ತಡೆಯದಿರಿ ತಡೆಯದಿರಿ ರಥ ಚಕ್ರಗಳನು,
ಚಕ್ರದಿಂದೀ ರಥವು ಮುನ್ನಡೆವುದೇನು?
ಯಾವ ಚಕ್ರಿಯ ಇಚ್ಛೆಗೀ ಲೋಕಚಕ್ರ
ನಡೆಯುವುದೊ, ಅವನಿಚ್ಛೆ ನಡೆಸುವುದು ಇದನೂ !

(* ಶ್ರೀಕೃಷ್ಣನು ಬೃಂದಾವನವನ್ನುಳಿದು ಮಥುರೆಗೆ ಹೊರಟು ರಥವೇರಿದಾಗ ರಥಚಕ್ರಗಳನ್ನೆ ಬಿಗಿದಪ್ಪಿದ ಗೋಪಿಯರಿಗೆ ಅಕ್ರೂರನು ಹೇಳಿದ ಮಾತು.)