ಶಾಸನ ಪಾಠ

೧. ೦ಶ್ರೀಮತ್ಪರಮಗಂಭೀರಸ್ಯಾದ್ವಾದಾಮೋಘಲಾಂಚ್ಛನಂ ಜೀಯಾತ್ರೈಲೋಕ್ಯನಾಥಸ್ಯ ಶಾಸನಂ ಜಿನ

೨. ೦ಶಾಸನಂ || ವರ್ಧಮಾನೋ ಜಿನೋ ಜೀಯಾದ್ಗೌತಮಾದಿ ಮುನಿಸ್ತುತಃ || ಸುತ್ರಾಮಾರ್ಚಿತ ಪಾದಾಬ್ಜಃವರಮಾರ್ಹಂತ್ಯ [ವೈ] –

೩. ೦ಭವಃ || ಭಾಸ್ವದ್ಫಟಕಳಂ ವಿಭಾತಿ ಭುಪಾಲಸೌಧೋತ್ಕರಂ ಸದ್ದರ್ಮಾಶ್ರಮ ಸಂಯುತಂ ಜಿನಗೃಹೈರ್ವಿಭ್ರಾಜಿತಂ ಮಂಗಲೈಃ [||] ಮು –

೪. ಕ್ತಾರತ್ನಗಜಾಶ್ವ ಚಂದ್ರದಸನಸ್ವವರ್ಣಾದ್ಯಧಾ . ತ್ಸವ್ರಜದ್ರೋಣ . . ನಿಚಿತಾಬ್ಧಿ ಮಂಡಿತ ಮಿಲಾನಾಥೇದ್ರಸಿರಿಪಾಲಿತಂ || ವೀರಶ್ರೀವರದೇವರಾಜ ಕ್ರುತಸತ್ಕಲ್ಯಾಣ ಪೂಜೋತ್ಸ –

೫. ವೋ ವಿದ್ಯಾನಂದ ಮಹೋದಯ್ಯೆಕನಿಲಯಃ ಶ್ರೀ ಸಂಗಿರಾಜಾರ್ಚಿತ (೦) ಃ | ಪದ್ಮಾನಂದನಕ್ರುಷ್ಣದೇವವಿನುತಃ ಶ್ರೀವರ್ಧಮಾನೋ ಜಿನಃ ಪಾಯಾತ್ಸಾಳುವ –

೬. ಕ್ರುಷ್ಣದೇವನೃಪತಿಂ ಶ್ರೀಶೋರ್ದನಾರೀಶ್ವರಃ || ಮೇದಿನ್ಯಾಂ ಜಿನಪಾದಪೂಜನಪರಾ ಪೂಱ್ವಾಸ್ರಭುಪಾಕೃತಿಃ ಶ್ರೀಮತ್ಸಾಳುವಕೃಷ್ಣದೇವ ದರ –

೭. ಣೀ ಕಾಂತಸ್ನುಷಾ ಶ್ರೀಮತೀ | ವಿದ್ವದ್ರಾಜ್ಞ ಕವೀಂದ್ರ ಸಂಸ್ತುತ ಗುಣಾ ಸರ್ವ್ವಾವನಿ ವಲ್ಲಭೈಃ . ಜ್ಯಾ ರಾಜತಿ ಚೆಂನ್ನಭೈರವಿ ಮ –

೮. ಹಾದೇವೀ ಯಶೋಭೂಷಿತಾ ||೫|| ಚೆನ್ನಭೈರವದೇವ್ಯಾ ಃ ಶ್ರೀ ಪ್ರಧಾನಃ ಕೀರ್ತ್ತಿ ವಿಕ್ರಮಃ ಸಾಮಾದಿ ಷಡ್ಗುಣಾಸಕ್ತೋರಾಜತೇ ಜೆಟ್ಟಿನಾಯಕಃ | ಶ್ರೀಮಾನ್ವೀರಣ ನಾ

೯. ಯಕೋ ಜನಹಿತಃ ಸರ್ವ[ಜ್ಞ] ಸೇವಾಪತಿಃ ರಾಮಾಭಿಃ [ಕ*] ಮನೀಯ ಸದ್ಗುಣ ಗಣೋ ವಿದ್ವತ್ಕವೀಂದ್ರದ್ರುಮಃ | ಸಂಗ್ರಾಮಾಗತ ವೀರ ವೈರಿ ವನಿತಾವೈಧವ್ಯದಾನ ಕ್ಷಮೋ –

೧೦. ಭಾಸ್ವದ್ವಿಕ್ರಮಕೀರ್ತಿಭೂಷಿತಧರಾಚಕ್ರೋಜಯತ್ಯನ್ವಹಂ | ಪತ್ನೀ ತಿಂಮರಸೀ ಸತೀ ಗುಣವತೀರಾಕಾಮೃಗಾಂಕಾನನಾ ಧೀಮದ್ವೀರಣ ನಾ –

೧೧. ಯಕಸ್ಯ ಮಹತಸ್ಸದ್ಧರ್ಮಪದೋ[ಸುಧೀಃ] [||*] ಸಚ್ಚಾರಿತ್ರವತೀಚಕಾದಿಚಿಬಳಿ ಖ್ಯಾತಾ ಸುವರ್ಣೋಜ್ವಲಾ ಸೀತಾ ಶ್ರೀರಘುರಾಮಚಂದ್ರ ನೃಪತೇರ್ಜಾತಾಯಥಾ ರಾಜತೇ [||*]

೧೨. ತಯೋಃಪುತ್ತೋಜನಿ ಶ್ರೀಮಾನ್ ವೀರೋ ನಾರಣನಾಯಕಃ | ಖಂಡಿತಾರಾಶಿ ಸಂದೋಹಃ | ಕಾಮಿನೀ ಸಮಸಾಯಕಃ || ಭಾರ್ಯಾ ನಾರಣನಾಯಕಸ್ಯ ಮ –

೧೩. ಹ(ಯ)ತಃ ಸಾಧ್ವೀ ತ್ರೀವರ್ಗೋದ್ಬುರಾ ಲಿಂಗಮ್ಮಾ ಜನಿ ರಾಜಸಂಸ್ಸತಮತಿಃ ಶ್ರೀದಾನ ಪ್ರಜೋತ್ಸುಕಾ | ಪದ್ಮಾಕ್ಷೀವ್ರತಶೀಲ ಸಂಪದುದಯಾ ಭಾಸ್ವದ್ಗುಣಾಲಂಕೃತಾ

೧೪. ಶ್ರೀನಾರಾಯಣ ಸಂಭವಸ್ಯ ಜಯತಿ ಶ್ರೀವೈಜಯಂತೀವ ಸಾ ||೧೦|| ಬಟುಕಳಪುರ ಲೋಕಶ್ರೀವರೋ ನಾರಣಾ[೦*]ಕಃ ಕೃತಜಿನಪತಿಸದ್ಮಾ ಪ್ರಾಪ್ತಭೋಗಾದ್ಯ –

