ಶಾಸನ ಪಾಠ

ಮುಂಭಾಗ

೧. ಶ್ರೀಮತ್ಪರಮಗಂಭೀರಸ್ಯಾದ್ವಾದಾಮೋಘಲಾಂಛನಂ ಜೀಯಾತ್ರೈಲೋಕ್ಯನಾಥ

೨. ಸ್ಯಶಾಸನಂ ಜಿನಸಾಸನಂ ನಮಸ್ತುಂಗ ಸಿರಶ್ಚುಂಬಿ ಚಂದ್ರಚಾಮರ ಚಾರವೆ ತ್ರೈಲೋಕ್ಯ ನ

೩. ನಗರಾರಂಭ ಮೂಲಸ್ತಂಭಾಯ ಸಂಭವತ್ | ಶ್ರೀಮನ್ಮಹಾಮಂಡಲೇಶ್ವರರು ಭೈರಾದ

೪. ವಿಆಂಮನವರ ವರಕುಮಾರಿಯರು ಶ್ರೀಮಂನ್ಮಹಾಮಂಡಲೇಶ್ವರರು ಚೆಂನ ಭೈರಾದೇವಿ

೫. ಅಂಮನವರು ಸಂಗೀತಪುರವರಾಧಿಷ್ಠಿತರಾಗಿ ಬಟ್ಟಕಳ ಮುಂತಾದ ರಾಜ್ಯವನು

೬. ಸದ್ಧರ್ಮ ಕಥಾಪ್ರಸಂಗದಿಂ ಪ್ರತಿಪಾಲಿಸುತಿದ್ದಂದಿನ ಜಯಾಭ್ಯುದಯ ಸಾಲಿವಾಹನ

೭. ಶಕವರುಷ ೧೪೮೪ನೆಯ ದುಂರ್ಮತಿ ಸಂವತ್ಸರದ ಶ್ರಾವಣ ಬ ೧೦ಲೂ ಶ್ರೀಮತೂ ಬಟ್ಟಕಳ

೮. ದ ಹಲರು ಸೆಟ್ಟಿಕಾಱರು ಕಟ್ಟಿಸಿದ ಹಿರಿಯ ಬಸ್ತಿಯ ಶ್ರೀ ಪಾರಿಶ್ವನಾಥ ಸ್ವಾಮಿಯ ಶ್ರ

೯. ತ ಭಂಡಾರಕೆ ಶ್ರೀಮನ್ಮಹಾಮಂಡಲೇಶ್ವರರು ಚೆಂನಭೈರಾದೇವಿ ಅಂಮನವರು ಸಾ

೧೦. ಷ್ಟಾಂಗವೆಱಗಿ ಪಡುವಟ್ಟು ತೆಱುಕುಳವ ಕಡಿದು ಕೊಟ್ಟ ಧರ್ಮ ಸಾಧನದ ಭಾಷಾಕ್ರಮವಂತೆ

೧೧. ೦ದರೆ ಬಟ್ಟಕಳದ ಹಲರು ಸೆಟ್ಟಿಕಾಱ ಮುಂತಾದವರು ಸ್ವಾಮಿಯ ಸಂನಿಧಿಯಲ್ಲಿ ನಡವ

೧೨. ನಿತ್ಯ ನೈಮಿತ್ತಿಕ ಆಹಾರದಾನ ಹಾಲಧಾರೆ ಮುಂತಾದ ಧರ್ಮಕೆ ಹೊಱಗೆ ಅಂನ್ಯರಕಯ್ಯ

೧೩. ಲು ಮೂಲ ಆರುವಾರ ಮುಂತಾದಬೆವಹಾರವ ಮಾಡಿಕೊಂಡು ಬಿಟ್ಟು ಕೊಟ್ಟಿದ ಆಕಟ್ಟು ಸಾ

೧೪. ದನ ಪ್ರಮಾಣಿನ ಸ್ಥಳಂಗಳಿಂದಲು ನಂಮ ಅರಮನೆಗೆ ಸಲುವ ತೆಱೆಗೆ ಮೂಲಹದವ

೧೫. ಅರ್ಥವನು ತೆರೆದುಕೊಂಡು ಆ ತೆಱನು ಕುಳವ ಕಡಿದು ಸರ್ವಮಾನ್ಯ ಸ್ಥಳವಾಗಿ ಸ್ವಾಮಿಯ ಧ

೧೬. ರ್ಮಕೆ ಬಿಡಬೇಕೆಂದು ಧರ್ಮಾಧ್ಯಕ್ಷರ ಹಲರು ಸೆಟ್ಟಕಾಱ ಸಮಸ್ತರು ಬಿಂನಹ ಮಾಡಿ

೧೭. ಕೊಂಡ ಸಮಂಧ ಯಿಗ ಸ್ವಾಮಿಯ ಧರ್ಮಸ್ಥಳಂಗಳಿಗೆ ಕುಳವ ಕಡಿದು ಕೊಟ್ಟ ತೆಱೆನಸ್ಥಳಂಗಳವಿವ

೧೮. ರ ಬಟ್ಟಕಳದೊಳಗೆ ಸಾಳುವಂಣನ ಮಗ ಚೆಂನಣನಕಯ್ಯ ಆರುವಾರವ ಮಾಡಿಕೊಂಡ ದಾನ ಸಾ

೧೯. ಲೆಯ ಮನೆ ಹಿತ್ತಿಲ ತೆಱುಗ ಕಂಬನ ಕೊಡಲದೊಳಗೆ ಮೂಡಬಟ್ಟಕಳದ ಪದುಮಲದೆವಿ

೨೦. ಯರು ರತ್ನತ್ರಯಕೆ ಬಿಟ್ಟಧರ್ಮದ ಅಂಗಡಿ ೨ಕೆ ಸಲುವ ತೆಱುಗ ೧ ಮಂಡವಳ್ಳಿಯ ಗ್ರಾಮದ ವೊ

