ಹಾಲಿನ ತೆನೆ” ಜಾನಪದ ತ್ರಿಪದಿಗಳ ಸಂಕಲನ: ಉತ್ತರ ಕನ್ನಡದ ಬತ್ತದ ಹಾಲಿನ ತೆನೆಗಳ ಗೊಂಚಲಿನ ಸಂಕಲನ.

ಇದನ್ನು ಪ್ರಕಟಣೆಗೆ ತೆಗೆದುಕೊಂಡಿರುವದಕ್ಕಾಗಿ ಕರ್ನಾಟಕ ವಿಶ್ವವಿದ್ಯಾಲಯದ ಪ್ರಕಟಣ ಸಮಿತಿಯ ಸದಸ್ಯರಿಗೂ, ಜಾನಪದ ಸಂಗ್ರಹ ಪ್ರಕಟಣ ವಿಷಯದಲ್ಲಿ ವಿಶೇಷ ಅಸ್ಥೆಯನ್ನು ತೋರಿಸುತ್ತಿರುವ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥರಾಗಿರುವ ಶ್ರೀ (ಡಾ) ಎಂ. ಎಸ್. ಸುಂಕಾಪುರ ಅವರಿಗೂ ಸನ್ಮಾನ್ಯ ಕುಲಪತಿಗಳಾಗಿರುವ ಡಾ. ಆರ್. ಸಿ. ಹಿರೇಮಠ ಅವರಿಗೂ ಕುಲಸಚಿವ ಶ್ರೀ ಕೆ. ಪಿ. ಸುರೇಂದ್ರನಾಥ ಅವರಿಗೂ ಸಂಕಲನಕಾರನು ತುಂಬ ಕೃತಜ್ಞನಾಗಿದ್ದಾನೆ.

ಈ ಪುಸ್ತಕ ಪ್ರಕಟಣೆಯ ಸಂದರ್ಭದಲ್ಲಿ ವಿಶೇಷ ಆಸಕ್ತಿಯನ್ನು ತೋರಿರುವ ಪ್ರಕಟಣ ವಿಭಾಗದ ವರಿಷ್ಠರಾಗಿರುವ ಶ್ರೀಮಾನ್ ಚೆನ್ನವೀರ ಕಣವಿಯವರಿಗೂ ಉಪನಿರ್ದೇಶಕರಾಗಿರುವ ಶ್ರೀ ಎಸ್. ಬಿ. ನಾಯಕ ಅವರಿಗೂ ಸಂಪಾದಕನ ವಿಶೇಷ ವಂದನೆಗಳು ಸಲ್ಲುತ್ತವೆ.

ಕೊನೆಯದಾಗಿ, ಗ್ರಂಥವನ್ನು ಅಂದವಾಗಿ ಮುದ್ರಿಸಿದ ಆಕಳವಾಡಿ ಅಚ್ಚು ಕೂಟದ ಕೆಲಸಗಾರರಿಗೂ, ವ್ಯವಸ್ಥಾಪಕರಾಗಿರುವ ಶ್ರೀ ಎ. ಎಲ್. ಆಕಳವಾಡಿ ಅವರಿಗೂ ಅನಂತ ವಂದನೆಗಳು.

ಬತ್ತ ಕುಟ್ಟುವ ಕಾಯಕವು ಮರೆಯಾಗುತ್ತಿರುವ ಈ ಯಂತ್ರಯುಗದಲ್ಲಿ ಈ ಒನಕೆವಾಡುಗಳ ಕುರಿತು ಆಸ್ಥೆಯನ್ನು ಉಳಿಸಿಕೊಂಡಿರುವ ಓದುಗರಿಗೆ ಹಾಡು ಗಾರ್ತಿಯರ ಪರವಾಗಿಯೂ ವೈಯಕ್ತಿಕವಾಗಿಯೂ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ.

ಎಲ್. ಆರ್. ಹೆಗಡೆ
೧೮-೦೬-೧೯೭೭.