ದೇವ ದಾನವ ಗುಣದ ಮಿಲನದಿ
ಮೂಡಿ ಬಂದನೊ ಮಾನವ !
ದೈವತೆಯ ಹಿಮ್ಮೆಟ್ಟಿ ಎದ್ದಿದೆ
ಕ್ಷುದ್ರ ಸ್ವಾರ್ಥದ ದಾನವ.

ಚಿತ್ತಜಲಧಿಯ ದಿನವು ಮಥಿಸಿದೆ
ದೇವ ದಾನವಸಂಕುಲ
ಅಮೃತ ಬತ್ತಿದೆ, ನಂಜು ಉರಿದಿದೆ
ಬಾಳಿಗಾಗಿದೆ ವಿಹ್ವಲ.

ನಂಜನೀಂಟುವ ನೀಲಕಂಠನ
ಕೃಪೆಯ ಕೋರಿದೆ ಈ ಮನ.
ಅಶಿವ ಸಾಯಲಿ, ಶಿವವು ಬೆಳಗಲಿ
ಆಗ ಬಾಳಿದು ಪಾವನ.