ಸೀತೆ ಶ್ರೀ ರಾಮರು ಕೂತು ಮಾತಾಡುವಾಗೆ
ಕಾಡಿಂದ ಬಂದು ಮಿಗುಗವೇ ಸೀತಮ್ಮನು
ತಂದು ಕೊಡಿ ಸ್ವಾಮಿ ಮಿರುಗನ
ಕಾಡಿನ ಮಿರುಗದಿಂದ ಕೇಡು ಬಪ್ಪುದು ಸತಿಯ
ಬೇಡೆ ಕಾಣೆ ನಿನಗೆ ತರ್ಕವು
ಕಾಡಿನ  ಮಿರುಗದಿಂದ ಕೇಡು ಬಂದರು ಸ್ವಾಮಿ
ನೋಡಿಕೊಂಬೆ ನನ್ನ ಬಲದಿಂದೆ
ಹೆಂಡಿರ ಮಾತು ಕೇಳೀ ಗಂಡರು ಮರುಳಾರೆ
ಮುಂದಿನ ಸಂಗತಿ ಅರಿಯದೇ ರಾಮದೇವ್ರು
ಮಿರುಗದ ಬೆನ್ನಿಡಿದು ನಡೆದರು