ಹಾನಗಲ್ಲು ಪ್ರಾಚೀನ ಕಾಲದಲ್ಲಿ ಪಾನುಂಗಲ್ ೫೦೦ ಕೇಂದ್ರಸ್ಥಾನವಾಗಿತ್ತು. ಯಾದವರು ಮತ್ತು ಹೊಯ್ಸಳರ ನಂತರ ವಿಜಯನಗರ ಸಾಮ್ರಾಜ್ಯದ ಅರಸರು ೧೩೩೬ ರಿಂದ ೧೫೬೫ರ ವರೆಗೆ ಆಡಳಿತವನ್ನ ನಡೆಸಿದರು. ಅವಧಿಯಲ್ಲಿ ಹಾನಗಲ್ಲು ಪ್ರಮುಖ ವ್ಯಾಪಾರ ಕೇಂದ್ರವಾಗಿ ಮುಂದುವರೆದಿತ್ತು. ವಿಜಯನಗರದ ಪತನಾನಂತರ ಸ್ವಲ್ಪ ಕಾಲ ಇಲ್ಲಿಯ ಆಡಳಿತ ಅಸ್ಪಷ್ಟವಾಗಿ ಕಾಣುತ್ತದೆ. ಆದರೆ ೧೭ನೆಯ ಶತಮಾನದ ಅಂತ್ಯದ ಕಾಲದಲ್ಲಿ ಪೇಶ್ವೆಗಳ ಅಧಿಕಾರಕ್ಕೆ ಒಳಪಟ್ಟಿದ್ದರಿಂದ ಆಡಳಿತ ವ್ಯವಸ್ಥೆಯಲ್ಲಿ ದೇಸಾಯಿ, ದೇಶಪಾಂಡೆಯವರ ಪ್ರಭಾವ ಹೆಚ್ಚಾಯಿತು. ಈಗಲೂ ಹಾನಗಲ್ಲಿನಲ್ಲಿ ದೇಸಾಯಿ, ದೇಶಪಾಂಡೆಯವರ ಸಂಖ್ಯೆ ಹೆಚ್ಚಾಗಿದೆ. ಸಾರ್ವಭೌಮತ್ವಕ್ಕಾಗಿ ಮೈಸೂರಿನ ಟಿಪ್ಪುಸುಲ್ತಾನ ಹಾಗೂ ಪೇಶ್ವೆಗಳ ನಡುವೆ ಕದನವು ಪ್ರಾರಂಭವಾಯಿತು. ೧೭೯೯ರಲ್ಲಿ ಇಂಗ್ಲೀಷರಿಗೂ ಟಿಪ್ಪುಸುಲ್ತಾನನಿಗೂ ನಡೆದ ಶ್ರೀರಂಗಪಟ್ಟಣದ ಯುದ್ಧದಲ್ಲಿ ಟಿಪ್ಪುಸುಲ್ತಾನ ಮರಣ ಹೊಂದಿದನು. ಇದೇ ಕಾಲಕ್ಕೆ ಪೇಶ್ವೆಗಳ ಪ್ರಭಾವ ಕಡಿಮೆಯಾಗಿತ್ತು. ಪರಿಸ್ಥತಿಯನ್ನು ಬಳಸಿಕೊಂಡ ಇಂಗ್ಲೀಷರು, ಮರಾಠರನ್ನು ಸದೆ ಬಡಿದು ಅವರ ರಾಜ್ಯವನ್ನು ತಮ್ಮ ಕೈವಶಪಡಿಸಿಕೊಂಡರು. ಇದರಿಂದ ಕ್ರಿ.. ೧೮೦೦ರಲ್ಲಿ ಧಾರವಾಡ ಜಿಲ್ಲೆ ಬ್ರಿಟಿಷರ ಪ್ರಭಾವಕ್ಕೆ ಒಳಗಾಯಿತು. ಹಾನಗಲ್ಲು ಧಾರವಾಡ ಜಿಲ್ಲೆಯಲ್ಲಿ ಅತ್ಯಂತ ಬಹುದೊಡ್ಡ ತಾಲೂಕಾಗಿದ್ದರಿಂದ ಬ್ರಿಟಿಷರ ಆಡಳಿತ ವ್ಯವಸ್ಥೆ ಇಲ್ಲಿಯು ಸಹ ಪ್ರಾರಂಭವಾಯಿತು. ಇಗ್ಲೀಷರ ವಿರುದ್ಧ ಅಸಹಕಾರ ಮತ್ತು ಹೋರಾಟ ಪ್ರಾರಂಭವಾಗಲು ಕ್ರಿ.. ೧೮೦೦ರಲ್ಲಿ ಜಾರಿಯಲ್ಲಿದ್ದ ಇನಾಂಕಮೀಷನ್ ಪಾತ್ರ ಬಹು ಮಹತ್ವದ್ದಾಗಿದೆ. ಉತ್ತರ ಕರ್ನಾಟಕದ ಬೆಳಗಾವಿ, ವಿಜಾಪುರ ಮತ್ತು ಧಾರವಾಡ ಜಿಲ್ಲೆಗಳು ಪೇಶ್ವೆಗಳ ಆಡಳಿತಕ್ಕೆ ಒಳಪಟ್ಟಿದ್ದ ಅವಧಿಯಲ್ಲಿ, ಆಡಳಿತದಲ್ಲಿ ನಿಷ್ಠೆಯಿಂದ ಸೇವೆಸಲ್ಲಿಸಿದವರಿಗೆ ದೇಸಾಯಿ, ದೇಶಪಾಂಡೆ, ದೇಶಮುಖ, ಪಾಟೀಲ, ಕುಲಕರ್ಣಿ ಮೊದಲಾದ ಹುದ್ದೆಗಳನ್ನು ನೀಡಿ ವೇತನಗಳನ್ನು ಹಾಕಿಕೊಟ್ಟಿದ್ದರು. ಇವರೆಲ್ಲಾ ಮುಖ್ಯವಾಗಿ ಒಂದಿಲ್ಲೊಂದು ರೀತಿಯಲ್ಲಿ ತೆರಿಗೆ ವಸೂಲಿ ಮಾಡಿ ಸರ್ಕಾರಕ್ಕೆ ಒಪ್ಪಿಸುತ್ತಿದ್ದರು. ತಮ್ಮ ಆತ್ಮರಕ್ಷಣೆಗೆಂದು ಸಣ್ಣ ಪ್ರಮಾಣದ ಸೈನ್ಯವನ್ನು ಇಟ್ಟುಕೊಳ್ಳುವ ಅಧಿಕಾರವೂ ಇತ್ತು. ಮುಖ್ಯವಾಗಿ ತಮ್ಮ ಪ್ರಭುಗಳಿಂದ ಯುದ್ಧಕ್ಕೆ ಕರೆ ಬಂದಾಗ, ಸೈನ್ಯ ಮತ್ತು ಧನಸಾಹಾಯ ಒದಗಿಸುವುದು ಇವರ ಕರ್ತವ್ಯವಾಗಿತ್ತು. ಪೇಶ್ವೆಗಳ ರಾಜ್ಯ ಇಂಗ್ಲೀಷರ ಕೈಗೆ ಬಂದೊಡನೆ ಕರ ವಸೂಲಿ ಪದ್ಧತಿಯಲ್ಲಿ ಮಹತ್ವದ ಬದಲಾವಣೆಯಾಯಿತು. ಇಂಗ್ಲೀಷರು ಕಲೆಕ್ಟರ್, ಮಾಮ್ಲೆದಾರ ಮೊದಲಾದ ಸರ್ಕಾರಿ ಅಧಿಕಾರಿಗಳನ್ನು ನೇಮಿಸಿ, ನೇರವಾಗಿ ತೆರಿಗೆ ವಸೂಲಿಯನ್ನು ಮಾಡತೊಡಗಿದರು. ಅಲ್ಲದೆ ಸೈನ್ಯವನ್ನು ಸರ್ದಾರರು, ಸುಬೇದಾರರ ಕೈಯಿಂದ ತಪ್ಪಿಸಿ ನೇರವಾಗಿ ತಮ್ಮ ಆಡಳಿತಕ್ಕೆ ಒಳಪಡಿಸಿಕೊಂಡರು. ಫೇಶ್ವೆಗಳ ಪತನದ ನಂತರ ಕೆಲ ಕಾಲ ಅರಾಜಕತೆಯ ಕಾಲಾವಧಿಯಲ್ಲಿ ಅನೇಕ ಜಮೀನುದಾರರು ಮತ್ತು ಇನಾಂದಾರರು ತಮ್ಮ ಅಧೀನಕ್ಕೊಳಪಟ್ಟ ಪ್ರದೇಶದಲ್ಲಿಯ ಎಷ್ಟೋ ಜಮೀನನ್ನು ಅನಧಿಕೃತವಾಗಿ ತಮ್ಮ ಹೆಸರಿಗೆ ಬರೆದುಕೊಂಡಿರುವರೆಂಬ ಸುದ್ಧಿಯು ಕಂಪನಿಯ ಅಧಿಕಾರಿಗಳ ಕಿವಿಗೆ ಬಿತ್ತು. ಆದ್ದರಿಂದ ಸಮಸ್ಯೆಯ ಪರಿಹಾರಕ್ಕಾಗಿ ಸರ್ಕಾರ ಆಯೋಗವನ್ನು ನೇಮಿಸಿತು. ಇದುಇನಾಂಕಮೀಷನ್ಎಂದೇ ಇತಿಹಾಸದಲ್ಲಿ ಪ್ರಸಿದ್ಧವಾಗಿದೆ. ಆಯೋಗವು ೧೮೪೩ರಿಂದ ೧೮೫೭ರವರೆಗೆ ವಿಚಾರಣೆಯನ್ನು ಮಾಡಿತು. ಇದರಲ್ಲಿ ಕೇವಲ ಸೈನ್ಯಾಧಿಕಾರಿಗಳೇ ಹೆಚ್ಚಾಗಿದ್ದರು. ಅವರಿಗೆ ತಮ್ಮ ಸರ್ಕಾರದ ಆದಾಯವನ್ನು ಹೇಗೆ ಹೆಚ್ಚಿಸಬೇಕೆಂಬುದೇ ಮಹತ್ವವಾಗಿತ್ತೆ ಹೊರತು, ಅದರಿಂದ ಉಂಟಾಗುವ ನ್ಯಾಯ ಅನ್ಯಾಯ ಇಲ್ಲವೆ ರಾಜಕೀಯ ಪರಿಣಾಮಗಳ ಕಡೆಗೆ ಹೆಚ್ಚು ಗಮನ ಹರಿಸಲಿಲ್ಲ.

