ಪರಿಪರಿಯಜ್ವರಶೂಲೆಮೊದಲಾ
ಗಿರುವರೋಗವಳಿಯವಿವರಕೆ
ವಿರಚಿಸುವೆವೈದ್ಯೋಪಾಚಾರವನವರಪೆಸರ್ಗೊಂಡು|| ಪದನೂ ||

ವಾರ್ಧಕಷಟ್ಟದಿ :

ಒಂದುಗದ್ಯಾಣಮುತ್ತುಕದಬೀಜವುಇಂಗು
ಒಂದುಪಾವುಜೋಪಾರದೋವುಮಾದಳದತಿರು
ಳೊಂದುಗುಡಾಜ್ಯದೊಳಗಿಕ್ಕಲುಸ್ತನ್ಯಾವರ್ತಶೂಲಿಪರಿಹರವೂಆಗುವುದು
ಛಂದದಿಂದೆರಡುಬಗೆಪಿಪ್ಪಲಿಗಳಂಸೇ
ರೊಂದುಸಮಗೂಡಿಪುಡಿಮಾಡಿತುಪ್ಪದಲಿಕ್ಕೆ
ಸೈಂಧವಕೆಮೂತ್ರಶೂಲಿಯುನಾಶವಹುದೆಂದನಾಶಾಲಿಹೋತ್ರಮುನೀ|| ||

ಮತ್ತೆಯುಸದಾವರ್ತಶೂಲೆಗುಣವಾಹದಕೆ
ಮುತ್ತಕದಬೀಜಗಣಜಿಲಿಯತೆನೆಸೈಂಧವಂ
ಬಿತ್ತರಿಪಹಾಲಿವಾಳದತೋಟೆಸಹಗೂಡಿಎಳ್ಳೆಣ್ಣೆಯೊಳ್ಕೊಡುವದೂ
ಎತ್ತಲತಿದಾಹಕದಶೂಲ್ಗೆಬಜೆಕೋಷ್ಟ
ವೆತ್ತುಪಾಶಾಣದಂತೆಸೈಂಧವನೆತ್ತುವದು
ಹುಳಿಯೆಂಬಿಲದೊಳೊಂದುಗೂಡಿಹಯಕಾರೋಗ್ಯಕರಮಪ್ಪುದೂ|| ||

ಶೂಲಿರಕ್ತಪ್ರಮೆಗೆವೈದ್ಯಮಂಪೇಳ್ವೆ
ಹಾಲಿನೊಳ್ಕಾಕಝಂಗೆಯಬೇರನರದುಕುಡಿಸ
ಲಾಲಸ್ಯವಿಲ್ಲದೆಉತಾರವಾಗುವದೆಂದುಪೇಳಿದಶಲಿಹೋತ್ರಂ
ಆಲಿಪುದುಕ್ರಿಮಿದೋಷಶೂಲಿಗೌಷಧಿಯಸಮ
ಪಾಲುತ್ರಿಕಟುಕಕೋಷ್ಟವರೆಸೇರನೊಡಗೂಡಿ
ಮೇಲೆಮುತ್ತಕದಬೀಜಗದ್ಯಾಣಬೆರಸಿಬೆಲ್ಲದಿಕೊಡಲುಮಾಣ್ಗೂ|| ||

ವರ್ನಿವೆಸದಾವರ್ತಶೂಲಿಗುತಾರಮಂ
ಚೆನ್ನಾಗಿಬಳ್ಳೊಳ್ಳಿಇಂಗುಸೈಂಧವಗೂಡಿ
ಚೂರ್ಣಮಂಸಮಭಾಗಅಳಕಾಗಿಹೆರುತಿರ್ಪಮೊಸರಿನೊಳ್ಕೊಡಲುಮಾಣ್ಗೂ
ಇನ್ನುಬಿಂಬಾವರ್ತಶೂಲಿಗೆಕೋರಿ
ಯನುಸುಟ್ಟುಭಸ್ಮದೊಳಿಂಗನೊಡಗೂಡಿ
ಹೆಣ್ಣಕೋಳಿಯರಕ್ತದೊಳುಕಲಸಿಕೊಡಲಶ್ವಕಾರೋಗ್ಯಕರಮಪ್ಪುದೂ|| ||