೨೧. ಳಗೆ ಬರಂಮಿ ನಾಯಕ್ತಿ ಸೆಟ್ಟಿಹೆಗ್ಗಡೆಯ ಸಾಳುವ ನಾಯಕನವರು ಆಹಾರದಾನ ಹಾಲಧಾರೆ

೨೨. ಯ ಧರ್ಮಕೆ ಬಿಟ್ಟಿದ್ದ ನಾಗಹೊಳೆಯ ಗದ್ದೆ ಕಂಡುಕದ ಗದ್ದೆ ಸಹ ಮು೨ ಗದ್ದೆ ತೆಱು ಗಂ ೧ ಯೆ

೨೩. ಡೆಯ ತಾಱು ಹೊಸಗದ್ದೆ ಕುಳಿಯನ ಗದ್ದೆ ಸಹ ಮು ೩ ರ್ಹ ಗದ್ದೆಗೆ ಸಿರಣನಾಯಕನ ಮಗ ಪದುಮ

೨೪. ನಾಯಕನ ಮದವಳಿಗೆ ಮಲ್ಲಿದೆವಿನಾಯಕತಿ ತೆಱುವ ತೆಱುಗ ೩ ೩ ಅಲ್ಲಿಯ ಭಂಡಾರಿಗಳ ಗ್ರಾಸಕ್ಕೆ ಬಿಟ್ಟ

೨೫. ನಾರಾಯಣ ದೆವಾಲ್ಯದ ಮುಂಹಿರಿಯ ಗದೆ ಕೆದಗೆಯ ಗದ್ದೆ ಸಹ ಮು೨ ಹ ೧೦ ಗದಗೆ ಸಲುವ ತೆ

೨೬. ಱುಗ೧ ೧೧ ಚ ಉಪನಿಯಲ್ಲಿ ಜೆಟ್ಟಿನಾಯಕನ ಕಯ್ಯಲ್ಲಿ ಮಾಡಿಕೊಂಡ ಕಂಡುಕದ ಗದ್ದೆ ನೆs

೨೭. ಲಿಗದೆ ಸಹ ಮು೬ ಗದ್ದೆ ಅದಕ್ಕೆ ಬಂದ ಕಂಡುಕದ ಹಿತ್ತಿಲು ಸಾತುವನ ದುವಾಗದ ಹಿತ್ತಿಲು ಸಹs

೨೮. ವಾದಸ್ಥಳಕೆ ಸಲುವ ತೆಱುಗ ೧ ಯಿಶರ ದೆವನಾಯಕನ ಮದವಳಿಗೆ ಬಯಿರಂಮ ನಾಯಕ್ತಿ ಯು

೨೯. ಹಾಲದರೆಯ ಧರ್ಮಕೆ ಬಿಟ್ಟ ಹಿತ್ತಿಲ ತೆಱುಗ ೮೨ ಅರಸು ಸೆಟ್ಟಿ ಚ ಉತನಿಯಲ್ಲಿ ಬಿಟ್ಟ ಆಹ –

೩೦. ರ ದಾನ ಮು೬ ಗದ್ದೆ ಆಕಂಠಸಹವಾದ ಸ್ಥಳಕೆ ಸಲುವ ತಱುಗ ೮೨ ಬೆಹಳಿಯಲ್ಲಿ ಬ್ರಂಹ್ಮಸೆಟ್ಟಿಯ

೩೧. ಮದವಳಿಗೆ ದೆವರು ಸೆಟ್ಟಿತಿ ಆಹಾರದಾನಕೆ ಬಿಟ್ಟ ಸ್ಥಳ ಮು೨ ಹ೧೦ ಗದೆಗೆ ಸಲುವ ತೆಱುಗ ೮೨

ಹಿಂಭಾಗ

೩೨. ಯೆಂಬರ ಪಾಡಿನ ತಂಗಣ ನಾಯಕ್ತಿ ಆರುವಾರದ ಮಾಡಿಕೊಂಡು ಆಹಾರದಾನಕೆ ಬಿಟ್ಟ ಹೊಯಿಗೆ ಗ

೩೩. ದ್ದೆ ಮು ೫ ಗೆ ಸಲುವ ತೆಱು ಗ೫ ಆ ಬಗೆಯಿಂ ವೊಳ ಬಯಲಲ್ಲಿ ಮೂ೧ ಗದ್ದೆಗೆ ಸಲುವ ತೆಱುಗ೧ ದಂ

೩೪. ಗಮ ನಾಯಕ ಯೆಂಬಾರ ಪಾಡಿನ ಗುಂಮಟದೇವ ಸೆಟ್ಟಿಯ ಕಯ್ಯಲ್ಲಿ ಆರುವಾರವ ಮಾಡಿಕೊಂಡು ಆಹಾರದಾ

೩೫. ನ ದರ್ಮಕ್ಕೆ ಬಿಟ್ಟ ಹ೩೪ ಗದ್ದೆಯೆ || ತೆಂಗಿನ ಹಿತ್ತಿಲಿಗೆ ಸಹ ಸಲುವ ತೆಱುಗ ೮೩ ಹಡಿಲವೊಳಗೆನಾರಣ ಪ್ರಬು

೩೬. ವಿನ ಮಕ್ಕಳ ಕಯ್ಯಲ್ಲಿ ಸ್ವಾಮಿಯ ಭಂಡಾರಕ್ಕೆ ಆರುವಾರ ಮೂಲ ಮುಂತಾಗಿ ಮಾಕೊಂಡ ಸುಗ್ಗಿ ಗದ್ದೆ ಮು೧೨ಹ೨

೩೭. ಗೆ ಸಲುವ ತೆಱುಗ ೩ ಅಜಿರುನಾಡ ಹದಿಗೆ ಸಲುವ ತೆಱುಗ ೯೧ ಸ್ಥಳನ ಮೂಲಗಳಿಗೆ ತೆಱ ಪಡಿ ಅಕಿ ಹ೩೦ಗೆ ಕ್ರಗ ೮೪

