವಿಷ್ಟಾಯಾಂ ಜ್ಞಾಯತೆ ಕ್ರುವಿ ದಾನ ಪಾಲನಯೋರ್ಮಧ್ಯೆ ದಾನ ಛ್ರೇಯೋನು ಪಾ –

೮೨. ಲನಂ ದಾನಾತ್ಸ್ವರ್ಗ್ಗ ಮವಾಪ್ನೋತಿ ಪಾಲನಾದಚ್ಚತಂ ಪದಂ ಗ್ರಾಮಸಮಸ್ತರ ಒಪ್ಪ . . . .

೮೩. ಗ್ರಾಮದವರ ಉಭಯದಿಂ ಮಲ್ಲಪ್ಪ ಸೇನ(ಮನ) ಮಗ ಲಕ್ಕಪ್ಪ ಬರದ ಶಾಸನ (||.)

೧೬. ಸ್ಥಳ : ಗ್ರಾಮದ ಶ್ರೀ ದುರ್ಗಾ ಪರಮೇಶ್ವರಿ ದೇವಾಲಯದಲ್ಲಿರುವ ತಾಮ್ರಶಾಸನ – ಉಪ್ಪುಂದ, ಉಡುಪಿ ಜಿಲ್ಲೆ.

ರಾಜವಂಶರಾಜ : ಮಹಾಮಂಡಲೇಶ್ವರ – ದೇವರಸ ಒಡೆಯ

ತೇದಿ : “ಶಾಲಿವಾಹನ ಶಕವರ್ಷ ೧೪೬೧ನೆಯ ವಿಳಂಬಿ ಸಂವತ್ಸರದ ಫಾಲ್ಗುಣ ಶು. ೫ ಮಿಯ ರವಿವಾರ”, ಇದು ಕ್ರಿ.ಶ. ೧೫೩೯ನೆಯ ಫೆಬ್ರವರಿ ೨೩ಕ್ಕೆ ಸರಿ ಹೊಂದುವುದು.

ಭಾಷೆಲಿಪಿ : ಕನ್ನಡ

ಪ್ರಕಟಣೆ :

೧. ಎ.ರಿ.ಇ.ಎ. ೧೯೭೧ – ೭೨, ಶಾಸನ ಸಂಖ್ಯೆ ೧೫.

೨. ನರಸಿಂಹಮೂರ್ತಿ ಪಿ,ಎನ್., ಶಾ ಸಂ. ೬೭

ಈ ಶಾಸನವು ಬಿರುಸಾವಂತ ತೊಳಹರವರ ಕುಮಾರ ಶ್ರೀ ಮನ್ಮಹಾಮಂಡಳೇಶ್ವರ ದೇವರಸ ಒಡಯರು ಸಂಗೀಪುರದಲ್ಲಿದ್ದುಕೊಂಡು ಹಾಡುವಳ್ಳಿ, ಬಟ್ಟಕಳ ಮುಂತಾದ ಸ್ಥಳಗಳನ್ನಾಳುತ್ತಿರಲು ಮೇಲೆ ಉಲ್ಲೇಖಿಸಿದ ದಿನದಂದು ಆನಂದವಾಳ ಪುರುಷಾಧಿಷ್ಠಿತರಾದ ಉಪ್ಪುಂದದ ಶ್ರೀನರಸಿಂಹ ತೀರ್ಥರ ಶಿಷ್ಯರಾದ ರಾಮಚಂದ್ರ ತೀರ್ಥ ಶ್ರೀಪಾದರಿಗೆ ತಮ್ಮ ಅರಮನೆಗೆ ಹರವರಿಗೆ ತೆರಿಗೆಯಾಗಿ ಬಂದ ಕಂಚಿಕನ ಭಾಗಿಯ ಹನ್ನೆರಡು ಮುಡಿಗದ್ದೆಯನ್ನು ಆರಾಧ್ಯಮೂರ್ತಿ, ದೇವರ ನೈವೇದ್ಯಕ್ಕೆ ಧಾರಾಪೂರ್ವಕವಾಗಿ ಬಿಟ್ಟಂತಹ ವಿಷಯ ಈ ಶಾಸನದಲ್ಲಿದೆ. ಆರಾಧ್ಯ ದೇವರ ನೈವೇದ್ಯಕ್ಕಾಗಿ ಬಿಟ್ಟ ಭೂವಿವರವನ್ನು ಈ ಶಾಸನ ದಾಖಲಿಸಿದೆ.

