ಒಂದನಂ ಗುರುವೀರನೆ | ನಿಮಗೊಂದನಂ ಸುಖಸಾರನೆ
ಬಂದ ಮೋಕ್ಷಗಳೆಂಬೊ ಎರಡರ ಸಂದು
ತೋರಿದ ಧೀರನೆ || ಪ ||

ತನ್ನ ನಿಜವನು ತಿಳಿಯನು ಈ ಬಿನ್ನವಳಿಯದ
ಮೂಢನು ನಿಮ್ಮ ಪಾದವಕಂಡ ಮನುಜನು
ಜನ್ಮವಳಿದಾರೂಡನು || ಪ ||

ಹಿಂದೆ ಸುಕೃತವ ಮಾಡಿದೆ ಅದರಿಂದ ನಿಮ್ಮೊಳು
ಸೇರಿದೆ ಬಂದವಿಲ್ಲದ ಪೂರ್ಣ ಸಹಜಾನಂದ
ಪದವಿಯ ಸೇರಿದೆ || ಪ ||

ತಂದೆ ತಾಯಿಗಳಾದರು ಬಹುಮಂದಿ
ಕಳೆದುಹೋದರು | ತಂದೆ ಸದ್ಗುರು ಶಂಕರಾರ್ಯನ
ಹಿಂದೆನಿಲ್ಲುವ ದೇವರು || ಪ ||