ಶಾಸನ ಪಾಠ
೧. ಶ್ರೀಪಂಚಗುರುಭ್ಯೋನಮಃ || ಶ್ರೀಮತ್ಪರಮ ಗಂಭೀರಸ್ಯಾದ್ವಾದಾ ಮೇಘಲಾಂಛ್ಛನಂ | ಜೀಯಾ ತ್ರೈಲೋಕ್ಯ
೨. ನಾಥಸ್ಯ ಸಾಸನಂ ಜಿನ ಸಾಸನಂ | ಸ್ವಸ್ತಿಶ್ರೀಮನಹಾಮಂಡಳೇಸ್ವರಂ ಕ್ರುಷ್ಣದೇವರಸವಡೆಯರು ಹೈವತುಳು
೩. ವ ಕೊಂಕಣ ಮುಂತಾದ ರಾಜ್ಯವನೂ ಪ್ರತಿಪಾಲುಸ್ತಂ ಯಿದ್ದಂದಿನ ಸಕ ವುರಷದ ಸಾವಿರದ ನಾನೂಱ ಅಱು
೪. ವತ್ತ ಅಯಿದನೆಯ ಶುಭಕ್ರುತು ಸಂವತ್ಸರದ ಭಾದ್ರಪದ ಬಹುಳ ದಸುಮಿ ಸೋಮವಾರ ದಲು ಶ್ರೀ
೫. ಪ್ರಕುವರುಸದಲು ನೇಮಿಚಂದ್ರ ದೆವರು ಹೊಂನ ಕೊಟ್ಟು ಮಾಡಿಕೊಂಡು ತಂಮ ಹೆಸ
೬. ರಲಿ ಹಾಲಧಾರೆಗೆ ಕಾಯಿಕಣಿಯ ಬಸ್ತಿಯ ಶ್ರೀಪಾರಿಸ್ವನಾಥ ದೇವರಿಗೆ ಹಾಲಧಾರೆಗೆ ಬಿಟ್ಟ ಬಾಳು
೭. ವಿವರ ಹದಾ[ಳ]ಲ್ಲಿ ಗುಬಿಕಂದದ ವಸುಗಿಯ ಬಾಳು ಮುರ್ಱೆ ಮುಡೆ ಗದ್ದೆಗೆ ಕಟ್ಟಿದ ಗೇಣಿಯ ಭತ್ತ
೮. ದ ವಿವರ ಸಂಖ್ಯಾರ ಮುಡೆ ಯಿಪ್ಪತ್ತನಾಲ್ಕು ಮುಡೆ ಭತ್ತಕೆ ತಂಭಾಲು ಯೆರಡು ಸಿ
೯. ದ್ದೆ ಹಾಲನೂ ಯರಡು ಹೊತ್ತು ನಡಿಸಿ ಬಹರು ಬಲಾತ್ಕಾರದ ಗಣದ ನೇಮಿಚಂದ್ರ ದೇವರ ಶಿಷ್ಯರು ಪಾರಿಶ್ವದೇ –
೧೦. ವರು ತಂಮ ಹೆಸರ ಹಾಲಧಾರೆಗೆ ಬಿಟ್ಟ ಬಾಳು ಬೆಲಕಾರಲಿ ಮುಟಿಕೊಂಡ ನಡುಗಣ ಅಸುವಳಿ ಮುವ
೧೧. ವತ್ತು ಹಾ[ನೆ]ಗದ್ದಗೆ ಮುಗಿದ ಗೇಣಿ ಸಂಖ್ಯಾರ ಯೆಂಟು ಮುಡೆ ಭತ್ತ ಮತಂಹ[ದಾ] ಳ[ಲಿ] ಕುಳಿಯನ ಗದ್ದೆಗೆ ಮು –
೧೨. ಗಿದ ಗೇಣಿ ಸಂಖ್ಯಾರ ಭತ್ತ ಮುಡೆ ನಾಲ್ಕು ಉಭಯಂ ಹಂನೆರಡು ಮುಡೆ ಭತ್ತಕ್ಕೆವೊಂದು ಸಿದೆ ತಂಭಾಲನು ವೊಂ –
೧೩. ದು ಹೊತ್ತು ನಡಸುಉದು || ಶ್ರೀಮನ್ಮಹಾಮಂಡಲೇ[ಸ್ವ]ರಂ ಕೃಷ್ಣದೇವರಸವೊಡೆಯರು ಪ್ರಾಕು ವಪದಲಿ ಕಾಯಿಕ
೧೪. ಣಿಯ ಬಸ್ತಿಯ ಶ್ರೀಪಾರಿಶ್ವನಾಥದೇವರ ಹೆಸರಲ್ಲಿ ನೇಮಿಚಂದ್ರ ದೇವರು ಹೊಂನ ಕೊಟ್ಟು ಮಾಡಿ
೧೫. ಕೊಂಡ ಬಾಳ ತಱ | ಬೇಲಿಯ ಮುವತ್ತಿ ಅಯಿದು ಹೊಂನನು ನಡಮ ಮಾವಾಜಿ ಯಿಂಮಡಿದೇವರಾಯ ವೊ –
೧೬. ಡೆಯರು ತಂಮ ಹೆಸರಲಿ ಕಾಯಿಕಣಿಯ ಬಸ್ತಿಯಲು ಯೆರಡು ತಂಡ ಆಹಾರ ದಾನು ನಡವ ಹಾಂ
