ಸೂಚನೆ :

ಎಂಟುಕೊಂದಳಿದವಾಯುಗ
ಳೆಂಟುಕೇಳ್‌ ಕ್ರಿಮಿದೋಷರಸಹದಿ
ನೆಂಟುಶೂಲಿಯಪರಿಗೆಶೇಷನಿಧಾನವೈದ್ಯಕ್ಕೇ
ವುಂಟೆನಿಪಕವಳವನುಪೇಳುವೆ
ಘೋಟಕಗಳಂಗದಲಿರೋಗದ
ಕಂಟಕವುಪರಿಹರಿದುಪಟುವಾಹಂತೆವಿಸ್ತರಿಸೀ|| ಪದನೂ ||

ಚಿಕಿತ್ಸಾರಂಭ :

ನೆಲಬೇವುಇಂದ್ರವಾರುಣಿಬ್ರಹ್ಮಿಹೆಗ್ಗುಳ[ಳಂ]
ನೆಲದವರಿಕೆಕತ್ತೆಗುರಬರಂಜಿಕೆಯರಡು
ನೆಲಗುಳ್ಳಪುರಷರತ್ನಂಗಳಸಮೂಲಹೆಗ್ಗೋಡಚಿಗಾ
ಹುಲುಗಲೀಅಪಾಮಾರ್ಗಗಳಬೇರುಬಜೆಯಿಂ
ಗಳಕೋಲುಮುಕ್ಕುಗಳಸೆಕ್ಕೆಆಕಳಕರಿ
ಸಲೆಗಂಟುಭಾರಂಗಿತಿಗಡೆಅತಿಬಜೆಶುಂಟಿಜಾಪಾರದೋವು|| ||

ಚವೆಇಂಬುಪತ್ರಿತ್ರಿಕಟುಕಯಪಕ್ಷಾರಸೈಂ
ಧವಲವಣಲವಂಗವುತ್ರಿಫಲೆಕಿರಿಬೇವುಹೆಬ್ಬೇವು
ಯಿವರಮುಗುಳುಹಾಲೆಯೆಂಬದರಬೀಜಗಜುಗಿನತಿರುಳುಸಾಸಿವೆಗಳು
ಇವುನಾಲ್ವತ್ತುಸಮಗೂಡಿಚೂರ್ಣಿಸುತಮಾ
ನವಮೂತ್ರಗೋಮೂತ್ರಬಿಸಿನೀರೋಳಾದೊಡಂ
ತವಕದಿಂಮೂರುಪಾವನುಕುಡಿಸಲಾಹಯಕೆಹದಿನೆಂಟುಶೂಲಿಮಾಣ್ಗೂ|| ||

ಬೇವುತಗ್ಗಿಕರಂಜಿಕಿರಿಬೇವುಅತಿಬಜೆಹೆ
ಬ್ಬೇವಿವಾರಮುಗುಳುನೀಲಿಗಣಜಲಿಬ್ರಹ್ಮಿ
ಹಾವುಮೆಕ್ಕಿಯುಉತ್ತರಾಣಿಏರಂಡಈಶ್ವರಿಇವೇಳರವೊಲವೂ
ತೀವಿದರಳಿಯಸೆಕ್ಕೆಕೇತಕಿಯಮಲೆತ್ರಿಫಲೆ
ಭಾವಿಸುವಕಾಡಕವಡೆಕಹಿಪಡುವಲವಿಷಗುಂಬ
ಳಾವಿಷದಹೀರೆಜಂಭೀರವಿವೈದರಬಜಿಕಾಡಜೀರಿಗೆಸೈಂಧವಲವಣಾ|| ||

ಕೋಷ್ಟತ್ರಿಕಟುಕಕಲ್ನಾರುಬಿಳೆಜೀರಿಗೆ
ಯಿಷ್ಟುಇವುಮೂವತ್ತೊಂದುಜೀನಸುನಸಮಗೂಡಿ
ಕುಟ್ಟಿನವಬತುಸಕ್ಕರೆವೆರಸೀಬಿಸಿನೀರಿಂದಲಾಗಲಜಮೂತ್ರದಿಂ
ಗೊಟ್ಟದಿಂಪ್ರತಿದಿನವುಕವಳಗೊಳಿಸುತ್ತಿರಲ್‌
ಕಷ್ಟಜ್ವರಂಗಳುಂಪರಿಹರಿದುವಾಜಿಗಳ್‌
ನೆಟ್ಟಗಾರೋಗ್ಯಮಂತಾಳಿರ್ಪವೆಂದಮುನಿಶಾಲಿಹೋತ್ರಂಪೇಳ್ದನೂ|| ||

