. ಸ್ಥಳ : ಪೇಟೆಯಲ್ಲಿರುವ ಪಾರ್ಶ್ವನಾಥ ದೇವಾಲಯದಲ್ಲಿರುವ ಮೂರನೆಯ ಶಿಲಾಸನದಲ್ಲಿ – ಭಟ್ಕಳ, ಉತ್ತರಕನ್ನಡ ಜಿಲ್ಲೆ

ರಾಜವಂಶರಾಜ : ಹಾಡುವಳ್ಳಿ ಸಾಳುವರು – ಸಂಗೀರಾಯ.

ತೇದಿ : “ಶಕ ವರುಷ ೧೩೩೨ನೆಯ ಸರ್ವಧಾರಿ ಸಂವತ್ಸರದ ಕಾರ್ತಿಕ ಶುದ್ಧ ೧೦ ಸೋ” ಎಂದಿದ್ದು ಇದು ಕ್ರಿ.ಶ. ೧೪೧೦ ಎಂದಾಗುತ್ತದೆ. ಆದರೆ ಸರ್ವಧಾರಿ ಸಂವತ್ಸರವು ೧೩೩೦ರಲ್ಲಿ ಬಂದಿರುವುದರಿಂದ, ಅದಕ್ಕನುಗುಣವಾಗಿ ಕಾಲಗಣನೆ ಮಾಡಿದರೆ ಕ್ರಿ.ಶ. ೧೪೦೮, ಅಕ್ಟೋಬರ್ ೨೯, ಸೋಮವಾರಕ್ಕೆ ಸರಿ ಹೊಂದುವುದು.

ಭಾಷೆ ಲಿಪಿ : ಕನ್ನಡ

ಪ್ರಕಟಣೆ : ಕ.ಇ. I, ೧೯೩೯ – ೪೦, ಶಾ.ಸಂ.೩೮.

ಇದು ಜೈನ ನಿಷಿಧಿ ಶಾಸನವಾಗಿದೆ. ಹೈವರಸ ಮಗನಾದ ಮಲ್ಲಿರಾಯನ ಈ ನಿಷಿಧಿಯನ್ನು ಆತನ ಸೋದರ ಸಂಗಿರಾಯನು ಮಾಡಿಸಿದನು. ಮಲ್ಲಿರಾಯನು ಭಟ್ಟಕಳ ಪೇಟೆಯ ಮಧ್ಯದಲ್ಲಿ ಸಮುದಾಯವನ್ನು ನಿರ್ಮಿಸಿದನು. ಸಮುದಾಯವನ್ನು ನಿರ್ಮಿಸಿದ ನಂತರ ಮಲ್ಲಿರಾಯನು ಸ್ವರ್ಗಸ್ಥನಾದನು. ಅವನ ನೆನಪಿಗಾಗಿ ಮೇಲೆ ಉಲ್ಲೇಖಿಸಿದ ದಿನದಂದು ಸಹೋದರನಾದ ಸಂಗಿರಾಯ ವೊಡೆಯನು ಸಂಗಿರಾಯನ ನೆನಪಿಗಾಗಿ ನಿಷಿಧಿಯನ್ನು ನಿರ್ಮಿಸಿದ್ದನನ್ನು ಈ ಶಾಸನದಲ್ಲಿ ದಾಖಲಿಸಿದೆ. ಸಂಗಿರಾಯನನ್ನು ಹಾಡುವಳ್ಳಿ ಪುರವರಾಧೀಶ್ವರನೆಂದು ಶಾಸನದಲ್ಲಿ ದಾಖಲಿಸಿದೆ.

ಶಾಸನಪಾಠ

೧. ಶ್ರೀಮತ್ಪರಮ [ಗಂಭೀರ] ಶಾದ್ವಾದಾಮೋಘಲಾಂಛ್ಚನಂ ಜೀಯ ತ್ರಯಿಲೋ

೨. ಕ್ಯನಾಥಸ್ಯ ಶಾಸನಂಜಿನಶಾಸನಂ ||

೩. . . . . . . . . . . . ಣೆಯ ಮುಖದ [ರ್ಪ]. ಲ್ವ ತಟ್ಟವಿಭಾಡಡಂ

೪. . . ಯ ಶೌರ್ಯೌದಾರಂ ಪಕಟಿತ ಹೈವರಸ ತನುಜನುಂ ಮಲ್ಲಿರಾಯಂ |

೫. ಮಾ. ಯ. [ಭಾಱ] ಮದವಾರಣ ದಿಕ್ತಟಕೀರ್ತ್ತಿವಲ್ಲಭಂ | ಭೂಧರ ಹೈವ ಭೂಪನ ತನೂಭವ

೬. ಸಂಗಮ ಭೂಪನಾನುಜಂ | ರಾವ [ತ] ಮಲ್ಲಿರಾಯನ. ಸೊಗ್ಗ [ ] ವನೆಯ್ದಲು [ಕಂ]ಡು

೭. . . ರಿ ಯಿಂದಾವಿದ ಪಟ್ಟಣಕ್ಕೆ ಸಮುದಾಯವನುಛ್ಛಹದಿಂದ ಮಾಡಿದಂ |

೮. ಶ್ರೀಮತ್ಪಾಡವಳ್ಳಿ ಪುರನಾಥ ಸನಾಮ ಸುಸೌಖ್ಯ ಸಂಗಮಂ ಕೋಮಳಗಾತ್ರ

೯. ತಮ್ಮ ಮಲ್ಲಿರಾಯನು ಸ್ವರ್ಗಮನೆಯ್ದ ಚೆಯಿಪಲ್ಲ ದಾಮದೀಪಂ ಮದಶೋ ವಿಭ

೧೦. [ತಮ್ಮಂ] ಮನೆ ಸಂವರಿಸಿದು ಪಿಟ್ಟಣನ್ಕಾ ಸಮುದಾಯ ಬಟ್ಟಕಳ ಮಧ್ಯದಿ ಮಾಡಿಸಿ

೧೧. ದಂ ನಿಶೀದಿಯಂ || ಸಕಳ ಕಳೆಗಳಲಭಿಗ್ಞನು ವಿಕಸಿತ ವದರಾರವಿಂದ ಸಂಗಮ

೧೨. ಭೂಪಂ ಪ್ರಕಟಿಸಿದ ಸಮುದಾಯಕ್ಕಂ ಮೂ ಅಕುಟಳ ಮಲ್ಲಿರಾಯ ಸ್ವರ್ಗ್ಗ

೧೩. ಲೋಕದಳೆಸೆದಂ || ಸ್ವಸ್ತಿ ಶ್ರೀಜಯಾಭ್ಯುದಯ [ಸಕ ವರುಷ] ೧೩೩೨ನೆಯ

೧೪. ಸರ್ವಧಾರಿ ಸಂವತ್ಸರದ ಕಾರ್ತಿಕ ಶು ೧೦ ಸೋ || ಶ್ರೀಮನುಮಹಾಮಂಡ.