ಶಾಸನ ಪಾಠ

೧. ಸ್ವಸ್ತಿ (|.)ನಮಸ್ತುಂಗಶಿರಶ್ಚುಂಬಿಚಂದ್ರ ಚಾಮರಚಾರವೇ ತ್ರಯಿಲೋಕ್ಯನಗರಾಂಭ ಮೂಲಸ್ತಂಭಾಯಶಂಭವೇ (||.)

೨. ಶ್ರೀಮತ್ಸಕಲಗುಣಸಂಪನ್ನರುಮಪ್ಪ ಬಿರುಸಾವಂತ ತೊಳಹರವರ ಕುಮಾರ ಶ್ರೀಮನ್ಮಮಹಾಮಂಡಳೇಶ್ವ –

೩. ರರು ದೇವರಸವೊಡೆಯರು ಸಂಗೀತಪುರವರಾದಿತರಾಗಿ ಹಾಡುವಳ ಬಟ್ಟಕಳ ಮುಂತಾದ ಸಮಸ್ತ ರಾ –

೪. ಜ್ಯವನು ಪ್ರತಿಪಾಲಿಸುತಂ ಯಿದ್ದಂದಿನ ಶಾಲಿವಾಹನ ಶಕವರುಷ ೧೪೬೧ನೆಯ ವಿಳಂಬಿ ಸಂವತ್ಸರ

೫. ದ ಫಾಲ್ಗುಣ ಶು. ೫ಮಿಯ ರವಿವಾರದಲು ಶ್ರೀಮತ್ಪರಮ ಹಂಸಪರಿವ್ರಾಜಕಾಚಾರ್ಯ್ಯವರಿಯರಹ

೬. ಆನಂದವಾಳಪುರಷಾಧಿಷ್ಠಿತರಾದ ಉಪ್ಪುಗುಂದದ ಶ್ರೀನರಸಿಂಹ್ಯತೀರ್ಥ ಶ್ರೀಪದಂಗಳ ಶಿಷ್ಯರು ರಾಮಚಂ

೭. ದ್ರತೀರ್ಥ್ಧಶ್ರೀಪದಂಗಳಿಗೆ ಶ್ರೀ ಮನ್ಮಹಾಮಂಡಲೇಶ್ವರರು ದೇವರಸವೊಡೆಯರು ವೊಡವುಂಟು ಕೊಟ್ಟಧ

೮. ಮ್ಮ ಸಾಧನದ ಭಾಷಾಕ್ರಮವೆಂತಂದರೆ ಹಸಿಹುಳಿವೊಸರಿ ವೊಳಗೆಕರಿಯ ತಮ್ಮಣ ನಾಯನ ಬಗೆಯ

೯. ಲಿ ನಮ್ಮ ಅರಮನೆಗೆ ಹರಿವರಿಗೆ ಬಂದ ಕಂಚಿಕನಭಾಗಿಯ ಹನ್ನೆರಡು ಮುಡಿಗದ್ದೆಯನು ದೇವರು ಪೂಜಿ

೧೦. ಸುವ ಆರಾಧ್ಯಮೂರ್ತ್ತಿ ದೇವರ ನೈವೇದ್ಯಕ್ಕೆ ಬಿಟ್ಟಿವಾಗಿ ಆ ಉರತ್ತಿಗೆ ಗಡಿಮೂಡಲುಯೆತ್ತಿದ ಅಗಳುಗಡಿ ತೆಂಕಲು

