೧. ಶಿವೇ ಸೋಬಾನೇ
ಪದ್ಯ ೧ | ಸಾರದಾ | ಶಾರದಾ |
ಪದ್ಯ ೧ | ಬಲಗೊಂಡು | ಸುತ್ತಲೂ ಪ್ರದಕ್ಷಿಣೆ ಹಾಕಿ |
ಪದ್ಯ ೧ | ಗಣನಾತ | ಗಣನಾಥ |
ಪದ್ಯ ೧ | ರಂಬ್ಯವ್ರೂ, ರಂಭೆಯವರು, ಸುಂದರಿಯರು | |
ಪದ್ಯ ೧ | ಗಂಧ ಸಾಲಕ್ಕಿ, ಸುಗಂಧವುಳ್ಳ ಸಣ್ಣಕ್ಕಿ. | |
ಪದ್ಯ ೨ | ಲಕ್ಕಿ | ಅಕ್ಕಿ |
ಪದ್ಯ ೨ | ಸೆಳಸೂತ | ಅಳೆಯುತ್ತ |
ಪದ್ಯ ೨ | ಚಿತ್ರಾಂಬರ ಕದುರು | ಬಣ್ಣ ಹಾಕಿದ ತೆನೆಯ ಚಿತ್ರ |
ಪದ್ಯ ೨ | ತೊಳಸು | ಕುಟ್ಟು. |
ಪದ್ಯ ೪ | ಚಂದಣ | ಚಂದನ; ವನಕಿ, ಒನಿಕೆ- ಗೇರು, ಹಸನಮಾಡು |
ಪದ್ಯ ೪ | ಪಂತಿಟ್ಟಿ | ಪಂತಿ (ಪಂಕ್ತಿ)ಯನ್ನಿಟ್ಟು |
ಪದ್ಯ ೪ | ಕೊಮರ | ಕುವರ. |
ಪದ್ಯ ೫ | ಗಂದದ ಬಹತಲಿ | ಗಂಧದ ಬೈತಲೆ |
ಪದ್ಯ ೫ | ಗಮನೀರಾ | ಗಮನೆಯರೇ, ಮಂದಗಮನೆಯರೇ, ಸುಂದರಿಯರೇ. |
೨. ಭತ್ತ ಮೆರಿದು ಅಕ್ಕಿ ಮಾಡುವದು
ಪದ್ಯ ೭ | ಯೆಷ್ಟು | ಎಷ್ಟು ಇಲ್ಲಿ ಎತ್ತು ಎಂದಿರಬೇಕು |
ಪದ್ಯ ೭ | ಹಂಡೆತ್ತು | ಮೈಮೇಲೆ ಬಿಳಿ ಬಣ್ಣದ ಪಟ್ಟಿಯಿದ್ದ ಎತ್ತು. |
ಪದ್ಯ ೮ | ಕೊಂಬೋರು | ಕೊಳ್ಳುವುದು |
ಪದ್ಯ ೯ | ಕೊರಸುಗಿ | ಕುಚ್ಚಿಗೆ ಅಕ್ಕಿ, ಭತ್ತವನ್ನು ನೀರಿನಲ್ಲಿ ಕೊರಿಸಿ (ಕುದಿಸಿ) ಒಣಗಿಸಿ ಕುಟ್ಟಿದ ಅಕ್ಕಿ |
ಪದ್ಯ ೯ | ತಟ್ಟೀಕಂಡಿ | ತೊಟ್ಟುಕೊಂಡು |
ಪದ್ಯ ೯ | ತೋಕಾಡಿ | ಚೆಲ್ಲಾಡಿ |
ಪದ್ಯ ೧೦ | ತಡವೆ | ಹಿಡಿಯುತ್ತೇನೆ |
ಪದ್ಯ ೧೦ | ಜಂತನುದಾ | ಯಂತ್ರದಂಥ. |
ಪದ್ಯ ೧೧ | ಬಳ್ಯರು | ಬಳಿಯವರು |
ಪದ್ಯ ೧೨ | ಯೆಸ್ರಾ | ಎಸರನ್ನು (ಅನ್ನ ಬೇಯಿಸಲು ನೀರನ್ನು) |
ಪದ್ಯ ೧೨ | ಕಡ್ಲಿಗೆ | ಕಡಲೆಯೊಡನೆ ಸೇರಿಸಿ ಕಜ್ಜಾಯ ಮಾಡಲು |
ಪದ್ಯ ೧೨ | ನೆಡಗಿನ | ನಡುವಿನ. |
ಪದ್ಯ ೧೩ | ದ್ವರೆಲ್ಲ | ರಂಧ್ರವಿಲ್ಲ. |
ಪದ್ಯ ೧೫ | ಹುಳ್ಸೊಪ್ಪು | ಹುಲ್ಲು ಮತ್ತು ಸೊಪ್ಪು |
ಪದ್ಯ ೧೫ | ನೆರ್ ತಿನ್ನೂ | ನರಿ ತಿನ್ನು (ತಿನ್ನಲಿ). |
೪. ರಾಗಿ ಬೀಸುವ ಹಾಡು
ಪದ್ಯ ೨೩ | ತುದಿಗೊಟ್ಟ | ತುದಿಗೂಟ |
ಪದ್ಯ ೨೩ | ಕಡಕಿ | ಬೀಸುವ ಕಲ್ಲಿನ ಕೆಳಗೆ ಇಡುವ ಬೆದಿರಿನ ಚಾಪೆ. |
ಪದ್ಯ ೨೫ | ಕುಂಬ್ರಿ | ಕುಮರಿ, ರಾಗಿ ಬಿತ್ತುವ ಗುಡ್ಡದ ಓರೆ |
ಪದ್ಯ ೨೫ | ಸುಂಡ್ಲಾ | ಸೊಂಡಿಲಿನ |
ಪದ್ಯ ೨೫ | ರೊಂಡ, ರುಮಡ | |
ಪದ್ಯ ೨೫ | ಇಳಗೂರು | ಪದ್ಯ ಕುತ್ತಿಗೆಯಿಂದ ಇಳಿಸುತ್ತಾರೆ. |