೧೫. ಳೇಶ್ವರ ಅರಿರಾಯ ವಿಭಾಡ ಹೈವರಸರ ಸಂಕಂಮಂ..ರು ದೇವಿಯರ..

೧೬. ರತ್ನಾ ಹಾಡವಳ್ಳಿಪುರವರಾಧೀಶ್ವರ ಶ್ರೀಸಂಗಿರಾಯ ವೊಡೆಯರು ತಂನೊ

೧೭. ಸಂಬಾಂಧವ [ಮ]ಲ್ಲಿದೇವರ [ಸರ್ಗ್ಗನು] ಸ್ವರ್ಗ್ಗಸ್ಥನಾದಲ್ಲಿ ಬಟಕಳದೊಳಗೆ ಪಟ್ಟಣ

೧೮. ಸಮುದಾಯಮಂ ಮಾಡಿಸಿದ ನಿಶಿದ್ದಿ ಶಾ[ಸ]ನಕ್ಕೆ ಮಂಗಳ ಮಹಾ ಶ್ರೀ [|*]

. ಸ್ಥಳ : ಹಿರೇಬಸದಿಯಲ್ಲಿರುವ ಪಾರ್ಶ್ವನಾಥ ಬಸದಿಯ ಹಿಂಭಾಗದಲ್ಲಿ ಬಿದ್ದಿರುವ ಕಲ್ಲುಶಾಸನ – ಭಟ್ಕಳ, ಉತ್ತರ ಕನ್ನಡ ಜಿಲ್ಲೆ.

ರಾಜವಂಶರಾಜ : ಹಾಡುವಳ್ಳಿ ಸಾಳುವರು – ಸಂಗಿರಾಯ

ತೇದಿ : ಶಕ ವರುಷ ೧೩೩೨ನೆಯ ಸರ್ವಧಾರಿ ಸಂವತ್ಸರದ ಕಾರ್ತಿಕದ ಶು. ೮ (ಕು) ಎಂದಿದೆ. ಆದರೆ ಸರ್ವಧಾರಿ ಸಂವತ್ಸರವು ೧೩೩೨ ವರ್ಷಕ್ಕಿರದೆ ೧೩೩೦ರಲ್ಲಿ ಬಂದಿರುವುದು. ಈ ವರ್ಷವನ್ನು ಗಣನೆಗೆ ತೆಗೆದುಕೊಂಡರೆ ಕ್ರಿ.ಶ. ೧೮೦೮ ಅಕ್ಟೋಬರ್ ೨೭ಕ್ಕೆ ಈ ಶಾಸನದ ಕಾಲ ಸರಿ ಹೊಂದುವುದು.

ಭಾಷೆ ಲಿಪಿ : ಕನ್ನಡ

ಪ್ರಕಟಣೆ : ಕ.ಇ.|, ೧೯೩೯ – ೪೦, ಶಾ.ಸಂ.೩೯.

ಇದು ನಿಷಿಧಿ ಶಾಸನವಾಗಿದೆ. ಹೈವರಸನ ವಂಶಕ್ಕೆ ಸೇರಿದೆ. ಇಲ್ಲಿ ಸಂಗಿರಾಯನ ತಾಯಿಯಾದ ಭೈರಾದೇವಿಯವರು ಸ್ವರ್ಗಸ್ಥರಾದ ವಿಷಯವನ್ನು ತಿಳಿಸಿದೆ. ಅವರ ಮರಣಾನಂತರ ಮಗನಾದ ಸಂಗಿರಾಯನು ಪಟ್ಟಣದ ಸಮುದಾಯ ಸೃಷ್ಟಿಸಿ ತಾಯಿಯ ಸ್ಮರಣೆಗಾಗಿ ನಿಷಿಧಿಯನ್ನು ನಿರ್ಮಿಸಿದನು.

ಶಾಸನ ಪಾಠ
ಭಾಗ

೧. ಶ್ರೀ ಮತ್ಪರಮ ಗಂಭೀರ ಶಾದ್ವಾದಾಮೋಘ ಲಾಂಛ್ಛನಂ ಜೀಯಾ ತ್ರಯಿಲೋಕ್ಯನಾಥಸ್ಯ

೨. ಶಾಸನಂ ಜಿನಶಾಸನಂ

ಭಾಗ

೩. ಜಿನಪದ [ವಿಮ]ಳ ಸುಪೂಜಿತ ಜಿನಮುನಿ ಪಾದಾರವಿಂದ್ಯೆ ವನಿತೆಶಿಕಾಮಣಿ ದ ಜಿನಪತಿ [ಮ್ಮಷ] –

೪. ನಾತ್ಮಜೆ ಜಿನದಮ್ಮಾಚರಣೆ ತಂನಯ ಶರಾಸಿರುಂ || ಶ್ರೀಮತ್ಪಾರ್ಶ್ವಜಿನಾಂಘ್ರಿವಂ

೫. ದೈನಮಳಜ್ಯೋತಿರ್ವಭಾತಾಂತ. ಸುಪ್ರೇಮಂ ಭವ್ಯಜಿನಾಗಮಾಂಕಿತ ಸಮಾನಸ್ಕ

೬. ೦ಧ ರಾಜೇಂದ್ರ ಸೋಮಾರ್ಚಿ ಸುತ್ರಾಣ ಪರಾಕ್ರಮಾನಿಳಸತಂ ಶ್ರೀರ

೭. . ರಾಜಂ ಧರಾಚಲನಾಥಂ ಕಮನೀಯ ರೂಪನೆಸೆದಂ ಶ್ರೀ ಮಂಡಳೀ [ಶಾ]ಗ್ರಜಂ

೮. . ಧರಣಿಯೊಳೊಪ್ಪುತಿಪ್ಪವರ ರೆಣ್ವುಪುರಾಧಿಪನನ್ವಯಾಬ್ಧಿ ಪೂನೆರ . . . . . . .

