ಶಾಸನ ಪಾಠ

೧. ಸ್ವಸ್ತಿ [|*]ನಮಸ್ತುಂಗಶಿರಶ್ಚುಂಬಿ ಚಂದ್ರ ಚಾಮರಚಾರವೇ ತ್ರಯಿಲೋಕ್ಯನ

೨. ಗರಾರಂಭ ಮೂಲಸ್ತಂಭಾಯ ಶಂಭವೆ [|*] ಶ್ರೀಮನ್ಮಹಾಮಂಡಲೇಶ್ವರರು ಭೈರಾದೇವಿ ಆ [ಅ] –

೩. ಮ್ಮನವರವರ ಕುಮಾರಿ ಚೆನ್ನಭಯಿರಾದೆಔಇ ಅಮ್ಮನವರು ಸಂಗೀತಪುರ ವರಾಧೀಷ್ಟಿತರಾ –

೪. ಗಿ ಬಟ್ಟಕಳ ಮುಂತಾದ ಸಮಸ್ತ ರಾಜ್ಯವನು ಸದ್ಧರ್ಮ್ಮಕಥಾಪ್ರಸಂಗದಿಂ ಪ್ರತಿಪಾಲಿಸ್ತಿದ್ದಂ –

೫. ದಿನ ಶಕವರುಷ ಸಾವಿರದ ೪೭೯ನೆಯ ನಳ ಸಂವತ್ಸರದ ಆಷಾಢ ಶು. ೭ ಮಿಯ ರವಿವಾರದ –

೬. ಲು ಶ್ರೀಮತ್ಪರಮಹಂಸಪರಿವ್ರಾಜಕಾಚಾರ್ಯವರಿಯರಹ ಶ್ರೀಮದಾನಂದವಾಳ ಪರಿಷಾಧಿಷ್ಟಿ –

೭. ತರಾದ ಉಪ್ಪುಗುಂದ ಶ್ರೀನರಸಿಂಹತೀರ್ಥ ಶ್ರೀಪದಂಗಳ ಶಿಷ್ಯರು ಶ್ರೀರಾಮಚಂದ್ರ

೮. ತೀರ್ಥ ಶ್ರೀಪಾದಂಗಳಿಗೆ ಶ್ರೀಮನ್ಮಹಾಮಂಡಲೇಶ್ವರರು ಚೆನ್ನಭೈರಾದೇವಿ ಅಮ್ಮನವರು ಪೊಡ –

೯. ವಂಟು ಕುಳವ ಕಡಿದುಕೊಟ್ಟ ಸಾಧನದ ಭಾಷಾಕ್ರಮವೆಂತೆಂದರೆ ಬಟ್ಟಕಳದ ಸೀಮೆಯೊಳಗೆ ತಲ –

೧೦. ಗೆಱೆಯೊ ಗ್ರಾಮ ಹಸೆಹುಲ್ಲು ಹೆಬ್ಬಳೆಯೊಳಗೆ ದೇವರು ಮೂಲವಾ ಆಳುತ್ತಂವಿದ್ದ ಬಾಳ ತೆಱೆನ ವೊ –

೧೧. ಳಗೆ ನಾಲು ಕುಳವ ಕಡಿದು ಕೊಟ್ಟ ತೆಱೆನ ವಿವರ ತಲಗೆಱೆ ಹೊಂಪಟಿ ಹಿತ್ತಿಲವೊಳಗೆ ಗುಳಿಗ ೭ ೨ || ದ ಸ್ಥಳ

೧೨. ದೊಳಗೆ ಮೆತಲಗೆಱೆಯ ಸ್ಥಳಕೆ ಮುನೂಱ ಅಬ್ಭಾಯಿತನ ಕಯ್ಯಲಿ ದೇವರು ಮಾಡಿಕೊಂಡ ಸಾಧನಸ್ಥವಾ –

೧೩. ದ ಉರ್ತ್ತಿಗೆ ಗಡಿ ಮೂಡಲು ಚಉರಿಯ ಸಂಕಪ್ಪನ ಮೂಲದ ಉರ್ತ್ತಿಯ ಅಂಚುಗಡಿ ತೆಂಕಲು ನೀರೆಱಕ

೧೪. ವೊಳಗಾಗಿ ನಟ್ಟ ಕಲ್ಲುಯೆತ್ತಿದ ದರೆಗಡಿ ಪಡುವಲು ರಾಮಚಂದ್ರತೀರ್ಥ ಶ್ರೀಪದಂಗಳ ದೇವಸ್ವದ ಯೆಡತ –

೧೫. ಲಗೆಱೆಯಲ್ಲಿ ಗಂಪಿನಡವದೊಮೆಗಡಿ ಆ ಬಂದ ಹಾಂಗೆ ಯೆಡತಲಗೆಱೆಯ ಗಡಿಯಲಿ ನಟ್ಟಕಲ್ಲು ಯೆ –

೧೬. ತ್ತಿದರೆ ಗಡಿ ಬಡಲು ಹೊಳವೊಳಗಾಗಿ ಹಕ್ಕಲಲ್ಲಿ ನಟ್ಟಕಲ್ಲುಯೆತ್ತಿದ ದರೆಗಡಿಯಿಂತಿ ಪೂರ್ವಸಾಧನಸ್ಥವಾ –

೧೭. ದ ಚತುರ್ಗ್ಗಡಿಯಿಂದೊಳಗಣ ಸಾಧನಪ್ರಮಾಣಿನ ಮು ೩೪ ಗದ್ದೆಯ ಸ್ಥಳನ ಮೇಲಣ ತೆಱುವ ಗ ೩ವನು ಪೂರ್ವ –

೧೮. ದಲ್ಲಿ ಅರಸುಗಳು ಗೋಕರ್ನ್ನದ ಮಹಲೇಶ್ವರದೇವರಧರ್ಮಕ್ಕೆ ಬಿಟ್ಟು ಶಾಷನಾಂಕಿತವಾಗಿ ಮೂನೂಱ ಸಬ್ಬಾಯಿತ –

೧೯. ನ ಮುಖಾಂತ್ರ ಗೋಕರ್ನದ ಮಹಾಬಲದೇವರ ಧರ್ಮ್ಮಕ್ಕೆ ತೆತ್ತು ಬಹ ರೀತಿಯಲ್ಲಿ ಕಟ್ಟು ಮಾಡಿದಲ್ಲಿ ಮರಳಿ ನಮ್ಮ –

೨೦. ಅಕ್ಕಾಜಿ ಚೆನ್ನಮ್ಮನವರ ಕಾಲದಲ್ಲಿ ಮಹ(ಬ*)ಲೇಶ್ವರ ದೇವರ ಧರ್ಮಕ್ಕೆ ಬಿಟ್ಟದ ತೆಱು ಅ ಸಭ್ಬಾಯಿತನಲ್ಲಿ ಉಳಿದು

೨೧. ಬಂದ ನಿಮಿತ್ತ ಆ ಸಭ್ಬಾಯಿತನ ಉಳಿಮಂಣ ಸರ್ವ್ವಸ್ವದ ಮೇಲೆ ತೆತ್ತು ಮಹ(ಬ*)ಲೇಶ್ವರ ದೇವರ ಧರ್ಮಕ್ಕೆ ಬಿಟ್ಟದ ತೆಱು ಆ ಸಭ್ಭಾಯಿತನಲ್ಲಿ ಉಳಿದು

೨೨. ನು ತೆತ್ತು ಬಹ ರೀತಿ ಕಟ್ಟು ಮಾಡಿ ಆವತಲಿಗೆಱೆಯ ಸರ್ವ್ವಸ್ವದ ತೆಱನ ಗು ಗ ೩೨ ವೆನು ನಮ್ಮ ಅರಮನೆಗೆ

೨೩. ತೆಱುವಂತಾಗಿ ಮಾಡಿ ಮೂನೂಱೆ ಸಭ್ಭಾಯಿತನ ಉಳಿಮಂಣ ಸರ್ವತಸ್ವದ ಮೇಲೆ ಶ್ರೀಮಹಾಬಲದೇವರ ಧರ್ಮ್ಮ –