೩೮. ಹಡಿಲ ಹೆಬಾರನ ಕಯ್ಯಲು ಚೆಂನೂಡಿರು ಆರುವಾರವ ಮಾಡಿಕೊಂಡು ಆಹಾರದಾನಕೆ ಬಿಟ್ಟ ಹೊಸಗದ್ದೆ ಹ೫೦ಗೆ ಕ್ರಗ ತೆಱುವ

೩೯. ತೆಱುಗ ೧೯೨ ಅ ಹಬಾರನ ಕಯ್ಯ ತಿಂಮಯ್ಯ ಸೆಟ್ಟರ ಪದುಮಿಯು ಆರುವಾರ ಮೂಲವ ಮಾಡಿಕೊಂಡು ಆಹಾರ

೪೦. ದಾನಕೆ ಬಿಟ್ಟ ಚೆಂನಪಟೆ ಬಸರೆಗದೆ ಗೊಳಿಗದ್ದೆ ಮೆಟ್ಟಿನ ಮೊದಲು ದಾರಿ ಮೂಱು ಕೊಡುಗೆ ಅಂಗು ಬೆಱಗುಡೆ ಮಕ್ಕಿ ಮಟ್ಟ

೮೧. ಲ ಮಾವಿನ ಮೆಲುಮಕ್ಕಿ ಸಹವಾದ ಮೂ೪ ಹ೨೫ ಸಲುವ ತೆಱುಗ ತೆಱ ಪಡಿಯ ಬತ್ತ ಹ೨೭ಗೆ ಕ್ರಯದ

೪೨. ೯೧ಆದಿಯಣ ಸೆಟ್ಟಿಯ ಮಗ ಪಾರಿಸೆಟ್ಟಿಯು ಜಾಲಿಯದಲ್ಲಿ ಆರುವಾರ ಮಾಡಿಕೊಂಡು ಆಹಾರ ದಾ

೪೩. ನ ದಾನಧರ್ಮಕೆ ಬಿಟ್ಟ ಆವಳೆಯ ತಾಱು ಕಂಪಡೆಯ ಗದ್ದೆ ಮೊಱಮಾಡ ಗದ್ದೆ ಸಹ ಮು೪ ಗೆ ಸಲುವ ತೆಱುಗ ೪೮೨

೪೪. ಆ ಪಾರಿಸೆಟ್ಟಿ ಯಿಶರಂಮಿ ಬಗೆಯ ಬೆಂಮಣನ ಕಯ್ಯಲಿ ಆರುವಾರವ ಮಾಡಿಕೊಂಡು ಆಹಾರದಾನಕೆ ಬಿಟ್ಟ

೪೫. ಕಲ್ಲ ಗದ್ದೆ ಚವಲನಗದ್ದೆ ಬಿದರ ಗದೆ ಆ ಕಂಠಸಮ ಮು೩ಗೆ ಸಲುವ ತೆಱುಗ ೨ ಆ ಬಗೆಯಲ್ಲಿ ಕುಳಿಯನ

೪೬. ಗದೆ ಹ ೩೦ಗೆ ಸಲುವ ತೆಱುಗ ಉಪ್ಪಿನ ಕಲ್ಲಿನೊಳಗೆ ಹಂದಿ ಮಂಣ ಮಾಧವನ ಕಯ್ಯಲ್ಲಿ ಯಿಶರಮಿಂನಾ

೪೭. ಯಕತಿ ವವಹಾರವ ಮಾಡಿಕೊಂಡು ಆಹಾರದಾನಕ್ಕೆ ಬಿಟ್ಟ ಮೆಕಮು ೬ ಹ ೧೬ಗೆ ಸಲುವ ತೆಱುಗ ೨

೪೮. ಕರಿಯಕಲ್ಲವೊಳಗೆ ತಂಮಣ ಸೆಟ್ಟಿ ಆಹಾರದಾನ ಧರ್ಮಕ್ಕೆ ಬಿಟ್ಟ ಕೊಟ್ಟು ಕಣಿಯೊಳಗೆ ಹೊಂನಾವರದ ಕುಂಮಣಸೆಟ್ಟಿ ಆಹಾರದಾನ ಧರ್ಮಕೆ ಬಿಟ್ಟು ಮು ೧೨ಗದ ತಱುಗ ೨

೪೯. ಕರಿಯಕಲ್ಲವೊಳಗೆ ತಂಮಣಸೆಟ್ಟಿ ಆಹಾರದಾನ ಧರ್ಮಕೆ ಬಿಟ್ಟ ಸ್ಥಳ ಗಂಧದ ಧರ್ಮಕೆ ಬಿಟ್ಟ ಹಿತ್ತಿ

೫೦. ಲು ಸಹವಾದ ಸ್ಥಳಕೆ ತೆಱುಉದು ಗ ೮೨ ಹಿರಿಯದಾರಣ ನಾಯಕನು ಬಿಳಿರು ಕಂಡುಕದೊಳಗೆ ಮ

೫೧. ೦ದವತ್ತಿಯಲ್ಲಿ ಆಹಾರದಾನಕೆ ಬಿಟ್ಟ ಸುಗ್ಗಿಮಕ್ಕಿ ಸಹವಾದ ಮು೬ ಗದ್ದೆ ಮನೆ ಮನೆ ಠಾಉ ಮುಂತಾದ ಸ್ಥ