೯. . . . . . . . ಕುರುಂಬ ಸುಪುೞ್ವ ಬಾಣದಿಂತಿನ | . . . ನರೀಶ ಜಿನಧರ್ಮ್ಮ ಸಮಾ

೧೦. ಗಳು ತಮ್ಮ ರಾಜಿ ವಿಖ್ಯಾತ ನರೇಂದ್ರಂ ವೈರಿಗಜಕೇಸರಿ ನಾಕುವಾಸಲೆಯ ದೀರಂ ||

೧೧. . . . . ದೂರವಿನಾಥನನ್ವಯಲಲಾಮಂ ಪುಣ್ಯತೇಜೋದ್ಭವಂ ಪುರುಷಾರ್ಥಂ

೧೨. ಗೆಣೆ ಶೌರ್ಯವಿಭ್ರಮವಿಲಾಸಂ ಸತ್ಯವಾಚಾನ್ವಿತಂ [ಸು] ಗುಣಾಳಂಕೃತ [ಧ]ರ್ಮ

೧೩. . . . . ಕೀರ್ತ್ತಿಕ್ರಾಂತ ಸದ್ಧರ್ಮಪಾಲನಚಿತ್ತಂ ಪರಸೈನ್ಯ ಸಾದವದು

೧೪. ಚಿ ಯಂ ದಂ ಸುರಶ್ಯೆಳಿಗಂ || ಮಂಡಳಿಕ ತಮ್ಮ ರಾಜಂ ಮಂಡಳದೊಳು ಹುಸಿವ ಸೂಲ

೧೫. . . . . . ನ ತನುಜೆಯ ಸಯಿತ ಸಮರಕೆ ಮಂದಿಯಕ್ಕರಸಿಯರುಂ

೧೬. ಬ . ಹು ಹೊಂಗಿ . . ಯಯ್ಚಿದ . . ನಿಸ ತತ್ತನೂಜೆ ಭೈರಾದೇವಿಯ ರೆಸಗುವ ಸಮುದಾ

೧೭. ಯವಂ ಸುಕ ಸಂಕಮಂ [ರೂ]ಪಂ ಮಾಡಿಸಿದನುತ್ಸವದಿಂ || ಸಿಷ್ಟಿಕ್ರಮದೀಶರ. ಸೆ . . .

೧೮. . . . . . ಮಟ್ಟದೊಳೆಸೆವಾಪಟ್ಟಣಸಮುದಾಯವ ತಾಂ ಸೃಷ್ಟಿಸಿದಂ ಸಂಗ ಮಾಂಕಮಂ

೧೯. ಡಳಿಕಂ || ಸ್ವಸ್ತಿ ಶ್ರೀಜಯಾದ್ಭುದಯ ಶಕ ವರುಷ ೧೩೩೨ನೆಯ ಸರ್ವಧಾರಿ ಸಂವತ್ಸರದ

೨೦. ಕಾರ್ತಿಕದ ಶು ೮ [ಕು] || ಶ್ರೀ ಮನ್ಮಹಾಮಂಡಳೇಶ್ವರ ಅರಿರಾಯ ವಿಭಾಡ ಪಾಡವಳಿಪುರಾ

೨೧. ಧೀಶ್ವರಂ ಹೈವಭೂಪನ ಸುಕುಮಾರೆಂ ಭೈರಾದೇವಿಗರ್ಭರತ್ನ ಶ್ರೀ ಸಂಗಿರಾಯವೊಡೆಯರು

೨೨. . . . . . . . . ಸ್ವರ್ಗಗಾಮಿನಿಯಾದಲ್ಲಿ ಪಟ್ಟಣಸಮುದಾ

೨೩. ಯ . . . ನಿಲಿಸಿದ ನಿಶಿದ್ದಿಯ ಶಾಸನಕ್ಕೆಮಂಗಳ ಮಹಾ ಶ್ರೀ ಶ್ರೀ ಶ್ರೀ [||*]

. ಸ್ಥಳ : ಗ್ರಾಮದಲ್ಲಿರುವ ಜೈನ ಬಸದಿಯಲ್ಲಿರುವ ವೀರಗಲ್ಲು – ಕಾಯ್ಕಣಿ, ಉತ್ತರಕನ್ನಡ ಜಿಲ್ಲೆ

ರಾಜವಂಶರಾಜ : ಹಾಡುವಳ್ಳಿ ಸಾಳುವರು – ದೇವರಾಯ ಒಡೆಯ

ತೇದಿ : “ಸಕ ವರುಷ ೧೩೩೨ ಮನ್ಮಥ ಸಂವತ್ಸರದ ಜೇಷ್ಠ ಶುದ್ಧ ೩ ಆದಿವಾರದಲೂ” ಎಂದು ಕಾಲದ ಉಲ್ಲೇಖವಿದ್ದು, ಇದು ಕಾಲಗಣನೆಯಲ್ಲಿ ದೋಷವಿದ್ದಂತೆ ಇದೆ. ಇಲ್ಲಿ ಶುದ್ಧ೩

ಬದಲು ‘ಬ,೩’ ಎಂದಾದರೆ ಕ್ರಿ.ಶ. ೧೪೧೫ ಮೇ ೨೬ ಆದಿತ್ಯವಾರಕ್ಕೆ ಸರಿ ಹೊಂದುತ್ತದೆ.

ಭಾಷೆ ಲಿಪಿ : ಕನ್ನಡ

ಪ್ರಕಟಣೆ : ಕ.ಇ. |, ೧೯೩೯ – ೪೦, ಶಾ.ಸಂ.೪೦.