೧೭. ಗೆ ಬಿಟ್ಟು ಅಧಂರ್ಮ ನಡಉತ್ತಿರಲಾಗಿ ನಡುವೆ ಈತಿ ಬಾಧೆಗಳಿಂದ ಆಧಂರ್ಮ ನಡೆಯದೆಯೆದ್ದ ಸಮಂಧ [ಕೊ]
೧೮. ಡಕಣಿಯ ಸ್ತಳದ ಸೇನಬೋವನೂ ಕರಸಿ ಆತನ ವಹಿ ಪ್ರಮಾಣಿನಲೂ ನೇಮಿಚಂದ್ರ ದೇವರೂ ಮಾಡಿಕೊಂಡ ಬಾಳ ತೆರಪಿ
೧೯. ಚಿ ಪಾಲಿಸಿದ ವಿವರ ಹದಾಳಲ್ಲಿ ಕುಬಿಕಂದ್ದ ಸುಗ್ಗಿ ಮೂಡ ಮೂಱುಕ್ಕೆ ಬೆಳಿಯ ಗೆ ಆಱು ಕೆಂದಾಳಿ ಕೇಸವನಾಯ್ಕನ ಮಕ್ಕಿ ಗ[ದೆ]
೨೦. ಯೆರಡು ಚಿಗ ವಂದು ಹೊಳಿಯ ಗದ್ದೆಯ ಸುಗ್ಗಿ ಕೊ[ತ]ಗೆ ಯೆರಡು ಮೂಡೆ ಗದ್ದೆಯನೂ ಮೂವಣಸೆಟ್ಟಿ ಆಹಾ
೨೧. ರ ದಾನಕ್ಕೆ ಬಿಟ್ಟ ಬಾಳ ತೆಱು ಬೆಳಿ ಗ ನಾಲ್ಕು ಸಂಕುಸೆಟ್ಟಿಯ ಬಗೆಯ ಮೆನ ಕಾಡಲು ತಂಮಣ ನಾಯಕ ಮಕ್ಕಿ ಸಹ ಗ ಮು ನಾ –
೨೨. ಲ್ಕಕ್ಕೆ ತೆಱು ಚಿ ಗ ನಾಲ್ಕು ||೪|| ಕೆಳಗಣ ಬಯಲಲಿ ಲೋಕಮನಾಯ್ಕತಿಯ ಬಗೆಯಿಂದ ಗ ಮೂಱುಕೆ ತೆಱು ಚಿಗ ಆಱು ಬೆಳುಮ
೨೩. ನಾಯಕಿಯ ಕಯಿಯ ಆರುವಾರದ ಮಾಡಿಕೊಂಡ ಬೆಲಕಾರ ಕೊಡಕೆ ಮೂವತ್ತ ಆಯಿದು ಹಾನೆ ಗದ್ದೆಗೆ ತೆಱು ಚಿ ಗ ವಂದು | ಉರ
೨೪. ವಣಿಯಿಂದ ವಂದು ಮೂಡೆ ಗದ್ದೆಗೆ ಬೆಳಿಗ ವಂದು | ಚೆಂದುವಾರ ಬಗೆ ಸಂಕರನಾಯ್ಕನ ಬಗೆಯ ಗದ್ದೆ ಮೂಡೆ ವಂದುವರೆ ತೆಱು ಚಿ ಗ ಮೂ
೨೫. ಱು | ಬಯಿರು ನಾಯ್ಕ ಅಸುವಳಿ ಯಿಪ್ಪೊತ್ತು ಹಾನೆ ಗದ್ದೆಗೆ ತೆಱ ಚಿ ಗ ವಂದುವರೆ ಮೇಲನ ಕೊಡಲಲಿ ನಾಗರಸನಾಯ್ಕ ತಂನ ಹೆಸರ ಹಾ
೨೬. ಲಧಾರೆಗೆ [ಬಿ]. . . . . ಗದ್ದೆಗೆ ಚಿ ಗ ವಂದು ತಂಬುಲ ಗದ್ದೆ ಅಸುಳಿ ಸಹ ವಂದುವರೆ ಮೂಡೆ ಗದ್ದೆ ಚಿಗವಂದು ವಂದುವರೆ
೨೭. [ಗೆ]ತಂಮೆಲ್ಲನ ಕೊಡಲಿಂದ ಲೋಕಮನಾಯಕಿಯ ಬಗೆಯ ಯೆರಡು ಮೂ ಗದೆಗೆ ತೆ ಚಿ ಗ ಮೂಱು ಆ ಬಗೆ ಮಕ್ಕಿನ ಮು.ಧ
೨೮. .ರೆಣಿಕೆಯ ಮೇಳಣ ವಡ್ಡ ಅಂತೂ ಬೆಳ್ಳಿಯ ಮೂವತ್ತ ಅಯಿದು ಹೊಂನನೂ ಕಾಯಿಕಣಿಯೊಳಗೆ ನಂಮ ಅರಮನೆಗೆ ಶಾರ್ವ್ವರಿ ಸ –
೨೯. oವತ್ಸರದ ದೀವ[ಳಿ*]ಗೆ ಆರಭ್ಯವಾಗಿ ನಂಮ ಅರಮನೆಗೆ ಬಹ ಎರಡು ಸಾವಿರದ ಯೇಳುನೂಱು ಅಯಿವತ್ತವೊಂದುವರೆ ಹೊಂನಿನ ಗಳ ಸ –
೩೦. ಯಿ [ವೊ]ರವ ಬಾಳ ತೆಱು ಬೆಳ್ಳಿಯ ಮೂವತ್ತ ಅಯಿದು ಹೊಂನನೂ ಕುಳ ಖಂಡಿತವಾಗಿ ತಗೆಸಿ ಪಿರಿಲೆ ಪಾಲಿಸಿದೆಉ – ಯಿ ಹೊನನೂ
