೧೧. ಅತ್ತೆಸೊಸೆ

ಪದ್ಯ ೨೩೫ ತೆನಮೊಸರು ಕೆನೆ ಮೊಸರು
ಪದ್ಯ ೨೩೬ ಸೊಸುದಿರ ಲಾಳಿಸು ಸೊಸೆಯಮದಿರನ್ನಳಿಸು, ಆಳು
ಪದ್ಯ ೨೩೬ ಸಿರಿಗಂದಾಲಳಿಯದೆ ಇಟ್ಟ ಶ್ರೀಗಂಧ ಹಾಳಾಗದಂತೆ
ಪದ್ಯ ೨೩೭ ಬೆಟ್ಟು ಬೆರಳು
ಪದ್ಯ ೨೩೬ ಬಯ್ಲಂಬೆ ಪಾಪ ಬಯಲಾಗಲಿ, ನಾಶವಾಗಲಿ ಎಂಬೆನು
ಪದ್ಯ ೨೩೮ ಸಪ್ ಹೊತ್ತೆ ಸೊಪ್ಪನ್ನು, ಹೊತ್ತೆನು
ಪದ್ಯ ೨೩೮ ಸದಿ ಒಣತರಗೆಲೆ, ಕಸ
ಪದ್ಯ ೨೩೮ ತಲಿ ತಲೆ
ಪದ್ಯ ೨೩೮ ಚೆಚ್ಚಿದ ಟೊಂಕದ ಮೇಲೆ ಎತ್ತಿದ
ಪದ್ಯ ೨೩೮ ಕೊಟ ಕೊಟೀ ಕರಕರೆ
ಪದ್ಯ ೨೪೦ ಕುಂಟಾಣಾಗಿರುತಿ ಕುಂಟಲಗಿತ್ತಿ
ಪದ್ಯ ೨೪೦ ಸಮಬಾಗ ಸಮಭಾಗ
ಪದ್ಯ ೨೪೦ ಹರಕೊಡಿ ಹರಿದು ಕೊಡಿ
ಪದ್ಯ ೨೪೧ ಯೆರಗು ಇರಿವೆ
ಪದ್ಯ ೨೪೧ ಪೌಜ ಪೌಜನ್ನು, ಸೈನ್ಯವನ್ನು
ಪದ್ಯ ೨೪೧ ಸರುದರ ಮುತ್ತಂದಿ ಸರದಾರ (ಶ್ರೇಷ್ಠ) ಮುತ್ತೆಂದು
ಪದ್ಯ ೨೪೩ ಮಗು ಮಗ
ಪದ್ಯ ೨೪೪ ಹಳ್ಯೊರು ಹಳೆಯವರು
ಪದ್ಯ ೨೪೬ ಸಂಗಾಟ ಸಂಕಟ
ಪದ್ಯ ೨೪೬ ಬಳ್ಳೂಕಿ ಬಳಲಿಕೆ
ಪದ್ಯ ೨೪೭ ಬಾಗವಂತಾ ಬಾಗುವಂಥ

 ೧೨. ಅಳಿಯ

 

ಪದ್ಯ ೨೫೩ ಸಾವಂತಿ ಸಾಕಡಬು ಸೇವಂತಿ ಹೂವಿನಂತಹ ಪರಿಮಳದ ಕಡಬು
ಪದ್ಯ ೨೫೩ ನೈಚುಕಿ ನಾಚಿಕೆ
ಪದ್ಯ ೨೫೩ ನೆಗು ನಗೆ
ಪದ್ಯ ೨೫೩ ಬಾಳೇ ಬಹಳ.
ಪದ್ಯ ೨೫೪ ಕೀಳಾನಾದ್ಯೆಮ್ಮೆ ಕಿರಿಯ ಎಮ್ಮೆ.
ಪದ್ಯ ೨೫೬ ಹರಿಯಾಳ ಹರಿವಾಣ
ಪದ್ಯ ೨೫೭ ಲಾದಲು ಆದ, ಮಾಡಿದ, ಬೋನಂಗಿ ಅಡಿಗೆ, ಅನ್ನ

 ೧೩. ಭಾವ

 

ಪದ್ಯ ೨೫೯ ಕಂಡ್ರಾ ಕೋಣಲ್ಲಿ ಕಂಟರಕೋಣ ಎಂಬ ಅಡವಿಯ ಊರಲ್ಲಿ
ಪದ್ಯ ೨೫೯ ಕೊಕ್ಕಿ ಕೊಕ್ಕೆ
ಪದ್ಯ ೨೫೯ ಕತ್ತಿಯನ್ನು ತೂಗಹಾಕಲು ಮಾಡಿದ ಅಂಡುಗೊಕ್ಕೆ ಹುರಿ ಬಳ್ಳಿಯಲ್ಲಿ ಕಟ್ಟಿ ಸೊಂಟಕ್ಕೆ ಕತ್ತುವ.
ಪದ್ಯ ೨೬೦ ಬೊಗ್ರಿಗಡ್ಡ ಬುಗುರಿಯಂಥ ತುದಿಗೆ ಚೂಪಾದ ಗಡ್ಡವುಳ್ಳ ಭಾವ. ಚುಳುಕಾದ ಗಡ್ಡವುಳ್ಳವ.
ಪದ್ಯ ೨೬೧ ಮುರಗಿ ಮುರಿಗೆ
ಪದ್ಯ ೨೬೩ ಬಾಣದ್ ಮೈರ್ಣ ಬಾಣದ ವೇಗ