ಸೊಲಿಸುವೆತ್ರಿಭ್ರಮಕೆಶೂಲಿಗೌಷಧಿಯಘೃತ
ವಳ್ಳೆಣ್ಣೆಗೂಡಿಮೈಮರ್ದನೆಯಮಾಡಿಬಿಸಿ
ಲಲ್ಲಿಕಟ್ಟಿರ್ದುರಿಳಲಿಕಾಯಿಶುಂಠಿಅರಿಷಿಣಬೆಲ್ಲಮಂಕೊಡುವುದೂ
ಅಲ್ಲಿಖಾಸಾವರ್ತಶೂಲಿಗುಸುರುವೆನುಹಾ
ಲಲ್ಲಿನೆಗ್ಗಲಿಬೇರುಶುಂಠಿಯಂಸಮಗೂಡಿ
ಮೆಲ್ಲುಸಲ್ಕಾಶೂಲಿಗುಣವಾಗಿವಾಜಿಗಳ್ಸಂತೋಷದಿಂದಿರ್ಪವೂ|| ||

ಒರೆವೆನುಸುಖಾವರ್ತಶೂಲಿಗೇಚಿಕಿತ್ಸವ
ಎರಡುದಿನಸಿನಶುಂಠಿಹಿಪ್ಪಲಿಯೆಂಗುರದಬೇರು
ಅರದುಸಮಭಾಗಮಂಕೊಡಲುಪರಿಹರಿಮಪ್ಪುದಾಹಯಕೇ
ಕ್ಷಿಪ್ರದಿಂದಅರಿಯಲ್ಗಳಾಪ್ರಾಹಿಕದಶೂಲೆಬಂದಿರಲು
ಬರದಿಂದಮಿಣಿಯತುಂಡನುಸುಟ್ಟುಬೂದಿಯನು
ಕರೆಕೋಳಿಯರಕ್ತಇಂಗುಮುಕ್ಕದಬೀಜವನುಅರದುಕೊಡಲುಮಾಣ್ಗೂ|| ||

ಉದಿಸಲುಪುರೀಷಶೂಲಿಗೆಪೇಳ್ವೆರಾಮಿಯೆಂಬರಕಾಯೊ
ಳುದಂತಿಯಬೇರಸಮಗೂಡಿಮುದದಿತಿಲತೈ
ಲದಿಂದರದುಗೊಟ್ಟದಲೆತ್ತಲಾಹಯಕೆಗುಣಮಪ್ಪುದೂ
ಒದಗೆಪಾನೀಯಶೂಲಿಗೆಶುಂಠಿಸೈಂಧವಂ
ಪದುಳದಿಂದಿಂಗುಬಜಿಯರಡುಹಿಪ್ಪಲಿಗಳಂ
ಕುದುರೆಗಾಜ್ಯದೊಳುಸಮಾಭಾಗದಿಂದೊಡಗೂಡಿತಿನಿಸಲಾಶೂಲಿಮಾಣ್ಗೂ|| ||

ತಲ್ಲಣಸೆಹಯಕ್ಷುಧಾವರ್ತಶೂಲಿಯಲಿ
ಬಳ್ಳೊಳ್ಳಿಅಜಿವಾನತ್ರಿಕಟುಕವಾಯಿವಳಂಗಮಿನ
ನೆಲ್ಲಮಂಸಮಗೂಡಿತುಪ್ಪದೊಳಗೆಸೇರನಿಕ್ಕಲದುಗುಣವಾಹದೂ
ಗುಲ್ಮಿಕಾವರ್ತಶೂಲಿಗೆಹೃದಯಕಾಲ್ಗಳೊಳ್
ಮೆಲ್ಲನೆಶಲಿಯಬಡಿದುಇಂಗುಬೇವಜಿನಾದಲಿ
ಅಳಲಿಯಕಾಯಿವಾಯ್ವುಳಂಗವುನೆಲದವರಿಕೆಗೂಡಿತುಪ್ಪದಲಿಡುವದೂ|| ||

ರಂಜನಿಯಶೂಲಿಗೆಕಚೋರಭಜಿಸೈಂಧವಂ
ಅಂಜದಲೆಸದ್ಯಕ್ಷಾರಗೂಡಿನಿಂಬಿಹುಳಿ
ಗಂಜಿಯೊಳಗರಸೇರನರದುಕುಡಿಸಲುರೋಗವಾಕ್ಷಣಂಗುಣಮಪ್ಪುದೂ
ಭಂಜಿಸುವಕ್ರಿಮಿಶೂಲಿಗಿಂದ್ರವಾರುಣಿಲಕ್ಕಿಮುಗುಳು
x x x x x x x ಜೋಪಾರದೋವುಭಜಿಕು
ಳಂಜನಮಾದಳದಬೇರಿನತಾಟೆಗಜಗಿನತಿರುಳುಮುತ್ತಕದಬೀಜಮತ್ತಾ|| ||