೧೫. ಪದಃ | ಗುಣಮಣಿವರರಾಶಿಃ ಶ್ರೀಲಸ[ಲ್ಲಿಂ]ಗ[ಮೇ]ಶಃ ಸ ಜಯತಿ ಗತಪಾಪಃ ಶತ್ರು ಸಿಂಹಾರ ಕೋಪಃ ||ನಾರಣ [ನಾ*]ಯಕ ರತ್ನಂ ನಾರೀಮುಖಮುಕರನಮಲ

೧೬. ಸದ್ಗುಣಿಭೂಷಂ ಮಾರಾರಿ ಜಿನಪದಾಂಬುಜಸಾರಂಗಂ ಬಾಳ್ಗೆ ವಿಬುಧಸಂಸ್ತುತವೃತ್ತಂ ||೧೨ [||*] ಜಾತಾ ನರಣನಾಯಕಸ್ಯ ಸಹಾ ಜಾಯಾ ಸಂ –

೧೭. ಕಮಾಂಬಾ ಸತೀ ತಸ್ಯಾಂ [ಮಲ್ಲರಸೀಚ] ಭದ್ರವನಿತಾ ಶ್ರೀತಿಂಮ್ಮಕಸ್ಯಂಗನಾ [||*]ಲಕ್ಷ್ಮೀರ್ವಾಗಿರಿಜಾಜನೀಂದುವದನಾ ಶೃಂಗಾರಸಾರೋದಯಾ ಸದ್ಧರ್ಮೋದಯ –

೧೮. ಪರ್ವತಾಂಬರ ಮಣಿಜ್ಜಾತೇಸ್ನುಚೀಭೂನುತೇ [||*] ಸಿದ್ದಾರ್ಥಪ್ರಿಯಕಾರಿಣೀ ಸಂತನಯಃ ಶ್ರೀವರ್ಧಮಾನೋ ಜಿನಃ | ಶ್ರೀನಾಥಾನ್ವಯನಾಕಬಾಲತ[ರ*]ಣಿಃ ಶ್ರೀಗೌತಮಾ

೧೯. ದಿಸ್ತುತಃ | ಕಲ್ಯಾಣಾಚ್ಚಲ ಪಾಂಡುಕಾಗ್ರಕೃತ ಸುಸ್ಥಾನೋಜಯತ್ಯನ್ವಹಂ ಶ್ರೀಮನ್ನಾರಣ ನಾಯಕೋರಾರಚಿತ ಶ್ರೀಜೈನಧಾಮಸ್ಥಿತಃ ||೧೪ [||*]ಶ್ರೀಮಾನ್ ನಾರಣನಾಯ

೨೦. ಕೋವ್ಯರಚಯಚ್ಚೈತ್ಯಾಲಯಂ [ಶೆ]ರ್ಮ್ಮದಂ | ಶ್ರೀಮಂತಂ ಮುಖಮಂಡಪಂ ಮುನಿಗಣಾವಾಸಂ ಚ ಭ[ವ್ಯ]೦ ಸ್ವ[ಯಂ] ಪ್ರಾಕಾರಂ ಜಿನ ಪೂಜನಾರ್ಥಮಮಲಂ

೨೧. ಸತ್ಪುೞ್ಪವಾಟಂ ವರಂ ಶಕ್ಯಾ ವೀರಣನಾಯಕೋರು ಜಲಧಿಪ್ರಾಲೇಯರೋ ಚಿರ್ಮುದಾ || ವರ್ದ್ಧಮಾನಜಿನೇಂದ್ರಸಯ ಪ್ರತಿಷ್ಠಾಮಕರೋತ್ಸು [ಧೀಃ} ಸಂ [ಘ] ಪೂಜಾ

೨೨. ಮನ್ನದಾನಂ ಶ್ರೀಮನ್ನಾರಣಾಯಕಃ | ಆಯುಷ್ಮ ತೋ ನಾರಣನಾಯಕಸ್ಯ ತರ್ದ್ದೇಶ ಲೋಕಾಪುರುಷಾಃ ಪ್ರಸಿದ್ಧಾಃ || ಕುರ್ವಂತು ಕಲ್ಯಾಣಸು [ಖಾ]ಯುರಾರೋ

೨೩. ಗ್ಯ ಸೌಭಾಗ್ಯಸಮೀಹಿತಾನಿ ||೧೬|| ಶ್ರೀವರ್ದ್ಧಮಾನ ಮುನಿರಾಜ ಕವಿತ್ವರೀತಿ [ಃ*] ಪೀಯೂಷತೋಪಿ ಸ ವಿಶೇಷ ಗುಣಾವಿಭಾತಿ ಕರ್ಣೇರ್ಪಿತಾ ವಿಬುಧತಾಂ ವಿತನೋತಿ

೨೪. ನೃಣಾಂ ವಿದ್ವಂತ್ಕಲನ್ಮ ಕುಟಕುಂಡಲ ತಾಂಡವಶ್ರೀಃ ||೧೬|| ಶ್ರೀಮಂನ್ಮಹಾಮಂಡಲೇಶ್ವರರು ಭೈರಾದೇವಿ ಅಂಮ್ಮನವರ ವರಕುಮಾರಿಯರು ಶ್ರೀಮನ್ಮಹಾ

೨೫. ಮಂಡಲೇಶ್ವರರು ಚೆಂನಭೈರಾದೇವಿ ಅಂಮನವರು ಸಂಗೀತಪುರವರಾಷ್ಟಿತರಾಗಿ ಬಟ್ಟಕಳ ಮುಂತಾದ ರಾಜ್ಯವನು ಸದಂಡ ಕಥಾಪ್ರಸಂಗದಿಂ ಪ್ರತಿಪಾಲಿ

೨೬. ಸುತಯಿದಂದಿನ ಶಾಸ್ತಿ ಶ್ರೀ ಜಯಾದ್ಭುದಯ ಶಾಲಿವಾಹನ ಶಖವರುಷ ೧೪೭೧ನೆಯ ನಳಸಂವತ್ಸರದ ಕಾರ್ತಿಕ ಬ ೫ ಲು ಶ್ರೀಮತು ತೋರಣಸೆ[ಟ್ಟಿ]ಯ ವೀರ –

೨೭. ನಾಯಕರ ಮಗ ನಾರಣನಾಯಕನು ಬಟಕಳದಲ್ಲಿ ಚಿಂಮನಕ್ಕಳಿಯೊಳಗೆ ತಾಂಉ ಕಟ್ಟಿಸಿದ ಬಸ್ತಿಯ ಶ್ರೀ ವರ್ಧಮಾನತೀರ್ಥಕರ ಪಾದ ಮೂಲದಲ್ಲಿ ನಡುಸುವ ನಿತ್ಯನಯಿ