೩೧. ಶ್ರೀಪಾರಿಶ್ವನಾಥ ದೇವರ ಹೆಸರ ಚಿಟ್ಟು ಪ್ರಮಾಣಿಗೆ ಗುರುಗಳು ತೆಗೆದುಕೊಂಡು ಯೆರಡು ತಂಡ ಅಹಾರದಾನವನೂ
೩೨. ಕ್ರುಷ್ಣದೇವರಸವಡೆಯರ ಹೆಸ[ರ]ಲಿ ಆಚಂದ್ರಾರ್ಕ ಸ್ಥಾಇಯಾಗಿ ಕಾಯಿಕ[ಣಿ*]ಯಲಿ ನಡೆವ ಹಾಗೆ ಕಟ್ಟುಮಾಡಿ ಬಿಟ್ಟ ಆಹಾರದಾನ
೩೩. [ದ ಧರ್ಮಶಾಧನ]||ಶ್ರೀ||ಕೇತಣಸೆಟ್ಟಿಯರು ಸಂಣಿ ನಾಯಕರ ಮೊಮಕ್ಕ[ಳು] [ಪ್ರ]ಬು ಹೆಗ್ಗಡೆ –
೩೪. ಯರ ಸಂಬು ಹೆಗ್ಗಡೆಯರು ತಂಮ ಹೆಸರಲಿ ನಡವ ಹಾಲಧಾರೆಗೆ ಬಿಟ್ಟ ಬಾಳ ವಿವರ ತಂಮ ಅರೆಯ
೩೫. ಬಿದಿರ ಮಂಣ ಒಳಗೆ ಮುಲ ಬಾಳು ತಂಬಿನ ಗದ್ದೆ ನಾಲ್ವತು ಹಾನೆ ಕೆಱಯ ಕೊಡಗೆಗೆ ಇಪ್ಪತು ಹಾ –
೩೬. ನೆ ಉಭಯಂಯೀ ಅಱುವತ್ತು ಹಾನೆ ಗದ್ದೆಗೆ ಕಟ್ಟಿದ ಗೇಣಿ ಸಂಬ್ಯಾರ ಹತ್ತು ಮುಡೆ ಸಾಲಿಸಿಗೇರಿಯಲಿ ಹಾ –
೩೭. ನೆ ಗದೆಯ ಕೊಡಗೆ ತಂಬುಲ ಗದೆ ಸಹ ಅಱುವತ್ತು ಹಾನೆ ಗದ್ದೆಗೆ ಕಟ್ಟಿದ ಗೇಣಿ ಸಂಬ್ಯಾರ ಭತ್ತ ಮೂಡೆ ಹ –
೩೮. ತ್ತು ಯಿ ಹತ್ತು ಮೂಡೆ ಭತ್ತದ ಒಳಗೆ ತೆಱಿಗೆ ಆಱು ಮುಡೆ ಭವನುಳಿದು ಮೇಲಾದ ನಲು ಮುಡಿ ಭತ ಹಾಲ
೩೯. ಧಾರೆಗೆ ಮಂತರ ಕಟಿನ ಗದ್ದೆಯ ಒಳಗೆ ಕ್ರುಷ್ಣನ ಭಾಗಿಯ ನವಗೆ ಅದಿಮ ಮಾಡಿದ ಬಾಳ ವಿವರ ಮನೆಯಿಂದ ಪ –
೪೦. ದುವರಟಿಯ ಅಸುವಳಿ ಕೊಡಗೆ ಯಿವೊತ್ತು ಹಾ ಗದೆ ಬಸಱಿ ಅಟಿಯ ಕೊಡಗೆ ಹಾನೆ ಮೂ[ವ*]ತ್ತು ಅಡಿ ಗದ್ದೆಯ ವಟ ಹದಿಮೂ –
೪೧. ಱು ಹಾನೆ ಕೊಡಗೆ ಮಕ್ಕಿಯೊಳಗೆ ಹಳಸೆ ಅಟಿ ಕೊಡಗೆ ಹತ್ತು ಹಾನೆ | ಅಂತೂ ಸುಗ್ಗಿ ಮಕ್ಕಿ ಸಹ ನಾಲ್ವತ್ತು ಹಾನೆ –
೪೨. ಗೆ ಮುಡೆ ವಂದು ಹಾನೆ ಮೂವತ್ತಮೂಱು ಯಿ ಸ್ತಳಂಗಳವೆ ಆತ ಅರ್ಥಸಾದನ ಪ್ರಮಾಣಿನ ವರಹ ಗದ್ಯಾಣ ಹತ್ತು [೧೦]
೪೩. ಹತ್ತು ವರಹಕೆ ವರುಷ ವಂದು ಯಿ ಹೊಂನ ಬಡಿಯ ಭತ್ತ ಮುಡೆ ಸಂಬಿಯಾರ ಹತ್ತು ಯೀ ಹತ್ತು ಮುಟಿ ಭತ್ತ ಸ –
೪೪. ಹ | ಆತು ಯಿ ಬರದ ಸ್ತಳಂಗಳೆಲ್ಲವಕೂ ಕಟಿದ ನೆಲೆಯ ಭತ್ತ ಮುಡೆ ಯಿಪೊತ್ತನಾಲ್ಕು ಯಿ ಭತ್ತ ನಂಮ ಯಿಬ –
೪೫. [ರ] ಹೆಸರಲಿ ಯೆರಡ ಹೊತ್ತಿನ ಹಾಲಧಾರೆ ಉದಯದಲಿ ವಂದು ಸಿದೆ ತಂಬಹಾಲು ಅಸ್ತಮಯದಲಿ ವಂದು ಸಿ –