ಸೈಂಧವಳಲಿಯಕಾಯಿಂದಾದರಾಗಿಯಹಳದಿ
ತಂದಿವಂಸಮಗೂಡಿಅರಸೇರನೋಜನೆಯಿಂ
ಛಂದದಿಂಸಮಭಾಗದೊಳ್ಪುಡಿಮಾಡಿಕೊಡಲುಕ್ರಿಮಿಶೂಲೆಮಾಣ್ಗೂ
ಇಂದುಜೂಟನುಶಾಲಿಹೋತ್ರಂಗೆಹಯದಹೃ
ದ್ಗ್ರಂಧಿಗೌಷಧಿಗಳಂಪೇಳ್ದನಿತನೆಲ್ಲಮಂ
ಕೊಂದದುಸುರಿದಗ್ರಂಥದರ್ಥಮಂಕನ್ನಡದಿವಿರಚಿಸಲುತಿಳಿವಂದದೀ|| ೧೦ ||

ಅತಿಜ್ವರಕೆಚಿಕಿತ್ಸೆ :

ಅತಿಜ್ವರಕ್ಕೆಕೇತಕಿಯಮಲೆಯುಬಾಳಿಯಗಡ್ಡೆ
ಕ್ಷಿತಿಯಸಕ್ಕರೆಗಡ್ಡೆಇವುಮೂರುಸಮಗೊಂಡು
ಜತನದಿಂಕಷಾಯವಮಾಡೆರಡುಸೇರನುಂಮೂರುದಿನಕೊಡಲುಮಾಣ್ಗೂ
ಹಿತವುವಾತಜ್ವರಕೆಅಂಟಿಲೆಕ್ಕಿಯಬೇರು
ಜತೆಗೆನುಗ್ಗಿಯಬೇರುಕೋಲುಮುಕ್ಕನತೋಟೆ
ಅತಿಭಜೆವಿಳಂಗಮಂಗರುಳಿಜೆತಿಸುಡೆಪರ್ಪಾಟಕಿಯಕಷಾಯಾಂ|| ೧೧ ||

ಭಾವಿಸಲುಶ್ಲೇಷ್ಮಜ್ವರಕೆನೆಲಗುಂಬಳ
ದೇವದಾರಿಯತಾಟೆಕೊತ್ತಂಬರಿಯಬೀಜ
ತಾವರೆಯಗಡ್ಡೆಇವನೆಲ್ಲವಕಷಾಯಮಂಮಾಡಿಕೊಡಲೆರಡುಸೇರುಮಾಣ್ಗೂ
ಕೋವಿದರುಶಂಕಜ್ವರಕೆಬೆಲ್ಲವಂತ್ತರನೆಲ
ಬೇವುಪಡುವಲವುನೆಲಗುಳ್ಳನೆಲಗುಂಬಳವು
ತೀವಿದೀಶ್ವರಿಯುನೆಲದಾಳಿವರಬೇರುರುದ್ರಾಕ್ಷಿಯಕಷಾಯವಕೊಡವದೂ|| ೧೨ ||

ಲಘುಣಜ್ವರಕೆನಷ್ಟಮಧುಕಪತ್ರಿಲವಂಗ
ತಿಗುಡೆಶುಂಠಿಣಿಯುಸಮಭಾಗಚೂರ್ಣಮಂ
ಬಗೆಗೊಳದೆಜೇನತುಪ್ಪದಲರ್ದಸೇರನುಂಕೊಡಲೆರಡುದಿನಕೆಮಾಣ್ಗೂ
ಸುಗುಣರಾಸನ್ನಿಪಾತಜ್ವರಕೆನೆಲಬೇವು
ತಿಗುಡೆಅಮರದಬಳ್ಳಿನೆಗ್ಗಲಿಯುನೆಲಗುಂಬ
ಳಗಳಮೂಲವುಕಾಕಝುಂಗಿಯಸಹಮೂಲದ್ರಾಕ್ಷಿಯಕಷಾಯಕೊಡುವದ|| ೧೩ ||

ಅಷ್ಟಜ್ವರಕಕೆಂಪುನವಣಕ್ಕಿಯಬೀಸಿ
ಹಿಟ್ಟಿನೊಳ್ರಾಯಬೋರಿಯಅರಗನೊಡಗೂಡಿ
ಕುಟ್ಟಿಆಕಳಹಾಲಕಲಸೊಂದುದಿನಕೊಟ್ಟಬಳಿಕೊಂದುಸೇರುನೀರೊಳ್
ನೆಟ್ಟನಿಯನೀರಸವಬೆರಸಿಕುಡಿಸುತ್ತಮ
ತ್ತಷ್ಟರೊಳ್ಶುಂಠಿಹಿಪ್ಪಲಿಕಷಾಯವಮಾಡಿ
ಕುಟ್ಟಿದೇಳುದ್ದುತುಪ್ಪದಲಿಪ್ರತಿಪಾಕದಿಂಕೊಡಲುಪರಿಹರಮಪ್ಪುದೂ|| ೧೪ ||