 ೧೪. ಮೈದುನಿ

ಪದ್ಯ ೨೬೫ ಹಾಸ್ರಗಲ್ಲು ಹಾಸರೆಗಲ್ಲು. ಶಳ್ದ, ಸೆಳೆದ, ಒಗೆದ

 ೧೫. ಬಸುರಿ

 

ಪದ್ಯ ೨೭೦ ಚಣ್ಣ ಸಣ್ಣ. ನೆಡು, ನಡ
ಪದ್ಯ ೨೭೧ ಹೋನಾರೇ ಹೋಗಲಾರೆ, ತೊಪ್ಪನ್ನ, ತಪ್ಪಅನ್ನ
ಪದ್ಯ ೨೭೧ ಗೆಯನಾರೆ ಗೆಯ್ಯಲಾರೆ

೧೬. ಬಾಲಯ್ಯ

ಪದ್ಯ ೨೭೨ ದರಮಸಾಲಿ ಧರ್ಮಶಾಲೆ
ಪದ್ಯ ೨೭೩ ಮಡ್ವಳ ಮಡಿವಾಳ
ಪದ್ಯ ೨೭೩ ಮಡುಕೊಳೂ ಮಡಿಮಾಡಿಕೊ
ಪದ್ಯ ೨೭೪ ಅಗುರತೆ ದೂರದಿಮದ ಜೋರು ಬಮದಿದ್ದರಿಂದ ಅಗಿವುದು.
ಪದ್ಯ ೨೭೫ ಕಡುದ ಕಡೆದ
ಪದ್ಯ ೨೭೫ ಕಡುಲೆದ್ದಿ ಕಡಲು ಏರಿ
ಪದ್ಯ ೨೭೫ ದೆನಿ ದನಿ
ಪದ್ಯ ೨೭೬ ದಂಡೂಗಿ ತೆಂಗಿನ ಮರದ ಬೊಡ್ಡೆಯ ಬಾವಿಯ ದಂಡಿಗೆ ನಿಂತು ನೀರನ್ನೆತ್ತಲು ಅಡ್ಡಹಾಕಿದ ತೆಂಗಿನ ಮರದ ಭಾಗ.
ಪದ್ಯ ೨೭೯ ತೊಡಿ ತುಟಿ
ಪದ್ಯ ೨೭೯ ಬದ್ನಿ ಕೊವ್ವಾ ಬದನೆಕೊಯ್ಯುವ
ಪದ್ಯ ೨೭೯ ಅಲದ್ಹೂಂಗ ಅರಳಿದ ಹೂವನ್ನು
ಪದ್ಯ ೨೮೦ ಜೇರುಗಿ ಮಾಯಿನ ಮರ ಜೀರಿಗೆ ವಾಸನೆಯಿರುವ ಮಾವಿನ ಮಿಡಿಗಳನ್ನು ಬೆಳೆವ ಮರ.

 ೧೭. ಬೀದಿಯ ಕಾಮಣ್ಣ

 

ಪದ್ಯ ೨೮೧ ಹಸರಿಟ್ಟ ಬಳೆಗಳ ಕಟ್ಟುಗಳನ್ನು ಹರಡಿಟ್ಟನು
ಪದ್ಯ ೨೮೫ ಹುಣೂಕಾಗಿ ಗುಣಕ್ಕಾಗಿ
ಪದ್ಯ ೨೮೮ ಕಡುಗ ಕಡಗ
ಪದ್ಯ ೨೮೮ ದರುವಳಿ ಧರ್ವೇಳಿ, ಬಯ್ಗಳ ಶಬ್ದ
ಪದ್ಯ ೨೮೮ ಲಂಗೂಡಿ ಲ+ ಅಂಗಡಿ
ಪದ್ಯ ೨೮೯ ಬತ್ತಾದೆ ಬರುತ್ತದೆ
ಪದ್ಯ ೨೯೧ ಮೆಣುಸಿ ಸಿದ್ದಾಪುರ ತಾಲೂಕಿನ ಒಂದು ಊರು.
ಪದ್ಯ ೨೯೩ ಸುಡುಮೂರೀ ಸಿಟ್ಟಾಗಿದ್ದವ? ಮೋರಿಹಳ್ಳು, ಕಾಲವೆಯ ಕಲ್ಲುಹರಳು
ಪದ್ಯ ೨೯೪ ಅಂಗೆಲ್ಲವೇನೋ ಅಂಗಿಯಿಲ್ಲವೇನೊ
ಪದ್ಯ ೨೯೫ ನಿತ್ತಾ ನಿಂತನು, ಕಸಬಗರಿ, ಕಸಬರಿಗೆ
ಪದ್ಯ ೨೯೮ ತಗಟೆ ತಕ್ಕಡಿ

