ಇನ್ನುಪಶುಗಳಾದಗೋವೃಷಭಾದಿದನಗಳಹಲವುಬಗೆಯರೋಗದಲಕ್ಷಣ | ಅದರಔಷಧಿಗಳನ್ನೂಸಹಬರಿಯುವದಕ್ಕೆಶುಭಮಸ್ತು || ಆರೋಗ್ಯಮಸ್ತು ||

ಅಳಲುರೋಗಕ್ಕೆ ||

ರೋಮಗಳುಕಿತ್ತುಬೀಳುವವು | ಬಹುನೀರುಕುಡಿಯುವವು | ಕಣ್ಣುಜಾರುವವು | ಇದರಅನುಪಾನ || ಶಿವನೀಸೊಪ್ಪುತಂದುಕುಟ್ಟಿಅಂಬಿಲದಲ್ಲಿಎತ್ತುವದು | ಅರೋಗ್ಯವಾಗುವದು|| ||

ರಕ್ತನುಚ್ಚುವುದಕ್ಕೆ ||

ಅರಳಿತಿಗುಡಿನರಸಸಂ | ವಳ್ಳೆಣ್ಣೆ | ಸಂ | ನೆರೆವುದುಆರೋಗ್ಯಮಕ್ಕುಂ|| ||

ಉರಗಬಿಲ್ಲುರೋಗಕ್ಕೆ ||

ರಕ್ತವನುಚ್ಚುವದು | ಕುರಟಿಗನಸಮೂಲವಂತಂದುಅಂಬಿಲದಲ್ಲಿಕುಟ್ಟಿಮೂರುಗೊಟ್ಟನೆತ್ತುವದು | ರೋಗಪರಿಹರವಾಗುವದು || ||

ಏಳೋದುಬೀಳೋದುಉಚ್ಚೋದುನಾರುವದು ||
ಇದಕ್ಕೆಎಕ್ಕಿಯಮುಗುಳತಂದು | ಅಂಬಿಲದಲ್ಲಿಅರದು
ಮೂರುಗೊಟ್ಟನೆತ್ತುವದುಮಾಣ್ಗೂ|| ||

ಕಳ್ಳುರೋಗಕ್ಕೆ ||

ಬಿದ್ದುಹೊರಳುವುದು | ಏಳಲಾರದು |ಬಾಯಲ್ಲಿನೀರುಸೋರುವದು|| ಇದಕ್ಕೆ || ಮೂಲಂಗಿಲೆಕ್ಕಿಸೊಪ್ಪುಕುಟ್ಟಿರಸವನ್ನುತೆಕ್ಕೊಂಡುಮುಂಜಾವಿಲಿಮೂರುಗೊಟ್ಟನೆತ್ತಲುಮಾಣ್ಗೂ|| ||

ಅಗ್ರಕ್ಕೆ ||

ಕೊರಳುಗುರುಗುಸೋಮಗೂಡ್ರಿಸಿಗೊಂಡುಇರೋದು|| ಇದಕ್ಕೆ || ಮೂಲಂಗಿಮುಂಜಾವಿಲೆಹೋಗಿಕರೆಲಕ್ಕಿದುಕರೆತುಂಬಿಸೇಗುಡುತಿಆಶಿಸದುತೊಂಡರಿಸೀಈಐದುಜೀನಸಿನಸೊಪ್ಪುಗಳಬಿರಿಹಿಡಿಯಲ್ಲಾತಂದುಕುಟ್ಟಿರಸಮಾಡಿ೭ಮೆಣಸು | ಶುಂಠಿಅರದುಹಾಕಿಒಲಿಮೇಲೆಬೆಚ್ಚಗೆಮಾಡಿಅರಿಷಿಣಪುಡಿಹಾಕಿನಶಿಬೆಚ್ಚಂದುಮೂರುಗೊಟ್ಟನೆತ್ತಲುಆಗ್ರಮಾಣ್ಗೂ|| ||

ತಲೆನೋವಿಗೆ ||

ನಾಲ್ಕುಕಾಲುಗಳಅಗಲಿಸಿನಡಿವದು | ಅಳಿಮೇವಮೇಯುವದು || ಇದಕ್ಕೆ || ಬಾಳೆಗಡ್ಡಿ | ಆಲದಬಿಳಲು | ಯಾಲಕ್ಕಿಯನ್ನುಅಂಬಿಲದಲ್ಲಿಅರದುಮೂರುಗೊಟ್ಟವನಿಕ್ಕಲುಆರೋಗ್ಯವಾಗುವದು || ೭ ||