ಮನ್ಮಥಜ್ವರಕೆಹಾಲಿನೊಳುಬಿಳಿಜೀರಿಗೆಯ
ಸಣ್ಣಕ್ಕಿಹಿಟ್ಟುಸಹವೆರಸಿಬೆಲ್ಲವಬೆರಸಿ
ತಿನಿಸಲ್ಪರಿಹರಿಪುದೈದುದಿನಕೆಆಹಯಂದೇಹದೊಳ್ಪಟುವಾಹದೂ
ಮುನ್ನಾಪೇಳ್ದನಿತೆಲ್ಲಜ್ವರದೆಂಟಗೌಷಧಿಯ
ಇನ್ನಾರವೆಯೇಳುಕ್ರಿಮಿರಸಕೆತಕ್ಕುಪಚಾರವನ್ನು
ಜನವರಿವಂತೆಸುಲಭದಿಂಕೈಕರ್ನಕಿಯಬಗಿಯನೊಲವಿನಿಂದಾ|| ೧೫ ||

ಪಾಣಿರಸಗಂಟುಗಳಸೀಳಿಶಸ್ತ್ರದಲದರ
ಶ್ರೋಣಿತವನೊರಸಿಹುಳಿಯಹಣ್ಣರಬಟ್ಟೆಯೊಳ್
ಮಾಣದೆಯವಕ್ಷಾರಮಂಕಲಸಿಲೇಪಿಸಿವಿಳಂಗಶುಂಠಿಯುಸೈಂಧವಂ
ಜಾಣರಜಿವಾನದೊಳ್ಬೆರಸಿಬೆಲ್ಲದಲಿಕ್ಕ
ಲೂಣೆಇಲ್ಲದೆನಾಲ್ಕುದಿವಸಕ್ಕೆಗಂಟುಗಳ್
ಮಾಣುವವುಸಿದ್ಧವೆಂದುಸುರಿದಂಶಾಲಿಹೋತ್ರಂಜಗಕೆಸಂತಸದೊಳೊ|| ೧೬ ||

ಮಧುಪಂಕರಸದಗಂಟುಗಳಶಸ್ತ್ರದಿಸೀಳಿ
ಇದಕ್ಕೆತಿಂಥಿಣಿಲಕ್ಕಿಮಂಗರುಳೆತೋರಣಗಿಲಗ
ಳಿದರತೊಪ್ಪಲನರದುಲೇಪಮಂಮಾಡುತ್ತಬೆಲ್ಲತಗ್ಗಿಯತೊಪ್ಪಲಂ
ಮುದದಿತುಪ್ಪದಲಿತಾಸನಿಯಕೊಡೆನಾಲ್ಕುದಿನ
ಕದುಮತ್ತೆಗತಿಭಂಗರಸಗಂಟುಗಳನದರಂತೆ
ಸೀಳ್ದುಅಳಲಿಯಕಾಯನೆಲಬೇವುಕಿರಿಬೇವುಆವರಿಕೆಯಾ|| ೧೭ ||

ಬೇರುಬಳ್ಳೊಳ್ಳಿಯಂತುಪ್ಪದೊಳಗರದುಮ
ತ್ತಾರಸದಗಾಯಕೆಲೇಪಮಂಮಾಡುತ್ತ
ವಾರುವಕ್ಕದಕೆಕಾಸನಿಯಕೊಡೆನಾಲ್ಕುದಿನಕುತಾರವಾಹದೆಂದೂ
ಚಾರುತುರಗಗಳಹಾಸಿಕುಂಟುತ್ತಿಹವಿ
ಚಾರಕ್ಕೆರಾಳಮ್ಯಾಣರಿಷಿಣವೂಚಂದ್ರಘೃತಾ
ಸಾರವಳ್ಳೆಣ್ಣೆಯೊಳಗರದುಖುರಕಿಕ್ಕಿಔಡ್ಲದೆಲಿಯಕಟ್ಟಿಮಾಣ್ಗೂ|| ೧೮ ||

