ಶಾಸನ ಪಾಠ

೧. ಶ್ರೀಮತ್ಪರಮಗಂಭೀರಸ್ಯಾದ್ವಾದಾಮೋಘ ಲಾಂಛನಂ ಜೀಯಾತ್ರೈಲೋಕ್ಯನಾಥಸ್ಯ ಶಾಸನ ಜಿನಸಾಸನಂ

೨. ನಮಸ್ತುಂಗ ಸಿರಶ್ಚುಂಬಿ ಚಂದ್ರ ಚಾಮರ ಚಾರವೇ ತ್ರೌಲೋಕ್ಯ ನಗರಾಂಭ ಮೂಲಸ್ತಂಭಾಯ ಶಂಭವೇ ಸ್ವಸ್ತಿ ಜಯಾಭ್ಯುದಯ ಶಾ

೩. ಲಿವಾಹನ ಶಕವರ್ಷ ೧೪೭೩ನೆಯ ಸಾದಾರಣ ಸಂವತ್ಸರ ಆಷಾಢ ಬ ೧ ಶ ಲು ಶ್ರೀ ಮನ್ಮಹಾ ಮಂಡಲೇಶ್ವರ ನಂಮ್ಮ ಜಾಜಿ ಗುರುರಾಯ

೪. ವೊಡೆಯರ ರಾಣಿವಾಸ ವೀರಾದೇವಿ ಅಜ್ಜಿಯಂಮ ಮೂಡಬಟ್ಟಕಳದಲ್ಲಿ ಕಟ್ಟಿಸಿದ ಬಸ್ತಿಯ ಚೋವೀಶ ತೀರ್ತಕರ ದಿವ್ಯ ಶ್ರೀಪಾದ ಪದ್ಮಂಗ

೫. ಳಿಗೆ ಶ್ರೀಮನ್ಮಮಾ ಮಂಡಲೇಶ್ವರ ಚೆಂನ್ನಾದೇವಿಯಂಮನವರು ಸಾಷ್ಟಾಂಗ ವೆಱಗಿ ಪೊಡವಟ್ಟು ಕೊಟ್ಟ ಧರ್ಮಸಾಧನದ ಭಾಷಾಕ್ರಮ

೬. ವೆಂತೆಂದರೆ ಮೂಡಬಟ್ಟಕಳದಲ್ಲಿ ನಂಮ್ಮರಮನೆಯ ಬಂದ ಹಿತ್ತಿಲಗದ್ದೆ ಅದಕ್ಕೆ ಬಂದ ಮೆಕ್ಕ ಮಕ್ಕಿ ಮುಂತಾದ ಸ್ಥಳದೊ –

೭. ಳಗೆ ನಂಮ ಅಜ್ಜಿಯಂಮ ವೀರಾದೇವಿ ಅಂಮನವರು ಧರ್ಮಸಾನಿಧ್ಯದಲ್ಲಿ ಅಚಂದ್ರರ್ಕ್ಯವಾಗಿ ನಡೆಸುವ ಧರ್ಮ್ಮಕ್ಕೆ ಕುಳವ ಕಡಿದು ಮೂಲವಾಗಿ ನಾ [ಉ]

೮. ಕೊಟ್ಟ ಸಾಧನ ಪ್ರಮಾಣಿನ ಸುಗ್ಗಿ ಮಕ್ಕಿಯ ಸರ್ವಸ್ವ ಅದಕ್ಕೆ ಸೀಮೆ ಸಾಮ್ಯ ಮುಂತಾದವನುಳಿದು ಮೇಂಟಿ ಆ ಹಿತ್ತಲ ಗದ್ದೆಗಳಿಗೆ ಬಂದ ನಂ –

೯. ಮ ಹರವರಿಯ ನಾಲ್ಕು ಮೂಡೆ ಸುಗ್ಗಿಯ ಸ್ಥಳವನು ಸ್ವಾಮಿಯಲ್ಲಿ ನಂಮ [ಹೆಸರಲ್ಲಿ] ನಿತ್ಯದಲಿ ನಡಸುವ ಪಂಚಾಮೃತದ ಧರ್ಮ್ಮಕೆ

೧೦. ಬಿಡು ದೇವಸ್ವವಾಗಿ ಕುಳವ ಕಡಿದು ಬಿಟ್ಟಿವಾಗಿ ಆ ಹಿತ್ತಲ ಗದ್ದೆಯೊಳಗನ ಹಾ ೬೦ ಸುಗ್ಗಿಯ ಗದ್ದೆಗಳಿಗೆ ಗಡಿ ಮೂಡಲು ದೇವಪ್ಪ ಜೋ –

೧೧. ಯಿಸರ ದೇವಾಲ್ಯದ ಧರ್ಮಸ್ಥಳದ ಹಾಳಿಯಂಚಿನಲ್ಲಿ ಅವರು ನೆಟ್ಟ ಲಿಂಗಮುದ್ರೆಯ ಕಲ್ಲು ಗಡಿ ಅದು ಬಂದ ಹಾಂಗೆ ತೆಂ –

೧೨. ಲು ಹರಿದ ಹೊಳೆಗಡಿ ಪಡವಲು ಹರವರಿಯ ಗದ್ದೆಯಂ[ಚಿ]ನಲ್ಲಿಕ್ಕಿರ್ದ್ದ ಮುಗ್ಗೊಡೆ ಕಲ್ಲು ಗಡಿ | ಬಡಗಲು ಸುಗ್ಗಿಯ ಗದ್ದೆಗಳಿಗೆ ನೀ –

೧೩. ರು ಹರಿವ ತೋಡಿನ ಅಂಚಿನಲ್ಲಿ ನೆಟ್ಟ ಮುಕ್ಕೊಡೆ ಕಲ್ಲುಗಡಿ | ಇಂತೀ ನಾಲ್ಕು ಗಡಿ ಇಂದೊಳಗುಳ್ಳ [ಸು]ಗಿ ನಾಲ್ವಂದ ಮೂ ೧ ಅದಕ್ಕೆ ಬಂ –

೧೪. ದ ನೀರು ದಾರಿ | ಮತ್ತಂ ಮೂಡಬಟ್ಟಕಳದ ಬಯಲೊಳ್‌ನ ಸುಗ್ಗಿ ಗದ್ದೆ ೩ ಕ್ಕಿ ಗಡಿ ಮೂಡಲು ಸುಗ್ಗಿಗೆ ನೀರು ಹರಿವ ತೋಡಿನ ಅಂಚಿನ

೧೫. ಲ್ಲಿ ನಟ್ಟ ಮುಕ್ಕೊಡೆ ಕಲ್ಲುಗಡಿ ಅದು ಬಂದ ಹಾಂಗೆ ಪಡವಲು ಹರಿವರಿಯ ಗದೆಯಂಚಿನಲ್ಲಿ ನಟ್ಟ ಮುಕ್ಕೊಡೆ ಕಲ್ಲುಗಡಿ |

೧೬. ಅಂಚಿನಲ್ಲಿ ನಟ್ಟ ಮುಕ್ಕೊಡೆ ಕಲ್ಲುಗಡಿ ಅದು ಬಂದ ಹಾಂಗೆ ಪಡವಲು ಹರಿವರಿಯ ಗದೆಯಂಚಿನಲ್ಲಿ ನಟ್ಟ ಮುಕ್ಕೊಡೆ ಕಲ್ಲುಗಡಿ |

೧೭. ಬಡಗಲು ಹರವರಿಯ ಗದೆಯಂಚಿನಲ್ಲಿ ನಟ್ಟಮುಕ್ಕೊಡೆ ಕಲ್ಲು ಗಡಿ ಇಂತೀ ನಾಲ್ಕು ಗಡಿ ಇಂದೊಳಗುಳ್ಳ ಸುಗಿ ಮೂ ೨ ಗದ್ದೆ

