ರ‍್ಯರೇ, ಶ್ರೀ ರೇವಣಸಿದ್ಧೇಶ್ವರ ಸಾಂಪ್ರದಾಯಕರಾದ ಗೊಬ್ಬೂರು ಗುರುವಿನ ಬಸಮ್ಮನವರು ಧನಸಹಾಯಗೈದು ಪ್ರೋತ್ಸಾಹಿಸಿದರಿಂದ ನಾನು ಸಮುದ್ರದಲ್ಲಿರ್ಪ ಮೌಕ್ತಿಗಳನ್ನು ತಂದು ದಾರದಾಧಾರದಿಂದ ಹಾರವನ್ನುಗೈದಂತೆ ಪಂಡತಿರ ಸನ್ನಿಧಿಗೆ ಪೋಗಿ ಪೂರ್ವಕವಿಗಳಿಂದುಕ್ತಮಾದ ಉದ್ಗ್ರಂಥಗಳಲ್ಲಿರ್ಪ ಆಧಾರಗಳಿಂದಲೂ, ಕವಿಕುಲತಿಲಕರಾದ ಬೊಮ್ಮ ಕವಿಗಳಿಂದುಕ್ತಮಾದ ಶ್ರೀ ರೇವಣಸಿದ್ಧೇಶ್ವರನ ಕಥಾಶಕ್ತಿಯಿಂದಲೂ, ಶ್ರೀಗುರು ಶರಭೇಶ್ವರನ ಪ್ರಸಾದದಿಂದಲೂ ಆ ಬೊಮ್ಮಕವಿಗಳು ರಚಿಸಿದ ಲೀಲೆಗಳನ್ನು ಸಂಕ್ಷಿಪ್ತವಾಗಿ ವರ್ಣಿಸಿ, ಶ್ರೀ ಸಿದ್ಧೇಶ್ವರನು ಹಾಲ್ಮತದಲ್ಲಿ ತೋರಿದ ಸಲ್ಲೀಲೆಗಳನ್ನು ವಿಸ್ತಾರವಾಗಿ ಬಿಡಿಗನ್ನಡ ನುಡಿಗಳಿಂದಲೂ, ಸುಲಭ ಶೈಲಿಯಿಂದಲೂ ಸರ್ವರಿಗೂ ಗೋಚರವಾಗುವಂತೇ ಲೋಕೋಪಕಾರಕ್ಕೂ, ಮತೋದ್ಧಾರಕ್ಕೂ ವಿಸ್ತಾರವಾಗಿ ಹೇಳಿ ೯ ಅಧ್ಯಾಯವಾಗಿ ಅಲ್ಪಮತಿಗೆ ತೋಚಿದಷ್ಟು ರಚಿಸಿರುವೆನು. ಕಬ್ಬು ವಕ್ರವಿದ್ದಾಗ್ಯೂ ಅದರಲ್ಲಿರುವ ಸವಿರಸವನ್ನು ಪಾನಮಾಡಿ ಆನಂದಪಡುವ ಆಪೇಕ್ಷರಂತೆ ಈ ಕವಿತ್ವವು ಪದ ಬಂಧ ಯತಿ ಪ್ರಾಸಾದಿಗಳಿಂದ ವಕ್ರಮಾಗಿದ್ದಾಗ್ಯೂ ಅರ್ಧಾಂಶ ರಸವನ್ನು ಸ್ವೀಕರಿಸಿ ಆನಂದ ಪಡುವುದೇ ಸೂಜ್ಞರ ಸನ್ಮಾರ್ಗವು. ಯದ್ಯಾಪಿ ಇದರಲ್ಲಿ ಸ್ಖಾಲಿತ್ಯಗಳಿದ್ದರೂ ಇರಬಹುದು. ಪಂಡಿತರು ಅವುಗಳನ್ನು ತಿದ್ದಿ ತೋರಿದರೆ ೨ನೆಯಾವೃತ್ತಿ ಮುದ್ರಿಸುವಲ್ಲಿ ಸರಿಪಡಿಸಿ ತಮ್ಮ ಆಭಾರಿಯಾಗುವೆನು.