೨೪. ಕೈ ಸಲುವಗು ಗ ೩೨ ವನು ತೆತ್ತು ಬಹ ರೀತಿಯಲ್ಲಿ ಸಾಧನರಾಯಸವನೂ ಮಾಡಿ ಆ ಸಭ್ಭಾಯಿತನೆ ಕೆಟ್ಟು ಆಮೆ ತ –

೨೫. ಲ ಗೆಱೆಯ ಮೇಲಣ ಗು ಗ ೩೨ ವನು ನಮ್ಮ ಅರಮನೆಗೆ ತೆತ್ತು ಬರುತಿದ್ದುದನು ಹಸಿಹುಲ್ಲವೊಳಗೆ ದೇವರಾಳು –

೨೬. ತಂ ವಿದ ಬೆಲುಬಾಗದ ಉರ್ತ್ತಿಗೆ ನಮ್ಮ ಅರಮನೆಗೆ ಸಲುವತೆ ಱುಗು ಗ ೧೨ ಮತಂ ಗುಂಡಿ –

೨೭. ಯ ಗದ್ದೆಯ ಸ್ಥಳನ ಮೇಲೆ ಬಹತೆಱು ಗು ೨ ಕೋಟಿಯ ಭಾಗ ಯೀಸರನ ವೊಡಹು ಯೆರಡು ವೊಸರಿಗೆ ತೆಱುಗು

೨೮. ಗ ೫ ಮುತ್ತಂ ಹಿಬ್ಬಳೆಯೊಳಗೆ ದೇವರಾಳುತ್ತಂ ವಿದ್ದ ಕಲ್ಲಮನೆ ಭಾಗಿ ಉಂಡಿತಾ ಱುಸಹ ಮು ೧೫ ಗದ್ದೆ ಆ ಉರ್ತ್ತಿಗೆ ಸಲ್ಲಿ –

೨೯. ಸುವ ತೆಱುವ ಗ ೩೪ ಯಿಂತಿತಲಗೆಱೆಯ ಸರ್ವ್ವಸ್ವ ಹಸಿಹುಲ್ಲು ಹೆಬ್ಬಳೆಯೊಳಗೆ ಸಹವಾದ ಸ್ಥಳಂಗಳಿ –

೩೦. ಗೆ ತೆಱುವಗ ೧೫ ೦ || ತೆಱು ಮತ್ತಂ ತೆಂಕಸೀಮೆಯೊಳಗೆ ದೇವರು ಮೂಲವಾಗಿ ಆಳುತ್ತಂವಿದ್ದ ಉಪ್ಪಿಕೋಣ ಉರ

೩೧. ತಿಯ ಮೇಲೆ ದೇವರಿಂದ ಸಲುವತೆಱುವಗ ೩ ತುಪ್ಪ ಹ ೧ ಉಭಯಂ ವಗ ೧೮ ೦ ತುಪ್ಪದ ತೆಱಗೆ ಸಹಮೂ –

೩೨. ಲ ಹಡವ ಆರ್ದ್ಧವನು ತೆಗೆದುಕೊಂಡು ಕುಳವ ಕಡಿದು ಕೊಡಬೇಕೆಂದು ದೇವರು ನವಗೆ ಹೇಳಿದ ಸಮ್ಮಂಧ ಯೀ ಸಾಧ –

೩೩. ನಸ್ವವಾದ ಹದಿನೆಂಟು ವರಹನು ಆಯಿದು ಹಣವಡ್ಡದ ತೆಱಗು ತುಪ್ಪುವೊಪ್ಪಾನೆಗು ಸಹ ಮೂಲ ಹಡವ ಆರ್ದ್ಧದಿ –

೩೪. ೦ದ ಅಧಿಕವಾದ ಅರ್ಥ್ಥವನ್ನು ಅರ್ದ್ಧಪರಿಚ್ಛೇದ್ಯವಾಗಿ ತೆಗೆದುಕೊಂಡು ಮೂಲ ಪರಿಚ್ಛೇದ್ಯ ಹಿರಂಣ್ಯೋದಕ ಧಾರಾ –

೩೫. ಪೂರ್ವ್ವಕವಾಗಿ ಆಚಂದ್ರಾರ್ಕಸ್ಥಾಯಿಯಾಗಿ ತೆಱನು ದೇವರಿಗೆ ಕುಳವ ಕಡಿದುಕೊಟ್ಟಿ ಉಯಿಂತಿ ಸಾಧನಸ್ಥವಾದ (ದ) –

೩೬. (ಕೆ)ಆಕರ ಆನಾಯ ಬಿಟ್ಟಿ ಬಿಡಾರ ಆಸಿಯ ಅಪ್ಪಣೆ ವರಾಡ ಸರಾಡ ಆರನಿಂದ ಹುಟ್ಟನಾಡಿಗೆ ಬಂದ ಕಾಣೆ –

ಹಿಂಭಾಗ

೩೭. ಕೆ ಮುಂತಾದ ಆವ ಉಪೋತ್ತರಗಳು ಯಿಲ್ಲದೆ ಸರ್ವ್ವಭಾದಾರಹಿತವಾಗಿ ದೇವರು ದೇವರ ಶಿಷ್ಯಪಾರಂಪರೆಯಾಗಿ

೩೮. ಯಿನುಕೂಲವಾದ ಧರ್ಮ್ಮವನು ನಡೆಸಿಕೊಂಡು ಕುಳವ ಕಡಿದಕ್ಕೆ ಅನುಗುಣವಾಗಿ ಬದ್ದುಬಹದೆಂದು

೩೯. ಶ್ರೀರಾಮಚಂದ್ರ ತೀರ್ಥಶ್ರೀಪದಂಗಳಿಗೆ ಚೆನ್ನಭಯಿರಾದೇವಿ ಅಮ್ಮನವರು ಪೊಡವಂಟು ಕುಳವ ಕಡಿದು ಕೊ –

೪೦. ಟ್ಟ ಸಾಧನ ಯಿಂತಪ್ಪುದಕ್ಕೆ ಧರ್ಮ್ಮಸಾಕ್ಷಿಗಳು ಆದಿತ್ಯಚಂದ್ರಾವನಿಲಾನಲ ಉಚದ್ಯ ಉರ್ಭೂಮಿರಾಪೋಹ್ರುದೆಯಂ

೪೧. ಯಮಶ್ಚ ಆಹಶ್ಚ ರಾತ್ರಿಶ್ಚ ಉಭೇ ಚ ಸಂಧ್ಯೆ ಧರ್ಮ್ಮಶ್ಚ ಜಾನಾತಿ ನರಸ್ಯ ಉರ್ತ್ತಂ – ಚೆಂನಭೈ ಬಹ.*

೨೨. ಸ್ಥಳ : ಗ್ರಾಮದ ಶ್ರೀದುರ್ಗಾ ಪರಮೇಶ್ವರಿ ದೇವಾಲಯದಲ್ಲಿರುವ ತಾಮ್ರಶಾಸನ – ಉಪ್ಪುಂದ, ಉಡುಪಿ ಜಿಲ್ಲೆ.

ರಾಜವಂಶರಾಜ : ಹಾಡುವಳ್ಳಿ ಸಾಳುವರು – ಚೆನ್ನಭೈರಾದೇವಿ

ತೇದಿ : ಶಕವರ್ಷ ೧೪೭೯ನೆಯ ನಳ ಸಂವತ್ಸರದ ಶ್ರಾವಣ, ಬಹುಳ, ೧೦ ಶುಕ್ರವಾರದಲು ತೇದಿಯು, ಇದು ಕ್ರಿ.ಶ. ೧೫೫೬ ಜುಲೈ ೩೧ ಶುಕ್ರವಾರಕ್ಕೆ ಸರಿ ಹೊಂದುತ್ತದೆ.

ಭಾಷೆ ಲಿಪಿ : ಕನ್ನಡ

ಪ್ರಕಟಣೆ :

೧.ಎ.ರಿ.ಇ.ಎ., ಎಪಿಎಕ್ಸ್.ಎ ೧೯೭೧ – ೭೨ ಶಾ ಸಂ.೧೭

೨. ನರಸಿಂಹಮೂರ್ತಿ ಪಿ.ಎನ್., ೨೦೦೭, ಶಾ ಸಂ. ೬೯.