೫೨. ಳಕೆ ಅಜಿರುನಾದ ಕುಳಕೆ ತೆಱುವ ತೆಱಸಲಿಕೆಯ ಗ ೨ದ ಕುಳಕೆ ವಗ ೨ ಬೆಳಕ್ಕಿಯವೊಳಗೆ ಕಟ್ಟುಗೆ

೫೩. ಱೆಯಲ್ಲಿ ಸಂಗಂಹೆಗ್ಗಡೆಯ ಮೊಂಮಗಳು ದೆವತ ನಾಯಕತಿಯು ಆಹಾರದಾನ ಹಾಲಧಾರೆಗೆ ಬಿಟ್ಟ ಹಂಪ

೫೪. ನಗದ ಹ ೫೦ ಹೆಗ್ಗಡತಿಯ ಹ೪೦ ಬಿದಿರ ಹ ೨೫ ಮಂಗು ಮಕಿ ಹ ೩೦ ಬೆರಗೆ ಸಾಲೆಯ ಕೊಡಗೆ ಹ ೨೫ ಮಕ್ಕಿ

೫೫. ಗದೆ ಹ ೪೦ ಸಂಕದ ಕೊಣವೊಳಗೆ ದೆವಕ ನಾಯಕ್ತಿಯ ಪಾಲಿಗೆ ಬಂದ ಗದೆಹ ೬೦ ಸಹವಾದ ಮು ೬ ಹ ೩೦ ಗದೆ

೫೬. ಹೊಂನೆಮಡಿಯ ವೊಳಗೆ ದಿವರ ಬರವ ನಟ್ಟ ನದಿಗೆ ಹಿತ್ತಿಲು ದಿವರ ನಾರಣ ನಟ್ಟ ನಡಿಗೆ ವಿ (ಹಿ)ತ್ತಿಲು ಸಹವಾದ

೫೭. ಸ್ಥಳಂಗಳಿಂದಲು ಸಲುವ ತೆಱುಗ ೧ ೨ ಮುಂಡವಳ್ಳಿಯಲ್ಲಿ ಕೊಟಿ ಕಂಡದ ದೆವಪ್ಪನ ಮಗ ನಾರಾಯಣನ

೫೮. ಕಯ್ಯಲು ಗೌಡರ ಹೈವಣ ಬೈದ್ಯ ಮೂಲವ ಮಾಡಿಕೊಂಡು ಅಹಾರದಾನಕೆ ಬಿಟ್ಟ ಹುತ್ತನ ಗದೆ ಹ ೫೦ಗೆ ಕುಳ

೫೯. ಹ ೨೨ಗೆ ತೆಱುವ ತೆಱು ಗ ೧೮೦ ಆತನು ಚಿಮೆಶ್ವರ ಪಾಠಾಳಿಯಮಗ ಗೊವಿಂದ ಪಾಠಾಳಿಯ ಕಯ್ಯಲ್ಲು

೬೦. ಆರುವಾರವ ಮಾಡಿಕೊಂಡು ಆಹಾರದಾನಕೆ ಬಿಟ್ಟ ಕೂಡಲ ತಾಱು ವೊಳಗನ ತೂಬಿನಗದೆ ಹ ೪೦ಗೆ ಕುಳ ಹ ೨೬

೬೧. ಗೆ ತೆಱುವ ತೆಱುಗ ೧೯೧ ಆಂತೂಗ ೩೮೭೧ ಅಕ್ಷರದಲು ಮುವತ್ತಯೆಳು ವರಹ ಸಂವೊಂಧ ವೊಗುಳಿಗೆಯ ತೆಱ

೬೨. ಗ ಮಾಲ ಹಡವ ಅರ್ಥದಿಂದ ಅಧಿಕವಾದ ಅರ್ಥವನು ಅರ್ಥ ಪರಿಚೇದ್ಯವಾಗಿ ಸ್ವಾಮಿಯ ಭಂಡಾರ ದಿಂ

೬೩. ದ ಹಲರು ಸೆಟ್ಟಿಕಾರ ಸಮಸ್ತರ ಮುಖಾಂತ್ರದಿಂದ ನಂಮ ಅರಮನೆಗೆ ತೆಗೆದುಕೊಂಡು ಹಿರಣ್ಯೋದಕ

೬೪. ದಾರಾ ಪೂರ್ವಕ ಆಚಂದ್ರಾರ್ಕ ಸ್ಥಾಯಿಯಾಗಿ ಯಿಂತಿ ಬರದ ತೆಱನು ಕುಳವ ಕಡಿದು ಯಿಂತಿ ಧರ್ಮಸ್ಥಳನ

೬೫. ಮೆಲೆ ಆಕರ ಅನಾಯ ಅರಸಿಂದ ಹಟ್ಟಿ ದ ಸಕ್ಕೆ ಬಂದ ಕಾಣಿಕೆ ಸಿದಾಯ ವೊಸಗೆ ವ ಸಂತಾಯ ಆ

೨೭. ಸ್ಥಳ : ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿರುವ ೧೧ನೆಯ ತಾಮ್ರಶಾಸನ – ಉಪ್ಪುಂದ, ಉಡುಪಿ ಜಿಲ್ಲೆ.

ರಾಜವಂಶರಾಜ : ಹಾಡುವಳ್ಳಿ ಸಾಳುವರು – ಚೆನ್ನಭೈರಾದೇವಿ

ತೇದಿ : ಶಕವರ್ಷ ೧೪೮೯ನೆಯ ರುಧಿರೋದ್ಗಾರಿ ಸಂವತ್ಸರದ ಚಯಿತ ಬ ೭ ಮಿಯಲು. ಇದು ಕ್ರಿ.ಶ. ೧೫೬೩ ಏಪ್ರಿಲ್ ೧೫ಕ್ಕೆ ಸರಿಹೊಂದುತ್ತದೆ.

ಭಾಷೆ ಲಿಪಿ : ಕನ್ನಡ

ಪ್ರಕಟಣೆ :

೧. ಎರಿಇಎ, ಎಪಿಎಕ್ಸ್.ಎ ೧೯೭೧ – ೭೨ ಶಾ ಸಂ. ೨೯.

೨. ನರಸಿಂಹಮೂರ್ತಿ ಪಿ.ಎನ್., ೨೦೦೭, ಶಾ ಸಂ. ೭೨.