೫೦೦ ವರ್ಷಗಳ ವಳಗಡೆಯಲ್ಲಿ ಬರೆದು ಹಾಕಿದ ತಾಳವಾಲೆ ಲೇಖನಗಳು ದೊರೆತದರಿಂದ ಅವುಗಳನ್ನು ವಿಶದವಾಗಿ ನೋಡಿ ಬಲ್ಲ ಪಂಡಿತರಿಗೆ ತೋರಿಸಿ ಸಪ್ರಮಾಣವಾಗಿರುವವನ್ನೇ ಇದರಲ್ಲಿ ಕೂಡಿಸಲ್ಪಟ್ಟಿರುವೆನು. ಎಷ್ಟೊ ರೂಢಿಯಲ್ಲಿ ನಡೆಯತಕ್ಕ ಆಚಾರಗಳಿಗನುಕೂಲವಾದ ಆಧಾರ ಗ್ರಂಥಗಳು ಸಧ್ಯಕ್ಕೆ ಸಿಗದ ಮಟ್ಟಿಗೆ ಬಿಟ್ಟಿರುವೆನು. ಮುಂದೆ ದೈವಾನುಕೂಲದಿಂದೆ ದೊರೆತೆರೆ ಎರಡನೆಯ ವೇಳೆಯಲ್ಲಿ ಬರೆಯುವೆನು. ಮತಾಚಾರ ಗ್ರಂಥಗಳು ಯಾವ ಮಹನೀಯರಿಗಾದರೂ ದೊರೆಯಲ್ಪಟ್ಟಿದ್ದರೆ ಮತ್ತು ಇದರಲ್ಲಿಲ್ಲದ ಸಂಗತಿಗಳು ಕೂಡಿದ್ದರೆ ನನಗೆ ತಿಳಿಸಿರಿ ಅಥವಾ ಆ ಗ್ರಂಥಗಳನ್ನು ಕಳಿಸಿರಿ. ಅಂದರೆ ಆ ಗ್ರಂಥದ ಕ್ರಯವನ್ನು ಕೂಡಾ ಕಳಿಸಲಿಕ್ಕೆ ಸಿದ್ಧನಾಗಿರುವೆನು.

ಸ್ವಮತೇಯರಿಗೆ ಸೂಚನೆ

ಗುರುವಿನ ಬಸಮ್ಮನವರು ಸಹಾಯಕರಾಗದಿದ್ದರೆ ಈ ಪೂರಣ ಪುಟ್ಟುತ್ತಿದ್ದಿಲ್ಲ. ಮತಾಚಾರ ಗೊತ್ತಾಗುತ್ತಿದ್ದಿಲ್ಲ. ಅವರ ಮಹದುಪಕಾರವು ನಮ್ಮ ನಿಮ್ಮಗೂ ಹಗಲಿರುಳು ನೆನಿಸಲರ್ಹವಾಗಿದೆ, ಇದಿತ್ತಿರಲಿ.

ಮತಾಭಿಮಾನಿಗಳೇ, ಸುವಿವೇಕದಿಂದೆ ಸ್ವಲ್ಪ ವಿಚಾರಿಸಿ, ಮತಪುರಾಣವೆಂಬುವದನ್ನು ಕಣ್ಣಿನಿಂದ ನೋಡುವುದೂ, ಕರ್ಣದಿಂದ ಕೇಳುವುದೂ, ಅದತ್ತಿರಲಿ, ಮತಪುರಾಣವೆಂಬುವದನ್ನು ಕಣ್ಣಿನಿಂದ ನೋಡುವುದೂ, ಕರ್ಣದಿಂದ ಕೇಳುವುದೂ, ಅದತ್ತಿರಲಿ, ಸ್ವಪ್ನದಲ್ಲಿಯಾದರೂ ದರ್ಶನವಿದ್ದಿದ್ದಿಲ್ಲವು. ಇದಂತು ಸರ್ವರಿಗೂ ವಿದಿತವಾಗಿರುವ ಮಾತಷ್ಟೇ.

ಈಗ ನಿಮ್ಮ ಸುದೈವದಿಂದ ನೀವು ನೆನಸದೇಯಿದ್ದರೂ, ಅಪೇಕ್ಷೆ ಮಾಡದೇಯಿದ್ದರೂ ತನ್ನಷ್ಟಕ್ಕೆ ತಾನೇ ಮತಪುರಾಣ ತಯಾರಾಗಿರುವುದು. ಸ್ವಲ್ಪ ಖರ್ಚಿಗೆ ಹೇಸಿ ತರಿಸದೆ ಬಿಡಬೇಡಿರಿ.

ಈ ಇಡೀ ಹಿಂದುಸ್ಥಾನದಲ್ಲಿಯೂ ನೋಡಬೇಕಾದರೆ ಇದೆ ಈಗ ಹೊಸದಾಗಿರುವದೆಂದು ಹಾಲ್ಮತೇಯರಿಗೆ ಗೊತ್ತಾದ ಮಾತೇಯಿರುವುದು. ಸಧ್ಯಕ್ಕೆ ೧೦೦೦ ಪ್ರತಿಗಳು ತಯಾರಾಗಿದ್ದರೂ ತ್ವರೆಯಾಗಿ ತರಿಸುವವರಿಗೆ ಸಿಗಬಹುದು. ಹಿಂದುಳಿದ ಮತೇಯರಿಗೆ ದೊರೆಯುವುದು ಪ್ರಾಯಶಃ ದುರ್ಲಭವೇ ತೋರುವುದು.