ಮಹಾಮಂಡಲೇಶ್ವರ ಚೆನ್ನಭೈರಾದೇವಿ ಅಮ್ಮನವರು ಸಂಗೀತ ಪುರಾಧಿಷ್ಠಿತರಾಗಿ ಹಾಡುವಳ್ಳಿ ಬಟ್ಟಕಳ ಮುಂತಾದ ರಾಜ್ಯವನ್ನಾಳುತ್ತಿರಲು ಮೇಲೆ ಹೇಳಿದ ದಿನದಂದು ಪರಮಹಂಸ ಪರಿವ್ರಾಜಕಾಚಾರ್ಯರೂ, ಉಪ್ಪುಂದದ ಶ್ರೀಮತ್ ಆನಂದವಾಳ ನರಸಿಂಹತೀರ್ಥ ಶ್ರೀಪಾದರ ಶಿಷ್ಯ ರಾಮಚಂದ್ರ ಶ್ರೀಪಾದರಿಗೆ ಅರಸು ಹೆಗ್ಗಡೆ ವಂಶದ ಯೆಕ್ಕು ಹೆಗ್ಗಡೆ, ತಿಮ್ಮನಾಯಕ ಅರಸು, ಯಲ್ಲಪ್ಪನಾಯಕ ಮತ್ತು ಕರಿಯ ಹೆಗ್ಗಡೆಯವರು ಕೂಡಿಕೊಂಡು ನೀಡಿದಂತಹ ದಾನವನ್ನು ಈ ಶಾಸನವು ಉಲ್ಲೇಖಿಸುತ್ತಿದೆ. ಇದನ್ನು ಬರೆದವ ಊರ ನಾಡ ನಾರಣ ಸೇನಬೋವರು.