ಆಯೋಗದ ಅಧ್ಯಕ್ಷನಾಗಿದ್ದ ಕರ್ನಲ್ ಎತ್ರಿಸ್ ಎಂಬುವವನು ೧೮೭೩ರಲ್ಲಿ ಸಲ್ಲಿಸಿದ ವರದಿಗಳಲ್ಲಿ, ಆಯೋಗವು ೮೫೯೯ ಆಸ್ತಿಗಳ ಹಕ್ಕುಪತ್ರಗಳನ್ನು ಪರಿಶೀಲಿಸಿದ್ದಾಗಿ ತಿಳಿಸಿತು. ಅವುಗಳಲ್ಲಿ ೪೦೦೦ರಷ್ಟು ಆಸ್ತಿಗಳು ಇನಾಂವಾಗಿ ಉಳಿಯಬಹುದೆಂದೂ, ೩೬೦೦ ಆಸ್ತಿಗಳ ಮೇಲೆ ಆಯಾ ಜಮೀನುದಾರರ ಮರಣದ ನಂತರ ಕರ ಹೇರಬೇಕೆಂದೂ ಮತ್ತು ೯೪೧ ಆಸ್ತಿಗಳ ಮೇಲೆ ತಕ್ಷಣವೇ ಕರ ಹೇರಬೇಕೆಂಬ ನಿರ್ಣಯದ ವರದಿಯನ್ನು ಒಪ್ಪಿಸಿದನು. ವೇತನದಾರರ ಮೇಲೆ ಕರವನ್ನು ಜಾರಿಯಲ್ಲಿ ತಂದರೆ ಗೌರವಕ್ಕೆ ಕುಂದು ಬರುವುದೆಂಬ ಭಾವನೆ ವ್ಯಾಪಕವಾಗಿ ಹರಡಿತು.

