ಅರಣ್ಯಕ್ಹೋಗುವಾಗ ಹಾಂಗೆ ಇದ್ದಳು ಸೀತೆ
ಅರಣ್ಯಕ್ಹೋಗಿ ಬರುವಾಗ ಸೀತಮ್ಮಗೆ
ಅಂಗೈಯಲಿ ಗರ್ಭೆ ಹೊಳೆದಾವು
ಅಂಗೈಯಲ್ಲಿ ಗರ್ಭ ಹೊಳೆವಂಥ ಸಮಯದಲ್ಲಿ
ತಮ್ಮ ಲಕ್ಷ್ಮಣನ ಕರೆದಾನು
ತಮ್ಮ ಲಕ್ಷ್ಮಣ ಏನೆಂದೆ ಕರೆದಾನು
ಕಡಿದು ಬಾ ಸೀತಿ ಅಡವೀಲಿ
ಅಣ್ಣನ ಮಾತ ಮೀರದ ಮಿಕ್ಕದೇ
ಅತ್ತಿಗಿ ಒಡಗೂಡಿ ನಡೆದನೆ ಲಕ್ಷ್ಮಣ
ಹೋದರೆ ದೂರ ಅಡವೀಗೆ
ಕಡಿಯಬೇಕೆಂದು ಖಡುಗವ ನೆಗೆದೀರೆ       
ಖಡ್ಗದಲಿ ಗರ್ಭ ಹೊಳೆದಾವು
ಖಡ್ಗದಲಿ ಗರ್ಭ ಹೊಳೆವಂಥ ಸಮಯದಿ
ಅತ್ತೀಗಿ ನೀವ್ ಮಿಂದ ದಿನ ಹೇಳೀ
ನಾ ಮಿಂದ ದಿನ ಏನು ಹೇಳಲಿ ಅಣ್ಣ
ರಾಮದೇವರ ನಕೆ ನವಿಲ್ಹಿಂಡು ಬರುವಾಗ
ಆಗಲೇ ನಾ ಮಿಂದೆ ಹುಸಿನೀರು
ಅತ್ತಿಗೆಯ ತೆಗೆದು ಅರುಣ್ಯದಲ್ಲೆ ಬಿಟ್ಟು
ನೆತ್ತರ ಹೊನ್ನಿನ ಮರವ ಕಡಿದಾನು
ನೆತ್ತರ ಹೊನ್ನಿ ಮರವ ಕಡಿದು ಖಡ್ಗಕ್ಕೆ ಉದ್ದಿ
ಅಣ್ಣನಿಗೆ ತೊರಿಸಿದ ಗುರುತವ
ಸಿಟ್ಟಿಗೊಂದು ಹೇಳಿದೆ ಮಾತಿಗೊಂದು ಹೇಳಿದೆ
ಯಾವ ಕೈಲಿ ಸೀತಿ ಕಡಿದೀಯೆ ಲಕ್ಷ್ಮಣ
ಏನೆಂದು ಸೀತಿ ಮಡಿದ್ಹೋಳು
ತಾಯಂದೆ ಮಡಿಲಿಲ್ಲ ತಂದ್ಯೆಂದೆ ಮಡಿಲಿಲ್ಲ
ರಾಮ ರಾಮೆಂದು ನುಡಿದಳು

ಅರಣ್ಯಕ್ಕೋಗುವಾಗ ಆರು ತಿಂಗಳ ಬಸಿರಿ
ಅರನ್ಯಕೋಯಿ ಬರುವಾಗ ಸೀತಮ್ಮಗೆ
ಲವಕುಶರೆಂಬ ಮಗ ಹುಟ್ಟಿ ಅವ್ರೀಗ
ರಾಮದೆವರ ದಂಡ ತಡೆದರು
ರಾಮದೇವರ ದಂಡ ತಡೆದಂಥ ಸಮಯದಲ್ಲಿ
ನಾರದ ಮುನಿ ಬಂಣದು ತಡೆದರು
ನಾರದ ಮುನಿ ಬಮದು ಏನೆಂದೆ ತಡೆದರು
ನಿಮ್ಮಕ್ಕಳ್ಳದೇ ಪರರಲ್ಲ.

ಸೀತಿ ಹುಟ್ಟಿದಳೆಂದು ರಾವಣಗೆ ಸಂತೋಷ
ಸೀತಿ ಜಾತಕವೆ ತೆಗೆದೋದಿ ಕಾಂಬಾಗೆ
ಸೀತಿ ಹುಟ್ಟಿ ರಾವಣಗೆ ಮರಣವೆ