 ೧೮. ಹಾದರಗಿತ್ತಿ

ಪದ್ಯ ೨೯೯ ಹೇರುಗಿ ಧರಿಸುವದು
ಪದ್ಯ ೨೯೯ ಶರಿಮಾತು ಎದುರುತ್ತರ ಕೊಡುವ ಮಾತು
ಪದ್ಯ ೩೦೧ ಹಗಳ ಹವಳ
ಪದ್ಯ ೩೦೨ ಅರುದಾ ಅರ್ಧ, ನಡುವೆ ಘಟ್ಟದಲ್ಲಿ
ಪದ್ಯ ೩೦೩ ಗಂಡಿ ಕಿಡಿಕಿಯ ರಂಧ್ರ
ಪದ್ಯ ೩೦೪ ಕೊಂಡಿ ಕುಂಡೆ, ತಿಗ, ಮುಕುಳಿ.
ಪದ್ಯ ೩೦೫ ಸಪ್ಪ ಸೊಪ್ಪನ್ನು
ಪದ್ಯ ೩೦೫ ನೆರದುಟ್ಟಿ ಸೇರಿಸಿ ಉಟ್ಟು
ಪದ್ಯ ೩೦೫ ಮಿಳಿ ಜೋಕಾಲಿ ಮಿಣಿ
ಪದ್ಯ ೩೦೭ ಮೊಟ್ಟಿ ಮೊಟ್ಟೆ
ಪದ್ಯ ೩೦೮ ದಾತ್ರೆ ರಾತ್ರಿ
ಪದ್ಯ ೩೦೯ ಸಾಸಯ್ಯಗಾರ ಸಾಹಸಗಾರ, ಸಬಿಗಾರ, ಸಭೆಗಾರ
ಪದ್ಯ ೩೧೦ ಕಡತಿಂಗಳ ಹಿಂದಿಂಗಳ
ಪದ್ಯ ೩೧೧ ತಾಟುಗ್ತಿ ತಾಟಗಿತ್ತಿ, ತಾಟಕಿ.
ಪದ್ಯ ೩೧೨ ಕೈಕಿ ಕೈಕೇಯಿ
ಪದ್ಯ ೩೧೩ ತೊಟ್ಟಿಲ್ಲದೆ ಹೂವಿನ ತೊಟ್ಟು ಇಲ್ಲದೆ
ಪದ್ಯ ೩೧೬ ಬಳುಗೂಡು ಸಾರಿಸುವಳು
ಪದ್ಯ ೩೧೭ ಜವನಾರಿ ಒಯ್ಯಾರಿ
ಪದ್ಯ ೩೧೮ ನಜ ಲಜ್ಜೆ
ಪದ್ಯ ೩೨೦ ಚಿಳ್ಳೊಳಗಿರವಾ ಕಬ್ಬನ ಎಲೆಗಳ ಮರೆಯಲ್ಲಿರುವ
ಪದ್ಯ ೩೨೧ ಕಲಿ ಕಲಿ, ಜಗಳತರುವವಳು
ಪದ್ಯ ೩೨೨ ನಜಭಂಡು ಲಜ್ಜೆಯಿಲ್ಲದ ಭಂಡಳು.

 ೧೯. ರಂಭೆ

ಪದ್ಯ ೩೨೩ ಅರಗು ಅರೆವ ಕಲ್ಲು
ಪದ್ಯ ೩೨೬ ಬುಡುತಾಗೆ ಬುಡದಲ್ಲಿ, ಬುಡದ ಹತ್ತರ
ಪದ್ಯ ೩೨೭ ಜಾತಿಕ್ದ ಜಾತಕಗಳ
ಪದ್ಯ ೩೨೭ ಗರುಡನ ಸಾದಿಕ, ಮುಡಿಯಾಳದ ಹಿಂಡಿನಲ್ಲಿ ಗರುಡನ ಹಾಗೆ ಹಾರಿ ಹೋಗಿ, ಕರ್ಯಸಾಧಿಸುವ ಯುಕ್ತಿ ಮಾಡುವದು.
ಪದ್ಯ ೩೨೮ ಬಗ್‌ತಲಿ ಬೈತಲೆ
ಪದ್ಯ ೩೩೦ ಚದುರ್ಯಾರ ಚದುರೆಯರು
ಪದ್ಯ ೩೩೦ ಬಣ್ಣ (ಬಿದಿರೆಲೆಗಳ ಹಸಿರು) ಬಣ್ಣದ ಸೀರೆ.

 ೨೦. ಸೊಸೆಯರು

ಪದ್ಯ ೩೩೩ ವಾದೀದರು ವಾದ್ಯದವರು
ಪದ್ಯ ೩೩೭ ಸೊದುದುಕ್ಕಾ ಸುಖ ದುಃಖ
ಪದ್ಯ ೩೩೯ ಸಂಜೀಕಾಲಿಗೆ ಸಂಧ್ಯಾಕಾಲದಲ್ಲಿ
ಪದ್ಯ ೩೪೦ ಸಮ್ತಿ ಸಮೆ (ದೀಪ)