ರೀತಿಯ ವರದಿ ಸಾರ್ವಜನಿಕರ ಅಸಂತೋಷಕ್ಕೆ ಮುಖ್ಯ ಕಾರಣವಾಯಿತು. ಇದೇ ವೇಳೆಗೆ ಉತ್ತರ ಭಾರತದಲ್ಲಿ ಬಂಡಾಯ ಪ್ರಾರಂಭವಾದೊಡನೆ, ಬ್ರಿಟಿಷ್ ಸರ್ಕಾರವು ಇಡೀ ದೇಶದ ತುಂಬೆಲ್ಲಾ ಆಜ್ಞೆಯನ್ನು ಹೊರಡಿಸಿ, ಎಲ್ಲರೂ ತಮ್ಮ ತಮ್ಮಲ್ಲಿದ್ದ ಶಸ್ತ್ರಾಸ್ತ್ರಗಳನ್ನು ಸರ್ಕಾರಕ್ಕೆ ಒಪ್ಪಿಸಬೇಕೆಂದು ಆದೇಶಿಸಿದರು. ಕರ್ನಾಟಕದಲ್ಲಿಯೂ ಕೂಡಾ ಅದಕ್ಕೆ ತೀವ್ರ ಪ್ರತಿಭಟನೆ ಕಂಡುಬಂತು. ಎಲ್ಲ ಸಂಸ್ಥಾನಿಕರು ಬ್ರಿಟಿಷರ ವಿರುದ್ಧ ಬಂಡಾಯವನ್ನು ಪ್ರಾರಂಭಿಸಿದರು. ಅವರಲ್ಲಿ ಭೀಮರಾಯ, ಸರಟೂರು ದೇಸಾಯಿ ಹಾಗೂ ಹಮ್ಮಗಿ ಕೆಂಚನಗೌಡ ದೇಸಾಯಿ ಮೊದಲಾದವರು ಪ್ರಮುಖರು. ೧೮೫೭ರ ಮೇ ತಿಂಗಳ ಉತ್ತರ ಭಾರತದಲ್ಲಿ ಹುಟ್ಟಿಕೊಂಡ ಕ್ರಾಂತಿಯ ಕಿಡಿ, ಆಗಸ್ಟ್ ತಿಂಗಳ ಹೊತ್ತಿಗೆ ಧಾರವಾಡಕ್ಕೆ ಬಂದು ಮುಟ್ಟಿತು. ಇದರ ಜೊತೆಗೆ ೧೯೦೫ರಲ್ಲಿ ಬೆಂಗಾಲ ವಿಭಜನೆ ಮತ್ತು ಅನೇಕ ಸಾಮಾಜಿಕ ಆಂದೋಲನಗಳು ಪ್ರಾರಂಭವಾದವು. ದಕ್ಷಿಣ ಆಫ್ರಿಕಾದಿಂದ ಮಹಾತ್ಮ ಗಾಂಧೀಜಿಯವರು ಸ್ವದೇಶಕ್ಕೆ ಹಿಂದಿರುಗಿ ಬಂದನಂತರ ಸ್ವಾತಂತ್ರ್ಯ ಆಂದೋಲನ ತೀವ್ರಗತಿಯಲ್ಲಿ ಆರಂಭವಾಯಿತು. ೧೮೮೫ರಲ್ಲಿ ಭಾರತದ ರಾಷ್ಟ್ರೀಯ ಕಾಂಗ್ರೆಸ್ಸಿನ ಸ್ಥಾಪನೆಯಾಗಿ, ಅದು ಭಾರತೀಯರಲ್ಲಿ ರಾಷ್ಟ್ರೀಯತೆ ಮತ್ತು ದೇಶಾಭಿಮಾನವನ್ನು ಹುಟ್ಟಿಸಿತು. ಇದರಿಂದಾಗಿ ಸ್ವದೇಶಿ ಕಾರ್ಖಾನೆಗಳ ಸ್ಥಾಪನೆ ಚಳುವಳಿ ಮತ್ತು ೧೯೨೦ರಲ್ಲಿ ಕಾನೂನುಭಂಗ ಚಳವಳಿಗಳು ಆರಂಭಗೊಂಡವು. ಇದರ ಹಿನ್ನೆಲೆಯಾಗಿ ಉಪ್ಪಿನ ಸತ್ಯಾಗ್ರಹ, ಕರನಿರಾಕರಣೆ, ಜಂಗಲ್ ಸತ್ಯಾಗ್ರಹ ಹಾಗೂ ಸ್ವದೇಶಿ ಆಂದೋಲನಗಳು ಪ್ರಾರಂಭವಾದವು. ೧೯೪೨ರಲ್ಲಿ ಗಾಂಧೀಜಿಯವರು ಕ್ವಿಟ್ ಇಂಡಿಯಾ ಚಳುವಳಿಯನ್ನು ಆರಂಭಿಸುವ ಮೂಲಕ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂಬ ಕೂಗು ದೇಶಾದ್ಯಂತ ಮೊಳಗಿತು. ಎಲ್ಲಾ ಚಳುವಳಿಗಳಿಗೆ ಹಾನಗಲ್ಲು ಪರಿಸರವೂ ಕೂಡಾ ಸ್ಪಂದಿಸಿತು. ಚಳುವಳಿಗಳು ಹಾನಗಲ್ಲು ತಲುಪಿದ ಕೆಲವೇ ದಿನಗಳಲ್ಲಿ ಸುತ್ತಮುತ್ತಲಿನ ನರೇಗಲ್, ತಿಳವಳ್ಳಿ, ಅಕ್ಕಿಆಲೂರು, ಬೊಮ್ಮನಹಳ್ಳಿ, ಬೆಳಗಾಲಪೇಟ ಮೊದಲಾದ ಗ್ರಾಮಗಳಿಗೆ ಪಸರಿಸಿತು. ಹಾನಗಲ್ಲು ತಾಲೂಕಿನಲ್ಲಿ ೧೯೩೦ರಲ್ಲಿ ಕಾಂಗ್ರೆಸ್ ಸಂಸ್ಥೆ ಭದ್ರವಾಗಿ ನಿಲ್ಲಲು ಶ್ರೀಮಂತ ನರಸಿಂಗರಾವ್ ದೇಸಾಯಿ ಕಲ್ಲಾಪೂರ, ಮೋತಿರಾವ್ ಕುಲಕರ್ಣಿ ಹಾನಗಲ್ಲು, ಮಲ್ಲಪ್ಪ ನಾಯಕ ತಟ್ಟಿ, ರಂಗಾಚಾರ್ಯ ಗದಗಕರ್, ಶಾಮಾಚಾರ್ಯ ಹಾನಗಲ್ಲು ಮೊದಲಾದವರ ನಿರಂತರ ಶ್ರಮವೇ ಕಾರಣ. ಶಾಮಚಾರ್ಯ ಶೇಷಾಚಾರ್ಯರು ನಾಗಾಪುರ ಕಾಲೇಜಿನಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದರು. ಗಾಂಧೀಜಿಯವರ ಸ್ವತಂತ್ರ ಸಂಗ್ರಾಮದ ಕರೆಗೆ ಓಗೊಟ್ಟು ಉನ್ನತ ವ್ಯಾಸಂಗವನ್ನು ಕೈಬಿಟ್ಟು ನಾಗಾಪುರದಿಂದ ಹಾನಗಲ್ಲಿಗೆ ಬಂದರು. ಜನತೆಯಲ್ಲಿ ರಾಷ್ಟ್ರಪ್ರೇಮ, ರಾಷ್ಟ್ರೀಯ ಚಳುವಳಿಗಳನ್ನು ಬಿಂಬಿಸಲು ಹಾನಗಲ್ಲು ನಗರದ ಮಾರುಕಟ್ಟೆಯಲ್ಲಿರುವ ವಿಶಾಲವಾದ ಮತ್ತು ಬಹುದೊಡ್ಡದಾದ ಪಾಂಡುರಂಗ ದೇವಾಲಯದಲ್ಲಿ ರಾಷ್ಟ್ರೀಯ ಶಾಲೆಯನ್ನು ಪ್ರಾರಂಭಿಸಿದರು. ಇವರೂ ಸೇರಿದಂತೆ ರಾ.ವೇ. ಕರಗುದರಿ, ವಾಮನ್ ರಾವ್ ದೇಸಾಯಿ, ದತ್ತಾತ್ರೇಯ ಅಣ್ಣಾಜಿ ಜೋಶಿ ಮೊದಲಾದವರು ಶಿಕ್ಷಕರಾಗಿದ್ದರು. ಪ್ರೇರಣೆಯಿಂದ ಮಲ್ಲಾರಭಟ್ಟ ಕಾಗಿನೆಲ್ಲಿಯವರು ದತ್ತಾತ್ರೇಯ ಗುಡಿಯಲ್ಲಿ ಯುವತಿಯರಿಗಾಗಿ ರಾಷ್ಟ್ರೀಯ ಶಾಲೆಯನ್ನು ಆರಂಭಿಸಿದರು. ಇವು ಪಾಷ್ಟ್ರಪ್ರೇಮ, ರಾಷ್ಟ್ರೀಯ ಭಾವೈಕ್ಯತೆ, ರಾಷ್ಟ್ರೀಯ ಚಟುವಟಿಕೆಗಳ ಪ್ರಮುಖ ಕೇಂದ್ರಗಳಾಗಿದ್ದವು.