ಶಾಸನ ಪಾಠ

೧. ನಮಸ್ತುಂಗ ಶಿರಶ್ಚುಂಬಿ ಚಂದ್ರಚಾಮರ ಚಾರವೇ (|*) ತ್ರೈಲೋಕ ನಗರಾರಂಭ ಮೂಲಸ್ತಂಭಾ

೨. ಯ ಶಂಭವೇ (||*)ಶ್ರೀಮನ್ಮಹಾಮಂಡಲೇಶ್ವರರು ಚಿಂನಭೈರಾದೇವಿ ಅಮ್ಮನವರು ಸಂಗೀತಪುರವರಾ –

೩. ಧಿಷ್ಟಿತರಾಗಿ ಹಾಡುವಳಿ ಬಟ್ಟಕಳ ಮುಂತಾದ ರಾಜ್ಯವನು ಪ್ರತಿಪಾಲಿಸುತಂ ಯಿದ್ದಂದಿನ ಶ –

೪. ಕವರುಷ ೧೪೭೯ನೆಯ ನಳಸಂವತ್ಸರದ ಶ್ರಾವಣ ಬಹುಳ ೧೦ ಶುಕ್ರವಾರದಲು ಶ್ರೀಮತ್ಪರ –

೫. ಮಹಂಸ ಪರಿವ್ರಾಜಕಚಾರ್ಯವರ್ಯರೂ ಉಪ್ಪುಗುಂದದ ಶ್ರೀಮದಾನಂದವಾಳ ಪರುಷಾ

೬. ಧಿಷ್ಟಿತರಾದ ನರಸಿಂಹತೀರ್ಥ ಶ್ರೀಪದಂಗಳ ಶಿಷ್ಯರು ರಾಮಚಂದ್ರ ಶ್ರೀಪದಂಗಳ ದಿ –

೭. ವ್ಯಶ್ರೀಪಾದಪದ್ಮಂಗಳಿಗೆ ಸಿರುಊರ ಅರಸು ಹೆಗ್ಗಡೆಯ ಹೋಲುವ ಕುಟುಂಬ ದವರು ಯೆ –

೮. ಕ್ಕು ಹೆಗ್ಗಡೆ ಅರಸು ಜನ್ನಿ ಅವನ ಒಭಾಗಿ ತಿಮ್ಮನಾಯಕ ಅರಸು ಜನ್ನಿಯೊಳಗೆ ಪಾಲತೆಗೆದು

೯. ಕೊಂಬ ಯೆಲ್ಲಪ್ಪನಾಯಕ ಕರಿಯ ಹೆಗ್ಗಡೆ ಮುಂತಾದ ಕುಟುಂಬ ಸಮಸ್ತರು ಪೊಡವಂಟು

೧೦. ಕೊಟ್ಟ ಧರ್ಮ್ಮಮೂಲ ಶಾಸನದ ಭಾಷಾಕ್ರಮವೆಂತೆಂದರೆ ಜೋಲೂರು ಕೆಱೆಯಗ್ದದ ಸರ್ವ –

೧೧. ಸ್ವಉ ಅರ್ಥ್ಥವ್ಯವಹಾರದ ವಿಷಯದಲ್ಲಿ ಅರಮನೆಗೆ ಹರವರಿಯಾಗಿ ಯಿರುತಿದ್ದಲ್ಲಿ

೧೨. ಆ ಸರ್ವಸ್ವಉ ನಮ್ಮ ಹಿರಿಯರಾದ ಹೆಗ್ಗಡೆಯಕ್ಕಳ ಕಾಟಿಯ ಹಂನೊಂದು ಹೊಂನಿನ ಕುಳದೊ –

೧೩. ಳಂಗಣ ಸರ್ವ್ವಸ್ವವನು ತವಗೆ ಮೂಲಿಗಳಿಗೆ ಪಾಲಿಸಬೇಕೆಂದು ನಾಡ ಸೇನಬೋವನ ಕೂಡಿಕೊ –

೧೪. ೦ಡು ಬಿಂನಹ ಮಾಡಲಾಗಿ ಪೂರ್ವಪ್ರಮಾಣು ನಮ್ಮ ಹೊಂನಂದು ಹೊಂನಿನ ಕುಳದೊಳಗಣ

೧೫. ಸರ್ವಸ್ವವಹುದು ಯೆಂದು ಪರಾಮಶಿಸಿ ನವಗೆ ಮೂಲಿಗಳಿಗೆ ಮೂಲವ ಪಾಲಿಸಿದರಾಗಿ

೧೬. ಆ ಸರ್ವಸ್ವಕ್ಕೆ ಚೆಂಣಭಯಿರಾದೇವಿ ಅಮ್ಮನವರಿಗೆ ಮೂಲಕ್ಕೆ ಹಡವ ಅರ್ಥ್ಥದಿಂದ ಅಧಿಕವಾ –

೧೭. ದ ಅರ್ಥ್ಥವನು ಕಾಮಿಕೆಯ ಮಾಡಿ ಸರ್ವಮಾನ್ಯವಾಗಿ ಮೂಲಿಗೆ ಮೂಲವ ಬಿಡಿಸಿಕೊಂಡು ರಾಮ –

೧೮. ಚಂದ್ರತೀರ್ಥ ಶ್ರೀಪದಂಗಳಿಗೆ ಸರ್ವಮಾನ್ಯವಾಗಿ ಮೂಲವ ಕೊಟ್ಟ ಕೆಱೆಯ ಗದ್ದಗೆಯುಳ್ಳ ಸರ್ವ –

೧೯. ಸ್ವಗಳಿಗೆ ಗಡಿ ಮೂಡಲು ರಾಮಚಂದ್ರತೀರ್ಥ ಶ್ರೀಪದಂಗಳ ದೇವಸ್ಥ ಉಪ್ಪಿನಕೋಣ ಗಡಿಯ –

೨೦. ಲ್ಲಿಯಿಕ್ಕಿದ ಕಲ್ಲುಗಳ ಗಡಿ ಅದು ಬಂದ ಹಾಂಗೆ ಗಡಿಯ ಅದು ಬಂದ ಹಾಂಗೆ ಕೆಱೆಯ ಗದ್ದೆ

೨೧. ಜೋಗೂರಿಗೆ ತೊಂಡಲೆಯ ಕಟ್ಟಿಂದ ನೀರು ಹರಿವ ತೋಡುಗಡಿ ಆ ಶೋ(ತೋ)ಡು ಬಂದ ಹಾಂಗೆ ತೊಂ –

೨೨. ಡಲೆಯ ಕಟ್ಟಿವೊಳಗಾಗಿ ತೊಂಡಲೆಯ ಉರ್ತ್ತಿಯ ಕಂಠಗಡಿ ಅದು ಬಂದ ಹಾಂಗೆ ತೆಂಕಲು

೨೩. ನಟ್ಟ ಕಲ್ಲುಗಡಿ ಆ ಬಂದ ಹಾಂಗೆ ಕುಂಬಾರ್ರ‍ರ ಕೇರಿ ಒಳಗಾಗಿ ನೀರೆಱೆಕದಲ್ಲಿ ನಟ್ಟ ಕಲ್ಲುಗಡಿ

೨೪. ಅದು ಬಂದ ಹಾಂಗೆ ಪಡುವಲು ನಟ್ಟ ಕಲ್ಲುಗಡಿ ಅದು ಬಂದ ಹಾಂಗೆ ಗುಡಿಯ ನಿರೆರ್ರ‍ಕ

೨೫. ವೊಳಗಾಗಿ ಅದು ಬಂದ ಹಾಂಗೆ ನಟ್ಟ ಕಲ್ಲುಗಡಿ ಬಡಗಲು ಹೊಳೆಗಡಿ ಅದು ಬಂದು ಹಾಂ –

೨೬. ಗೆ ತಗ್ಗಿನಲಿ ನಟ್ಟ ಕಲ್ಲುಗಳು ಅದು ಬಂದ ಹಾಂಗೆ ಉಪ್ಪಿನ ಕೋಟ ಗಡಿ ಶಾ(ತಾ)ಗೆ ನಟ್ಟ ಕಲ್ಲುಗಡಿ

೨೭. ಯಿಂತೀ ನಾಲ್ಕು ಗಡಿಯಿಂದೊಳಗನಾ ಲ್ವಂಡ ಬೀಜವರಿ ಯಿಪ್ಪತ್ತಯೆರಡು ಮೂಡೆ ಗದ್ದೆ ಅ –

೨೮. ದಕ್ಕೆ ಬಂದ ಮನೆ ಠಾಉ ಮಂದು ಮರಫಲ ವರಾನ ಕೊಡಲಿಂದ ಬಹು ಸದಕ ಸು –

೨೯. ಗ್ಗಿ ಸುಗ್ಗಿಯ ಸ್ಥಳ ಮಕ್ಕಿ ಮಕ್ಕಯಹ ಸ್ಥಳ ಬೆಣ ಬೆಳಿರು ಬೆಟ್ಟು ತಿಟ್ಟಿ ಹಕ್ಕಲು ಹಳಗಾಡು

೩೦. ಯಿದಕ್ಕೆ ಬಂದ ನೀರು ದಾರಿ ನಿಧಿ ನಿಕ್ಷೇಪ ಜಲಪಾಷಾಣ ಅಕ್ಷಿಣಿ ಆಗಾಮಿನಿ ಸಿದ್ಧ ಸಾಧ್ಯ ಸರ್ವಾ –

೩೧. ೦ಗೊಂಡು ಅಷ್ಟು ಸಮನ್ವಿತವಾದ ಕೆಱೆಯ ಗದ್ದೆ ಯೀ ಹೆಸರು ಗೊಂಡು ಬರಹ ಸ್ತಳಂಗಳೆಲ್ಲವ –

೩೨. ನು ಸರ್ವಮಾನ್ಯವಾಗಿ ಧರ್ಮಮೂಲವಾಗಿ ರಾಮಚಂದ್ರತೀರ್ಥ ಶ್ರೀಪದಂಗಳಿಗೆ ಸಹಿರಂಣ್ಯೋ –

೩೩. ದಕ ಧಾರಾಪೂರ್ವಕವಾಗಿ ಮೂಲವಾಗಿ ಕೊಟ್ಟ ಅವರ ಕಯ್ಯಲು ಯೀ ಕೆಱೆಯ ಗದ್ದೆಯ ಹೆ –

೩೪. ಸರು ಕೊಂಡು ಬಂದ ಉರ್ತ್ತಿಯ ಸ್ತಳವೆಲ್ಲ ವಕ್ಕು ಮೂಲ ಹಡವ ಅರ್ಥ್ಥದಿಂದ ಅಧಿಕವಾದ

೩೫. ಅರ್ಥ್ಥವನು ಸಲೆ ಸಲ್ಲಿಸಿ ಕೊಂಡರು ಯೆಕ್ಕು ಹೆಗ್ಗಡೆ ಅರಸು ಜೆನ್ನಿ ತಿಮ್ಮನಾಯಕ ಯೆಲ್ಲ –

೩೬. ಪ್ಪನಾಯಕ ಕರಿಯ ಹೆಗ್ಗಡೆ ಆ ಕುಟುಂಬದ ಸಮಸ್ತರು ಯಿಂತೀ ಚತುಃಸ್ಸೀಮೆಯಿಂದೊಳಗ –

ಹಿಂಭಾಗ

೩೭. ಣ ಕೆಱೆಯ ಗದ್ದೆಯ ಸ್ಥಳ ಬೀಜವರಿಯೆಪ್ಪ ಯೆರಡು ಮಂಡೆ ಗದ್ದೆ ಅದಕ್ಕೆ ಬಂದ ಮನೆಮನೆ ತಾ –

೩೮. ಣ ಯಿವಕ್ಕೆ ಬಂದ ಬರಗನ ಕೊಡಲ ಉದಕ ಯಿವಕ್ಕೆ ಬಂದ ಮರ ಫಲ ಅಂಗೋಡು ಅಂಗ ಸಸ್ಯ ಯ –

೩೯. ಕ್ಕಿ ಮಕ್ಕಿ ಸುಗ್ಗಿ ಸುಗ್ಗಿಯಹ ಸ್ಥಳ ಯಿವಕ್ಕೆ ಬಂದ ನೀರುದಾರಿ ನಿಧಿನಿಕ್ಷೇಪ ಜಲಪಾಷಾಣ ಅಕ್ಷೀಣಿ ಅ –

೪೦. ಗಾಮಿನಿ ಸಿದ್ಧ ಸಾಧ್ಯ ಸರ್ವಾಂಗೋಡು ಅಷ್ಟಭೋಗ ಸರ್ವಾನ್ವೀಶ(ತ)ವಾದ ಕೆಱೆಯ ಗದ್ದೆ ಸ್ಥಳವೆಲ್ಲವಕ್ಕು

೪೧. ಮೂಲ ಹಡ ಅರ್ಥ್ಥದಿಂದ ಅಧಿಕವಾದ ಅರ್ಥ್ಥವನು ಯೆಕ್ಕು ಹೆಗ್ಗಡೆ ಅರಸು ಜೆಂನಿ ತಿಮ್ಮನಾಯಕ(ಕ)

೪೨. ಯೆಲ್ಲಪ್ಪನಾಯ್ಕ ಕರಿಯ ಹೆಗ್ಗಡೆ ಆ ಮುಂತಾದ ಕುಟುಂಬ ಸಮಸ್ತರಿಗೆ ಸಲೆ ಸಲ್ಲಿಸಿ ಕೊಟ್ಟು ಯೀ –

೪೩. ಪತ್ರಸ್ತವಾದ ಸ್ತಳಂಗಳೆಲ್ಲವನು ಸಹಿರಂಣ್ಯೋದಕಧಾರಾಪೂರ್ವಕ ಸರ್ವಸಾಮಾನ್ಯವಾಗಿ ಧರ್ಮಮೂ –

೪೪. ಲವಾಗಿ ಧಾರೆಯನೆಱೆಸಿಕೊಂಡರು ರಾಮಚಂದ್ರತೀರ್ಥ ಶ್ರೀಪಾದಂಗಳ ಯಿ ಕೆಱೆಯ ಗದ್ದೆಯ ಚ –

೪೫. ತುಸ್ಸೀಮೆಯೊಳಗಣ ಉರ್ತ್ತಿಯ ಸ್ತಳಂಗಳಿಗೆ ತೆಱು ಕಾಣಿಕೆ ಉಪಚಾರ ಬೆಡಿಗೆ ಆಕರ ಅಂನ್ಯ –

೪೬. ಯ ಬಿಟ್ಟಿ ಬಿಡಾರ ಅಸಿ ಅಪ್ಪಣೆ ಮನೆ ಹೊಂನು ಮೊಗಹೊಂನು ಮಂಶಾ(ತಾ)ದ ಆವ ಉಪಾತ್ತರಉ ಇ –

೪೭. ಲ್ಲದೆ ಸರ್ವಬಾಧಾಪರಿಹಾರವಾಗಿ ಸರ್ವಮಾಂನ್ಯವಾಗಿ ಧರ್ಮ್ಮಮೂಲವಾಗಿ ಬದ್ದುಬಹರು ರಾಮ –

೪೮. ಚಂದ್ರತೀರ್ಥಶ್ರೀಪದಂಗಳು ಕೆಱೆಯ ಗದ್ದೆ ಜೋಗೂರಿಗೆ ಶೊ(ತೊ)೦ಡಲೆಯ ಹೊಳೆಯ ಉದಕಕ್ಕೆ ಶೊ(ತೊ)೦ –