ಪದ್ಯ ೨೬ | ಮೆಂದಿ | ಮೆಲಿದು |
ಪದ್ಯ ೨೭ | ಯದಿಗಲ್ಲೇ | ಎದೆಗೆ ಬಡಿವ ಕಲ್ಲೇ. |
೫. ಅಪ್ಪನ ಮನೆ
ಪದ್ಯ ೨೯ | ಅಪ್ಪನರುಮಲ್ಲಿ | ಅಪ್ಪನ ಅರಮನೆಯಲ್ಲಿ |
ಪದ್ಯ ೩೦ | ಸುಕ್ರಾರ್ಕೂ | ಶುಕ್ರವಾರ ದಿನ |
ಪದ್ಯ ೩೨ | ತೆಂಗುಳಂದ್ | ಒಂದು ತಿಂಗಳು; |
ಪದ್ಯ ೩೨ | ತೆಳಿ | ತಿಳಿ. |
ಪದ್ಯ ೩೩ | ಕೊಡುಪಾನ | ತಾಮ್ರದ ಕೊಡ (ಬಿಂದಿಗೆ) |
ಪದ್ಯ ೩೩ | ಇಶೂರಿಗೆ | ಎಸರನ್ನಿಟ್ಟು ಅಕ್ಕಿ ಹೊಯ್ಯಲು. |
ಪದ್ಯ ೩೫ | ಮಜ್ಜನ | ಮಧ್ಯಾಹ್ನ |
ಪದ್ಯ ೩೭ | ಹಾವೇ | ಹಾಯುವೆ, ನೀರನ್ನು ಹಾದು ಹೋಗುವೆ |
ಪದ್ಯ ೩೭ | ಕೋಡೇ | ಕೂಡ |
ಪದ್ಯ ೩೮ | ಮನುವಾಲೆ | ವನವಾಗಲೆ |
ಪದ್ಯ ೩೯ | ಪಾವೀಸಂಬದ ಕೇಳಿ | ಪಾಯಸ ಮಾಡುವರೆಂದು ಕೇಳಿ |
ಪದ್ಯ ೪೦ | ವಡತಿಂಬೊ | ಒಡದು ತಿನ್ನುವಾ |
ಪದ್ಯ ೪೧ | ಹುಸಿ | ಸಣ್ಣ ಭಾಗ |
ಪದ್ಯ ೪೪ | ಅಡು | ಅಡಿಗೆ ಮಾಡು |
ಪದ್ಯ ೪೪ | ಹಂಡಿ | ಹಂಡೆ, ದೊಡ್ಡ ಅಡಕಿಲು |
ಪದ್ಯ ೪೪ | ಕಂಡೀಗಾ | ಖಂಡುಗ |
ಪದ್ಯ ೪೬ | ಯೆಲಿಶಂತೇ | ವೀಳ್ಯದೆಲೆ ಸಂತೆ. |
೬. ತಾಯಿ– ಮಕ್ಕಳು
ಪದ್ಯ ೪೭ | ಹಡುಗ್ಯೆದ್ದಿ | ಹಡಗು ಹೊರಟು |
ಪದ್ಯ ೪೭ | ನಂಗಾಲಿಕ್ಕದೆ | ನಂಗರ್ (ಲಂಗರು) ಹಡಗು ಹೋಗದೆ ನಿಲ್ಲುವಂತೆ ಲಂಗರು ಹಾಕಿದೆ |
ಪದ್ಯ ೪೭ | ಅಳವೆ | ನದಿ ಸಮುದ್ರ ಸೇರುವ ಭಾಗ |
ಪದ್ಯ ೪೮ | ದಿಷ್ಟಿ | ದೃಷ್ಟಿ |
ಪದ್ಯ ೪೮ | ಉಟ್ಟೊಲ್ಲಿ | ಉಟ್ಟ ಒಲ್ಲಿ (ದೋತರ) |
ಪದ್ಯ ೪೮ | ಶರುಗಾ | ಸೆರಗನ್ನು |
ಪದ್ಯ ೪೯ | ರತಿಬಳ್ಳೀ | ಸುಂದರ ಬಳ್ಳಿ |
ಪದ್ಯ ೪೯ | ಬೆಳಿಚಿಬ್ಬು | ಬಿಳಿಸಿಬ್ಬು. |
ಪದ್ಯ ೫೧ | ದೀವೂಗಿ | ದೀವಿಗೆ |
ಪದ್ಯ ೫೧ | ಯೆಣ್ಣಿ | ಎಣ್ಣೆ |
ಪದ್ಯ ೫೧ | ದೋರೀನಾ | ದೂರಿನ |
ಪದ್ಯ ೫೨ | ಆಕೆಸ | ಆಕಾಶ |
ಪದ್ಯ ೫೨ | ಬಿಡಗೀಗೆ | ಬೆಡಗಿಗೆ |
ಪದ್ಯ ೫೩ | ಉಂಗೀಲಾ | ಉಂಗುರ |
ಪದ್ಯ ೫೩ | ಅಗ್ರರದಾ ತೇರು | ಅಗ್ರಹಾರ ಊರಿನ ತೇರು (ಅಗ್ರಹಾರ ಹಳದೀಪುರ ಊರಿನ ಭಾಗ) |
ಪದ್ಯ ೫೪ | ಪೌರಾತ್ಕಿ | ಪುರೋಹಿತನ ಕೆಲಸ, ಪೌರೋಹಿತ್ಯ |
ಪದ್ಯ ೫೫ | ಮಾರ್ವಲ್ ಬಂದಾ | ಮಾರಲು ಬಂದ |
ಪದ್ಯ ೫೬ | ವಳ್ಳಿಗೆ | ಒರಳಿಗೆ |
ಪದ್ಯ ೫೬ | ಅಕ್ ಹೆಚ್ಚಾಲಿ | ಅಕ್ಕಿ ಹೆಚ್ಚಾಗಲಿ |
ಪದ್ಯ ೫೬ | ಮುತ್ತೈತಿರ್ | ಮುತ್ತೈದೆಯರು |