ಇದು ಜೈನ ವೀರಗಲ್ಲು ಶಾಸನವಾಗಿದೆ. ರಾಜಪರಮೇಶ್ವರ ದೇವರಾಯನು. ಸಾಮ್ರಾಜ್ಯವನ್ನಾಳುತ್ತಿರಲು ಮಹಾಪ್ರಧಾನಿ ಶಂಖರ (ಶಂಕರ)ದೇವ ಒಡೆಯರು ತುಳು ಸೈನ್ಯದೊಂದಿಗೆ ಬಂದನು. ಹಾಡುವಳ್ಳಿಯಲ್ಲಿ ರಾಜಕಾರ್ಯಕ್ಕಾಗಿ ಬರುವಾಗ ಬಟಕಳದಲ್ಲಿ ಬೀಡುಬಿಡಲಾಗಿ ಮಹಾಮಂಡಲೇಶ್ವರ ನಗಿರೆಯ ಹಯಿವರಸ ಒಡೆಯರ ಪುತ್ರನಾದ ಸಂಗಿರಾಯ ಒಡೆಯನೊಂದಿಗೆ ಕಾದಾಡಿದಾಗ ಲೋಕನಾಯಕನ ಮಗನಾದ ಮಾಬುನಾಯಕನು ವೀರಾವೇಷದಿಂದ ಹೋರಾಡಿ ಮರಣ ಹೊಂದಿದನು. ಆತನ ಸ್ಮರಣಾರ್ಥ ತಂದೆ ಲೋಕನಾಯಕನು ವೀರಗಲ್ಲನ್ನು ಹಾಕಿಸಿದ ವಿವರವನ್ನು ಈ ಶಾಸನ ತಿಳಿಸುತ್ತದೆ. ವೀರನನ್ನು ತುಳುಕಟಕ ಸೂರೆಕಾರ ಕಡಿತಲೆಯ ಮಲ್ಲ ಎಂದು ಶಾಸನ ಉಲ್ಲೇಖಿಸಿದೆ. ಮಾಣಿಯಾಚಾರಿಯ ಮಗ ಯಿಸರಾಚಾರಿಯು ಈ ಶಾಸನವನ್ನು ಮಾಡಿದನು.

ಶಾಸನಪಾಠ
ಭಾಗ

೧. *೦ಶ್ರೀಮತ್ಪರಮ ಗಂಭೀರ ಶ್ಯಾದ್ವಾದಾಮೋಘ ಲಾಂಛನಂ ಜೀಯಾತ್ರಲೋಕ್ಯನಾಥಸ್ಯ ಜಿನಸಾಸನಂ || ಸಕ ವ

೨. ರ್ಷ ೧೩೩೭ ಮನ್ಮಥ ಸಂವತ್ಸರದ ಜೇಷ್ಟ ಶುದ್ಧ ೩ ಆದಿವಾರದಲೂ ಸ್ವಸ್ತಿ ಶ್ರೀ ಮನ್ಮಹಾರಾಜಾಧಿರಾಜ

೩. ರಾಜಪರಮೇಶ್ವರ ದೇವರಾಯ ಒಡೆಯರು ಸಾಂಬ್ರಾಜ್ಯಾದ್ಭುದಯದಲೂ ಶ್ರೀ ಮನ್ಮಹಾಪ್ರಧಾನಿ ಶಂಖ

ಭಾಗ

೪. ರದೇವ ಒಡೆಯರು ತುಳುಕಟಕ ಸಹಿತ ಹಾಡುವಳ್ಳಿ ಮೇಲೆ ರಾಜಕಾರ್ಯ್ಯಕ್ಕೆ ಬಟಕಳದಲಿ

೫. ಪಾಳೆಯ ಬಿಡಲಾಗಿ ಶ್ರೀಮನ್ಮಹಾಮಂಡಳೇಶ್ವರಂ ನಗಿರೆಯ ಹಯಿವರ್ಸ ಒಡೆಯರ

೬. ಕುಮಾರ ಕಲಿಗಳ ಮುಖದ ಕೈ ಕಟಕ ಸೂಱೆಕಾಱ ಹುಸಿವರ ಸೂಲ ಕಡಿತಲೆಯ

ಭಾಗ

೭. ಮಲ್ಲಮವನಿಯಂಕಕಾಱ[ವ*]ಯಿರಿ ಮಂಡಳಿಕರ ಗಂಡ ಯೇ [ಕಾ]ಂಗವೀರ ಶ್ರೀಮನ್ಮಹಾಮಂಡ

೮. ಳೇಸ್ವರಂ ಸಂಗಿರಾಯ ಒಡೆಯರು ದಳವತಿ ನಡದು ಬಟ್ಟಕಳದಲ್ಲಿ ಕೂಡಿದಲ್ಲಿ ಹಳಿಗೇರಿಯ ಬಾಣಸಿಯ

೯. ಒ ಭಾಗಿನಗಿರ ನಾಲ್ವರು ತಾಯಮಗ ಲೋಕನಾಯಕ ಅ ಲೋಕನಾಯಕನ ಮಗ ಮಾ

ಭಾಗ

೧೦. ಬುನಾಯಕ ಮಾಡಿದ ವೀರ ಬಟಕಳದಲ್ಲಿ ಕಾದಿದಲ್ಲಿ ತುಳುಕಟಕ ಮೆಚ್ಚೆ ಹೋಯಿದು ಹೊಯ್ಸಿ

೧೧. ಕೊಂದು ರಣಖಂಡಿತವಾಗಿ ಬಿದ ನಾ ತಂದೆ ಲೋಕನಾಯಕ ಹಾಯಿಕಿಸಿದ ವೀರ ಗ

೧೨. ಲ್ಲು ಯಿಸರಾಚರಿ ಮಾಣಿಯಾಚರಿ ಮಾಡಿದ ವೀರಗಲ್ಲು ಮಂಗಳ ಮಹಾ ಶ್ರೀ ಶ್ರೀ ಶ್ರೀ [|*]

. ಸ್ಥಳ : ಗ್ರಾಮದಲ್ಲಿರುವ ಪಾರ್ಶ್ವನಾಥ ಬಸದಿಯಲ್ಲಿರುವ ವೀರಗಲ್ಲು – ಕಾಯ್ಕಣಿ.

ರಾಜವಂಶರಾಜ : ಹಾಡುವಳ್ಳಿ ಸಾಳುವರು – ಕೇಶವದೇವ ಒಡೆಯ.

ತೇದಿ : ಶಕ ವರ್ಷ ೧೩೪೧ ಶೋಭಕ್ರುತ ಸಂವತ್ಸರದ ಅಸಾಢ ಬಹುಳ ೧೩ ಬುಧವಾರದಲು ಇದು ಶಕವರ್ಷ ೧೩೪೧ರಲ್ಲಿ ಶೋಭಕೃತ್ ಸಂವತ್ಸರವಿರದೆ ೧೩೪೪ರಲ್ಲಿ ಶೋಭಕೃತ್ ಸಂವತ್ಸರವಿದೆ. ಹಾಗಾಗಿ ಶಾಸನದ ಕಾಲ ಕ್ರಿ.ಶ. ೧೪೨೨ ಜುಲೈ ೧೫, ಬುಧವಾರಕ್ಕೆ ಸಮವಾಗುವುದು.