೪೯. ಡಲೆಯ ಹೊಳೆಯಲಿ ಕಟ್ಟುವ ಕಟ್ಟಿಗೆ ನೀರು ಹರಿವ ಶೋ(ತೋ)ಡಿಗೆ ಗೈವ ಆಳುಗಳೊಳಗೆ ಮೂಱೊಂದು

೫೦. ಪಾಲನಿಕ್ಕಿ ಶ್ರೀಪದಂಗಳ ಮನುಶ್ಯ(ಷ್ಯ)ರು ಗೈಸಿಕೊಂಬರು ಮೇಲಾದ ಯೆರಡು ಪಾಲು ಆಳನಿಕ್ಕಿಯೆ –

೫೧. ಕ್ಕು ಹೆಗ್ಗಡೆ ಮುಂತಾದ ಕುಟುಂಬ ಸಮಸ್ತರು ಗೈಸಿಕೊಂಬರು ಯೀಬರದ ಪ್ರಮಾಣಿಸಲು ಆಳ –

೫೨. ನಿಕ್ಕಿ ಯಿತ್ತಂಡದವರಿದ್ದು ಕಟ್ಟು ತೋಡ ಗೈಸಿಕೊಂಬರು ಯೀ ಶೋ(ತೊಂ)ಡಲೆಯ ಕಟ್ಟಿನ ಉದಕದೊಳ –

೫೩. ಗೆ ಯೀ ಕೆಱೆಗದ್ದೆ ಬೀಜವರಿ ಯಿಪ್ಪತ್ತಯೆರಡು ಮುಡಿಗದ್ದೆಗೆ ತಿರುಗಿಸಿ ಕೊಂಬರು ಶ್ರೀಪದಂ –

೫೪. ಗಳು ಮೇಲಾದ ಯೆರಡು ಪಾಲ ಉದಕವನು ಜೋರಾಗಿನ ಸಮಸ್ತ ಉರ್ತ್ತಿಗೆ ಪೂರ್ವ ಪ್ರಯಮಾಣಿ ನ –

೫೫. ಲು ಕೆಱೆಯ ಗದ್ದೆಯ ಮೇಲೆ ಸುಗ್ಗಿಗೆ ನೀರು ಹರಿವ ತೋಡಿನಲ್ಲಿ ನೀರು ಕೊಂಡು ಹೋಹೆಉ ಮಲ್ಲಗ –

೫೬. ದ್ದೆಕೆಳಗೆ ನಡುವಣ ಹೊಳೆಯ ಉದಕವನು ನಾವೆ ಕೆಳಗಣ ಸುಗ್ಗಿಯ ಗದ್ದೆಗೆ ತಿರುಗಿ ಕೊಂಬೆ –

೫೭. ಉ ಯೀ ಬರದ ಪ್ರಮಾ(ಣಿ)ನಲು ರಾಮಚಂದ್ರ ರಾಮಚಂದ್ರ ತೀರ್ಥಶ್ರೀಪದಂಗಳು ತಮ್ಮ ಶಿಷ್ಯ ಪಾರಂಪರೆಯಾ –

೫೮. ಗಿ ಯಿಚ್ಛಾನುಕೂಲವಾಗಿ ಧರ್ಮ್ಮಮೂಲವಾಗಿ ಸರ್ವಮಾನ್ಯವಾಗಿ ಆಚಂದ್ರಾರ್ಕ್ಕಸ್ತಾಯಿಯಾಗಿ

೫೯. ಆಳಿ ಅನುಭವಿಸಿಕೊಂಡು ಯಿಹರಿಯೆಂದು ರಾಮಚಂದ್ರತೀರ್ಥ ಶ್ರೀಪದಂಗಳಿಗೆ ಅರಸು ಹೆಗ್ಗ –

೬೦. ಡೆಯ ಕುಟುಂಬದವರು ಯೆಕ್ಕು ಹೆಗ್ಗಡೆ ಅರಸು ಜೆನ್ನಿ ತಿಮ್ಮನಾಯಕ ಯೆಲ್ಲಪ್ಪನಾಯಕ ಕರಿ –

೬೧. ಯ ಹೆಗ್ಗಡೆ ಮುಂತಾದ ಆ ಕುಟುಂಬಸಮಸ್ತರು ಒತು ವೊಡಂಬಟ್ಟು ಪೊಡವಂಟು ಕೊಟ್ಟ ಧ –

೬೨. ರ್ಮ್ಮ ಮೂಲ ಸಾಧನ (|*)ಯಿಂತಪ್ಪುದಕೆ ಸಾಕ್ಷಿಗಳು ಆದಿತ್ಯ ಚಂದ್ರಾವನಿಲೋನಲ ಉಚಧ್ಯೋರ್ಭೂ –

೬೩. ಮೀರಾಪೋಹ್ರುದೆಯಂ ಯಮಶ್ಚ ಅಹಶ್ಚ ರಾತ್ರಿಶ್ಚ ಉಭೇ ಚ ಸಂಧ್ಯೆ ಧಮ್ಮಶ್ಚ ಜಾನಾತಿ ನರಸ್ಯ ಉ –

೬೪. ತ್ರಂ (|*)ಯಿಂತಪ್ಪುದಕೆ ಸಾಕ್ಷಿಗಳು ಯಿಂದಗುನಾಯಕನ ಮಹ ಚಿಮ್ಮಣ ನಾಯಕ ಪರಜನಾಯಕ

೬೫. ಕರ್ತ್ತರವೊಪ್ಪ ಬೆದಿರಮಕ್ಕಿಯ ನಾಗರು ಬ್ರೆಂಹರು ನಾಗರು ಬ್ರೆಹರು ನಾಗರು ಬ್ರೆಹ್ಮರು ನಾಗ –

೬೬. ರು ಬ್ರೆಂಹ್ಮರು ನಾಗರು ಬ್ರೆಹ್ಮರು ಸಾಕ್ಷಿಗಳ ಒಪ್ಪ ಕಂತರ ನಾಗರು ಬ್ರೆಂಹರು ಮಂಬಿಲ ನಾ –

೬೭. ಗರ ಬ್ರೆಹ್ಮರು ಯಂತಿವರುಭೆಯಾನುಮತದಿಂದ ಊರ ನಾಡ ನಾರಣ ಸೇನಬೋವನ ಬರ –

೬೮. ಹ (||*)

೨೩. ಸ್ಥಳ : ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿರುವ ತಾವ್ರಶಾಸನ – ಉಪ್ಪುಂದ, ಉಡುಪಿ ಜಿಲ್ಲೆ.

ರಾಜವಂಶರಾಜ : ಹಾಡುವಳ್ಳಿ ಸಾಳುವರು – ಚೆನ್ನಭೈರಾದೇವಿ

ತೇದಿ : ಶಕವರುಷ ೧೪೭೯ನೆಯ ನಳ ಸಂವತ್ಸರದ ಆಶ್ವೀಚ ಶು. ೧೦ ಲೂ ಇದು ಕ್ರಿ.ಶ. ೧೫೫೬ ಸೆಪ್ಟೆಂಬರ್ ೧೪ಕ್ಕೆ ಸರಿಹೊಂದುತ್ತದೆ.

