ದಿನಾಂಕ ೨೧.೨.೨೦೧೦ರಿಂದ ೨.೩.೨೦೧೦ರವರೆಗೆ ಬಳ್ಳಾಗಿ ಜಿಲ್ಲೆಯ ಹೊಸಪೇಟೆ ಕೊಟ್ಟುರು ಕೊಳಗಲ್ಲು ಸಂಡೂರು ಸಿರುಗುಪ್ಪ ಹೂವಿನಹಡಗಲಿ ಮತ್ತು ಹಗರಿಬೊಮ್ಮನಹಳ್ಳಿಗಳಲ್ಲಿ ಕುರುಬರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಾಲುಮತ ಸಾಹಿತ್ಯ ಸಂಸ್ಕೃತಿ ಕುರಿತು ಹದಿನಾಲ್ಕು ವಿಶೇಷ ಉಪನ್ಯಾಸ ಕಾರ್ಯಕ್ರಮಗಳನ್ನು ಪೀಠವು ಆಯೋಜಿಸಿತ್ತು.

೨೧.೨.೨೦೧೦ ರವಿವಾರ ಬೆಳಗ್ಗೆ ೧೧ ಗಂಟೆಗೆ ಹಾಲುಮತ ಸಾಂಸ್ಕೃತಿಕ ವೇದಿಕೆಯ ಸಹಯೋಗದಲ್ಲಿ ಹೊಸಪೇಟೆ ರೋಟರಿ ಹಾಲ್‌ನಲ್ಲಿ ಉದ್ಘಾಟನ ಕಾರ್ಯಕ್ರಮ ನಡೆಯಿತು. ಕನ್ನಡ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಮಂಜುನಾಥ ಬೇವಿನಕಟ್ಟಿ ಅವರ ಅಧ್ಯಕ್ಷತೆಯಲ್ಲಿ ಮಾಜಿ ಸಂಸದರಾದ ಕೆ.ವಿರೂಪಾಕ್ಷಪ್ಪನವರು ಸಮಾರಂಭವನ್ನು ಉದ್ಘಾಟಿಸಿದರು. ವಾರ್ತಾ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕರಾದ ಸಿ.ಕೆ.ಪರಶುರಾಮಯ್ಯನವರು ತಗರ ಪವಾಡ ಮತ್ತು ತುಮಕೂರಿನ ಸಿದ್ಧಗಂಗಾ ಮಹಿಳಾ ಪದವಿ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಡಿ.ಎನ್.ಯೋಗೀಶ್ವರ ಅವರು ಚರಿತ್ರೆಯ ಪುಟಗಳಲ್ಲಿ ಕುರುಬರು ಎಂಬ ವಿಶೇಷ ಉಪನ್ಯಾಸವನ್ನು ನೀಡಿದರು. ಹಾಲುಮತ ಅಧ್ಯಯನ ಪೀಠದ ಸಂಚಾಲಕರಾದ ಡಾ. ಎಫ್.ಟಿ. ಹಳ್ಳಿಕೇರಿ ಅವರು ಕಾರ್ಯಕ್ರಮದ ರೂಪುರೇಷೆಗಳನ್ನು ಪ್ರಾಸ್ತಾವಿಕವಾಗಿ ಹೇಳಿದರು. ಮುಖ್ಯ ಅತಿಥಿಗಳಾಗಿ ಮಲ್ಲಯ್ಯ ಒಡೆಯರ, ಎಚ್.ನಂಜುಂಡಪ್ಪ, ಎಲ್.ಸಿದ್ಧನಗೌಡ, ಅಯ್ಯಾಳಿ ತಿಮ್ಮಪ್ಪ, ಕೆ.ಎಂ.ಹಾಲಪ್ಪ, ಜಿ.ಭರಮನಗೌಡ, ಆರ್.ಕೊಟ್ರೇಶ ಹಾಗೂ ಚಿದಾನಂದಪ್ಪ ಮುಂತಾದ ಗಣ್ಯಮಾನ್ಯರು ಭಾಗವಹಿಸಿದ್ದರು.

೨೨.೨.೨೦೧೦ ಸೋಮವಾರ ಬೆಳಿಗ್ಗೆ ೧೦.೩೦ಕ್ಕೆ ಕೂಡ್ಲಗಿ ತಾಲೂಕು ಕುರುಬರ ಸಂಘದ ಸಹಯೋಗದಲ್ಲಿ ಕೊಟ್ಟೂರಿನ ಶ್ರೀ ಬನಶಂಕರಿ ಕಲ್ಯಾಣ ಮಂಟಪದಲ್ಲಿ ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ.ಚಲುವರಾಜು ಅವರು ಜನಪದ ಹಾಲುಮತ ಮಹಾಕಾವ್ಯ ಹಾಗೂ ಹಸ್ತಪ್ರತಿಶಾಸ್ತ್ರ ವಿಭಾಗದ ಪ್ರಾದ್ಯಾಪಕರಾದ ಡಾ.ಎಫ್.ಟಿ.ಹಳ್ಳಿಕೇರಿ ಅವರು ಕುರುಬ ಸಮುದಾಯದ ಅಭಿವೃದ್ಧಿ ಸಮಸ್ಯೆಗಳು ಮತ್ತು ಸಲಹೆಗಳು ಕುರಿತ ಉಪನ್ಯಾಸ ನೀಡಿದರು. ಸಣ್ಣಲೋಕಪ್ಪ, ಎ.ನಂಜಪ್ಪ, ವೈ.ಎಚ್.ಹಳ್ಳಿಕೇರಿ, ಬಿ.ಭರಮಪ್ಪ, ಬಿ.ನೀಲಗಿರಿಯಪ್ಪ, ಕೆ.ಜಿ.ನಾಗರಾಜ, ನಿಂಗಪ್ಪ, ಕೆ.ಎಂ.ಚಿದಾನಂದಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