ಬೈರಾದೇವಿಯರ ಕುಮಾರಿಯಾದ ಮಹಾಮಂಡಲೇಶ್ವರ ಚೆನ್ನಭೈರಾದೇವಿಯರು ಸಂಗೀತಪುರದಲ್ಲಿದ್ದು ಭಟ್ಕಳ ಮುಂತಾದ ರಾಜ್ಯವನ್ನಾಳುತ್ತಿರಲು ಮೇಲೆ ಉಲ್ಲೇಖಿಸಿದ ದಿನದಂದು ಆನಂದಪಾಳದಲ್ಲಿರುವಂತಹ ಉಪ್ಪುಗುಂದದ ಶ್ರೀನರಸಿಂಹತೀರ್ಥ ಶ್ರೀಪಾದರ ಶಿಷ್ಯರಾದ ಶ್ರೀರಾಮಚಂದ್ರತೀರ್ಥರಿಗೆ ಕುಳವಕಡಿದು ಕೊಟ್ಟ (ತೆರಿಗೆಯನ್ನು ಮನ್ನಾ ಮಾಡಿದ) ವಿಷಯವನ್ನು ಈ ಶಾಸನ ತಿಳಿಸುತ್ತಿದೆ.

ಹಿಂದೆ ಹೆಬ್ಬಳೆಯೊಳಗೆ ರಾಜರಿಗೆ ಹರವರಿಗೆ ಬಂದಂತಹ ನಾತುಸೆಟ್ಟಿಯ ಮಕ್ಕಳಿಗೆ ಸಂಬಂಧಿಸಿದ ಭೂಮಿಯ ಗೆರೆಸೋವಿಯ (ಗೇರುಸೊಪ್ಪೆ) ನಾಗಪ್ಪ ಸೆಟ್ಟಿಯ ಮಗ ಮೆಲ್ಲು ಸೆಟ್ಟಿಗೆ ಮೂಲವಾಗಿ ಬಂದು ಅದನ್ನು ಆತನು ಬೀರಣ ಸೆಟ್ಟಿಗೆ ಮೂಲವಾಗಿ ಕೊಟ್ಟಾಗ ಆತನು ಅಲ್ಲಿ ಮಠವನ್ನು ಕಟ್ಟಿಸಿದಾಗಾ ಸ್ಥಳಕ್ಕೆ ಕೊಡಬೇಕಾದಂತಹ ತೆರಿಗೆಯನ್ನು ಮನ್ನಾ ಮಾಡಿದನು. ‘ದೇವರಿಗೆ ಬುದ್ಧಿಗಲಿಸಿದ ಸಂಬಂಧ’ವೆಂದು ಪ್ರಯೋಗವಿದ್ದು ದೇವತಾ ಪ್ರೇರಣೆಯಿಂದ ಮಠವನ್ನು ನಿರ್ಮಿಸಿದಂತೆ ಕಂಡುಬರುತ್ತದೆ.

ಶಾಸನ ಪಾಠ

೧. ಸ್ವಸ್ತಿ ನಮಸ್ತುಂಗಶಿರಶ್ಚುಂಬಿ ಚಂದ್ರಚಾಮರ ಚಾರವೇ ತ್ರಯಿಲೋಕ್ಯ ನಗರಾರಂಭ ಮೂಲಸ್ತಂಭಾಯಶಂಭವೇ ಶ್ರೀಮನ್ಮ

೨. ಹಾ ಮಂಡಲೇಶ್ವರರು ಭೈರಾದೇವಿ ಅಮ್ಮನವರ ಕುಮಾರಿಯರು ಶ್ರೀಮನ್ಮಹಾ ಮಂಡಲೇಶ್ವರರ ಚೆಂನ ಭಯ

೩. ರಾದೆವಿ ಅಮ್ಮನವರು ಸಂಗೀತ ಪುರವರಾಧೀಷ್ಟಿತರಾಗಿ ಬಟ್ಟಕಳ ಮುಂತಾದ ರಾಜ್ಯವನು ಸದ್ಧರ್ಮಕಥಾಪ್ರಸಂಗದಿಂ ಪ್ರ –

೪. ತಿಪಾಲಿಸಿದ್ದಂದಿನ ಶಾಲಿವಾಹನ ಶಕವರುಷ ೧೪೮೬ನೆಯ ರುಧಿರೋದ್ಗಾರಿ ಸಂವತ್ಸರದ ಚಯಿತ ಬ ೭ಮಿಯ

೫. ಲು ಶ್ರೀಮದಾನಂದವಾಳ ಪತಿಷಾಧಿಷ್ಟಿತರಾದ ಉಪ್ಪುಗುಂದದ ಶ್ರೀನರಸಿಂಹ್ಯ ತೀರ್ಥ ಶ್ರೀಪದಂಗಳ ಶಿಷ್ಯ –

೬. ರುಶ್ರೀರಾಮಚಂದ್ರ ತೀರ್ಥ ಶ್ರೀಪದಂಗಳಿಗೆ ಶ್ರೀಮನ್ಮಹಾಮಂಡಲೇಶ್ವರರು ಚೆನ್ನಭಯಿರಾದೇವಿ ಅಮನವರು –

೭. ಪೊಡವಂಟು ಕುಳವ ಕಡಿದು ತೊಟ್ಟ ಸಾಧನದ ಭಾಷಾಕ್ರಮವೆಂತೆಂದರೆ ಹೆಬ್ಬಳೆಯೊಳಗೆ ನಮ್ಮ ಮೂಲ ಹರ –

೮. ವರಿಗೆ ಬಂದ ನಾತುಸೆಟ್ಟಿಯ ಮಕ್ಕಳು ಹೂಡಿದ ಸರ್ವ್ವಸ್ವವನು ಗೆರಸೋವಿಯ ನಾಗಪ್ಪ ಸೆಟ್ಟಿಯ ಮಗ ಮೆಲ್ಲು ಸೆಟ್ಟಿ