೨೮. ಮಿತ್ತಿಕ ಅಂಗರಂಗ ನೈವೇದ್ಯ ಆಹಾರದಾನ ಹಾಲಧಾರೆ ಮು[೦*]ತ್ತಾದ ಧರ್ಮಕೆ ಸಷ್ಟಾಂಗವೆಱಗಿ ಪೊಡವಟ್ಟು ಬಿಡುದೇವಸ್ವವಾಗಿ (ಬಿ)ಬಿಟ್ಟು ಬರಸಿದ ತಾಂಬ್ರ ಸಾಧನದ ಭಾ

೨೯. ೦ಷಾಕ್ರಮವೆಂತೆಂದರೆ | ಶ್ರೀಮನ್ಮಹಾಮಂಡಲೇಶ್ವರರು ಚೆಂನ್ನಭೈರಾದೇವಿ ಅಂಮನವರ ಕಯ್ಯಲು ತೆಂಕಭಾಗದಲಿ ಮೈಕಳದ ಸರ್ವಶ್ವಕ್ಕೆ ಅರ್ಥಪರಿತ್ಸೇದ್ಯವಾಗಿ ಕಾಣಿ

೩೦. ೦ಕೆಯ ಮಾಡಿ ಮುಲಪರಿತ್ಸೇದ್ಯವಾಗಿ ಹಿರಂಣ್ಯೋದಕ ಧಾರಾಪೂರ್ವಕ ಆಚಂದ್ರಾರ್ಕಸ್ಪಾಯಿಯಾಗಿ ಕುಳಖಂಡಿತ ಸರ್ವಮಾಂನ್ಯಸ್ತಳವಾಗಿ ಮುಲವ ಪಾಲಿಸಿಕೊಂಡು ನಾ[ಉ]

೩೧. ೦ಮುಲವಾಗಿ ಆಳುತ್ತಂ ಯಿದ್ದ ಸರ್ವಶ್ವಮತ್ಮಂ ನಂನವೋ[ಭೋ]ಗಗಳ ಕಯ್ಯಲೂ ಮುಲಿಗೆ ಮುಲವ ಬಿಡಿಸಿಕೊಂಡು ನಾನು ಅಳುತ್ತಂವಿದ್ದ ಮುಲ ಮುಂತಾದ

೩೨. ಸರ್ವಶ್ವಕೆ ಸಹ ಗಡಿ ಮುಡಲು [ಕ]ಬಳಿ ಚೆಲಿ ಕುಂದ ಬಿದ್ದ [ಹಾ]ಳಗಡಿಯೆಲ್ಲಿ ನಟ ಕಲ್ಲುಗಡಿ | ತೆಂಕಲುನೀಱೆರಕ ಚರಟುಗೋಳಿಯೆಲ್ಲಿ ನಟ ಕಲ್ಲು ಗಡಿ ಪಡುವಲು

೩೩. ವೊಸರಿಯ ಹಾಳೆ ಗಡಿ | ಬಡಗಲು [ವ] . ಸಲಿದ ಹೊಳೆಹಳಿಯ ಸರ್ವಶ್ವದ ಬೇಲಿ ಗಡಿಯೆಲಿ ನಟ . ಕಲ್ಲು ಗಡಿ ಯಿಂತೀ ನಾಲ್ಕು ಗಡಿಯಿಂದೊಳಗುಳ್ಳ ಮೈಕಳದ ಸೀ

೩೪. ಮೆಯ ಧರ್ಮಸ್ತಳದೊಳಗೆ ಮುಡಿ ಗಡಿ [ಮು]ಲದಲ್ಲಿ ಕಟ್ಟಿದ ಗೇಣಿಯ ವಿವರದಲು ಬಿಡು ದೇವಸ್ವವಾಗಿ ಬಿಟ್ಟ ತಲಕೋಡ ಸರ್ವಶ್ವಕೆ ಗಡಿ ಮೂಡಲು | ನಟ್ಟ ಮುಕ್ಕಡೆ

೩೫. ಕಲ್ಲುಗಡಿ ತೆಂಕಲು ನಿಱೆರಕದ ಗಡಿ ಅಲ್ಲಿ ನಟ್ಟ ಕಲ್ಲು ಗಡಿ ಪಡುವಲು ಗಾರಡನಾಉದನ ಮನೆ ಮಲ್ಲಗದೆಂಯ ಗಡಿ ಕೆಳಗಣ ತಾಱೆ ಗದೆಯ ಗಡಿಯಲ್ಲಿ ನಟಕಲು

೩೬. ಗಡಿ ಬಡಗಲು ನಿಱೆರಕದಲ್ಲಿ ನಟ ಕಲು ಗಡಿ ಯಿಂತ್ತೀ ನಾಲ್ಕು ಗಡಿಯಿಂದೊಳಗುಳ ಸುಗ್ಗಿಮೆಕ್ಕೆ ಮಕ್ಕಿಗೆ ಸಹಾ ಬಿತ್ತುವ ಬೀಜ ಮು ೧ಕ್ಕೆ ಅಲ್ಲಿಯ ಹಾ ೬೦ ಲ್ಕೆದಲ್ಲಿ ಕಟ್ಟಿದ

೩೭. ಗೇಣಿ ಅಕ್ಕಿಯ ವಿವರ | ತೆಲಕೋಡು ಬಂಕಸೆಟ್ಟಿಯ ಹಾಳಿ ಸಹ ಮು ೪ದ ೫೦ಗೆ ಪ್ರತ್ತಿ ಮು ೧ಕ್ಕೆ ಅಕ್ಕೆ ಅಲ್ಲಿ ಹ ೬೦ ಲ್ಕೆದಲ್ಲಿ ಕಟ್ಟಿದ ಗೇಣಿ ಅಕ್ಕಿರ್ಮು ಮವಿನಗದ್ದೆ

೩೮. ಹೊಳೆಸಾಲು ಬಿರು[ದಾ]ಳುವನಗ[ದ್ದೆ] ಮೆಕ್ಕೆ ಮಕ್ಕಿ ಸಹಾ [೫೭] ಮೂಡೆ ಗದ್ದೆಗೆ ಕಟ್ಟಿದ ಗೇಣಿ ಅಮು ೧೫ ನಾರಣ ಬಿಯೀದ್ಯನ ಮಕ್ಕಿ ಮು ೧ ಱ ೪೦ ಗೆ ಅಕ್ಕು ಮು ೧ || ಕ

೩೯. ಲ್ಲ ಕೋಡಿಂದ ಗದ್ದೆ ಮು ೪ ಹ ೧೦ ಮಕ್ಕಿ ಮು ೪ ಸಹ ಮು [೯] ೧೦ ಗೆ ಗೇಣಿ ಅಮು ೧೧ || ಬಿಡುವಳ ಬಯಲ್ಲು ಮು ೪ ಗೇಣಿ ಅಡಿಮಕ್ಕಿ ಹ ೫೦ ಸಹ ಮು ೪ ಹ ೫