ಆದುದರಿಂದ ಅವಕಾಶ ಮಾಡದೆ ತರಿಸಿಕೊಂಡು ಆದ್ಯಾಂತ ನೋಡಿದರೂ ಅಥವಾ ಅರ್ಧಾಂಶವನ್ನು ಕೇಳಿದರೂ, ತಸ್ಮಾತ್ ಮನೆಯಲ್ಲಿಟ್ಟು ಪೂಜಿಸಿದರೂ ಯೋಗ್ಯವೇ ಸರಿ. ನೀವು ತರಿಸುವದಲ್ಲದೇ ನಿಮ್ಮ ನಿಮ್ಮ ಆಪ್ತೇಷ್ಟರಿಗೆ ಹೇಳಿ ತರಿಸುವವರಿಗೆ ಸಿಗಬಹುದು. ಹಿಂದುಳಿದ ಮತೇಯರಿಗೆ ದೊರೆಯುವುದು ಪ್ರಾಯಶಃ ದುರ್ಲಭವೇ ತೋರುವುದು.
ಆದುದರಿಂದ ಅವಕಾಶ ಮಾಡದೆ ತರಿಸಿಕೊಂಡು ಆದ್ಯಾಂತ ನೋಡಿದರೂ ಅಥವಾ ಅರ್ಧಾಂಶವನ್ನು ಕೇಳಿದರೂ, ತಸ್ಮಾತ್ ಮನೆಯಲ್ಲಿಟ್ಟು ಪೂಜಿಸಿದರೂ ಯೋಗ್ಯವೇ ಸರಿ. ನೀವು ತರಿಸುವದಲ್ಲದೇ ನಿಮ್ಮ ನಿಮ್ಮ ಆಪ್ತೇಷ್ಟರಿಗೆ ಹೇಳಿ ತರಿಸುವಂತೆ ಯತ್ನಿಸಿರಿ. ಇದು ನಿಮ್ಮ ಮನಯೆಲ್ಲಿದ್ದರೆ ಓರ್ವ ಮತವಿಚಾರ ಶಿಕ್ಷಕನು ನಿಮ್ಮಲ್ಲಿದ್ದಂತೆಯಾಗುತ್ತೆ.

ಪುರಾಣೋತ್ಸವ ಸಮಾರಂಭವು

ಇದೇ ಪುರಾಣವನ್ನು ಗುರುವಿನ ಬಸಮ್ಮನವರು ಗೊಬ್ಬೂರಲ್ಲಿ ಓದಿಸಿ ೨೦ ಸಾವಿರ ರೂಪಾಯಿ ಖರ್ಚು ಮಾಡಿ ಗಣತೃಪ್ತಿಗೈಸಿದರು. ಮತ್ತು ನನ್ನನ್ನು ಋಣಮುಕ್ತನನ್ನು ಮಾಡಿದರು. ಇದರ ಮೇಲಿಂದ ಅವರು ಸದ್ಗುಣಿಗಳು, ಸುವಿಚಾರಿಗಳೂ ಇರಬಹುದೆಂಬುವುದು ನೀವೇ ತಿಳಿಯಿರಿ. ೧೮೩೮ ಪ್ರಮಾದೀಚನಾಮ ಸಂವತ್ಸರದಲ್ಲಿ ಮತಸಮಾಜ ಕೂಡಿ ರಸ್ತಾಪುರದಲ್ಲಿ ಓದಿಸಿ ಗಣತೃಪ್ತಿಗೈಸಿ ಮೆರೆಸಿದರು. ೧೮೩೮ ರಾಕ್ಷಸನಾಮ ಸಂವತ್ಸರದಲ್ಲಿ ಗುರುವಿನ ಗುರುಸಿದ್ಧಯ್ಯನವರು ತಳ್ಳಹಳ್ಳಿಯಲ್ಲಿ ಓದಿಸಿ ಗಣಾರಾಧನಗೈಸಿ ಮೆರೆಸಿದರು. ೧೮೩೯ ನಳನಾಮ ಸಂವತ್ಸರದಲ್ಲಿ ಗುರುವಿನ ಹೊನ್ನಯ್ಯನವರು, ಭೀಮಯ್ಯನವರು, ರೇವಣಪ್ಪನವರು ಮತ್ತು ಬೀರೇದಾರಗೌಡ ಶರಣಪ್ಪನೇ ಮೊದಲಾದ ಭಕ್ತರ ಸಹಾಯದಿಂದ ಪುರಾಣೋತ್ಸಾಹ ಮಾಡಿದರು. ಇದೇ ಬುದ್ದಿಯು ಸ್ವಮತಸ್ಥರಲ್ಲಿ ಉಂಟಾಗಲೆಂದು ದೇವರನ್ನು ಕುರಿತು ಕೋರುತ್ತಿರುವೆನು.

ತಮ್ಮ ಕೃಪಾಭಿಲಾಷಿ
ಭೀಮಕವಿ ರಸ್ತಾಪುರ