೯. ಯ ಕಯ್ಯಲಿ ನಮ್ಮ ಅರಮನೆಗೆ ಮೂಲ ಹಡವ ಅರ್ಥ್ಥವ ಕಾಣಿಕೆಯ ಮಾಡಿಸಿಕೊಂಡು ವೊಂದು ವರಹನ ತೆಱೆ ಕ –

೧೦. ಟ್ಟಿಮೂಲವಪಾಲಿಸಿ ಆತ ಆ ಸರ್ವ್ವಸ್ವವನು ಬದ್ದು ಬರುತಿದ್ದುದನು ಮರಳೆ ಅವನು ಆ ಸರ್ವ್ವಸ್ವವನೂ ಬೀರಣ

೧೧. ಸೆಟ್ಟಿಗೆ ಮೂಲಕ ಕೊಟ್ಟಲ್ಲಿ ಆ ಬೀರಣ ಸೆಟ್ಟಿಯ ಕಯ್ಯಲಿ ದೇವರು ಮೂಲವ ಕೊಂಡು ಯೀಗ ಆ ಸರ್ವ್ವಸ್ವಕ್ಕೆ ತೆಱುವ

೧೨. ವೊಂದು ವರಹನ ತೆಱನು ದೇವರು ತಲಗೆಱೆಯ ಗುಂಡಿಗಡಿಯ ಸ್ಥಳನಲ್ಲಿ ಕಟ್ಟಿಸಿದ ಮಠದಲ್ಲಿ ಯಿವ್ವಾ ನುಕೊ –

೧೩. ಲವಾಗಿ ಮಾಡುವ ಧರ್ಮ್ಮಕ್ಕೆ ಕುಳವ ಕಡಿದು ಕೊಡಬೇಕೆಂದು ದೇವರು ಬುದ್ದಿಗಲಿಸಿದ ಸಂಮಂಧ ಆವಗ ೧ನ ತೆಱೆ –

೧೪. ದೆ ಮೂಲ ಹಡವ ಆರ್ಧ್ಧದಿಂದ ಅಧಿಕವಾದ ಅರ್ಥ್ಥವನು ದೇವರಿಂದ ತೆಗೆದುಕೊಂಡು ದೇವರು ಮಾಡುವ

೧೫. ಧರ್ಮ್ಮಕ್ಕೆ ಆವೊಂದವರಹನ ತೆಱನು ಸಹಿರಂಣ್ಯೋದಕ ಧಾರಾಪೂರ್ವಕವಾಗಿ ಕುಳವ ಕಡಿದು ಮೂ –

೧೬. ಲವ ಕೊಟ್ಟಿಉ ಯೀ ಸರ್ವ್ವಕ್ಕೆ ಅಕರ ಅನಾಯ ಅರಸಿಂಹ ಹುಟ್ಟಿ ನಾಡಿಂಗೆ ಬಂದ ಕಾಣಿಕೆ ಖಡ್ಡಾಯ ಬಿ –

೧೭. ಟ್ಟ ಬಿಢಾರ ಅಸಿ ಅಪ್ಪಣೆ ಮುಂತಾದ ಅವ ಉಪೋತ್ತರಉ ಯಿಲ್ಲದೆ ಸರ್ವ್ವಬಾಧಾ ರಹಿತವಾಗಿ ಆಚಂದ್ರಾ –

೧೮. ರ್ಕ್ಕಸ್ತಾಯಿಯಾಗಿ ದೇವರು ದೇವರ ಶಿಷ್ಯಪಾರಂಪರೆಯಾಗಿ ಸರ್ವ್ವಮಾನ್ಯವಾಗಿ ಬದುಬಹುದೆಂದು ಶ್ರೀರಾಮ –

೧೯. ಚಂದ್ರತೀರ್ಥ್ಥ ಶ್ರೀಪದಂಗಳಿಗೆ ಚೆಂನ್ನಮ್ಮ ಭಯಿರಾದೇವಿ ಅಮ್ಮನವರು ಪೊಡವಂಟು ತೆಱಕುಳವ ಕಡಿದು ಕೊ –

೨೦. ಟ್ಟಧರ್ಮಸಾಧನ ಯಿಂತಪ್ಪು (ದಕ್ಕೆ*)ಧರ್ಮಸಾಕ್ಷಿಗಳು ಆದಿತ್ಯಚಂದ್ರಾವನಿಲಾನಲ ಉಚದ್ಯ ಉರ್ಭೂಮಿರಾಪೋಹ್ರು –

೨೧. ದೆ ಯಮಶ್ಚ ಆಹಶ್ಚ ರಾತ್ರಿಶ್ಚ ಉಭೆಚ ಸಂಧ್ಯೆ ಧರ್ಮ್ಮಶ್ಚ ಜಾನಾತಿ ನರಸ್ಯ ಉರ್ತ್ತಂ ಸ್ವದತ್ತಾಂ ಪರದತ್ತಾಂ ವಾ –

೨೨. ಯೋ ಹರೆತು ವಸುಂಧರಾ ಶಷ್ಟಿರ್ವ್ವರುಷ ಸಹಸ್ರಾಣಿ ವಿಷ್ಠಾಯಾಂ ಜಾಯತೆ ಕ್ರುವಿ ದಾನಪಾಲನಯೊರ್ಮ್ಮ

೨೩. ಧೈ ದಾನಪಾಲನಾಛ್ರೆಯೋನುಪಾನಂ ದಾನಾತ್ಸ್ವರ್ಗಮವಾಪ್ನೋತಿ ಪಾಲನಾದಚ್ಚುತಂ ಪದಂ ಚೆಂನಭ್ಯೆ ಬಹ

೨೮. ಸ್ಥಳ : ಗ್ರಾಮದ ನಂದೀಶ್ವರ ವರದ್ವಿಪದ ಹಿಂಭಾಗದಲ್ಲಿರುವ ಶಾಸನ (ಪ್ರಸ್ತುತ ಕರ್ನಾಟಕ ವಿಶ್ವವಿದ್ಯಾಲಯದ ವಸ್ತುಸಂಗ್ರಹಾಲಯದಲ್ಲಿದೆ) – ಹಾಡುವಳ್ಳಿ, ಉತ್ತರಕನ್ನಡ ಜಿಲ್ಲೆ.