ರಾಷ್ಟ್ರೀಯ ಶಾಲೆಯೊಂದಿಗೆ ಗಜಾನನೋತ್ಸವ, ನಾಡಹಬ್ಬ, ಹೋಳಿ ಹುಣ್ಣಿಮೆ ಅತ್ಯಂತ ಉತ್ಸಾಹದಿಂದ ನಡೆಯುತ್ತಿದ್ದವು. ಸಂದರ್ಭಗಳಲ್ಲಿ ಭಾಷಣ, ಕೀರ್ತನ, ಪುರಾಣ, ಕೋಲಾಟದ ಹಾಡುಗಳು ವ್ಯಾಪಕವಾಗಿ ನಡೆದು, ಜನರಲ್ಲಿ ರಾಷ್ಟ್ರಕ್ಕಾಗಿ ಹೋರಾಡುವ ಸ್ಫೂರ್ತಿಯನ್ನು ತುಂಬುತ್ತಿದ್ದವು. ಅಲ್ಲದೆ ಕಾಂಗ್ರೆಸ್ ಸಂಸ್ಥೆಯ ಮುಖಂಡರಾದ ರಾ.ವೇ. ಕರಗುದರಿ, ದತ್ತಾತ್ರೇಯ ಜೋಶಿ ಇವರೆಲ್ಲರೂ ಮನೆ ಮನೆಗೆ ತೆರಳಿ ಖಾದಿ ಬಟ್ಟೆಗಳನ್ನು ಮಾರುತ್ತಿದ್ದರೆ, ಡಾ. ರಂಗಾಚಾರ್ಯ ಗದಗಕರ್ ಅವರು ಉಚಿತವಾದ ಔಷಧಿಯನ್ನು ಕೊಡುವ ಮೂಲಕ ಎಲ್ಲರ ಸಹಾನುಭೂತಿಗೆ ಒಳಗಾಗಿದ್ದರು. ಮಲ್ಲಪ್ಪನವರ ಅಕ್ಕಿ ಮತ್ತು ಸಿದ್ಧಪ್ಪ ಸಿಂಧೂರರು ಕಾಂಗ್ರೆಸ್ಸಿಗೆ ಸೇರಿದೊಡನೆ ಕಾಂಗ್ರೆಸ್ಸಿನ ಚಟುವಟಿಕೆಗಳಿಗೆ ಹೊಸ ರೆಕ್ಕೆಗಳು ಬಂದು ಉಗ್ರ ಹೋರಾಟ ಪ್ರಾರಂಭವಾಯಿತು. ಹೋರಾಟಗಳಿಗೆ ಬೇಕಾಗುವ ಖರ್ಚು ವೆಚ್ಚಗಳಿಗೆ ಹಾನಗಲ್ಲು ಪರಿಸರದ ಜನತೆ ಮನಃಪೂರ್ವಕವಾಗಿ ಸ್ಪಂದಿಸುತ್ತಿದ್ದರು. ಇವರೆಲ್ಲರ ನೇತೃತ್ವದಲ್ಲಿ ಹಾನಗಲ್ಲು ನಗರದಲ್ಲಿ ಉಪ್ಪಿನ ಸತ್ಯಾಗ್ರಹ, ಇಚಲಗಿಡ ಕಡಿಯುವುದು, ಜಂಗಲ್ ಸತ್ಯಾಗ್ರಹ ನಡೆದವು. ಹಾನಗಲ್ಲಿನಲ್ಲಿ ಗ್ರಾಮದೇವಿ ಜಾತ್ರೆ ಹಾಗೂ ಇತರ ಸಣ್ಣಪುಟ್ಟ ಕಾರ್ಯಕ್ರಮಗಳು ನಡೆದರೂ ಅವುಗಳಲ್ಲಿ ಕಾಂಗ್ರೆಸ್ ಚಟುವಟಿಕೆಗಳು ಕಂಡುಬರುತ್ತಿದ್ದವು. ಹಾನಗಲ್ಲಿನಲ್ಲಿ ಕಾನೂನುಭಂಗ ಚಳುವಳಿ ನಡೆದಾಗ, ಮಲ್ಲಪ್ಪ ಅಕ್ಕಿವಳ್ಳಿ, ಸಿದ್ದಪ್ಪ ಸಿಂಧೂರ, ನಾಗೇಶರಾವ್ ದೇಸಾಯಿ, ಹನುಮಂತರಾವ್ ದೇಶಪಾಂಡೆ, ಸುಬ್ಬಣ್ಣ ದೀಕ್ಷಿತ, ಭಿಷ್ಠಪ್ಪ ದೇಶಪಾಂಡೆ, ಶಿವಾನಂದ ದೀಕ್ಷಿತ, ಕೃಷ್ಣಮೂರ್ತಿ ಕಾಗಿನೆಲ್ಲಿ ಮೊದಲಾದವರು ಕಾರಾಗೃಹಕ್ಕೆ ಹೋದರು. ಚಟುವಟಿಕೆಗಳೊಂದಿಗೆ ೧೯೩೦ರಲ್ಲಿ ಅನಂತ ಕುಂದಾಪುರರವರು ಹಾನಗಲ್ಲು ಜನರ ಸಹಕಾರದಿಂದ ಬಲಭೀಮ ವ್ಯಾಯಾಮ ಶಾಲೆಯನ್ನು ಸ್ಥಾಪಿಸಿದರು. ವ್ಯಾಯಾಮ ಶಾಲೆಯಲ್ಲಿ ನಾ.ಸು. ಹರಡಿಕರವರು ಸ್ಥಾಪಿಸಿದ ಸೇವಾದಳವು ಕಾಂಗ್ರೆಸ್ ಚಟುವಟಿಕೆಗೆ ಬೆನ್ನೆಲುಬಾಗಿ ನಿಂತಿತು. ರೀತಿಯಾಗಿ ಹಾನಗಲ್ಲು ಪರಿಸರದ ಜನತೆ ಗಾಂಧೀಜಿಯವರ ಆದೇಶದಂತೆ ಉಗ್ರ ಹೋರಾಟ ಚಳುವಳಿಗಳನ್ನು ಅವಿರತವಾಗಿ ಹಮ್ಮಿಕೊಂಡು ಬ್ರಿಟಿಷರ ವಿರುದ್ಧ ಹೋರಾಡಿದರು. ಆಗಸ್ಟ್ ೧೫, ೧೯೪೭ರಲ್ಲಿ ಭಾರತವು ಸ್ವತಂತ್ರವಾಯಿತು. ೧೯೫೦ ಜನವರಿ ೨೬ರಂದು ಪ್ರಜಾಸತ್ತಾತ್ಮಕ ಗಣರಾಜ್ಯಗಳು ಪ್ರಾರಂಭವಾಗಿ ಪ್ರಜೆಗಳಿಂದ ಚುನಾಯಿಸಲ್ಪಟ್ಟ ಜನಪ್ರತಿನಿಧಿಗಳು ಆಡಳಿತವನ್ನು ಹಿಡಿದರು. ೧೯೫೩ ರಂದ ೫೬ ನವೆಂಬರ್ ೧ರ ವರೆಗೆ ಹಾನಗಲ್ಲು ಬಾಂಬೆ ಪ್ರಾಂತಕ್ಕೆ ಸೇರಿತ್ತು.

ಕರ್ನಾಟಕ ಏಕೀಕರಣ ಚಳುವಳಿಯ ಪರಿಣಾಮದಿಂದ ೧೯೫೬ ನವ್ಹೆಂಬರ್ ೧ರಂದು ನವ ಮೈಸೂರು ರಾಜ್ಯದ ಉದಯವಾಯಿತು. ನವ ಮೈಸೂರು ರಾಜ್ಯದಲ್ಲಿ ಸೇರಿದ ಭಾಗಗಳು,

. ರಾಜರ ಆಳ್ವಿಕೆಯಲ್ಲಿದ್ದ ಸೂರು ರಾಜ್ಯ ಪ್ರದೇಶಗಳು.

. ಬಳ್ಳಾರಿ.

. ಮುಂಬೈ ಪ್ರಾಂತದ ಪ್ರದೇಶಗಳು : . ಧಾರವಾಡ, . ವಿಜಾಪುರ, . ಉತ್ತರ ಕನ್ನಡ, . ಚಾಂದಗಡದ ಹೊರತಾದ ಬೆಳಗಾವಿ ಜಿಲ್ಲೆ.

. ಮದ್ರಾಸ್ ಪ್ರಾಂತದ ಪ್ರದೇಶಗಳು : . ದಕ್ಷಿಣ ಕನ್ನಡ, . ಕೊಳ್ಳೇಗಾಲ, . ಅಮಂದೀವ್ ನಡುಗಡ್ಡೆ.

. ಕುರ್ಗ ಜಿಲ್ಲೆ.

. ಹೈದರಾಬಾದ್ ಪ್ರಾಂತದ ಪ್ರದೇಶಗಳು : . ಗುಲ್ಬರ್ಗಾ/ಕೊಡಂಗಲ್ ಮತ್ತು ತಂದೂರು ತಾಲೂಕುಗಳ ಹೊರತಾಗಿ, . ರಾಯಚೂರು/ಅಲಂಪೂರ ಮತ್ತು ಗಡ್ವಾಲ್ ಗಳ ಹೊರತಾಗಿ, . ಬೀದರ್ ಜಿಲ್ಲೆ.

ಇವುಗಳನ್ನೆಲ್ಲಾ ಒಳಗೊಂಡು ನವ ಮೈಸೂರು ರಾಜ್ಯವು ೧೭ ವರ್ಷಗಳವರೆಗೆ ಅಸ್ತಿತ್ವದಲ್ಲಿತ್ತು. ಬೆಂಗಳೂರು ಅದರ ರಾಜಧಾನಿಯಾಗಿತ್ತು. ಕನ್ನಡ ಮಾತನಾಡುವವರಿಗೆ ಕರ್ನಾಟಕ ರಾಜ್ಯವಾಗಬೇಕೆಂಬ ಬೇಡಿಕೆಯಿಂದಾಗಿ ೧೯೭೩ ನವ್ಹೆಂಬರ್ ೧ರಂದು ಮೈಸೂರು ರಾಜ್ಯದ ಬದಲಾಗಿ ಕರ್ನಾಟಕ ರಾಜ್ಯವೆಂದು ಘೋಷಿಸಲಾಯಿತು. ದೇವರಾಜ ಅರಸು ಹೊಸ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದರು. ಕರ್ನಾಟಕ ರಾಜ್ಯದ ಬಾಂಬೆ ಪ್ರಾಂತದಲ್ಲಿನ ಜನಪ್ರತಿನಿಧಿಗಳಾಗಿ ಹಾನಗಲ್ಲು ಆಡಳಿತ ಕೇಂದ್ರಸ್ಥಾನದಲ್ಲಿ ಅಧಿಕಾರ ಮಾಡಿದವರು ಸಿದ್ಧಪ್ಪ ಚನ್ನಬಸಪ್ಪ ಸಿಂಧೂರ, ಬಿ.ಆರ್. ಪಾಟೀಲ, ಜಿ.ಎನ್. ದೇಸಾಯಿ, ಪ್ರಭುದೇವ ಚಂದ್ರಶೇಖರ ಶೆಟ್ಟರ, ಮನೋಹರ ಹನುಮಂತಪ್ಪ ತಹಶಿಲ್ದಾರ, ಚನ್ನಬಸಪ್ಪ ಮಹಲಿಂಗಪ್ಪ ಉದಾಸಿ ಮೊದಲಾದವರು ಪ್ರಮುಖರು.