ತಳಶಸ್ತ್ರರಸಕೆಲೋಹದಚೂರ್ಣಕಾಚುಮ
ತ್ತಳಲಿಯಕಾಯರಪಾವುಸಮಗೂಡಿತಿಲ
ತೈಲದೊಳ್ಕಲಸಿಲೇಪಿಸುತಮೇಲೆಲೆಕ್ಕಿಯತೊಪ್ಪಲನಿಕ್ಕಿಕಟ್ಟಿ
ಒಲಿಯಲಿಟ್ಟಂಗಿಯಕಲ್ಲಸುಟ್ಟುಕಾವುಗೊಡು
ತಲಸದಳೆಬಳ್ಳೊಳ್ಳಿಅಜಿವಾನಸಂಬಂಧವಂ
ಮೇಲೆಲೆಕ್ಕಿಯತೊಪ್ಪಲೊಡನೆಕಾಸನೆಯಕೊಡಲೇಳುದಿವಸಕ್ಕೆಮಾಣ್ಗೂ|| ೧೯ ||

ಮರುತಪಂಕರಸಕ್ಕೆಬಜಿಯುಬಡಗಿಯಮನಿಯೊ
ಳಿರುವಇಲ್ಲಾಣಸೈಂಧವಲವಣಗಳುಸಮಗೂಡಿ
ನಿರುತಜಂಭೀರರಸದಿಂಕಲಸಿಲೇಪಿಸುತಲಜಿವಾನಸೈಂಧವಲವಣಾ
ಒರವೆವಾಯ್ವಳಂಗವಳಲಿಯಕಾಯಿಲಶುನಗಳ
ನರದುತುಪ್ಪದಲಿಕಾಸನಿಯಕೊಡುತಿರೆಮೂರುದಿವಸಕ್ಕೆಪರಿಹರಮಪ್ಪುದೂ|| ೨೦ ||

ಆಮನಸ್ತಂಬರಸಕೆಳ್ಳೆಣ್ಣೆತುಪ್ಪದಿಂ
ಮೈಮರ್ಧನೆಯಮಾಡುತಲಿಟ್ಟಂಗಿಯಕಾವುಕೊ
ಟ್ಟಮೇಲೆಸಬ್ಬಸಿಗೆಬೀಜಬಜಿಸೈಂಧವಂಇಂಗುಹಿಪ್ಪಲಿವಿಳಂಗಾ
ನೇಮದಿಂಹಿಪ್ಪಲಿಯಮೂಲಪರ್ಪಾಟಂಗಳಂ
ಈಮೂಲಿಕೆಗಳಸಮನಾಗಿತುಪ್ಪದಿಮೊದಲ
ಯಾಮದೊಳುಮೂರುದಿನಕಾಸನಿಯಕೊಡಲುಪರಿಹರವೆಂದುಮುನಿಪೇಳ್ದನೂ|| ೨೧ ||

ಮತ್ತೆಯುತ್ರಿಕರಸಕ್ಕೆಣ್ಣೆತುಪ್ಪವಮೈಗೆ
ಮೆತ್ತಿಮರ್ದನೆಗೈದುಲಿಟ್ಟಂಗಿಕಲ್ಲಿಂದ
ಒತ್ತಿಕಾವಂಕೊಟ್ಟುಬಳ್ಳೊಳ್ಳಿನಿರ್ಗುಂಡಿತಗ್ಗಿನೆಲಬೇವುನೆಲಗುಳಾ
ಅತ್ತಿನುಗ್ಗಿಗಳಬೇರಿನತಾಟೆಗಳನುಸಮ
ವೆತ್ತುರದುತುಪ್ಪದಲಿನಾಲ್ಕುದಿನಕಾಸನಿಯ
ಕಿತ್ತರಾಹಯಕೆಲಗುವಾಗಿಸುಖಿಸುವದೆಂದುಪೇಳ್ದನಾಮುನಿರಾಯನೂ|| ೨೨ ||

ವಾಯುಲಿಗೆಅನುಪಾನವು :

ಉತ್ಕರಣವಾಯುಲಿಗೆನುಗ್ಗಿಬೇರಿನತಾಟೆ
ಮುತ್ತುಕದಬೀಜಬಳ್ಳೊಳ್ಳಿಲೆಕ್ಕಿಯಸೊಪ್ಪು
ಮತ್ತೆವಾಯುವಳಂಗವಿಷ್ಟನ್ನೂತುಪ್ಪದೊಳ್ಕಾಸನಿಯಕೊಟ್ಟಬಳಿಕಾ
ಉತ್ತರಾಣಿಯುಮದ್ಗುಣಿಕೆನಿರ್ಗುಂಡಿಸಮ
ವೆತ್ತುಔಡಲದೆಲಿಯಹರವಿಯೊಳುತುಂಬಿಯೆಸ
ರೆತ್ತಿಬೆಂದುದಬೆನ್ನುತಾಳುವೆಂತಿಕ್ಕಿಮೇಲೆಅರವಿಯಂಕಟ್ಟಿಮಾಣ್ಗೂ|| ೨೩ ||