ಎರಡುಜೀರಿಗಿಚಿತ್ರಮೂಲಗಣಜಿಲಿಗುಳ
ವೆರಡಿದರಸಹಬೇವುನೆಲಬೇವುಹೆಬ್ಬೇವು
ಕಿರಿಬೇವುಗಳಮುಗುಳುತ್ರಿಫಲೆತ್ರಿಕಟುಕಕೋಷ್ಟಇಂಗುಚವೆಪಂಚಲವಣಾ
ವರಕೋಲುಮುಕ್ಕುಇಂಗಳಅತಿಬಜೆಆಲನಾ
ಲ್ಕರಸೆಕ್ಕೆಅಜವೇದಅತಿಭಜೆಕುಳಂಜಿನಈ
ಶ್ವರಿಉತ್ತರಾಣಿಗಳಬೇರುಗಜುಗಿನತಿರುಳುಟೆಂಕಣವುಆಕಳಕರೀ|| ||

ಇನಿತುಮೂವತ್ತೊಂದುಜಿನಸುಗಳಂ
ವಿನಯದಿಂದರಪಾಲಿಕೊಜನೆಯಿಂಸಮಗೊಂಡು
ಚಿನಿಪತ್ರಮಂಮಾಡಿಲಶುನದಿಂದೊಡಗೂಡಿಮೂರುಪಾವಿನತೂಕಮಂ
ಕೆನೆಹಾಲೊಳಾದೊಡಂಗುಡದಪಾನಕದವರ
ತನಿರಸದೊಳಾದೊಡಂಕಲಸಿಗೊಟ್ಟುದಲೈದು
ದಿಕವಿಕ್ಕಲಾಹಯಕೆಮತ್ತೆಕ್ರಿಮಿದೋಷಗಳ್ಪರಿಹರಿದುಗುಣಮಪ್ಪುದೂ|| ||

ಇಂಗಳದಮೇಣನುಗ್ಗಿಯತಾಟೆಬಜೆವಾಯಿವ
ಳಂಗಹಿಪ್ಪಲಿಯಮೂಲಹೊನ್ನಾವರಿಕೆಯಪು
ಷ್ಪಂಗಳಜಿವಾನಕಾರ್ಚಿಯಗಡ್ಡೆಕರಿಲಕ್ಕಿಯಮುಗುಳುಸೈಂಧವಲವಣಾ
ಮುಂಗಲಿಯಮೂಗಿನವರಗಡ್ಡೆಬೋನಾಗಾರಿಯಕಾಯಿ
ಭಂಗಿಬೊಳ್ಳೆಳ್ಳಿಹೆಬ್ಬೇವಿನಮುಗುಳ್ತ್ರಿಕಟು
ಕಂಗಳಹದಿನೆಂಟುಮಧುವಿನೊಳ್ಕೊಡಲೇಳುವಾಯುಪರಿಹರವೂ|| ||

ಗಿಣಿಯಮೂಗಿನಗಡ್ಡೆಹೆಗ್ಗುಳನೆಲಗುಳವು
ಗಣಜಿಲಿಅಪಾಮಾರ್ಗಕಾಡಕವಡೆಯಿಂದ್ರವಾ
ರುಣಿಕರಿಯಬದನಿಯುನೆಗ್ಗಿಲುಇದರಬೇರುಆಕಳಕರಿವಿಳಂಗಕೋಷ್ಟಾ||
ಮೆಣಸುಹಿಪ್ಪಲಿಶುಂಠಿಜೇಷ್ಟಮಧುರಸ್ಮೆಮ
ತ್ತೆಣಸಿಭಂಗಿಯುಸಹಿತಹದಿನೆಂಟುಸಮಗೂಡಿ
ಹಣಿದರ್ಧಸೇರನುಂಮಧುಹಾಲಿನೊಳಗಿಕ್ಕಲೈದುಶ್ಲೇಷ್ಮಂಗಳಳಿಗುಂ|| ||

ಎರಡೆರಡುಸೇರುಘೃತತಿಲತೈಲಹರಳೆಣ್ಣೆ
ಗರುಗಬೇವಿನರಸಗಳೊಂದೊಂದುಸೇರುಮಧು
ವೆರಸಿಎಳೆಉರಿಯೊಳೆಸರೆತ್ತೊಂದುಕುದಿಬಂದಬಳಿಕಹೊಸಕೇರಹರಳಂ
ತರಿಸಿಮೂವತ್ತುನಾಲ್ಕನುಕತ್ತರಿಸಿಹಾಕಿ
ಮರಳಲೊಂದೆಕುದಿಗೆತೊಲೆಮೈಲತುಥ್ಯಮಂ
ಪರಿಶುದ್ಧಿಗೈದದನುಪುಡಿಮಾಡಿಕಲಸಿಮತ್ತೊಂದುಕುದಿಬಂದಬಳಿಕಾ|| ||