ಪದ್ಯ ೫೬ | ಕಳುಸಕ್ಕೆ | ಕಲಶ ಹಿಡಿಯಲಿಕ್ಕೆ. |
ಪದ್ಯ ೫೭ | ಲತ್ತೆ | ಅತ್ತೆ ಎಂಬುದಕ್ಕೆ ಲಕಾರ ಸೇರಿಸಿದ ಹಾಡಿನ ರೂಪ |
ಪದ್ಯ ೫೭ | ಹೋಬೇಡ | ಹೋಗಬೇಡ. |
ಪದ್ಯ ೫೯ | ಲಳಿ ಕೇಳಿ | ಅಳಿಯನು ಕೇಳಿ |
ಪದ್ಯ ೫೯ | ಸತ್ತುಗೆ | ಸತ್ತಿಗೆ. |
ಪದ್ಯ ೬೦ | ಮನ್ನಿದ್ದಿ | ಮನೆಯಲ್ಲಿಂದ. |
ಪದ್ಯ ೬೪ | ಗೌರಲು | ಗೌರಿ |
ಪದ್ಯ ೬೪ | ಕೆರು | ಕೆರೆ |
ಪದ್ಯ ೬೪ | ಬಳು ಬಂದಿ | ಹರಿದು ಬಂದು |
ಪದ್ಯ ೬೫ | ತಾಣಾದೀವುಗಿ | ತಾಣದೀವಿಗೆ |
ಪದ್ಯ ೬೬ | ದೋರೀನಾ | ದೂರಿನ, ದೂರದ |
ಪದ್ಯ ೬೭ | ಬಾದಿ | ಭಾರ |
ಪದ್ಯ ೬೮ | ಹಲಿ | ಚಿತ್ರ |
ಪದ್ಯ ೬೮ | ಲಾಯಿಸ | ಯಿಸ, ಆಯುಷ್ಯ |
ಪದ್ಯ ೬೯ | ಯೆಲ್ಲಾದ | ಇಲ್ಲದ |
ಪದ್ಯ ೬೯ | ವಸ್ತಿ | ವಸತಿ |
ಪದ್ಯ ೬೯ | ಉಳಿಬೌದು | ಉಳಿಯಬಹುದು. |
೭. ಅಣ್ಣ– ತಮ್ಮ
ಪದ್ಯ ೭೧ | ತಡದೆ | ಹಿಡಿದೆ, ತಡೆದೆ |
ಪದ್ಯ ೭೧ | ತಣ್ಣಿ | ತಂಗಳನ್ನ |
ಪದ್ಯ ೭೧ | ಸಂಗ್ರಮ್ದಾ | ಸಂಗ್ರಾಮದ, ಯುದ್ಧ ಮಾಡುವ |
ಪದ್ಯ ೭೨ | ವಪ್ಕಾರ | ಉಪಕಾರ |
ಪದ್ಯ ೭೨ | ಸತ್ತುಗೆ | ಛತ್ರಿಕೆ |
ಪದ್ಯ ೭೨ | ದುರ್ಪತಿ | ದ್ರೌಪದಿ, ಇಲ್ಲಿ ಹೆಂಡತಿ |
ಪದ್ಯ ೭೩ | ಜೊಳಕ | ಜಳಕ (ಸ್ನಾನ) |
ಪದ್ಯ ೭೩ | ಹರವ | ಹರಿವ |
ಪದ್ಯ ೭೪ | ಕಾಸಿ | ಕಾಸೆ |
ಪದ್ಯ ೭೪ | ನಡಕಟ್ಟು | ಕಟಿಗೆ ಸುತ್ತಿದ ಬಟ್ಟೆ |
ಪದ್ಯ ೭೫ | ಕಯಡಿ | ಕದಡಿ, ನೀರಿನಲ್ಲಿ ಸೇರಿಸಿ ತಿರುಗಿಸಿ |
ಪದ್ಯ ೭೫ | ಮಾಯ್ನಮೆಡಿ | ಮಾವಿನ ಮಿಡಿ |
ಪದ್ಯ ೭೫ | ತೊಪ್ಪ | ತುಪ್ಪ. |
ಪದ್ಯ ೭೭ | ವಗುಕೊಳ್ಳೊ | ಒಗೆದುಕೊಳ್ಳೊ |
ಪದ್ಯ ೭೭ | ಚೇಜಿ | ತೇಜಿ, ಕುದುರೆ |
ಪದ್ಯ ೭೭ | ಹೇರಿ | ಏರಿ. |
ಪದ್ಯ ೭೮ | ಕೋಡ್ | ಕೋಡ, ಕೂಡ, ಸಂಗಡ |
ಪದ್ಯ ೭೮ | ಪದ್ಯ ೮೧ | ಕಾಂಕಿ ಕಾಗೆ |
ಪದ್ಯ ೭೮ | ಕರುಕರು | ಕರಕರೆ, ಕೆಟ್ಟಸ್ವರ ತಳು, ತಳುಮಳ |
ಪದ್ಯ ೭೮ | ಬಾಸಿ | ಭಾಷೆ, ಕರಕರೆದನಿಯ ಅರ್ಥ |
ಪದ್ಯ ೭೮ | ಸುಳು | ಸುಳ್ಳು |
ಪದ್ಯ ೮೨ | ಕಾಟಕ | ಕಾಟ ಕೊಡುವವ(ರು) |
ಪದ್ಯ ೮೨ | ಜೀಕೀನ | ಸಾಕಿದ (ಕೊರಳುಪಟ್ಟಿಯಿರುವ) |
ಪದ್ಯ ೮೪ | ತಿಕ್ವದಕೂ | ತಿಕ್ಕುವದಕ್ಕೆ |
ಪದ್ಯ ೮೪ | ಅಂಬೂಬಲ | ಅಂಬು ಬಿಲ್ಲುಗಳನ್ನು |
ಪದ್ಯ ೮೫ | ಚಂದ್ರಾಣಿ | ಚಂದ್ರನಂತೆ ಚಂದವಾದ |
ಪದ್ಯ ೮೬ | ಮಾನಿಸು | ಧ್ಯಾನಿಸು, ವಿಚಾರಮಾಡು, ನೆನಪಿನಲ್ಲಿತರು |