ಅಂಗುರದಗಡ್ಡೆಸೈಂಧವತಿಗುಡೆಬಳ್ಳೊಳ್ಳಿ
ಇಂಗುಸಂವತ್ಸರದಲವಣಜಿವಾನವಿ
ಳಂಗವಿವಸಮಭಾಗಮಂಮಾಡಿತುಪ್ಪದೊಳುಕಾಸನಿಯುಕೊಡಲುಬಳಿಕಾ
ಅಂಗಕೆಳ್ಳೆಣ್ಣೆತುಪ್ಪವತೊಡದುಮರ್ದನೆಯ
ಹಿಂಗದಿಕ್ಕುತಇಟ್ಟಂಗಿಕಾವುಕೊಡಲುಏ
ಕಾಂಗವಾಯುನಾಲ್ಕುದಿನಕೆಪರಿಹರವೆಂದುಶಾಲಿಹೋತ್ರಂಪೇಳ್ದನೂ|| ೨೪ ||

ಕೋಲುಮುಕ್ಕನತಾಟೆಭಜಿಶುಂಠಿಹಿಪ್ಪಲಿಯ
ಮೂಲನಿರ್ಗುಂಡಿಅತ್ತಿಯನುಗ್ಗಿತೇಗುಡಚೆ
ಮೇಲೆರಡುಗುಳಏರಂಡವಿಸಿತರಬೇರುಸಮಗೊಂಡುತುಪ್ಪದಿಂದಾ
ಆಲಸ್ಯವಿಲ್ಲದಾಹಯಕೆಕಾಸನೆಯಗೊಟ್ಟು
ತೈಲಘೃತದಿಮೈಮರ್ದನಿಯಮಾಡಿದಿನ
ನಾಲ್ಕಕೀಕ್ರಮದಿಂದಉಪ್ಪಿನಪಟ್ಟಣದಿಕಾವುಕೊಡಲಂಡವಾಯುಮಾಣ್ಗೂ|| ೨೫ ||

ಅಜಮೋದಕೋಲಮುಕ್ಕನಬೀಜನೆಲಬೇವು
ಅಜಿವಾನಲಶುನಹಿಪ್ಪಲಿಯತನ್ಮೂಲಅತಿ
ಭಜಿಯುಪರ್ಪಾಟಕವಿಳಂಗಕಹಿಪಡುವಲನುಸುಟ್ಟುಕರಕಿಂಗುಶುಂಠಿ
ವಜನದಿಂಸಮಗೂಡಿತುಪ್ಪದಿಂಕಾಸನಿಯ
ಗಜುಗಂಅಂಕಲಿಯತಪ್ಪಲುಲವಣಪಟ್ಟಣದಿ
ನಿಜವಾಗಿಕಾಸಿಮೈಮರ್ದನೆಯಮಾಡಲುಯಾವಿಲವಾಯುದೋಷಮಾಣ್ಗೂ|| ೨೬ ||

ಉರಕರ್ನಿಕೆಯವಾಯುವಿಗೆತುಪ್ಪತೈಲಮಂ
ಬೆರಸಿಮೈಮರ್ದನಿಯಮಾಡಿಇಲ್ಲಣಲವ
ಣರಸಪಾವುನುಗ್ಗಿಬೇರಿನತಾಟೆಹಾವುಮೆಕ್ಕಿಬೇರಿವಂಸಮಭಾಗದೊಳು
ಅರದುಬಿಸಿಮಾಡಿಸರ್ವಾಂಗಮಂಪೂಸಿಮ
ತ್ತಿರದೆಅಂಕಲಿತೊಪ್ಪಲಲ್ಲಿಕಾವಂಕೊಟ್ಟು
ನಿರುತದಿಂಬಳ್ಳೊಳ್ಳಿಶುಂಠಿಇಂಗುಅಜಿವಾನಲಕ್ಕಿಘೃತವಿಕ್ಕಿಮಾಣ್ಗೂ|| ೨೭ ||

ಬಿಸಿಗಂಜಿಅಜಿವಾನಸೈಂಧವಸಾಸಿವೆಯಸ
ಬ್ಬಸಿಗೆಬಿತ್ತರಿಷಿಣಸಮಗೊಂಡುತಿಂಥಿಣಿಯ
ಹಸೆಗೊಜ್ಜಿನೊಳಗಿಟ್ಟುಕುದಿಸೆಮುಖಲೇಪನವಮಾಡಿಇಟ್ಟಂಗಿಯಕಾವಂ
ಝುಸಕದಿಂಕೊಟ್ಟುಆಮುನ್ನಪೇಳ್ದನುತು
ಪ್ಪಸಮತಿಲತೈಲದೊಳುಬೆರಸಿನಿಯಕೊಡ
ಲೆಸೆವಮುಖರೋಗದಿನಮೂರಕ್ಕೆಪರಿಹಾರವೆಂದನಾಶಾಲಿಹೋತ್ರ|| ೨೮ ||