೪೦. ಗೆ ಕಟ್ಟಿದ ಗೇಣಿ ಅ ಮು ೧೫ ಬಿಡುವಳ ಬಯಲು ಮು ೪ ಗದೆಗೆ ಗೇಣಿ ಅಕ್ಕಿ ಮು ೧೨ ಕುಂಬಾರ ಹಳಿ ಹ ೨೦ ಹಾನೆಗೆ ಗೇಣಿ ಅ ಮು ೧ ಮಲ್ಲುನಾಯ್ಕನ ಬಗೆ [ಮ] –

೪೧. ಕ್ಕಿ ಮು ೪ ಹ ೪೦ ಬಯಲಗದ್ದೆ ಹಾಂಗೆ ಸಹ ಗೇಣಿ ಅಕ್ಕಿ ಮು ೭ ಕೊಡುಕ್ಕಳ ಗದ್ದೆ ಹಾ ೪೦ ಹಾನೆಗೆ ಗೇಣಿ ಅಮು ೨ ಮತ್ತಂ ಹೊಕ್ಕುಳ ಗದ್ದೆ ಹ ೫೦ ಹಾಳಸಾ –

೪೨. ಲಗದ್ದೆ ಹ ೩೦ಗೆ ಸಹ ಗೇಣಿ ಅಮು ೪ ಕಿಟ್ಟಕ್ಕೆಱೆಯನ ಮಕ್ಕಿ ಮು ೨ ಮುಡಿಗೆ ಗೇಣಿ ಅ ಮು೨ ಮಲ್ಲಣ್ಣತಾಱಿ ಗದ್ದೆಯು ೧ಹ ೪೦ ಹಾನೆ ಅ ಬಗೆ ಮುಕ್ತಿ ಕಮು ೧ ಹ

೪೩. ೪೦ ಹಾನೆಗೆ ಸಹಾ ಗೇಣಿ ಅಮು ೧೦ ಅಂತು ಬೀಜವರಿ ಹಾನೆ ಹ ೬೦ ಲೆಕ್ಕದ ಮು ೪೩ಕ್ಕೆ ಗೇಣಿ ಅ ಮು ೯೨ಕ್ಕೆ ನಡೆವ ದರ್ಮ್ಮದ ವಿವರ ದೇವರ ಅಮ್ರುತಪಡಿಗೆ ಪ್ರತಿವರುಷ

೪೪. ೧ಕ್ಕೆ ಅಮು ೨೦ ಅಕ್ಷತೆಗೆ ಅಮು ೪ ಮೇಲು ಚಱುವಿಗೆ ಅಮು ೫[ಯಿ] ಕ್ಕಡೆ ನಂದಾದೀಪ್ತಿ ಸುಳು ದೀವಿಗೆ ಸಹಾಅಮು ೧೨ ಪ್ರತಿ ದಿ ೧ ಕೆ ಅಡಕೆ ೨೫ ಯೆಲೆ ಕಟ್ಟು ೧

೪೫. ಱಲ್ಕೆದಲಿ ವರಷ ೧ಕ್ಕೆ ಅಮು ೫ ಗಂಧ ದುಟಸಹ ಅಮು ೩ ಕಾರ್ತಿಕ ಪೂಜೆಗೆ ಬಿಟ್ಟ ಧರ್ಮ ಚಿಕ್ಕದೇವರಸವೊಡೆಯರ ಹೆಸರಲಿ ನಂನಯೆಲ ಮನೆದೆಱಿನ ಚಿಂಮ್ಮ –

೪೬. ನ ಕಳಿ ಮೆಲೂ ಗೋಟಿನ ಮನೆಗೆ ವರಗ || ಗುಳಿಗೆ ಸಲುವ ಅಮು ೧ ನಂಮ ಹೆಸರಲ್ಲಿ ಕಾರ್ತಿಕ ಪೂಜೆ ದಿನ ೩ಕ್ಕೆ ಅಮು ೩ ಶಿವರಾತ್ರಿಜೀವದಯಾ ಅಷ್ಟಮಿಗೆ ಸಹ ಅ

೪೭. ಮು ೧ ಯೂಗಾದಿ ಸ್ರುತಪಂಚಮಿಗೆ ಅಮು ೧ ಶ್ರಾವಣ ಮಾಸದ ಹಾವಿನ ಅಭಿಸೇಕಕೆ ಸಹ ಅಮು ೧ ಅಷ್ಟಾನಿಕ ೩ಕ್ಕೆ ಅಮು ೫ ದಸಲಕ್ಷಣದ ಪೂಜೆ ಅಮು

೪೮. ೧೦ ಆಹಾರದಾನ ತಂಡ ೧ ವರುಷ ೧ಕ್ಕೆ ಅಮು ೨೦ ಬಸ್ತಿಯೆಲೆ ನಟ್ಟ ಹೂ[ವಿ]ನ ಗಿಡು ತೆಂಗಿನ ಶಶಿಗೆ ನೀರಹಾಯಿದರೆ ಅಮು ೧ ಸಹ ಅಂತು ಅಮು [ಡಿ] ಮ[ತ್ತು].

೪೯. ಹೊಸ ದುಂಡಿಗೆ ಗಡಿ ಮೂಡಲು ತಗೆದ ಅಗಳು ನಟ್ಟ ಕಳ್ಳಿಗಡಿ ತೆಂಕಲು ದೇವಸ್ವದಗದ್ದೆ [ಅ*]ದಕ್ಕೆ ಅಂಚುಗಡಿ ಪಡುವಲು ಹರಿದ ಹೊಳೆ ಗಡಿ ಬ –

೫೦. ಡಗಲು ಬಿಡಗ ದೇವಸ್ವದ ತೆಗದ ಅಗಳು ಕಟ್ಟಿದ ಬೇಲಿ ಗಡಿ ಯಿಂತೀ ನಾಲ್ಕು ಗಡಿಯಿಂದೊಳಗುಳ ಗದ್ದೆಯೊಳಗೆ ನಾಕು ಬಳ್ಳಿಯ ದೆವರ ದೇವಸ್ವ ಬಯಲ

೫೧. ಗದ್ದೆ ಹ ೩೦ ಮಗರಿಯ ಮದೇಸ್ತ್ವರ ಗದ್ದೆ ಹ ೨೦ ಬೋಸರಿಯಂಬಿನ ಭ್ರಂಮರ ಮಕ್ಕಿ ಮು ೧ ಹ ೨[೦] ಅಂತು ಪರಿಚಿದ ಗದ್ದೆ ಬೀಜವರಿ ಮು ೨ ಹ ೧೦ ಹಾ –

೫೨. ರನಾ[ಗಿ]ನುಳಿದು ಮೇಲೆ ಬಯಲೂ ಮೆಕ್ಕಿಮಕ್ಕಿ ಸಹಾ ಗದ್ದೆ ಬೀಜವರಿ ಮು ೩೦ಕೆ ಮು ೧ಕ್ಕೆ ಅಕ್ಕಿ ಹ ೬೦ಕೆ ಲೆಕ್ಕದಲ್ಲಿ ಕಟ್ಟಿದ ಗೇಣಿ ಅ –