ಪದ್ಯ ೮೭ | ರಣು | ಹಣ |
ಪದ್ಯ ೮೮ | ಬೆಳ್ಳಟ್ಟಿ ಹೂಮಗು | ಬಿಳಿಯ(ಬೆಟ್ಟದ)ಹೂ |
ಪದ್ಯ ೮೯ | ವೈಶಕ | ವೈಶಾಖ |
ಪದ್ಯ ೯೦ | ಮುಗಲರು | ಮೊಗಲರು |
ಪದ್ಯ ೯೧ | ರಂಜಕ | ಪಾದರಸ, ಕೋವಿಮದ್ದು |
ಪದ್ಯ ೯೧ | ಬೊಯ್ಡಿ | ಬುರುಡೆ. |
ಪದ್ಯ ೯೨ | ಈಡು | ಕೋವಿ ಗುಂಡು ಹಾರಿಸುವುದು. |
ಪದ್ಯ ೯೩ | ಹರುಬಳ್ಳಿ | ನೆಲಕ್ಕೆ ಹಬ್ಬಿದ ವೀಳ್ಯದೆಲೆ ಬಳ್ಳಿ |
ಪದ್ಯ ೯೩ | ಚಂಚಿ | ಸಂಚಿ, ವೀಳ್ಯ ಹಾಕುವ ಚೀಲ |
ಪದ್ಯ ೯೪ | ದಾಯ್ದಕಾರ | ದಾಯಾದಿ |
ಪದ್ಯ ೯೪ | ವಡ್ಲು | ಒಡಲು |
ಪದ್ಯ ೯೫ | ಕೊಂಬು | ಆನೆಯ ಕೋಡು (ಹಲ್ಲು) |
ಪದ್ಯ ೯೫ | ಸಂಗ್ರಮ | ಸಂಭ್ರಮ |
ಪದ್ಯ ೯೫ | ಕೊಂಬೇರಿ | ಕೊಂಬಿನಂತೆ ಏರಿ! |
ಪದ್ಯ ೯೭ | ಜೇಮ | ಜೀವ |
ಪದ್ಯ ೯೭ | ಸುರುಕರಕ್ | ಸರಕಾರದ ಕಚೇರಿಗೆ |
ಪದ್ಯ ೯೭ | ವಾಲಿ | ಪತ್ರ. |
ಪದ್ಯ ೯೮ | ಸುಳ್ಯ | ಸುಳಿಯ (ಹೆಂಡವನ್ನು ಇಳಿಸಲು) |
ಪದ್ಯ ೯೯ | ಕುಲು | ಕುಲ |
ಪದ್ಯ ೧೦೦ | ಹಲುಕಟ್ಟಾ | ಹುಲ್ಲಿನ ಕಟ್ಟನ್ನು |
ಪದ್ಯ ೧೦೦ | ಸೆಳುದಂತೆ | ಸೆಳೆ(ಎಳೆ)ದಂತೆ |
ಪದ್ಯ ೧೦೦ | ಬಲ್ಲಾದರು | ಬಲ್ಲವರು |
ಪದ್ಯ ೧೦೧ | ಸಿರಸಿ ಸೇವಮ್ಮ | ಸಿರಸಿ ಮಾರಿ, ಅಮ್ಮ (ಶಿವಮ್ಮ) |
ಪದ್ಯ ೧೦೧ | ಬಂಡಾರ | ಭಂಡಾರ, ಕುಂಕುಮ ಪ್ರಸಾದ |
ಪದ್ಯ ೧೦೧ | ಕರತ | ಕರ್ತ, ಪಾತ್ರ, ಯಜಮಾನ |
ಪದ್ಯ ೧೦೨ | ನಿಚ್ಚುರ | ? |
ಪದ್ಯ ೧೦೩ | ಸುಳ್ಯವ್ರು | ಸೂಳೆಯರು |
ಪದ್ಯ ೧೦೬ | ಚೇಜಿ | ತೇಜಿ, ಕುದುರೆ |
ಪದ್ಯ ೧೦೭ | ಬಣ್ಣಾಣೀ | ಬಣ್ಣನೆ |
ಪದ್ಯ ೧೦೮ | ಚೆನ್ನ | ಚಿನ್ನ |
ಪದ್ಯ ೧೦೯ | ವೋಟ | ಊಟ |
ಪದ್ಯ ೧೦೯ | ಕರಿ | ಕರೆ |
ಪದ್ಯ ೧೦೯ | ಕೂಟ | ಸಭೆ ಜಾತಿಯವರ ಸಭೆ |
ಪದ್ಯ ೧೧೦ | ವಂಬತ್ಯೇಳಿ | ಒಂಬತ್ತು ವೀಳಯ, ಕರೆವ ವೀಳಯ |
ಪದ್ಯ ೧೧೦ | ಕರಿ | ಕರೆ |
ಪದ್ಯ ೧೧೧ | ಯೆಸುರೆತ್ತು | ಅನ್ನಮಾಡಲು ಪಾತ್ರೆಯಲ್ಲಿ ಒಲೆಯ ಮೇಲೆ ನೀರನ್ನಿಡು |
ಪದ್ಯ ೧೧೧ | ಮನಿತಂಟೆ | ಮನೆಯ ತನಕ |
ಪದ್ಯ ೧೧೨ | ಗುಡಗುಟ್ಟು | ತೋರಣ ಹಾಕುವದು |
ಪದ್ಯ ೧೧೩ | ಸೋರಿ | ಸ್ವಾರಿ |
ಪದ್ಯ ೧೧೩ | ಪಾರ | ಪಹರೆ |
ಪದ್ಯ ೧೧೪ | ಕೋಟಿ | ಕೋಟೆ |
ಪದ್ಯ ೧೧೪ | ತಾಕತಾಕಿಲಿ | ಬಹಳ ಬೇಗ |
ಪದ್ಯ ೧೧೫ | ನೆಳ | ನೊಣ |