೪೬. ದೆ ತಂಬಹಾಲ ಲೆಕ್ಕದಲಿ ಶ್ರೀಪಾರಿಸ್ವನಾಥ ದೇವರಲಿ ಆಚಂದ್ರಾರ್ಕಸ್ಥಾಯಿಯಾಗಿ ಯೆಬು ಹೆಗ್ಗಡೆ ಸಂಬು ಹೆಗ –
೪೭. ಡೆಯವರು ಹಾಲಧಾರೆಗೆ ಬಿಟ್ಟ ಧರ್ಮಸಾಧನ || || ಕಾಯಿಕಣಿ ಬಸ್ತಿಯ ಶ್ರೀಪಾರಿಸ್ವನಾಥ ದೇವರ ಪಾದ ಮೂ –
೪೮. ಲದಲಿ ನಿತ್ಯದಲಿ ನಡವ ಹಾಲಧಾರೆಗೆ ಕಳುವನ ತಂಮುನಾಯ್ಕನ ಮಗ ಆನಬಳಿಯ ಪದುಮರಸ ಹೆಗ್ಗಡೆ ನಂ ನ ಹೆಸರ –
೪೯. ಲಿ ಹಾಲಧಾರೆಗೆ ಬಿಟ್ಟ ಬಾಳ ವಿವರ ಹಡಾಳೊಳಗೆ ನಾನು ಅ [ನ] ವನೆಯಲಿ ಮೂಲವ ಕೊಂಡ ಪಕ್ಕಿ ಪ್ರಮಾಣಿನ [ಉ]ಮೆ ಗದ್ದೆ ನಾಲ್ವ –
೫೦. ತ್ತು ಹಾನೆ ಗದ್ದೆ ಮತ್ತಂ ನಾಗನೆ ಕೊಡಗೆ ಯಿಪೊತ್ತು ಹಾನೆ ಗದ್ದೆ ಯಿ ಸ್ತಳಗಳಿಗೆ ಕಟ್ಟಿದ ಗೇಣಿಯ ಭತ್ತ ಮುಡೆ ಸಂಬಿಯಾರ ಹ –
೫೧. ನ್ನೆರಡುಮುಡಿ ಭತ್ತಕ್ಕೆ ನಂನ ಹೆಸರಲ್ಲಿ ನಿತ್ಯ ವಂದು ಹೊತ್ತು ವಂದು ಸಿದ್ಧೆ ತಬಹಾಲು ನನ ಹೆಸರಲಿ ಆಚಾರ್ಕಸ್ಥಾಯಿ –
೫೨. ಯಾಗಿ ಬಿಟ್ಟ ಧರ್ಮಸಾಧನ || || ಕಾಯಿಕಣಿ ಬಸ್ತಿಯ ಶ್ರೀಪಾರಿಸ್ತನಾಥ ದೆವರ ಪಾದ ಮೂಲದಲ್ಲಿ ನಡವ ಹಾಲಧಾ –
೫೩. ರೆಗೆ ಬೆಂಮನಾಯ್ಕನ ಮಗ [ದೆ] ಉತರ ಬಳಿಯ ಕೇಸವನಾಯ್ಕನು ತಂನ ಹೆಸರ ಹಾಲಧಾರೆಗೆ ಬಿಟ್ಟ ಬಾಳ ವಿವರ ಬಯಲ
೫೪. ಹೊಳೆಯಲಿ ಬಯಲ ಹೊಳೆ ಕೊಡಗೆ ಮೂವತ್ತ ಅಯಿದು ಹಾನೆ ಗದ್ದೆಗೆ ಕಟ್ಟಿದ ಗೇಣಿಯ ಭತ್ತ ಮುಡೆ ಸಂಬಿಯಾರ ಯೇಳು
೫೫. ಮೂಡೆ ಭತ್ತ ಮತ್ತಂ ಸ[ಲ]ಗೆಯ ಬಯಲಲ್ಲಿ ಪಾಸುವಟಿ ಕೊಡಗೆ ಯಿಪೊತ್ತು ಹಾನೆ ಮತ್ತಂ ಕೊಡಗೆ ಹತ್ತು ಹಾನೆ
೫೬. ಉಭಯಂ ಯೆರಡು ಕೊಡಗೆ ಕಟ್ಟಿದ ಗೇಣಿ ಭತ್ತ ಮೂಡೆ ಸಂಬಿಯಾರ ಅಯಿದು ಉಭಯಂ ಹನ್ನೆರಡು ಮೂಡೆ
೫೭. ಭತ್ತ ಗೇಣಿ ನಂನ ಹೆಸ[ರಲಿ] ನಿತ್ಯ ವಂದು ಹೊತ್ತು ವಂದು ಸಿದ್ದೆ ತಂಬಹಾಯಿ ನಂನ ಹೆಸರಲ್ಲಿ ಆಚಂದ್ರರ್ಕಸ್ಥಾ –
೫೮. ಯಿಯಾಗಿ ನಂನ ಹೆಸರಲ್ಲಿ ಹಾಲಧಾರೆಗೆ ಬಿಟ್ಟ ಧರ್ಮ್ಮ ಶಾಧನ || || ಕಾಯಿಕಣಿ ಬಸ್ತಿಯ ಶ್ರೀ ಪಾರಿಸ್ವನಾಥ ದೆವರ
೫೯. ಪಾದಮೂಲದಲ್ಲಿ ನಡೆವ ಹಾಲಧಾರೆಗೆ ತಮಣನಾಯ್ಕನ ಮಗ ದೇಉತರ ಬಳಿಯ ನಾಗರಸ ನಾಯ್ಕನು ನಂನ ಹೆಸರ