ವಾಯುಯುಗ್ಮಕೆಅರಿಷಿಣಎಣ್ಣೆಯೆಂತೊಡದು
ಬಾಯೊಳದನೆರದುನೀರಪೂಯ್ದುತೈಲಘೃತ
ವೀಯರಡುಕುಡಸಿಲೆಕ್ಕಿಸೊಪ್ಪಿನಿಂದಕಾವಂಕೊಡುತಮೂರುದಿನವೂ
ವಾಯ್ವಳಂಗವುಶುಂಠಿಸಬ್ಬಸಿಗೆಬೀಜಬಜಿ
ಆಯತದಬಳ್ಳೊಳ್ಳೊಅಜಿವಾನಸಮಗೂಡಿ
ತೋಯಪಾಜ್ಜದಲೆರಡುಸೇರುಕಾಸನಿಯಕೊಡೆಪರಿಹರಿದುಗುಣಮಪ್ಪುದೂ|| ೨೯ ||

ಹಯದಚೂರಂಗವಾಯುವಿಗೆಶುಂಠಿಬಜಿಸಾಸಿ
ವೆಯಶಿರಸದಬೇರುಬಳ್ಳೊಳ್ಳಿನಿಂಬಿಯಹು
ಳಿಯಲರದುನಾಲ್ಕುಕಾಲಿಗೆಲೇಪನಂಮಾಡಿಯಾಲಕ್ಕಿಯೆಷ್ಟುಮಧುಕ
ನಯದಮುಸ್ತೆಯಮೆಣಸುಕೊಂಕುಳವುಕೊತ್ತಂಬ
ರಿಯಸಹಿತತುಪ್ಪದೊಳುಕಾಸನಿಯಕೊಟ್ಟುಮತ್ತೆಜಾಡ
ಲಯೆಕ್ಕಿಯಣ್ಣಿಯಕಾಲಿಗೊರಸೆದಿನನಾಲ್ಕಕ್ಕೆಗುಣವಾಹುದೂ|| ೩೦ ||

ರಸಕುಂದಿಲಿಗೆತ್ರಿಫಲಶುಂಠಿಹಿಪ್ಪಲಿಯಮೆ
ಣಸುಸಮಘೃತಸೇರುಅಜಕ್ಷೀರಮತ್ತೆರಡುಸೇ
ರುಸಹವೆರಡದನುಕಾಸನಿಯಕೊಟ್ಟುತ್ರಿಕಟುಕಗಳಪಾವಜಕ್ಷೀರದೊ
ಳಶನಗೈದುಸೈಂಧವಜಿವಾನಸದ್ಯಕ್ಷಾರ
ವೆಸೆವಹಿಪ್ಪಲಿಯಟೆಂಕಣಭಾರಅರಿಷಿಣವ
ಹಸನಾಗಿಅಜಕ್ಷೀರದದೊಳಗರದುಮೈಗೆಲೇಪನಮಾಡೆಮಾಣ್ಗೂ|| ೩೧ ||

ಕರಕುಳಿಗಳಗ್ರಹಕೆರಸಕುಂದಿಲಿಗೆಪೇಳ್ದ
ತೆರದಲೌಷಧಿಯಮಾಡಲ್ಮಾಣ್ಗುಮತ್ತೆನಾ
ನೊರೆವೆಕರುಳಿಳಿದುತೊಡಕಿದಹಯಕೆಕೈಗೆಹರಳೆಣ್ಣೆಯಂತೊಡದುಕೊಂಡೂ
ತುರುಗದಾಸನದೊಳಗೆಸೇರಿಸುತಲಾಕರುಳ
ಮುರಿಗಂಟನೆಲ್ಲವಂಬಿಡಿಸಿಅಂಡದನೀವಿ
ಅರೆಮಮ್ಮಾಯಿಹಿಪ್ಪಲಿಯುಬಾಣಂತಿಬಾಳವದರರ್ಧಮತ್ತಾ|| ೩೨ ||

