೨೧. ದೇವರು

ಪದ್ಯ ೩೪೩ ವಾಲಂಗ ವಾಲಗ, ವಾದ್ಯ
ಪದ್ಯ ೩೪೬ ಬೆಲ್ಲಪತ್ತುರಿ ಬಿಲ್ವಪತ್ರೆ, ಹೊನು, ವನ
ಪದ್ಯ ೩೫೦ ಮಾರನಿಯೇ ಮಾರಿದವನು
ಪದ್ಯ ೩೫೨ ಪಡಿ ಊಟದ ಪಡಿಯಕ್ಕಿ
ಪದ್ಯ ೩೫೩ ಜಲ್ಲೀಸು ಸಲಹು?

 ೨೨. ಪಾಂಡವರು

ಪದ್ಯ ೩೫೪ ಚಾರಿಕಲ ತಾರೆಗಳು

೨೩. ಅರಸು

 

ಪದ್ಯ ೩೬೦ ಚಿಪ್ಪಿಕುಳಿ ಸುಣ್ಣದ ಸಿಂಪಿರುವ ಹಳ್ಳದ ಕುಣಿ
ಪದ್ಯ ೩೬೦ ಗಾವಿಲ ಗಾವುದ

 ೨೪. ಒಕ್ಕಲಿಗರ ಎತ್ತು

ಪದ್ಯ ೩೭೧ ಸೂಲಿ ಸೂರ್ಯ, ಜನ್ನಿ, ಮಕ್ಕಳು
ಪದ್ಯ ೩೭೧ ಎರಡು ಎತ್ತುಗಳು ಸೂರ್ಯ ಮತ್ತು ಸುಕ್ರ ಶುಕ್ರ
ಪದ್ಯ ೩೭೧ ಕೆಲುದಾವೆ, ಗುಟುರು ಹಾಕಿದವು ಹೊಲು ಹೊಲ

೨೫. ಸರ್ವಜ್ಞ

ಪದ್ಯ ೩೭೨ ಶಿವ ತನ್ನ ಕಂದಾ ಹೋಲೆಂದ ತನಗೆ ಮಗನಾಗಲಿ ತನಗೆ ಸೇರಲಿ ಎಂದ?
ಪದ್ಯ ೩೭೨ ಹೋಲೆಂದ ಹೋಗಲಿ ಎಂದ

 ೨೮. ಹಾರೈಕೆ

ಪದ್ಯ ೩೮೫ ಪೀಟ ಪೀಠ ಹತ್ತೂಗಿ
ಪದ್ಯ ೩೮೭ ಹತ್ತೂಗಿ ಹಚ್ಚಿಗೆ? ಬಿದಿರಿನ ಹಚ್ಚಿಗೆ?
ಪದ್ಯ ೩೮೮ ಹರಗೊಳಗೆ ಹರಿಗೋಲುಗಳಿಗೆ?
ಪದ್ಯ ೩೮೮ ಸೊಬುನಲ್ಲ ಶುಭವಲ್ಲ, ಒಳ್ಳೆಯದಲ್ಲ, ಆನಂದವಲ್ಲ
ಪದ್ಯ ೩೮೯ ನಿಚ್ಚಾ ನಿತ್ಯ
ಪದ್ಯ ೩೮೯ ಸಾದಿಕ ತಂತ್ರ

 ೨೯. ಹಾಸ್ಯ

 

ಪದ್ಯ ೩೯೩ ಶಾಮುಗೆ ಶಾವಿಗೆ, ಶಕಗಡಬು, ಸೆಕೆ (ಉಗಿ)ಯಲ್ಲಿ ಬೇಯಿಸಿದ ಕಡಬು; ಹೊರಗಡಬು, ಹೂರಣಗಡಬು
ಪದ್ಯ ೩೯೪ ಹಾಳಿಕೊಟ್ಟಿ ಮೊಕದವ್ನೇ ಅಡಕೆಯ ಹಾಳೆಯಿಮದ ಮಾಡಿದ ಕೊಟ್ಟೆಯ ಮೊಗದವನೇ, ಎಲೆಯನ್ನು (ಕೊನೆ ಹಾಳೆಯನ್ನು) ಸುತ್ತಲು ಮಡಚಿ ಮಾಡುವದು ಕೊಟ್ಟೆ.
ಪದ್ಯ ೩೯೫ ಕೈಸವನಾ ಕೆಲಸ ಮುಗಿದು ಅನುಕೂಲವಾಗದು
ಪದ್ಯ ೩೯೬ ಅಂಬೀರ ಅಂಬಿಗರ, ಆಶಿ, ಮೇಲೋಗರ
ಪದ್ಯ ೩೯೬ ಬೀಸು, ಬಲೆಬೀಸು  
ಪದ್ಯ ೩೯೭ ಹೊಗ್ಯ ಹೊಗೆಯನ್ನು