೧೧. ಚಿಲುವ ಭಾಗದ ಉರತ್ತಿಹಾಳಿಗಡಿ ಅದು ಬಂದ ಹಾಂಗೆ ಯೆಡಬೆಲೆ ವೊಳಗಾಗಿ ವೊಡಹಿನ ಗದ್ದೆಯ ಕಂಠ ತಾ

೧೨. ಗೆ ಪಡುವಲು ಯೆಡಬೆಲೆವೊಳಗಾಗಿ ಯೆದರ ಬಡಗಲು ಯೆಡೆಬೆಲೆ ಕೆಳಗಣ ತೆಂಗಿನಗದ್ದೆಯ ಮುಳಿಗಡಿ

೧೩. ಯಾಗಿ ಕೇಶವ ಭಟ್ಟರ ಉರತ್ತಿಯ ಹಾಳಿಗಡಿ ಆ ಬಂದ ಹಾಂಗೆ ಮೂಡಲು ಕಡಿತಾಗೆ ಯಂತೀ ಚತುಃಸ್ಸೀಮೆಯಿ

೧೪. oದೊಳಗುಳ್ಳ ಉರತ್ತಿಮಂಗಟ್ಟು ಹತ್ತು ಮುಡಿಗದ್ದೆ ಮತ್ತಂ ವೊಡಹಿನ ಉರತ್ತಿಯೊಳಗೆ ಅಸುವಳಿಗದ್ದೆಗೆ ಗಡಿಮೂ

೧೫. ಡಲು ನರಿಗೆಱೆಯವೊಸರಿಗೆ ಬಂದ ಉರತ್ತಿಯ ಹಾಳಿಗಡಿಯೆತ್ತಿದರೆ ತೆಂಕಲು ನರಿಗೆಱೆಯ ವೊಸರಿಗೆ ಬಂದ

೧೬. ಉರತ್ತಿಯ ಹಾಳಿಗಡಿ ಪಡುವಲು ನೀರು ಬೆಲೆ ಗಡಿ ಬಡಗಲು ಕೇಶವ ಭಟ್ಟರ ಉರತ್ತಿಯ ಹಾಳಗಡಿ ಮತ್ತಂ ಕೊ

೧೭. ಣಗದ್ದೆ ಹೆಗ್ಗದ್ದೆಗೆ ಗಡಿ ಮೂಡಲು ಯೆತ್ತಿದ ದರೆ ತೆಂಕಲು ಕೇಶವ ಭಟ್ಟರ ಉರತ್ತಿಹಾಳಿ ಗಡಿ ಪಡುವಲ ನೀರು

೧೮. ಬೆಲೆಗಡಿ ಬಡಗಲು ಕೇಶವ ಭಟ್ಟರ ಉರತ್ತಿಯ ಹಾಳಿಗಡಿ ಮತ್ತಂ ಮುರೆಗಡಿಯಾಗಿ ಕೇಶವ ಭಟ್ಟರ ಉರತ್ತಿ.

೧೯. ಯ ಹಾಳಿಗಡಿ ಬಡಗಲು ಕೇಶವ ಭಟ್ಟರ ಉರತ್ತಿಯ ಹಾಳಿಗಡಿ ಮತ್ತಂ ತಲಹಿನ ಕೋಡಗಗೆ ಗಡಿ ಮೂಡಲು

೨೦. ಯೆತ್ತಿದ ದರೆ ತೆಂಕಲು ಕೇಶವ ಭಟ್ಟರ ಉರತ್ತಿಯ ಹಾಳಿಗಡಿ ಪಡುವಲು ನೀರು ಬೆಲೆಗಡಿ ಬಡಗಲು ಮೇಲಣ ಒ