ಭಾಷೆಲಿಪಿ : ಕನ್ನಡ

ಪ್ರಕಟಣೆ : ಕ.ಇ.|, ೧೯೩೯ – ೪೦, ಶಾ.ಸಂ. ೪೪.

ಈ ಶಾಸನ ವಿಜಯನಗರದ ಅರಸನಾದ ಬುಕ್ಕರಾಯನು ಆಳ್ವಿಕೆ ಮಾಡುತ್ತಿರುವಾಗ ನಗಿರೆಯ ಹಯಿವರಸ ಒಡೆಯರ ಮೊಮ್ಮಗ ಕೇಶವ ಒಡೆಯರು ರಾಜ್ಯವನ್ನಾಳುತ್ತಿರಲು, ಒಂದು ಭಾರಿ ಹಾಡುವಳ್ಳಿಯ ಸಂಗಿರಾಯ ಒಡೆಯರ ರಾಜ್ಯಕ್ಕೆ ದಂಡೆತ್ತಿ ಬರಲು ಸಂಗಿರಾಯನ ಸೇವಕನ ತಮ್ಮ ನಾಯಕನ ಮಗನೂ ಆದ ಸಂಗಣನಾಯಕನು ‘ಅಸಕೆಯ ತಳಿರಲ್ಲಿ’ ನಡೆದ ಯುದ್ಧದಲ್ಲಿ ವೀರಾವೇಷದಿಂದ ಹೋರಾಡಿ ವೀರಮರಣವನ್ನು ಪಡೆದನು. ಆತನ ನೆನಪಿಗಾಗಿ ಸಂಗಣನಾಯಕನ ಅಣ್ಣನಾದ ಹಯಿವಣ ನಾಯಕನೂ ಮತ್ತು ಅಳಿಯ ಬೊಮ್ಮನಾಯಕನು ವೀರಗಲ್ಲನ್ನು ನಿರ್ಮಿಸಿದನು. ಶಾಸನದಲ್ಲಿ ಹಾಡುವಳ್ಳಿಯ ಸಂಗಿರಾಯನನ್ನು ಹೊಸಿವರ ಶೂಲಮ ಮತ್ತು ಕಡಿತಳೆಯ ಮಲ್ಲನೆಂದು ಕರೆಯುತ್ತಿದ್ದನ್ನು ದಾಖಲಿಸಲಾಗಿದೆ.

ಶಾಸನ ಪಾಠ
ಭಾಗ

೧. 0ಶ್ರೀಗಣಧಿಪತಾಯ ನಮಃ ಸ್ವಸ್ತಿ ಶ್ರೀಮನ್ಮಮಹಾರಾಜಾಧಿರಾಜ ರಾಜಪರಮೇಶ್ವರ ಅಷ್ಟದಿಕ್ಕುಭಯ

೨. 0ಕರ ಮಹಾರಾಜ ವಿಜೆಯ ಬುಕರಾಯ ಚತುಸಮುದ್ರವನು ಪ್ರತಿಪಾಲಿಸುವಲಿ ಸಕವರಸ ಸಾವಿ

೩. ರ ಮೂನೂಱ ನಾಲ್ವತ್ತ ಒಂದನೆಯ ಶೋಭಕ್ರುತ ಸಂವತ್ಸರದ ಅಸಾಡ ಬಹುಳ ೧೩ ಬುಧವಾ

ಭಾಗ

೪. ರದಲು ಶ್ರೀಮನು ಮಹಮಂಡಳೇಶ್ವರ ಕಲಿಗಳ ಮುಖದ ಕಯಿ ಕಟಕ ಸೂಱೆಕಾರ ಸಿದ್ಧ ಸಿ[o*]ಹಾಸನ ನಗಿರೆಯ

೫. ಹಯಿವರಸ ಒಡೆಯರ ಮೊಂಮಗ ಕೇಸವದೇವ ಒಡೆಯರು ರಾಜ್ಯವ ಪ್ರತಿಪಾಲಿಸುವಲಿ ಹೊಸಿವರ [ಸೂ]

೬. ಲಿ ಕಡಿತಲೆಯ ಮಲ್ಲ ಹಾಡುವಳಿಯ ಸಂಗಿರಾಯ ಒಡೆಯರ ರಾಜ್ಯಕ್ಕೆ ಕೇಸವ ದೇವ ಒಡೆಯರು ಹಾಡು

ಭಾಗ

೭. ವಳಿಗೆ ಹರಿದಲ್ಲಿ ಅಸಕೆಯತಳಿರಲ್ಲಿ ಶ್ರೀಮನುಮಾಹಂಮಂಡ[ಳೇ*]ಸ್ವರ ಕೇಸವದೇವ ಒಡೆಯ

೮. ರ [ಪದದ] ಕಳುವ ಲೊಕ್ಕಿಯ ಬಳಿಯ ಬಿರಿದು ಮಾರ್ಪ್ಪಡೆಗಿಡಿಗ ಮಲೆವರಗಂಡ ಕಾ[ಲೆ]ತ್ತಿ ಮಾಡುವ ನಾಯಕಂ

೯. [ಮಲ]ಗಚೆಯ ತಂಮನಾಯಕನ ಮಗ ಸಂಗಣನಾಯಕ ಅಸಕೆಯತಳಿರಲ್ಲಿ ಹೊಯಿದು ಹೊಯಿಸಿಕೊಂಡು

ಭಾಗ

೧೦. ರಣಖಂಡಿತವಾಗಿ ಸ್ವರ್ಗ್ಗವನು ಸೂಱೆಗೊಂಡ ಯಿ ವೀರಗಲ್ಲನು ಆ[ತ]ನ ಅಂಣ ಹಯಿವಣ ನಾಯಕನೂ ಆತನ

೧೧. ಅಳಿಯ ಬೊಂಮನಾಯಕನು (ಯಿವರು) ಯಿವರುಯಿಬರು ಸಂಗಣನಾಯಕಂಗೆ ವೀರಗಲ್ಲನಿಕ್ಕಿ

೧೨. ಸಿ ಸ್ವರ್ಗ್ಗಕ್ಕೆ ಸಲಿಸಿದರೂ

. ಸ್ಥಳ : ಗ್ರಾಮದಲ್ಲಿರುವ ಮಠದ ಬಸದಿಯಲ್ಲಿರುವ ವೀರಗಲ್ಲು – ಹಾಡುವಳ್ಳಿ, ಉತ್ತರಕನ್ನಡ ಜಿಲ್ಲೆ.