ಹೊಟ್ಟೆಉಬ್ಬಿದರೆ ||

ಒಣಹುಲ್ಲಹಾಕುವದು | ಕಚ್ಚುಕಾಶಿಹೊಯಿದುಹೊಟ್ಟೆಉಬ್ಬಿದರೆಪಾತಾಳಗರುಡನಸಮೂಲವತಂದುಅಂಬಿಲದಲ್ಲಿಅರದುಮೂರುಗೊಟ್ಟವನೆತ್ತಲುಮಾಣ್ಗೂ|| ||

ಹುಚ್ಚುರೋಗಕ್ಕೆ ||

ಶೀಗರಗೊಂಬುವದು || ಇದಕ್ಕೆ || ಹುರಳಿಕಟ್ಟನ್ನೂ | ಅಂಬಿಲವನ್ನೂಸಮನಾಗಿಮೂರುಗೊಟ್ಟವನೆತ್ತಲುಹೋಗುವದು || ೯ ||

ನೆಲರೋಗಕ್ಕೆ ||

ರೋಮಗಳುಕೀಳುವವು | ದೇಹಬಾಯುವದು || ಇದಕ್ಕೆ || ಬಜೀಪುಡಿಯನ್ನು | ಅಂಬಿಲ | ಎಣ್ಣಿಯನ್ನೂಕೂಡಿಸೀಮೂರುಗೊಟ್ಟವನೆತ್ತಲುಮಾಣ್ಗೂ || ೧೦ ||

ಕಾಮಲಿಗೇ ||

ಕಣ್ಣುಮುರುಗಳೂ | ಬಾಯುವವು | ಹೊಟ್ಟೆಮಳಗುವದು || ಇದಕ್ಕೆ || ಔಡಲದಹರಳನ್ನೂ | ಶುಂಠಿಯನ್ನುಅರದು | ಹಸುವಿನಹಾಲಲ್ಲಿಕೊಡಲುರೋಗಮಾಣ್ಗೂ || ೧೧ ||

ದುಬ್ಬನೆಬೀಳುವದು ||

ಕಾಲುಕೆದರುವದು| ರೋಮಗಳುಉಬ್ಬುವವು || ಇದಕ್ಕೆ || ಭಜಿ | ೭ಮೆಣಸು | ಯಾಲಕ್ಕಿ | ಶುಂಠಿ | ಇವಂಸಮಗೊಂಡು | ಅರದು | ಅಂಬಿಲದಲ್ಲಿಕೊಡಲುಮಾಣ್ಗೂ || ೧೨ ||

ತಲೆಕೊಡುವುದು ||

ನಡಗುವದು || ಇದಕ್ಕೆ || ನಿಂಬಿಸೊಪ್ಪು | ಬೆಳವಲಸೊಪ್ಪು | ಅರದುಅಂಬಿಲದಲ್ಲಿಕೊಡಲುಅರೋಗ್ಯವಹುದು || ೧೩ ||

ಮೈತಣ್ಣಗಿರುವುದು ||

ಅಳಿಮೇವಮೇಯುವದೂ | ಏಳಲಾರದು || ಇದಕ್ಕೆ || ಹೊನ್ನಾಗೊನ್ನಸೊಪ್ಪಅರದುಅಂಬಿಲದಲ್ಲಿಕೊಡಲುಅರೋಗ್ಯಮಾಣ್ಗೂ || ೧೪ ||

ಹಲವುಪರಿಯರೋಗಕ್ಕೆ ||

ಬಿಳೆಹೂಲಿಯಸೊಪ್ಪನ್ನುಅರದು | ಅಂಬಿಲದಲ್ಲಿಹೊಯ್ಯಲುಅರೋಗ್ಯಮಾಣ್ಗೂ|| ೧೫ ||

ಕಾಮರೋಗಕ್ಕೆ ||

ಕಣ್ಣುಕೆಂಪಾಗುವದು | ಕುಗ್ಗಿನಡಿಯುವುದು | ಮೇವುತಿನ್ನಲಾರದು || ಇದಕ್ಕೆ || ಚಿತ್ರಮೂಲದ| ಸಮೂಲಮುಷ್ಟಿ | ತಪಲಸಮೂಲ | ಈಎರಡುಅರದು| ಅಂಬಿಲದಲ್ಲಿಕಲಸಿಕೊಡಲು| ಆರೋಗ್ಯನಾಶವಾಗುವದು || ೧೬ ||

ಕಳ್ಳುರೋಗದಪರೀಕ್ಷೆಮತ್ತುವೈದ್ಯ ||

ಆರೇಳುದಿವಸಮೇಯದಲೆಇರುವದು || ಇದಕ್ಕೆ || ನೇಗುಡತಿಸೊಪ್ಪು| ಸಮೂಲವತಂದು | ಆರದು| ಅಂಬಿಲದಲ್ಲಿಕೊಡಲುರೋಗಮಾಣ್ಗೂ || ೧೭ ||