೨೬.೨.೨೦೧೦ ಶುಕ್ರವಾರ ಸಾಯಂಕಾಲ ೪ ಗಂಟೆಗೆ ಬಳ್ಳಾರಿ ಜಿಲ್ಲಾ ಕುರುಬರ ಸಂಘದ ಸಹಯೋಗದಲ್ಲಿ ಬಳ್ಳಾರಿ ತಾಲೂಕು ಕೊಳಗಲ್ಲು ಗ್ರಾಮದ ಶ್ರೀ ಯರ್ರಿತಾತಾ ದೇವಸ್ಥಾನದ ಆವರಣದಲ್ಲಿ ಕಲಘಟಗಿಯ ಗುಡ್ ನ್ಯೂಜ್ ಪದವಿ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ.ಬಿ.ಜಿ.ಬಿರಾದಾರ ಅವರು ಕುರುಬರ ಗುರುಪರಂಪರೆ ಹಾಗೂ ಗದುಗಿನ ಪತ್ರಿಕಾ ವರದಿಗಾರರಾದ ಮಂಜುನಾಥ ಬೊಮ್ಮನಕಟ್ಟೆ ಅವರು ಸಹಕಾರಿ ಪಿತಾಮಹ ಸಿದ್ಧನಗೌಡ ಪಾಟೀಲರ ಜೀವನ ಸಾಧನೆ ಕುರಿತು ಉಪನ್ಯಾಸ ಮಾಡಿದರು. ಬಳ್ಳಾರಿ ಮಹಾನಗರ ಸಭೆಯ ಮೇಯರ್ ಕೆ.ಬಸವರಾಜ, ಮುಖಂಡರಾದ ಗಡಗಿ ಗೋವಿಂದಪ್ಪ, ಮಲ್ಲೇಶಪ್ಪ, ಡಿ.ಹನುಮಂತಪ್ಪ, ಆಂಜನೇಯ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

೨೭.೨.೨೦೧೦ ಶನಿವಾರ ಬೆಳಗ್ಗೆ ೧೦.೩೦ಕ್ಕೆ ಸಂಡೂರು ತಾಲೂಕು ಕುರುಬರ ಸಂಘದ ಸಹಯೋಗದಲ್ಲಿ ತಾಲೂಕು ಕುರುಬರ ಸಂಘದ ಸಭಾಭವನದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾದ ಡಾ. ಮಲ್ಲಿಕಾ ಘಂಟಿ ಅವರ ಅಧ್ಯಕ್ಷತೆಯಲ್ಲಿ ಸಿದ್ಧಮಂಕ ಚರಿತೆ ಕುರಿತು ಹಸ್ತಪ್ರತಿಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಕೆ. ರವೀಂದ್ರನಾಥ ಮತ್ತು ಕೊಡಗಿನ ಕುರುಬರ ಕುರಿತು ಜನಪದ ಅಧ್ಯಯನ ವಿಭಾಗದ ಸಹ ಪ್ರಾಧ್ಯಪಕರಾದ ಡಾ. ಹೆಬ್ಬಾಲೆ ನಾಗೇಶ ಅವರು ಪ್ರಬಂಧ ಮಂಡಿಸಿದರು. ತಾಲೂಕು ಕುರುಬರ ಸಂಘದ ಅಧ್ಯಕ್ಷರಾದ ಶ್ರೀ ಕೆ.ತಿಪ್ಪಣ್ಣ, ನಿವೃತ್ತ ಪ್ರಾಧ್ಯಾಪಕರಾದ ಬಸವರಾಜ ಮಸೂತಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