೫೩. ಕ್ಕಿ ಮು ೪೬ ಮುಗುಳುತ್ತಿಗೆ ಗಡಿ ಮುಡಲೂ ನೀರು ಹರಿವ [ಥೋ]ಡಿನ ದರೆ ಗಡಿ ತೆಂಕಲು ಹೊಸ[ಬಾ]ವಿನ ಕಟ್ಟಿನ ನೀರು ಹರಿವ ತೋಡು ಗಡಿ ಪಡುವ –

೫೪. ಲೂ ಹರಿದ ಹಾಳೆಗಡಿ ಬಡಗಲೂ ಮುಗುಳುತಿಕಟ್ಟಿನ ಹರಿದ ಹಾಳೆ ಗಡಿ | ಯಿಂತ್ತೀ ನಾಲ್ಕು ಗಡಿಯಿಂದೊಳಗುಳ್ಳ ಬಯಲಗದ್ದೆ ಬೀಜವರಿ ಬೀಜ

೫೫. [ಮು] ೭ ಕಟ್ಟಿದ ಗೇಣಿ ಅಕ್ಕಿ ಮು ೨೨ ನಿದ್ದುವನೊಳಗೆ ಸಂಕದ ಬಯಲ ಗದ್ದೆ ಬೀಜವರಿ ಮು ೫ಕ್ಕೆ ಕಟ್ಟಿದ ಗೇಣಿ ಅಕ್ಕಿ ಮು ೧೬ ಕೋಳಾಳಿ ಬಯಲಿ[ಗೆ]

೫೬. ಗಡಿ ಮುಡಲು [ಹರಿದ] ಹಾಳೆ ಗಡಿ ತೆಂಕ[ಲು] ಯಿಕ್ಕಿದ ಕಲ್ಲುಗಡಿ ಪಡುವಲು ಹರಿದ ಹೊಳೆಗಡಿ ಬೀಜ ಬಡಗಲು ಹರಿದ ಹೊಳೆಗಡಿ ಯಿಂತ್ತೀ ನಾ[ಲ್ಕು]

೫೭. ಗಡಿಯಿಂದೊಳಗು[ಳ್ಳ] ಆ ಹಲಸೆ ಗಡಿ ಹಾ. . . . . . ಹ ೨೦ ಯೀರುನಾಯಕರ ಸೊಸೆ ಬ. . . . ಹ ೫೦ ನಾಡು ಆಳು ಸೆಟಿಗೆಗೆ

೫೮. . . ೧೨೫ ಜೆಕ್ಕ ಅಕ್ಕನ ಹಾಳಸಸಿ ಗದ್ದೆ. . . . ಅಂತ್ತು. . . . ಗದ್ದೆ ಬೀಜವರಿ ಮು ೨ ಹ ೨೫. . . . .ಣಿ ಬಯಲಗದ್ದೆ ಬೀಜವ

೫೯. ರಿ ಮು ೪. . . . ಮನೆ ಮುಂ. . ಗದೆ ೨ ಮಕ್ಕಿಮಕ್ಕಿ. . . . . . .ಹ ಗದ್ದೆ ಮು ೩ ಉಭಯಂ ಬೀಜವರಿ. . . . . ೪೦ ಕೆ ಗೇಣಿ

೬೦. ಅಕ್ಕಿ ಮು ೨೧ ಅಂತ್ತೂ ಗದ್ದೆ ಬೀಜವರಿ ಮು ೫. . . . . . . . . ೦೫ ಮೊದಲೂ ಬರಿಸಿದ ಅಕ್ಕಿ ಮುಡಿ ೯೨. . . [ಡಿಸ]ಹಾ.

೬೧. ಲ್ಲಿಯ ಮು ೧ಕ್ಕೆ ಹ ೬೦ರ ಲೆಕ್ಕದಲೆ ಬಟಕಳದ ಹಾನೆಯಲ್ಲಿ. . . . . . ಚಿನ ಹ ೨ ನುಳಿದು ಮು ೧ಕ್ಕೆ ಹೆಚಿಗೆ ಹಾನೆ ೩೦ ಲೆಕ್ಕದಲ್ಲಿ ಮು [೩೯೦]

೬೨. ಗೆ ಹೆಚ್ಚಿದು ಮು ೧೪ ಊ ಅಂತೂ ಭಟಕಳದಲ್ಲಿ. . . . . . .ಮುಡಿ . ೨೦ ಕೆ ಬಿಟ್ಟ ದಂರ್ಮದ ವಿವಿರ ಆಹಾರ ದಾ. .

೬೩. ಪ್ರತಿವರುಶ ೧ಕ್ಕೆ ಅಕ್ಕಿ ಮು ೨೦ ಹಾಲಧಾರೆಗೆ. . . . . . .ಹಾಲಧಾರೆ ೧ ಬೀಳಿಗೆಯ ವೀರಪ್ಪವೊಡೆಯರ ಹೆಸರಲಿ ಹಾ[ಲ] –

೬೪. ಧಾರೆಗೆ ೧ ತೋರಣಶಿಯ ಗಉಡು ಹೆಸರ. . . . . . ನಾಯಕರ ಹೆಸರಲು ಹಾಲಧಾರೆ ಅವರ ಮದವಳಿಗೆಯ

೬೫. ಮದಿ[ಗೆಯ] ತಾಮರಿಸಿ ನಾಯಕ್ತಿ [ಕನಿ]ಕ ತಿಂಮರಸಿ ನಾಯಕ್ತಿ. . . . . . . ಲ ಹಾಲಧಾರೆ ೨ ನಾರಣನಾಯಕರ ಹೆಸರಲಿ ಹಾಲಧಾರೆ ೧ ಅ –

೬೬. ವರ ಮದವಳಿಗೆ ಲಿಂಗಮನಾಯಿಕ್ತಿ ಸಂಣಮ ನಾಯಕ್ತಿರ ಹೆಸರಲಿ ಹಾಲಧಾರೆ ೨ ನಂಮ ತಂಮ ಹಾಲಿಗೇರಿ ತಿಂಮಯ್ಯನ ಹೆಸರಲಿ ಹಾ –

೬೭. ಲ [ಧಾ]ರೆ ೧ ಅಂತೂ ಹಾಲಧಾರೆ ೧೦ಕ್ಕೆ ಅಕ್ಕಿ ಮು ೨೫ ದಿನ ೧ ಕೆ ಬಿಟ್ಟ ಖಜ್ಜಾಯದ ವಿವರ ಆದಿತ್ಯವಾರ ದಿನ ಸೊಜ್ಜಿಗೆ ತುಪ್ಪಕೆ ದು ೪ ಸೋಮವಾರ ದಿನ [ಸೋ]