ಭಾಷೆ ಲಿಪಿ : ಕನ್ನಡ

ಪ್ರಕಟಣೆ :

೧. ಎರಿಇಎ,ಎಪಿಎಕ್ಸ್ಎ. ೧೯೭೧ – ೭೨ ಶಾ ಸಂ. ೧೮.

೨. ನರಸಿಂಹಮೂರ್ತಿ ಪಿ.ಎನ್., ೨೦೦೭, ಶಾ ಸಂ. ೭೦.

ಮಹಾಮಂಡಲೇಶ್ವರ ಭೈರಾದೇವಿಯವರ ಪುತ್ರಿ ಮಹಾಮಂಡಲೇಶ್ವರ ಚೆನ್ನಭೈರಾದೇವಿ ಅಮ್ಮನವರು ಸಂಗೀತಪುರದಲ್ಲಿದ್ದುಕೊಂಡು ಬಟ್ಟಕಳ ಮುಂತಾದ ಪ್ರದೇಶಗಳನ್ನಾಳುತ್ತಿದ್ದಳು. ಉಪ್ಪುಂದದ ಶ್ರೀನರಸಿಂಹ ತೀರ್ಥ ಶ್ರೀಪಾದಂಗಳ ಶಿಷ್ಯರಾದ ರಾಮಚಂದ್ರತೀರ್ಥ ಶ್ರೀಪಾದರಿಗೆ ಮಹಾಮಂಡಲೇಶ್ವರ ಚೆನ್ನಭೈರಾದೇವಿ ಅಮ್ಮನವರು. ಭೂದಾನವನ್ನು ಕೊಟ್ಟ ವಿವರವಿದೆ. ಮೂಲ ಹರವರಿಗೆಯಾಗಿ ಬಂದಿದ್ದ ಗೋಳಿಯ ಬರದೊಲಗಣ ಭೂಮಿಯನ್ನ ಧಾರೆಯೆರೆದು ಕೊಟ್ಟಂತಹ ವಿಚಾರ ಈ ಶಾಸನದಲ್ಲಿ ಇದೆ. ಭೂಮಿ ಮತ್ತು ಗಡಿಮೇರೆ ವಿಚಾರವನ್ನು ವಿಸ್ತಾರವಾಗಿ ಹೇಳಲಾಗಿದೆ.