೨೧. ಡಹಿನ ಕಂಟಗಡಿಯಿಂತೀ ಚತುಃಸ್ಸೀಮೆಹಿಂದೊಳಗುಳ್ಳ ಸ್ಥಳ ಮುಱಕ್ಕೆ ಮಂಗಟ್ಟುಯೆರಡು ಮುಡಿ ಗದ್ದೆ

೨೨. ಉಭೆಯಂ ವೊಸರಿ ವೊಂದಕ್ಕೆ ಗದ್ದೆ ಮಂಗಟ್ಟುಮು೧೨ ಅಕ್ಷಾರದಲು ಹನ್ನೆರಡು ಮುಡಿಗದ್ದೆ ಅದಕ್ಕೆ ಬ

೨೩. oದ ಮನೆ ಮನೆ ತಾಣ ನೀರು ದಾರಿ ಮಂದು ಮರ ಫಲಹಕ್ಕಲು ಹಳಗಾಡು ಬೆಣ ಬೆಳಿರು ಬೆಟ್ಟು ತಿಪ್ಪೆಯಿಂ

೨೪. ತ್ತೀಅಷ್ಟಭೋಗಸಮನ್ವಿತವಾದ ಉರತ್ತಿಯನು ಆರಾಧ್ಯಮೂರ್ತ್ತಿದೇವರ ನೈವೇದ್ಯಕ್ಕೆ ಸಹಿರಂಣ್ಣ್ಯೋದಕ ದಾ

೨೫. ರಾಪೂರ್ವಕವಾಗಿ ಅಚಂದ್ರಾರ್ಕ್ಕಸ್ಥಾಯಿಯಾಗಿ ಸರ್ವ್ವಮಾನ್ಯಸ್ಥಳವಾಗಿ ಬಿಟ್ಟುಕೊಟ್ಟೆವು ಯಿಂತಿ ಸಾಧನಸ್ಥವಾ

೨೬. ದ ಉರತ್ತಿಗೆ ಕಟ್ಟಿದ ಗೇಣಿ ವರುಷ ೧ಕ್ಕೆ ನಾಲ್ವಂಡ ಮು ೧೨ ಅಕ್ಷಾರದಲು ಹನ್ನೆರಡು ಮುಡಿ ಅಕ್ಕಿಯನು ಕಾಲ ಕಾ

೨೭. ಲಂ ಪ್ರತಿಯಲು ನೀವೆ ಯೆತ್ತಿಕೊಂಡು ಆ ಆರಾಧ್ಯಮೂರ್ತ್ತಿ ದೇವರ ನೈವೇದ್ಯವನು ಆಚಂದ್ರಾರ್ಕ್ಕವಾಗಿ ನಡಸಿ ಬ

೨೮. ಹಿರಿ ಯೀ ಉರತ್ತಿಗೆ ತೆಱುಕಾಣಿಕೆ ಅಕರ ಅನಾಯ ಬಿಟ್ಟ ಬಿಡಾರ ಅಸಿ ಅಪ್ಪಣೆ ಮುಂತಾದ ಆವ ಉಪ್ಪೋತ್ತರಗ

೨೯. ಳು ಯಿಲ್ಲದೆ ಸುಖಂ ಭೋಗಿಸಿ ಬದ್ದು ಬಹುದೆಂದು ಪೊಡವಂಟು ಕೊಟ್ಟ ಧರ್ಮ್ಮಸಾಧನ (||.) ಯಿಂತಪ್ಪುದಕ್ಕೆ ಧರ್ಮ್ಮಸಾ

೩೦. ಕ್ಷಿಗಳು ಆದಿತ್ಯ ಚಂದ್ರಾವನಿಲೊನ ಲೋಚಧ್ಯೋರ್ಭೂಮಿ ರಾಪೋ ಹ್ರುದಯಂ ಯಂಶ್ಚ ಅಹಶ್ಚ ರಾತ್ರಿಶ್ಚ ಉಭೆ

೩೧. ಚ ಸಂಧ್ಯೆ ಧರ್ಮಶ್ಚ ಜಾನಾತಿ ನರಸ್ಯ ಉರತ್ತಂ(||.)ದಾನ ಯೋರ್ಮ್ಮಧ್ಯೆ ದಾನಾತ್ರೆಯೋನು ಪಾಲನಂ ದಾನಾತ್ಸ್ವರ್ಗಮ

೩೨. ವಾಪ್ನೋತಿ ಪಾಲನಾದಚ್ಚುತಂ ಪದಂ ದೇವರ ಬಹ (||.)