೬೮. ವಳಿಕೆ ಪಾಯಸಕೆ ದು ೫ ಮಂಗಳವಾರ ದಿನ ಊಟದ ದಧಿಗೆ ದು ೪ ಬುಧವಾರ ದಿನ ಯೆಂಣೆ ಘಾರಿಗೆ ದು ೪ ಗುರುವಾರ ದಿನ ಕಣಿಕೆ ಘಾರಿಗೆ ದು ೪

೬೯. ಶುಕ್ರವಾರ ದಿನ ಮುದಿತಿಗೆ ದು ೪ ಸನಿವಾರ ದಿನ [ಹಾ]ರಸುಕ್ಕಿದು ೪ ಯಿ ಬಗೆ ದಿನಂ ಪ್ರತಿಲಿ ಮಾಡುವ ಖಜ್ಜಾಯಕ್ಕೆ ಪ್ರತಿ ವರುಶ ೧ಕ್ಕೆ ಅಕ್ಕಿ ಮು ೧೨

೭೦. . . . . ಹೆಸರಲಿ ನಡವ ಕಿಲಾ. . . . .ಬಿಟ ಅಕ್ಕಿ ಮು ೫ ಬಸ್ತಿಯಲ್ಲಿ ಊಳಿಗ ನಡಿಸುವ ಭಂಡಾರಿಗಳ ಜನ ೨ ಕೆ ದಿ. ಸ ರಾ ಕೆ . .

೭೧. . . . . . . . . .ಜ ನಿ ಯ . . ಜನ ೨ಕ್ಕೆ ಅಕ್ಕಿ ಮು ೨೦ ಅಂತ್ತು ಮಕ್ಕಿ ಮು ೧೧. . . [ಕು] ಳವ ಮಾ.[1]

೨೫. ಸ್ಥಳ : ಗ್ರಾಮದ ಶ್ರೀ ದುರ್ಗಾ ಪರಮೇಶ್ವರಿ ದೇವಾಲಯದಲ್ಲಿರುವ ತಾಮ್ರಶಾಸನ, ಉಪ್ಪುಂದ, ಉಡುಪಿ ಜಿಲ್ಲೆ.

ರಾಜವಂಶರಾಜ : ನಗಿರೆ ಹಾಡುವಳ್ಳಿ ಸಾಳುವರು – ಚೆನ್ನಭೈರಾದೇವಿ

ತೇದಿ : “ಶಕವರುಷ ೧೪೮೪ನೆಯ ದುರ್ಮ್ಮತಿ ಸಂವತ್ಸರದ ಮಾಘ ಬ – ೧” ಎಂದಿದ್ದು ಇದು ಕ್ರಿ.ಶ. ೧೫೬೨ ಜನವರಿ ೨೧ಕ್ಕೆ ಸರಿ ಹೊಂದುವುದು.

ಭಾಷೆ ಲಿಪಿ : ಕನ್ನಡ

ಪ್ರಕಟಣೆ :

೧. ಎರಿಇಎ, ಎಪಿಎಕ್ಸ್‌ಎ ೧೯೭೧೦೭೨ ಶಾ ಸಂ. ೨೧.

೨. ನರಸಿಂಹಮೂರ್ತಿ ಪಿ.ಎನ್., ೨೦೦೭, ಶಾ ಸಂ. ೭೩

ಮಹಾಮಂಡಲೇಶ್ವರ ಚೆನ್ನಭೈರಾದೇವಿಯವರು ನಗಿರೆ, ಹೈವ, ತುಳು, ಕೊಂಕಣ ಮೊದಲಾದ ರಾಜ್ಯವನ್ನಾಳುತ್ತಿರಲು, ಮೇಲೆ ಹೇಳಿದ ದಿನದಂದು ಪರಮಹಂಸ ಪರಿವ್ರಾಜಕರು, ಉಪ್ಪುಗುಂದದ ನರಸಿಂಹತೀರ್ಥಂಕರ ಶಿಷ್ಯರಾದ ರಾಮಚಂದ್ರತೀರ್ಥರಿಗೆ ಚೆನ್ನಭೈರಾದೇವಿಯವರು ನೀಡಿದಂತಹ ಮೂಲ ಗೋಧನದ ವಿವರವಿದೆ. ಹಿಂದೆ ಶ್ರೀ ಶಾಂತಿಕಾ ದೇವಿಯ ಪೂಜೆಗಾಗಿ ರಾಮಹೆಗ್ಗಡೆ ಮತ್ತು ಲಿಂಗಪ್ಪ ಹೆಗ್ಗಡೆಯವರಿಗೆ ಮೊದಲು ವಹಿಸಿಕೊಟ್ಟಿದ್ದ ಭೂಧರ್ಮವು ದೇವಿಯ ಪೂಜೆಯು ನಡೆಯದಿದ್ದಾಗ ಅದನ್ನು ವಿಚಾರಿಸಿ ನಡೆಯುವಂತೆ ಮಾಡಿದಂತಹ ವಿಚಾರವು ಶಾಸನದಲ್ಲಿದೆ. ಕೊನೆಯಲ್ಲಿ ಶಾಸನವನ್ನು ಭಯಿರಸ (ಭೈರರಸ)ನ ಮೊಮ್ಮಗ ಸೂರಪ್ಪ ಬರೆದನು ಎಂದಿದೆ.

ಶಾಸನ ಪಾಠ

ಮುಂಭಾಗ

೧. ಶ್ರೀಮನ್ಮಹಾಮಂಡಲೇಶ್ವರರು ಚೆನ್ನಭಯಿರಾದೇವಿ ಅವ್ಮ

೨. ನವರು ನಗಿರರಾಜ್ಯಹಮಿದೆ ತುಳುಕೊಂಕಣ ಮುಂತಾದ ರಾಜ್ಯಂ

೩. ಗಳನು ಪ್ರತಿಪಾಲಿಸ್ತಿದ್ದಂದಿನ ಶಕವರುಷ ೧೪೪೮ನೆಯ ದು

೪. ರ್ಮ್ಮತಿ ಸಂವತ್ಸರದ ಮಾರ್ಘ ಬ ೧ಊಶ್ರೀಮತ್ಪರಮಹಂಸ

೫. ಪರಿವ್ರಾಜಕಾಚಾರ್ಯವರ್ಯ್ಯರರೂ ಉಪ್ಪುಗುಂದದ ನರಸಿಂ

೬. ಹ್ಯತೀರ್ಥಕರ ಶ್ರೀಪದಂಗಳ ಶಿಷ್ಯರು ರಾಮಚಂದ್ರತೀರ್ಥಶ್ರೀ

೭. ಪದಂಗಳಿಗೆ ಶ್ರೀಮನ್ಮಹಾಮಂಡಲೇಶ್ವರರು ಚೆನ್ನಭಯಿರಾದೇ

೮. ವಿ ಅಮ್ಮನವರು ಪೊಡವೆಂಟು ಕೊಟ್ಟ ಮೂಲ ಗೋಧನದ ಭಾಶಾ(ಷಾ)