೧೮. ಅದಕ್ಕೆ ಬಂದ ನೀರುದಾರಿ ಸಹ ಉಭಯಂ ನಾಲ್ವಂದ ನಾಲ್ಕು ಮುಡಿಗದ್ದೆ ಅದಕ್ಕೆ ಬಂದ ಸೀಮೆ ಸಾಮ್ಯ ನೀರುದಾರಿ ನಿಧಿ –

೧೯. ನಿಕ್ಷೇಪ ಜಲ ಪಾಷಾಣ ಅಕ್ಷೀಣಿ ಅಗಾಮೀಣಿ ಸಿದ್ಧ ಸಾಧ್ಯ ಇಂತೀ ಅಷ್ಟಭೋಗ ಸಮನ್ವಿತವಾದ ಈ ಸಾಸನಾಂಕಿತವಾದ ವೃತ್ತಿಯನು

೨೦. ಸ್ವಾಮಿಯಲ್ಲಿ ನಂಮ್ಮ ಹೆಸರಲು ಅಚಂದ್ರಾರ್ಕವಾಗಿ ನಡಸುವ ಪಂಚಾಮೃತದ ಧರ್ಮಕ್ಕೆ ಬಿಡುದೇವಸ್ವವಾಗಿ ಶಾಶನಾಂಕಿತ

೨೧. ವಾಗಿ ಹಿರಣ್ಯೋದಕ ಧಾರಾಪೂರ್ವಕವಾಗಿ ಅಚಂದ್ರಾರ್ಕಸ್ಥಾಯಿಯಾಗಿ [ಬಿಟ್ಟಿ] ಉ ಇಂತೀ ಸಾಧನಸ್ತವಾದ ಸುಗ್ಗಿ ನಾಲ್ಕು ಮೂ –

೨೨. ಡೆ ಗದ್ದೆಗೆ ಸಲುವ ಗೇಣಿಯ ಭತ್ತವಮಿ ದೇವರ ಬಸ್ತಿಯ ಇಂದ್ರನ ಮುಖಾಂತ್ರದಲಿ ದೇವರ [ಹೆ]ಸರ[ಬಿದು] ಪ್ರಮಾಣಿಗೆ ಗೇ –

೨೩. ಣಿಯ ಭತ್ತವನು ಕಾಲಕಾಲಂ ಪ್ರತಿಯಲು ಆ ಇಂದ್ರ ತಾನೆ ಯೆತ್ತಿಕೊಂಡು ದೇವರಲ್ಲಿ ನಂಮ ಹೆಸರಲ್ಲಿ ನಡೆಸುವ ಪಂಚಾ –

೨೪. ಮೃತದ ಧರ್ಮವನು ಭಾಸಾತಿರಿಕ್ತ ಇಲ್ಲದೆ ಆ ಚಂದ್ರಾರ್ಕ ಸ್ಥಾಯಿಯಾಗಿ ಸಾಂಗವಾಗಿ ನಡಸಿ ಬಹನು ಯೀ ಸ್ಥಳಕ್ಕೆ ಆಕರ ಅನ್ಯಾ –

೨೫. ಯ ಕಾಣಿಕೆ ಖಡ್ಡಾಯ ಬಿಟ್ಟಿ ಬಿರಾಡ ಮುಂತಾಱು. . ಬಾತ್ತರಂಗಳು ಇಲ್ಲದೆ ಸರ್ವ್ವ ಮಾನ್ಯಸ್ಥಳವಾಗಿ ದೇವರ ಬಸ್ತಿಯ

೨೬. ಇಂದ್ರ ತಾನೆ ನೋಡಿಕೊಂಡು ಸಾಂಗವಾಗಿ ನಡಸಿಬಹನುಯೆಂದು ಚವೀಶ ತೀರ್ತ್ಥಕರ ದಿವ್ಯ ಶ್ರೀಪಾದ ಪದ್ಮಂಗಳಿಗೆ ಚೆಂನ್ನಾದೇವಿ

೨೭. ಅಂಮನವರು ಪೊಡೆಮಟ್ಟು ಕೊಟ್ಟ ಧರ್ಮ ಸಾಧನ ಶುಭಮಸ್ತು | ಈ ಸ್ಥಳಕ್ಕೆ ಕಟ್ಟಿದ ಗೇಣಿ ವರುಷ ೧ಕ್ಕೆ ಭತ್ಯ ಸಂಮೂ

೨೮. ಅಕ್ಷರದಲು ಅಱುವತ್ತು ಮೂಡೆ ಭತ್ತ ಇದಕ್ಕೆ ನಡಸುವ ಧರ್ಮ್ಮ ಚೆಂನ್ನಾದೇವಿ ಅಂಮನವರ ಹೆಸರ ರಾತ್ರಿಯ ಪಂಚಾಮ್ರಿ

೨೯. ತದ ಧರ್ಮಕ್ಕೆ ಅಱವತ್ತು ಮೂಡೆ ಭತ್ತ || ವ್ರಿ || ಸ್ವಸ್ತಿಶ್ರೀಮನ್ಮಹಾಮಂಡಲೇಶ್ವರ ಸಂಗಿರಾಯ ವೊಡೆಯರ ವರ ಕುಮಾರ

೩೦. ರ ಗುರರಾಯ ವೊಡೆಯರು ಸಂಗೀತ ಪುರುವರಾಧಿಷ್ಠಿತರಾಗಿ ಬಟ್ಟಕಳ ಮುಂತಾದ ಸಮಸ್ತ ರಾಜ್ಯವನು ಸದ್ಧರ್ಮಕಥಾ ಪ್ರಸಂಗ –

೩೧. ದಿಂ ಪ್ರತಿಪಾಲಿಸುತ್ತಿದಂದಿನ ಸಾಲಿವಾಹನ ಸಕವರುಷ ೧೪೫೫ ನಂದನ ಸಂವತ್ಸರದ ಜ್ಯೇಷ್ಟ ಸು. ೧೩ಲೂ ಶ್ರೀಮನ್ಮಾಹಾ ಮಂ

೩೨. ಡಲೇಶ್ವರ ಗುರುರಾಯ ವೊಡೆಯರ ರಾಣಿವಾಸ ವೀರಾದೇವಿ ಅಂಮನವರ ದಿವ್ಯ ಶ್ರೀಪಾದ ಪದ್ಮಂಗಳಿಗೆ ಇಂದಗುಣ ಅಧಿ –

೩೩. ಕಾರಿಯ ಮದವಳಿಗೆ ನಾಗರಿಸಿ ಆಕೆಯ ಮಕ್ಕಳು ದೇವಪ್ಪ ಜೋಗಿ ಸಂಣದೇವಪ್ಪನವರು ಪೊಡವಂಟ್ಟು ಕೊಟ್ಟ ಮೂಲ ಸಾಧ –

೩೪. ನದ ಭಾಷಾಕ್ರಮವೆಂತೆಂದರೆ ಬಟ್ಟಕಳದೊಳಗೆ ನಾಉ ಮೂಲವಾಗಿ ಅಳುತ್ತಂ ಇದ್ದ ನಿಚ್ಚಳ ಮಕ್ಕಿಯ ಮನೆ ಹುಳು ಕಂಚಿ

೩೫. ಯ ಸ್ಥಳ ಆ ಭಂದಸಾಲೆ ಮೂಂತ್ತಾದವರಿಗೆ ನಿಚ್ಚಳ ಮಕ್ಕಿಯ ಮನೆಗೆ ಗಡಿ ಮೂಡಲು ಉದಕ ಹರಿವ [ಣಿ] ಸಾಲುಗಡಿ ತೆಂಕಲು

೩೬. ಚೆಂನ್ನಮಲ್ಲಿಸೆಟ್ಟಿಯು ಕಟ್ಟಿದ ಮನೆಯ ಕೂ. . ಗಡಿ | ಪಡುವಲು ನಡವ ರಾಜಬೀದಿ ಗಡಿ ಬಡಗಲು ಸಂಗರಸಧಿಕಾರಿಯ [ಮ.]