೬೦. ಹಾಲಧಾರೆಗೆ ಬಿಟ್ಟ ಬಾಳ ವಿವರ ಸಾಲಸಗೇರಿಯೊಳಗೆ ಮೇಲನ ಕೊಡಲಲ್ಲಿ ನಂನಾಳಿಕೆಯ ನಾಲ್ವತ್ತು ಹಾನೆ ಗದ್ದೆ –
೬೧. ಗೆ ಕಟ್ಟಿದ ಗೇಣಿ ಭತ್ತ ಮೂಡೆ ಸಂಬ್ಯಂರ ಯೆಂಟು ತೆಱೆಗೆ ತೆಗದು ಅಱ ಮೂಡೆ ಭತ್ತಕ್ಕೆ ನಿತ್ಯ ವಂದು ಹೊತ್ತ ಅಂಗ[ಳ]
೬೨. ತಂಬಾಲು ನಂನ ಹೆಸರಲ್ಲಿ ಅಚಂದ್ರಾರ್ಕ ಸ್ಥಾಯಿಯಾಗಿ ಹಾಲಧಾರೆಗೆ ಬಿಟ್ಟ ಧರ್ಮಸಾಧನ | | ಕಾಯಿಕಣಿ ಬಸ್ತಿಯ
೬೩. ಶ್ರೀಪಾರಿಸ್ವನಾಥ ದೇವರ ಪಾದಮೂಲದಲ್ಲಿ ನೆಡವ ಹಾಲಧಾರೆಗೆ ಕೋಟಿಯ ಮಗಳು ಹೊನ್ನ ಬಳಿಯ ಗುಂಮಟದೇವಿ ನಾಯ[ತಿ] –
೬೪. ಯು ನಂನ ಹೆಸರಲಿ ಹಾಲಧಾರಗೆ ಬಿಟ್ಟ ಬಾಳ ವಿವಿರ ಸಾಲಸಗೇರಿಯೊ [ಳ*]ಗೆ ನಾನು ಮೂಲವಾಗಿ ಅಳುತ್ತಂ ಯಿದ್ದ ತೆಂ –
೬೫. . . ಮನೆ ತೆಂಗಿನ ಹಿತ್ತಿಲು ಅದಕ್ಕೆ ಬಂದ ಗದ್ದೆ ಅಮ್ಮೆ ಗದ್ದೆ ಕಾಣಿಗದ್ದೆ ಸಹ ಸಂಬ್ಯಾರ ಮೂಱು ಮುಡೆ ಮತ್ತಂ ಆ ಕಂ[ಡೆ}ಹ ಕ –
೬೬. ಟ್ಟಿದ ಗೇಣಿಯ ಭತ್ತ ಮೂಡೆ ಸಂಬ್ಯಾರ ಯಿಪೊತ್ತನಾಲ್ಕು ಮೂಡೆ ಭತ್ತ ಯಿ ಭತ್ತದೊಳಗೆ ತೆಱಿಗೆ ಬೆಳಿಯ ಯೆರಡು ಹೊಂನಿಗೆ ತೆಗ
೬೭. ದು ಆದ ಭತ್ತಕ್ಕೆ ನಂನ ಹೆಸರಲ್ಲಿ ನಿತ್ಯ ವಂದು ಸಿದ್ದೆ ತಂಬಹಾಲು ನಂನ ಹೆಸರಲಿ ಅಚಂದ್ರಾರ್ಕ ಸ್ಥಾಯಿಯಾಗಿ ಹಾಲಧಾ
೬೮. ರೆಗೆ ಬಿಟ್ಟ ಧರ್ಮಸಾಧನ || || ಕಾಯಿಕಣಿ ಬಸ್ತಿಯ ಶ್ರೀ ಪಾರಿಸ್ವನಾಥ ದೇವರ ಪಾದ ಮೂಲದಲ್ಲಿ ನಡವ ಹಾಲ[ಧಾ*]ರೆಗೆ ಸಾತು
೬೯. ಸೆಟ್ಟಿಯರ ಮಕ್ಕಳು ತೊಳಹರ ಬಳಿಯ ಯಿಸರ[ಕ] ನಾಯ್ಕತಿ ಆತಂ [ನಿ] ನಾದ [ರ] ನಾಯ್ಕತಿ ನಂಮ ಹೆಸರಲಿ ಧರ್ಮಕ್ಕೆ ಬಿಟ್ಟ ಬಿಟ್ಟ ಬಾ –
೭೦. ಳ ವಿವರ ಕೊಣಕಾರೊಳಗೆ ಕಡು ಮಂಣಕೊಡಗೆ ಯಿಪೊತ್ತ ಅ[ಯಿ*]ಮ ಹಾನೆ ಕೊಳದ ಕೊಡಗೆ ಯಿಪೊತ್ತು ಹಾನೆ ಉಭಯಂ ಯೆರಡು
೭೧. ಕೊಡಗೆ ಕಟ್ಟಿದ ಗೇಣ ಭತ್ತ ಮೂಡೆ ಸಂಬ್ಯಾರ ತೆಱತೆಗದು ಹತ್ತು ಯಿ ಭತ್ತಕೆ ನಂಮಿಬರ ಹೆಸರಲ್ಲಿ ಹಾಲಧಾರೆಗೆ ಬಿಟ್ಟ ಧರ್ಮ್ಮ
೭೨. ಸಾಧನ || ||ಕಾಯಿಕಣಿ ಬಸ್ತಿಯ ಶ್ರೀಪಾರಿಸ್ವನಾಥ ದೇವರ ಪಾದಮೂಲದಲ್ಲಿ ನೆಡವ ಹಾಲಧಾರೆಗೆ ಮಂ[ಜು]ನಾಯ್ಕನ ಮ –