ಸ್ವಾತಂತ್ರ್ಯ ಹೋರಾಟಗಾರರು

ಪ್ರಾಚೀನ ಕಾಲದಲ್ಲಿ ರಾಜಕೀಯ ಆಡಳಿತ ಕೇಂದ್ರವಾಗಿದ್ದ ಹಾನಗಲ್ಲು ರಾಜಮನೆತನಗಳ ಅವನತಿಯ ನಂತರ ಹಿಂದುಳಿದ ಪ್ರದೇಶವಾಗಿ, ಅನೇಕ ಸಮಸ್ಯೆಗಳಿಂದ ನರಳುತ್ತಿತ್ತು. ಆದರೂ ಇಲ್ಲಿಯ ಜನರು ಪೂರ್ವಿಕರ ಸ್ವಾತಂತ್ರ್ಯ, ಸ್ವಾಭಿಮಾನದ ಬದುಕನ್ನು ಮುಂದುವರೆಸಿಕೊಂಡು ಬಂದರು. ಹಿನ್ನೆಲೆಯಿಂದ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅನೇಕ ಜನರು ಪಾಲ್ಗೊಂಡು ದುಡಿದಿದ್ದಾರೆ. ಅವರ ಸೇವೆ ಮಹಾತ್ಮ ಗಾಂಧೀಜಿಯವರನ್ನು ಪರಿಸರಕ್ಕೆ ಬರುವಂತೆ ಮಾಡಿತು. ಸ್ವಾತಂತ್ರ್ಯದ ನಂತರವೂ ತಾಲೂಕಿನ ಗತಿಯನ್ನು ಬದಲಾಯಿಸಿದವರಲ್ಲಿ ಭೀಷ್ಮ ಸಿದ್ಧಪ್ಪ ಚನ್ನಬಸಪ್ಪ ಸಿಂಧೂರ ಮತ್ತು ಜಿ.ಎನ್. ದೇಸಾಯಿ ಪ್ರಮುಖರು.

ಸಿದ್ಧಪ್ಪ ಚನ್ನಬಸಪ್ಪ ಸಿಂಧೂರ

ಸಾಹುಕಾರರೆಂದೇ ಪ್ರಸಿದ್ಧರಾದ ಸುರಳೇಶ್ವರ ಗ್ರಾಮದ ಚನ್ನಬಸಪ್ಪ ಸಿಂಧೂರರು ಆಗರ್ಭ ಶ್ರೀಮಂತರು. ಕೃಷಿಯೋಗಿಯಾಗಿದ್ದ ಅವರಿಗೆ ಸಂಗಮ್ಮ ಧರ್ಮಪತ್ನಿ, ಇವರಿಗೆ ಜನಿಸಿದ ಪುತ್ರನೇ ಮುಂದೆ ಸಿಂಧೂರ ಸಿದ್ಧಪ್ಪ ಎಂದು ಪ್ರಸಿದ್ಧರಾಗಿ ಸಾರ್ವಜನಿಕ ಜೀವನದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಇವರು, ಅಜ್ಜ (ಅಮ್ಮನ ಊರು) ಶೇಷಗಿರಿಯ ದೊಡ್ಡಮಲ್ಲಪ್ಪ ಅಪ್ಪಾಜಿಯವರ ಮನೆಯಲ್ಲಿ ಫೆಬ್ರವರಿ ೨೮, ೧೯೦೦ರಂದು ಜನಿಸಿದರು.

ಸಿದ್ಧಪ್ಪನವರು ಬಾಲ್ಯದಲ್ಲಿ ತಮ್ಮ ತಂದೆತಾಯಿಗಳನ್ನು ಕಳೆದುಕೊಂಡರು. ಪ್ರಾಥಮಿಕ ಶಿಕ್ಷಣವನ್ನು ಶೇಷಗಿರಿ ಮತ್ತು ಅಕ್ಕಿಆಲೂರಿನಲ್ಲಿ ಪಡೆದು, ಬೆಳಗಾವಿಯ ಗಿಲಗಂಚಿ ಅರಟಾಳ ಹೈಸ್ಕೂಲಿನಲ್ಲಿ ತಮ್ಮ ಪ್ರೌಢಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ಸ್ವಾತಂತ್ರ್ಯ ಹೋರಾಟದ ವಾತಾವರಣವು ಅವರನ್ನು ಶಾಲಾ ದಿನಗಳಲ್ಲಿಯೇ ಆವರಿಸಿಕೊಳ್ಳಲಾರಂಭಿಸಿತು. ಅಂದಿನ ದಿನ ಮೆಟ್ರಿಕ್ ಪರೀಕ್ಷೆಯ ನಂತರ ಸುರಳೇಶ್ವರಕ್ಕೆ ಮರಳಿ ಬಂದು ಸಾರ್ವಜನಿಕ ಜೀವನಕ್ಕೆ ಧುಮುಕಿದರು. ಗುತ್ತಲದ ಗಂಗಮ್ಮನೊಂದಿಗೆ ಇವರ ವಿವಾಹವಾಯಿತು. ಅಂದಿನ ದಿನಗಳಲ್ಲಿಯೇ ಚಿಕ್ಕ ಕುಟುಂಬದ ನೀತಿಯನ್ನು ಅನುಸರಿಸಿ ಇತರರಿಗೆ ಮಾರ್ಗದರ್ಶಿಯಾದರು. ಇಂಧುಮತಿ ಮತ್ತು ಚನ್ನಬಸಪ್ಪ ಇವರ ಇಬ್ಬರು ಮಕ್ಕಳು. ಕೃಷಿ ಕುಟುಂಬದ ಹಿನ್ನೆಲೆ ಹೊಂದಿದ್ದ ಇವರು ಆಗಲೇ ಅನೇಕ ಆಧುನಿಕ ಕೃಷಿ ವಿಧಾನಗಳನ್ನು ಬಳಸಿ ಇತರರಿಗೆ ಮಾದರಿಯಾಗಿದ್ದಾರೆ.

ತಮ್ಮ ವ್ಯಕ್ತಿತ್ವದಲ್ಲಿ ಶಿಸ್ತು ಮತ್ತು ಸಂಯಮವನ್ನು ರೂಢಿಸಿಕೊಂಡು ಕೊನೆಯ ಉಸಿರಿರುವವರೆಗೂ ವೈಯಕ್ತಿಕ ಚಿಂತನೆಗಳಿಗಿಂತಲೂ ಸಮಾಜದ ಸೇವೆಯೇ ಪ್ರಥಮ ಗುರಿಯಾಗಿಟ್ಟುಕೊಂಡಿದ್ದರು. ರಾಷ್ಟ್ರೀಯ ಹೋರಾಟಗಳಿಗೆ ಓಗೊಟ್ಟು ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿ ಉದಾರ ಜೀವನ ನಡೆಸಿ ಸಿದ್ಧಹಸ್ತರಾದರು.

ರಾಜಕೀಯ ಹೋರಾಟಗಳು

ಅಂದಿನ ರಾಜಕೀಯ ಧುರೀಣ ಅಕ್ಕಿ ಮಲ್ಲಪ್ಪನವರ ಮಾರ್ಗದರ್ಶನದಲ್ಲಿ ೧೯೨೪ರಲ್ಲಿ ಕಾಂಗ್ರೆಸ್ ಪಕ್ಷ ಸೇರಿದರು. ಏಳು ದಶಕದವರೆಗೂ ಪಕ್ಷದ ಮತ್ತು ಕರ್ನಾಟಕದ ರಾಜಕೀಯ ಚಟುವಟಿಕೆಗಳಲ್ಲಿ ತಮ್ಮ ವೈಶಿಷ್ಟ್ಯಮಯ ಛಾಪು ಮೂಡಿಸಿದರು. ೧೯೨೭೩೫ರ ಅವಧಿಯಲ್ಲಿ ಅಂದಿನ ತಾಲೂಕ ಲೋಕಲ್ ಬೋರ್ಡ್ ಮತ್ತು ಜಿಲ್ಲಾ ಲೋಕಲ್ ಬೋರ್ಡ್ ಸದಸ್ಯರಾಗಿ ಗ್ರಾಮೀಣ ಪರ ಕಾರ್ಯಗಳನ್ನು ಮಾಡಿದರು.