೧೭. ಸ್ಥಳ : ಗ್ರಾಮದಲ್ಲಿರುವ ಪಾರ್ಶ್ವನಾಥ ಬಸದಿಯಲ್ಲಿರುವ ಶಾಸನ – ಕಾಯ್ಕಿಣಿ, ಉತ್ತರ ಕನ್ನಡ ಜಿಲ್ಲೆ

ರಾಜವಂಶರಾಜ : ಶಕವರ್ಷ ೧೪೬೫

ತೇದಿ : ಶುಭಕ್ರತು ಸಂವತ್ಸರದ ಭಾದ್ರಪದ ಬಹುಳ ದಸುಮಿ ಸೋಮವಾರದಲು ಎಂದಿದ್ದು ಇದು ಕ್ರಿ.ಶ. ೧೫೪೨, ಸೆಪ್ಟೆಂಬರ್ ೪ ಕ್ಕೆ ಸೋಮವಾರಕ್ಕೆ ಸರಿಹೊಂದುತ್ತದೆ.

ಭಾಷೆ ಲಿಪಿ : ಕನ್ನಡ

ಪ್ರಕಟಣೆ : ಕ.ಇ. I, ೧೯೩೯ – ೪೦ ಶಾ ಸಂ. ೭೪.

ಮಹಾಮಂಡಳೇಶ್ವರ ಕೃಷ್ಣದೇವರಸ ಒಡೆಯರು ಹೈವ ತುಳು ಕೊಂಕಣ ಮೊದಲಾದ ರಾಜ್ಯವನ್ನಾಳುತ್ತಿರಲು ಮೇಲೆ ತಿಳಿಸಿದ ದಿನದಂದು ನೇಮಿಚಂದ್ರದೇವನು ಹಣಕೊಟ್ಟು ಭೂಮಿಯನ್ನು ಕೊಂಡುಕೊಂಡು ಕೈಕಣಿ ತೀರ್ಥಂಕರರಿಗೆ ತಮ್ಮ ಹೆಸರಿನಲ್ಲಿ ಹಾಲಧಾರೆಯನ್ನು ಬಿಟ್ಟಂತಹ ದಾನವನ್ನು ಸವಿವರವಾಗಿ ಉಲ್ಲೇಖಿಸಿದೆ. ನೇಮಿಚಂದ್ರ ದೇವರ ಶಿಷ್ಯ ಪಾಶ್ವದೇವನು ದೇವರಿಗೆ ಹಾಲಧಾರೆಗಾಗಿ ಮತ್ತು ಇದೇ ಬಸದಿಗೆ ನೇಮಿಚಂದ್ರದೇವನು ತುಂಡುಭೂಮಿಯನ್ನು ಮತ್ತು ವೂವಜ್ಜಿ ಇಮ್ಮಡಿದೇವ ಒಡೆಯರು ೩೫ ಹೊನ್ನನು ಕೊಟ್ಟಿದನ್ನು ಶಾಸನ ವಿವರವಾಗಿ ದಾಖಲಿಸಿದೆ. ಹೊನ್ನಬಳಿಕೋಟಿಯ ಮಗಳು ಗೋಮ್ಮಟದೇವಿ ತೋಳಹರ ಬಳಿ ಸಾತುಶೆಟ್ಟಿ ಮಗಳು ಯೀಸರನಾಯಕತಿ ದಾನಿಗಳ ಹೆಸರನ್ನು ಶಾಸನದಲ್ಲಿ ಹೆಸರಿಸಲಾಗಿದೆ.

[1] ಯಿ ಯನ್ನು ಸಾಲಿನ ಮೇಲೆ ಚಿಕ್ಕದಾಗಿ ಬರೆಯಲಾಗಿದೆ.