೩೭. ನೆಯ ಮಾರ್ಗ್ಗ . ಗಡಿ ಇಂತೀ ನಾಲ್ಕು ಗಡಿಯಿಂದೊಳಗುಳ ಮನೆ ಮಾಳಿಗೆ ಅದಕೆ ಬಂದ ಸೀಮೆ ಸಾಮ್ಯ ಮತ್ತಂ ಯುಳು ಕಂಚೆ

೩೮. ಯ ಸರ್ವಸ್ವ ಅ ಕಜ್ಜದ ಆಯಿದು ಭಂದಸಾಲೆ ತೆಂಗಿನ ಹಿತ್ತಿಲು ಗಡಿ ಗದೆಗೆ ಗಡಿ ಮೂಡಲು ನಾಗುನಾಯಕನು ಹಿ –

೩೯. ತ್ತಿಲ ಅಂಚು ಗಡಿ ತೆಂಕಲು ಜೋಸಗೆ ಪಸಲಾರ ಹಂಮನ ಮನೆಯ ಬಾಗಿಲ ಗಡಿ ಆ ಬಂದ ಹಾಂಗೆ ಪಡುವಲ ಹಾ –

೪೦. ಳೆ ಗಡಿ ಬಡಗಲು ಆ ಕಂಠ ಬಂದ ಹಾಂಗೆ ಬಾಲಗೆದ್ದೆವೊಳಗಿನ ಸಂಗುಬಾಳನ ಗದ್ದೆ ಹಿತ್ತಿಲದರೆ ಗಡಿ ಆ ಬಂದ ಹಾಂ –

೪೧. ಗೆ ಬೊಂಮಣ ಸೆಟ್ಟಿಯ ಹಿತ್ತಿಲು ಕೆಂಚನಾಯಕನ ಗದ್ದೆಯ ಅವಳಿಗಡಿ ಯಿಂತೀ ನಾಲ್ಕು ಗಡಿ ಇಂದೊಳಗುಳ ಅಇದು

೪೨. [ಬಂದ] ಸಾಲೆ ಆ ಕಂಠದ ತೆಂಗಿನ ಹಿತ್ತಲು ಗಡಿ ನಡುಭಾಗಕ್ಕೆ ಕೊಟ್ಟ ಸೇಸಿಯ ಹಿತ್ತಿಲು ಅದಕ್ಕೆ ಬಂದ ಮನೆ ಮನೆ ಈ ಠಾ –

೪೩. ಣ. . ಮರ ಫಲ ನೀರುದಾರಿ ಸ[ದಾ]ರಿ ಗೋಡು ಸರ್ವಸೀಮೆ ಸಾಮ್ಯ ಇಂತಿವೆಲ್ಲವ ಮೂಲ ಹಡವ ಅರ್ತ್ಥದಿಂ

೪೪. ಅಧಿಕವಾದ ಅರ್ತ್ಥವಳಗೆಯ ಹರಿಯ ನಿಜವರಹ ಗ ೮೫೦ ಅಕ್ಷರದಲೂ ಎಂಟುನೂಱ ಅಇವತ್ತು ವರಹ –

೪೫. ನುಅರ್ತ್ಥ ಪರಿಛೇದ್ಯವಾಗಿ ಸಲಿಸಿಕೊಂಡು ಮೂಲ ಪರಿಛೇದ್ಯಧಾ[ಪೂ]ರ್ವಕ ಆ ಚಂದ್ರಾರ್ಕ ಸ್ಥಾಯಿಯಾ

೪೬. ಗಿ ಮೂಲಧಾರೆನೆಱದು ಕೊಟ್ಟರು ನಾಗರಸಿ ಆ ಮಕ್ಕಳು ದೇವಪ್ಪಜೋಗಿ ಸಂಗೋದೇವಪ್ಪನರು ಇಂತಿ ಸತ್ರಸ್ಥವಾದ

೪೭. ನಿಬ್ಬಳ ಮಕ್ಕಿಯ ಮಾಳಿಗೆಯ ಮನೆಗ ಅದಕ್ಕೆ ಬಂದ ಸೀಮೆ ಸಾಮ್ಯ ಹುಳುಕಂಚಿಯ ಸ್ಥಳ ಕಟ್ಟಿದ ಅಇದು ಖಂಡ ನಾ –

೪೮. ಲೆ ತೆಂಗಿನ ಹಿತ್ತಿಲು ಸುಗ್ಗಿಯ ಗದ್ದೆ ನಡುವಾದ. ತೆಂಗಿನ ಹಿತ್ತಿಲು ಮುಂತ್ತಾದ ಸರ್ವಸೀಮೆ ಸಾಮ್ಯ ಇಂತಿವೆಲ್ಲ –

೪೯. ವನು ವೀರಾದೇವಿ ಅಂಮ್ಮನವರು ನಾಗರಸಿ ಆ ಮಕ್ಕಳು ದೇವಪ್ಪಜೋಗಿ. . . ಕೈಯಲಿ ಮೂಲ ಪರಿಛೇದ್ಯವಾಗಿ ಕೊಂಡು ಆರ್ತ್ಥ

೫೦. ಪರಿಛೇದ್ಯ ಕೊಟ್ಟ ಧಾರಾಪೂರ್ವಕ ಆ ಚಂದ್ರಾರ್ಕಸ್ಥಾಯಿಯಾಗಿ ಮೂಲ ಧಾರೆಯು ನೆಱದುಕೊಂಡರು ಈ ಸ್ಥಳ –

೫೧. ಕ್ಕೆ ಪೂರ್ವಪ್ರಮಾಣಿನ ಮೂಲದೆಱನು ಇಛಾನುರೂಪದಿಂ ಸುಂಭೋಗಿಸಿ ಬಹಿರಿಯೆಂದು ವೀರಾದೇವಿ ಅಂ –

೫೨. ಮನವರ ಶ್ರೀಪಾದಕ್ಕೆ ನಾಗರಸಿ ದೇವಪ್ಪಜೋಗಿ ಸಂಗೋದೇವಪ್ಪನವರು ತಂಮ ಸತಿ ಸುತದಾಯಾದ್ಯರ ಸಂಮತದಿಂ ಕೊಟ್ಟ

೫೩. ಮೂಲಸಾಧನ || ಯಿಂತಿ ಸಾಧನಸ್ಥವಾದ ಹು[ಳು]ಕಂಯಸ್ತದ ಆನಂದದ ತೆನ ಹಿತ್ತಿಲು ಸುಗ್ಗಿಯ ಗದ್ದೆ ನಡು

೫೪. ಬಾಳಕ್ಕೆ ಕೊಟ್ಟ ಸಸಿಯ ಹಿತ್ತಿಲು ತೆಱೆ ಮೂಲವಾಗಿ ಕಟ್ಟಿಕೊಟ್ಟ ತೆಂಗಿನ ಹಿತ್ತಿಲು ಮುಂತಾದವಕ್ಕೆ ಕಟಿದ ಗೇಣಿ ವರು –

೫೫. ಷ ೧ಕ್ಕೆ ಹಿರಿಯ ನಿಜವರಹ ೭೩ ಅಕ್ಷರದಲು ಎಪ್ಪತೂಮೂಱಣ ವಡ್ಡಲಕ್ಕಿ ನಾಲ್ವಂದ ಮೂ ೧೦ ಇದಕ್ಕೆ ನಡಸುವ ಧ –