ಶಾಸನ ಪಾಠ

೧. ಸ್ವಸ್ತಿ ನಮಸ್ತುಂಗಶಿರಶ್ಚುಂಬಿ ಚಂದ್ರಚಾಮರಚಾರವೇ ತ್ರೈಲೋಕ್ಯನಗರಾ –

೨. ರಂಭಮೂಲಸ್ತಂಭಾಯ ಶಂಭವೆ (||) ಶ್ರೀಮನ್ಮಹಾಮಂಡಲೇಶ್ವರರು ಭೈರಾದೇವಿ

೩. ಅಮ್ಮನವರ ಕುಮಾರಿ ಶ್ರೀಮನ್ಮಹಾಮಂಡಲೇಶ್ವರರು ಚೆಂನಭೈರಾದೇವಿ

೪. ಅಮ್ಮನವರು ಸಂಗೀತಪುರವರಾಧಿಷ್ಟಿತರಾಗಿ ಬಟ್ಟಕಳ[1] ಮುಂತಾದ ಸಮಸ್ತ

೫. ರಾಜ್ಯಂಗಳನು ಸದ್ಧರ್ಮಕಥಾಪ್ರಸಂಗದಿಂ ಪ್ರತಿಪಾಲಿಸುತ್ತಿದ್ದಂದಿನ ಶಾಲಿ –

೬. ವಾಹನಶಕವರುಷ ೧೪೭೯ನೆಯ ನಳಸಂವತ್ಸರದ ಆಶ್ವೀಚ ಶು. ೧೦ಲೂ ಶ್ರೀ

೭. ಮತ್ಪರಮಹಂಸಪರಿವ್ರಾಜಕಾಚಾರ್ಯ್ಯವರ್ಯ್ಯಪದವಾಕ್ಯ ಪ್ರಮಾಣ

೮. ಪಾರಾವಾರಾಪಾರಿಣ ಯಮನಿಯ್ಯಮಾಧ್ಯಷ್ಟಾಗಯೋಗ[2] ನಿರತರಾದ ಶ್ರೀ

೯. ಮದಾನಂದಪಾಳಪರಿಷಾಧಿಷ್ಟಿತರಾದ ಉಪ್ಪುಗುಂದದದ ಶ್ರೀನರಸಿಂ –

೧೦. ಹ್ವತೀರ್ಥ ಶ್ರೀಪದಂಗಳ ಶಿಷ್ಯರು ರಾಮಚಂದ್ರ ತೀರ್ಥ ಶ್ರೀಪದಂಗಳಿಗೆ ಶ್ರೀ –

೧೧. ಮನ್ಮಹಾಮಂಡಲೇಶ್ವರರು ಚೆಂನಭಯಿರಾದೇವಿ ಅಮ್ಮನವರು ಸರ್ವ್ವಮಾ –

೧೨. ನ್ಯ ಸ್ಥಳವಾಗಿ ಕುಳವ ಕಡಿದು ಪೊಡವಂಟು ಕೊಟ್ಟ ಮೂಲಸಾಧನದ ಭಾ –

೧೩. ಷಾಕ್ರಮವೆಂತೆಂದರೆ ಗಂಗರನಾಡಸೀಮೆಯೊಳಗೆ ನಮ್ಮ ಅರಮನೆಗೆ ಪೂ –

೧೪. ರ್ವ್ವದಿಂದಲು ಮೂಲಹರವರಿಗೆ ಬಂದ ಗೋಳಿಯ ಬಱೆನೊಳಗಣ ಸರ್ವ್ವ

೧೫. ಸ್ವಗಳನು ದೇವರಿಗೆ ಕುಳವ ಕಡಿದು ಮೂಲವಕೊಟ್ಟೆವಾಗಿ ಆಗೋಲಿಬಱೆ –

೧೬. ನ ಹೊನ್ನ ಮಾವಿನ ಸುಗ್ಗಿಗದ್ದೆಗಳಿಗೆ ಗಡಿ ಮೂಡಲು ಹೊನ್ನ ಮಾವಿನವರ ಉರ್ತ್ತಿ –

೧೭. ದಕ್ಷಿಣದಿ ತೆಂಕಲುರೂಪಿಯ ಗದ್ದೆಯ ಹಾಳಿಗಡಿ ಅದು ಬಂದಹಾಂಗೆ ಮು –

೧೮. ಲಿ ಗಡಿಯಾಗಿ ನಟ್ಟಕಲ್ಲು ಪಡುವಲು ಉಂಬುಳು ಮಾನಿಯ ಅಡಿಯಲ್ಲಿ ನೀರೆ –

೧೯. ಱೆಕಲ್ಲುವೊಳಗಾಗಿ ಹರಿದ ಹೊಂಚು ಗಡಿ ಬಡಗಲು ಹರಿದ ಹೊಳೆಗಡಿ ಮ –

೨೦. ತ್ತಂ ವೊಂದು ಮೂಡೆ ಗದ್ದೆಗೆಗಡಿ ಮೂಡಲು ಹರಿದ ಹೊಳೆಗಡಿ ತೆಂಕಲು ಸಂ –

೨೧. ಣಪ್ಪನಾಳುತ್ತಂ ವಿದ್ದ ಹೊಲೇರಿಯಗದ್ದೆಯ ಹಾಳಿ ಅಂಚುಗಡಿ ಪಡುವಲು

೨೨. ಧರೆಗಡಿ ಬಡಗಲು ಹರಿದ ಹೊಳೆಗಡಿ ಮತ್ತಂ ಹೊನ್ನ ಮಾವಿನ ತೊಂಡಲೆ

೨೩. ಗದ್ದೆಗ ಗಡಿ ಮೂಡಲು ಹರಿದ ಹೊಳೆಗಡಿ ತೆಂಕಲು ರೂಪಿಯಗದ್ದೆಯ ಅಂಚು ಆ ಬ

೨೪. ೦ದ ಹಾಂಗೆ ಮಕ್ಕಿಯ ಗದ್ದೆಯ ದರೆಗಡಿ ಪಡುವಲು ನೆಮಿನಾಯಮಕನ ಗದ್ದೆಯಹಾ –

೨೫. ಳಿಗಡಿ ಅಂಬಂದಹಾಂಗೆ ತೆಂಮಿನಾಯಕನ ಉರ್ತ್ತಿಬಡಗಲು ಬಱೆನ ಗದ್ದೆ

೨೬. ಆ ಬಂದ ಹಾಂಗೆ ಮಾವಿನ ಗದ್ದೆ ಹಾಳಿ ಅಂಚುಗಡಿ ಮತ್ತಂ ಮೂಡಲು ತಮ್ಮಿ ನಾ

೨೭. ಯಕನ ಗದ್ದೆಯ ಹಾಳಿ ಅಂಚುಗಡಿ ಮತ್ತಂ ಸಿಂಗನ ಗದ್ದೆಗೆ ಗಡಿ ಮೂಡಲು ತಿ –

೨೮. ಮ್ಮ ನಾಯಕನ ಗದ್ದೆಯ ಹಾಳಿಗಡಿ ತೆಂಕಲು ಹೊಳೆಗಡಿ ಪಡುವಲು ಬಡಗಲು

೨೯. ತಿಮ್ಮನಾಯಕನ ಗದ್ದೆ ಹೊಳಿಗಡಿ ಮತ್ತಂ ಹಪ್ಪಿಗದ್ದೆಗೆ ಗಡಿ ಮೂಡಲು ಕಪ್ಪು ಕೋ –

೩೦. ಲಿಯ ಗದ್ದೆಯ ಹಾಳಿಗಡಿ ತೆಂಕಲು ಹರ್ತಿರಗದ್ದೆಯ ಹಾಳಿಗಡಿ ಪಡುವಲು ಹೊ –

೩೧. ನ್ನ ಮಾವಿನ ನಾಡವರ ಮಕ್ಕಿಗದ್ದೆಯ ಹಾಳಿಗಡಿ ಬಡಗಲು ರೂಪಿಯ ಗದ್ದೆ ಅ –

೩೨. ಱೆಯ ಹಾಳಿ ಅಂಚುಗಡಿಯಿಂತಿ ಚತುರ್ಗ್ಗಡಿ ಯಿಂದೊಳಗುಳ ಸುಗ್ಗಿ ನಾಲ್ವಂ –

ಹಿಂಭಾಗ

೩೩. ಡೆ ಮು ೧೬ ಗದ್ದೆ ಮತ್ತಂ ತಲಮಾನಿಯೊಳಗೆ ತೆಂಗಿನಹೋಡಿಲ ಗದ್ದೆಗೆ ಗಡಿಮೂಡ –

೩೪. ಲು ಬೊಮ್ಮರಸ ಸಾವಂತನಕಮ್ಮಾ ಱೆಗದ್ದೆಯ ಅಂಚುಗಡಿ ಆ ಬಂದ ಹಾಂಗೆ

೩೫. ತಿಮ್ಮಣ್ಣಸೇನಬೋವರಾಳಿಕೆಯ ಕಲ್ಲಗದ್ದೆ ಹಾಳಿ ಅಂಚು ಗಡಿತೆಂಕಲು ತಲ ನಿ –

೩೬. ರ ಹಾಡಿಲ ಹಾಳಿ ಅಂಚುಗಡಿ ಮೂಡಲು ಬೆಳುಮಾವಿನಮಕ್ಕಿ ಗುರುಗಳ ಗದ್ದೆ

೩೭. ತಲನಿರ ಹುಡಿಲ ಸುಗ್ಗಿಗದ್ದೆ ದರೆಗಡಿ ತೆಂಕಲು ಹರಿದ ಹನವಲು ಗಡಿ ಪಡು –

೩೮. ವಲು ಆ ಒಂದ ಹಾಂಗೆ ನಿರೆಱೆವೊಳಗಾಗಿ ಹರಿದ ಹೊಂಚುಗಡಿ ಬಡಗಲು ಬೊ –

೩೯. ಮರಸ ಸಾವಂತನ ಮಕ್ಕಿಗದ್ದೆ ದರೆಗಡಿ ಆ ಬಂದ ಹಾಂಗೆ ಸಾಲೆಮಕ್ಕಿಗದ್ದೆ ದರೆ

೪೦. ಗಡಿಯಿಂತಿ ನಾಲ್ಕು ಗಡಿಯಿಂ ವೊಳಗುಳ್ಳ ಸುಗ್ಗಿ ನಾಲ್ವಂಡ ಮು ೪೧ ಮಕ್ಕಿ ನಾಲ್ವಂಡೆ

೪೧. ಸಹ ಮಗ್ಗಿ ಮಕ್ಕಿ ನಾಲ್ವಂಡ ಮು ೬ ಆ ಮನೆ ಮನೆ ಠಾಉ ಉಭೆಯಂ ಯಿ ಸಾಧ –

೪೨. ನಸ್ವವಾದ ಸುಗ್ಗಿ ಮಕ್ಕಿ ಸಹ ನಾಲ್ವಂಡೆ ಮು ೨೨ ಗದ್ದೆಯ ಸ್ಥಳಕ್ಕೆ ನಮ್ಮಿಂದಲು ಮೂಲ