ರಾಜವಂಶರಾಜ : ಹಾಡುವಳ್ಳಿ ಸಾಳುವರು

ಭಾಷೆ ಲಿಪಿ : ಕನ್ನಡ

ಪ್ರಕಟಣೆ : ಅಣ್ಣಿಗೇರಿ ಎ.ಎಂ., ೧೯೯೮, ಪು. ೨೯.

ಲಿಪಿ ದೃಷ್ಟಿಯಿಂದ ಈ ಶಾಸನದ ಕಾಲ ಕ್ರಿ.ಶ. ೧೬ನೇ ಶತಮಾನ. ಈ ಶಾಸನವು ಅಪೂರ್ಣವಾಗಿದೆ. ನಾರಣ ಎಂಬುವವನು ಮಗಪುರದಲ್ಲಿ ಪ್ರತಿಷ್ಠಾಪಿಸಿದ ವಿಷಯ ತಿಳಿಸುವಂತಿದೆ.

ಶಾಸನ ಪಾಠ

೧. ನಾರಣಸ್ಥೇ ಮಗಪುರೇ ಸ್ತಿಯತೇ ಸಿದ್ಧ

೨೯. ಸ್ಥಳ : ಚಕ್ರೇಶ್ವರಿ ದೇವಾಲಯದಲ್ಲಿರುವ ಚಕ್ರೇಶ್ವರಿ ದೇವಿಯ ಪ್ರಭಾವಳಿಯ ಹಿಂದೆಯಿದೆ. (ಪ್ರಸ್ತುತ ಕರ್ನಾಟಕ ವಿಶ್ವವಿದ್ಯಾಲಯದ ವಸ್ತು ಸಂಗ್ರಹಾಲಯದಲ್ಲಿದೆ) – ಧಾರವಾಡ ಜಿಲ್ಲೆ.

ರಾಜವಂಶರಾಜ : ಹಾಡುವಳ್ಳಿ ಸಾಳುವರು

ಭಾಷೆ ಲಿಪಿ : ಕನ್ನಡ

ಪ್ರಕಟಣೆ : ಅಣ್ಣಿಗೇರಿ ಎ.ಎಂ., ೧೯೯೮, ಪು. ೨೮.

ಲಿಪಿದೃಷ್ಟಿಯಿಂದ ಈ ಶಾಸನದ ಕಾಲ ಕ್ರಿ.ಶ. ೧೬ನೇ ಶತಮಾನ.

ತೃಟಿತ. ಯಾಪನೀಯ ಸಂಘವೆಂಬ ಆಕಾಶಕ್ಕೆ ಚಂದ್ರನಂತಿರುವವನೂ ಪರವಾದಿಗಳೆಂಬ ಅಂಧಕಾರ ವನ್ನು ದೂರ ಮಾಡುವವನೂ, ಪರಮ ತಪಸ್ವಿಗಳೆಂಬ ಸಮುದ್ರಕ್ಕೆ ಚಂದ್ರನಂತಿರುವವನೂ ಆದ ಚಂದ್ರ ಪ್ರಭೇಂದು ಮುನಿಯಿರುವರು, ಆ ಮುನಿಯ ಪಾದಳನರ್ಚಿಸಿದಂತಹ ಓಝಂಗಲ್ಲ ಶ್ರೀಮತ್ ದೇವಣನ ವಿಚಾರವಿದೆ.

ಶಾಸನ ಪಾಠ

೧. ವರಯಾಪನೀಯ . . ಸಂಘಾಂಭರ ಚಂದ್ರಂವಾಡಿ – ಕ –

೨. ೦ಜ ಭಂಜನ ಚಂದ್ರಂ. ಪರಮತಪಸರಧಿ ಚಂದ್ರಂ

೩. ಧರಯೋ ಶ್ರೀಮತ್. . ಪ್ರಭೇಂದು. ಮು(ನಿ)ಪಂ ನೆಗಳ್ದಂ

೪. ಆ ಮುನಿಪಂಘ್ರಿಯನರ್ಚಸಿ ಭೂಮಿಯೋ.

೫. ಳತಿ ಕೀರ್ತಿವೆತ್ತ ವೋರುಂಗಲ್ಲ ಶ್ರೀಮದ್. ದೇವಣ.

೬. ಹಮ್ಮಣ ರೂಪಾವತಾರ

[ಬುಕ್ಕ] ಪಂಗಳು

೩೦. ಸ್ಥಳ : ಪಾಶ್ವನಾಥ ಬಸದಿಯ ಬಿಳಿಗೆ – ಹಾಡುವಳ್ಳಿ.

ರಾಜವಂಶರಾಜ : ಹಾಡುವಳ್ಳಿ – ಸಾಳುವರು

ಅಪ್ರಕಟಿತ ಶಾಸನ

ಅಪ್ರಕಟಿತ ಶಾಸನ

ಭಾಷೆ ಲಿಪಿ : ಕನ್ನಡ

ಪ್ರಕಟಣೆ : ಅಪ್ರಕಟಿತ

ತೃಟಿತ. ಲಿಪಿ ದೃಷ್ಟಿಯಿಂದ ಈ ಶಾಸನದ ಕಾಲ ಕ್ರಿ.ಶ. ೧೬ನೇ ಶತಮಾನ. ಶಾಸನದ ಹೆಚ್ಚಿನ ಭಾಗ ಹಾಳಾಗಿದೆ. ಈ ಶಾಸನದಲ್ಲಿ ಭತ್ತ, ಮೆಣಸು, ಎರಡು ಹಣ, ಹದಿನಾಲ್ಕು ಹಣವ ಉಲ್ಲೇಖವಿದೆ. ಹೇರು ಶಬ್ದ ೧ ಕಂ. ಇದು ಅಳತೆಯನ್ನು ಸೂಚಿಸುತ್ತದೆ. ನಿಷಿದಿ ಶಬ್ದವನ್ನು ಸೂಚಿಸುತ್ತದೆ. ಈ ಶಾಸನ ದಲ್ಲಿ ಹೆಬ್ಬಾರ, [ಮಾ]ಧವ ಭಟರ ಹೆಸರನ್ನೂ ಸೂಚಿಸಲಾಗಿದೆ.