೫೬. ರ್ಮ್ಮದ ವಿವರ ಅಕ್ಷತೆ ದಿನ ೧ಕ್ಕೆ ಸಿದ್ಧ. ಱ ಲೆಕ್ಕ ಅಕ್ಕಿ ಮೂ ೪ ಕ್ರಯ ವರಹ ೨ ೨ ಸಲಡ ಕ ಎಲೆಗಿದಿ ೧ ಕ್ಕೆ ದುಡು ೨ ಱ

೫೭. ರ ಲೆಕ್ಕ ವರಹ ೪ ಯೆಂಣೆ. ದೀ ೧ಕ್ಕೆ ಸಿದ್ದೆ ೮ಱ ಲೆಕ್ಕ ಹಾ ೧sಕ್ಕೆ ಕ್ರಯ ವರಹ ೯ ಗಂಧ ತಿಂಗಳು ೧ಕ್ಕೆ ಸಂದ ಲೆಕ್ಕದರ ೪

೫೮. ಕಾರ್ತಿಕಕ್ಕೆ ದಿನ ೩ಕ್ಕೆ ವರ ೧೨ ಅಷ್ಟಾಹಿ ೩ಕ್ಕೆ ವರಹ ೩ ಜೀವದಯಾಷ್ಟಮಿಗೆ ೧ ಶಿದ್ದೆ ರಾತ್ರಿಗೆ ಪ್ರತಾಪ ೧ ಶ್ರು –

೫೯. ತಪಂಚಮಿಗೆ ಪ್ರತಾಪ ೧ ಶ್ರಾವಣಕ್ಕೆ ಪ್ರತಾಪ ೧ ಚೆಂನ್ನವೊಡೆಯರ ಹೆಸರ ಶೋಡಸ ಭಾವನೆಯ ಪೂಜೆಗೆ ವರ ೩೨

೬೦. ಕಡೆಯ ಅಭಿಷೇಕಕ್ಕೆ ವರಹ ೫ ಅಂತು ನಿತ್ಯ ನೈಮಿತ್ಯಕಕ್ಕೆ ಅಕ್ಷತಿಗೆ ಸಹ ವರಹ ೭೦೩೧ ವೀರಾದೇವಿ ಅಂಮ್ಮನ ಹೆಸ –

೬೧. ರ ಹಾಲಧಾರೆಗೆ ವರಹ ೩೧ ಬಸವಂಮ್ಮನ ಹೆಸರ ಹಾಲಧಾರೆಗೆ ವರಹ೧೧ ಚಿಕ್ಕ ಇಂದಪ್ಪ ವೊಡೆಯರ ಹೆಸರ ಹಾ –

೬೨. ಲಧಾರೆ ದೇವರಸವೊಡೆಯರ ಹೆಸರ ಹಾಲಧಾರೆ ಚೆಂನ್ನಯ್ಯ ವೊಡೆಯರ ಹೆಸರ ಹಾಲಧಾರೆ ಚಿಕ ವೊ –

೬೩. ಡೆಯರ ಹೆಸರ ಹಾಲಧಾರೆ ಸಹ ನಾಲ್ಕಕ್ಕೆ ವರಹ ೬ ಅಂತೂ ತಂಮ ೭೦ ೩೧ ಅಕ್ಕಿ ಆಹಾರ ದಾನ –

೬೪. ಕ್ಕೆ ನಾಲ್ವಂದ ೧೩ ಮೂಡೆ ಈಸ್ಥಳದೊಳಗೆ ಜೋಗಣ ಸೇನಬೋವನ ಮಗ ದೇವಳಪ್ಪ ಸೇನಬೋವ –

೬೫. ರು ಮೂಲವಾಗಿ ಕೊಂಡ ನಡಿಗೆಯ ಹಿತ್ತಿಲಿಗೆ ಆತನ ವೊಪ್ಪನ ಇಲ್ಲಿಗೆ ಬಹ ವರಹ ೩ಕ್ಕೆ ಬೆಳಕಿಯ ವಿನಾಯ್ಕದೇವ –

೬೬. ರ ನಂದಾದೀವಿಗೆಯ ಧರ್ಮ್ಮಕ್ಕೆ ವೊಂದುವರೆ ವರಹನುಳಿದು ವೀರಾದೇವಿ ಅಂಮ್ಮನ ಹೆಸರ ಹಾಲಧಾರೆಗೆ ದವಳಪ್ಪ

೬೭. ಸೇನಬೋವ ಬಿಡು ದೇವಸ್ವವಾಗಿ ಬಿಟ್ಟ ವರಹ ೧ ಮತ್ತಂ ನಾರಣ ಗವಡನ ಮಮಗ ದೇವಪ್ಪನ ಬಳಿಯ ಕಂಠ –

೬೮. ದ ಹೈವಣ ವೈದ್ಯರ ಈ ಸ್ಥಳದೊಳಗೆ ತಾನು ನೆಟ್ಟ ನಟಿಗೆಯ ತಂನ ವೊಪ್ಪಸಲೊಳಗೆ ತನ್ನ ಹೆಸರ ಹಾಲಧಾರೆಗೆ

೬೯. ಬಿಟ್ಟ ವರಹ ೧ ಮತ್ತಂ ಹೈವಣ ವೈದ್ಯನು ಮುಂಡವಳಿಯ ಬಯಲೊಳಗೆ ತಾನು ಮೂಲಿವಾ –

೭೦. ಗಿ ಬದುಕುತ್ತಂ ಇದ್ದ ಸಾ. ಕ ೫೦ ಹಾನೆ ಗದ್ದೆಗೆ ಗಡಿ ಮೂಡಲು ಪಡುವ ಮಠದ ವೊಡೆಯರ ಧರ್ಮಸ್ಥಳದ

೭೧. ಕಂಠದ ಅಂಚು ಗಡಿ ತೆಂಕಲು ಮಾಹುನಾಯಕನ ಸಾಲುವ ನಾಯಕನ. . ಸೆ ಜಟಿ ಮಿಕ್ಕ ಅಳುತ್ತಂ ಇದರ

೭೨. ಸೆಟ್ಟಿಯ ಹಾಳೆ ಗಡಿ ಅದು ಬಂದ ಹಾಂಗೆ ಪಡುವಲು ಆ ಮಠ ಗದ್ದೆಯ ಹಾಳಿಗಡಿ ಬಡಗಲು

೭೩. . . . ಮಠದ ವೊಡೆಯರ ಧರ್ಮಸ್ಥಳದ ಗದ್ದೆಯ ಅಂಚುಗಡಿ | ಇಂತಿ ನಾಲ್ಕು ಗಡಿಯಿಂದೊಳಗುಳ ಸ್ಥಳಕ್ಕೆ ಗೇಣಿ –

೭೪. ವರುಷ ೧ಕ್ಕೆ ಅಕ್ಕಿ ನಾಲ್ವಂಡ ೧೨ ಮೂಡೆಗೆ ಆ ಸ್ಥಳನ ತೆಱಕಳಿದು ಬಹ ಅಕ್ಕಿ ನಾಲ್ವಂಡದರ ಮೂಡಲ ಕುಳ –

೭೫. ದಲು ಹತ್ತು ಮೂಡೆ ಅಕ್ಕಿಗೆ ನಡಸುವ ಧರ್ಮ್ಮ ಈ ಬಸ್ತಿಯಲ್ಲಿ ಇದ್ದ ತಪಸಿಗಳೆಲ್ಲರ ತಂಡ ಆಹಾರ ದಾನ –

೭೬. ಕ್ಕೆ ಕಂಠದ ಹೈವಣ ವೈದ್ಯನು ತಂನ್ನ ಹೆಸರಲ್ಲಿ ಬಿಡು ದೇವಸ್ವವಾಗಿ ಬಿಟ್ಟ ಅಕ್ಕಿ ಹತ್ತು ಮೂಡೆ || ಶುಭಮಸ್ತು