ಪದ್ಯ ೧೧೯ | ಕಲ್ಲೊಳ್ಳ | ಕಲ್ಲಿನ ಒರಳನ್ನು |
ಪದ್ಯ ೧೨೨ | ಶಳಗೆಂಟು | ಸೆಳೆಗಂಟು |
ಪದ್ಯ ೧೨೪ | ಮರಗಲ್ಬೇಡ | ಮರುಗಲು ಬೇಡ |
ಪದ್ಯ ೧೨೪ | ಸಾಪ | ಶಾಪ |
ಪದ್ಯ ೧೨೫ | ಕಾಕಿ | ಕಾಗೆ |
ಪದ್ಯ ೧೨೫ | ಕೆಲವದು | ಕೂಗುತ್ತದೆ |
ಪದ್ಯ ೧೨೬ | ದಂಟು | ದೊಣ್ಣೆ, ಶಣ್ಣಣ್ಣ, ಸಣ್ಣ ಸಣ್ಣ |
ಪದ್ಯ ೧೨೭ | ಅಟದೋರ | ಅಷ್ಟುದೂರ |
ಪದ್ಯ ೧೨೭ | ದೆನುಕಿನ | ದಿನದ |
ಪದ್ಯ ೧೨೮ | ಬಾಂಬೂಲಿ | ಬಾವುಲಿ, ಆಭರಣ |
ಪದ್ಯ ೧೨೮ | ಚಿಟಮುಟಗಿ | ಕ್ಯೆಂದುಗಿ, ಕೇದಿಗೆ |
ಪದ್ಯ ೧೨೮ | ಕರಡುಗೆ | ಕರಡಿಗೆ |
ಪದ್ಯ ೧೨೯ | ಕಾರಿ | ಕಾರೆಗಿಡದ |
ಪದ್ಯ ೧೨೯ | ಹೆಟ್ಟೆ | ನಟ್ಟು |
ಪದ್ಯ ೧೩೦ | ಹಿಂಡ್ತಿನ್ನೆಟ್ಟು | ಹೆಂಡತಿ ಇನ್ನೆಷ್ಟು |
ಪದ್ಯ ೧೩೦ | ಹಟಬಿ | ಗಟ್ಟಿಗಿತ್ತಿ |
ಪದ್ಯ ೧೩೧ | ರತುರಂಬೆ | ರತಿರಂಭೆ, ಸುಂದರಿ |
ಪದ್ಯ ೧೩೧ | ದೊರಗೊಳು | ದೊರೆ |
ಪದ್ಯ ೧೩೩ | ಯೆಲಿ | ಎಲೆ |
ಪದ್ಯ ೧೩೩ | ರಿತಿ | ರುಚಿ |
ಪದ್ಯ ೧೩೩ | ಕೋಡಿನ್ನೆ | ಕೂಡ ಇನ್ನು |
ಪದ್ಯ ೧೩೩ | ಬಾಳಿಸುಳ್ಯಂಗೆ | ಬಾಳೆಸುಳಿಯಂತೆ. |
ಪದ್ಯ ೧೩೪ | ಯೆತ್ತಾ | ಎತ್ತನ್ನು |
ಪದ್ಯ ೧೩೫ | ಚಂದವರ | ಚಂದಾವರ, ಪ್ರಸಿದ್ಧ ಐತಿಹಾಸಿಕ ಊರು ಹೊನ್ನಾವರ ತಾಲ್ಲೂಕು. |
ಪದ್ಯ ೧೩೬ | ನೆಡಗೆ | ನಡುವೆ |
ಪದ್ಯ ೧೩೬ | ಬೆಗರೂವ | ಬೆವರುತ್ತಾನೆ |
ಪದ್ಯ ೧೩೭ | ಶೇಗಿ | ಸೀಗೆ |
ಪದ್ಯ ೧೩೭ | ಯೆಲು | ಎಲೆ ಶಬ್ದದ ಹಾಡಿನಲ್ಲಿನ ರೂಪ |
ಪದ್ಯ ೧೩೯ | ಮಾಸಿದ್ರೂ | ಮಾಸಿದರೂ |
ಪದ್ಯ ೧೩೯ | ಅಳವೆಲ್ಲ | ಅಳಿವಿಲ್ಲ |
ಪದ್ಯ ೧೪೦ | ಮಡ್ಕಿ | ಮಡಿಕೆ |
ಪದ್ಯ ೧೪೦ | ದಡಕಂಬಾದು | ದಡಕ್ ಎಂಬ ಶಬ್ದವಾಗುವುದು |
ಪದ್ಯ ೧೪೦ | ಅಡಕತ್ತಿಲಿ | ಅಡಕೊತ್ತಿನಲ್ಲಿ |
ಪದ್ಯ ೧೪೦ | ವಡದಂತೆ | ಒಡೆದಂತೆ |
ಪದ್ಯ ೧೪೦ | ಮಿಡಕಾಡು | ಅಗಳಾಡುವ ಹಾರುವ. |
೯. ಅತ್ತಿಗೆ
ಪದ್ಯ ೧೪೩ | ಮುಕ್ವದ್ರ | ಮುಕ್ಕುವವಳ |
ಪದ್ಯ ೧೪೩ | ತೊಳೊಕೆ | ತೊಳೆಯಲು |
ಪದ್ಯ ೧೪೩ | ಬೆಕ್ಕಂದಿ | ಬೆಕ್ಕೆಂದು |
ಪದ್ಯ ೧೪೩ | ಲ್ಹೊಡುದ | ಹೊಡೆದನು |
ಪದ್ಯ ೧೪೩ | ಬೇಸರಿ | ಬೇಸರಿಕೆ |
ಪದ್ಯ ೧೪೩ | ಅಕು | ಅಕ್ಕ ಎಂಬ ಶಬ್ದದ ಹಾಡಿನ ರೂಪ |
ಪದ್ಯ ೧೪೩ | ಉಡುಕಾ | ? |
ಪದ್ಯ ೧೪೩ | ಒಡಕು | ? |
ಪದ್ಯ ೧೪೭ | ಬಣ್ಣಿ | ಅಡಿಗೆ ? |