೧೯೩೪ರಲ್ಲಿ ಮಹಾತ್ಮ ಗಾಂದಿಯವರನ್ನು ಅಕ್ಕಿಆಲೂರಿಗೆ ಬರಮಾಡಿಕೊಂಡು ಅವರಿಗೆ ಸಾರ್ವಜನಿಕರ ಪರವಾಗಿ ಬಿನ್ನವತ್ತಳೆ ಅರ್ಪಿಸಿದರು. ಹರಿಜನರ ಉದ್ಧಾರಕ್ಕಾಗಿ ಶ್ರಮಿಸಿದ್ದಲ್ಲದೇ ಇತರ ಮುಂದುವರಿದ ಜನಾಂಗದವರನ್ನು ಅದರಲ್ಲಿ ತೊಡಗಿಸಿದರು. ಹರಿಜನರ ವಿವಾಹ ಸಮಾರಂಭಗಳಲ್ಲಿ ಕ್ರಿಯಾತ್ಮಕವಾಗಿ ಪಾಲ್ಗೊಳ್ಳುವಂತೆ ಇತರರನ್ನು ಪ್ರರೇಪಿಸಿದರು.

ಗುದ್ಲೆಪ್ಪ ಹಳ್ಳಿಕೇರಿ, ಸರದಾರ ವೀರನಗೌಡ ಪಾಟೀಲ, ಹೊಸಮನಿ ಸಿದ್ದಪ್ಪ, ಟಿ.ಆರ್. ನೇಸ್ವಿ, ಮೈಲಾರ ಮಹಾದೇವಪ್ಪ, ಸಂಗೂರ ಕರಿಯಪ್ಪ, ಆರ್.ಆರ್. ದಿವಾಕರ ಮುಂತಾದ ದಿಗ್ಗಜರ ಪ್ರಭಾವ ಸಿದ್ಧಪ್ಪನವರನ್ನು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸಂಪೂರ್ಣ ಮುಳುಗಿಸಿತು.

ಮಹಾತ್ಮಾ ಗಾಂಧೀಜಿಯವರ ಅನನ್ಯ ಅನುಯಾಯಿಗಳಾಗಿದ್ದ ಸಿದ್ಧಪ್ಪನವರು, ಅವರ ತತ್ವಗಳನ್ನು ಬೋಧಿಸುತ್ತಿದ್ದುದಲ್ಲದೇ ಅದರಂತೆ ನಡೆದುಕೊಳ್ಳುತ್ತಿದ್ದರು. ಸ್ವಾತಂತ್ರ್ಯ ಹೋರಾಟಗಾರರಾಗಿ ದವಸ, ಧಾನ್ಯ, ಹಣ, ಆಶ್ರಯ ಧಾರಾಳವಾಗಿ ನೀಡಿ ಹೋರಾಟಕ್ಕೆ ಎಲ್ಲಿಲ್ಲದ ಪುಷ್ಟಿ ಕೊಟ್ಟರು. ವಿದೇಶಿ ವಸ್ತುಗಳ ಬಹಿಷ್ಕಾರ, ಉಪ್ಪಿನ ಸತ್ಯಾಗ್ರಹ, ಪಾನ ನಿರೋಧ, ಕರನಿರಾಕರಣೆ, ಅಸ್ಪ್ರಶ್ಯತಾ ನಿವಾರಣೆ ಮುಂತಾದ ಹತ್ತು ಹಲವು ಸಾಮಾಜಿಕ ರಾಜಕೀಯ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಇವರು ೧೯೪೧ರಲ್ಲಿ ಬಂಧಿಸಲ್ಪಟ್ಟು, ಆರು ತಿಂಗಳ ಕಾಲ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಶಿಕ್ಷೆ ಅನುಭವಿಸಬೇಕಾಯಿತು. ೧೯೪೨ರ ಚಲೇಜಾವ್ ಚಳುವಳಿಯಲ್ಲಿ ಪುನಃ ಬಂಧಿಸಲ್ಪಟ್ಟರು. ಹೋರಾಟದ ಅವಧಿಯಲ್ಲಿ ಅನೇಕ ಮಿತ್ರರು ಬಂಧನಕ್ಕೆ ಒಳಗಾದಾಗ, ಅವರ ಮನೆತನದ ಕಾಳಜಿವಹಿಸಿ ಅಪರೂಪದ ವ್ಯಕ್ತಿತ್ವವನ್ನು ಮೆರೆದಿದ್ದಾರೆ.

ಮಲೆನಾಡಿನ ಹೋರಾಟಗಾರರಾದ ಎಂ.ಪಿ. ಪಾಟೀಲ, ರಾಮರಾವ್ ಹುಕ್ಕೇರಿಕರ, ಮಹಾದೇವಪ್ಪ ಮೈಲಾರ ಮುಂತಾದವರೊಂದಿಗೆ ಜೈಲು ದಿನಗಳನ್ನು ಕಳೆದರು. ಇವರ ಗರಡಿಯಲ್ಲಿ ಪಳಗಿ ಸ್ವಾತಂತ್ರ್ಯ ಹೋರಾಟ ಮಾಡಿದ ಅನೇಕ ದಿಗ್ಗಜರನ್ನು ಈಗಲೂ ಕಾಣಬಹುದು.

ಸ್ವಾತಂತ್ರ್ಯಾನಂತರದ ದಿಟ್ಟ ಹೆಜ್ಜೆಗಳು

ಸ್ವತಂತ್ರ ಭಾರತದ ಹೊಸ ಗಾಳಿಯ ರುಚಿ ಆಸ್ವಾದಿಸುತ್ತಾ ಮುಂದಿನ ದಿನಗಳನ್ನು ಗ್ರಾಮೀಣರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸುಧಾರಣೇಗಳಿಗಾಗಿ ತಮ್ಮ ಹೋರಾಟವನ್ನು ಮುಂದುವರೆಸಿದರು. ರಾಜಕೀಯ ಅಧಿಕಾರವು ಮುತ್ಸದ್ಧಿಯ ಕೈಯಲ್ಲಿ ಸಾರ್ವಜನಿಕರ ಉದ್ಧಾರಕ್ಕಾಗಿ ಸದ್ಬಳಕೆಯಾಗುತ್ತದೆ ಎಂಬುದಕ್ಕೆ ಸಿದ್ಧಪ್ಪನವರು ಉದಾಹರಣೆಯಾಗಿದ್ದಾರೆ.

೧೯೪೯೫೯ ಅವಧಿಯಲ್ಲಿ ಧಾರವಾಡ ಜಿಲ್ಲಾ ರೂರಲ್ ಡೆವಲಪ್ ಮೆಂಟ್ ಬೋರ್ಡ್ ಸದಸ್ಯರಾಗಿ ಗ್ರಾಮಗಳ ಸುಧಾರಣೆ ಮಾಡಿದರು.

೧೯೫೨ರ ಪ್ರಥಮ ಸಾರ್ವರ್ತಿಕ ಚುನಾವಣೆಯಲ್ಲಿ ಜಯಗಳಿಸಿ ಹಾನಗಲ್ಲು ತಾಲೂಕಿನ ಪ್ರಥಮ ಶಾಸಕರಾಗಿ ಮುಂಬೈ ವಿಧಾನ ಸಭೆಯನ್ನು ಪ್ರವೇಶಿಸಿದರು.

೧೯೩೫೬೦ರ ಅವಧಿಯಲ್ಲಿ ಜಿಲ್ಲಾ ಕಾಂಗ್ರೆಸ್ ಕಮಿಟಿ ಸದಸ್ಯರಾಗಿ ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷರಾಗಿ ಕೆ.ಪಿ.ಸಿ.ಸಿ. ಸದಸ್ಯರಾಗಿ ಕಾಂಗ್ರೆಸ್ ಪಕ್ಷದ ಬಲಸಂವರ್ಧನೆಗೆ ಶ್ರಮಿಸಿದರು. ಅಲ್ಲದೆ ಮಲೆನಾಡು ಪ್ರಗತಿ ಕಮಿಟಿ ಸದಸ್ಯರಾಗಿ ಸೇವೆ ಸಲ್ಲಿಸಿದರು. ಅದರ ಮೂಲಕ ಅನೇಕ ಅಭಿವೃದ್ಧಿ ಪರ ಯೋಜನೆಗಳು ಜಾರಿಗೆ ಬಂದವು.