೭೩. ಗ ನಾಗರಸ ನಾಯ್ಕನು ನಂನ ಹೆಸರ ಹಾಲಧಾರೆಗೆ ಬಿಟ್ಟ ಬಾಳ. ವನನೂ [ಮೂ]ಲವಾಗಿ ಅಳುತ್ತಂ ಯಿದ್ದ ಹೊಸ ಮಟದೊಳ –
೭೪. ಗೆ ಭಾಣಗದ್ದೆ ನೆಲ್ಲಿಗದ್ದೆ ಸಹ ಉಭಯಂ ನಾಲ್ವತ್ತು ಹಾ ಸೆಟಿ ಯೆರಡು ಮೂಡೆ ಗದ್ದೆಗೆ ಕಟ್ಟಿದ ಗೇಣಿಯ ಭತ್ತ ಮೂಡೆ ಸಂಬ್ಯಾ –
೭೫. ರ ಹಂನೆರಡು ಯಿ ಹಂನೆರಡು ಮೂಡೆ ಭತ್ತರ ನಂನ ಹೆಸರಲಿ ನಿತ್ಯ ವಂದು ಹೊತ್ತು ವಂದು ಸಿದ್ದೆ ತಂಬಹಾಲು.o ನಂನ ಹೆಸ –
೭೬. ರಲ್ಲಿ ಅಚಂದ್ರಾರ್ಕಸ್ಥಾಯಿಯಾಗಿ ಹಾಲಧಾರೆಗೆ ಬಿಟ್ಟ ಧರ್ಮ್ಯ ಸಾಧನ || ||ಶ್ರೀ ಪಾರಿಸ್ವನಾಥ ದೇವರ ಧರ್ಮ್ಮಕೆ ಸಣಿನಾಯ್ಕರ ಮ –
೭೭. ಗ ದಂಡುವಳಿಯ ಸಾತುಸೆಟ್ಟಿಯ ಆಹಾರದಾನಕ್ಕೆ ಬಿಟ್ಟ ಬಾಳು ಯೆಂಣಿ ಬಾಳೊಳಗೆ ನಾಲ್ವತ್ತು ಹಾನೆ ಗಟ್ಟಿದ ಯೆಂಟು ಮೂಡೆ
೭೮. ಗದ್ದೆಗೆ ಕಟ್ಟಿದ ಗೇಣಿಯ ಭತ್ತ ಮು ಸಂಬ್ಯಾರ ಮೂವತ್ತು ಯಿ ಮೂಡೆ ಭತ್ತವ ಆಚಂದ್ರಾರ್ಕಸ್ಥಾಯಿಯಾಗಿ ಆಹಾರದಾನಕೆ ಬಿಟ್ಟ ಧರ್ಮ್ಮ
೭೯. ಸಾದನ | ಪ್ರಾಕು ಬಿಟ್ಟ ಹೊಂನ ಬಳಿಯೆ ಬಾಳಿಕ ಹೆಗ್ಗಡಿತಿಯ ತಂನ ಹೆಸರಲ್ಲಿ ಸಿದ್ಧ ಪೂಜೆಗೆ ಬಿಟ್ಟ ಹಳು ಅಱಹೊಳೆಯ ಹತ್ರೆ ಅ
೮೦. ಳಕವಳಿ ಕೊಡಗೆ ದೋಱು ಸಹ ಗದೆ ಮೂ ಚಿಂನ ಕಲ್ಲಮಕ್ಕಿ ಸಹ ಮಱು ಮೂಡಿಗದೆ [ ]ಗೆ ಕ[ಟ್ಟಿ]ದ ಗೇಣಿಯ ಭತ್ತ ಮೂಡೆ ಸಂಬ್ಯಾರ ಹ
೮೧. ದಿನಾಱು ಯಿ ಹ [ದಿ*] ನಾಱು ಮೂಡೆ ಭತ್ತಕ್ಕೆ ಆಚಂದ್ರಾರ್ಕಸ್ಥಾಯಿಯಾಗಿ ಸಿದ್ಧರ ಪೂಜೆಗೆ ಬಿಟ್ಟ ಧಮ್ಮ ಸಾಧನ | ಪಾಕು ಸಾತುಸೆಟ್ಟಿಯು ಹರಿಯ –
೮೨. ಣ ಸೇನಬೋವನ ಕೈಯಲಿ ಆರುವಾರವ ಮಾಡಿಕೊಡ್ಡ ಸಿದ್ಧನ ಹಿತ್ತಿಲು ಮಾಳನೆ ಹಿತ್ತಿಲಿಗೆ ಕಟ್ಟಿದ ಗೇಣಿ ಹ ಬೆಳಿಯ ಯಿಪೊತ್ತ ನಾ
೮೩. ಲ್ಕು ಹಣವನೂ ತಮ್ಮ ಹೆಸರ ಹಾಲಧಾರೆಗೆ ಬಿಟ್ಟರು ಮತ್ತಂ ಅದಕ್ಕೆ [ಬಂದಬಂಕನಟ್ಟೆಡಿ] ಅಯಿ[ವ*] ತ್ತು ಹಾನೆ ಗಡೆಗೆ ಕಟ್ಟಿದ ಗೇಣಿ
೮೪. ಯ ಭತ್ತ ಮೂಡೆ ಹಂನೆರಡು ಯೀ ಭತ್ತವನು ಹಣವನು ಆಚಂದ್ರಾರ್ಕಸ್ಥಾ [oಬ]ಯಾಗಿ ಧಮ್ಮಕೆ ಬಿಟ್ಟ ಧರ್ಮ್ಮ ಸಾದನ ಶ್ರೀ
೧೮. ಸ್ಥಳ : ಗ್ರಾಮದ ರಸ್ತೆ ಬದಿಯಲ್ಲಿ ನೆಟ್ಟಿರುವ ಕಲ್ಲು ಶಾಸನ – ತ್ರಾಸಿ, ಉಡುಪಿ ಜಿಲ್ಲೆ.