ನಾಲ್ಕುಸೇರುಸರಾಯದೊಳಗವನರದು
ಕಲಸಿಕ್ಕಲ್ಲದಂದದಲಿಗೊಟ್ಟಿದಲೆತ್ತೆಗುಣವಹುದು
ನಾಲ್ಕುಘಳ್ಗಿಯೊಳಗರದುಮಾಡಲಿಕೆಗುಣವಹುದುಮೀರಿದಡಸಾಧ್ಯವೆಂದಾ
ನಾಲ್ಕುಕಾಲಾಂಕಟ್ಟಿಬಹುಸೂಕ್ಷ್ಮದಿಂದಲ್ಲಿ
ಸಿಕ್ಕಿರ್ದಕರುಳತೊಡಕನುಬಿಡಿಸಿಕಲನುಂ
ಮೇಲ್ಕೆತ್ತಿಅಂಡಗಳಹಗರದಿಂನೀವಿಬಳಿಕಾವೈದ್ಯವಿಕ್ಕೆಮಾಣ್ಗೂ|| ೩೩ ||

ಗತ್ತಸಿಕ್ಕಿದಹಯಕೆಶುಂಠಿಕಾಷ್ಟಜ್ಯೋತಿ
ಮತ್ತೆಮಿಸುನೀಯಸಬಕಾರಜಂಪಾದಿಪುನ
ಗೆತ್ತಿದೀರೈದುಸಮಗೂಡಿನಿಂಬಿಹುಳಿಯೊಳಗರದುತೆಂಗಿನಕಡ್ಡಿಯ
ಬತ್ತಿಯಂಮಾಡಿಈಔಷಧವತೊಡದಮೇ
ಲೆತ್ತಿಶಿಸ್ನರಂಧ್ರದೊಳಗೇರಿಸಿತೆಗೆದು
ನೇತ್ರಂಗಳಿಗೆಇಂಗಳಮೇಣಶುಂಠಿಯನುಜಂಭೀರರಸದಲರದೂ|| ೩೪ ||

ಮೆಲ್ಲನಂಜನವಿಕ್ಕಿಹರಳೆಣ್ಣೆವರೆಸೇರು
ಬೆಲ್ಲಬೀಜಗಳೆದುಪುಡಿಮಾಡಿನೆರೆಗೊಟ್ಟ
ದಲ್ಲಿಹಾಲೊಂದುವರೆಸೇರಿನೊಳ್‌ ಕೆಲಸಿಕ್ಕಲಾಹಯಕೆಗುಣಮಪ್ಪುದೂ
ಬಲ್ಲವರುಶತತೈಲಮಂತುರಂಗಮದಗರತದ್ದು
ಹಳೆಹುಣ್ಣುಪದರರೋಗವಿಸಿತೆಲ್ಲವಕೆಪುರುಷ
ಮೂಲವ್ಯಾಧಿಮೊದಲಾದವಕೆಲೇಪಿಸೆಮಾಣ್ಗೂ|| ೩೫ ||

ಕಾಲುಬಾಯಿಗೆವೈದ್ಯಕೊಟ್ಟುಮಿಸುನಿಯಮದ್ದು
ನಿರ್ವಿಷವುಸಾರಂಗಶೃಂಗಹಿರುಚಿಯುಹುಲಿಯುಗುರು
ಪತ್ಯನಾಭಿಕುದುರೆಯಕೊಳಗವೆಲ್ಲಕಂಚಿನಿಂಬಿಯಹುಳಿಯೊಳು
ಅರವಂಗಳಂಗವಿಗೆತೇಯ್ದುಲೇಪನವ
ನಿರ್ವಹಿಸಿಮಾಡುತಿಹಲದರಿಂದಲಾಕ್ಷಣಂ
ನಿರ್ವಾಹವಹುದೆಂದುವರಶಾಲಿಹೋತ್ರಮುನಿಪೇಳಿದರೆವಿನಯದಿಂದ|| ೩೬ ||

ಶಲಿವಾಹನಶಕವುಸಂದೊಂದುಸಾವಿರದ
ಏಳುನೂರುವರುಷಕ್ಕೆವಿಳಂಬಿಸಂವತ್ಸರದವನ
ಮಾಲೆಪೆಸರಾಂತಶುಕ್ಲಪಂಚಮಿಯಬೃಗುವಾರಲೀಕ್ಷಿತಿಯೊಳೊ
ಲೀಲೆಮಿಗೆಹರಪುರವನಾಳ್ವಬಾಗುಳಿಯಭೂ
ಪಾಲಮಣಿಬಸುವೇಂದ್ರನೃಪಾಲಪುರೋಹಿತಂ
ಪೇಳಿದಂಹಯರತ್ನಶ್ರೇಣಿಯೆಂಬತುರಗಲಕ್ಷಣನರ್ಥಿಯಿಂದಾ|| ೩೭ ||

ಅಂತುಸಂಧಿ೭ಕ್ಕೆಪದನು೧೪೨ಕ್ಕೆ
ಮಂಗಳಮಹಾಶ್ರೀಶ್ರೀಶ್ರೀ ||