ಮುಡದಾರಶಿಂಗಿಮಣಿಶಿಲೆಯರಡುತೊಲೆಯಮ
ತ್ತರಪಾವುಇಂಗಲೀಕಕಂಬಿಚೆಂದ್ರವುಹವಳ
ಸರಗಂಧಕವುಕೋಷ್ಟಇವುಪಾವುಜಂಗಾಲುಪಚ್ಚೆತೊಲೆಚಿಟ್ಟೌಡ್ಲದಾ
ಹರಳುತಿರುಳರ್ದಸೇರನುಸಹಿತಸಣ್ಣಗೆ
ಅರದುಪುಡಿಯಂಹಾಕಿಮೂರುಕುದಿಬಂದಮೇ
ಗಿರದೆಕಡಿಗಿಳುಹಲದುಶತತೈಲಮೆಂಬುದಶ್ವಂಗಳಿಗೆಚರಮೌಷಧೀ|| ೧೦ ||

ಹಂಸಗೌಳದಪದ್ಧತಿ :

ಚವೆಚಿತ್ರಮೂಲಮರದರಿಸಿನಅಗಳಶುಂಠಿತೊಲೆ
ಗಂಟುಭಾರಂಗಿತ್ರಿಫಲೆತ್ರಿಕಟುಕವಾಯಿವಳಂಗ
ಕೋಷ್ಟಕಾಷ್ಟಜ್ಯೋತಿಹಿಪ್ಪಲಿಯಮೂಲಅತಿಭಜೆರಸ್ಮಿಯೂ
ಇವುಎರಡೆರಡುಸೇರುಪಾವುಚವಿಭಂಗಿಆಳಿವೆಬೀಜ
ಕಾಯಿಪತ್ರಿಅರಪಾವುಲವಂಗವುಪಾವು
ಲವಂಗದಸೆಕ್ಕೆಯುಸೇರುಜಾಪತ್ರೆಅರಸೇರುಇನಿತೆಲ್ಲಮಂ|| ೧೧ ||

ಇವನುಇಪ್ಪತ್ತೊಂದುಜಿನಸನುಸಮಗೂಡಿ
ತವಕದಿಂಸಣ್ಣಚೂರ್ಣವಮಾದಿಕೊಂಡುಪ್ರತಿ
ದಿವಸದಲ್ಲೊಂದೊಂದುಪಾವಿನಪ್ರಮಾಣಮಂಘೃತಮದವಿನೊಳುಕೊಡುವದೂ
ರವಿವಾರದಾದಿಯಾಗಿದನೆರಡುಹೊತ್ತುವಾ
ರುವಕೆಮೆಯಿಸುತಿರಲ್ಸರ್ವರೋಗಗಳಳಿದು
ಜವಗುಂದದಲೆಚಮತ್ಕೃತಿಯಾಂತಿಹವುಹಯಗಳೇಹಂಸಗವಳದಿಂದ|| ೧೨ ||

ಅರ್ಕಧಾನ್ಯವನುತಂದುಅತಿಸೂಕ್ಷ್ಮದಿಂಮಾಡಿ
ಅರ್ಕದಕ್ಷೀರದಿಂಮಿದಿದಿಚರ್ಕದಮೇಲೆ
ಅರ್ಕಪತ್ರವಕವಚಿವಿಪಿನಬೆರಣಿಯಲಿಕುಕ್ಕುಟಪುಟವನಿಕ್ಕಿತೆಗದಾ
ಕರ್ಕನಂಮಧುವಿನಲಿಕಲಸಿಘಟಕಿಯಮಾಡಿ
ಆರ್ಕಸೋಂಕೆದಲೆಶುಷ್ಕಂಗೊಳಿಸೆಕುಸುಮಸಂ
ಪರ್ಕಮೊಸರ್ದಹರಿಲೋಚನಕೆಜಂಭೀರರಸದಿಂದಹಚ್ಚೆಮಾಣ್ಗೂ|| ೧೩ ||

ಧರೆಗಧಿಕವುತ್ಸಂಗಿದುರ್ಗದಿ
ಮೆರೆವದುರ್ಗಾಂಭಿಕೆಯಸಿರಿಪದ
ಸರಸಿಜಭ್ರಮರಾಯಮಾನಕವೀಂದ್ರಹಿರಿಯಣ್ಣನೂ
ವಿರಚಿಸಿದಹಯರತ್ನಶ್ರೇಣಿಯೊ
ಳೊರೆದನಾನಾವಿಧದರೋಗಕೆ
ಕವಳಪರಿಗೆಸಂದುದುಆರನೆಯಪದನುಸಪ್ತದ್ವಿತೀಯಪ್ರಸಂಖ್ಯೇ|| ೧೪ ||

ಅಂತುಸಂಧಿಪದಗಳು೧೦೫ಕ್ಕಂ
ಮಂಗಳಮಹಾಶ್ರೀಶ್ರೀಶ್ರೀ||