ರಾಜವಂಶ – ರಾಜ : ಹಾಡುವಳ್ಳಿಯ ಸಾಳುವರು – ಹೊನ್ನಾದೇವಿ
ತೇದಿ : “ಶಾಲಿವಾಹನ ಶಕವರುಷ ೧೪೬೮, ವರ್ತಮಾನ ಪರಾಭವ ಸಂವತ್ಸರದ ಕಾರ್ತಿಕ ಬ.೧ವಡವಾರ”. ಇದು ಕ್ರಿ.ಶ. ೧೫೪೬ ನವೆಂಬರ್ ೮ಕ್ಕೆ ಸರಿಹೊಂದುತ್ತದೆ.
ಭಾಷೆ ಲಿಪಿ : ಕನ್ನಡ
ಪ್ರಕಟಣೆ :
೧. ಎ.ರಿ.ಇ.ಎ. ೧೯೩೦ – ೩೫ ಶಾ ಸಂ. ೩೬೩
೨. ಸೌ.ಇ.ಇ.ಸಂ. XV II, ನಂ. ೪೧೭
೩. ನರಸಿಂಹಮೂರ್ತಿ ಪಿ.ಎನ್., ೨೦೦೭, ಶಾ ಸಂ. ೫೫.
ಶಾಸನವು ಬಹಳ ತ್ರುಟಿತವಾಗಿದೆ. ವಿವರ ಅಸ್ಪಷ್ಟ. ಶಾಸನದಲ್ಲಿ ‘ಹಾಯಿದು ಹಾಯಿಕಿಸಿಕೊಂಡು’ ಎಂಬ ವಿಷಯವಿದ್ದು ಯಾರೋ ಒಬ್ಬ ವೀರನು ತನ್ನ ಪ್ರಾಣವನ್ನು ತೆತ್ತ ವಿಷಯವಿದೆ. ಶಾಸನದ ಕೊನೆಯಲ್ಲಿ ಕಿರಿತಾಯಿ ಬಸವನಾಯಕಿತಿಯು ಹಾಕಿಸಿದ ವೀರಕಲ್ಲು ಎಂದು ಉಲ್ಲೇಖಿಸಿದೆ. ಹಾಡುವಳ್ಳಿ ರಾಣಿ ಹೊನ್ನಾದೇವಿ ಮತ್ತು ಸಂಕರದೇವಿ ಅಂಮನವರ ಬಂಡಾರದ ಪ್ರಸ್ತಾಪವಿದೆ.
ಶಾಸನ ಪಾಠ
ಒಂದನೆಯ ಪಟ್ಟಿ
೧. . . . . . . . ಶಾಲಿವಾಹನದ ಶಕವರುಷ ೧೪೬೮ ಸಂದು ವರ್ತಮಾನ ಪರಾಭವ ಸಂವತ್ಸ –
೨. ರದ ಕಾರ್ತಿಕ ಬ ೧ ವರವಾರದಲು ಹಾಡುವಳಿಯ ಮನ್ನೆಯ ಅರಸರಾದ ಹೊಂನಾದೇವಿ ಅಂಮನ
ಎರಡನೆಯ ಪಟ್ಟಿ
೩. . . . . . . . . . . . . . . .
೪. . . . . . .ಯರಾದ ಸಂಕರ ದೇವಿ ಅಂಮನವರ ಭಂಡಾರ. .
ಮೂರನೆಯ ಪಟ್ಟಿ
೫. . . ಬಳಿಯ ಅರಮ. ಅಳುವರಸರೆಂದು. . . . . . .
೬. . . .ಅಳುವ(ಯಿಂದ)ಕಾಲದಿ. ಹಾಯಿದು ಹಾಯಿಕಿಸಿಕೊಂಡು. . ಮನದಣಿಯ
ನಾಲ್ಕನೆಯ ಪಟ್ಟಿ
೭. . . ಚಿಕ ಅರಮನೆಯ ಆ . . . . . . ಕಿರಿತಾಯಿ ಬಸವನಾಯಕಿತಿ ಹಾಕಿಸಿದ ವೀರ ಕಲ್ವು
೧೯. ಸ್ಥಳ : ಪೇಟೆಯಲ್ಲಿಯ ಅಂಬಾಲಕಟ್ಟೆಯಲ್ಲಿ ಮೂಢಭಟ್ಕಳ – ಭಟ್ಕಳ, ಉತ್ತರಕನ್ನಡ ಜಿಲ್ಲೆ
ರಾಜವಂಶ – ರಾಜ : ಹಾಡುವಳ್ಳಿ ಸಾಳುವರು – ಚೆನ್ನಾದೇವಿ
ತೇದಿ : ಶಕವರ್ಷ ೧೪೭೩ನೆಯ ಸಾದಾರಣ ಸಂವತ್ಸರ ಆಷಾಡ ಬ ೧ ಶಲು ಎಂದಿದ್ದು ಇದು ಕ್ರಿ.ಶ. ೧೫೫೦, ಜೂನ್ ೧೯ ಅದಿತ್ಯವಾರವಾಗುವುದು
೨.ಸಾಲಿವಾಹ ಸಕ ವರುಷ ೧೪೫೫ ನಂದನ ಸಂವತ್ಸರದ ಜ್ಯೇಷ್ಠ ಸು. ೧೩ದಲೂ ಇದು ಕ್ರಿ.ಶ. ೧೫೩೨, ಮೇ ೧೭ಕ್ಕೆ ಸರಿ ಹೊಂದುವುದು.
೩. ‘ಸಕವರುಷ ೧೪೬೮ನೆಯ ವಿಸ್ವಾವಸು ಸಂವತ್ಸರದ ಶ್ರಾವಣ ಶು. ೧೦ ಲ್ಲು’ ಇದು ಕ್ರಿ.ಶ. ೧೫೪೫, ಜುಲೈ ೧೯ಕ್ಕೆ ಸರಿ ಹೊಂದುವುದು.