೭೭. ಸ್ವಸ್ತಿ ಶ್ರೀಮನ್ಮಹಾ ಮಂಡಲೇಶ್ವರ ದೇವರಸ ವೊಡೆಯರ ಸೊಸೆ ಶ್ರೀಮನ್ಮಹಾ ಮಂಡಲೇಶ್ವರರು ಚೆಂನಾದೇವಿ ಅಂಮನವ –

೭೮. ರು ಸಂಗೀತಪುರವರಾಧಿಷ್ಟಿತರಾಗಿ ಬಟ್ಟಕಳ ಮುಂತ್ತಾದ ಸಮಸ್ತ ರಾಜ್ಯವನು ಸಧರ್ಮಕಥಾಪ್ರಸಂಗದಿಂ ಪ್ರತಿಪಾಲಿಸು –

೭೯. ದ್ದಂದಿನ ಸಾಲಿವಾಹನ ಸಕವರುಷ ೧೪೬೮ನೆಯ ವಿಸ್ವಾವಸು ಸಂವತ್ಸರದ ಶ್ರಾವಣ ಶು ೧೦ ಲ್ಲು ಶ್ರೀಮನ್ಮಹಾ

೮೦. ಮಂಡಲೇಶ್ವರರು ಚೆಂನಾದೇವಿ ಅಂಮನವರು ನಂಮ ಅಜ್ಜಿಯಂಮ ವೀರಾದೇವಿ ಅಂಮನವರಿಗೆ ಕೊಟ್ಟ ಮೂಲಸಾಧನದ

೮೧. ಭಾಷಾಕರಮವೆಂತೆಂದರೆ ಬಟ್ಟಕಳದೊಳಗೆ ಹ[ರಹಿನ ಸೀಮೆ]ಯಲ್ಲಿ ನಂಮ್ಮರಮನೆಗೆ ಹರವರಿಗೆ ಬಂದ ಮುಯ್ಯ –

೮೨. ಲು ಮಡಿಯ ಸೀಮೆಗೆ ಗಡಿ ಮೂಡಲು ಯೆ. . . . . . ಅಣಿಗಡಿ | ತೆಂಕಲು ಯೆಱಗಿದ ಅಣಿಗಡಿ ಪಡುವಲು ಸ –

೮೩. ಮುದ್ರ ಗಡಿ ಬಡಗಲು ಯೆಱಗಿದ ಅಣಿಗಡಿ ಯಿಂತೀ ನಾಲ್ಕು ಗಡಿಯಿಂದೊಳಗುಣ ಮುಯ್ಯಲು ಮಡ್ಡಿಯ ಸ್ಥಳದೊಳಗೆ

೮೪. ಪೂರ್ವ್ವದಲಿ ದಾಯಸೆಟ್ಟಿಯ ಮಗ ನರಸು ಸೆಟ್ಟಿ ನೆಟ್ಟ ಸಸಿಯ ಹಿತ್ತಿಲು ೧ ಬೇತಿಯ ಹಿತ್ತಿಲು ೧ ಹಡಹಿನ ಗೋವಿ[oದ]

೮೫. ಸೆಟ್ಟ ನಟ್ಟ ಸಸಿಯ ಹಿತ್ತಿಲು ೧ ಅಂತ್ತೂ ಹಿತ್ತಿಲು ೩ ರಾಮಭಟ್ಟನ ಹಿತ್ತಿಲ ಕಟ್ಟುದೆ ಱು ಮುಂದಾದವನೆ –

೮೬. ಲ್ಲವನು ನೀವು ಮಾಡುವ ಧರ್ಮ್ಮಕ್ಕೆ ಕುಳವ ಕಡಿದು ಮೂಲಧಾರಾಪೂರ್ವಕವಾಗಿ ಬಿಟ್ಟುಕೊಟ್ಟರು ಈ ಸಾಧನ

೮೭. . . ತಾದ ಮುಯ್ಯಲು ಮಡಿಯ ಸೀಮೆಗೆ ಬಂದ ನೆಲ ಹೊಲ ಮರ ಫಲ ಬೆಟ್ಟ ಚಿಟ್ಟ ಬೇಣ ಬಿಳಿರು ಹಕ್ಕಲು ಹ –

೮೮. ನಾನು ನೀನುದಾರಿ ನಿಧಿ ನಿಕ್ಷೇಪ ಜಲ ಪಾಷಾಣ ಅಕ್ಷಿಣಿ ಅಗಾಮಿನಿ ಸಿದ್ಧಸಾಧ್ಯ ಯಿಂತೀ ಅಷ್ಟಭೋಗ ಸಮನ್ವಿತವಾ –

೮೯. ದ ವೆಲ್ಲವನು ನೀವೆ ನೋಡಿಕೊಂಡು ಆ ಸ್ಥಳವ ಅ ನೀಉ[ಗೈ]ಸುವ ರ . ನಡಸವ ಸಸಿ ಮುಂತಾದವನು ಗೈಯಿಸಿ ನಡ –

೯೦. ಸಿ ರೂಪು ಮಾಡಿಕೊಂಡು ನೀಉ ಮಾಡುವ ಧರ್ಮ್ಮ ಮುಂತ್ತಾದ ನಿಂಮ ನಿಂಮ್ಮ ಸಂತತಿ ಪರಂಪರೆ. ಯಾಗಿ ಆ –

೯೧. ಚಂದ್ರರ್ಕ್ಕಸ್ಥಾಯಿಯಾಗಿ ಯಿಛಾನುರೂಪದಿಂ ಸುಖಭೋಗಸ್ವ ಬಿಟ್ಟು ಬಹಿರಿಯೆಂದು ಚಿಂನಾದೇವಿ ಅಂ –

೯೨. ಮನವರು ನಂಮ ಅಜ್ಜಿ ಅಮ್ಮ ವೀರಾದೇವಿಯಂಮನವರ. . ಮೂಲಸಾಧನಕೆ ಸ್ಥಳಕ್ಕೆ ಕಟ್ಟಿದ ಗೇಣಿ ವ –

೯೩. ರುಷ೧ಕ್ಕೆ ಭತ್ತ ಸಂಬ್ಯರ ಮೂ . . ಅಕ್ಷರದಲು. . . . . . . . . . ಗೇಣಿಯಿಂದ ಬಹ ವರಹ ೩೫ ಅಕ್ಷ –

೯೪. ದಲು ಮೂವತ್ತಯೈದುವರೆ ವರಹ ಇದಕ್ಕೆ . . . . . . ದಳ ಜನ ೫ಕ್ಕೆ ವರುಷ ೧ ಕ್ಕೆ ಸಲು –

೯೫. ವ ಭತ್ತ ಸಂ ಮೂಡಿಂ . . . ಕ್ರಯವರಹ . . ಜೋಗಮ್ಮರಸಿಯಕ್ಕನ ಹೆಸರ ಹಾಲಧಾರೆಗೆ

೯೬. ವರಹ ೧[೧] ಉಭಯಂ. . . [ಭತ್ತ]ನಾಲ. . . . . . . . . .ಆಹಾರ ದಾನಕ್ಕೆ ಭತ್ತ

೯೭. . . . . . . . . . . . . . . . . . . . . . . . . . . . . . . . .