ಶಾಸನ ಪಾಠ

೧. . ಭತ್ತವ . ಹು . ಮಯ್ಯಾ[೯]ದೇ

೨. . . . ಮೂಲದ ಕೊಂಡ ನಂತರ ಅವರ.

೩. . . . ವುತ್ತಿಯ ಮೇಱೆ ಕಟ್ಟಿದ

೪. . . ವಳಿಯ ಱಿ . . ಕಿಯ

೫. . . ಹೇಱು ೧ ಕಂ ನಿಸಿದಿಯ ೬

೬. ಒಂದ ಮೆಣಸು ಭಾರ ೧ಕ್ಕಂ ನಿಸಿದಿಯ ೬

೭. . ರ ೧ಕಂ ಗುಳಿಗೆ ಯರಡು ಹಣ

೮. . . ಮೆಣಸು ಸರ ಬಾರ ೧ ಕಂಗುಳಿ

೯. . . ರಾಮ ಮತ್ತಂ ಬ್ರಂ

೧೦. ಮೂಲಕ ಒಳಗೆ ಹೊಸ ಮೂ

೧೧. ಮೂ . ಣ ಅಂತು ಆಂ

೧೨. ಮೂಡ ಮಸಣನ ಮಕ್ಕಿ

೧೩. ನ ಚಿಪ್ಪುಳ ಕಾನೂರ .

೧೪. ಕೊಂಡ ಹದಿನಾಲ್ಕು ಹ.

೧೫. [ಮಾ]ಧವ ಭಟರ್ ಗುಂ[ಡು]

೧೬. ಬೆಳಿರ ಮನೆ ಕೊಣ ಮನೆಯ

೧೭. ರಿನು ಮಳಿ ಊರಿಂದ ಹಂ

೧೮. . . . ಹೆಬ್ಬಾರನ ಮೂಲದ

೧೯. . . . ಸವಲಾಡಿದ ಎಲೆ

೨೦. . . ತ್ತುವಾರ ಹೇಱೂರಿ

೨೧. . . . ತ್ತಲಿ ಯಿದು ಹ

೨೨. . . . ದಿಂದಯ. .

೨೩. . . . . ರ ಅಂ

೨೪. . . .

೩೧. ಸ್ಥಳ : ಪಾಶ್ವನಾಥ ಬಸದಿಯ ಸಮೀಪ – ಹಾಡುವಳ್ಳಿ.

ರಾಜವಂಶರಾಜ : ಹಾಡುವಳ್ಳಿ – ಸಾಳುವರು

ಭಾಷೆ ಲಿಪಿ : ಕನ್ನಡ

ಪ್ರಕಟಣೆ : ಅ ಪ್ರಕಟಿತ

ತೃಟಿತ. ಲಿಪಿ ದೃಷ್ಟಿಯಿಂದ ಈ ಶಾಸನದ ಕಾಲ ೧೬ನೇ ಶತಮಾನ. ಈ ಶಾಸನದಲ್ಲಿ ಸಂಗಭೂಪನ ಹೆಸರು ಕಾವರಸನ ತನುಜ (ಮಗ) ಶಬ್ದ ದಾಖಲಿಸಿದೆ. ಉಳಿದ ವಿವರ ಅಸ್ಪಷ್ಟ.

ಶಾಸನ ಪಾಠ

೧. . . . .

೨. . . . ಯ ಹಂ

೩. . . ಗ . . ವರ್ಧ

೪. . . . ನು ಸಂಗದ್ರಪಾಲ

೫. . . . ಯರಿ. . . ಸುಖ

೬. . . ಸುತ್ತಮಿರೆ ಸಂಗದ್ರಪಾಲ

೭. . . ರಾ. . . .ಮ ಸುರ ಭೂ ಜಗಳಾದವ. .

೮. . . ಯ . . ಸಂ ಪಾರ್ವ್ವತಿ ನಾದರದಿಂ ಪುಟ್ಟಿ

೯. . . .ಪುರಮಂ ದಂಡಿಸಿಂಮುಂ ತ್ರಿದಂ

೧೦. . . . ಸ್ಮರಣ ಪರಿಣತಾಂತ ಸ್ಮರಣವಾಗಿ. . .

 

೧೧. . .ನೃಪನ ಮಹೋಂನತಿ ಯಿಂತೆಂದಡೆ

೧೨. . . . ದಾನ ಶೀಲದೆ ಕಾವರಸನ ತನೂಜ ಸಂಗ

೧೩. . . .ಯುತ ಸರಳ ವಾಹಿನಿಗ ಪತಿಯಾಗಿ

೧೪. . . ೦ಗ ಯಾವರಸ ಸಮನಾದೆನೆಂದುದ ವಿಚಾ. . .

೧೫. . . .ಗ ದಾಳಿ ವಿರ್ಜ್ಞೆದ ಗಂದರ. . .

೧೬. . . . ರಾಜ ಸಂಗ ಭೂಪಾನಂ ರಾಜ

೧೭. . . . ಜಿನ . . ಯಿ ಸಿರಸಿ ಮಧ್ಯದೊಳಿ. .

೧೮. . . ರಗ. . ಟ್ಟಂ

೧೯. ಸೂ. . .ಮಿಸುಕದಿ

೨೦. ಕಾಟಿಯ

೨೧. . . .ರಿಬ್ರಾ