ನರಡಿಗೆ ||

ಮೇಯದು| ಮೈಮುರಿವದು| ಹೊಟ್ಟಿಮೊಳಗುವದು || ಇದಕ್ಕೆ || ಮೈಅದರಬಡಿದು| ಶಲೆಗಡಿದರೆಮಾಣ್ಗೂ || ೧೮ ||

ಕೆಮ್ಮುವದಕ್ಕೆ ||

ಕೆಂಪುಚೋಗಚೀಬೇರು| ಅಂಬಿಲದಲ್ಲಿಆರದು | ಮೂರುಗೊಟ್ಟವನಿಕ್ಕಲುಆಕೆಮ್ಮುಮಾಣ್ಗೂ|| ೧೯ ||

ಕೊರಳುಕುಗ್ಗಿನಡುವುದು ||

ಬಿದ್ದುಕಾಲಹಿಂದಕ್ಕೆತೆಗೆವುದು || ಇದಕ್ಕೆ || ಬೆಳವಳಬೇರು| ಅದರಸೊಪ್ಪು| ಅಂಬಿಲದಲ್ಲಿಅರದುಮೂರುಗೊಟ್ಟವಕೊಡಲುಆರೋಗ್ಯವು || ೨೦ ||

ಉಗ್ರರೋಗಕ್ಕೆಅನುಪಾನ ||

ಹಾಳುವದಕ್ಕೆ | ಹಾರಿಹಾರಿಬೀಳುವದಕ್ಕೆ || ಲಕ್ಕಿಯಸೊಪ್ಪುಅಂಬಿಲದಲ್ಲಿಅರದುಮೂರುಗೊಟ್ಟಿನಿಕ್ಕಲುನೆಟ್ಟಗಾಗುವದೂ|| ೨೧ ||

ಕಾಲುತೊಡಕಿಬೀಳುವುದಕ್ಕೆ ||

ನುಗ್ಗಿಯಬೇರು | ಅಂಕೋಲಿಯಬೇರು| ಅಂಬಿಲದಲ್ಲಿಅರದುಇಕ್ಕಲುಆರೋಗ್ಯಮಾಣ್ಗೂ|| ೨೨ ||

ಬಿದ್ದುತಿರುಗುವುದಕ್ಕೆ ||

ಏಳುವದುಬೀಳುವದುಕಾಲುಬಾಯುವದು || ಇದಕ್ಕೆ || ಭಜಿಉಳ್ಳಿಯನ್ನೂಅಂಬಿಲದಲ್ಲಿಅರದುಮೂರುಗೊಟ್ಟವಕೊಡಲುಆರೋಗ್ಯವೂ || ೨೩ ||

ಆಕಳಿಸುವದು ||

ಮೇಯದು || ಇದಕ್ಕೆ || ಬಜಿಸಬ್ಬಸಿಗಿಯನ್ನುಅರದುಅಂಬಿಲದಲ್ಲಿಮೂರುಗೊಟ್ಟವೆತ್ತಲುಮಾಣ್ಗೂ || ೨೪ ||

ತಾಡುರೋಗಕ್ಕೆ ||

ಉಬ್ಬೇಳುತ್ತಬೀಳುವದು| ಹಿಕ್ಕಿಯಹಾಂಗೆಸಗಣಿಹಾಕುವದು || ಇದಕ್ಕೆ || ಅಂಕಲಿಸೊಪ್ಪು| ಬೇವಿನಸೊಪ್ಪು| ಅಂಬಿಲದಲ್ಲಿಅರದುಮೂರುಗೊಟ್ಟವಿಕ್ಕಲುಮಾಣ್ಗೂ || ೨೫ ||

ಮೂದೆರದರೋಗಕ್ಕೆ ||

ಕಣ್ಣಿನಲ್ಲಿಮೂಗಿನಲ್ಲಿಬಾಯಿಯಲ್ಲಿನೂರುಸುರಿದುಹೊಡೆದರೇನಡಿಯದು| ಬ್ರಮೆಗೊಂಡಿಹುದು| ಮುಂಗುರುಳಿಯೆನ್ನೂನುಗ್ಗಿಸೊಪ್ಪನ್ನೂಅಂಬಿಲದಲ್ಲಿಅರದುಮೂರುಗೊಟ್ಟವನಿಡಲುಗುಣವಾಗುವದು|| ೨೬ ||

ಕೆಟ್ಟರೋಗಕ್ಕೆ ||

ರಕ್ತವನುಚ್ಚುವದು| ನಾರುವದು| ಮೇವುತಿನ್ನದು || ಇದಕ್ಕೆ || ಬೆಲ್ಲಚರಅಂಬಿಲದಲ್ಲಿಆರದುಮೂರುಗೊಟ್ಟವಿಡಲುಆರೋಗ್ಯಮಾಣ್ಗೂ || ೨೭ ||