ರಾಜವಂಶರಾಜ : ಹಾಡುವಳ್ಳಿ ಸಾಳುವರು – ಸಂಗಿರಾಯ ಒಡೆಯರು.

ತೇದಿ : ೧೩೪೫ನೇ ಶೋಭಕ್ರುತು ಸಂವತ್ಸರದ ಮಾರ್ಗಶಿರ ಬ. ೧೦ ವಡ್ಡವಾರ. ಇದು ಶಕವರ್ಷ ೧೩೪೫ವಾಗುವುದು ಮತ್ತು ಕ್ರಿ.ಶ. ೧೪೨೨ ಡಿಸೆಂಬರ್ ೮ ಮಂಗಳವಾರವಾಗುವುದು.

ಭಾಷೆಲಿಪಿ : ಕನ್ನಡ

ಪ್ರಕಟಣೆ : ಕ.ಇ. I.೧೯೩೯ – ೪೦, ಶಾ.ಸಂ. ೫೨.

ಇದು ಜೈನ ವೀರಗಲ್ಲು ಶಾಸನವಾಗಿದೆ. ಈ ಶಾಸನವು ವಿಜಯನಗರಸನನ್ನು ಸೂಚಿಸುವಂತೆ ಪ್ರಾರಂಭದಲ್ಲಿ ಕಂಡುಬರುತ್ತಿದ್ದು ರಾಜನ ಬಿರುದಾವಳಿ ರಾಜಾಧಿರಾಜ ಪರಮೇಶ್ವರ ಶ್ರೀ ವೀರಪ್ರತಾಪನೆಂದು ದಾಖಲಿಸಿದೆ. ಮುಂದಿನ ರಾಜನ ಹೆಸರು ಅಸ್ಪಷ್ಟವಾಗಿದೆ. ಈ ರಾಜನ ಮಹಾಪ್ರಧಾನನಾದ ವಿರುಪಂಣ ಒಡೆಯರು ಬಾರಹಕಂನ್ಯಾಪುರದಲ್ಲಿ ರಾಜ್ಯವನ್ನಾಳುತ್ತಿರಲು ಒಂದು ಬಾರಿ ಬಯದೂರಿ (ಬೈಂದೂರು)ಗೆ ಬಂದು ಬೀಡು ಬಿಟ್ಟಿರಲು ಮಹಾಮಂಡಳೇಶ್ವರ ಹಾಡುವಳ್ಳಿಯ ಸಂಗಿರಾಯ ಒಡೆಯರು ಅವನನ್ನು ಎದುರಿಸಿದನು. ಈ ಯುದ್ಧದಲ್ಲಿ ಬಂಟ ನಾರಾಣನಾಯಕನ ಮಗನು, ಬಂಮಣನಾಯಕನ ಅಳಿಯನೂ ಆದ ಕೋಟಿಯಣ್ಣನು ಹೋರಾಡಿ ವೀರಮರಣವನ್ನು ಹೊಂದಿದನು. ಈ ವೀರಗಲ್ಲನ್ನು ಮಾಬಂಣನಾಯಕ, ಬಂಕಿನಾಯಕ ಮಾಡಿಸಿರುವರೆಂದು, ಕೇಶವ ಆಚಾರಿಯ ಮಗ ನಾದ ಯಿಸರಾಚಾರಿ, ಆತನ ಮಗನಾದ ಮಾಣಿಯಾಚಾರಿಯು ಈ ಶಾಸನವನ್ನು ಕೆತ್ತಿದವನು ಎಂದು ಶಾಸನ ದಾಖಲಿಸಿದೆ.

ಶಾಸನ ಪಾಠ
ಭಾಗ

೧. ಶ್ರೀಮತ್ಪರಮಗಂಭೀರಸ್ಯಾದ್ವಾದಾಮೋಘಲಾಂಛನಂ [ಜಿಯಾತ್ರೈ] ಲೋಕ್ಯ ನಾಥಸ್ಯ ಶಾಸನಂ ಜಿನಶಾಸನಂ [|]

೨. ಶ್ರೀ ಮದ್ರಾಜಾಧಿರಾಜ ಪರಮೇಶ್ವರ ಶ್ರೀವೀರ ಪ್ರತಾಪ . . . . . . . ಜಯ ರಾಜ್ಯಾದ್ಭುದಯದಲೂ ಶ್ರೀಮ

೩. ನ್ಮಹಾ ಪ್ರಧಾನ ವಿರುಪಂಣ ಒಡೆಯರೂ ಬಾರ [ಹ] ಕಂನ್ಯಾ [ಪು]ರದ ರಾಜ ಧಾ .[ಯೊ]ಳು ರಾಜ್ಯಂ ಪ್ರತಿಪಾಳಿಸುತ್ತ . . . .

ಭಾಗ

೪. ಬಾರಕೂರ ಹತ್ತುಕೆರಿ ಸಮಸ್ತ ಬಲ್ಲಾಳು . . . . . . . . ವಿರುಪಂಣ ಒಡೆಯರೂ ಬಿಯಿದೂರಿಗೆ ಬಂದು ಪಾಳೆಯವ ಬಿ

೫. ಟಲ್ಲಿ ಕಲಿಗಳ ಮುಖದಕ್ಕೆ ರಿಪುಕಟಕ ಸೂಱಿಕಾಱ ಹುಸಿವರ ಸೂಲ ಕಡಿತಲೆಮಲ ಮಂಡಳಿ ಕತ್ರಿಸೂಲ ಭಾಷೆಗೆ ತಪ್ಪುವ ಮಂಡಳಿ

೬. ಕರಗಂಡ ಶ್ರೀಮನ್ಮ ಹಾಂಡಳೇಸ್ವರಂ ಹಾಡವಳ್ಳಿಯ ಸಂಗಿರಾಯ ಒಡೆಯರೂ ತಂನ ಎರಡು ಕೋಲ ಬಳಿ. ವೀರ ಪರಿವಾರವ

೭. ನೂ . . . . . ನಾಡಿ[ಗೆ]ನಾಡ . . . ಹೋದಲ್ಲಿ . . . . . . .