ಪದ್ಯ ೧೪೭ | ಮಡುಗಾನೆ | ಇಟ್ಟಿದ್ದೇನೆ |
ಪದ್ಯ ೧೪೭ | ಪಾಪಗೆಟ್ | ಪಾಪಕೆಟ್ಟ, ಬಹಳಕೆಟ್ಟ |
ಪದ್ಯ ೧೪೮ | ರಾಕಸ್ತಿ | ರಾಕ್ಷಸಿ ಮಿಲದ್ಹೋಗು, ಮೆಲಿದು ಹೋಗು |
ಪದ್ಯ ೧೪೯ | ಅಕು | ಅಕ್ಕಿ, ಎಂಬುದರ ಹಾಡಿನ ರೂಪ |
ಪದ್ಯ ೧೪೯ | ವಳ್ಳಕೆ | ಒರಳಿಗೆ |
ಪದ್ಯ ೧೫೦ | ಬಂಡಿಯ | ಹಾಸ್ಯ ಮಾಡುವ |
ಪದ್ಯ ೧೫೦ | ಹಳುದಳೆ | ಹಳಿದಳು |
ಪದ್ಯ ೧೫೧ | ಗಿವಚಿ | ಕಿವುಚಿ |
ಪದ್ಯ ೧೫೧ | ಕೊಳಕೂಲಟ್ಟೀದೆ | ಹೊಲಸು ಅಡಿಗೆ ಮಾಡಿದೆ |
ಪದ್ಯ ೧೫೨ | ತೊಂಡಿಗೆ | ತೊಂಡೆಬಳ್ಳಿಗೆ |
ಪದ್ಯ ೧೫೨ | ಬವ್ವನೆ | ಬಯ್ಯುವನ |
ಪದ್ಯ ೧೫೨ | ಮಾಯ್ನ | ಮಾವಿನ |
ಪದ್ಯ ೧೫೨ | ಸುಸಲು | ಉಸಿರು |
ಪದ್ಯ ೧೫೨ | ಅರ್ತ | ಅರ್ಥ |
ಪದ್ಯ ೧೫೪ | ಬಂಡಾಗಬೇಡ | ಅವಹೇಳನಕ್ಕೆ ಗುರಿಯಾಗಬೇಡ |
ಪದ್ಯ ೧೫೫ | ಕಾಡ್ಕೇರಿ | ಬಂದಳಿಕೆ? ಕೆಟ್ಟ ಬಳ್ಳಿ? |
ಪದ್ಯ ೧೫೫ | ಗೋಡಾ, ಗೋಡೆ? ಕುದುರೆ? | |
ಪದ್ಯ ೧೫೬ | ಕರಡದ್ ಪಿಂಡಿ | ಕರಡದ ಹುಲ್ಲಿನ ಹೊರೆ |
ಪದ್ಯ ೧೫೬ | ಚೆಚ್ಚರೆ | ಹೊತ್ತರು |
ಪದ್ಯ ೧೫೭ | ಸಪುರ | ಸೀರಾದವಳು |
ಪದ್ಯ ೧೫೭ | ಇಸ್ತರ | ವಿಸ್ತರ, ವೇಷಗಾರಿಕೆ |
ಪದ್ಯ ೧೫೯ | ನೇಲುಗಿ | ನಾಲಿಗೆ |
ಪದ್ಯ ೧೫೯ | ಯೆಣ್ಣೆದ್ರೆ | ಎಣೆಸಿದರೆ |
ಪದ್ಯ ೧೬೦ | ಹಾವಿಸ | ಹಾವಸೆ |
ಪದ್ಯ ೧೬೦ | ಚೌವುಡಿ | ಸಭೆ |
ಪದ್ಯ ೧೬೨ | ಮದ್ಯೆ | ಮದಿವೆಯನ್ನು |
ಪದ್ಯ ೧೬೨ | ಮದಿ | ಮದುವೆ |
ಪದ್ಯ ೧೬೨ | ದಿಪು | ದೀಪ |
ಪದ್ಯ ೧೬೨ | ವರು | ವರಸಾಮ್ಯ |
ಪದ್ಯ ೧೬೩ | ಕಾವುಲುಗಿ | ಕಬ್ಬಿಣದ ಹೆಂಚಿನ |
ಪದ್ಯ ೧೬೩ | ರಿತಿ | ರುಚಿ |
ಪದ್ಯ ೧೬೫ | ಕತ್ತೂರು | ಸುಟ್ಟು ಹೋಗುತ್ತದೆ |
ಪದ್ಯ ೧೬೮ | ಯೆರುದೀವೆ | ದೋಸೆ ಎರೆದಿದ್ದೇನೆ |
ಪದ್ಯ ೧೬೯ | ತುಂಬಿಸೊಪ್ಪಟ್ಟೀವೆ | ತುಂಬೆಎಲೆ ಪಲ್ಯಮಾಡಿದ್ದೇನೆ |
ಪದ್ಯ ೧೭೦ | ಬೋಳಮ್ಟಿಕಾಯಿ | ಅಮಟೆಕಾಯಿ |
ಪದ್ಯ ೧೭೦ | ಬೆಳಿಶಟ್ಲೆ | ಬಿಳಿಸಿಗಡಿ |
ಪದ್ಯ ೧೭೦ | ಕೋಡಮಟೆ | ಕಾಡು ಅಮಟೆ, ಬಳಬಿಟ್ಟೇ, ಹರಿದು ಹೋಗುವ ಹಾಗೆ ಹಾಕಿದೆ |
ಪದ್ಯ ೧೭೧ | ದಿಮಕಾ | ದಿಮಾಕು ? |
ಪದ್ಯ ೧೭೪ | ಅತ್ತಲೂದಾ | ಹಿತ್ತಿಲಿನ |
ಪದ್ಯ ೧೭೫ | ಕೇಸು | ಕೇಶ, ಕೂದಲು |
ಪದ್ಯ ೧೭೫ | ಬಾಮ | ಸೌಂದರ್ಯ |
ಪದ್ಯ ೧೭೫ | ನಳನುಳಿ | ಬಹಳ ನವಿರು |