ಜಲರೋಗಕ್ಕೆ ||

ಮಿತಿಮೂತ್ರಗೈವುದು| ಇಲ್ಲವೆಕಟ್ಟುವುದು || ಇದಕ್ಕೆ || ಕಳ್ಳಿಬೇರುಅಂಬಿಲದಲ್ಲಿಅರದುಮೂರುಗಿಟ್ಟವಿಡಲುಆರೋಗ್ಯಮಾಣ್ಗೂ || ೨೮ ||

ಹುಚ್ಚುಗ್ರರೋಗಕ್ಕೆ ||

ಬೆಚ್ಚುವದು| ಬೆದರುವದು | ತಿರುತಿರುಗಿಬೀಳುವದು| ಕಣ್ಣುಜಾರುವದು || ಇದಕ್ಕೆ || ಬಿಳೇನೀರುಳ್ಳಿಗಡ್ಡಿಯನ್ನು| ತುಪ್ಪವನ್ನು| ಪಶುವಿನಹಾಲಲ್ಲಿಅರದು| ದಿನಕ್ಕೆಮೂರುಸಾರೆಇಡಲುಆರೋಗ್ಯವಾಗುವದೂ || ೩೦ ||

ಬೆಪ್ಪುರೋಗಕ್ಕೆ ||

ಬಾಯಿತೆರವುದು| ನಾಲಿಗೆತೆರವುದು| ಕಿವಿಇಳೆಬಿಡುವದು || ಇದಕ್ಕೆ || ಬಜಿ || ಆಲದತಿರುಳು| ಆಲದತಿಗುಡೆ| ಎಮ್ಮಿಮಜ್ಜಿಗೆಯಲ್ಲಿಕುಟ್ಟಿಮೂರುಗೊಟ್ಟವನಿಕ್ಕಲುರೋಗಮಾಣ್ಗೂ || ೩೦ ||

ತಿರುಗುರೋಗಕ್ಕೆ ||

ನಿಂತನಿಂತಲ್ಲಿತಿರುಗುವದು || ಇದಕ್ಕೆ || ಮಂಗಾರೆಬೇರು| ಅಂಬಿಲದಲ್ಲಿಅರದು| ಮೂರುಗೊಟ್ಟವಕೊಡಲುಆರೋಗ್ಯವು || ೩೧ ||

ಕತ್ತೆರೋಗಕ್ಕೆ ||

ಎತ್ತಎತ್ತಲಾಗಿಬೀಳುವದು| ನಾಲ್ಕುಕಾಲುಗಲಒದ್ದುಕೊಂಬುವದು || ಇದಕ್ಕೆ || ಕಾಡೆಳ್ಳು| ಕಾಡಪಟ್ಟಿಲಅಳ್ಳೆಣ್ಣೆ| ಅಂಬಿಲದಲ್ಲಿಇವಂಕೂಡಿಸಿಇಕ್ಕುವದು| ಆರೋಗ್ಯವಾಗುವದೂ || ೩೨ ||

ಹೊಟ್ಟೆಶೂಲಿಗೇ ||

ಹೊಟ್ಟೆಮೊಳಗುವದು| ಮೇಯದು || ಇದಕ್ಕೆ || ಕಾಡನಿಂಬೆಯಾಗಲಿ| ಊರನಿಂಬೆಯಾಗಲಿ| ಅದರಸೊಪ್ಪನ್ನುಅಂಬಿಲದಲ್ಲಿಅರದು| ಮೂರುಗೊಟ್ಟವನಿಕ್ಕಲುಆಶೂಲೆಮಾಣ್ಗೂ || ೩೩ ||

ಹೊಟ್ಟೆನಲ್ವಿಗೇ ||

ನಡುಗುವದು| ಮಲಗಿನಾಲ್ಕುಕಾಲುಗಳತೆಗವದು || ಇದಕ್ಕೆ || ಕಿರಿಗೊಡಚಿಗನಸಮೂಲವತಂದು| ಅಂಬಿಲದಲ್ಲಿಅರದು| ಮೂರುಗೊಟ್ಟವನಿಕ್ಕಲುಮಾಣ್ಗೂ || ೩೪ ||

ದನಗಳುಉಚ್ಚಿಕೊಂಡರೆ ||

ಹಾಲದೊಳಗಿನಹತ್ತಿತೊಪ್ಪಲುತಿನಿಸಲುನೆಟ್ಟಗಾಗುವದೂ|| ೩೫ ||

ಪಶುವೈದ್ಯಸಮಾಪ್ತಂ ||