೨೮.೨.೨೦೧೦ ರವಿವಾರ ಬೆಳಗ್ಗೆ ೧೦.೩೦ ಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕ ಸಂಘದ ಸಹಯೋಗದಲ್ಲಿ ಸಿರಗುಪ್ಪದ ಅಭಯಾಂಜನೇಯ ಸ್ವಾಮಿ ಸಭಾಮಂಟಪದಲ್ಲಿ ಸಿರಗುಪ್ಪ ವಿಧಾನಸಭಾ ಸದಸ್ಯರಾದ ಶ್ರೀ ಎಂ.ಎಸ್. ಸೋಮಲಿಂಗಪ್ಪ ಅವರ ಅಧ್ಯಕ್ಷತೆಯಲ್ಲಿ ಹಸ್ತಪ್ರತಿಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕರಾದ ಡಾ. ಎಸ್.ಎಸ್. ಅಂಗಡಿ ಅವರು ಹಾಲುಮತ ಸಂಸ್ಕೃತಿ: ಶಂಬಾ ಜೋಶಿ ಚಿಂತನೆಗಳು ಮತ್ತು ಇರಕಲಗಡದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ.ಬಿ.ಹುಲಿಗೆಮ್ಮ ಅವರು ರಸ್ತಾಪುರ ಭೀಮಕವಿಯ ಹಾಲುಮತೋತ್ತೇಜಕ ಪುರಾಣ ಕುರಿತು ಉಪನ್ಯಾಸ ನೀಡಿದರು. ದಮ್ಮೂರು ಶಂಕರಪ್ಪ, ಬಂಗ್ಲೆ ನಾಗಪ್ಪ, ಡಿ.ಯರಿಯಪ್ಪ, ಕೆ.ಸುಂಕಪ್ಪ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

೧.೩.೨೦೧೦ ಸೋಮವಾರ ಬೆಳಗ್ಗೆ ೧೦.೩೦ಕ್ಕೆ ತಾಲೂಕು ಕುರುಬರ ಸಂಘದ ಸಹಯೋಗದಲ್ಲಿ ಹೂವಿನಹಡಗಲಿಯ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ಗುರುವಿನ ಕೊಟ್ರಯ್ಯನವರ ಅಧ್ಯಕ್ಷತೆಯಲ್ಲಿ ಗದುಗಿನ ಕೆ.ಎಸ್.ಎಸ್. ಪದವಿ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಎಸ್.ಎಫ್. ಜಕಬಾಳ ಅವರು ಕುರಿಗಾರರ ಕಾಲಜ್ಞಾನ ಮತ್ತು ಕನ್ನಡ ವಿಶ್ವವಿದ್ಯಾಲಯ ಪಿಎಚ್‌.ಡಿ. ವಿದ್ಯಾರ್ಥಿನಿ ಶ್ರೀಮತಿ ಅನ್ನಪೂರ್ಣ ಗೋಸ್ಬಾಳ ಅವರು ಚನ್ನಬಸವ ವಿರಚಿತ ಹಾಲುಮತ ಪುರಾಣ ಕುರಿತು ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವರಾದ ಶ್ರೀ ಈಟಿ ಶಂಭುನಾಥ, ಶ್ರೀ ಪರಮೇಶ್ವರಪ್ಪ, ಶ್ರೀಮತಿ ಪ್ರೇಮಕ್ಕ, ಶ್ರೀಷಣ್ಮುಖಪ್ಪ ಭಾಗವಹಿಸಿದ್ದರು.

೨.೩.೨೦೧೦ ರಂದು ಮಂಗಳವಾರ ಬೆಳಗ್ಗೆ ೧೦.೩೦ ಕ್ಕೆ ಹಗರಿ ಬೊಮ್ಮನಹಳ್ಳಿಯಲ್ಲಿ ತಾಲೂಕು ಕುರುಬರ ಸಂಘದ ಸಹಯೋಗದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ದೂರಶಿಕ್ಷಣ ಕೇಂದ್ರದ ನಿರ್ದೇಶಕರಾದ ಡಾ.ಕೆ.ಎಂ.ಮೇತ್ರಿ ಅವರು ಮಾಳಿಂಗರಾಯನ ಕಾವ್ಯ ಹಾಗೂ ಶ್ರೀಮತಿ ಅನ್ನಪೂರ್ಣ ಗೋಸ್ಬಾಳ ಅವರು ತಗರ ಪವಾಡ ಮತ್ತು ಸಿದ್ಧಮಂಕ ಚರಿತೆ: ತೌಲನಿಕ ಅಧ್ಯಯನ ಕುರಿತು ಉಪನ್ಯಾಸ ನೀಡಿದರು. ಬಳ್ಳಾರಿ ಜಿಲ್ಲಾ ಕುರುಬರ ಸಂಘದ ಉಪಾಧ್ಯಕ್ಷರಾದ ಶ್ರೀ ಪ್ರಭಾಕರ ಅವರು ಅಧ್ಯಕ್ಷತೆ ವಹಿಸಿದ್ದ ಈ ಸಮುದಾಯದಲ್ಲಿ ಶ್ರೀ.ಟಿ.ರಾಮಲಿಂಗಪ್ಪ, ಶ್ರೀ ಶಿವಲಿಂಗಯ್ಯ ಹಾಗೂ ಶ್ರೀ ಎಚ್. ಸೋಮಲಿಂಗಪ್ಪನವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಹೀಗೆ ಏಳು ದಿನಗಳ ಕಾಲ ಆಯೋಜಿಸಿದ ಹದಿನಾಲ್ಕು ಉಪನ್ಯಾಸಗಳು ಬಳ್ಳಾರಿ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಯಶಸ್ವಿಯಾಗಿ ಜರುಗಿದವು.