೯. ಕ್ರಮವೆಂತೆಂದರೆ ಹೆಗ್ಗಡಹಿನ ಗ್ರಾಮದವರು ಶ್ರೀಶಾಂತಿಕಾ

೧೦. ದೇವಿಯ ಸ್ಥಾನದಲ್ಲಿ ನಡೆವ ಧರ್ಮದೇವಕಾರ್ಯ್ಯ ಅದಕೆ ಉಳ್ಳ ದ –

೧೧. ರ್ಮ್ಮಸ್ವಸ್ಥಾನಾದಿಪತ್ಯ ಮುಂತಾಗಿ ನಾವು ನಿಮಗೆ ಮೂಲವಾಗಿ

೧೨. ಕೊಟ್ಟುನೀಉ ಆಧರ್ಮ್ಮಂಗಳನು ನಡಸಿಬರುತಿದ್ದಲ್ಲಿ ಆ ದೇವಿಯ

೧೩. ಶ್ರೀ ಕಾರ್ಯ್ಯಕ್ಕೆ ಉಳ್ಳ ಕೆರಗಜನಿಯವೊಳಗೆ ನಾಲ್ಕಕ್ಕೆವೊಂದು ಪಾ –

೧೪. ಲ ಸರ್ವ್ವಸ್ವವನು ಆ ಸ್ಥಳನ ಮೂಲಿಗರ ಕಯ್ಯಮಾಸೂರರಾಮ ಹೆ –

೧೫. ಗ್ಗಡೆ ಆಮಗಂದಿರು ಹೆಬ್ಬಾರನ ಮಗ ಲಿಂಗಪ್ಪ ಹೆಗ್ಗಡೆಯ ವ –

೧೬. ರು ಮೂಲ ಮುಂತಾದ ವ್ಯವಹಾರಗಳನು ಮಾಡಿಕೊಂಡು ಯಿ –

೧೭. ದ್ದು ದೇವಿಯ ಧರ್ಮದ ತೆಱೆನು ಸುಸಿರವಾಗಿ ತೆತ್ತುಕೊಡದೆ ಶ್ರೀ –

೧೮. ಕಾರ್ಯ್ಯಉ ಮುಪ್ಪಿತುಯೆಂದು ನಿಉ ನವಗೆ ಹೇಳಿದ್ದಲ್ಲಿ ಆ ರಾಮ

೧೯. ಹೆಗ್ಗಡೆ ಲಿಂಗಪ್ಪ ಹೆಗ್ಗಡೆ ಮುಂತಾದವರನ್ನು ಕರಸಿ ಸತ್ಯಾಸರಿಗ –

೨೦. ಳನು ವಿಚಾರಿಸಲಾಗಿ ಪೂರ್ವ್ವದಲ್ಲಿ ಹೆಗ್ಗಡಹಿನ ಗ್ರಾಮ ದೇವರ

೨೧. ಧಾರಾಪೂರ್ವ್ವಾರ್ಥವಾಗಿ ಬಿಟ್ಟ ಧರ್ಮವನು ಮರಳಿ ಆ ಗ್ರಾಮ

೨೨. ದೊಳಗೆ ಉಳ್ಳವರೆ ಮೂಲವ ಕೊಳಬಾರದು ಧರ್ಮಕ್ಕೆ ತೆಱುವ

೨೩. ತೆಱೆಗೆಯನು ತೆಱದ ನಿಕ್ಕಿಸಿ ಕೊಳಬಾರದು ಯೆಂಬುದನು ಆ

೨೪. ಹೆಗ್ಗಹಿನ ಗ್ರಾಮದವರ ಸಮಕ್ಷದಲು ಬುದ್ದಿವಂತರು ಕಂ –

೨೫. ಡು ಹೇಳಿದ ಸಮ್ಮಂಧ ಆ ಅಪರಾಧಗಳಿಗೆ ಆ ರಾಮ ಹೆಗ್ಗ

ಹಿಂಭಾಗ

೨೬. ಡೆ ಲಿಂಗಪ್ಪ ಹೆಗ್ಗಡೆ ಮುಂತಾದವರು ಕೆರ ಗಜನಿಯ ನಾಲ್ಕಕ್ಕೆ

೨೭. ವೊಂದು ಪಾಲು ಸ್ಥಳ ಮೂಲಿಗರ ಕಯ್ಯ ಮಾಡಿಕೊಂಡ ಆದಿವೊತ್ತೆ

೨೮. ಮೂಲ ಮುಂತಾದ ವ್ಯವಹಾರಗಳನು ಸಲ್ಲದೆಂಬುದ ಕಂಡು ಆ

೨೯. ಸಾಧನಗಳನು ತೆಗೆಯಿಸಿ ಆ ದೇವಿಯ ಧರ್ಮ್ಮದೇವಸ್ಥಾನಾಧಿಪ –

೩೦. ತ್ಯಕ್ಕೆ ನಿಉ ಮೂಲಿಗಳಾದ ಸಮ್ಮಂಧ ಆ ಕೆರಗಜನಿಯ ನಾಲ್ಕಕ್ಕೆ

೩೧. ವೊಂದು ಪಾಲಸ್ಥಳಕ್ಕೆ ಮೂ(ಹಡ೮)ಅದ್ದವನು ನಮ್ಮ ಭಂಡಾರ

೩೨. ಕ್ಕೆ ನಿಮ್ಮ ಕಯ್ಯಲು ಸಲೆ ಸಲಿಸಿಕೊಂಡು ಆ ಸರ್ವ್ವಸ್ವವನು ನಿವಗೆ ಸ –

೩೩. ರ್ವ(ಮಾ)ನ್ಯವಾಗಿ ಕೊಟ್ಟೆಉ ಆ ಸರ್ವ್ವಸ್ವಗಳಿಗೆ ಉಂಟಾದ ಗಜನಿ ಮ

೩೪. ಕ್ಕೆ ಹಕ್ಕಲು ಹಿತ್ತಿಲುಮನೆ ಮನೆತಾಣ ನೀರು ದಾರಿ ನೆಲ ಹೊಲ ಮು

೩೫. ೦ದು ಮರಫಲ ಮುಂತಾದಯೆನುಂಟಾದ ಸರ್ವ್ವಸ್ವವನು ಆ ನಾ

೩೬. ಲ್ಲಕ್ಕೊಂದು ಪಾಲಸ್ಥಳನ ಮೂಲಿಗರು ಪ್ರಾಕು ಆಲಿ ಬಂದ ಪ್ರಾಮಾ –

೩೭. ಣಿಗೆ ನಿಉ ಆಳಿಕೊಂಡು ಆ ಸರ್ವ್ವಸ್ವದಿಂದ ಶ್ರೀಶಾಂತಿಕಾದೇವಿ –

೩೮. ಯ ಶ್ರೀಕಾರ್ಯ್ಯಕ್ಕೆ ತೆಱುವ ತೆಱೆಗೆಯನು ಪ್ರಾಕುಪ್ರಮಾಣಿಗದುಂ

೩೯. ದುಭಿ ಸಂವತ್ಸರದ ದೀವಳಿಗಾರಭ್ಯ ಕಾಲಕಾಲಂ ಪ್ರತಿಯಲು ನೀವೆ