ಕಲ್ಲಾಪೂರದ ನರಸಿಂಗರಾವ್ ದೇಸಾಯಿಯವರು ಹಾನಗಲ್ಲು ತಾಲೂಕಿನ ಸಾಮಾಜಿಕ ಕಳಕಳಿಯುಳ್ಳ ಧುರೀಣರಾಗಿದ್ದರು. ಇವರು ೧೯೧೩ರಿಂದಲೇ ಯಮಗಳ್ಳಿ ನೀರಾವರಿ ಯೋಜನೆಯ ಕನಸನ್ನು ಕಂಡು, ಅದಕ್ಕಾಗಿ ಅವಿರತ ಹೋರಾಡಿದರು. ಅವರನ್ನು ತಮ್ಮ ರಾಜಕೀಯ ಗುರು ಎಂದೇ ಗೌರವಿಸುತ್ತಿದ್ದ ಸಿದ್ಧಪ್ಪನವರು, ಯೋಜನೆಯನ್ನು ಸಾಕಾರಗೊಳಿಸಲು ೫೦ರ ದಶಕದಲ್ಲಿ ಹೋರಾಡಿ ಯಶಸ್ವಿಯಾದರು. ದಿಶೆಯಲ್ಲಿ ಇವರಿಗೆ ಗುರುರಾವ್ ದೇಸಾಯಿಯವರು ಸಂಪೂರ್ಣ ಬೆಂಬಲಕ್ಕಿದ್ದರು. ಇಂದು ಯೋಜನೆಯಿಂದಾಗಿ ಸುಮಾರು ೩೦ ಸಾವಿರ ಎಕರೆ ಪ್ರದೇಶ ನೀರಾವರಿಗೆ ಒಳಪಟ್ಟಿದೆ. ಧರ್ಮಾಕಾಲುವೆ ಇಂದು ಹಾನಗಲ್ಲು ತಾಲೂಕಿನ ಜೀವನಾಡಿಯಾಗಿದೆ. ಅನೇಕ ಹಳ್ಳಿಗಳಿಗೆ ರಸ್ತೆಗಳ ನಿರ್ಮಾಣವನ್ನು ಸಾರ್ವಜನಿಕ ಶ್ರಮದಾನದಿಂದ ನಿರ್ಮಿಸಿ, ಸಂಪರ್ಕ ಕಲ್ಪಿಸಿದರು. ಕೂಬಿಹಾಳ ಲಿಂಗಪ್ಪನವರು, ಸಿದ್ಧಪ್ಪನವರಿಗೆ ಸಹಕಾರ ರಂಗದ ಸೇವೆಗೆ ಪ್ರೇರಕ ಶಕ್ತಿಯಾಗಿದ್ದರು. ಸಿದ್ಧಪ್ಪನವರು ಕೆ.ಸಿ.ಸಿ. ಬ್ಯಾಂಕ್ ಡೈರೆಕ್ಟರ್ ರಾಗಿ ಅದರ ಶಾಖೆ ಅಕ್ಕಿಆಲೂರಿನಲ್ಲಿ ಪ್ರಾರಂಭವಾಗುವಂತೆ ಶ್ರಮಿಸಿದರು.

ತಮ್ಮ ಸತತ ಹೋರಾಟದ ಫಲವಾಗಿ ೧೯೫೦ರಲ್ಲಿ ಹಾನಗಲ್ಲು ತಾಲೂಕಿಗೆ ವಿದ್ಯುಚ್ಛಕ್ತಿ ಸೌಲಭ್ಯ ದೊರಕಿತು. ಭಾಗದಲ್ಲಿ ಸಹಕಾರಿ ಸಕ್ಕರೆ ಕಾರ್ಖಾನೆ ಪ್ರಾರಂಭಿಸಲು ಶ್ರಮವಹಿಸಿ ದುಡಿದರು. ನೇರವಾಗಿ ಜನರ ದೈನಂದಿನ ಜೀವನದಲ್ಲಿ ಅನುಕೂಲವಾಗುವ ಅನೇಕ ವ್ಯವಸ್ಥೆಗಳನ್ನು ಹಾನಗಲ್ಲು ತಾಲೂಕಿಗೆ ತರಲು ಪ್ರಯತ್ನಿಸಿದರು.

ವಿದ್ಯಾದಾನ

ಗುರುರಾವ್ ದೇಸಾಯಿ ಕಲ್ಲಾಪುರ ಮತ್ತು ಸಿಂಧೂರ ಸಿದ್ಧಪ್ಪನವರ ಅಭಿವೃದ್ಧಿಯಿಂದ ಹಾನಗಲ್ಲು ತಾಲೂಕಿನಲ್ಲಿ ಅನೇಕ ಬೆಳವಣಿಗೆಗಳುಂಟಾದವು. ೧೯೫೦ರಲ್ಲಿ ಹಾನಗಲ್ಲು ತಾಲೂಕು ಶಿಕ್ಷಣ ಸಂಘವು ಅಕ್ಕಿಆಲೂರಿನಲ್ಲಿ ಪ್ರಾರಂಭಗೊಂಡಿತು. ದೇಸಾಯಿಯವರು ಸಂಸ್ಥಾಪಕ ಅಧ್ಯಕ್ಷರಾಗಿ, ಸಿದ್ಧಪ್ಪನವರು ಪ್ರಧಾನ ಕಾರ್ಯದರ್ಶಿಗಳಾಗಿ ಶೈಕ್ಷಣಿಕವಾಗಿ ಸಂಸ್ಥೆ ಬೆಳೆಯಲು ಶ್ರಮಿಸಿದರು. ನರಸಿಂಗರಾವ್ ದೇಸಾಯಿ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯವು ಇವರ ಸಾಧನೆಗೆ ಒಂದು ನಿದರ್ಶನ. ದೇಸಾಯಿಯವರು ಅಪಾರ ಜಮೀನನ್ನು ಸಂಘಕ್ಕೆ ದೇಣಿಗೆಯಾಗಿ ನೀಡಿದರು.

ಮಹಿಳಾ ಶಿಕ್ಷಣಕ್ಕೆ ಮಹತ್ವ ನೀಡುವ ಉದ್ದೇಶದಿಂದ ೧೯೬೬ರಲ್ಲಿ ಪ್ರತ್ಯೇಕ ಹೆಣ್ಣುಮಕ್ಕಳ ಪ್ರೌಢ ಶಾಲೆಯನ್ನು ಅಕ್ಕಿಆಲೂರಿನಲ್ಲಿ ಪ್ರಾರಂಭಿಸಿದರು. ಅದು ೧೯೮೩ರಲ್ಲಿ ಪದವಿಪೂರ್ವ ಮಹಾವಿದ್ಯಾಲಯವಾಗಿ ಮೇಲ್ದರ್ಜೆಗೇರಿತು. ಇಂದು ಸಿಂಧೂರ ಸಿದ್ಧಪ್ಪ ಹೆಣ್ಣು ಮಕ್ಕಳ ಪದವಿಪೂರ್ವ ಮಹಾವಿದ್ಯಾಲಯವೆಂದು ನಾಮಕರಣಗೊಂಡಿದೆ.

ಗ್ರಾಮೀಣ ಬಡ ವಿದ್ಯಾರ್ಥಿಗಳಿಗೆ ಅನ್ನ, ಆಶ್ರಯ ನೀಡುವ ಉದ್ದೇಶದಿಂದ ಇತರರ ಸಹಕಾರದೊಂದಿಗೆ ೧೯೫೦ರಲ್ಲಿ ಶ್ರೀ ಚೆನ್ನವೀರೇಶ್ವರ ಪ್ರಸಾದ ನಿಲಯ ಎಂಬ ಪಬ್ಲಿಕ್ ಟ್ರಸ್ಟನ್ನು ಪ್ರಾರಂಭಿಸಲು ಸ್ಫೂರ್ತಿಯಾದರು. ಇಂದು ನಿಲಯವು ೨೦೦ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳಿಗೆ ಆಶ್ರಯ ನೀಡಿದೆ. ಇವರು ಕೈಗೊಂಡ ಶೈಕ್ಷಣಿಕ ಸುಧಾರಣೆಗಳು ಇತರ ಜಿಲ್ಲೆಗಳಿಗೆ ಮಾದರಿಯಾಗಿವೆ.