ಪದ್ಯ ೧೭೬ | ಕೊನಿಯೂಂಗು | ಅಡಿಕೆ ಕೊನೆಯ (ಗೊನೆ)ಹೂ |
ಪದ್ಯ ೧೭೬ | ಬೂರಿಲ್ಲ | ಅಂಡವಿಲ್ಲ, ತೂತ್ ಗೈಟೆ, ತೂತಾದ ಪರಟೆ |
ಪದ್ಯ ೧೭೭ | ತೊಟ್ಟಿಕಾಯ್ | ಒಂದು ಜಾತಿಯ ಔಷಧಕ್ಕೆ ಉಪಯುಕ್ತವಾದ ಗಿಡದ ಕಾಯಿ; ಅದು ಬೆಳವಲಕಾಯಿಯೆಷ್ಟು ದೊಡ್ಡದು |
ಪದ್ಯ ೧೭೭ | ತೊಟ್ | ತೊಟ್ಟು, ಮೊಲೆಯ ಚೂಚಕ |
ಪದ್ಯ ೧೭೭ | ಗೋಟ್ಟೆಕೆ | ಒಂದು ಜಾತಿಯ, ಕಾಯಿಗಿಡ, ಅದರ ಎಲೆಯ ಬುಡದಲ್ಲಿಯೂ ಕಾಯಿಯ ಬುಡದಲ್ಲೂ ಹಾಲಿನಂಥ ಜಿಗುಟು ರಸ ಬರುತ್ತದೆ, ತಿನ್ನಲಾಗುವದಿಲ್ಲ. |
ಪದ್ಯ ೧೭೮ | ಗೊಡ್ಡಿ | ಗುಡ್ಡ |
ಪದ್ಯ ೧೭೮ | ಸನ್ನೇಸಿಕೊಲೆ | ಸನ್ಯಾಸಿ ಕೊಲ್ಲಲ್ಪಟ್ಟು ಸರಿಯಾದ ಸಂಸ್ಕಾರವಿಲ್ಲದೆ ದೆವ್ವವಾಗುವೆನೆಂದು ನಂಬಿಕೆ |
ಪದ್ಯ ೧೭೮ | ಕೊಲೆ | ಕೊಲೆಯಾದವರ ದೆವ್ವ |
ಪದ್ಯ ೧೭೯ | ಕಟು | ತೀಕ್ಷ್ಣ, ಇಲ್ಲಿ ಆರೋಗ್ಯಕರವಲ್ಲ? |
ಪದ್ಯ ೧೭೯ | ಗೋಡಿ, ಗೋಡೆ | |
ಪದ್ಯ ೧೮೦ | ಉರಗಣ್ಣು | ಉರಿಗಣ್ಣು |
ಪದ್ಯ ೧೮೦ | ರೂಪತಿ | ರೂಪವತಿ? |
ಪದ್ಯ ೧೮೦ | ವೊಂದರುಗಳುಗೆ | ಒಂದು ಅರೆಗಳಿಗೆ |
ಪದ್ಯ ೧೮೧ | ವರುಗೀದರಾಚೆ | ಒರಗಿದರೆ, ಮಲಗಿದರೆ ಆಚೆ |
ಪದ್ಯ ೧೮೧ | ಕದನ | ಯುದ್ಧ? |
ಪದ್ಯ ೧೮೧ | ತೊಪ್ಪಿಲ | ತೊಪ್ಪಲು |
ಪದ್ಯ ೧೮೧ | ಮನ್ಯಾಚಿ | ಮನೆಯ ಆಚೆ. |
೧೦. ನಲ್ಲ – ನಲ್ಲೆ
ಪದ್ಯ ೧೮೬ | ಅಸುಮಾನ | ಅಸಮಾನ? |
ಪದ್ಯ ೧೮೬ | ಮಸ್ದು | ಮಸೆದು |
ಪದ್ಯ ೧೮೭ | ವರಗಾರೆ | ಒರಗಿದ್ದಾರೆ |
ಪದ್ಯ ೧೮೭ | ಬಣ್ಣ | ಬಣ್ಣನೆ |
ಪದ್ಯ ೧೮೭ | ಯಬಸ್ಯಾಲಿ | ಎಬ್ಬಿಸಲಿ |
ಪದ್ಯ ೧೮೭ | ಕೊಡೆಯಳ | ಕೊಡಿಯಾಳ, ಒಂದು ಊರು. |
ಪದ್ಯ ೧೮೮ | ಉಳೂಲ್ | ಉರುಳೂ? |
ಪದ್ಯ ೧೮೯ | ಶಂತೊಶು | ಸಂತೋಷ |
ಪದ್ಯ ೧೯೨ | ಈಸಾಳುಕ್ಕಿ | ಎಸಳು ಉಕ್ಕಿ ಚೆಲ್ಲಿ |
ಪದ್ಯ ೧೯೨ | ಪವಾಡ | ತಲೆದೊಡುಗೆ? ಬಟ್ಟೆ |
ಪದ್ಯ ೧೯೩ | ಬಳ್ಳಿ | ಬೆಳ್ಳಿ |
ಪದ್ಯ ೧೯೩ | ಕುಟ್ಟಿ ಬಾ | ಕೊಟ್ಟು ಬಾ. |
ಪದ್ಯ ೧೯೫ | ಬೂಸಣ | ಭೂಷಣ |
ಪದ್ಯ ೧೯೭ | ಬದ್ರೆ | ಭದ್ರೆ, ಒಳ್ಳೆಯವಳೇ, ಸುಭದ್ರೆ? |
ಪದ್ಯ ೧೯೮ | ಮೋವ, ಮೋಹ | |
ಪದ್ಯ ೧೯೯ | ಅಸ್ವಂತ | ಅಶ್ವತ್ಥ, (ನಾರಾಯಣ) ಹೆಸರು |
ಪದ್ಯ ೧೯೯ | ಲಾಡೀ | ಆಡಿ ಎನ್ನಲು “ಲ” ಪ್ರಾರಂಭದಲ್ಲಿ ಸೇರಿಸಿದೆ |
ಪದ್ಯ ೨೦೦ | ಕಪ್ಡಾ | ಕಪ್ಪಡ, ಸೀರೆ |
ಪದ್ಯ ೨೦೧ | ಸೋದಿಸಿ | ಶೋಧಿಸಿ |