೯೮. ಸ್ವಸ್ತಿಶ್ರೀ ಜಯಾಭ್ಯುದಯ ಶಾಲಿವಾಹನ ಶಕ ವರುಷ ೧೪ [೩೪]ನೆಯ ಪ್ರಜೋತ್ಪತ್ತಿ ಸಂವತ್ಸರದ ಭಾದ್ರಪದ ಶು

೯೯. ದ್ಧ ೧. ಲ್ಲು ಶ್ರೀಮನ್ಮಹಾಮಂಡಲೇಶ್ವರ ಗುರುರಾಯ ವೊಡೆಯರ ರಾಣಿವಾಸ ವೀರಾದೇವಿಯಂಮನವರಿ –

೧೦೦. ಗೆ ಕಾಸಿಯಣ ಸೆಟ್ಟಿಯರ ತಂಮ ಮಡಿ ಸೆಟ್ಟಿಯು ಪೊಡವಂಟು ಕೊಟ್ಟ ಮೂಲ ಸಾಧನದ ಭಾಷಾ ಕ್ರ –

೧೦೧. ಮೆವಂತೆಂದರೆ ನಾನು ಕೊ. . . . .ಗಿ ಆಳುತ್ತಂ ಇದ್ದ ಕೋಣ ೯ ಮೂಡಿ ಗದ್ದೆಗೆ ಗಡಿ

೧೦೨. ಮೂ . . . . . . . .ತೆಂಕಲು ನೀರು ಹರಿವ. . . . ಯ

೧೦೩. ಬಿಟ್ಟ. . . . . . . . . .ಹರ ವರಿಯ ಗದ್ದೆಯ . . ಗಡಿ . . .

೧೦೪. ಬು ಇಂದ. . . . . .ಡಿ. . . . . . . . . ನಾಲ್ವಂರ್ಡ ಮೂಡೆ ಅದಕ್ಕೆ ಬಂದ ಮ

೧೦೫. ನೆ ಮನೆ ದಾಣ. . . . . . . . . . . . .ವಲು ನೀರುದಾರಿ. . . . ಬೇಣ. . .

೧೦೬. [ಬೆದ್ದ] ಚಿ. . . . . . . . . .ಸಾಣ ಅಕ್ಷಿಣಿ ಆಗಾಮಿಣಿ ಸಿದ್ಧ ಸಾಧ್ಯ

೧೦೭. ರಿ. . . . . . . . . . . . . .ವರಿಗೆ ಮೂಲವಾಗಿ ಕೊ. . . .

೧೦೮. . . . . . . . . . . . .ವಂನು ನಾನು . . . . . . . . .ಡು ಮೂಲ ವಗಿದೆ

೧೦೯. . . . . . . . . . . . .ವಿರಾಗಿಸಿ ಬಹಿರಿಯಂ ಹ

೧೧೦. . . . . . . . . . ಟ್ಟ ಗೇಣಿ ಭತ್ತ. . . ಚಂ ೮೦ ಮೂಡೆ. .

೧೧೧. . . . . . . . . . . . . . oಭತ್ತ . . . . . ತ್ತು . . . . ಟ್ಟಿ ಹ. . . . .

೧೧೨. . . . . . . . . . ಇದ್ದರಷ್ಟಿ . . . . . .ಕ್ಕೆ ಭತ್ತ೮

೧೧೩. . . .ತಿಪು ಬಾಳಲವನೂ ಮೂಲಸ್ತವಾದ ಮೂ . . . . ನಾಯ್ಕನಿಂ ಬೂಧಿವನಾಯ್ಕ . . . . . . . . . . . . . .ನಾಯ್ಕ

೧೧೪. ಗಳ ಮೇಲೆ ಅವರ ಹೆಸರಲ್ಲಿ ಎರಡು ಹಾಲಧಾರೆಯ. ನಡಸಿ ಬಹರೂ ಮಾ . . . ಕೋಡಲೊಳಗೆ ಮಾಲುನಾಯಕರ

೧೧೫. . . ಲು . . ಡಿತಿ. . . . .ಮಲ್ಲರಸನಕ್ಕೆ ಸೋಮಿಯಕ್ಕನವರ ಹೆಸರಲ್ಲಿ ಹಾಲಧಾರೆಗೆ ಬಿಟ್ಟ . . .ದ್ದೆಗೆ ಕಲ್ಲು ಗಡಿ ಮಲು ಅತ್ತಿಕಾರಿ ಅವರ

೨೦. ಸ್ಥಳ : ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿರುವ ತಾಮ್ರಶಾಸನ – ಉಪ್ಪುಂದ, ಉಡುಪಿ ಜಿಲ್ಲೆ.

ರಾಜವಂಶರಾಜ : ಹಾಡುವಳ್ಳಿ ಸಾಳುವರು – ಚೆನ್ನಭೈರಾದೇವಿ

ತೇದಿ : ಶಕವರುಷ ೧೪೭೯ನೆಯ ನಳ ಸಂವತ್ಸರದ ಆಷಾಡ ಶು. ೧೦ ರವಿರಾದಲು. . . . . ಎಂದಿದ್ದು ಇದು ಕ್ರಿ.ಶ. ೧೫೫೬ನೆಯ ಜೂನ್ ೧೭ಕ್ಕೆ ಸರಿಹೊಂದುತ್ತದೆ.

ಭಾಷೆ ಲಿಪಿ : ಕನ್ನಡ

ಪ್ರಕಟಣೆ :

೧. ಎ.ರಿ.ಇ.ಎ., ಎಪಿಎಕ್ಸ್‌ಎ. ೧೯೭೧ – ೭೨ ನಂ.೧೬.

೨. ನರಸಿಂಹಮೂರ್ತಿ ಪಿ.ಎನ್., ೨೦೦೭, ಶಾ ಸಂ. ೬೮.

ಸಾರಾಂಶ

ಮಹಾಮಂಡಲೇಶ್ವರ ಭೈರಾದೇವಿ ಅಮ್ಮನವರ ‘ವರಕುಮಾರಿ’ ಮಹಾಮಂಡಲೇಶ್ವರ ಚೆನ್ನಭೈರಾದೇವಿ ಅಮ್ಮನವರು ಸಂಗೀತಪುರದಲ್ಲಿದ್ದುಕೊಂಡು ಭಟ್ಕಳ ಮುಂತಾದ ಸಮಸ್ತ ರಾಜ್ಯವನ್ನಾಳುತ್ತಿರಲು, ಮೇಲೆ ಉಲ್ಲೇಖಿಸಿದ ದಿನದಂದು ಉಪ್ಪುಗುಂದದ ಶ್ರೀ ನರಸಿಂಹ ತೀರ್ಥಪಾದರಿಗೆ ನೀಡಿದಂತಹ ಮೂಲಸಾಧನದ ವಿವರವನ್ನು ಶಾಸನ ನೀಡುತ್ತಿದೆ. ಶಾಸನದಲ್ಲಿ ಅರಮನೆಗೆ ಹರವರಿಯಾಗಿ ಬಂದಂತಹ, ನರಿಗೆರೆಯ ಮಠದಲ್ಲಿ ನಡೆಯುವ ಧರ್ಮಕ್ಕಾಗಿ ನೀಡಿದ ದಾನದ ವಿವರವಿದೆ. ಶಾಸನದ ಕೊನೆಯ ಭಾಗದಲ್ಲಿ ಶಾಸನ ಹಾಳು ಮಾಡಿದರೆ ಆಗುವ ಶಾಪಾಶಯವನ್ನು ಹೇಳಿದೆ.