೪೩. ಹಡವ ಅರ್ಥದಿಂದ ಅಧಿಕಾವದರ್ಥ್ಥವನು ತೆಗೆದುಕೊಂಡು ಆಸರ್ವ್ವವನು ಮೂಲ

೪೪. ಪರಿಚ್ಛೇದ್ಯ ಹಿರಣ್ಯೋದಕಧಾರಾಪೂರ್ವಕವಾಗಿ ಕುಳವ ಕಡಿದು ಸರ್ವ್ವಮಾನ್ಯಸ್ಥ –

೪೫. ಳವಾಗಿ ಮೂ(ಲ)ಧಾರೆನೆಱೆದುಕೊಂಡು ಬೇಕೆಂದು ದೇವರು ನವಗೆ ಹೇಳಿದ ಸಮ್ಮಂ –

೪೬. ಧ ಯಿಂತಿ ಸಾಧನಸ್ತವಾದ ಸುಗ್ಗಿ ಮಕ್ಕಿಸಹ ನಾಲ್ವಂಡ ಮು ೨೨ ಗದೆ ಅದಕ್ಕೆ ಬಂ

೪೭. ದ ಮನೆ ಮನೆತಾಣ ಸುಗ್ಗಿ ಸುಗ್ಗಿ ಯಹಸ್ಥಳ ಮಕ್ಕಿ ಮಕ್ಕಿಯಹ ಸ್ಥಳ ಕಡಿವ ಕುಮರಿ

೪೮. ಹೊಡವ ಹಕ್ಕಲು ಬೆಟ್ಟು ಜಿಪ್ಪೆಹಕ್ಕಲು ಹಳಗಾನು ಮಂದಾ ಮರಫಲ ನಿರುದಾ –

೪೯. ರಿ ನಿಧಿನಿಕ್ಷೇಪ ಜಲಪಾಷಾಣ ಅಕ್ಷಿಣಿ ಆಗಾಮಿನಿ ಸಿದ್ದ ಸಾಧ್ಯ ಅಷ್ಟಭೋಗಸಮ

೫೦. ನ್ವಿತವಾದ ಉರ್ತ್ತಿಗೆ ದೇವರಿಂದ ಮೂಲ ಹದದ ಅರ್ಥ್ಥದಿಂದ ಅಧಿಕವಾದರ್ಥವನು

೫೧. ಅರ್ಥಕ್ಷಪರಿಛ್ಛೇದ್ಯವಾಗಿ ದೇವರಿಂದ ತೆಗೆದುಕೊಂಡು ಮೂಲಪರಿಛ್ಛೇದ್ಯ ಹಿರ –

೫೨. ೦ಣ್ಯೋದಕಧಾರಾಪೂರ್ವಕ ಆಚಂದ್ರಾರ್ಕಸ್ಥಾಯಿಯಾಗಿ ಯಿಂತಿ ಉರ್ತ್ತಿಯನು ದೇ –

೫೩. ವರಿಗೆ ಕುಳವ ಕಡಿದು ಸರ್ವ್ವಮಾನ್ಯಸ್ಥಳವಾಗಿ ಮೂಲಧಾರೆಯನೆಱೆದು ಕೊಟ್ಟೆ ಉ

೫೪. ಯಿಂತಿ ಸಾಧನಸ್ಥವಾದ ಉರ್ತ್ತಿಗೆ ಅಕರ ಅನಾಯ ಕಾಣಿಕೆ ಖಡ್ಡಾಯ ಬಿಟ್ಟ ಬಿಡಾರ

೫೫. ಆಸೆ ಅಪ್ಪಣೆ ಅರಸಿಂಹ ಹುಪ್ಪಿನಾಡಿಗೆ ಬಂದ ಕಾಣಿಕೆ ಮುಂತಾದ ಆವ ಉಪೋ –

೫೬. ತರಂಗಳು ಯಿಲ್ಲದೆ ಸರ್ವ್ವಮಾನ್ಯಸ್ಥಳವಾಗಿ ದೇವರು ದೇವರ ಶಿಷ್ಯ ಪಾರಂಪರೆ ಯಾ –

೫೭. ಗಿಯಿವ್ವಾನುಕೂಲವಾದ ಧರ್ಮ್ಮವನು ನಡಸಿಕೊಂಡು ಸುಖದಲು ಯಿಹುದೆಂದು

೫೮. ಶ್ರೀರಾಮಚಂದ್ರತೀರ್ಥ ಶ್ರೀಪದಂಗಳಿಗೆ ಚೆಂನ್ನಭೈರಾದೇವಿ ಅಮ್ಮನವರು ಸ –

೫೯. ರ್ವ್ವಮಾನ್ಯಸ್ಥಳವಾಗಿ ಕುಳವ ಕಡಿದುಕೊಟ್ಟ ಮೂಲಸಾಧನ ಯಿಂತಪ್ಪುದಕ್ಕೆ ಧ –

೬೦. ಮ್ಮ ಸಾಕ್ಷಿಗಳು ಆದಿತ್ಯ ಚಂದ್ರಾವನಿಲಾನಲೋಚದ್ಯೌರ್ಭೂಮಿರಾಪ್ರೋಹ್ರು –

೬೧. ದಯಂ ಯಮಶ್ಚ ಅಹಶ್ಚ ರಾತ್ರಿಶ್ಚ ;ಉಭೇಚ ಸಂಧ್ಯೆ ಧರ್ಮಶ್ಚ ಜಾನಾತಿ ನರ –

೬೨. ಸ್ಯುಉರ್ತ್ರಂ(||)ದಾನಪಾಲನಯೋರ್ಮಧ್ಯೆ ದಾನಛ್ರೇಯೋನು ಪಾಲನಂ ದಾನಾತ್ಸ್ವರ್ಗ್ಗ

೬೩. ವಮಾಪ್ನೋತಿಪಾಲನಾದಚ್ಚುತಂ ಪದಂ ಚೆಂನಬ್ಬೆ ಬಹ

೨೪. ಸ್ಥಳ : ಗ್ರಾಮದಲ್ಲಿರುವ ಬಂಡ ಬಸದಿಯ ಆವರಣದಲ್ಲಿರುವ ಕಲ್ಲು ಶಾಸನ – ಭಟ್ಕಳ, ಉತ್ತರಕನ್ನಡ ಜಿಲ್ಲೆ

ರಾಜವಂಶರಾಜ : ಹಾಡುವಳ್ಳಿ ಸಾಳುವರು – ಚೆನ್ನಭೈರಾದೇವಿ

ತೇದಿ ವಿವರ : “ಶಕವರ್ಷ ೧೮೭೧ನೆಯ ನಳ ಸಂವತ್ಸರದ ಕಾರ್ತಿಕ ಬ ೫ ಲು” ಇದು ಕ್ರಿ.ಶ. ೧೫೫೬, ಅಕ್ಟೋಬರ್ ೮ಕ್ಕೆ ಸರಿ ಹೊಂದುತ್ತದೆ.

ಭಾಷೆ ಲಿಪಿ : ಸಂಸ್ಕೃತ – ಕನ್ನಡ

ಪ್ರಕಟಣೆ : ಕ.ಇ., ೧೯೩೯ – ೪೦ ಶಾ ಸಂ. ೧೭.

ವರ್ಧಮಾನ ಜಿನ ಸ್ತುತಿಯಿಂದ ಪ್ರಾರಂಭವಾಗುವ ಈ ಶಾಸನದಲ್ಲಿ ೨೪ನೆಯ ಸಾಲಿನ ತನಕ ಸಂಸ್ಕೃತ ಭಾಷೆಯಲ್ಲಿ ಭಟ್ಟಕಳ ಪ್ರದೇಶವನ್ನು ವರ್ಣಿಸಲಾಗಿದೆ. ಶಾಸನ ಪ್ರಾರಂಭದಲ್ಲಿ ಕೃಷ್ಣದೇವರಾಯನ ಸೊಸೆ ಚೆನ್ನಭೈರಾದೇವಿ ಮತ್ತು ಅವಳ ಮಂತ್ರಿ ಜೆಟ್ಟಿನಾಯಕನನ್ನು ಪರಿಚಯಿಸುತ್ತದೆ. ನಾರಣನಾಯಕನು ಲಿಂಗಮ್ಮಳನ್ನು ವಿವಾಹವಾದನು ಅಲ್ಲದೇ ಆತನು ವರ್ಧಮಾನ ಜಿನೇಂದ್ರನನ್ನು ಮಾಡಿಸಿ ಬಸದಿಯ ಮುಂಭಾಗ, ಆವರಣ ಗೋಡೆ ಮತ್ತು ಹೂದೋಟ ಮಾಡಿದ್ದನ್ನು ಶಾಸನದಲ್ಲಿ ಹೇಳಲಾಗಿದೆ. ಮಹಾಮಂಡಲೇಶ್ವರ ಭೈರಾದೇವಿ ಅಮ್ಮನವರ ಪುತ್ರಿ ಚೆನ್ನಭೈರಾದೇವಿ ಅಮ್ಮನವರು ಸಂಗೀತಪುರದಲ್ಲಿ ನೆಲೆಸಿದ್ದು ಬಟ್ಟಕಳ ಮುಂತಾದ ರಾಜ್ಯವನ್ನಾಳುತ್ತಿದ್ದಳು. ಮೇಲೆ ಉಲ್ಲೇಖಿಸಿದ ದಿನದಂದು ತೋರಣ ಸೆಟ್ಟಿ ಭಟ್ಟಕಳದಲ್ಲಿ ತಾನೇ ಕಟ್ಟಿಸಿದ ಶ್ರೀವರ್ಧಮಾನ ತೀರ್ಥಂಕರ ಬಸದಿಯಲ್ಲಿ ನಿತ್ಯ ನೈಮಿತ್ತಿಕ ಅಂಗರಂಗ ನೈವೇದ್ಯ ಆಹಾರದಾನ, ಹಾಲಧಾರೆಯಾಗಿ ಬಿಟ್ಟಂತಹ ದಾನ ಮುಂತಾದ ವಿವರವನ್ನು ಶಾಸನವು ತಿಳಿಸುತ್ತದೆ. ದೇವಾಲಯದಲ್ಲಿನ ಅಮೃತಪಡಿ ಸೇವೆ, ಕಾರ್ತಿಕ ಪೂಜೆ, ಶಿವರಾತ್ರಿ ಜೀವದಯಾಷ್ಟಮಿ, ಯುಗಾದಿ, ಶ್ರುತಪಂಚಮಿ, ಶ್ರಾವಣ ಮಾಸದಲ್ಲಿ ಹಾಲಿನ ಅಭಿಷೇಕ, ಅಷ್ಟ್ಯಾನಿಕ ದಶಲಕ್ಷಣದ ಪೂಜೆ ಹಾಲಧಾರೆ ಮತ್ತು ಕಜ್ಜಾಯ ಸೇವೆ ನಡೆಯುತ್ತಿದ್ದನ್ನು ಶಾಸನ ದಾಖಲಿಸಿದೆ.

[1] ಕಳವನ್ನು ಸಾಲಿನ ಮೇಲೆ ಬರೆದಿದೆ.

[2] ‘ನಾ’ವನ್ನು ‘ಗ’ ಎಂದು ತಿದ್ದಂತಿದೆ.