 ಪದ್ಯ ೩೦. ಸಂಕೀರ್ಣ

ಪದ್ಯ ೩೯೯ ರಂಬಿರು ರಂಭೆಯರು
ಪದ್ಯ ೪೦೦ ಸಗತಿ ಶಕ್ತಿ
ಪದ್ಯ ೪೦೫ ಸಿಂಗಾರ ಅಡಕೆಯ ಕೊನೆ ಹೂ
ಪದ್ಯ ೪೦೫ ಯರವಿನ ತನ್ನದಲ್ಲದೆ ಎರವಲು ತಂದ
ಪದ್ಯ ೪೦೬ ವಡಿದೀರ ಒಡೆಯರ, ಸಾವ್‌ಕಾಸೇ, ಸಾವಕಾಶ
ಪದ್ಯ ೪೦೬ ಜೀಕಿಗೆ ಶಬ್ದ ಮಾಡುವ ಕಾಲುಮೆಟ್ಟಿಗೆ, ಜೋಡಿಗೆ
ಪದ್ಯ ೪೦೭ ಕಡುನೆಳ್ಳಿಮರ ಅಶ್ವತ್ಥಮರ
ಪದ್ಯ ೪೦೮ ದೇವಿಯಮರ  
ಪದ್ಯ ೪೧೧ ಅಕ್‌ಬೆಳ್ವದು ಅಕ್ಕಿ (ಬತ್ತ) ಬೆಳೆವುದು
ಪದ್ಯ ೪೧೧ ಮೊಳುನೀಟಾ ಮೊಳದಷ್ಟು ನೀಟು, ಉದ್ದ
ಪದ್ಯ ೪೧೪ ಯಾವಾರ ವ್ಯಾಪಾರ, ವ್ಯವಹಾರ
ಪದ್ಯ ೪೧೪ ಅಳವಿ ನದೀಮುಖ
ಪದ್ಯ ೪೧೫ ಕೊಕ್ಕ ಕೊಕ್ಕರೆ, ಜಿಗ್ಗಾ, ಜಿಗ್ಗನ್ನ, ಜಿಗು ಟೊಂಗೆಯನ್ನು
ಪದ್ಯ ೪೧೫ ಒಣಗಿದ ದೇಟು ಕೊಚ್ಚು ಎಂದೂ ಎನ್ನುತ್ತಾರೆ
ಪದ್ಯ ೪೧೫ ಕನ್ನಡ ಕಮ್ನ? ಕಮನೂ ಜಬ್ಬು, ಚಿಕ್ಕ ಮೀನ
ಪದ್ಯ ೪೧೭ ಹಾಲಂತಾ ಹಾಲಿನಂತೆ ಬೆಳ್ಳಗಾದ
ಪದ್ಯ ೪೧೭ ಗೋರಂಬೂ ಬುಸ್ ಎಂದು ಶಬ್ದಮಾಡುವ
ಪದ್ಯ ೪೧೮ ವಡ್ಯಣದ ಒಡ್ಯಾಣದ
ಪದ್ಯ ೪೧೯ ಮುಂಡಗಿ ಕೇದಿಗೆಯ ಗಿಡ
ಪದ್ಯ ೪೧೯ ಚಪ್ಪು ಎಲೆ, ಮುಳ್ಳಿರುವ ಎಲೆ
ಪದ್ಯ ೪೧೯ ಅಲಿಯಾಲಿ ಅರಳಲಿ
ಪದ್ಯ ೪೨೦ ಕಣ್ಣು ಗಂಗಳ ಕಣ್ಣ ಗೊಂಬೆ
ಪದ್ಯ ೪೨೨ ಪಟಗಾರ ಗಜನಿಯ ಅಧಿಕಾರ ಹೊಂದಿರುವವ
ಪದ್ಯ ೪೨೨ ಮುಳ್ಳಿಗಜ್ಜಿ ಮುಳ್ಳುಗಿಡ ಬೆಳೆವ ಗಜನಿ
ಪದ್ಯ ೪೨೩ ಹುಟ್‌ಬಣ್ಣ ಹುಟ್ಟಿದಾಗ ಇರುವಂಥ ನಿಜ ಬಣ್ಣ
ಪದ್ಯ ೪೨೩ ಕಟ್‌ ಬಣ್ಣಾ ವೇಷಕಟ್ಟಿದಾಗ ಹಾಕುವ ಬಣ್ಣ
ಪದ್ಯ ೪೨೩ ನುಗ್ಗೀಕಾಲು ನುಗ್ಗಿಯಕಾಯಿಯಂತೆ ಸಪುರವಾದ ಕಾಲುಳ್ಳವ?
ಪದ್ಯ ೪೨೪ ಲಾ ಆ ತೇರು ಈ ತೇರು ಸೋದಿ, ಸ್ವಾದಿ ನೂತನುದಾ, ಹೊಸ
ಪದ್ಯ ೪೨೫ ಗೋಳ್ಯ ದೊಡ್ಡ ಶಬ್ದ, ಕೊರಳೂಬಿ, ಕೊಳಲೂದಿ
ಪದ್ಯ ೪೨೭ ಆಯ ಯುಕ್ತಿ, ಕುಕ್ಕಡ, ಬಾಳೆಯ ಕೊನೆಯ ಹೂ
ಪದ್ಯ ೪೨೯ ಯಸವದು ಹಬ್ಬಿ ಶೋಭಿಸುತ್ತದೆ
ಪದ್ಯ ೪೩೦ ಬಯಿಬಂಗಾ ಭಯ ಭಂಗ. (ಅಪಮಾನ)
ಪದ್ಯ ೪೩೧ ಬಾದಿಕ ಬಾಧೆ
ಪದ್ಯ ೪೩೨ ಪಂಡ್ತೋಳ್ ಪಂಡಿತರ
ಪದ್ಯ ೪೪೩ ಸಕಣ ಶಕುನ
ಪದ್ಯ ೪೪೩ ಲಾಗಿರ್ ಆಗೇರ, ಹರಿಜನರು, ಒಂದು ವರ್ಗದವರು.