ಶಾಸನ ಪಾಠ

೧. ಸ್ವಸ್ತಿ ನಮಸ್ತುಂಗಶರಿಸ್ಚುಂಬಿ ಚಂದ್ರಚಾಮರ ಚಾರವೇ ತ್ರೈಲೋಕ್ಯನಗರಾರಂಭ ಮೂಲಸ್ತಂಭಾಯ ಶಂಭವೇ ಶ್ರೀ –

೨. ಮನ್ಮಹಾಮಂಡಲೇಶ್ವರರು ಭಯಿರಾದೇವಿ ಅಮ್ಮನವರ ವರ ಕುಮಾರಿ ಶ್ರೀಮನ್ಮಹಾಮಂಡಲೇಶ್ವರರು ಚೆಂನಭಯಿರಾ –

೩. ದೇವಿ ಅಮ್ಮನವರು ಸಂಗೀತಪುರವರಾಧೀಷ್ಟಿತರಾಗಿ ಭಟ್ಟಕಳ ಮುಂತಾದ ಸಮಸ್ತ ರಾಜ್ಯವನು ಸದ್ಧರ್ಮಕಥಾಪ್ರಸಂಗದಿ –

೪. oಪ್ರತಿಪಾಲಿಸುತಂ ವಿದ್ದಂದಿನ ಶಾಲಿವಾಹನ ಶಕವರುಷ ೧೪೭೯ನೆಯ ನಳಸಂವತ್ಸರದ ಆಷಾಡ ಶು. ೧೦ ರವಿವಾ –

೫. ರದಲು ಶ್ರೀಮತ್ಪರಮಹಂಸಪರಿವ್ರಾಜಕಾಚಾರ್ಯ್ಯ ಪದವಾಕ್ಯ ಪ್ರಮಾಣ ಪಾರಾವಾರ ವಾರಿಣ ಯಮನಿ –

೬. ಯ್ಯಮಾಧ್ಯಷ್ಟಾಂಗಯೋಗನಿರತರಾದ ಉಪ್ಪುಗುಂದದ ಶ್ರೀನರಸಿಂಹ್ವತೀರ್ಥ ಶ್ರೀಪಾದಂಗಳ ಶಿಷ್ಯರು ಶ್ರೀರಾಮಚಂ –

೭. ದ್ರ ತೀರ್ಥ ಶ್ರೀಪಾದಂಗಳಿಗೆ ಶ್ರೀಮನ್ಮಮಹಾಮಂಡಲೇಶ್ವರರು ಚೆನ್ನಭಯಿರಾದೇವಿ ಅಮ್ಮನವರು ಪೊಡವಂಟು ಕುಳವ

೮. ಕಡಿದುಕೊಟ್ಟ ಮೂಲಸಾಧನದ ಭಾಷಾಕ್ರಮವೆಂತೆಂದರೆ ಬಟ್ಟಕಳದ ಸೀಮೆಗೆ ಬಂದ ಮೆತಲಗಱೆಗೆ ಬಂದ

೯. ಹಸಿಹುಲ್ಲವೊಳಗೆ ನಮ್ಮ ಅರಮನೆಗೆ ಹರವರಿಗೆ ಬಂದ ನರೆಗೆಱೆಯ ಸರ್ವ್ವಸ್ವವನು ದೇವರ ಮಠದಲಿ ನಡವ

೧೦. ಧರ್ಮ್ಮಕ್ಕೆ ದೇವರಿಂದ ಅರ್ಧ್ಧಪರಿಚ್ಛೇದವಾಗಿ ಸರಿಸಿಕೊಂಡು ದೇವರಿಗೆ ಮೂಲವ ಕೊಟ್ಟವಾಗಿ ಆ ಸ್ಥಳಕೆ ಗಡಿ ಮೂಡ –

೧೧. ಲುನೀರೆಱೆಲುಗಡಿ ತೆಂಕಲು ಮನೆ ಠಾವು ಅದಕ್ಕೆ ಬಂದ ಹಿತ್ತಿಲುವೊಳಗಾಗಿ ಹೊಸಕೆರೆಯವರ ಬಸ್ತಿಯ ಧರ್ಮ್ಮಸ್ಥ –

೧೨. ಳದ ಅಂಚಿನಲ್ಲಿ ಯೆತ್ತಿದದರೆಗಡಿ ಪಡುವಲು ಚಿಟ್ಟಿಯವರ ಕಯ್ಯಲು ನಾಗಪ್ಪ ಸೆಟ್ಟಿಯವರು ಮಾಡಿಕೊಂಡು

೧೩. ಆಳುತ್ತಂವಿದ್ದ ಉರ್ತಿಗೆ ಬಂದ ಮನೆಠಾಉ; ಅದಕ್ಕೆ ಬಂದ ಹಿತ್ತಿಲಲ್ಲಿ ಕಟ್ಟಿದ ಕಟ್ಟುಗೋಡೆ ಗಡಿ ಅದು ಬಂದ

೧೪. ಹಾಂಗೆಮುರಿಗಡಿಯಾಗಿ ತಮ್ಮಣ ಸೆಟ್ಟಿಯವರ ಹಿತ್ತಿಲದರೆ ಗಡಿ ಅದು ಬಂದ ಹಾಂಗೆ ತಮ್ಮಣ ಸೆಟ್ಟಿಯವರಾ –

೧೫. ಳಿಕೆಯ ಬೆಮ್ಮನಿದ್ದ ಮನೆ ಠಾವಿನ ಹಿತ್ತಿಲ ಮುಂದಣ್ಣ ಗದ್ದೆ ಹೊರಾಗಾಗಿ ಆ ಗದ್ದೆಯ ಅಂಚುಗಡಿ ಆ ಬಂದ ಹಾ –

೧೬. ೦ಗೆ ತೆಂಕಲು ತಮ್ಮಣ ಸೆಟ್ಟಿಯ ಗದ್ದೆಯ ಅಂಚುಗಡಿ ಅದು ಬಂದ ಹಾಂಗೆ ಅವನಾಳಿಕೆ ವೊಡಹಿನ ಉರ್ತ್ತಿಯ ಹಾ –

೧೭. ಳಿಗಡಿ ಅದು ಬಂದ ಹಾಂಗೆ ಪಡುವಲು ನೀರುಚೀಲೆ ಗಡಿ ಅದು ಬಂದ ಹಾಂಗೆ ಬಡಗಲು ರಾಮಚಂದ್ರ ತೀರ್ಥಶ್ರೀ –

೧೮. ಪದಂಗಳ ದೇವಸ್ವ ಕಂಚಿಗನ ಭಾಗಿಗೆ ಬಂದ ಅಸುವಳಿ ಗೆದ್ದೆಯ ಹಾಳಿ ಗಡಿ ಅದು ಬಂದ ಹಾಂಗೆ ಬೆಲುಭಾ –

೧೯. ಗದ ಗಡಿಯಲ್ಲಿ ಹರಿದ ಹಳ್ಳ ಗಡಿ ಅದು ಬಂದ ಹಾಂಗೆ ಮೂಡಲು ಗಡಿ ತಾಗೆ ಯಿಂತಿ ನಾಲ್ಕು ಗಡಿಯಿಂದೊಳ –

೨೦. ಗುಳ್ಳಮೆಕ್ಕೆ ಸಂಭ್ಯರ ಮು ೭ ಹಾ ೨೦ ಗದೆ ಅದಕ್ಕೆ ಬಂದನೀರುದಾರಿ ಮತ್ತಂ ಹಿತ್ತಿಲ ದರೆಗಡಿ ತೆಂಕಲು ಹೊಸ

೨೧. ಗೆ ಗಡಿ ಮೂಡಲು ತಮ್ಮಣ ಸೆಟ್ಟಿಯವರ ಉರ್ತ್ತಿಗೆ ಬಂದ ಬೆಮ್ಮನಿದ್ದ ಮನೆ ವೃತ್ತಿ ಗಡಿ ಬಂದ ಹತುನೆಗದ್ದೆ

೨೨. ಕೆರೆಯವರ ಬಸ್ತಿಯ ಧರ್ಮಸ್ವಕ್ಕೆ ಬಂದ ಮಕ್ಕಿಯ ಗದ್ದೆಯ ಹಾಳಿಗಡಿ ಪಡುವಲು ತಮ್ಮಣಸೆಟ್ಟಿ ಆಳುತ್ತಂ ವಿದ್ದ