ದೂರದರ್ಶಿತ್ವ

ಸಿದ್ಧಪ್ಪನವರು ಸಿದ್ಧಾಂತ ಮತ್ತು ದೂರದರ್ಶಿಯಾಗಿದ್ದರು. ತಾಲೂಕಿನ ಸರ್ವಾಂಗೀಣ ಪ್ರಗತಿಗಾಗಿ ಅನೇಕ ಯೋಜನೆಗಳನ್ನು ಅನುಷ್ಟಾನಕ್ಕೆ ತಂದರು. ಯಮಗಳ್ಳಿ ಜಲಾಶಯವನ್ನು ವಿಸ್ತರಿಸಬೇಕೆಂಬ ಮತ್ತು ಬನವಾಸಿ ಹತ್ತಿರ ನದಿಗೆ ಬ್ಯಾರೇಜ್ ನಿರ್ಮಿಸಿ ಹೆಚ್ಚಿನ ನೀರನ್ನು ಯಮಗಳ್ಳಿ ಜಲಾಶಯಕ್ಕೆ ತಂದು ವರ್ಷದುದ್ದಕ್ಕೂ ನೀರಾವರಿ ಸೌಲಭ್ಯ ಕಲ್ಪಿಸುವ ಮಹತ್ವಾಕಾಂಕ್ಷೆ ಅವರದಾಗಿತ್ತು.

ಹಾನಗಲ್ಲು ತಾಲೂಕಿನ ಗುಡ್ಡದ ಹಳ್ಳಿಗಳು ನೀರಾವರಿಯಿಂದ ವಂಚಿತವಾಗಿದ್ದರಿಂದ ಪ್ರದೇಶಕ್ಕೆ ಮಾಸೂರು ಕೆರೆಯ ನೀರಿನ ಸೌಲಭ್ಯವನ್ನು ಒದಗಿಸಬೇಕು ಹಾಗೂ ಕೃಷಿ ಪ್ರಧಾನವಾದ ಭಾಗದಲ್ಲಿ ಕೃಷಿ ಮಹಾವಿದ್ಯಾಲಯ ಸ್ಥಾಪನೆಯಾಗಬೇಕೆಂಬ ಬಯಕೆಯನ್ನು ಹೊಂದಿದ್ದರು. ಹಳ್ಳಿಗಳು ಮತ್ತು ಗ್ರಾಮೀಣ ಉದ್ಯೋಗಗಳು ಪುನಶ್ಚೇತನಗೊಳ್ಳಬೇಕೆಂಬ ಉದ್ದೇಶದಿಂದ ಸರಕಾರದೊಂದಿಗೆ ಸಾಕಷ್ಟು ಸಂಪರ್ಕವನ್ನು ಇಟ್ಟುಕೊಂಡಿದ್ದರು.

೮೨ ವರ್ಷಗಳ ಸಾರ್ಥಕ ಜೀವನವನ್ನು ಸಿದ್ಧಪ್ಪನವರು ನಡೆಸಿದರು. ಗ್ರಾಮೀಣ ಪ್ರದೇಶದಲ್ಲಿ ಜನಿಸಿ, ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿ, ಪ್ರಥಮ ದರ್ಜೆಯ ಮುತ್ಸದ್ಧಿಯಾಗಿ ಹೊರಹೊಮ್ಮಿದರು. ಇವರ ಮತ್ತೊಂದು ಹೆಸರೇ ನಿಷ್ಠುರತೆ. ಸಾರ್ವಜನಿಕ ಹಿತದ ಮುಂದೆ ಖಾಸಗಿ ಆಶೆ ಆಕಾಂಕ್ಷೆಗಳನ್ನು ಗೌಣವಾಗಿ ಕಂಡರು. ದೇಶಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿ ಬಾಳಿದರು. ತಮ್ಮ ಜೀವಿತಾವಧಿಯಲ್ಲಿ ಅನೇಕ ಮಾನ ಸಮ್ಮಾನಗಳನ್ನು ಕಂಡು ಹಿಗ್ಗದೆ ಇನ್ನೂ ಸಾಧಿಸಬೇಕಾದುದು ಸಾಕಷ್ಟಿದೆ ಎಂದು ಚಿಂತಿಸುತ್ತಿದ್ದರು. ಬಹುಮುಖ ವ್ಯಕ್ತಿತ್ವದಿಂದಾಗಿ ಆಕಾಶದೆತ್ತರಕ್ಕೆ ಬೆಳೆದುದು ಒಂದು ರೋಚಕ ಇತಿಹಾಸವಾಗಿದೆ.

ಜಿ.ಎನ್. ದೇಸಾಯಿ

ಹಾನಗಲ್ಲು ತಾಲೂಕಿನ ಪಿತಾಮಹನೆಂದು ಹೆಸರುವಾಸಿಯಾದ ದಿವಂಗತ ಜಿ.ಎನ್. ದೇಸಾಯಿಯವರು ಶ್ರೀಮಂತ ಮನೆತನದಲ್ಲಿ ಜನಿಸಿದರು. ತಂದೆ ನರಸಿಂಗರಾವ್, ತಾಯಿ ತುಂಗಾಬಾಯಿ. ಇವರು ಗಾಂಧೀಜಿಯವರ ಕರೆಗೆ ಓಗೊಟ್ಟು ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಹೋರಾಟವನ್ನು ಮಾಡಿದರು. ಸಿಂಧೂರ ಸಿದ್ಧಪ್ಪನವರೊಂದಿಗೆ ರಾಷ್ಟ್ರಕ್ಕಾಗಿ ಚಳುವಳಿಯನ್ನು ಮಾಡಿ ೧೯೬೨ರಲ್ಲಿ ಶಾಸಕರಾದರು. ಎರಡು ಬಾರಿ ಶಾಸಕರಾಗಿ ಹಾನಗಲ್ಲು ತಾಲೂಕಿನ ಸರ್ವಾಂಗೀಣ ಬೆಳವಣಿಗೆಗೆ ಹೋರಾಡಿದರು. ಹಳ್ಳಿಗಳಿಗೆ ಭೇಟಿಯನ್ನಿಟ್ಟು ಗ್ರಾಮೀಣ ಜನತೆಯ ಕುಂದು ಕೊರತೆಗಳನ್ನು ನಿವಾರಿಸುತ್ತಿದ್ದರು. ಧಾರ್ಮಿಕ ಕ್ಷೇತ್ರಕ್ಕೆ ಹಾಗೂ ದೇವಾಲಯಗಳಿಗೆ ಅನೇಕ ದಾನದತ್ತಿಗಳನ್ನು ನೀಡಿದ್ದಾರೆ. ತಮ್ಮ ೧೦ ಎಕರೆ ಜಮೀನು ಮಾರಿ ಅಕ್ಕಿಆಲೂರಿನ ವಿದ್ಯಾಸಂಸ್ಥೆಯ ಕಾಲೇಜು ಕಟ್ಟಡಕ್ಕೆ ಸಹಾಯ ಮಾಡಿದರು. ಧರ್ಮಾ ಜಲಾಶಯದ ನಿರ್ಮಾಣ ಇವರ ಮಹತ್ವದ ಕಾರ್ಯಗಳಲ್ಲೊಂದಾಗಿದೆ.

ಹೀಗೆ ಹಾನಗಲ್ಲು ಪರಿಸರ ಆಧುನಿಕ ಕಾಲದಲ್ಲೂ ಪ್ರಮುಖ ಚಾರಿತ್ರಿಕ ಘಟನಾವಳಿಯನ್ನು ಹೊಂದಿದೆ. ಎಲ್ಲ ಅಂಶಗಳು ಇನ್ನೂ ಹೆಚ್ಚಿನ ಅಧ್ಯಯನದ ಅವಶ್ಯಕತೆಯನ್ನು ಸೂಚಿಸುತ್ತವೆ.