ಭಾಗ

೮. . . ದಳಿಯ ಸಮಸ್ತ ಪರಿವಾರವು ಕೋಟ ಬಯದೂರ ತನಕ.. ಮಱಿಯ ಭೀತಿಯು

೯. ಱದ ಅವಸರ ಸಂಗಿರಾಯ ಒಡೆಯರ ಬಂಟ ಚತುರಾವಳಿಯ ನಾರಣನಾಯಕನು

೧೦. . . ಮಗನು [ಊ] . . ಯ ಬಂಮಣನಾಯಕನ ಅಳಿಯ ಕ . . ತಿಂಮಂಣನಾಯ್ಕ

೧೧. ಬಇದೂರಿಗೆ . . . ಬಾಹು ಹೊಲ . ಮುಖತತಿ . . . ಕಪಿಲ ವರ್ನ್ನದ . . . ಕಪಿಲವರ್ನ್ನದ

೧೨. ತಲೆ ಭೀಮಗಂಡರ ಬಾಲ ಅಬೆಯರ್ಗ್ಗೆಬಳಿ ಹೆಗಡೆಯ.. ತಪ್ಪಿಸಿದ ಭೂಲಕ್ಷುಮಣಾನ ಹರಿಗೆಗೆ

೧೩. . . ಡುವ ನಾಯಕರ ಗಂಡ ಕೋಟಿಯಂ . . . . . . . . ಕ . . . .

ಭಾಗ

೧೪. ೧೩ . ೫ನೇ ಶೋಭಕ್ರುತು ಸಂವತ್ಸರದ ಮಾರ್ಗಶಿರ ಬ . ೧೦ ವಡ್ಡವಾರದಲೂ ಕೋಟಿಯಂಣನಾಯ.

೧೫. . . ಯ ದಳ ಮೆಚ್ಚೆ ಹೋಯಿದು ಹೊಯಿಸಿಕೊಂಡು ರಣಖಂಡಿತವಾಗಿ . . . . ದುಳ

೧೬. ಕೆಆತನ . ವೆಯ ಮಾಬಂಣನಾಯಕನು ಬಂಕಿನಾಯಕನೂ ಮಾಡಿಸಿದ ವೀರಗಲ್ಲು ಯಿ ಕಲ್ಲಮಾ

೧೭. ಡಿದಾತ ಕೇಶವ ಆಚಾರಿಯ ಮಗ ಯಿಸರಾಚಾರಿ ಆ ಯಾಚಾರಿಯ ಮಗ ಮಣಿಯಾಚಾರಿ . . . . . .

೧೮. ಮ . . . . . . . . . . ಶ್ರೀ

. ಸ್ಥಳ :ಸೇತುವೆಯ ಬಳಿಯಲ್ಲಿರುವ ವೀರಗಲ್ಲು – ಕಾಯ್ಕಿಣಿ, ಉತ್ತರಕನ್ನಡ ಜಿಲ್ಲೆ

ರಾಜವಂಶರಾಜ : ಹಾಡುವಳ್ಳಿ ಸಾಳುವರು – ಸಂಗಿರಾಯ ಒಡೆಯರು

ತೇದಿ : ಶಕ ವರ್ಷ ೧೩೪೫ ಶುಭಕ್ರತು ಶ್ರಾವಣಮಾಸ ಬಹುಳ ಅಮವಾಸ್ಯೆ ಬುಧವಾರದಲು ಎಂದಿದ್ದು, ಇದು ಕ್ರಿ.ಶ. ೧೪೨೩ ಜುಲೈ ೭ ಬುಧವಾರ ಸಮವಾಗುವುದು.

ಭಾಷೆ ಲಿಪಿ : ಕನ್ನಡ

ಪ್ರಕಟಣೆ : ಕ.ಇ. I, ೧೯೩೯ – ೪೦ ಶಾ.ಸಂ.೪೫.

ಈ ಶಾಸನ ವಿಜಯನಗರದರಸ ಬುಕ್ಕರಾಯನ ಆಳ್ವಿಕೆಗೆ ಸೇರಿದೆ. ಮಹಾ ಮಂಡಳೇಶ್ವರನೂ, ಹೈವರಸ ವೊಡೆಯನ ಅಳಿಯನೂ ಆದ ಕೇಶವದೇವ ಒಡೆಯರು ರಾಜ್ಯವನ್ನಾಳುತ್ತಿರಲು ಹಾಡುವಳ್ಳಿಯ ಸಂಗಿರಾಯ ಒಡೆಯನ ರಾಜ್ಯಕ್ಕೆ ದಂಡೆತ್ತಿ ಬರಲು ತಮ್ಮ ನಾಯಕನು ವೀರಾವೇಷದಿಂದ ಹೋರಾಡಿ ತನ್ನ ಪ್ರಾಣವನ್ನು ತೃಜಿಸಿದನು. ವೀರಗಲ್ಲಿನಲ್ಲಿನ ಮಧ್ಯಭಾಗದ ವಿಷಯ ಅಸ್ಪಷ್ಟ. ಆತನ ಅಳಿಯ ಮಾಬುನಾಯಕನು ಸ್ಮಾರಕವನ್ನು ಹಾಕಿಸಿದನೆಂಬ ವಿಷಯ ಶಾಸನದಲ್ಲಿದೆ.