೨೩. ಆಲಗದ್ದೆಯ ಅಂಚು ಗಡಿ ಬಡಗಲು ಆತ ಆಳುತ್ತಂವಿದ್ದ ಮಕ್ಕೆಯ ಹಾಳಿಗಡಿ ಯಿಂತಿ ನಾಲ್ಕು ಗಡಿಯಿಂದೊ –

೨೪. ಳಗುಳ್ಳ ಮಂಟು ಕೊಡಗೆ ವೊಂದಕ್ಕೆ ಹತ್ವಾನೆ ಗದ್ದೆ ಸಹ ಸಂಭ್ಯರ ಯೆಂಟು ಮುಡಿ ಗದ್ದೆ ಅದಕ್ಕೆ ಬಂದ ಮ –

೨೫. ನೆ ಮನೆದಾಣ ಆ ಮನೆ ಹಿತ್ತಿಲು ಕಂಠದ ಮೇಗಣ ತೆಂಗಿನಮರ ಅಂಗೋಡು ಅಂಗಸಸಿ ಮಂದು ಮರಫಲ ಬೆ –

೨೬. ಣ್ಮ ಬೆಳಿರು ಬೆಟ್ಟು ತಿಪ್ಪೆ ಹಕ್ಕಲು ಹಳಗಾಡು ನೀರು ನಿಧಿ ನಿಕ್ಷೇಪ ಜಲಪಾಶಾಣ ಅಕ್ಷೀಣಿ ಆಗಾಮಿನಿಸಿದ್ಧಸಾ –

೨೭. ಧ್ಯ ಅಷ್ಟಭೋಗ ಸಮನ್ವಿತವಾದ ಉತ್ತಿಲ್ಲವಕ್ಕು ಮೂಲ ಹಡವ ಅರ್ಥ್ಥದಿಂದ ಅರ್ಥ್ಥವನು ದೇವರ ಕಯ್ಯಲಿ

೨೮. ಅರ್ಥ್ಥಪರಿಚ್ಛೇಧ್ಯವಾಗಿಸಲೆ ಸಲಿಸಿಕೊಂಡು ಯಿಂತಿ ಸಾಧನಸ್ಥವಾದ ಉರ್ತ್ತಿಯನು ಮೂಲ ಪರಿಚ್ಛೇದ್ಯ ಹಿರಂ –

೨೯. ಣ್ಯೋದಕಧಾರಾಪೂರ್ವ್ವಕ ಆಚಂದ್ರರ್ಕಸ್ಥಾಯಿಯಾಗಿ ಆ ಸ್ಥಳನ ತೆಱೆನು ಕುಳವ ಕಡಿದು ಸರ್ವ್ವಮಾನ್ಯ ಸ್ಥಳ –

೩೦. ವಾಗಿ ಮೂಲಧಾರೆಯನೆಱೆದುಕೊಟ್ಟಉ ಯೀ ಸ್ಥಳಕ್ಕೆ ತೆಱೆಕಾಣಿಕೆ ಅಕರ ಅನಾಯ ಬಿಟ್ಟಿ ಬಿಢಾರ ಅಸಿ

೩೧. ಅಪ್ಪಣೆ ಮುಂತಾದ ಆವುಪೋತ್ತರಂಗಳು ಯಿಲ್ಲದೆ ಸರ್ವ್ವಬಾಧರಹಿತವಾಗಿ ದೇವರು ದೇವರ ಶಿಷ್ಯ ಪಾರ –

೩೨. ೦ಪರೆಯಾಗಿ ಆಚಂದ್ರಾರ್ಕ್ಕಸ್ಥಾಯಿಯಾಗಿ ದೇವರು ಯಿಛ್ಛಾನುಕೂಲವಾದ ಧರ್ಮ್ಮವನು ನಡಸಿಕೊಂಡು ಸು –

೩೩. ಖದಲು ಯಿಹುದೆಂದು ಪೊಡವಂಟು ಕುಳವ ಕಡಿದು ಕೊಟ್ಟ ಮೂಲಸಾಧನ ಚೆಂನಭ್ಯೆ ಬಹ (||*)

೨೧. ಸ್ಥಳ : ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿರುವ ೧೦ನೇ ತಾಮ್ರಶಾಸನ – ಉಪ್ಪುಂದ, ಉಡುಪಿ ಜಿಲ್ಲೆ

ರಾಜವಂಶರಾಜ : ಹಾಡುವಳ್ಳಿ ಸಾಳುವರು – ಚೆನ್ನಭೈರಾದೇವಿ

ತೇದಿ : ಶಕವರ್ಷ ೧೪೭೯ನೆಯ ನಳ ಸಂವತ್ಸರದ ಆಷಾಡ ಶು. ೭ ಮಿಯು ರವಿವಾರದ ಇದು ಕ್ರಿ.ಶ. ೧೫೫೬ನೆಯ ಜೂನ್ ೧೪, ರವಿವಾರಕ್ಕೆ ಸರಿ ಹೊಂದುತ್ತದೆ.

ಭಾಷೆ ಲಿಪಿ : ಕನ್ನಡ

ಪ್ರಕಟಣೆ :

೧. ಎ.ರಿ.ಇ.ಎ., ಎಪಿಎಕ್ಸ್‌ಎ ಶಾ ಸಂ. ೧೯.

೨. ನರಸಿಂಹಮೂರ್ತಿ ಪಿ.ಎನ್., ೨೦೦೭, ಶಾ ಸಂ.೧೭.

ಮಹಾಮಂಡಲೇಶ್ವರ ಭೈರಾದೇವಿ ಅಮ್ಮನವರ ಕುಮಾರಿ ಚೆನ್ನಾಭೈರಾದೇವಿ ಅಮ್ಮನವರು ಸಂಗೀತಪುರದಲ್ಲಿದ್ದುಕೊಂಡು ಭಟ್ಟಕಳ ಮುಂತಾದ ಸಮಸ್ತ ರಾಜ್ಯವನ್ನಾಳುತ್ತಿರಲು ಮೇಲೆ ಹೇಳಿದ ದಿನದಂದು ಪರಮಹಂಸ ಪರಿವ್ರಾಜಕಾಚಾರ್ಯ ಆನಂದವಾಳ ಪರಿಷಾಧಿಷ್ಟಿತರಾದ ಉಪ್ಪುಗುಂದ ಶ್ರೀನರಸಿಂಹ ತೀರ್ಥ ಶ್ರೀಪಾದರ ಶಿಷ್ಯರಾದ ಶ್ರೀರಾಮಚಂದ್ರ ತೀರ್ಥ ಶ್ರೀಪಾದರಿಗೆ, ಬಟ್ಟಕಳದ ಸೀಮೆಯೊಳಗೆ, ಆ ಪ್ರದೇಶದ ಮೇಲಿನ ಪೊಡವಂಟು ಕುಳವ ಕಡಿದು ಕೊಟ್ಟು ತೆರಿಗೆಯನ್ನು ಮನ್ನಾ ಮಾಡಿದ ವಿಷಯ ಶಾಸನದಲ್ಲಿದೆ. ಮನ್ನಾ ಮಾಡಿದ ಅದರ ಆದಾಯದಿಂದ ಬಂದದ್ದನ್ನು ಮಠದ ದೇವರ ಪೂಜೆ ಸರಿಯಾಗಿ ನಡೆಯುವಂತೆ ಧಾರಾಪೂರ್ವರಕವಾಗಿ ಕೊಟ್ಟಿದ್ದನ್ನು ಶಾಸನ ದಾಖಲಿಸಿದೆ. ಭೂಮಿ ಮತ್ತು ಮೇರೆಯನ್ನು ವಿವರವಾಗಿ ಹೇಳಲಾಗಿದೆ.