೪೦. ನೋಡಿಕೊಂಡು ಆ ಸ್ಥಾನದಲ್ಲಿ ನಡವ ಧರ್ಮ್ಮದೇವಕಾರ್ಯಗಳನು ಸಾಂ –

೪೧. ಗವಾಗಿ ನಡಸಿಕೊಂಡು ಯೀ ಸರ್ವ್ವಸ್ವಗಳನು ನೀಉ ನಿಮ್ಮ ಶಿಷ್ಯ ಪಾ –

೪೨. ರಂಪರೆ ಧರ್ಮ್ಮಮೂಲವಾಗಿ ಆಲಿ ಅನುಭವಿಸಿಕೊಂಡು ಸುಖ –

೪೩. ದಲು ಯಿಹಾದುಯೆಂದು ಉಪ್ಪುಗುಂದದ ನಸಿಂಹ್ಯತೀರ್ಥಕಂ

೪೪. ಶ್ರೀಪದಂಗಳ ಶಿಷ್ಯರು ರಾಮಚಂದ್ರತೀರ್ಥ ಶ್ರೀಪದಂಗಳಿಗೆ

೪೫. ಚೆನ್ನಭಯಿರಾದೇವಿ ಅಮ್ಮನವರು ಪೊಡವಂಟುಕೊಟ್ಟ ಸಾಧ –

೪೬. ನ ಅಮ್ಮನವರ ನಿರೂಪದಿಂದ ಭಯಿರರಸ ಮೊಮ್ಮಗ ಸೂರಪ್ಪ

೪೭. ಬರದ ಮೂಲ ಸಾಧನ ಶ್ರೀ

೨೬. ಸ್ಥಳ : ಸಾಗರ ತಾಲೂಕಿನ ತುಂಬ್ರಿಯ ಮಾಜಿ ಪಟೇಲರಾದ ಶ್ರೀ ಪದ್ಮೇಗೌಡರ ಬಳಿಯಿದ್ದು, ಪ್ರಸ್ತುತ ಶ್ರೀಕ್ಷೇತ್ರ ಧರ್ಮಸ್ಥಳದ ವಸ್ತುಸಂಗ್ರಹಾಲಯದಲ್ಲಿದೆ – ದಕ್ಷಿಣಕನ್ನಡ ಜಿಲ್ಲೆ.

ರಾಜವಂಶರಾಜ : ಹಾಡುವಳ್ಳಿ ಸಾಳುವರು – ಚೆನ್ನಭೈರಾದೇವಿ

ತೇದಿ : ಶಕವರ್ಷ ೧೪೮೪ನೆಯ ದುರ್ಮತಿ ಸಂವತ್ಸರದ ಶ್ರಾವಣ ಬ. ೧೦ ಲೂ ಎಂದಿದ್ದು ಇದು ಕ್ರಿ.ಶ. ೧೫೬೨ ಆಗಸ್ಟ್ ೨೪ಕ್ಕೆ ಸರಿ ಹೊಂದುತ್ತದೆ.

ಭಾಷೆ ಲಿಪಿ : ಕನ್ನಡ

ಪ್ರಕಟಣೆ : ಮಂಜುವಾಣಿ ಮಾಸಪತ್ರಿಕೆ, ಜೂನ್ ೧೯೮೯, ಪು. ೨೯ – ೩೦. (ಲೇ.ಎಸ್.ಡಿ. ಶೆಟ್ಟಿ, ಉಜಿರೆ).

ಇದು ಜೈನ ತಾಮ್ರಶಾಸನವಾಗಿದೆ. ಮಹಾಮಂಡಲೇಶ್ವರ ಭೈರಾದೇವಿ ಅಮ್ಮನವರ ವರಕುಮಾರಿಯಾದ ಮಹಾಮಂಡಲೇಶ್ವರ ಚೆನ್ನಭೈರಾದೇವಿ ಅಮ್ಮನವರು ಸಂಗೀತಪುರದಲ್ಲಿ ರಾಜ್ಯವನ್ನಾಳುತ್ತಿದ್ದಳು. ಭಟ್ಕಳದ ಹಲವಾರು ಸೆಟ್ಟಿಕಾರರು ಕಟ್ಟಿಸಿದ ಹಿರಿಯ ಬಸದಿಯ ಶ್ರೀ ಪಾರ್ಶ್ವನಾಥ ಸ್ವಾಮಿಯ ಶ್ರುತ ಭಂಡಾರಕ್ಕೆ ಸಾಷ್ಟಾಂಗವಾಗಿ ಬಿಟ್ಟಂತಹ ಧರ್ಮ ಸಾಧನವನ್ನು ಈ ಶಾಸನವು ತಿಳಿಸುತ್ತದೆ. ಶಾಸನದಲ್ಲಿ ಭಟಕಳ ಪರಿಸರದ ಹಲವಾರು ವ್ಯಕ್ತಿಗಳ ಉಲ್ಲೇಖವಿದೆ. ಅದಲ್ಲದೇ ಹಲವಾರು ಗದ್ದೆಗಳ ವಿಚಾರವು ತಿಳಿದುಬರುತ್ತಿದ್ದು, ಧರ್ಮಾಧ್ಯಕ್ಷರ ಹೆಸರು ಬಂದಿರುವುದು ವಿಶೇಷತೆಯಾಗಿದೆ. ಶಾಸನದಲ್ಲಿ ಬರುವ ಗದ್ದೆಯ ಹೆಸರು ಉದಾ. ಕುಳಿಯನಗದ್ದೆ ಕೇದಿಗೆಯ ಗದ್ದೆ, ಕಂಡುಕದ ಗದ್ದೆ, ನಾಗರ ಹೊಳೆಯ ಗದ್ದೆ, ಒಸರೆ ಗದ್ದೆ, ಒದಕೆ ಗದ್ದೆ, ಚವಲನ ಗದ್ದೆ ಇವು ಗದ್ದೆಯನ್ನು ಗುರುತಿಸುವ ಬಗೆಯಾಗಿದೆ. ಗದ್ದೆ ಶಬ್ಧ ಕರಾವಳಿಯಲ್ಲಿ ಈಗಲೂ ಬಳಕೆಯಲ್ಲಿದೆ. ಮದುವಳಿಗೆ ಬಿಟ್ಟ ಗದ್ದೆ ಉಲ್ಲೇಖ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೂ ಪಾಲು ಇತ್ತೆಂಬುದನ್ನು ತೋರಿಸುವ ಬಗೆ ಸಾಮಾಜಿಕ ವ್ಯವಸ್ಥೆಗೆ ಒಂದು ಉತ್ತಮ ನಿದರ್ಶನವಾಗಿದೆ.

[1] ಇಲ್ಲಿಗೆ ಶಾಸನ ಮುಗಿದಿದೆ.