ಪದ್ಯ ೨೦೩ | ವಂದ್ ಪಟ್ಟೆ | ಒಂದು ಸಲ |
ಪದ್ಯ ೨೦೪ | ನೆರಕು | ನರಳು, ಮೈ ಮುರಿ |
ಪದ್ಯ ೨೦೪ | ಕುಸುರು | ಕೊಸರು, ತಕರಾರು ಮಾಡು |
ಪದ್ಯ ೨೦೪ | ಪತ್ಯ | ಪಥ್ಯ |
ಪದ್ಯ ೨೦೫ | ಗಡ್ಯಹಬ್ಬ | ಗಡಿಹಬ್ಬ, ಮಳೆಗಾಲದ ಪ್ರಾರಂಭದ ಹಬ್ಬ |
ಪದ್ಯ ೨೦೫ | ಹೊಡ್ಯ | ಹುಡಿಯನ್ನು ಹುಡಿಯಲ್ಲಿ ಹೊರಳಾಡುವೆನೆಂಬ ಹರಕೆ? |
ಪದ್ಯ ೨೦೬ | ಕಡುಗಣ್ಣು | ಕಡೆಗಣ್ಣು |
ಪದ್ಯ ೨೦೮ | ಉಪ್ಪಿದೆ | ಒಪ್ಪಿದೆ |
ಪದ್ಯ ೨೦೬ | ಯೆಂಜ್ಲ | ಎಂಜಲು |
ಪದ್ಯ ೨೦೬ | ಗಜಮೂಕ, ಗಜಮುಖ, ಗಣಪತಿ | |
ಪದ್ಯ ೨೧೦ | ಸೋವು | ಸೋಹು, ತಂತ್ರ |
ಪದ್ಯ ೨೧೧ | ಜೇರೂಗಿ | ಜೀರಿಗೆ |
ಪದ್ಯ ೨೧೨ | ಕಂಬಿಡಿದಿ | ಕಂಬಿ, ಗದ್ದೆಯಕಂಬಿ, ಸೆರಗು ಹಿಡಿದು |
ಪದ್ಯ ೨೧೩ | ಗಂಡನರ | ಗಂಡನ |
ಪದ್ಯ ೨೧೩ | ಮನ್ನೆ | ಮನೆಯಲ್ಲಿ |
ಪದ್ಯ ೨೧೩ | ಕೋಡಿರುವ | ಕೂಡ ಇರುವ. |
ಪದ್ಯ ೨೧೪ | ನೆಂಪು ನೆನಪು | ನುಣುಪು? |
ಪದ್ಯ ೨೧೪ | ನೆಲನೆಂಪು | ನೆಲದ |
ಪದ್ಯ ೨೧೪ | ಹಳ್ಳಿಲ್ಲ | ಹಳ್ಳವಿಲ್ಲ |
ಪದ್ಯ ೨೧೫ | ಗಾಡಾಗಲೆ | ಬೇಗನೆ ಆಗಲಿ |
ಪದ್ಯ ೨೧೬ | ಅಂಗೆಲ್ಲವೇನೋ | ಅಂಗಿ ಇಲ್ಲವೇನೊ |
ಪದ್ಯ ೨೧೪ | ಮಯಿನಗೆ | ಮೈಯಲ್ಲಿ |
ಪದ್ಯ ೨೧೯ | ಕೆಮಿವಂಟಿ | ಕಿವಿಯ ಒಂಟಿ, ಆಭರಣ |
ಪದ್ಯ ೨೨೧ | ಶರಮಾಡಿ | ಖರ್ಚುಮಾಡಿ |
ಪದ್ಯ ೨೨೩ | ಸೂಳಗಾರ್ನ | ಸೂಳೆಗಾರನ, ವೇಶ್ಯೆಯ ಸಹವಾಸ ಮಾಡುವವನ್ನು |
ಪದ್ಯ ೨೧೪ | ಮಂಡಿ | ಕೂದಲು ಸುಳುದಾರೆ, ಸುಳಿದರೆ |
ಪದ್ಯ ೨೧೪ | ಮಾ ಮಾದುಗಾರ | ಮಹಾ ಮಾಟಗಾರ |
ಪದ್ಯ ೨೧೪ | ಸೂಲಗಾರ ಸಂಪೂಗಿ | ಸೂಳೆಸಂಪಿಗೆಯೆಂಬ ಹೂ |
ಪದ್ಯ ೨೨೪ | ಪದಾರ್ತ | ಮೇಲೋಗರ |
ಪದ್ಯ ೨೨೪ | ವಳಗದೆ | ಒಳಗಿದ್ದಾಳೆ |
ಪದ್ಯ ೨೨೪ | ವಾರನ ನಾರ್ಯವ್ರಾ | ಓರಿಗೆಯ ನಾರಿಯರ |
ಪದ್ಯ ೨೨೫ | ಇಸಲಾತಿ | ಸ್ವಾತಿ? ಸಕಲಾತಿ, ಒಂದು ಕೆರೆ |
ಪದ್ಯ ೨೨೬ | ಹೂಡು | ಉಳು ವಾರ್ಲಾ, ನೆಗಿಲಿನ ಎತ್ತುಗಳ ಜತೆ |
ಪದ್ಯ ೨೨೭ | ಲೀಸೂನೇಗಿಲ | ನೇಗಿಲು |
ಪದ್ಯ ೨೨೭ | ಲಾರಣ | ಅರಣ್ಯ |
ಪದ್ಯ ೨೨೮ | ತಟ್ಟಿ | ತೆಂಗಿನ ಮಡಲುಗರಿಗಳ (ಗುಡಿಸಿಲಿನ) ಗೋಡೆ |
ಪದ್ಯ ೨೨೯ | ಹುರ್ಯಾ | ಹುರಿಹಗ್ಗದ |
ಪದ್ಯ ೨೩೦ | ಪಾಗರ | ಪಾಗಾರ |
ಪದ್ಯ ೨೩೪ | ವೈರತ | ವೈರತ್ವ, ಹಗೆತನ |
Leave A Comment