೪. ‘ಜಯಾಭ್ಯುದಯ ಶಾಲಿವಾಹನ ಶಕ ವರುಷ ೧೪೩೪ನೆಯ ಪ್ರಜೋತ್ಪತ್ತಿ ಸಂವತ್ಸರದ ಭಾದ್ರಪದ ಶುದ್ಧ ೧. . . .” ಇದು ಕ್ರಿ.ಶ. ೧೫೧೧, ಸೆಪ್ಟೆಂಬರ್ ೨ಕ್ಕೆ ಸರಿ ಹೊಂದುವುದು.
ಭಾಷೆ ಲಿಪಿ : ಕನ್ನಡ
ಪ್ರಕಟಣೆ : ಕ.ಇ. |, ೧೯೩೯ – ೪೦ ಶಾ ಸಂ. ೭೮.
ಈ ಶಾಸನ ಮಹಾಮಂಡಲೇಶ್ವರ ಚೆನ್ನಾದೇವಿಯವರ ಕಾಲಕ್ಕೆ ಸೇರಿದುದಾಗಿದೆ. ಮಹಾಮಂಡಲೇಶ್ವರ ಜಾಜಿ ಗುರುರಾಯ ಒಡೆಯರ ರಾಣಿ ವೀರಾದೇವಿ ಅಜ್ಜಿಯಮ್ಮನವರು ಮೂಡಬಟ್ಟಕಳದಲ್ಲಿ ಕಟ್ಟಿಸಿದ ಚವ್ವೀಶ [ಇಪ್ಪತ್ತನಾಲ್ಕು] ತೀರ್ಥಂಕರರ ಬಸದಿಗೆ ಮೊದಲು ಕೊಟ್ಟಂತಹ ಭೂಮಿ ದಾನವನ್ನು ಮಹಾಮಂಡಲೇಶ್ವರ ಚಿನ್ನಾದೇವಿ ಅಮ್ಮನವರು ಮುಂದುವರಿಸಿದ್ದನ್ನು ಶಾಸನ ದಾಖಲಿಸಿದೆ. ಬೇರೆ ಬೇರೆ ಕಾಲದಲ್ಲಿ ರಾಣಿಯರು ಬಸದಿಗೆ ದೇವರ ಸೇವೆಗಾಗಿ ದಾನದ ನೀಡಿದಂತಹ ವಿಷಯವಿದೆ.
ಎರಡನೆಯ ದಾನದಲ್ಲಿ ಮಹಾಮಂಡಲೇಶ್ವರ ಸಂಗಿರಾಯ ಒಡೆಯರ ಕುಮಾರ ಗುರುರಾಯ ಒಡೆಯರು ಸಂಗೀತಪುರದಲ್ಲಿದ್ದುಕೊಂಡು ಬಟ್ಟಕಳ ಮೊದಲಾದ ರಾಜ್ಯವನ್ನಾಳುತ್ತಿರಲು ಎರಡರಲ್ಲಿ ಉಲ್ಲೇಖಿಸಿದ ದಿನದಂದು ಗುರುರಾಯ ಒಡೆಯರ ರಾಣಿ ವೀರಾದೇವಿ ಅಮ್ಮನವರಿಗೆ ಇಂದು ಗುಣ ಅಧಿಕಾರ ಮತ್ತು ನಾಗರಿಸಿಯ ಮಕ್ಕಳಾದ ದೇವಪ್ಪಜೋಗಿ ಮತ್ತು ಸಂಣದೇವಪ್ಪನವರು ಕೊಟ್ಟಂತಹ ಮೂಲಧನದ ಕ್ರಮವನ್ನು ತಿಳಿಸಲಾಗಿದೆ.(ವೀರಾದೇವಿ ಅಮ್ಮನವರಿಂದ ೪೫೦ ವರಹಗಳನ್ನು ತೆಗೆದುಕೊಂಡು, ಇಂದಗುಣ ಅಧಿಕಾರಿಯ ಪತ್ನಿ ನಾಗರಸಿಯ ಮಕ್ಕಳು ದೇವಪ್ಪ, ಜೋಗಿ ಮತ್ತು ಸಣ್ಣದೇವಪ್ಪ ನಿಚ್ಚಳಮಕ್ಕಿಯ ತುಂಡು ಭೂಮಿಯ ಮೇರೆಯನ್ನು ಇಲ್ಲಿ ಗುರುತಿಸಲಾಗಿದೆ. ಚೆನ್ನವೊಡೆಯ, ಇಂದಪ್ಪ ವೊಡೆಯ, ಚಿಕ್ಕವೊಡೆಯ ದಾನಿಗಳೆಂದು ಶಾಸನ ದಾಖಲಿಸಿದೆ. ಜೋಗಣ ಸೇನಭೋವನ ಮಗ ದೇವಳಪ್ಪ ಸೇನಭೋವ ೧೧ ೧/೨ ವರಹಗಳನ್ನು ಹಾಲುಧಾರೆಗಾಗಿ ವೀರದೇವಿ ಅಮ್ಮನ ಹೆಸರಿನಲ್ಲಿ ದಾನ ಮಾಡಿದ್ದನ್ನು, ಬಸದಿಯ ಯತಿಗಳ ಆಹಾರಕ್ಕಾಗಿ ೧೦ ಮುಡಿ ಅಕ್ಕಿಯನ್ನು ದಾನವಾಗಿ ನೀಡಿದ್ದನ್ನು ಶಾಸನ ದಾಖಲಿಸಿದೆ.
Leave A Comment