ಶಾಸನ ಪಾಠ
ಭಾಗ

೧. ಶ್ರೀ ವೀತರಾಗಯ ನಮಃ ಸ್ವಸ್ತಿ ಶ್ರೀಮ[ನ್ಮ] ಮಹಾರಾಜಧಿರಾಜ ರಾಜಪರಮೇಸ್ವರ ಅಷ್ಟದಿಕ್ಕು ಭಯಂಕರ ಶ್ರೀ ವೀರ ವಿಜೆಯ

೨. [ಬುಕ]ರಾಯ ಒಡೆಯರು ಚತು ಸಮುದ್ರವನು ಪ್ರತಿಪಾಲಿಸುವಲ್ಲಿ ಸಕ ವರುಸ ಸಾವಿರದ ಮ[0] ನೂಱ

೩. ನಾಲ್ವತಯಿದೆನೆಯ ಸೋ[ಭ]ಕ್ರತು ಸಂವ[ತ್ಸ*]ರದ ಸ್ರಾ[ವ]ಣ ಬಹುಳ ಅಮವಾಸೆ [ಬು]ಧವಾರದಲು ಶ್ರೀಮನುಮಹಾಮಂ

೪. ಂಡಳೇಶ್ವರಂ ಕಲಿಗಳ ಮೊಕದಾ [ಕೈ] ಕಟಕ ಸೂಱಿ[ಕಾರ] ಸಿದ್ಧಸಿಂಹಾಸನಸ್ಥಿತ ಹೈವರಸ [ವೊ]ಡೆಯರ

ಭಾಗ

೫. ಅಳಿಯ ಕೇಸವದೇವ ಒಡೆಯರು ಮದವಳಿಗೆ ಹ . [ಕ] . . . ನೆಯ ವಳಿಯ . . ಮನುಮಹಾಮಂ

೬. ಡಳೇಸ್ವರಂ ಹೊಸಿವರ ಸೂಲ ಕಾಡಿ [ತ]ಲೆ [ಮಾ] . . . . . . . . . . ಕರಗಂ ಯೇಕಾಂಗವೀರ ಹ

ಭಾಗ

೭. ಡವಳಿಯ ಸಂಗಿರಾಯ ಒಡೆಯರು ಕೇಸವದೇವ ಒಡೆಯರ ಬ[ಲಿ] . .

೮. ರ ಬಳಿಯಲಿ ಹುಟ್ಟಿದ ಆದಿಭೋಗ ಬಳಿಯಿ . . . . . . . . . . . . . ಅಳಿಯ ತುಮ್ಮನಾಯ್ಕ.ದ

೯. ಯರಡು ದಳ ಬಂದಲ್ಲಿ ಹೊಯಿದು ಹೊಯಿ[ಸು]ಕೊಂಡು ರಣಖಂಡಿತವಾಗಿ ಸ್ವಗ್ಗ[ ]ಕ್ಕೇ[ರಿ]ದನು

ಭಾಗ

೧೦. ಆತನ ಬ . ರಿದು ಗಂಡನ ವೀರಭ[ಟ]ರ . ಬ . ಕಪಿಲವರ್ನ್ನವ ಸಲ್ಲಿಗೆ ಕ[ಪಿ]ಲವರ್ನ್ನದ . ತಲೆಚ . . . ಯ

೧೧. ಗಂಡರ [ಬಳಿ]ಯೀ ವೀರಗಲನೂ ಆತನ ಅಳಿಯ ಮಾಬುನಾಯಕ ವೀರಗಲ ಹಾ[ಕಿ]ಸಿ ಆತ[ನ] ಸ್ವರ್ಗ್ಗಕ್ಕೆ

೧೨. ಸಲಿಸಿದನೂ

. ಸ್ಥಳ : ಗ್ರಾಮದಲ್ಲಿರುವ ಮಠದ ಬಸದಿಯಲ್ಲಿರುವ ವೀರಗಲ್ಲು – ಹಾಡುವಳ್ಳಿ, ಉತ್ತರಕನ್ನಡ ಜಿಲ್ಲೆ,

ರಾಜವಂಶ : ಹಾಡುವಳ್ಳಿ ಸಾಳುವರು – ಸಂಗಿರಾಯ ಒಡೆಯ.

ತೇದಿ : ಶೋಭಕ್ರತು ಶ್ರಾವಣದಾ ಕ್ರುಷ್ಣ ಪಕ್ಷ ೧೩, ಬುಧವಾರ ದೊ ಕ್ರಿ.ಶ. ೧೪೨೩ ಆಗಸ್ಟ್ ೪, ಬುಧವಾರ ಸಮವಾಗುವುದು

ಭಾಷೆ ಲಿಪಿ : ಕನ್ನಡ

ಪ್ರಕಟಣೆ : ಕ.ಇ. I, ೧೯೩೯ – ೪೦ ಶಾ ಸಂ.೪೬

ಇದು ವೀರಗಲ್ಲು ಶಾಸನವಾಗಿದ್ದು ಜಿನಸ್ತುತಿಯಿಂದ ಪ್ರಾರಂಭವಾಗಿದೆ. ಶಾಸನವು ವಿಜಯನಗರದರಸ ಬುಕ್ಕರಾಯ ಒಡೆಯರ ಆಳ್ವಿಕೆಗೆ ಸಂಬಂಧಿಸಿದೆ. ಮಾದರಸ ಒಡೆಯರವರ ಕುಮಾರನೂ, ಮಹಾಮಂಡಳೇಶ್ವರನೂ, ಸಂಗಿರಾಯ ಒಡೆಯನು ಹಾಡುವಳ್ಳಿಯನ್ನು ಆಳುತ್ತಿರಲು, ನಗಿರೆಯ ಪುರವರಾಧೀಶ್ವರನಾದ ಹೈವರಾಜ ಒಡೆಯರ ಪುತ್ರನಾದ, ಕೇಶವದೇವ ಒಡೆಯನ ಅಳಿಯ ಸಂಗಿರಾಯ ಒಡೆಯ ಮತ್ತು ಹಾಡುವಳ್ಳಿಯ ಸಂಗಿರಾಯ ಒಡೆಯರ ನುಡವೆ ನಡೆದಂತಹ ಯುದ್ಧದಲ್ಲಿ ಸಂಗಿರಾಯರ ಬಂಟನಾದ ಯಿಸರಂಣನಾಯಕನು ಹೋರಾಡಿ ವೀರಸ್ವರ್ಗವನ್ನು ಹೊಂದಿದ ವಿಷಯ ಶಾಸನದಲ್ಲಿದೆ. ಶಾಸನದಲ್ಲಿ ಹೈವರಸ ಒಡೆಯನನ್ನು ಗಂಡರಗೋವ ಮತ್ತು ಸಾಮಂತ ನಾರಾಯಣ ಎಂದು ವರ್ಣಿಸಿದೆ.

ಕೇಶವ ಆಚಾರಿಯ ಮಗ ಯಿಸರಾಚಾರಿ ಮತ್ತು ರಾಮಾಚರಿಯ ಮಗನಾದ ಮಾಣಿ ಆಚಾರಿಯು ಈ ಶಾಸನವನ್ನು ಮಾಡಿದವರೆಂದು ಶಾಸನವು ತಿಳಿಸುತ್ತಿದೆ.